Wednesday, July 8, 2009

ಎರವೀಕುಲಂ ಅಭಯಾರಣ್ಯ

ಕೇರಳದಲ್ಲಿ ಹಾದು ಹೋಗುವ ಪಶ್ಚಿಮಘಟ್ಟದಲ್ಲಿ ಮುನ್ನಾರ್ ನಿಂದ ೧೫ ಕಿ.ಮೀ. ದೂರದಲ್ಲಿದೆ ಎರವೀಕುಲಂ ರಾಷ್ಟ್ರೀಯ ಅಭಯಾರಣ್ಯ.
ಬ್ರಿಟಿಷ್ ಪ್ಲಾಂಟರುಗಳ ಬೇಟೆಯ ಮೋಜಿಗೆ ಈಡಾಗಿದ್ದ ಎರವೀಕುಲಂ ಮತ್ತು ರಾಜಮಲೈ ಸುತ್ತಲಿನ ಕಾಡನ್ನು ೧೯೭೫ರಲ್ಲಿ ಅಭಯಾರಣ್ಯವೆಂದು ಘೋಷಿಸಲಾಯಿತು.

ಇಲ್ಲಿ ಅನೈಮುಡಿ ಎಂಬ ಪಶ್ಚಿಮಘಟ್ಟದಲ್ಲೇ ಅತಿ ಎತ್ತರದ (೨೬೯೦ಮೀ) ಪರ್ವತವಿದೆ. "ನೀಲಗಿರಿ ಥಾರ್" ನ ವಾಸಸ್ಥಾನವಿದು. "ವರೈ ಆಡು"(ಬೆಟ್ಟದ ಆಡು) ಎಂದು ಸ್ಥಳೀಯರು ಇದನ್ನು ಕರೆಯುವರು. ಈ ನೀಲಗಿರಿ ಥಾರ್ ಇಲ್ಲಿ ಬಿಟ್ಟರೆ ಬೇರೆಲ್ಲೂ ಇಲ್ಲ. ಜಾರುವ, ಕಡಿದಾದ ಬೆಟ್ಟಗುಡ್ಡಗಳ ಮೇಲೆ ಇವು ನಿರಾಯಾಸವಾಗಿ ನಡೆದಾಡುವುದು ನೋಡಲು ಬಲು ಚಂದ.

ಇವು ಕಡಿದಾದ ಬಂಡೆಗಳ ಮೇಲೆ ವೇಗವಾಗಿ ಓಡಾಡುವುದನ್ನು ನೋಡಿ, "ಇದರ ಕಾಲಲ್ಲಿ ಏನಾದರೂ ಅಯಸ್ಕಾಂತ ಶಕ್ತಿಯಿರಬಹುದಾ?" ಎಂದು ಅನ್ನಿಸದಿರದು.

ಬೆಟ್ಟದ ಜೀವ.

ಪ್ರವಾಸಿಗರು ನೀಡುವ ತೊಂದರೆಗಳು.

ಹನ್ನೆರಡು ವರ್ಷಕ್ಕೊಮ್ಮೆ ಅರಳುವ "ನೀಲಕುರುಂಜಿ" ಪುಷ್ಪ ಇಲ್ಲಿನ ಮತ್ತೊಂದು ವೈಶಿಷ್ಟ್ಯ. ಈ ನೀಲಿ ಹೂಗಳಿಂದಾಗಿಯೇ ನೀಲಗಿರಿ ಎಂಬ ಹೆಸರು ಬಂದಿರುವುದು.

45 comments:

ರೂpaश्री said...

ಎಂದಿನಂತೆ ಅತ್ಯುತ್ತಮ ಫೋಟೋಗಳು!!
ನಾವು ಮುನ್ನಾರಿಗೆ ಹೋದಾಗ ಇವನ್ನು ನೋಡಿದ್ದೆವು, ಆದ್ರೆ ಈ ಹೂವುಗಳು ೧೨ ವರ್ಷಕ್ಕೊಮ್ಮೆ ಅರಳುತ್ತವೆ ಅನ್ನೋ ವಿಚಾರ ತಿಳಿದಿರಲಿಲ್ಲ. ತಿಳಿಸಿಕೊಟ್ಟಿದಕ್ಕೆ ವಂದನೆಗಳು ಮಲ್ಲಿಕಾರ್ಜುನ್ ಅವರೆ.
ನೀಲ್ಗಿರಿ ಥಾರ್ ಮತ್ತು ನೀಲಕುರುಂಜಿ ಹೂವು ಎರಡೂ ನಶಿಸುತ್ತಿವೆ ಅನ್ನೋದು ನೋವಿನ ವಿಷಯ.

ಸಿಮೆಂಟು ಮರಳಿನ ಮಧ್ಯೆ said...

ಹುಡುಕಾಟದವರೆ....

ಸುಂದರ ಫೋಟೊಗಳು..!

ಬಹುಷಃ ಆ ಪ್ರಾಣಿಗಳಿಗೆ ಮನುಷ್ಯನನ್ನು ಕಂಡರೆ ಭಯವೇನೋ..
ನಿರ್ಭಯವಾಗಿ ಓಡಡಲೂ ಬಿಡುವದಿಲ್ಲವಲ್ಲ...!

ಬಹಳ ಉಪಯುಕ್ತ ಮಾಹಿತಿಗಳಿಗಾಗಿ...

ಕನ್ನಡ ಬ್ಲಾಗರ್ಸ್ ನಲ್ಲಿ ವಾರದ ಅತಿಥಿಯಾಗಿದ್ದಕ್ಕೆ..

ವಂದನೆ...ಅಭಿನಂದನೆ....

ನಮ್ಮನೆ.. SWEET HOME..... said...

ಸುಂದರ ಫೋಟೊಗಳು...
ನಮಗೂ ಸಹ ಹೋಗಬೆಕಿನ್ನುಸುವ ಹಾಗೆ..
ಮಾಹಿತಿಗಳೊಡನೆ ಬರೆದಿದ್ದೀರಿ...

Sweet & short...

thank you....

ಟಿ ಜಿ ಶ್ರೀನಿಧಿ said...

Sooper! ನೀಲಕುರುಂಜಿ ಈ ವರ್ಷ ಅರಳಿದೆಯಾ?

ಕ್ಷಣ... ಚಿಂತನೆ... Think a while said...

ಮಲ್ಲಿಕಾರ್ಜುನ ಸರ್‍, ಎರವೀಕುಲಂ ಅಭಯಾರಣ್ಯದ ಮಾಹಿತಿಯ ಸೂಕ್ಷ್ಮ ಚಿತ್ರಣವನ್ನು ನೀಡಿದ್ದಕ್ಕೆ ಧನ್ಯವಾದಗಳು. ನೀಲ್ಗಿರಿ ಥಾರ್‌ ಮತ್ತು ನೀಲಿಕುರಂಜಿಯ ಫೋಟೋಗಳು ಬಹಳ ಸುಂದರವಾಗಿವೆ. ಹೂಗಳು ಹನ್ನೆರಡು ವರ್ಷಕ್ಕೊಮ್ಮೆ ಅರಳುವುದು ಸೋಜಿಗವೇ ಸರಿ. ಈ ಹೂಗಳು ೧೨ ವರ್ಷಗಳಿಗೊಮ್ಮೆ ಅರಳಿ ಎಷ್ಟು ದಿನಗಳು ಇರುತ್ತವೆ ಎಂಬುದರ ಬಗ್ಗೆ ಮಾಹಿತಿ ಇದ್ದಿದ್ದರೆ...

ಜನರಿಂದಲೇ ಜಂಗಲ್‌ಗಳಲ್ಲಿನ ಜಾನುವಾರುಗಳು ಜಾನುಗಳು ಹೇಳಹೆಸರಿಲ್ಲದಂತೆ ಆಗುತ್ತಿರುವುದು. ಅಭಯಾರಣ್ಯವೆಂದ ಮಾತ್ರಕ್ಕೆ ಹಾಗೂ ಅಲ್ಲಿ ಕಾಣ ಸಿಗುವ ಜೀವಜಂತುಗಳಿಗೆ ಉಪದ್ರವ ಕೊಡದಂತೆ ಜಾಗೃತಿ ಜನರಲ್ಲಿಯೇ ಮೂಡಿದರೆ ಒಳಿತಲ್ಲವೇ? ಫೋಟೋಗಳು ಚೆನ್ನಾಗಿದ್ದು ಜನರ ಉಪದ್ರವದ ಫೋಟೋ ಚಿಂತನೆಗೀಡುಮಾಡುವಂತಿದೆ.

ಧನ್ಯವಾದಗಳು.

ಚಂದ್ರಶೇಖರ ಬಿ.ಎಚ್.

hEmAsHrEe said...

good one !

planning to Munnar when we come down to India !

Thanks.

suresh kota said...

ಎಷ್ಟೊಂದು ಊರು ಸುತ್ತುತ್ತೀರಿ, ಹೊಟ್ಟೆಕಿಚ್ಚಾಗುತ್ತೆ ಮಾರಾಯ್ರೆ! ನೆಕ್ಸ್ಟ್ ಟೈಮ್ ನಾನೂ ನಿಮ್ ಜೊತೆ ಬರಲಾ?
ಅಂದ ಹಾಗೆ ಎಲ್ಲ ಚಿತ್ರಗಳೂ, ವಿವರಗಳೂ ಚೆನ್ನಾಗಿವೆ. ಅಭಿನಂದನೆಗಳು. :)

ರಜನಿ. ಎಂ.ಜಿ said...

ಕಳೆದ ಬಾರಿ ನಾನೂ ಅಲ್ಲಿಗೆ ಹೋಗಿದ್ದೆ. ಬೆಟ್ಟದ ಮೇಲೆ ನಡೆಯುತ್ತಾ ಹೋಗುವುದೇ ಚೆಂದ. ಅಲ್ಲಿಮದ ಕಾಣುವ ದೃಶ್ಯಗಳೂ ಮನೋಹರ. ಅದೇಕೆ ನಿಮ್ಮ ಕ್ಯಾಮೆರಾದ ಕಣ್ಣು ತಪ್ಪಿದೆ? ಬ್ಲಾಗ್‌‌ನಲ್ಲಿ ನಾನು ಹಾಕಿಕೊಂಡಿರುವ ಫೋಟೋ ಅಲ್ಲಿ ತೆಗೆದದ್ದೆ. ನೆನಪಿಸಿದ್ದಕ್ಕೆ ಖುಷಿಯಾಯಿತು. ಅಂದಹಾಗೆ ನೀಲಕುರಂಜಿ ದಟ್ಟ ನೀಲಿ ಬಣ್ಣದಲ್ಲಿರುತ್ತವೆ. ಇಲ್ಲಿ ಫೋಟೊದಲ್ಲಿರುವುದು ಬಿಳಿ ಕಾಣುತ್ತಿದೆ. ಏಕೆ?

Dr. B.R. Satynarayana said...

ಮಲ್ಲಿಕಾರ್ಜುನ್ ನಿಮ್ಮ ಕೇರಳ ಸೀರೀಸ್ ಫೋಟೋಗಳಲ್ಲಿ ಕೆಲವನ್ನು ನೋಡಿದ್ದೆ. ಆದರೆ ಅವುಗಳ ಬಗೆಗಿನ ಮಾಹಿತಿಯೊಂದಿಗೆ ನೋಡುವ ಸಂತೋಷವೇ ಬೇರೆ. ನನಗೆ ಇಂತಹ ೊಂದು ಸ್ಥಳವಿರುವುದೇ ಗೊತ್ತಿರಲಿಲ್ಲ. ಅಲ್ಲದೆ 12 ವರ್ಷಕ್ಕೊಮ್ಮೆ ಅರಳುವ ಹೂವು ನೋಡಿ ಖುಷಿಯಾಯಿತು. ಧನ್ಯವಾದಗಳು

sunaath said...

ಅತ್ಯುತ್ತಮ ಫೋಟೋಗಳಿಗಾಗಿ ಅಭಿನಂದನೆಗಳು.

shivu said...

ಮಲ್ಲಿಕಾರ್ಜುನ್,

ಮತ್ತೊಮ್ಮೆ ಮುನ್ನಾರಿನ ನೆನಪು ಮರುಕಳಿಸುವಂತೆ ಮಾಡಿವೆ ಇಲ್ಲಿನ ಕೆಲವು ಫೋಟೋಗಳು. ನೀಲಗಿರಿ ಥಾರ್ ಇಡೀ ಪ್ರಪಂಚದಲ್ಲಿ ಇದೊಂದೆ ಜಾಗದಲ್ಲಿ ಇರೋದಲ್ವ...ಮತ್ತೆ ಅಂತಹ ಅಪರೂಪದ ಪ್ರಾಣಿಗಳನ್ನು ಉಳಿಸಿಕೊಳ್ಳಲು ನಾವು ಎಷ್ಟು ಜಾಗ್ರುತರಾದರೂ ಸಾಲದು. ಅದರಲ್ಲಿ ಈ ರೀತಿ ಅವುಗಳನ್ನು ತಡೆಹಾಕಿ ಈ ರೀತಿ ಫೋಟೋ ತೆಗೆಯುವುದು ಮತ್ತಿತ್ತರ ತೊಂದರೆಗಳನ್ನು ಕೊಟ್ಟರೇ ಮುಂದೆ ನಮ್ಮಿಂದ ಇನ್ನಷ್ಟು ದೂರವಾಗಿ ಮರೆಯಾಗುವುದು ಖಂಡಿತ. ಕುರುಂಜಿ ಹೂ ಫೋಟೋ ಚೆನ್ನಾಗಿದೆ...

ಧನ್ಯವಾದಗಳು.

ಬಾಲು said...

once again photo galu chennagive.

e photo galannu nodi, nanagu omme alli hogabeku antha annistha ide!

ಚಂದ್ರಕಾಂತ ಎಸ್ said...

ಸೊಗಸಾದ ಅಪರೂಪದ ಚಿತ್ರಗಳು. ನೀಲ್ಗಿರಿ ಥಾರ್ ಬಗ್ಗೆ ಕೇಳಿದ್ದೆ. ಈಗ ನೋಡಿದಹಾಗಾಯಿತು.

ನೀಲಕುರಂಜಿ ಹೂವಿನ ಬಗ್ಗೆ ಬರೆದಿರುವಿರಿ. ಇದು ನೀವೇ ತೆಗೆದ ಚಿತ್ರವೇ ? ಅಂದರೆ ನೀವು ಹೋದಾಗ ಹನ್ನೆರಡನೆಯ ವರ್ಷದ ನಂತರ ಹೂ ಬಿಟ್ಟಿದಿಯೇ ? ಹಾಗಿದ್ದರೆ ನಿವು ಹೋಗಿರುವುದು ತುಂಬಾ ಒಳ್ಳೆಯ ಸಮಯ.

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಮೇಡಂ,
ಧನ್ಯವಾದಗಳು. ನೀಲಗಿರಿ ಥಾರ್ ಅನ್ನು ಉಳಿಸಿಕೊಳ್ಳಲು ಅಲ್ಲಿನ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಆದರೂ ಪ್ರವಾಸಿಗರು ಕೂಗುವುದು, ಅವುಗಳ ಜೊತೆ ಫೋಟೋ ತೆಗೆಸಿಕೊಳ್ಳಲು ನಿಲ್ಲುವುದು ಮಾಡುತ್ತಾರೆ. ಇದಕ್ಕೆ ಮದ್ದೆಲ್ಲಿಂದ ತರುವುದು?

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ಥ್ಯಾಂಕ್ಯೂ..ಥ್ಯಾಂಕ್ಯೂ..
ಅದು ಸ್ವಲ್ಪ ನಾಚಿಕೆಯ ಸ್ವಭಾವದ ಪ್ರಾಣಿ. ಅದನ್ನು ನಾಚಿಕೆ ಬಿಟ್ಟ ಪ್ರವಾಸಿಗರು(ಕೆಲವರು) ತೊಂದರೆ ಕೊಡುತ್ತಾರೆ.

ಮಲ್ಲಿಕಾರ್ಜುನ.ಡಿ.ಜಿ. said...

SweetHome ನ ಮೇಡಂ,
ಧನ್ಯವಾದಗಳು. ನೀವು ಹಾಕಿರುವ ಎರಡು ಗಿಣಿಗಳ ಫೋಟೋ ಸಕತ್ತಾಗಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ಶ್ರೀನಿಧಿಯವರೆ,
ಈ ವರ್ಷ ನೀಲಕುರುಂಜಿ ಹೂ ಅರಳಿಲ್ಲ. ಅದನ್ನು ನಾನು ೨೦೦೬ರಲ್ಲಿ ಹೋದಾಗ ತೆಗೆದದ್ದು. ಆಗ ಶಿವು, ನಾನು ಹೋಗಿದ್ದೆವು.

Harihara Sreenivasa Rao said...

neela kuranjiyannu ulisalu bio
tech vidhanagalannu balsa bhude? ennuvudara bagge nimma oodugaru gamana harisuvaote madiddeeri. nimma ee praytnkke dhnyavaadaglu. intaha visayagalu nimmannu keertiya uttungakke eerisutaave ennuva apaara aashyagalomdige
Dr.Harihara Sreenivasa Rao

Guru's world said...

ಮಲ್ಲಿಕಾರ್ಜುನ್,
ಮತ್ತೊಮ್ಮೆ ಒಳ್ಳೆಯ ಚಿತ್ರ ಲೇಖನ,,, ನಾನು ಕೂಡ ಇಲ್ಲಿಗೆ ಹೋಗಿ ಬಂದಿದ್ವಿ ,,,,ನೀಲಕುರುಂಜಿ ಹೂ ಗಳ ಬಗ್ಗೆ ಗೊತ್ತಿರಲಿಲ್ಲ ನಿಮ್ಮ ಬ್ಲಾಗ್ ಮೂಲಕ ತಿಳಿದುಕೊಂಡ ಹಾಗೆ ಆಯಿತು .
ನಿಮ್ಮ ಫೋಟೋಗಳ ಬಗ್ಗೆ ಎರಡು ಮಾತಿಲ್ಲ.

ಗುರು

ಆಲಾಪಿನಿ said...

ಮಲ್ಲಿಕಾರ್ಜುನ್‌, ರಾಜಮಲೈನಲ್ಲೂ ಥಾರ್‍ ಇವೆ. ಅವುಗಳ ಸಖತ್‌ ಫೋಟೋಗಳು ಹಾಗೇ ಇವೆ. ಎನಿ ವೇ ನೈಸ್‌ ಫೋಟೋಸ್‌...

ಧರಿತ್ರಿ said...

ಮಲ್ಲಿಯಣ್ಣ...ಮೊದಲೇ ಹೇಳ್ತೀನಿ ನಂಗೆ ಬೈಬೇಡಿ ಅಂತ. ಕೆಲ್ಸ ಜಾಸ್ತಿ ಇತ್ತು..ಅದಕ್ಕೆ ತುಂಬಾ ಮಿಸ್ ಮಾಡ್ಕೊಂಡೆ.
ಈ ಪೊಟೋಗಳನ್ನು ನೋಡಿದ ಮೇಲೆ ನಮಗೂ ಹೋಗಬೇಕನಸುತ್ತಿದೆ. ತುಂಬಾ ಚೆಂದದ ಫೊಟೋಗಳು ಮಲ್ಲಿಯಣ್ಣ. ಇನ್ನು ಬರ್ತಾ ಇರ್ತೀನಿ..ಟೂ ಬಿಡಬೇಡಿ ಆಯಿತಾ.
-ಧರಿತ್ರಿ

PARAANJAPE K.N. said...

ನಿಮ್ಮ ಫೋಟೋ-ಲೇಖನ ಸೂಪರ್

ವನಿತಾ said...

ಒಳ್ಳೆಯ ಚಿತ್ರ ಲೇಖನ..ಆದರೆ ನೀಲಕುರುಂಜಿ ಹೂಗಳನ್ನು ದೂರದಿಂದ ನೋಡಿದ್ದೆ, ನೀಲಿ ಬಣ್ಣ ಇದ್ದವು..!!!

ಜಲನಯನ said...

ಮಲ್ಲಿಕಾರ್ಜುನ್....ನಿಜಕ್ಕೂ ನಿಮ್ಮ ಚಿತ್ರಗ್ರಾಹ್ಯ ಸಾಮರ್ಥ್ಯಕ್ಕೆ ಬಹುಪರಾಕ್....Simple Super ಚಿತ್ರಗಳು...ಶಿವು, ನೀವು...ಮತ್ತೆ ....ಮತ್ತೆ..ಹಾಂ...ರೂಪಶ್ರೀ ಯವರೂ ಪೋಸ್ಟ್ ಮಾಡಿದ್ದಾರೆ...ಎಲ್ಲರ ಪ್ರತಿಭೆಗಳನ್ನು ನೋಡಿದ್ರೆ...ನಿಜಕ್ಕೂ ಹೆಮ್ಮೆ ಅನಿಸುತ್ತೆ...ನೀವೆಲ್ಲ ಒಮ್ಮೆ ಮನಸು ಮಾಡಿ...ಒಂದು ಚಿತ್ರ ಪ್ರದರ್ಶನ ಮಾದಿಬಿಡಿ ಬೆಂಗಳೂರಲ್ಲಿ....ನನ್ನ ಆಸೆ (ಯುವ ಕವಿಯ ವಾರ್ಷಿಕ ಸಮ್ಮೇಳನದ ಕನಸು) ಈಡೇರಿದರೆ..ಅದೇ ಉತ್ತಮ ವೇದಿಕೆಯಾಗಬಹುದು...
ಪರಿಸರದೇವಿ/ದೇವ..ಗೊತ್ತಿಲ್ಲ ಯಾವ ಲಿಂಗ ಅಂತ...ಅದು ಯಾರೇ ಆದ್ರೂ ನಿಮ್ಮನ್ನು ಮನಸಾ ಹರಸಲಿ...

ರೂಪಾ ಶ್ರೀ said...

ನೀಲಗಿರಿಯ ವಿಷಯ ತಿಳಿಸಿದ್ದಕ್ಕೆ ಧನ್ಯವಾದ.... ಅದ್ಭುತ ಚಿತ್ರಗಳು ಚೆಂದವಾದ ನಿರೂಪಣೆ :)

ಜಿ.ಎಸ್.ಬಿ. ಅಗ್ನಿಹೋತ್ರಿ said...

ಚೆನ್ನಾಗಿದೆ...
ನಾನೊಮ್ಮೆ ಭೇಟಿ ನೀಡಿದ್ದೆ. ಆದರೆ ಆಗ ಕ್ಯಾಮರ ಜತೆಯಲ್ಲಿ ಇರಲಿಲ್ಲ. ಈಗ ಇನ್ನೊಮ್ಮೆ ಹೋಗುವ ಆಸೆ ಆಗ್ತಿದೆ. ಧನ್ಯವಾದ.

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಶೇಖರ್ ಸರ್,
ಕುರಿಂಜಿಯ ಬಗ್ಗೆ ಒಮ್ದಿಷ್ಟು ಮಾಹಿತಿ-

ಇದೊಂದು ನೀಲಿ ಅಥವಾ ನೇರಳೆ ಬಣ್ಣದ ಸುಂದರ ಹೂ.ಈ ಹೂಗಳಿಂದ ಪಶ್ಚಿಮಘಟ್ಟದ ಗಿರಿಶೃಂಗ ನೀಲಿ ಸೀರೆ ಹೊದ್ದ ನೀರೆಯಂತೆ ಕಾಣುವ ದೃಶ್ಯದಿಂದಾಗಿ ಪ್ರಸಿದ್ಧಿ ಪಡೆದಿದೆ. ಇದು ಕೊಡೈಕೆನಾಲ್, ಎರ್ಕಾಡ್ ಕೇರಳಗಳ ಬೆಟ್ಟಗುಡ್ಡಗಳ ಹುಲ್ಲು ಮೈದಾನಗಳಲ್ಲಿ ನಿರ್ದಿಷ್ಟ ಕಾಲದಲ್ಲಿ ಅರಳುವ ಹೂಗಿಡಗಳು. ಕುರಿಂಜಿ ನಮಗೆ ಚಿರಪರಿಚಿತವಾದ ಸ್ಫಟಿಕ(ಗೊರಟೆ), ಕನಕಾಂಬರಗಳ ಜಾತಿಗೆ ಸೇರಿದ ಹೂ.ಸಸ್ಯಶಾಸ್ತ್ರೀಯವಾಗಿ ಅಕಾಂತೇಸಿ ಕುಟುಂಬಕ್ಕೆ ಸೇರಿದೆ.ಕುರಿಂಜಿಯಲ್ಲಿ ಅನೇಕ ಪ್ರಬೇಧಗಳಿವೆ. ಇವು ತಮ್ಮ ಪ್ರಬೇಧಗುಣಕ್ಕೆ ಅನುಸಾರವಾಗಿ 4,8,12 ವರ್ಷಗಳಿಗೊಮ್ಮೆ ಹೂವಾಗುತ್ತದೆ. ಊಟಿ, ಕೊಡೈಕೆನಾಲ್, ಎರ್ಕಾಡ್, ಕೇರಳದ ಬೆಟ್ಟಗುಡ್ಡಗಳ ಹುಲ್ಲುಮೈದಾನದಲ್ಲಿ ಕಂಡುಬರುವ ಕುರಿಂಜಿಯ ಸಸ್ಯಶಾಸ್ತ್ರೀಯ ಹೆಸರು Strobilanthes cunthianus.

ಮಲ್ಲಿಕಾರ್ಜುನ.ಡಿ.ಜಿ. said...

ಹೇಮಾಶ್ರೀಯವರೆ,
ಧನ್ಯವಾದಗಳು. ಭಾರತಕ್ಕೆ ಬಂದಾಗ ಖಂಡಿತ ಮುನ್ನಾರಿಗೆ ಹೋಗಿಬನ್ನಿ.

ಮಲ್ಲಿಕಾರ್ಜುನ.ಡಿ.ಜಿ. said...

ಸುರೇಶ್ ಕೋಟ ಅವರೆ,
ಧನ್ಯವಾದಗಳು. ತಿರುಗುವ ವಿಷಯದಲ್ಲಿ ಕಾರಂತರು ನನಗೆ ಸ್ಫೂರ್ತಿ. ಇನ್ನೂ ಹೆಚ್ಚೆಚ್ಚು ತಿರುಗಾಡುವ ಆಸೆಯಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ರಜನಿಅವರೆ,
ಕ್ಷಮಿಸಿ. ನಾನು ಗಮನಿಸಿರಲಿಲ್ಲ. ನೀವು ಕುಳಿತಿರುವ ಫೋಟೋ ನೀಲಗಿರಿ ಥಾರ್ ನೋಡಲು ಬೆಟ್ಟಹತ್ತುವಲ್ಲಿ ತೆಗೆಸಿಕೊಂಡಿರುವುದಲ್ವಾ? ಕುರಿಂಜಿ ತೆಳು ನೀಲಿ ಅಥವಾ ತೆಳು ನೇರಳೆ ಬಣ್ಣದ್ದಾಗಿರುತ್ತದೆ. ನಾವು 2006 ರಲ್ಲಿ ಹೋದಾಗ (ರೋಲ್ ಕ್ಯಾಮೆರಾ)ದಲ್ಲಿ ತೆಗೆದ ಚಿತ್ರವದು.

ಮಲ್ಲಿಕಾರ್ಜುನ.ಡಿ.ಜಿ. said...

ಡಾ.ಸತ್ಯನಾರಾಯಣ್ ಸರ್,
ಮುನ್ನಾರ್ ನ ಸುತ್ತಲಿನ ಮತ್ತುಪಟ್ಟಿ, ಗುಂಡುಮಲೈ, ಮತ್ತು ಅತಿ ಎತ್ತರದ ಅನೈಮುಡಿ ಬೆಟ್ಟಗಳಲ್ಲಿ ಈ ಹೂಗಳು ಹೆಚ್ಚಾಗಿ ಕಾಣಸಿಗುತ್ತವೆ. ಇಲ್ಲಿ ಇದಕ್ಕೆ ನೀಲಕುರಿಂಜಿ ಎಂದು ಕರೆಯುತ್ತಾರೆ. ಈ ಹೂ ಅರಳಿರುವ ಸಮಯದಲ್ಲಿ ಸಿಗುವ ಜೇನಿಗೆ ಬೆಲೆ ಹೆಚ್ಚು!
ಟೀ ಪ್ಲಾಂಟೇಷನ್ ಮತ್ತು ಮರಮುಟ್ಟುಗಳಿಗಾಗಿ ಕಾಡುಗಳು ಕುಗ್ಗಿಹೋದವು. ಪೇಪರಿಗಾಗಿ ನೀಲಗಿರಿ ಮರಗಳನ್ನು ಬೆಳೆಸಲಾಯಿತು. ವಿದ್ಯುತ್ ಉತ್ಪಾದನೆಗಾಗಿ ನೀರಲ್ಲಿ ಮುಳುಗಿದ ಪ್ರದೇಶವೆಷ್ಟೋ? ಅಂತೂ ಕುರಿಂಜಿ ಹಲವಾರು ಅಪಾಯಗಳನ್ನೆದುರಿಸಿ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ಸುನಾತ್ ಸರ್,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಕುರಿಂಜಿ ಹೂ ಫೋಟೋ ಮಂಜು, ನೀವು ಮತ್ತು ನಾನು ಹೋದಾಗ ತೆಗೆದದ್ದು. ಅಲ್ಲಿ ನೀಲಗಿರಿ ಥಾರ್ ಅನ್ನು ಸುಮ್ಮನೆ ನೋಡುವುದಿಲ್ಲ. ಕಿರುಚುವುದು, ಗಟ್ಟಿಯಾಗಿ ಮಾತಾಡುವುದು ಇತ್ಯಾದಿ ಕೀಟಲೆಗಳಿಂದ ಪ್ರವಾಸಿಗರಲ್ಲಿ ಕೆಲವರು ರೇಜಿಗೆ ಉಂಟುಮಾಡುತ್ತಾರೆ.

ಮಲ್ಲಿಕಾರ್ಜುನ.ಡಿ.ಜಿ. said...

ಬಾಲು ಅವರೆ,
ಧನ್ಯವಾದಗಳು. ಹೋಗಿಬನ್ನಿ ನಿಮ್ಮ ಪ್ರವಾಸ ಆನಂದಮಯವಾಗಿರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಕಾಂತ ಮೇಡಂ,
ಧನ್ಯವಾದಗಳು.
ನಾನು ಇದು ನಾಲ್ಕನೆಯ ಬಾರಿ ಮುನ್ನಾರಿಗೆ ಹೋಗುತ್ತಿರುವುದು. 2006ರಲ್ಲಿ ಹೂ ಅರಳಿತ್ತು. ಆಗ ತೆಗೆದ ಚಿತ್ರವದು. ಈ ಬಾರಿ ಉಳಿದ ಚಿತ್ರಗಳನ್ನು ತೆಗೆದಿರುವುದು. 2018 ರಲ್ಲಿ ನೋಡೋಣ!!!

ಮಲ್ಲಿಕಾರ್ಜುನ.ಡಿ.ಜಿ. said...

ಡಾ>ಹರಿಹರ ಶ್ರೀನಿವಾಸ ಸರ್,
ನೀವು ನನ್ನ ಬ್ಲಾಗನ್ನು ಓದಿದ್ದಕ್ಕೆ ನನಗೆ ತುಂಬಾ ಸಂತಸವಾಯಿತು. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಗುರು ಅವರೆ,
ನೀವು ಮುನ್ನಾರನ್ನು ನೆನಪಿಸಿಕೊಳ್ಳುವಂತಾಗಿದ್ದಕ್ಕೆ ಸಂತೋಷವಾಯಿತು.ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಆಲಾಪಿನಿಯವರೆ,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಧರಿತ್ರಿ,
ನಮ್ಮಲ್ಲಿ ಕರೆಂಟಿನದೇ ದೊಡ್ಡ ಸಮಸ್ಯೆ. ಹಾಗಾಗಿ ಕಷ್ಟವಾಗುತ್ತೆ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ತುಂಬಾ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ವನಿತಾ ಅವರೆ,
ದೂರದಿಂದ ಹಾಗೇ ಕಾಣುವುದು. ಹತ್ತಿರ ಹೋದಾಗ ಚಿತ್ರದಲ್ಲಿರುವಂತಿರುತ್ತದೆ.

ಮಲ್ಲಿಕಾರ್ಜುನ.ಡಿ.ಜಿ. said...

ಜಲನಯನ ಸರ್,
ಧನ್ಯವಾದಗಳು. ನೀವು ಹೇಳಿದಂತೆ ಬ್ಲಾಗಿನವರು ಬ್ಲಾಗ್ ಬರಹಗಳ ಪುಸ್ತಕ ಬಿಡುಗಡೆ ಮಾಡುವುದು, ಚಿತ್ರಪ್ರದರ್ಶನ ಮಾಡುವುದು, ಕವನ ವಾಚನ ಇತ್ಯಾದಿ ತುಂಬಾ ಚೆನ್ನಾಗಿರುತ್ತದೆ.

ಮಲ್ಲಿಕಾರ್ಜುನ.ಡಿ.ಜಿ. said...

ರೂಪಾಶ್ರೀ ಅವರೆ,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಅಗ್ನಿಯವರೆ,
ಮುನ್ನಾರಿಗೆ ಎಷ್ಟು ಬಾರಿ ಹೋದರೂ ಬೇಸರವಾಗುವುದಿಲ್ಲ. ಹಿಗಿಬನ್ನಿ. ಧನ್ಯವಾದಗಳು.

ವಿನುತ said...

ಪ್ರವಾಸದಿ೦ದಾಗಿ ಬ್ಲಾಗುಗಳಿಗೆ ಭೇಟಿನೀಡಲು ಸಾಧ್ಯವಾಗಿರಲಿಲ್ಲ. ಇಲ್ಲಿ ನೀವು ಕೇರಳವನ್ನೇ ತೋರಿಸಿದ್ದೀರಿ ನಿಮ್ಮ ಕ್ಯಾಮೆರಾ ಕಣ್ಣಲ್ಲಿ, ಸು೦ದರ ಫೋಟೋಗಳಿಗೆ ಮತ್ತು ಮಾಹಿತಿಗಳಿಗೆ ಧನ್ಯವಾದಗಳು.