Tuesday, July 21, 2009

ರೇಡಿಯೋ ಸಂದರ್ಶನ

ಆತ್ಮೀಯ ಬ್ಲಾಗ್ ಗೆಳೆಯರೆ,
ಲಂಡನ್ನಿನ ರಾಯಲ್ ಫೋಟೋಗ್ರಫಿ ಸೊಸೈಟಿಯ ಅಂತರರಾಷ್ಟ್ರೀಯ ಮನ್ನಣೆ ವಿಚಾರವಾಗಿ ಬೆಂಗಳೂರಿನ ಆಕಾಶವಾಣಿಯ ಯುವವಾಣಿ ಕಾರ್ಯಕ್ರಮದಲ್ಲಿ ಸುಮಂಗಲ ಮುಮ್ಮಿಗಟ್ಟಿ ಅವರು ನನ್ನನ್ನು ಸಂದರ್ಶಿಸಿದರು. ಈ ರೇಡಿಯೋ ಸಂದರ್ಶನವನ್ನು ನಿಮ್ಮೊಂದಿಗೆ ಹಂಚಿಕೊಳ್ಳವ ಆಸೆ. ಸಂದರ್ಶನವನ್ನು download ಮಾಡಿಕೊಂಡು ಕೇಳಲು ಈ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ.

http://rapidshare.com/files/258308419/Mallikarjun-_Radio_interview_.mp3.html

ನಾನು ಕಳಿಸಿಕೊಟ್ಟ ಆಡಿಯೋ ಪೈಲನ್ನು ಅಂತರಜಾಲದಲ್ಲಿ ನಮಗೆಲ್ಲರಿಗೂ ತಲುಪುವಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಟ್ಟ ಗೆಳೆಯ ರಾಜೇಶ್ ಮಂಜುನಾಥ್‌ಗೆ ಈ ಮೂಲಕ ಧನ್ಯವಾದಗಳನ್ನು ತಿಳಿಸುತ್ತೇನೆ.

ಸಂದರ್ಶನ ಕೇಳಿದ ನಂತರ ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ಪ್ರತಿಕ್ರಿಯಿಸಿ...

15 comments:

ರೂpaश्री said...

ಮಲ್ಲಿಕಾರ್ಜುನ್ ಅವರೆ,
ಬಹಳ ಖುಷಿ ಆಯಿತು ರೇಡಿಯೋದಲ್ಲಿ ನಿಮ್ಮ ಸಂದರ್ಶನ ಕೇಳಿ. ಬಹಳಷ್ಟು ಸಾಧನೆಯನ್ನು ಮಾಡಿದ್ದೀರಿ,
ನಿಮ್ಮ ಸಾಧನೆ ಉತ್ತುಂಗಕ್ಕೆ ಏರಲೆಂದು ಮಾನದಾಳದಿಂದ ಹಾರೈಸುತ್ತೇನೆ.

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಅವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಸದಾ ಇರಲಿ.

Ittigecement said...

ಹುಡುಕಾಟದವರೆ....

ಸಂದರ್ಶನ ತುಂಬಾ ಚೆನ್ನಾಗಿದೆ....

ನಿಮ್ಮ ಸಾಧನೆಯನ್ನು,
ಪ್ರತಿಭೆಯನ್ನು ಸರಿಯಾಗಿ ಗುರುತಿಸಿಲ್ಲ ಎನ್ನುವದು ನನ್ನ ಅನಿಸಿಕೆ...

ನಿಮ್ಮ ಹವ್ಯಾಸಗಳು, ಆಸಕ್ತಿಗಳು ಬೆಳೆದು ಹೆಮ್ಮರವಾಗಲಿ...

ನಿಮಗೆ ಇನ್ನೂ ಯಶಸ್ಸು ಸಿಗಲೆಂದು ಹಾರೈಸುವೆ...

Unknown said...

ಮಲ್ಲಿಕಾರ್ಜುನ್ ನಿಮ್ಮ ಸಂದರ್ಶನ ಕೇಳುತ್ತಿದ್ದೇನೆ. ಖುಷಿಯಾಗುತ್ತಿದೆ, ನಿಮ್ಮ ಧ್ವನಿಯನ್ನು ರೇಡಿಯೋದಲ್ಲಿ ಕೇಳಲು. ನಿಮಗೆ ನಿಸರ್ಗ ವಿಭಾಗದಲ್ಲಿ ಬಹುಮಾನ ತಂದುಕೊಟ್ಟ ಅದರಲ್ಲೂ ನೀವು ARPS ಸ್ಪರ್ಧೆಗೆ ಕಳುಹಿಸಿದ್ದ ಫೋಟೋಗಳನ್ನು ನಾವು ನೋಡಬಹುದೆ? ಅದನ್ನು ನಿಮ್ಮ ಬ್ಲಾಗಿನಲ್ಲಿ ವಿವರಗಳೊಂದಿಗೆ ಹಾಕಿದರೆ ಅನುಕೂಲ. ಈಗಾಗಲೇ ಹಾಕಿದ್ದರೆ ಲಿಂಕ್ ಕೊಡಿ. ಸ್ಪರ್ಧೆಯ ಬಗ್ಗೆ ಕೆಲವೊಂದು ವಿಚಾರಗಳು ನಿಮ್ಮ ಸಂದರ್ಶನದಲ್ಲಿ ತಿಳಿಸಿದ್ದ ಒಳ್ಳೆಯದಾಯಿತು. ನಿಮ್ಮ ಬಗ್ಗೆ ಹೆಚ್ಚಿ ನ ವಿಚಾರಗಳನ್ನು ಸಂದರ್ಶಕಿ ನಿಮ್ಮಿಂದಲೇ ಬಾಯಿ ಬಿಡಿಸಿದ್ದು, ಆ ಮೂಲಕವಾದರೂ ನಮಗೆ ತಿಳಿಯುವಂತಾಗಿದ್ದು ಖುಷಿಯಾಯಿತು. ನೀವಾಗೆ ಹೆಚ್ಚಾಗಿ ನಿಮ್ಮ ಸಾಧನೆಯ ಬಗ್ಗೆ ನೀವು ಹೇಳಿಕೊಂಡಿರಲಿಲ್ಲ. ನಿಮ್ಮ ಸಂದರ್ಶನ ಕೇಳಿದ ಮೇಲೆ ನಾನೂ ಒಂದಷ್ಟು ಈ ರೀತಿಯ ಫೋಟೋಗ್ರಫಿಯನ್ನು ಮಾಡಬೇಕೆನ್ನಿಸುತ್ತಿದೆ. ನಾವೂ ಇರುವ ಕಡೆಯೇ ಹೆಚ್ಚಿ ನ ಹುಡುಕಾಟ ನೆಡೆಯಬೇಕು ಎನ್ನುವ ನಿಮ್ಮ ಅಭಿಪ್ರಾಯಕ್ಕೆ ನನ್ನ ಓಟೂ ಇದೆ. ಯಾವುದೇ ಕೆಲಸದಲ್ಲಿ ಯಶಸ್ಸು ಸಾಧಿಸಬೇಕಾದರೆ, ಮೊದಲು ನಾವು ಆ ಕೆಲಸವನ್ನು ಪ್ರೀತಿಸಬೇಕು ಎನ್ನುವ ಮಾತು ಎಲ್ಲಾ ಸಾಧಕರೂ ಹೇಳುತ್ತಾರೆ. ಇದು ಹೊಸದಾಗಿ ಸಾಧನಾಮಾರ್ಗಕ್ಕೆ ಇಳಿದವರಿಗೆ ಒಮದು ರೀತಿಯಲ್ಲಿ ಧ್ಯೇಯವಾಕ್ಯವಿದ್ದಂತೆ. ಕ್ಲಿಕ್ಕಿಸುವುದಕ್ಕಿಂತ ಮುಂಚೆಯೇ ನಮ್ಮ ಮನಸ್ಸಿನಲ್ಲಿ ನಡೆಯಬೇಕಾದ ಕ್ರಿಯೆಯ ಬಗಗೆಗಿನ ಮಾತು ಚೆನ್ನಾಗಿದೆ.

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಸರ್‍, ರೇಡಿಯೋ ಸಂದರ್ಶನ ಡೌನಲೋಡ್ ಮಾಡಿಕೊಂಡು ಕೇಳಿದೆ. ಸಂದರ್ಶನ ಚೆನ್ನಾಗಿತ್ತು. ಉಪಯುಕ್ತ ಮಾಹಿತಿಗಳನ್ನು ಕಲಿಕೆಯ ಹಂತದಲ್ಲಿರುವ ಛಾಯಾಚಿತ್ರಗಾರರಿಗೆ ಒದಗಿಸಿದ್ದೀರಿ. ಧನ್ಯವಾದಗಳು.

ನಿಮ್ಮ ಮುಂದಿನ ಯೋಜನೆ/ಗುರಿಗಳಿಗೆಲ್ಲ ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ.

ವಿಶ್ವಾಸದೊಂದಿಗೆ,
ಚಂದ್ರಶೇಖರ ಬಿ.ಎಚ್.

PARAANJAPE K.N. said...

ಪ್ರಿಯ ಮಲ್ಲಿಯವರೇ,
ನಿಮ್ಮ ರೇಡಿಯೋ ಸ೦ರರ್ಶನ ಕೇಳಿದೆ, ಚೆನ್ನಾಗಿದೆ. ನಿಮ್ಮ ನಿರ೦ತರ ಹುಡುಕಾಟ, ಮನಸಿನ ಮಿಡಿತ, ಹೊಸ ವಸ್ತು-ವಿಷಯಗಳೆಡೆಗಿನ ತುಡಿತ ನಿಮ್ಮನ್ನು ಸದಾ ಕ್ರಿಯಾಶೀಲವಾಗಿ ಇಟ್ಟಿರಲಿ, ನಿಮಗೆ ಉನ್ನತ ಸಾಧನೆ ಸಾಧಿಸಲು ಮೆಟ್ಟಿಲಾಗಲಿ, ಶುಭವಾಗಲಿ ಎ೦ಬುದೇ ನನ್ನ ಆತ್ಮೀಯ ಹಾರೈಕೆ.

sunaath said...

ಮಲ್ಲಿಕಾರ್ಜುನ,
ಗಣಕಯಂತ್ರದ ತೊಂದರೆಯಿಂದಾಗಿ, ಇವತ್ತಿನವರೆಗೆ ಅಂತರಜಾಲಕ್ಕೆ
ಬರಲಾಗಿರಲಿಲ್ಲ. ನಿಮ್ಮ ಸಂದರ್ಶನವನ್ನು blogನಲ್ಲಿ transcript ಮಾಡಲು ಸಾಧ್ಯವಾಗುವದೆ?

ಜಲನಯನ said...

ಮಲ್ಲಿಕಾರ್ಜುನ್
ನಿಜಕ್ಕೂ ನೀವು, ಶಿವು, ನಮ್ಮೆಲ್ಲರ ಹಾಗೇ ಕನ್ನಡಿಗರ ಹೆಮ್ಮೆ. ಎಲೆಮರೆಯಾಗದೇ..ಲಂಡನ್ನಿನ ರಾಯಲ್ ಸೊಸೈಟಿಯಿಂದ ಸನ್ಮಾನಿತ ನೀವು ನಮ್ಮ ಬ್ಲಾಗ್ ಗೆಳೆಯರೆಂದುಕೊಳ್ಲಲು ಹೆಮ್ಮೆಯೆನಿಸುತ್ತೆ...
ನಿಮಗೆ ದೇವರು ಆಯುರಾರೋಗ್ಯ, ಸಂತೋಷ ಮತ್ತು ಎಲ್ಲ ಸವಲತ್ತು ನೀಡಿ ನಿಮಗೆ ಇನ್ನೂ ಅಧಿಕ ಸಾಧಿಸಿ ಕನ್ನಡಿಗರ ಹೆಸರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಆಶೀರ್ವಾದ-ಕೃಪೆ ಬೀರಲಿ ಎಂದು ಹಾರೈಕೆ.

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ಧನ್ಯವಾದಗಳು. ನನಗೆ ಅಷ್ಟು ಚೆನ್ನಾಗಿ ಮಾತನಾಡಲು ಬರುವುದಿಲ್ಲ. ನಾನೇನಿದ್ದರೂ ಕ್ಯಾಮೆರಾ ಹಿಂದೆಯಷ್ಟೇ. ಕ್ಯಾಮೆರಾ ಮುಂದೆ ನಾಲಾಯಕ್ಕು!

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಶೇಖರ್ ಸರ್,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ನನಗೆ ಉತ್ಸಾಹ.

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ನಿಮ್ಮ ಹಾರೈಕೆಗಳು ನನಗೆ ಶಕ್ತಿ ನೀಡುತ್ತವೆ. ಟಾನಿಕ್ ಇದ್ದಂತೆ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸುನಾತ್ ಸರ್,
ನನಗೆ transcript ಮಾಡಲು ಬರುವುದಿಲ್ಲ. Sorry.

ಮಲ್ಲಿಕಾರ್ಜುನ.ಡಿ.ಜಿ. said...

ಜಲನಯನ ಸರ್,
ಧನ್ಯವಾದಗಳು. ನಿಮ್ಮ wishes ನಮಗೆ ಸ್ಫೂರ್ತಿ, ಶಕ್ತಿ, ಸಾಮರ್ಥ್ಯ ನೀಡುತ್ತವೆ.

ವಿನುತ said...

ಫೈಲ್ ಡೌನ್ಲೋಡ್ ಮಾಡುವಾಗ ಈ ರೀತಿಯ error ಬರ್ತಿದೆ. ದಯವಿಟ್ಟು ನನಗೆ ನೇರವಾಗಿ e-mail ಮಾಡಲು ಸಾಧ್ಯವೇ?
"This file is neither allocated to a Premium Account, or a Collector's Account, and can therefore only be downloaded 10 times.

This limit is reached."