ನೀರಿಗೂ ಕೇರಳಕ್ಕೂ ಇರುವ ನಂಟು ವಿವರಣೆಗೆ ಮೀರಿದ್ದು. ಕಡಲು ಅವರ ಬದುಕಿನ ಅವಿಭಾಜ್ಯ ಅಂಗ. ಎಷ್ಟೆಂದರೂ ಪರಶುರಾಮ ಸೃಷ್ಟಿಗೆ ಸೇರಿದ ಭೂಪ್ರದೇಶ.
ಆ ನಾಡಿನ ಭಾಗ್ಯದ ಬಾಗಿಲನ್ನು ತೆರೆದದ್ದೂ ಈ ಸಮುದ್ರವೇ. ಆಕ್ರಮಣಕಾರರಾದ ಪೋರ್ಚುಗೀಸರು, ಡಚ್ಚರು ಮತ್ತು ಇಂಗ್ಲೀಷರಿಗೆ ಬಾಗಿಲು ತೆರೆದುಕೊಟ್ಟಿದ್ದು ಈ ಸಮುದ್ರವೇ.
ರಾಜ್ಯದ ಒಂದು ಪಾರ್ಶ್ವದಲ್ಲಿ ಪಶ್ಚಿಮಘಟ್ಟಗಳ ಪರ್ವತಶ್ರೇಣಿ, ಮತ್ತೊಂದು ಪಾರ್ಶ್ವದಲ್ಲಿ ಅರಬ್ಬೀಸಮುದ್ರ. ದೇಶದ ಬೇರೆ ಯಾವುದೇ ರಾಜ್ಯಕ್ಕೂ ಇಲ್ಲದ ನೈಸರ್ಗಿಕ ರಕ್ಷೆ. ಅವರ ಸಂಸ್ಕೃತಿ ಇನ್ನೂ ಇಡಿಯಾಗಿ, ಬಿಡಿಯಾಗಿ ಉಳಿದಿರುವುದಕ್ಕೆ ಅದೇ ಕಾರಣ.
ಗುಡ್ಡ, ಬೆಟ್ಟ, ಬಯಲು, ಕಣಿವೆ, ನದಿ, ಜಲಪಾತ, ತೊರೆ, ಸಮುದ್ರ ಕಿನಾರೆಗಳ ಮಧ್ಯೆ ಹೆಣೆದುಕೊಂಡಿರುವ ಇಲ್ಲಿನ ಬದುಕು ನಿಸರ್ಗಕ್ಕೆ ತುಂಬಾ ಹತ್ತಿರ. ಹಾಗಾಗಿಯೇ ಇದು ಪ್ರತಿಯೊಬ್ಬರಿಗೂ ಹತ್ತಿರ.
ನಮಗೆ ಕಾರು, ಬೈಕು, ಬಸ್ಸು ಇದ್ದಂತೆ ಅವರಿಗೆ ನಾನಾ ವಿಧದ ದೋಣಿಗಳಿವೆ. ಅದರ ಝಲಕ್ ಇಲ್ಲಿದೆ. "ದೋಣಿಸಾಗಲಿ ಮುಂದೆ ಹೋಗಲಿ..." ಎಂದು ಗುನುಗುನಿಸುತ್ತಾ ಒಂದು ಸುತ್ತು ಹಾಕೋಣ ಬನ್ನಿ...
ನೀರು - ಹಾಲು.
Some Tips to live a better life
4 hours ago
28 comments:
ನೀವು ಕೊಟ್ಟಿರುವ captions ತುಂಬಾ ಚೆನ್ನಾಗಿದೆ.. ಒಂದು ಕ್ಷಣ ದೋಣಿಗಳ ನಡುವೆ traffic jam ಆಗುತ್ತಾ ಅನ್ನಿಸಿತು! ಹಾಗಾದರೂ ಧೂಳಿನ ಬದಲು ನಿಸರ್ಗದ ನಡುವೆ ಇರಬಹುದಲ್ಲಾ!!
ಮಲ್ಲಿಕಾರ್ಜುನ್ ಸಾರ್.......
ನಿಮ್ಮ ಚಿತ್ರಗಳು ತುಂಬಾ ಸುಂದರವಾಗಿವೆ. ಅದಕ್ಕೆ ಕೊಟ್ಟ ಶೀರ್ಷಿಕೆಗಳು ಚಿತ್ರಗಳನ್ನು ಪರ್ಫೆಕ್ಟಾಗಿ ಹೊಂದತ್ತೆ. ಕೇರಳವನ್ನು ನಿಮ್ಮ ಕ್ಯಾಮೆರಾ ಮೂಲಕ ನಮಗೆ ತೋರಿಸಿದ್ದಕ್ಕೆ ಧನ್ಯವಾದಗಳು ಸಾರ್.....
ಶ್ಯಾಮಲ
sakattagide mallikarjuna nimma lekhana mattu photogalu...mattu neevu allina doni sparde yannu nodilladidre ondu sala nodi, thumba chennagiruttade..
aadre nange radio interview kelokke aagtilla..it says 'download limit has exceeded antha' so miss maadkonde..!!!
ರೂಪಾ ಶ್ರೀ ಅವರೆ,
ನಾವು ಸಣ್ಣ ಕಾಲುವೆಯಂತಹ ದಾರಿಯಲ್ಲಿ ಹೋಗುತ್ತಿದ್ದೆವು(ನಮ್ಮ ದೋಣಿಯಲ್ಲಿ). ಅಲ್ಲಿ ದೋಣಿಗಳಿಗೆ Horn ಇರುತ್ತದೆ. ಎದುರಿನಿಂದ ಇನೊಂದು ದೋಣಿ ಬಂತು. ನಮ್ಮ ದೋಣಿಯವ ಪಕ್ಕಕ್ಕೆ ಸರಿದ. ಆದರೂ ನೀರಿನೆಡೆಗೆ ಬಗ್ಗಿದ್ದ ತೆಂಗಿನ ಮರ ಉಜ್ಜಿಬಿಟ್ಟಿತು. ಒಂದು ಗಂತೆ ನಿಲ್ಲಿಸಿ ರಿಪೇರಿ ಮಾಡಿಕೊಂಡು ಹೊರಟಿದ್ದಾಯ್ತು! ನೀವು ಬರೆದಂತೆ ನಿಸರ್ಗದ ಮಧ್ಯೆ ಇದ್ದುದರಿಂದ ಬೇಸರವಾಗಲಿಲ್ಲ.
ಶ್ಯಾಮಲ ಅವರೆ,
ನಿಮ್ಮ ಮೆಚ್ಚುಗೆಯ ಮಾತುಗಳಿಂದ ಖುಷಿಯಾಯ್ತು. ಧನ್ಯವಾದಗಳು.
ವನಿತಾ ಅವರೆ,
ಮುಂದಿನ ತಿಂಗಳು ಅಂದರೆ August 8 ಕೇರಳದಲ್ಲಿ Snake Boat Race (Nehru Trophy) ಇದೆ. ಕ್ಯಾಮೆರಾದ ಮೂಲಕ ನೋಡಲು ಶಿವು ಮತ್ತು ನಾನು ಹೋಗುತ್ತಿದ್ದೇವೆ. ಕೇರಳಾದ ಸೆಳೆತವೇ ಹಾಗೆ. ಹೋಗಿ ಬಂದು ಎರಡು ತಿಂಗಳಾಗಿಲ್ಲ. ಆಗಲೇ ಮತ್ತೆ ಅಲ್ಲಿಗೆ!
ಮಲ್ಲಿಕಾರ್ಜುನ್ ಅವರೆ,
ನಿಮ್ಮ ಚಿತ್ರಗಳು ಒಂದಕಿಂತಾ ಒಂದು ಸುಂದರವಾಗಿವೆ. ಅದಕ್ಕೆ ನೀವು ಕೊಟ್ಟ ಶೀರ್ಷಿಕೆಗಳು ಸೂಪರ್!! ಕೇರಳದ ದೋಣಿಗಳನ್ನು ನಮಗೆ ತೋರಿಸಿದ್ದಕ್ಕೆ ಧನ್ಯವಾದಗಳು.
ಮಲ್ಲಿಕಾರ್ಜುನ್,
ಕೇರಳದ ದೋಣಿಗಳು ಅಂತ ತಕ್ಷಣ ಕುತೂಹಲ ತಾನಾಗೆ ಕೆರಳುತ್ತೆ....ನೀವು ಬಣ್ಣ ಬಣ್ಣದ ದೋಣಿಗಳನ್ನು ತೋರಿಸಬಹುದು ಅಂತ ನಿರೀಕ್ಷೆ ಮಾಡಿದ್ದೆ. ಆದರೆ ದೋಣಿಗಳಲ್ಲಿ ಪ್ರಯಾಣಿಸುವ ಜನರ ವಸ್ತುಗಳಲ್ಲಿ ಜೀವಂತಿಕೆ ತುಂಬಿಸಿ ಬಣ್ಣ ನೀಡಿದ್ದೀರಿ...ಎಂಥ ನಿರ್ಜೀವ ವಸ್ತುಗಳಿಗೆ ಆಗಲಿ ಅದಕ್ಕೆ ಭಾವಾನಾತ್ಮಕ ಟಚ್ ನೀಡುವುದರಿಂದ ಅವು ನಮಗೆ ಹತ್ತಿರವಾಗುತ್ತವೆ.
ಎಲ್ಲಾ ದೋಣಿ ಚಿತ್ರಗಳಲ್ಲೂ ಜೀವಂತಿಕೆಯಿದೆ ಅದು ನನಗೆ ಇಷ್ಟವಾಯಿತು.
ಮತ್ತೆ ಸುಧಾದಲ್ಲಿ ಇಂಡಿಯನ್ ಕಾಫಿ ಹೌಸ್ ಲೇಖನ ಓದಿದೆ. ಅದಕ್ಕೆ ಅಭಿನಂದನೆಗಳು ಜೊತೆಯಲ್ಲೇ ಬೇಸರವೂ ಇದೆ. ನೀವು ಹೇಳಿದ ಅಲ್ಲಿನ ಕಾಫಿ ಹೌಸ್ ಕತೆ ಎಷ್ಟು ಚೆನ್ನಾಗಿದೆಯೆನಿಸಿತ್ತು. ಆದರೆ ಸುಧಾ ಪತ್ರಿಕೆಯವರು ಅದರ ರೆಕ್ಕೆ ಪುಕ್ಕ, ಕೈಕಾಲು, ತಲೆ, ಹೃದಯ, ಮನಸ್ಸು ಎಲ್ಲವನ್ನು ಕತ್ತರಿಸಿ ನಿರ್ಜೀವ ದೇಹವನ್ನು ಮಾತ್ರ ಹಾಕಿದ್ದಾರೆ ಅನ್ನಿಸಿತು. ಅದನ್ನು ಎಲ್ಲಾ ವಿವರಣೆಯೊ೦ದಿಗೆ ಚಿತ್ರಸಹಿತ ಬ್ಲಾಗಿನಲ್ಲಿ ಹಾಕಿ. ಎಲ್ಲರಿಗೂ ಮಾಹಿತಿ ಸಹಿತ ಇಷ್ಟವಾಗುತ್ತದೆ...
ಧನ್ಯವಾದಗಳು.
ಮಲ್ಲಿಕಾರ್ಜುನ,
ಕೇರಳದ ಜೀವನಶೈಲಿಯ ಒಂದು ಭಾಗವನ್ನು ಚಿತ್ರಗಳಲ್ಲಿ, ವಿವರಣೆ ಸಹಿತವಾಗಿ,ನೀಡಿದ್ದೀರಿ. ತುಂಬಾ ರೋಚಕವಾದ ವಿವರಣೆ. Snake boat raceದ ಚಿತ್ರಗಳನ್ನು ನೋಡಲು ಹಾಗೂ ವಿವರಣೆ ಓದಲು ಕುತೂಹಲದಿಂದ ಕಾಯುತ್ತಿದ್ದೇನೆ.
ನಾನು ಸುಧಾ ಪತ್ರಿಕೆ ಓದಿಲ್ಲ. ಶಿವು ಹೇಳಿದ ಲೇಖನವನ್ನು ಪೂರ್ತಿ ರೂಪದಲ್ಲಿ blogನಲ್ಲಿ ಕೊಡಲು ವಿನಂತಿಸುತ್ತೇನೆ.
ಸುಂದರ... Simply super
ಮಲ್ಲಿಕಾರ್ಜುನ ಅವರೇ,
ನಿಮ್ಮ ಲೇಖನ ಓದುತ್ತಾ ಜೊತೆಗೆ ಫೋಟೋಗಳನ್ನು ವೀಕ್ಷಿಸುತ್ತಿದ್ದಾಗ ನನ್ನ ನಾನು ಮರೆತುಹೋಗಿದ್ದೆ ಎಂದರೆ ಅತಿಶಯೋಕ್ತಿ ಅಲ್ಲ! ಅಷ್ಟು ಆಳವಾಗಿ ಅವುಗಳಲ್ಲಿ ಲೀನವಾಗಿದ್ದೆ. ಸ್ವತಹ ನಾನೇ ಅಲ್ಲಿ ವಿಹರಿಸುತ್ತಿರುವೆನೇನೋ ಅನ್ನುವಂತೆ ಭಾಸವಾಯಿತು ನನಗೆ.
ನಿಸರ್ಗದ ಮಡಿಲಲ್ಲಿ ಸುಳಿದಾಡಲು ಅವಕಾಶ ಕಲ್ಪಿಸಿದ್ದಕ್ಕೆ ಮತ್ತು ಚಂದದ ಲೇಖನ ಮತ್ತು ಫೋಟೋಗಳಿಗೆ, ಧನ್ಯವಾದಗಳು!
ನನಗೆ ನಿಮ್ಮ ರೇಡಿಯೋ ಸಂದರ್ಶನ ಕೇಳಲಾಗಲಿಲ್ಲ ಕ್ಷಮಿಸಿ, ಇದಕ್ಕಾಗಿ ವಿಷಾದಿಸುತ್ತೇನೆ!
ಪುಟ್ಟಿಯ ಅಮ್ಮ,
ನಿಮಗೆ ಸ್ವಾಗತ. ನಿಮ್ಮ ಬ್ಲಾಗಿನಂತೆ(ಪುಟ್ಟಿಯಂತೆ) ಮುಗ್ಧತೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವೆ. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ. ಧನ್ಯವಾದಗಳು.
ಶಿವು,
ಪ್ರತಿಯೊಂದು ವಸ್ತುವೂ ಮಾನವನ ಜೀವನದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಹಾಸುಹೊಕ್ಕಾಗಿದೆ. ಹಾಗಿರುವಾಗ ಫೋಟೋಗಳಲ್ಲಿ ಅದನ್ನು ಬಿಂಬಿಸುವ ಪುಟ್ಟ ಪ್ರಯತ್ನವಷ್ಟೇ ಇದು. ಮೆಚ್ಚಿಗೆಯಾಗಿದ್ದಕ್ಕೆ ಖುಷಿಯಾಯ್ತು. ಥ್ಯಾಂಕ್ಸ್.
ಸುನಾತ್ ಸರ್,
ಧನ್ಯವಾದಗಳು. ಕಾಫಿ ಹೌಸ್ ಲೇಖನವನ್ನು ಮುಂದೆ ಬ್ಲಾಗಲ್ಲಿ ಹಾಕುವೆ.
ಹರೀಶ್ ಮಾಂಬಾಡಿ ಅವರೆ,
ಧನ್ಯವಾದಗಳು.
SSK ಸರ್,
ನಿಮ್ಮ ಮೆಚ್ಚಿಗೆಯ ಮಾತುಗಳಿಗೆ ಉಬ್ಬಿಹೋಗಿರುವೆ. ಧನ್ಯವಾದಗಳು.
ಹುಡುಕಾಟದವರೆ....
ಎಷ್ಟು ಸೊಗಸಾದ ಫೋಟೊಗಳು...!
ಅದಕ್ಕೆ ಸುಂದರ ವಿವರಣೆಗಳು...
ಕೇರಳದ ಸುಂದರ .. ರಂಜನೀಯ ಪ್ರಕ್ರತಿಯಲ್ಲಿ
ನಮ್ಮನ್ನೂ ವಿಹಾರ ಮಾಡಿಸಿ ಬಿಟ್ಟಿದ್ದೀರಿ...
ನಮಗೂ ಅಲ್ಲಿಗೆ ಹೋಗಬೆಕೆನ್ನುವ...
ಒಂದು ಸಣ್ಣ ಆಸೆಯ ಕಿಚ್ಚನ್ನೂ ಹೊತ್ತಿಸಿ ಬಿಟ್ಟಿದ್ದೀರಿ..
ನಿಮ್ಮ ಅದ್ಭುತ ಫೋಟೊಗ್ರಫಿಗೆ...
ನನ್ನದೊಂದು ಸಲಾಮ್....!!
ಮಲ್ಲಿಕಾರ್ಜುನ್ ಅವರೆ,
ನನಗೆ ಆಳದ ನೀರು ಅಂದ್ರೆ ಸ್ವಲ್ಪ ಭಯ. ಆದರೂ ದೋಣಿಯಲ್ಲಿ ಹೋಗಕ್ಕೆ ಇಷ್ಟ. ಸಮಯ ಮಾಡ್ಕೊಂಡು ಒಮ್ಮೆ ಕೇರಳಕ್ಕೆ ಹೋಗ್ಬೇಕು ಅಂತ ಆಸೆ ಆಗ್ತಾಯಿದೆ ನಿಮ್ಮ ಚಿತ್ರಗಳನ್ನ ನೋಡಿ. ದನ್ಯವಾದಗಳು.
ಮಲ್ಲಿಕಾರ್ಜುನ್ ನೆನ್ನೆಯೇ ಫೋಟೋಗಳನ್ನು ನೋಡಿದ್ದೆ. ವೈವಿಧ್ಯಮಯ ದೋಣಿಗಳನ್ನು ಒಂದೆಡೆ ನೋಡಲು ಖುಷಿಯಾಯಿತು. ಬಸ್ ಸ್ಟಾಪ್ ಇದ್ದ ಹಾಗೆ ಬೋಟ್ ಸ್ಟಾಪ್ ಎನ್ನುವ ಕಾನ್ಸೆಪ್ಟ್ ಇಷ್ಟವಾಯಿತು. ನಿಮ್ಮ ಹುಡುಕಾಟ ಹೀಗೇ ಮುಂದುವರೆಯಿಲಿ.
ಮಲ್ಲಿಕಾರ್ಜುನ್ ಸಾರ್..
ನಿಮ್ಮ ಚಿತ್ರಗಳು ತುಂಬಾ ಚೆನ್ನಾಗಿದೆ . ದೋಣಿಯಲ್ಲಿ ಕುಳಿತು ಸುತ್ತು ಹಾಕಿದಷ್ಟು ಖುಷಿಯಾಯಿತು .
ಮಲ್ಲಿಕಾರ್ಜುನ್ ಸರ್,
ಕೇರಳದ ಸಹಜ ಸೌಂದರ್ಯವನ್ನು ತುಂಬಾ ಸೊಗಸಾಗಿ ಸೆರೆಹಿಡಿದಿದ್ದೀರಿ. ನನಗೂ ಹೋಗಬೇಕೆನಿಸುತ್ತಿದೆ....
ನೀವು ಹೇಳಿದ ಹಾಗೆ ಕೇರಳದ ಸೆಳೆತವೆ ಹಾಗೆ...ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ...ನನ್ನ ಮೆಚ್ಚಿನ ಪ್ರವಾಸಿ ತಾಣ ಕೇರಳ.
ಸುಂದರ ದೋಣಿಯ ಚಿತ್ರಗಳು, ಅಡಿಬರಹಕ್ಕೆ ಧನ್ಯವಾದಗಳು..
ಮಲ್ಲಿಕಾರ್ಜುನ ಸರ್, ದೋಣಿಗಳು ಸೂಪರ್ ಆಗಿವೆ ಮತ್ತು ಅಲ್ಲಿರುವ ಜೀವಂತಿಕೆ ಇಷ್ಟವಾಯಿತು. ಕಷ್ಟಜೀವಿಗಳ ಜೀವನದ ಅವಿಭಾಜ್ಯ ಅಂಗವಾಗಿ ದೋಣಿಗಳು ಅವರ ಜೀವನದಲ್ಲಿ ಹಾಸುಹೊಕ್ಕಾಗಿರುವುದು ಅಚ್ಚರಿಯ ವಿಚಾರ.
ಶಿವು ಮತ್ತು ನಿಮ್ಮ ಮುಂದಿನ ಕೇರಳ ಭೇಟಿಗೆ ಶುಭ ಹಾರೈಕೆಗಳು.
ಸಸ್ನೇಹಗಳೊಂದಿಗೆ,
ಚಂದ್ರಶೇಖರ ಬಿ.ಎಚ್.
ನಿಮ್ಮ ಫೊಟೊಗಳು.....
ನಿವು ಕೊಟ್ಟ ತೆಲುಗು ಸಿನೆಮಾಗಳ ಹಾಗೆ...
ಸೂಪರ್....!!
congrats...!
ಮಲ್ಲಿ ಅವರೇ ನಿಜಕ್ಕೂ ಅತ್ಯುತ್ತಮ ಫೋಟೋಗಳು. ಎರಡು ವರ್ಷದ ಹಿಂದೆ ನಾನು ಮತ್ತು ನನ್ನ ಸ್ನೇಹಿತ ಮಹಾಬಲ
ಸೀತಾಳಭಾವಿ ಎಲ್ಲೆಲ್ಲ ಸುತ್ತಾಡಿ ಬಂದಿದ್ದೆವು. ಮತ್ತೆ ಅವೆಲ್ಲ ನೆನಪಾಯಿತು. ಧನ್ಯವಾದಗಳು....
ಮಲ್ಲಿಕಾರ್ಜುನ್ ಸರ್,
ನಿಮ್ಮ ಛಾಯಾಗ್ರಹಣದ ದೋಣಿ ಹಿಗೇ ಸಾಗಲಿ.
ನಿಮ್ಮ ರೇಡಿಯೊ ಸಂದರ್ಶನ ಕೂಡಾ ತುಂಬಾ ಚನ್ನಾಗಿದೆ.
ಮಲ್ಲಿಕಾರ್ಜುನ್ ನಮ್ಮ agriculture research academy (police academy ತರಹದ್ದು) ತರಬೇತಿ ಸಮಯದಲ್ಲಿ ಎರಡು ತಿಂಗಳು ಕೇರಳ (ಕೊಚ್ಚಿನ್) ನಲ್ಲಿರುವ ಅವ್ಕಾಶ ಸಿಕ್ತು...ಅಲ್ಲಿನ ಪ್ರಕೃತಿ ಸೌಂದರ್ಯ, ಹಿನ್ನೀರಿನ ಜಲವಾಹಿನಿಗಳು, ಮೀನು ಹಿಡಿಯಲು ತೀರದಗುಂಟಾ ಹರಡಿರುವ ಚೈನೀಸ್ ಡಿಪ್ ನೆಟ್ ಗಳು, ನನ್ನ ಮನದಾಳದಲ್ಲಿದ್ದುದನ್ನು ಮತ್ತೆ ಹಸಿರಾಗಿಸಿದ್ದಿರಿ ನಿಮ್ಮ ರಮ್ಯ ಚಿತ್ರ ಮತ್ತು ಶೀರ್ಷಿಕೆ ಮಾಲೆಯೊಂದಿಗೆ... ಬಹುಶಃ ದೋಣಿ ಸಾಗಲಿ..ಅಂತ ಲೇಖನದ ಶೀರ್ಷಿಕೆ ಕಾರಣ ಕೇರಳಕ್ಕೆ ಅನ್ವರ್ಥ ಚಿತ್ರಣ ಎನಿಸುವ ಡಿಪ್ ನೆಟ್..ಮತ್ತು ಅದನ್ನು ನೀರಿಗಿಳಿಸಲು ಮತ್ತೆ ಮೇಲೆತ್ತಲು (ನಮ್ಮ ಕಡೆಯ ಏತದ ಮಾದರಿಯಲ್ಲಿ) ಒಬ್ಬ ಮನುಷ್ಯ ಅದರ ಮೇಲೆ ನಡೆದಾಡುವುದು...ಇತ್ಯಾದಿಗಳ ಚಿತ್ರಣ ಹಾಕಿಲ್ಲ ಎನಿಸುತ್ತೆ.
ನಿಮ್ಮ ಮತ್ತು ಶಿವು ಆಗಸ್ಟ್ ನ ಪ್ರವಾಸ ಇಂತಹ ವಿಷಯ-ಚಿತ್ರಗಳ ಕಣ್ಣಹಬ್ಬದ ನಿರೀಕ್ಷೆ ನಮಗೆ.
ಮಲ್ಲಿಕಾರ್ಜುನ್
ಚಿತ್ರಸಹಿತ ಲೇಖನ ತುಂಬ ಚೆನ್ನಾಗಿ ಇದೆ....ತುಂಬ ಇಷ್ಟ ಆಯಿತು....ಪ್ರತಿಯೊಂದು ಚಿತ್ರಗಳಿಗೂ ನೀವು ಕೊಟ್ಟಿರುವ ಕಾಪ್ತಿಒಂಸ್, ಹಾಗೆ ಒಂದೇ ಫ್ರಮೆನಿನಲ್ಲಿ ಬೇಕಾಗಿರುವ ಚಿತ್ರಗಳನ್ನು ಜೋಡಿಸಿರುವ ಪರಿ,, ಅದರ ಹಿಂದೆ ಇರುವ ನಿಮ್ಮ ಶ್ರದ್ದೆ....ತಾಳ್ಮೆ....ಎಲ್ಲಾನು ತುಂಬ ಅಚ್ಚುಕಟ್ಟಾಗಿ ಬಂದಿದೆ.....
ಕ್ಷಮಿಸಿ,, ನಿಮ್ಮ ಬ್ಲಾಗಿಗೆ ತಡವಾಗಿ ಬಂದೆ......ಅದಕ್ಕೆ ಕಾರಣನನು ಇದೆ....ನಿಮ್ಮ ಬ್ಲಾಗ್ ಹೊಸ ಇಂಟರ್ನೆಟ್ explorer ೮.೦ ನಲ್ಲಿ ಓಪನ್ ಆಗುವದಿಲ್ಲ, ನನ್ನ ಲ್ಯಾಪ್ಟಾಪ್ ನಲ್ಲಿ ಹೊಸ ವರ್ಶನ್ ಇರೋದು,,, ನಿಮ್ಮ ಮುಖಪುಟದ ಇಮೇಜ್ ಫೈಲೇ ಪ್ರಾಬ್ಲಮ್ ಇದೆ ಅಂತ ಕಾಣಿಸುತ್ತೆ.. ಯಾಕೆ ನಿಮ್ಮ ಬ್ಲಾಗ್ನ್ ಹೊಸ IE ನಲ್ಲಿ ಓಪನ್ ಆಗ್ತಾ ಇಲ್ಲ ಅನ್ನೋದನ್ನ ಹುಡುಕ್ತಾ ಇದ್ದೇನೆ,,,
ಎ೦ದಿನ೦ತೆ ನಿಮ್ಮ ಚಿತ್ರಗಳೇ ಮಾತನಾಡುತ್ತವೆ ಮಲ್ಲಿಕಾರ್ಜುನ್ ಅವರೇ. ಇಲ್ಲಿ೦ದಲೇ ಒ೦ದು ದೋಣಿ ವಿಹಾರ ಮಾಡಿಸಿದ್ದಕ್ಕಾಗಿ ಧನ್ಯವಾದಗಳು.
Post a Comment