Tuesday, July 14, 2009

ನಾಲ್ಕು ದಂತಗಳ ಆನೆಅದ್ಭುತ ವನ್ಯಜೀವಿ ಛಾಯಾಗ್ರಾಹಕ ಆರ್ಮಾಂಡ್ ಡೆನಿಸ್ ಆಫ್ರಿಕ, ಆಸ್ಟ್ರೇಲಿಯ, ಏಷಿಯ ಮತ್ತು ದಕ್ಷಿಣ ಅಮೆರಿಕ ಖಂಡಗಳನ್ನು ಸುತ್ತಿ ಕಷ್ಟಕಾರ್ಪಣ್ಯಗಳನ್ನೆದುರಿಸಿ, ಬಿಬಿಸಿಗೆ ಅತ್ಯುತ್ತಮ ವನ್ಯಜೀವಿ ಚಿತ್ರಗಳನ್ನು ಚಿತ್ರಿಸಿಕೊಟ್ಟಿದ್ದಾನೆ. ಈತ ತನ್ನ ಆತ್ಮಚರಿತ್ರೆ "ಆನ್ ಸಫಾರಿ"ಯಲ್ಲಿ ನಾವೀಗ ಕಾಣಲು ಸಾಧ್ಯವಿಲ್ಲದ, ಮರೆಯಾಗುತ್ತಿರುವ ಜೀವಲೋಕವನ್ನು ಕ್ಯಾಮೆರಾದಷ್ಟೆ ಸೂಕ್ಷ್ಮವಾಗಿ ಅಕ್ಷರಗಳಲ್ಲಿ ಮೂಡಿಸಿದ್ದಾನೆ. ಅದೊಂದು ಬರೀ ಆತ್ಮಚರಿತ್ರೆಯಷ್ಟೇ ಆಗಿರದೆ ಕಣ್ಮರೆಯಾಗುತ್ತಿರುವ ಪ್ರಪಂಚವೊಂದರ ಅಪರೂಪದ ದಾಖಲೆಯೂ ಹೌದು. ನಾಲ್ಕು ದಂತಗಳ ಆನೆ, ಆತ ಕಂಡ ಜೀವಲೋಕದ ವಿಸ್ಮಯಗಳಲ್ಲೊಂದು. ಅದರ ಕಥನವನ್ನು ಆತನ ಕ್ಯಾಮೆರಾ ಕಣ್ಣಲ್ಲೇ ನೋಡಿ.

ನಾಲ್ಕು ದಂತಗಳ ಆನೆ

ಇಟುರಿ ಕಾಡಿನಲ್ಲಿ ಪುಟ್ನಂರ ಬಿಡಾರದಲ್ಲಿದ್ದಾಗ ನಾನು ಮೊದಲ ಬಾರಿ ನಾಲ್ಕು ದಂತಗಳಿರುವ ಆನೆ ಬಗ್ಗೆ ಕೇಳಿದ್ದು. ಪುಟ್ನಂ ಲಹರಿಯಲ್ಲಿದ್ದಾಗ ಆತನ ಮಾತನ್ನು ಗಂಭೀರವಾಗಿ ಪರಿಗಣಿಸುವುದೋ ಬೇಡವೋ ತಿಳಿಯಲಿಲ್ಲ. ಆ ಮಧ್ಯಾಹ್ನ ಐದೋ ಆರೋ ಪ್ರವಾಸಿಗರು ಬಂದಿದ್ದರು. ಅವರಲ್ಲಿ ಟೆಕ್ಸಾಸ್ ನ ಲಕ್ಷಾಧೀಶ್ವರನೊಬ್ಬನಿದ್ದ. ಅವನನ್ನು ಸಂತುಷ್ಟಗೊಳಿಸಲಾಗದೇ ಕಿರಿಕಿರಿಗೊಂಡ ಪುಟ್ನಂ ’ಆನೆಗಳ ರಾಜ’ ಎಂದು ಹೊಸ ವಿಷಯ ಹೇಳಿದ. ’ಅದೊಂದು ವಯಸ್ಸಾದ ಗಂಡಾನೆ. ಪಿಗ್ಮಿಗಳ ಪ್ರಕಾರ ಆನೆಗಳ ರಾಜ. ತುಂಬ ಬಲಶಾಲಿಯಾದ ಅದಕ್ಕೆ ನಾಲ್ಕು ದಂತಗಳು’ ಎಂದು ಪುಟ್ನಂ ಹೇಳಿದೊಡನೆಯೇ ಆ ಪ್ರವಾಸಿಯು ಆಶ್ಚರ್ಯಗೊಂಡು ಸಾಧ್ಯವೇ ಇಲ್ಲ ಎಂದುಬಿಟ್ಟ. ಅವನನ್ನು ಅಚ್ಚರಿಗೊಳಿಸಿದ ಸಂತೋಷದಿಂದ ಪುಟ್ನಂ ನಗುತ್ತಾ ಹೊರಗೆ ಹೋದ. ಆಗ ಗೊಂದಲಕ್ಕೊಳಗಾಗುವ ಸರದಿ ನನ್ನದಾಗಿತ್ತು!

* * * *

ಪುಟ್ನಂ ಜತೆ ಕೆಲವರು ಪಿಗ್ಮಿಗಳಿದ್ದರು. ಇವರು ಕಾಡಿನ ಒಳಭಾಗದಿಂದ ಬಂದವರಾಗಿದ್ದರು. ಎಂದಿನಂತೆ ಪುಟ್ನಂ ಅವರ ಭಾಷೆಯಲ್ಲೇ ಹರಟುತ್ತಾ, ಅವರನ್ನು ನಗಿಸುತ್ತಾ ಕುಳಿತಿದ್ದ. ನಾನೂ ಅವರೊಂದಿಗೆ ಸೇರಿಕೊಂಡೆ. ಮಾತನಾಡುತ್ತಾ ನಾಲ್ಕು ದಂತಗಳ ಆನೆಯ ಬಗ್ಗೆ ಕೇಳಿದೆ. ಅದನ್ನು ಕೇಳಿದೊಡನೆಯೇ ಎಲ್ಲರೂ ಬಾಯಿ ಹೊಲಿದುಕೊಂಡಂತೆ ಕೂತುಬಿಟ್ಟರು. ಪಿಗ್ಮಿಗಳಲ್ಲೇ ಹಿರಿಯ ಬಾಯಿಬಿಟ್ಟ. ’ನಾವು ಅದನ್ನು ನೋಡಿದ್ದೇವೆ. ನಮ್ಮವರನ್ನು ಕೊಂದಿದೆ. ನಮ್ಮ ಬೇಟೆ ಹಾಳುಮಾಡಿದೆ. ಬೇರೆ ಆನೆಗಳಿಗೆ ತಿಳಿಯದಿದ್ದು ಅದಕ್ಕೆ ತಿಳಿಯುತ್ತದೆ. ನಮ್ಮ ಭರ್ಜಿಗಳಿಂದ ಅದನ್ನು ಕೊಲ್ಲಲು ಸಾಧ್ಯವಿಲ್ಲ’ ಎಂದು ಅವನು ಹೇಳುತ್ತಿದ್ದಂತೆಯೇ ಪುಟ್ನಂ ಬಿಟ್ಟು ಉಳಿದವರು ನಗತೊಡಗಿದರು. ಅದರಿಂದ ಇವರನ್ನು ನಂಬುವುದೋ ಬಿಡುವುದೋ ತಿಳಿಯಲಿಲ್ಲ.

* * * *

ಪುಟ್ನಂ ಒಬ್ಬನೇ ಇದ್ದಾಗ, ’ಈ ಆನೆಯನ್ನು ನೀನು ನೋಡಿದ್ದೀಯಾ?’ ಎಂದು ಕೇಳಿದೆ. ಅದಕ್ಕೆ ಆತ, ’ಈ ಕಾಡಲ್ಲಿ ನಾನು ನೋಡದಿರುವುದು ಬಹಳಷ್ಟಿದೆ. ನನಗೆ ಗೊತ್ತಿರುವುದಿಷ್ಟೆ. ಪಿಗ್ಮಿಗಳು ಇರುವುದನ್ನಷ್ಟೆ ನಂಬುತ್ತಾರೆ. ಅಷ್ಟು ಸುಲಭವಾಗಿ ಭಯಪಡದ ಅವರು ಈ ಆನೆಗೆ ಭಯಪಡುತ್ತಾರೆ’ಎಂದನು.ಅಂದಿನಿಂದ ನನಗೆ ನಾಲ್ಕು ದಂತಗಳ ಆನೆಯದೇ ಯೋಚನೆ. ಎರಡು ಬಾರಿ ಅದು ನನ್ನ ಕನಸಿನಲ್ಲೂ ಬಂದಿತ್ತು! ಎಷ್ಟೇ ಕಷ್ಟವಾದರೂ, ಹಣ ಖರ್ಚಾದರೂ ಅದನ್ನು ಕಂಡುಹಿಡಿದು ಅದರ ಬಗ್ಗೆ ಫಿಲ್ಮ್ ಮಾಡಲೇಬೇಕೆಂದು ತೀರ್ಮಾನಿಸಿದೆ. ಅಮೆರಿಕದಲ್ಲಿ ಆ ಫಿಲ್ಮ್ ಮಾಡಬಹುದಾದ ಸಂಚಲನೆ ಊಹಿಸಲು ರೋಮಾಂಚನವಾಗುತ್ತದೆ. ಪುಟ್ನಂಗೆ ಇದರ ಬಗ್ಗೆ ಕೇಳಿದಾಗ ಇದು ಬೇಡ ಬಿಡು ಎಂದ. ಆದರೂ ಛಲ ಬಿಡದೆ ಪಿಗ್ಮಿಗಳ ಬಳಿ ಅದರ ಮಾಹಿತಿ ಸಂಗ್ರಹಿಸತೊಡಗಿದೆ. ನಾಲ್ಕು ದಂತಗಳ ಆನೆಯು ಮನುಷ್ಯರಂತೆ ಮಾತನಾಡುತ್ತದೆ ಎಂಬಂಥ ಅನೇಕ ದಂತ ಕಥೆಗಳಿದ್ದವು! ಅದು ಎಲ್ಲಿರುತ್ತದೆ ಎಂದಾಗ, ಕಾಡಿನ ಮಧ್ಯದಲ್ಲಿದೆ, ಹಲವಾರು ದಿನ ನಡೆಯಬೇಕು ಅನ್ನುತ್ತಿದ್ದರು. ವಿಚಿತ್ರವೆಂದರೆ ಎಲ್ಲರೂ ಪೂರ್ವದ ಕಡೆಗೇ ಕೈತೋರುತ್ತಿದ್ದರು.

ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಆ ಆನೆ ಇರುವ ಜಾಗ ಪುಟ್ನಂ ಶಿಬಿರದಿಂದ ೮೦ ರಿಂದ ೯೦ ಮೈಲು ದೂರದಲ್ಲಿರುವ ಜೌಗು ಭೂಮಿಯೆಂದು ಅಂದಾಜಿಸಿದೆ. ಪಿಗ್ಮಿಗಳಾರೂ ನನ್ನೊಡನೆ ಬರಲೊಪ್ಪಲಿಲ್ಲ. ನನ್ನಲ್ಲಿರುವ ಅಷ್ಟೂ ತಂಬಾಕನ್ನು ಕೊಡುವೆನೆಂದು ಆಮಿಷ ತೋರಿಸಿದಾಗ ಧೈರ್ಯವಂತರಾದ ಮೂವರು ಬರಲೊಪ್ಪಿದರು. ಹುಚ್ಚೋ, ಧೈರ್ಯವೊ, ಮೂರ್ಖತನವೋ ಅಂತೂ ಪುಟ್ನಂಗೆ ಹೇಳಿ ಹೊರಟುಬಿಟ್ಟೆ.
* * *
ಮೂರೂವರೆ ದಿನಗಳು ಪಿಗ್ಮಿಗಳಷ್ಟೇ ವೇಗವಾಗಿ ನಡೆದೆ. ಹಣ್ಣು, ಇಂಗಿಸಿದ ಹಾಲು ಮತ್ತು ಚಾಕೊಲೇಟ್ ಗಳಷ್ಟೇ ನಮ್ಮ ಆಹಾರವಾಗಿತ್ತು. ರಾತ್ರಿ ಎಲೆಗಳ ಗುಡಾರದಲ್ಲಿ ಮಲಗುತ್ತಿದ್ದೆವು. ನಾಲ್ಕನೇ ದಿನ ನನ್ನ ಶಕ್ತಿ, ಉತ್ಸಾಹವೆಲ್ಲಾ ಕುಂದತೊಡಗಿತ್ತು. ಅಷ್ಟರಲ್ಲಿ ಮರಗಳು ಕಡಿಮೆಯಾಗಿ ಭೂಮಿಯ ತೇವಾಂಶ ಕಂಡುಬಂತು. ಅಲ್ಲಲ್ಲಿ ಹಸಿಯಾದ ಆನೆಯ ಸಗಣಿಯೂ ಕಾಣಿಸಿತು. ಒಂದು ಸಣ್ಣ ಝರಿಯ ಪಕ್ಕ ನಿಂತೆವು. ಅಷ್ಟರಲ್ಲಿ ನನಗೆ ಸನ್ನೆ ಮಾಡಿ ಪಿಗ್ಮಿಗಳು ಪೊದೆಗಳ ಮಧ್ಯೆ ಆನೆಗಳ ಹೆಜ್ಜೆ ಜಾಡನ್ನು ಹಿಡಿದು ಶಬ್ದ ಮಾಡದೇ ಮುನ್ನಡೆದರು. ಆನೆ ತುಳಿದು ಹೋದ ಹುಲ್ಲು, ಮುರಿದ ಗಿಡಗಳನ್ನು ತೋರಿಸಿದರು. ’ಇದು ನಾಲ್ಕು ದಂತದ ಆನೆಯಾ?’ ಎಂದು ಕೇಳಿದೆ. ’ನೋಡೋಣ’ ಎಂದು ಪಿಸುಗುಟ್ಟಿ ಮುನ್ನಡೆದರು. ಹೀಗೇ ಆರು ಗಂಟೆಗಳು ನಡೆದ ಮೇಲೆ ನಮಗೆ ಆನೆ ಸಿಕ್ಕಿತು. ಎಂಟು ಆನೆಗಳೊಂದಿಗಿದ್ದ ಈ ವಯಸ್ಸಾದ ಆನೆಗೆ ಎರಡು ದಂತಗಳಿದ್ದವು. ಪಿಗ್ಮಿಗಳು ಹಲ್ಲು ಗಿಂಜುತ್ತಾ ನನ್ನೆಡೆಗೆ ನೋಡಿ, ’ಇದು ಅದಲ್ಲ. ಆನೆಗಳ ರಾಜ ನಾವು ಬರುವುದು ತಿಳಿದು ಹೊರಟು ಹೋಗಿದೆ’ ಅಂದರು. ಒಂದು ವಾರ ಸಮಯ ಹಾಳುಮಾಡಿದ ಮೇಲೆ, ನಾಲ್ಕು ದಂತಗಳ ಆನೆಯು ಸುಳ್ಳು ಎಂದು ನನಗೆ ಮನದಟ್ಟಾಯಿತು. ನಾನು ವಾಪಸಾದುದರಿಂದ ಪುಟ್ನಂ ಕೂಡ ಸಮಾಧಾನಗೊಂಡಂತೆ ಕಂಡ. ಆ ನಂತರ ಕಾಂಗೋದ ಇತರ ಭಾಗಗಳಲ್ಲಿ ಫಿಲ್ಮ್ ತೆಗೆಯಲು ಹೊರಟುಬಿಟ್ಟೆ.
* * *
ಇದಾಗಿ ಕೆಲ ತಿಂಗಳ ನಂತರ ಪಿಗ್ಮಿಗಳ ನಾಡಿಗೆ ವಾಪಸಾದೆ. ಅಷ್ಟರಲ್ಲಿ ನಾಲ್ಕು ದಂತಗಳ ಆನೆಯನ್ನು ಮರೆತೇಬಿಟ್ಟಿದ್ದೆ. ಬೇರೇನೋ ಕೆಲಸಕ್ಕಾಗಿ ಕಾಡಿನ ಅಂಚಿನಲ್ಲಿರುವ ಬುಟೆಂಬೊ ಎಂಬಲ್ಲಿಗೆ ಬಂದೆ. ಅಲ್ಲಿ ಬುಟೆಂಬೊ ಹೋಟೆಲ್ ಎಂಬ ವಸತಿಗೃಹವೊಂದು ಬಿಟ್ಟರೆ ಇನ್ನೇನೂ ಅನುಕೂಲಗಳಿಲ್ಲ. ಅದು ಬೆಲ್ಜಿಯಂನ ವೃದ್ಧರೊಬ್ಬರ ಒಡೆತನದಲ್ಲಿತ್ತು. ಅಲ್ಲಿ ನಾನೊಬ್ಬನೇ ಕುಳಿತಿದ್ದೆ. ಬೆಲ್ಜಿಯಂ ಮೂಲದ ನಾಲ್ಕು ಜನ ನನ್ನ ಪಕ್ಕದ ಮೇಜಿನ ಸುತ್ತ ಕೂತು ಕುಡಿಯುತ್ತಿದ್ದರು. ಅವರು ಫ್ಲೆಮಿಷ್ ಭಾಷೆಯಲ್ಲಿ ಮಾತನಾಡುತ್ತಿದ್ದರಿಂದ ನನ್ನ ಕಿವಿ ಚುರುಕಾಯಿತು. ಏಕೆಂದರೆ ಅದು ನನ್ನ ಬಾಲ್ಯದ ಭಾಷೆ. ಅಷ್ಟೇ ಅಲ್ಲದೆ ಅವರು ನಾಲ್ಕು ದಂತಗಳ ಆನೆ ಎಂದು ಹೇಳಿ ನಗುತ್ತಿದ್ದರು.
ತಕ್ಷಣವೇ ಅವರ ಬಳಿ ಹೋಗಿ ನನ್ನನ್ನು ಪರಿಚಯಿಸಿಕೊಂಡು ಆನೆಯ ಕುರಿತು ವಿಚಾರಿಸಿದೆ.ಅವರಲ್ಲೊಬ್ಬ, "ಅದೇನು ಮುಖ್ಯವಾದ ವಿಷಯವಲ್ಲ. ರಸ್ತೆಯ ಕೊನೆಯ ಕಚೇರಿಗೆ ಹೋಗಿದ್ದೆ. ದಂತಗಳನ್ನು ಮಾರಲು ಆಫ್ರಿಕನ್ ಒಬ್ಬ ಬಂದಿದ್ದ. ಇಲ್ಲಿ ಆನೆಯನ್ನು ಕೊಂದದ್ದಕ್ಕೆ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು. ತೆರಿಗೆ ಕದಿಯಲು ಆಫ್ರಿಕನ್ ಆ ನಾಲ್ಕೂ ದಂತಗಳು ಒಂದೇ ಆನೆಯದ್ದೆಂದು ವಾದಿಸುತ್ತಿದ್ದ. ಕೋಪಗೊಂಡ ದಲ್ಲಾಳಿ ಎರಡು ಆನೆಗಳ ತೆರಿಗೆ ಮುರಿದುಕೊಂಡು ಉಳಿದ ಹಣ ಕೊಟ್ಟು ಅವನನ್ನು ಹೊರದಬ್ಬಿದ" ಎಂದು ಹೇಳಿದ. ಕುತೂಹಲದಿಂದ ನಾನು ಮಾರನೇ ದಿನವೇ ಆ ಕಚೇರಿಗೆ ಹೋದೆ. ಅಲ್ಲಿಯ ದಲ್ಲಾಳಿ ಗ್ರೀಕ್ ಮೂಲದವನು. ದಲ್ಲಾಳಿಯು ಕೊಂಡಿದ್ದ ದಂತಗಳನ್ನು ನಿನ್ನೆಯೇ ಲಾರಿಯಲ್ಲಿ ಉಗ್ರಾಣಕ್ಕೆ ಕಳಿಸಿದ್ದ. ಅಲ್ಲಿಂದ ಅದು ಹಡಗಿನಲ್ಲಿ ಬೆಲ್ಜಿಯಂಗೆ ಸಾಗಿಸುತ್ತಾರೆ. ಅವನಿಂದ ತಿಳಿದುಬಂದ ಮಾಹಿತಿಯ ಪ್ರಕಾರ ದಂತಗಳು ಎಂಟು ಅಡಿಗಳಷ್ಟಿದ್ದು, ಬಣ್ಣ ಮಾಸಿಹೋಗಿತ್ತು ಮತ್ತು ಬಹಳ ಸಣ್ಣವಿದ್ದವು. ಅದನ್ನು ತಂದ ಆಫ್ರಿಕನ್ ಬಗ್ಗೆ ದಲ್ಲಾಳಿಗೆ ಗೊತ್ತಿರಲಿಲ್ಲ. ಆದರೂ ಅದೊಂದು ಚಿಕ್ಕ ಹಳ್ಳಿಯಾದ್ದರಿಂದ ಅವನನ್ನು ಪತ್ತೆಹಚ್ಚಿದೆ.

ಆ ಯುವಕನ ಹೆಸರು ಮೊಂಬೆಲಿ. ಹಳ್ಳಿಯ ಕೊನೆಯಲ್ಲಿ ಅವನ ಗುಡಿಸಲಿತ್ತು. ಮನೆಯ ಮುಂದೆ ಕುಳಿತಿದ್ದ ಅವನನ್ನು ದಂತದ ಕುರಿತಾಗಿ ಮಾತನಾಡಿಸಿದಾಗ, ಬಂಧಿಸಲು ಬಂದಿರಬಹುದೆಂದು ಭಾವಿಸಿ ಹೆದರಿದ. ಅವನಿಗೆ ಸಿಗರೇಟ್ ಕೊಟ್ಟು ಪುಸಲಾಯಿಸಿದೆ. "ನಾಲ್ಕು ದಂತಗಳ ಆನೆಯ ವಿಷಯ ನಿಜವೊ ಸುಳ್ಳೋ, ಸರಿಯಾಗಿ ಹೇಳು" ಎಂದು ಕೇಳಿದೆ. ಅವನು,"ಇಲ್ಲ, ನಾನು ಸುಳ್ಳು ಹೇಳುತ್ತಿಲ್ಲ. ಅದೊಂದು ದೊಡ್ಡ ಆನೆ. ಸತ್ತು ಬಹಳ ದಿನಗಳಾಗಿತ್ತು. ಅದರ ನಾಲ್ಕು ದಂತಗಳನ್ನು ನಾನೇ ತಂದಿದ್ದು" ಎಂದ. ಆ ಆನೆ ಬಿದ್ದಿದ್ದ ಜಾಗವನ್ನು ಪಶ್ಚಿಮಕ್ಕೆ ಕೈತೋರುತ್ತಾ ಜೌಗು ಪ್ರದೇಶದ ವಿವರಣೆ ನೀಡಿದ. ನಾನು ಪಿಗ್ಮಿಗಳೊಂದಿಗೆ ಹೋಗಿದ್ದ ಜಾಗವನ್ನೇ ಅದು ಹೋಲುತ್ತಿತ್ತು. ಆ ಸ್ಥಳಕ್ಕೆ ಪುನಃ ಹೋಗಲು ಸಾಧ್ಯವೇ ಎಂದು ಕೇಳಿದೆ. ಅದು ತುಂಬಾ ದೂರ, ಹುಡುಕಲು ಕಷ್ಟವೆನ್ನುತ್ತಿದ್ದ ಮೊಂಬೆಲಿಯನ್ನು ನನ್ನ ಟ್ರಕ್ ಹಿಂಬದಿಗೆ ಕರೆದೊಯ್ದು ಅಲ್ಲಿದ್ದ ಎಣ್ಣೆಯ ಚಿಮಣಿ ದೀಪ, ಬ್ಯಾಟರಿ ಚಾಲಿತ ಟಾರ್ಚ್ ಮತ್ತು ನನ್ನ ಕೈಗಡಿಯಾರ ತೋರಿಸಿದೆ. ಈ ಮೂರು ವಸ್ತುಗಳಿಗೆ ಕಾಂಗೋದ ಆಫ್ರಿಕನ್ನರು ಬಹಳ ಹಂಬಲಿಸುವರೆಂದು ನನಗೆ ಗೊತ್ತು. ಅವನನ್ನು ಹತ್ತಿರ ಕರೆದು, "ನೋಡು ಮೊಂಬೆಲಿ, ಆ ಆನೆಯ ತಲೆ ನನಗೆ ಬೇಕೇ ಬೇಕು. ನಾನೀಗ ಉತ್ತರ ದಿಕ್ಕಿಗೆ ಹೋಗುತ್ತಿದ್ದೇನೆ. ನಾನು ಬರುವಷ್ಟರಲ್ಲಿ ನೀನು ತಂದಿಟ್ಟಿದ್ದರೆ ಈ ಮೂರೂ ವಸ್ತುಗಳನ್ನು ಕೊಡುತ್ತೇನೆ" ಎಂದಾಗ ಅವನ ಮುಖ ಅರಳಿತು. "ಹುಡುಕಿ ತಂದುಕೊಡುತ್ತೇನೆ" ಅಂದ.

ಮೊಂಬೆಲಿಯನ್ನು ನಂಬಬಹುದಾದರೂ ಬರಿಯ ಆನೆಯ ತಲೆಬುರುಡೆ ಸಿಕ್ಕರೆ ಸಾಲದು, ಅದರ ಜೊತೆ ಅದರ ದಂತಗಳನ್ನೂ ಸಂಪಾದಿಸಬೇಕು. ಅಬ್ಬಾದಲ್ಲಿರುವ ಉಗ್ರಾಣದ ಮಾಲೀಕರಿಗೆ ಪತ್ರ ಬರೆದೆ. ಆ ನಾಲ್ಕೂ ದಂತಗಳ ವಿವರ, ಹಾಗು ಮಾರುಕಟ್ಟೆಯ ಬೆಲೆಗಿಂತ ಹೆಚ್ಚು ಹಣವನ್ನು ನಮೂದಿಸಿ, ಬುಟೆಂಬೋದ ಅಂಚೆ ಕಚೇರಿಗೆ ಅದನ್ನು ತಲುಪಿಸಿ ಹಣ ಪಡೆದುಕೊಳ್ಳಬೇಕೆಂದು ಕೋರಿ ಬರೆದೆ. ಇಷ್ಟು ಮಾಡಿ ನಾನು ಉತ್ತರಕ್ಕೆ ಹೊರಟೆ.


ಬುಟೆಂಬೊಗೆ ನಾನು ವಾಪಸಾಗುವಷ್ಟರಲ್ಲಿ ನಾಲ್ಕು ತಿಂಗಳಾಗಿತ್ತು. ಮೊಂಬೆಲಿಯ ಗುಡಿಸಲಲ್ಲಿ ಯಾರೂ ಇರಲಿಲ್ಲ. ಅವರಿವರನ್ನು ವಿಚಾರಿಸಿದಾಗ ಐದಾರು ವಾರಗಳ ಹಿಂದೆ ಸ್ಟಾನ್ಲೆವೆಲ್ಲೆಗೆ ಕೆಲಸ ಮಾಡಲು ಹೋದನೆಂದು ತಿಳಿಸಿದರು. ಆನೆಯ ತಲೆಯನ್ನು ಮನೆಯಲ್ಲಿ ಇಟ್ಟಿರಬಹುದೆಂದು ಅವನ ಮನೆಯನ್ನು ಹುಡುಕಿದೆ. ಆದರೆ ಏನೂ ಸಿಗಲಿಲ್ಲ. ಅಕ್ಕಪಕ್ಕದವರಿಂದಲೂ ಏನೂ ತಿಳಿಯಲಿಲ್ಲ. ನಾಲ್ಕು ದಂತಗಳ ಆನೆಯು ತನ್ನ ನಿಗೂಢತೆಯನ್ನು ಉಳಿಸಿಕೊಳ್ಳುವಂತೆ ಕಾಣುತ್ತಿದೆ.

ಬುಟೆಂಬೊದಲ್ಲಿ ನನಗೆ ಸ್ವಲ್ಪ ಪರಿಚಯವಿದ್ದ ರಿನೌಡ್ ಎನ್ನುವ ಬೆಲ್ಜಿಯಂ ಆಡಳಿತಾಧಿಕಾರಿಯಿದ್ದ. ಅವನ ಬಳಿ ಏನಾದರೂ ಮೊಂಬೆಲಿ ಕೊಟ್ಟಿದ್ದರೆ ಎಂದುಕೊಂಡು ಹೋಗಿ ಕೇಳಿದೆ. ಮೊಂಬೆಲಿ ಅಲ್ಲಿಗೆ ಹೋಗಿದ್ದನಂತೆ. ಕೊಳೆತು, ಹುಳಬಿದ್ದು, ಕೆಟ್ಟವಾಸನೆ ಬೀರುತ್ತಿದ್ದ ಅದನ್ನು ತಂದಿದ್ದಕ್ಕಾಗಿ ಅವನನ್ನು ಬೈದು ಹೊರಗಟ್ಟಿದರಂತೆ. ಕೊನೆಗೂ ಅದನ್ನು ಕಳೆದುಕೊಂಡೆ ಎಂದು ದುಃಖವಾಯಿತು. ತಲೆಬುರುಡೆ ಇರದೇ ದಂತಗಳನ್ನು ನೋಡಿ ಯಾರೂ ನಂಬುವುದಿಲ್ಲ. ಆದರೂ ಅಂಚೆ ಕಛೇರಿಗೆ ಹೋದೆ. ಅಲ್ಲಿಯೂ ನನ್ನ ಅದೃಷ್ಟ ಕೈಕೊಟ್ಟಿತ್ತು. ಉಗ್ರಾಣದಿಂದ ಪತ್ರವಷ್ಟೇ ಬಂದಿತ್ತು. "ನಾವು ನೀವು ತಿಳಿಸಿದ್ದ ದಂತಗಳನ್ನು ಗುರುತಿಸಿದ್ದೇವೆ. ಆದರೆ ನಿಮ್ಮ ಪತ್ರ ಬರುವಷ್ಟರಲ್ಲಿ ಅದನ್ನು ಬೆಲ್ಜಿಯಂನ ಉಗ್ರಾಣಕ್ಕೆ ಕಳಿಸಿದ್ದೇವೆ. ನಿಮಗೆ ಬೇಕಿದ್ದರೆ ಆಂಟ್ ವರ್ಪ್ ನಲ್ಲಿನ ನಮ್ಮ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದು" ಎಂದು ಬರೆದಿದ್ದರು. ಇದರಿಂದ ಏನೂ ಪ್ರಯೋಜನವಿಲ್ಲವೆಂದು ಸುಮ್ಮನೆ ಕಾಲೆಳೆದುಕೊಂಡು ರಿನೌಡ್ ನ ಕಚೇರಿಯ ಬಳಿ ಬಂದೆ. ಅಲ್ಲಿದ್ದ ಮಣ್ಣಿನ ರಾಶಿಯಿಂದ ಏನೊ ಬೆಳ್ಳಗೆ ಕಾಣಿಸಿತು. ಮೂಳೆಯ ರಾಶಿಯನ್ನು ಮಣ್ಣಲ್ಲಿ ಮುಚ್ಚಿದಂತೆ ಅದು ಕಾಣಿಸುತ್ತಿತ್ತು. ಕುತೂಹಲದಿಂದ ಕೋಲಿನಲ್ಲಿ ಕೆದಕಿದೆ. ನನ್ನ ಅದೃಷ್ಟ ವಾಪಸ್ ಬಂದಂತಿತ್ತು. ಅದೊಂದು ದೊಡ್ಡ ಆನೆಯ ತಲೆಬುರುಡೆಯಾಗಿತ್ತು. ರಿನೌಡ್ ಓಡಿಸಿದಾಗ ಮೊಂಬೆಲಿ ಅದನ್ನು ಅಲ್ಲೇ ರಸ್ತೆಯ ಪಕ್ಕದಲ್ಲಿ ಹಾಕಿ ಮಣ್ಣು ಮುಚ್ಚಿದ್ದಾನೆ ಎಂದು ಊಹಿಸಿದೆ. ತಕ್ಷಣವೇ ಅಂಚೆ ಕಚೇರಿಗೆ ಓಡಿದೆ. ನನ್ನ ತಂದೆ ತಾಯಿಗಳು ಆಂಟ್ ವರ್ಪಿನಲ್ಲಿರುವುದರಿಂದ, ಆ ದಂತಗಳ ವಿವರಣೆ ಕೊಟ್ಟು ಉಗ್ರಾಣಕ್ಕೆ ಹೋಗಿ ಅದನ್ನು ಕೊಂಡುಕೊಳ್ಳುವಂತೆ ನನ್ನ ತಂದೆಗೆ ತಂತಿ ಕಳಿಸಿದೆ. ಸನಿಕೆಯನ್ನು ಟ್ರಕ್ ನಲ್ಲಿಟ್ಟುಕೊಂಡು ಆ ಜಾಗಕ್ಕೆ ಹೋದೆ. ಕೆಟ್ಟವಾಸನೆ ಬೀರುತ್ತಿದ್ದರೂ ಲೆಕ್ಕಿಸದೆ ಉಸಿರು ಬಿಗಿಹಿಡಿದುಕೊಂಡು ಮಣ್ಣನ್ನು ತೆಗೆದೆ. ಆ ತಲೆ ಬುರುಡೆ ತುಂಬಾ ದೊಡ್ಡದಾಗಿತ್ತು. ರಸ್ತೆಗೆ ತಲೆ ಬುರುಡೆಯನ್ನು ಎಳೆದು ಪರಿಶೀಲಿಸಿದೆ. ದಂತಗಳಿರುವ ನಾಲ್ಕು ಗೂಡುಗಳನ್ನು ನೋಡಿ ಹಿಗ್ಗಿಹೋದೆ. ಇನ್ನುಳಿದದ್ದು ಯುರೋಪ್ ಗೆ ಹೋಗಿ ದಂತಗಳನ್ನು ಪಡೆದು ನಾಲ್ಕು ದಂತಗಳ ಆನೆಯೆಂಬುದಿತ್ತು ಎಂಬುದನ್ನು ಸಾಬೀತುಪಡಿಸುವುದು. ಈಗ ಈ ಬೃಹತ್ ಗಾತ್ರದ ತಲೆ ಬುರುಡೆಯನ್ನು ಸಾಗಿಸುವುದೇ ನನ್ನ ಮುಂದಿರುವ ಸವಾಲು.


ಅದನ್ನು ನೀರಿಳಿಯದ ದಪ್ಪ ಕ್ಯಾನ್ವಾಸ್ ಬಟ್ಟೆಯಲ್ಲಿ ಸುತ್ತಿ ಟ್ರಕ್ ಮೇಲಿರಿಸಿದೆ. ಹೋಗುವಾಗ ಮರದ ಕೊಂಬೆಯೊಂದಕ್ಕೆ ಬಡಿದು ನೀರಿನ ಹಳ್ಳದಲ್ಲಿ ಹೋಗಿ ಬಿತ್ತು. ಅದನ್ನು ಟ್ರಕ್ಕಿನಲ್ಲಿ ನನ್ನ ಹಿಂಬದಿಯೇ ಇರಿಸಿದೆ. ಅದರ ವಾಸನೆಯಿಂದ ಯಾರೂ ಮುಂದೆ ಬರದೇ ನಾನೇ ಟ್ರಕ್ ಓಡಿಸಬೇಕಾಯಿತು. ತೊಂದರೆ ಅಲ್ಲಿಗೇ ನಿಲ್ಲಲಿಲ್ಲ. ಒಂದು ಸಂಜೆ ಸಹರಾ ಮರುಭೂಮಿಯ ಅಂಚಿನಲ್ಲಿ ಶಿಬಿರ ಹಾಕಿದ್ದೆವು. ಗಾಳಿ ಆಡಲೆಂದು ಟ್ರಕ್ ನ ಬಾಗಿಲನ್ನು ತೆಗೆದಿದ್ದೆವು. ಬೆಳದಿಂಗಳ ರಾತ್ರಿಯಲ್ಲಿ ಮೂರು ಕತ್ತೆಕಿರುಬಗಳು ದಾಳಿ ಮಾಡಿದವು. ನಾವು ಎದ್ದು ಓಡಿಸುವಷ್ಟರಲ್ಲಿ ಆನೆಯ ತಲೆಯ ಹಿಂಭಾಗವನ್ನು ಒಂದಷ್ಟು ತಿಂದು ಹಾಕಿದ್ದವು. ಅದನ್ನು ಸುತ್ತಿ, ಹಗ್ಗ ಕಟ್ಟಿ, ಬಾಗಿಲನ್ನು ಭದ್ರಪಡಿಸಿದೆ. ಮುಂದೆ ಸಹರಾದಲ್ಲಿ ಸಾಗಿ ಮೊರೊಕ್ಕೊ ಮೂಲಕ ಸ್ಪೇನ್, ನಂತರ ಫ್ರಾನ್ಸ್ ಮತ್ತು ಅಲ್ಲಿಂದ ಆಂಟ್ ವರ್ಪ್ ತಲುಪುವಷ್ಟರಲ್ಲಿ ಸಾಕಾಗಿಹೋಗಿತ್ತು.


ಹಲವಾರು ತಿಂಗಳುಗಳಾದ ಮೇಲೆ ಊರಿಗೆ ಹೋಗಿದ್ದರಿಂದ ನನಗೆ ಅದ್ದೂರಿ ಸ್ವಾಗತ ಕಾದಿತ್ತು. ನನಗೆ ದಂತಗಳದ್ದೇ ಚಿಂತೆ. ಆದರೆ ನನ್ನ ತಂದೆ ದಂತಗಳನ್ನು ನ್ಯೂಯಾರ್ಕ್ ನ ನೈಸರ್ಗಿಕ ಇತಿಹಾಸದ ವಸ್ತುಸಂಗ್ರಹಾಲಯಕ್ಕೆ ಕಳಿಸಿಬಿಟ್ಟಿದ್ದರು. ಆನೆಯ ತಲೆ ಬುರುಡೆಯನ್ನು ಹಡಗಿನಲ್ಲಿ ಚೆನ್ನಾಗಿ ಬಿಗಿದು ಕಟ್ಟಿ ನ್ಯೂಯಾರ್ಕ್ ಗೆ ಸಾಗಿಸಿದೆ. ಅಲ್ಲಿಗೆ ಹೋದ ಕೂಡಲೇ ದಂತಗಳು ಸುರಕ್ಷಿತವಾಗಿರುವುದನ್ನು ಫೋನ್ ಮಾಡಿ ಖಚಿತಪಡಿಸಿಕೊಂಡೆ. ನನ್ನ ಸರಕನ್ನು ಟ್ಯಾಕ್ಸಿಯಲ್ಲಿ ವಸ್ತುಸಂಗ್ರಹಾಲಯಕ್ಕೆ ತೆಗೆದುಕೊಂಡು ಹೋದೆ. ವಸ್ತುಸಂಗ್ರಹಾಲಯದ ನಿರ್ದೇಶಕರಾದ ಡಾ.ಜೇಮ್ಸ್ ಕ್ಲಾರ್ಕ್ ರನ್ನು ಭೇಟಿಯಾದೆ. ಅವರ ಕಚೇರಿಯಲ್ಲಿ ದಂತಗಳನ್ನು ನೋಡಿದಾಗ ಇಟುರಿ ಕಾಡಿನ ರಾಜ ಎಂದು ಈ ಆನೆಯನ್ನು ಪಿಗ್ಮಿಗಳು ಹೇಳುತ್ತಿದ್ದುದು ನೆನಪಾಯಿತು.


ಕಟ್ಟಿದ್ದ ತಲೆ ಬುರುಡೆಯನ್ನು ಬಿಚ್ಚಿ ನೆಲದ ಮೇಲಿಟ್ಟೆವು. ಮೂರು ದಂತಗಳು ಗೂಡುಗಳಲ್ಲಿ ಸರಿಯಾಗಿ ಕೂತಿದ್ದರಿಂದ ಅವು ಅದರದ್ದೇ ಎಂದು ಖಾತ್ರಿಯಾಯಿತು. ಆದರೆ ನಾಲ್ಕನೆಯದು ಸೇರಲಿಲ್ಲ. ತಕ್ಷಣ ಏನೋ ಹೊಳೆದಂತಾಗಿ ಅದನ್ನು ಒಳಮುಖವಾಗಿ ತಿರುಗಿಸಿ ಸೇರಿಸಿದಾಗ ಸೇರಿಕೊಂಡಿತು. ಮೂರು ದಂತಗಳು ಹೊರಮುಖವಾಗಿ ಚಾಚಿಕೊಂಡಿದ್ದರೆ ಒಂದು ಒಳಮುಖವಾಗಿರುತ್ತದೆ. ಇಲ್ಲದಿದ್ದರೆ, ಅದು ಒಂದಕ್ಕೊಂದು ಉಜ್ಜುತ್ತದೆ.

ಆನೆಯ ತಲೆ ಬುರುಡೆ ಮತ್ತು ದಂತಗಳು ಹೊಂದಿಕೆಯಾದರೂ ಇಟುರಿ ಕಾಡಿನ ರಾಜನ ರಹಸ್ಯವನ್ನು ಬಿಡಿಸಿದೆ ಎಂಬ ನಂಬಿಕೆ ಮೂಡುತ್ತಿಲ್ಲ. ಹಾಗೂ ಹೀಗೂ ನಾಲ್ಕು ದಂತಗಳ ಆನೆಯ ಹುಡುಕಾಟವಂತೂ ಮುಗಿಯಿತು!

45 comments:

ರೂpaश्री said...

ಮಲ್ಲಿಕಾರ್ಜುನ್ ಅವರೆ,
ತುಂಬಾ ಸೊಗಸಾಗಿದೆ ಭಾವಾನುವಾದ! ಡೆನಿಸ್ ಮತ್ತವರ ಸಫಾರಿಯ ಪರಿಚಯ ಮಾಡಿಸಿದಕ್ಕೆ ಧನ್ಯವಾದಗಳು. ನಾಲ್ಕು ದಂತಗಳ ಆನೆ ಇದ್ದ ವಿಚಾರ ತಿಳಿದು, ದೇವರ ಸೃಷ್ಟಿಗೆ ಸಲಾಂ ಅನ್ನಬೇಕೆನ್ನಿಸಿತು. ಸೃಷ್ಟಿಯ ಒಡಲಲ್ಲಿ ಇನ್ನೂ ಏನೇನಿದೆಯೋ!!! ಡೆನಿಸ್ ಅವರು ಅಷ್ಟು ಕಷ್ಟಪಟ್ಟು ಸಂಗ್ರಹಸಿದ್ದ ಆ ಆನೆ ಬುರುಡೆ ಇನ್ನೂ ನ್ಯೂಯಾರ್ಕ್ ಮ್ಯೂಸಿಯಮ್ ನಲ್ಲೇ ಇದ್ಯಾ?
ಅಂತರ್ಜಾಲದಲ್ಲಿ ಈ ತರಹದ ಆನೆಯ ಚಿತ್ರವೊಂದು ಸಿಕ್ತು.

ಸಿಮೆಂಟು ಮರಳಿನ ಮಧ್ಯೆ said...

ಹುಡುಕಾಟದವರೆ.....

ಈ ಬಾರಿಯ ಹುಡುಕಾಟ ಭರ್ಜರಿಯಾಗಿಯೇ ಇದೆ....
ಡೆನಿಸ್ ಅವರ ಸಾಹಸ... ಅನುಭವ ಓದಿ ರೋಮಾಂಚನವಾಯಿತು....

ನಿಮ್ಮ ಭಾವಾನುವಾದ ತುಂಬಾ ಚೆನ್ನಾಗಿದೆ...

ಓದುತ್ತ... ಓದುತ್ತ ಬೇರೊಂದು ಲೋಕಕ್ಕೇ ಹೋದಂತಾಯಿತು...

ಅವರ ಪುಸ್ತಕವನ್ನು ಪೂರ್ತಿಯಾಗಿ ಅನುವಾದಿಸಿರಿ...
ನಮ್ಮಂಥಹ ಇಂಗ್ಲೀಷ್ ಸಾಹಿತ್ಯ ಓದದವರಿಗೆ ಖುಷಿಯಾಗುತ್ತದೆ....

ನಾಲ್ಕು ದಂತದ ಆನೆಯ ರೋಮಾಂಚಕ ವಿಷಯವನ್ನು
ಉಣ ಬಡಿಸಿದ್ದಕ್ಕೆ ಧನ್ಯವಾದಗಳು..

ಇದರ ಇನ್ನೊಂದು ಲಿಂಕ್ ಕೊಟ್ಟ ರೂಪಾಶ್ರೀಯವರಿಗೂ ಧನ್ಯವಾದಗಳು...

shivu said...

ಮಲ್ಲಿಕಾರ್ಜುನ್,

ತುಂಬಾ ಅದ್ಭುತವಾದ ಅನುಭವ. ಡೇನಿಸ್ ಅವರ ಅನ್ವೇಷಣೆ, ಸಾಹಸ, ಹಿಡಿದ ಕೆಲಸವನ್ನು ಬಿಡದೇ ಸಾಧಿಸುವ ಚಲ, ದೂರದೃಷ್ಟಿ ಎಲ್ಲರಿಗೂ ಸ್ಪೂರ್ತಿನೀಡುವಂತಿದೆ. ಮತ್ತೆ ಲೇಖನ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ...
ನಾಲ್ಕು ದಂತಗಳ ಆನೆಯ ವಿಚಾರ, ಮತ್ತು ದೇನಿಸ್ ಸಾಹಸ ಸಫಾರಿಯನ್ನು ಸೊಗಸಾಗಿ ಪರಿಚಯಿಸಿದ್ದಕ್ಕೆ ಧನ್ಯವಾದಗಳು.

b.suresha said...

ಮಲ್ಲಿಕಾರ್ಜುನ್ ಅವರೇ,
ಅಪರೂಪದ ವಿವರವೊಂದನ್ನು ಅನುವಾದ ಮಾಡಿಕೊಟ್ಟಿದ್ದೀರಿ.
ನಿಮ್ಮ ಅನುವಾದ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಇಂತಹ ಕೆಲಸಗಳನ್ನು ಮುಂದುವರೆಸಿ.
ನಿಮಗೆ ಒಳಿತಾಗಲಿ
ನಿಮ್ಮವ
ಬಿ.ಸುರೇಶ

guruve said...

ಅಬ್ಬಾ.. ಕಥೆ ಸಕತ್ತಾಗಿದೆ.. ಅನುವಾದವೂ ಚಂದ..

Umesh Balikai said...

ಕುತೂಹಲಕಾರಿ ವಿಷಯವೊಂದನ್ನು ಅನುವಾದಿಸಿ ತಿಳಿಸಿಕೊಟ್ಟಿದ್ದಕ್ಕೆ ವಂದನೆಗಳು. ನಾಲ್ಕು ದಂತಗಳ ಆನೆಯೊಂದಿತ್ತು ಅಂದ್ರೆ ನಂಬೋದು ಕಷ್ಟಾನೆ. ಆದ್ರೆ, ದೇವರ ಸೃಷ್ಟಿಯ ಮುಂದೆ ಅದು ಅಸಾಧ್ಯ ಅಲ್ಲ ಅಂತಾನೂ ಅನ್ಸುತ್ತೆ. ಆ ನಾಲ್ಕು ದಂತಗಳ ಆನೆಯ ಪಳಿಯುಳಿಕೆಯ ಚಿತ್ರವೊಂದಿದ್ದರೆ ತುಂಬಾ ಚೆನ್ನಾಗಿರ್ತಿತ್ತು.

Dr. B.R. Satynarayana said...

ಮಲ್ಲಿಕಾರ್ಜುನ್, ಕಾಡಿನ ಕಥೆಯನ್ನು ಓದಿ ಖುಷಿಯಾಯಿತು. ತೇಜಸ್ವಿ ನಂತರ ಈ ರೀತಿ ಬರಹಗಳನ್ನು ಮತ್ತೆ ಓದುತ್ತೀವೋ ಇಲ್ಲವೋ ಎಂದಾಗ ಕೃಪಾಕರ-ಸೇನಾನಿ ಅಂಥವರು ಆಸೆ ಮೂಡಿಸಿದ್ದರು. ಈಗ ನೀವೂ ಒಬ್ಬರು ನಮ್ಮಲ್ಲಿ ಅಂತಹ ಆಸೆಯನ್ನು ಹುಟ್ಟಿಸಿದ್ದೀರಿ. ಇನ್ನಷ್ಟು ಈ ರೀತಿಯ ಅನುವಾದಗಳ ಪ್ರಯೋಗ ನಡೆಸಿ. ಖಂಡಿತಾ ನಿಮ್ಮ ಕೈ ಫಳಗುತ್ತದೆ. ಆಗ ಮತ್ತೊಮ್ಮೆ ಅಪರಚಿತ ಕಾಡಿನ ಕಥೆಗಳು ನಮಗೆ ತೆರೆದುಕೊಳ್ಳುತ್ತವೆ. ನಾಲ್ಕು ಕೊಂಬಿನ ಆನೆ ಕಾಣಸಿಗುತ್ತದೆ. ಮುಂದಿನ ಫೋಟೋ ಅದೇ ಆಗಿರುತ್ತದೆ, ಎಂದು ಓದುತ್ತಾ ಓದುತ್ತಾ ಹೋದವನಿಗೆ ಆ ಪೋಟೋ ಇಲ್ಲದ್ದು ನಿರಾಶೆ ಅನ್ನಿಸಿತು ನಿಜ. ಆದರೆ ನಿಮ್ಮ ಈ ಹೊಸ ಸಾಹಸದ ಪರಿ ಅದನ್ನು ಮರೆಸಿತ್ತು. ಶುಭವಾಗಲಿ ನಿಮ್ಮ ಮುಂದಿನ ಯಾತ್ರೆಗೆ.

ಸುಶ್ರುತ ದೊಡ್ಡೇರಿ said...

ಒಳ್ಳೇ ಟ್ರಾನ್ಸ್‌ಲೇಶನ್ನು ಸಾರ್.. ಖುಶಿಯಾಯ್ತು ಓದಿ.

ಬಾಲು said...

oops.. adhbuta mattu romanchana.

aneya palayulikeya photo elladaru sikkare haakiri.

ಚಿತ್ರಾ said...

ಮಲ್ಲಿಕಾರ್ಜುನ್,
ಬಹಳ ಕುತೂಹಲಕಾರಿ ಲೇಖನ ! ಭಾಷಾಂತರವೂ ಬಹಳ ಚೆನ್ನಾಗಿದೆ. ನಿಜಕ್ಕೂ ಆ ತಲೆಬುರುಡೆ ನ್ಯೂಯಾರ್ಕ ನಲ್ಲಿದೆಯೇ ಎಂದು ನೋಡಬೇಕಾಯ್ತು ಪ್ರತಿ ಸಲ , ಹೊಸದೇನನ್ನೋ ಪರಿಚಯಿಸುತ್ತಿದ್ದೀರಿ.
ಧನ್ಯವಾದಗಳು. .

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಮೇಡಂ,
ನೀವು ಭಾವಾನುವಾದವನ್ನು ಇಷ್ಟಪಟ್ಟಿದ್ದಕ್ಕೆ ಖುಷಿಯಾಯ್ತು. ಅಷ್ಟೇ ಅಲ್ಲದೆ ಇಂಟರ್ನೆಟ್ ನಲ್ಲೂ ಹುಡುಕಿದ್ದೀರಿ. ತುಂಬಾ ಥ್ಯಾಂಕ್ಸ್. ನಾನು ಹುಡುಕಿದಾಗ ಸಿಕ್ಕ ಮಾಹಿತಿ http://www.diggles.com/ec/2005/EC05-02.pdf ಇಲ್ಲಿದೆ. Some in Newyork are stuffy, need restoration ಎಂಬ ಶೀರ್ಷಿಕೆಯಡಿ ಮಾಹಿತಿಯಿದೆ. ಆದರೆ ಚಿತ್ರ ಸಿಗಲಿಲ್ಲ.

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
On Safari ಪುಸ್ತಕ ತುಂಬಾ ರೋಚಕವಾಗಿದೆ. ಅದರಲ್ಲಿ ಗೊರಿಲ್ಲಾ ಬಗ್ಗೆ ಅದ್ಭುತ ಕಥನವೇ ಇದೆ. ತುಂಬಾ ದೊಡ್ಡದು. ಬ್ಲಾಗಲ್ಲಿ ಹೇಗೆ ಹಾಕುವುದು? ನೋಡೋಣ. ಮೆಚ್ಚಿದ್ದಕ್ಕೆ ಖುಷಿಯಾಯ್ತು. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಸ್ವಲ್ಪ ದೊಡ್ಡದಾಯಿತೇನೋ. ಅನುವಾದ ಇಷ್ಟವಾಗಿದ್ದಕ್ಕೆ ಖುಷಿಯಾಯ್ತು. ಅರ್ಮಾಂಡ್ ಡೆನಿಸ್ ನ ಬದುಕು ಬರಹ ಸ್ಫೂರ್ತಿದಾಯಕವಾಗಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ಸುರೇಶ್ ಸರ್,
ನೀವು ಮೆಚ್ಚಿದ್ದಕ್ಕೆ ತುಂಬಾ ಖುಷಿಯಾಗಿದೆ. ಇನ್ನಷ್ಟು ಅನುವಾದಿಸಲು ಉತ್ಸಾಹ ಮೂಡಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ಗುರುಪ್ರಸಾದ್ ,
ಧನ್ಯವಾದಗಳು ಕಣ್ರೀ.

ಮಲ್ಲಿಕಾರ್ಜುನ.ಡಿ.ಜಿ. said...

ಉಮೇಶ್ ಅವರೆ,
ಏನು ಮಾಡುವುದು. ನಾನು ಸಾಕಷ್ಟು ಹುಡುಕಿದೆ. ಆನೆಯ ಪಳೆಯುಳಿಕೆಯ ಚಿತ್ರ ಸಿಗಲಿಲ್ಲ.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ಕಾಡು ಯಾವುದೇ ರೀತಿಯಲ್ಲಿದ್ದರೂ ಸೆಳೆಯುತ್ತೆ. ಈ ಪುಸ್ತಕ ಓದಿದ ಮೇಲೆ ಪೂರ್ತಿ ಅನುವಾದಿಸಲು ಧೈರ್ಯ ಸಾಲದೇ ಒಂದು ಅಧ್ಯಾಯವನ್ನು ಮಾತ್ರ ಅನುವಾದಿಸಿದೆ. ಮೆಚ್ಚಿದ್ದಕ್ಕೆ ಖುಷಿಯಾಯ್ತು.

ಮಲ್ಲಿಕಾರ್ಜುನ.ಡಿ.ಜಿ. said...

ಸುಶ್ರುತ ಅವರೆ,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಬಾಲು ಅವರೆ,
ಧನ್ಯವಾದಗಳು. ಆನೆಯ ಪಳೆಯುಳಿಕೆ ಫೋಟೋ ಸಿಗಲಿಲ್ಲ.

ಮಲ್ಲಿಕಾರ್ಜುನ.ಡಿ.ಜಿ. said...

ಚಿತ್ರಾ ಅವರೆ,
ಅದು ನ್ಯೂಯಾರ್ಕ್ ನಲ್ಲೇ ಇದೆಯಂತೆ. ಮೆಚ್ಚಿದ್ದಕ್ಕೆ ಸಂತಸವಾಯಿತು. ಧನ್ಯವಾದಗಳು.

ರೂಪಾ ಶ್ರೀ said...

ನಾಲ್ಕು ದಂತಗಳ ಆನೆಯ ಹುಡುಕಾಟದ ಮಧ್ಯೆ ನಾನೆಲ್ಲೋ ಕಳೆದುಹೋಗಿದ್ದೆ..

ವನಿತಾ said...

ತುಂಬ ಚೆನ್ನಾಗಿ ಅನುವಾದ ಮಾಡಿದ್ದೀರಿ. ಹಾಗು ತುಂಬ ಒಳ್ಳೆಯ ಲೇಖನ ನೀಡಿದ್ದಕ್ಕೆ ಧನ್ಯವಾದಗಳು. ಬಹಳ cutiosity ಯಿಂದ ಓದಿಸಿಕೊಂಡು ಹೋಯಿತು. ಹಾಗೆಯೇ ಪ್ರತಿ ಫೋಟೋ ನೋಡೋವಾಗಲು next ಫೋಟೋ ೪ ದಂತ ದ ಆನೆಯದಿರಬಹುದೆಂಬ ಕುತೂಹಲ..ಕೊನೆಗೂ ರೂಪಶ್ರೀ ಅವರು ಕೊಟ್ಟ ಫೋಟೋ ನೋಡಿದೆ..

ಮಲ್ಲಿಕಾರ್ಜುನ.ಡಿ.ಜಿ. said...

ನಾಗೇಶ್ ಹೆಗಡೆಯವರ ಪ್ರತಿಕ್ರಿಯೆ:
ಚೆನ್ನಾಗಿತ್ತು ಎ ಡೆನಿಸ್ ನ ವರ್ಣನೆ. ಆದರೆ ಕೊನೆಗೂ ಆ ಆನೆಯ ಚಿತ್ರವನ್ನು ಆತ ಯಾಕೆ ಹಾಕಲಿಲ್ಲ ಎಂದು ನೀವಾದರು ಹೇಳಬಹುದಿತ್ತು. ನಾನು ಸುಧಾದಲ್ಲಿದ್ದಾಗ ನೀವೇ ಇರಬೇಕು ಈ ಲೇಖನವನ್ನು ಕೊಟ್ಟಿದ್ದಿರಿ. ಅದರ ಜತೆ ಆ ಆನೆಯ ಒಂದು ಮಬ್ಬು ಚಿತ್ರವೂ ಇತ್ತು. ಕೈಯಲ್ಲಿ ಬರೆದಂತಿತ್ತು. ಉತ್ತಮ ಚಿತ್ರ ಬೇಕೇ ಬೇಕೆಂದು ಹೇಳಿ ನಾನು ಲೇಖನವನ್ನು ಸುಮಾರು ದಿನ ಪೆಂಡಿಂಗ್ ಇಟ್ಟಿದ್ದೆ.

sunaath said...

ಮಲ್ಲಿಕಾರ್ಜುನ,
ಸುಂದರವಾದ ಸಾಹಸದ ಲೇಖನವನ್ನು ಅಷ್ಟೇ ಸುಂದರವಾಗಿ ಅನುವಾದಿಸಿ ಕೊಟ್ಟಿದ್ದೀರಿ. ಓದುವಾಗ ಲೇಖಕನ ಉದ್ವಿಗ್ನತೆಯಲ್ಲಿಯೇ ನಾವೂ ಮುಳುಗಿದಂತೆ ಭಾಸವಾಗುತ್ತದೆ.
ಅಭಿನಂದನೆಗಳು.

sitaram said...

ಅಧ್ಬುತವಾದ ಅನುವಾದ. ಮೂಲ ಬರಹವೇ ಅನ್ನುವ ಹಾಗೇ ಅನುವಾದಗೊ೦ಡಿದೆ. ವಿಷಯವು ತು೦ಬಾ ಚೆನ್ನಾಗಿದೆ. ಮಾಹಿತಿಗೆ ಧನ್ಯವಾದಗಳು. ಒ೦ದೇ ಉಸಿರಿಗೆ ಓದುವ೦ತೆ ಬರೆದಿದ್ದಿರಾ.

sitaram said...

roopa avre tamagu dhanyavaadagalu

ಪಾಚು-ಪ್ರಪಂಚ said...

Mallikarjun sir,

Nijakku adhbhuta..!

vanya chayagrahakara jeevana nijakkoo sahasamaya alwa...!

Dhanyavaadagalu..!

-Prashanth Bhat

ಮಲ್ಲಿಕಾರ್ಜುನ.ಡಿ.ಜಿ. said...

ರೂಪಾಶ್ರೀಯವರೆ,
ಧನ್ಯವಾದಗಳು. ಹೀಗೇ ಪ್ರೋತ್ಸಾಹಿಸುತ್ತಿರಿ.

ಮಲ್ಲಿಕಾರ್ಜುನ.ಡಿ.ಜಿ. said...

ವನಿತಾ ಅವರೆ,
ನಿಮಗೆ ಅನುವಾದ ಇಷ್ಟವಾಗಿದ್ದಕ್ಕೆ ಖುಷಿಯಾಯ್ತು. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸುನಾತ್ ಸರ್,
ಧನ್ಯವಾದಗಳು. ನಿಮ್ಮ ಮೆಚ್ಚಿಗೆಯ ಮಾತಿಂದ ಖುಷಿಯಾಗಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ಸೀತಾರಾಮ್ ಸರ್,
ಧನ್ಯವಾದಗಳು. ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಶಾಂತ್,
ತುಂಬಾ ಥ್ಯಾಂಕ್ಸ್. ನಿಜ ನೀವು ಹೇಳಿದಂತೆ ವನ್ಯಜೀವಿ ಛಾಯಾಗ್ರಾಹಕನ ಅನುಭವಗಳು ಸಾಹಸಮಯ ಮತ್ತು ರೋಚಕವಾಗಿರುತ್ತದೆ.

ರೂpaश्री said...

ಇಲ್ಲಿ ನಾಲ್ಕು ದಂತಗಳ ಆನೆಯ ಪಳಿಯುಳಿಕೆಯ ಚಿತ್ರವಿಲ್ಲದ ಕಾರಣ ಅಂತರ್ಜಾಲದಲ್ಲಿ ಹುಡುಕಿದೆ, ಸಿಕ್ಕಿತು:) ನೀವು ಕೊಟ್ಟ ಲಿಂಕ್ ಕೂಡ ನೋಡಿದೆ, ಕುತೂಹಲ ಇನೂ ಹೆಚ್ಚಾಗಿದೆ. ನಮ್ಮ ಲೈಬ್ರರಿಯಲ್ಲಿ "On safari" ಪುಸ್ತಕವಿದೆ, ಈ ವಾರಾಂತ್ಯದಲ್ಲಿ ಹೋಗಿ ತಂದು ಓದುವೆ.

PS: ಮೇಡಂ ಅನ್ನದಿರಿ ಅದು ತುಂಬಾ ಪವರ್ ಫುಲ್ ಪದ.. ರೂಪಶ್ರೀ/ರೂಪ ಸಾಕು:)

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಅವರೆ,
ನನಗೆ "On Safari" ಸಿಕ್ಕಿದ್ದು ಬೆಂಗಳೂರಿನಲ್ಲಿ footpath ನಲ್ಲಿ ಮಾರುವ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಧ್ಯೆ. ಸಾಕಷ್ಟು ಜೀರ್ಣವಾಗಿದೆ. ಸುಮ್ಮನೆ ನೋಡೋಣವೆಂದುಕೊಂಡು ಶುರುಮಾಡಿದ್ದು ನನ್ನನ್ನು ಅನುವಾದಿಸುವಂತೆ ಮಾಡಿತು. ದಯವಿಟ್ಟು ಓದಿ. ಇನ್ನೂ ಹೆಚ್ಚಿನ ವಿಷಯ , ಮಾಹಿತಿ ನೀವು ಖಂಡಿತ ಕೊಡಬಲ್ಲಿರಿ. ಬ್ಲಾಗ್ ಓದುಗರೆಲ್ಲರೂ ಇಷ್ಟಪಡುತ್ತಾರೆ.

Prabhuraj Moogi said...

ಸಕತ್ತಾಗಿದೆ ದಂತಕಥೆ... ಐರಾವತದ ಕಲ್ಪನೆ ಕೂಡ ಮನದಲ್ಲಿ ಸುಳಿಯಿತು...

jayalaxmi said...

ಸಹಜ ಸುಲಲಿತ ಅನುವಾದ. ಓದಿ ಖುಷಿ ಆಯ್ತು ಮಲ್ಲಿಕಾರ್ಜುನ್ ಅವರೆ.

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಭುರಾಜ್ ಅವರೆ,
ಧನ್ಯವಾದಗಳು. ಇದೊಂಥರಾ ಕಲಿಯುಗದ ಐರಾವತ ಅನ್ನಬಹುದಲ್ವಾ?

ಮಲ್ಲಿಕಾರ್ಜುನ.ಡಿ.ಜಿ. said...

ಜಯಲಕ್ಷ್ಮಿಯವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

PaLa said...

ಸಕ್ಕತ್ ಅನುವಾದ,, ದೊಡ್ಡ ಬರಹ ಅಂತ ಅನ್ನಿಸಲೇ ಇಲ್ಲ

Harihara Sreenivasa Rao said...

preetiya mallikarjurna avarige,
naalku dantada aane vichitra accari moodiside.ee vishesha kodugegaagi dhanya vaadaagalu.Kerala boat kooda chennagide. Chitra Durgada hidimbeswarana deevasthanadalli 2Nos.hallugalive. Shodhaka manassiruva taavu namma suttamuttalainalle eruva intahavannu belakige tara beekaagide.Samparkisidare vivara tilisuve.Minchu Vaani:9900682197.Eee vishayagalannoo horage tandu punya galisi nimma keerti ajaraamaravaaguttade.Discovery channalnalli nimma vishayagalu baruvantaagali emba aaseyoundige.
Dr.Harihara Sreenivasa Rao
Nimma mi.va.anisidare kodi ellavaadare beeda.

ವಿನುತ said...

ಅದ್ಭುತವಾದ ಮಾಹಿತಿ ಮಲ್ಲಿಕಾರ್ಜುನ್ ಅವರೇ. ಒ೦ದೇ ಉಸಿರಿಗೆ ಓದಿ ಮುಗಿಸಿದೆ, ಇ೦ತಹ ಸೃಷ್ಟಿ ವೈಚಿತ್ರ್ಯಗಳ ಕುರಿತು ನಿಮ್ಮ೦ದ ಇನ್ನೂ ಹಚ್ಚಿನ ಮಾಹಿತಿಯನ್ನು ನಿರೀಕ್ಷಿಸುತ್ತೇವೆ.

prasanna said...

ತುಂಬ ವಿಸ್ಮಯಕರವಾದ ಸಂಗತಿ. ಸರಾಗವಾಗಿ ಓದಿಸಿಕೊಳ್ಳುವ ಅನುವಾದ.
ಹಿತವೆನಿಸುವ ಅನುಭವ. ಈ ರೀತಿಯ ಕೆಲಸವನ್ನು ಆದಷ್ಟು ಮುಂದುವರಿಸಿ

MAHANTHESH said...

U R so lucky to travell across the country. U R bestowed with an such opportunities in life. Besides your photographs and thier descriptions are truly amazing. Let God give U more such occassions and opportunities so that others including me become more learned. Thank U. Expecting More from U. God Bless U.

Srini said...

ಎಕ್ಸೆಲೆಂಟ್, ತುಂಬಾ ಸೊಗಸಾಗಿದೆ..

Banu P Yadav said...

Nice blog me also try to type in kannada how it is please teach me sir. D.G yavare.