Wednesday, July 1, 2009

ಭೂಮಿಯೊಳಗೊಂದು ಪಯಣ

ಗುಹೆಯ ಪ್ರವೇಶಕ್ಕೆ ಮುನ್ನ ಮಂದಸ್ಮಿತ ಬುದ್ಧ.
ಕಣ್ಣು ಮಬ್ಬುಕತ್ತಲಿಗೆ ಹೊಂದಿಕೊಳ್ಳುತ್ತಿತ್ತು. ಅಲ್ಲಲ್ಲಿ ಹಳದಿ ದೀಪಗಳು. ನಾವಿದ್ದದ್ದು ನೆಲದೊಳಗೆ ೮೦ ಅಡಿ ಆಳದ ಗುಹೆಯಲ್ಲಿ. ಇದ್ದಕ್ಕಿದ್ದಂತೆ ಆ ದೀಪಗಳೂ ಮಾಯ. ಗವ್ ಎನ್ನುವ ಕಗ್ಗತ್ತಲು. ನಮ್ಮ ಕಾಲು ನೆಲಕ್ಕಂಟಿಬಿಟ್ಟಿತ್ತು. ಸ್ವರ ಗಂಟಲೊಳಗೇ ಪರದಾಡುತ್ತಿತ್ತು. ಸಾವರಿಸಿಕೊಂಡ ಗೈಡ್ ತನ್ನ ಟಾರ್ಚ್ ಹೊತ್ತಿಸಿದ. ಆ ಕಪ್ಪು ಕತ್ತಲಿಗೆ ಇದು ಯಾವ ಲೆಕ್ಕ. "ಜನರೇಟರ್ ಆನ್ ಮಾಡುತ್ತಾರೆ ಸ್ವಲ್ಪ ಹೊತ್ತು ಇರಿ" ಅಂದ. ನಿಮಗೆ ಜೂಲ್ಸ್ ವರ್ನ್ ನ "ಎ ಜರ್ನಿ ಟು ದ ಸೆಂಟರ್ ಆಫ್ ದ ಅರ್ಥ್" ಕಾದಂಬರಿ ನೆನಪಾಯಿತೇ?
ಭೂಗರ್ಭದಲ್ಲಿ ಒಂದೂವರೆ ಕಿಲೋಮೀಟರು ಉದ್ದ ೮೦ ರಿಂದ ೧೦೦ ಅಡಿ ಆಳದಲ್ಲಿ ಓಡಾಡುವುದು ಕಾಲ್ಪನಿಕ ಕಾದಂಬರಿಯ ಘಟನಾವಳಿಗಳಲ್ಲ. ಸತ್ಯಸಂಗತಿ. ವಿಶಾಲವಾದ ಭೂಮಿ ನಮ್ಮ ತಲೆ ಮೇಲಿನ ಶಿಲಾ ಛಾವಣಿಯ ಮೇಲೆ ಇರುವ ಸಂಗತಿಯೇ ರೋಚಕ.
ಈ ಅದ್ಭುತ ಅನುಭವಕ್ಕಾಗಿ ಕರ್ನೂಲ್ ಜಿಲ್ಲೆಯಲ್ಲಿರುವ ಬೇಲಂ ಗುಹೆಯೊಳಗೆ ಪ್ರವೇಶ ಮಾಡೋಣ ಬನ್ನಿ.
ಬೇಲಂ ಗುಹೆಯ ಪ್ರವೇಶದ್ವಾರ.
ಗುಹೆಯೆಂದೊಡನೆ ಯಾವುದೋ ಬೆಟ್ಟ ಗುಡ್ಡದೊಳಗೊ ಇರುವುದಲ್ಲ. ಥೇಟ್ ಬಾವಿಯೊಳಕ್ಕಿಳಿದಂತೆ ಭೂಗರ್ಭದೊಳಕ್ಕೆ ಇಳಿಯುವುದು. ಜೂಲ್ಸ್ ವರ್ನ್ ನ ಕಾದಂಬರಿಯಲ್ಲಿ ಪ್ರೊ.ಹಾರ್ಡ್ ವಿಗ್, ಹ್ಯಾರಿ ಮತ್ತು ಹ್ಯಾನ್, ಸ್ನೇಫೆಲ್ಸ್ ಪರ್ವತದಲ್ಲಿನ ಜ್ವಾಲಾಮುಖಿಯ ಬಾಯೊಳಗಿಳಿದು ಭೂಗರ್ಭದೊಳಗೆ ಪ್ರಯಾಣಿಸುತ್ತಾರೆ.
ಇಲ್ಲಿ ನಾವು ಪ್ರವೇಶಿಸುವ ಬಾಯಿಯ ಸುತ್ತ ಕಡಪಾ ಕಲ್ಲನ್ನು ಅಲಂಕಾರಿಕವಾಗಿ ಜೋಡಿಸಿದ್ದಾರೆ. ಪ್ರವೇಶಿಸುತ್ತಿದ್ದಂತೆಯೇ ಮೊದಲು ಸಿಗುವ ವಿಶಾಲ ಆವರಣಕ್ಕೆ ೧೯೮೨ ರಿಂದ ೮೪ ರವರೆಗೂ ಈ ಗುಹೆಗಳ ಆಳ ಉದ್ದಗಳ ದಾಖಲೆ ಮಾಡಿದ ಡೇನಿಯಲ್ ಗೇಬರ್ ನ ಹೆಸರಿಟ್ಟಿದ್ದಾರೆ. ಇಲ್ಲಿಂದ ಮುಂದೆ ನಮ್ಮ ಕಣ್ಣು ಮತ್ತು ಮನಸ್ಸು ಅಂಧಕಾರಕ್ಕೆ ಹೊಂದಿಕೊಳ್ಳಬೇಕು. ಸಣ್ಣ, ಎತ್ತರದ, ತಗ್ಗು, ಆಳ, ಅಗಲ ಹೀಗೆ ನಾನಾ ರೀತಿಯಲ್ಲಿ ಊಹೆಗೆ ನಿಲುಕದಂತೆ ಗುಹೆ ನಮ್ಮ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತದೆ.

ಚಿನ್ನದ ಬಣ್ಣದ ಹಸುವಿನ ಕೆಚ್ಚಲು.
ಅಲ್ಲಲ್ಲಿ ದೀಪಗಳು, ಗಾಳಿಯಾಡಲು ಕೊಳವೆಗಳನ್ನು ಜೋಡಿಸಿಟ್ಟಿದ್ದಾರೆ. ಕೃತಕ ನೀರು ಚಿಲುಮೆಯನ್ನೂ ಮಾಡಿದ್ದಾರೆ. ನೆಲದಲ್ಲಿ ಅಲ್ಲಲ್ಲೇ ಜಿನುಗುವ ನೀರಿನಿಂದಾಗಿ ಕೆಸರು ಕಾಲಿಗೆಲ್ಲಾ ಮೆತ್ತಿಕೊಂಡರೂ ನಿಗೂಢ ಲೋಕದಲ್ಲಿ ವಿಹರಿಸುತ್ತಿರುವ ನಮಗೆ ಅದು ಗೌಣವಾಗುತ್ತದೆ.

ಯಾವ ಶಿಲ್ಪಿ ಕಡೆದ ದ್ವಾರವೋ!
ಸುತ್ತಮುತ್ತ ಕಣ್ಣಾಡಿಸುತ್ತಾ ಹೋದಂತೆ ನಮ್ಮ ಮನಸ್ಸಿನ ಊಹಾ ಸಾಮರ್ಥ್ಯಕ್ಕೆ ಅನುಗುಣವಾಗಿ ನಾನಾ ಆಕಾರಗಳು, ರೂಪಗಳು ಕಾಣುತ್ತವೆ. ಗುಹೆಯ ಮೇಲ್ಭಾಗದಲ್ಲಿ ಜಿನುಗುವ ನೀರಿನಿಂದಾದ ಸುಣ್ಣದಂಶದ ಸಂಗ್ರಹ ಮತ್ತು ಗುಹೆಯ ನೆಲದ ಮೇಲೆ ಕೂಡ ಬೀಳುವ ಸುಣ್ಣದ ಅಂಶಗಳಿಂದ ಈ ಆಕೃತಿಗಳು ಪಡಿಮೂಡಿವೆ. ಹಾವು, ಹಲ್ಲಿ, ಹಸುವಿನ ಕೆಚ್ಚಲು, ಶಿವನ ಜಟೆ, ಆಲದ ಬಿಳಲುಗಳು, ಆತ್ಮಲಿಂಗ, ಶಿಲಾಯುಗದ ಚಿತ್ರಗಳು, ಉಗುರಿನಿಂದ ಪರಚಿದಂತೆ ಇತ್ಯಾದಿ. ಮರದ ತೊಗಟೆ, ತರಕಾರಿ, ಎಲೆ ಹೀಗೆ ಎಲ್ಲೆಲ್ಲೂ ಗಣೇಶನನ್ನು ಕಾಣುವ ನಮಗೆ ಇಲ್ಲಿ ಹಲವು ರೀತಿಯ ಗಣೇಶನನ್ನು ಕಾಣಬಹುದು. ನಮ್ಮ ಊಹಾ ಸಾಮರ್ಥ್ಯಕ್ಕೆ ಸವಾಲೆಸೆಯುವ ಆಕಾರಗಳು ಮತ್ತು ಗುಹಾವಿನ್ಯಾಸ ನಮ್ಮನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತವೆ.

ಹೆಜ್ಜೆ ಹೆಜ್ಜೆಗೂ ಅನೂಹ್ಯ ರೂಪ ಪಡೆದುಕೊಳ್ಳುವ ದಾರಿ.
ಇಲ್ಲಿನ ಆಕಾರ ವಿನ್ಯಾಸಗಳನ್ನು ನೋಡಿ ಹಲವು ಹೆಸರುಗಳಿಂದ ಕೆಲ ಪ್ರದೇಶಗಳನ್ನು ಗುರುತಿಸಿದ್ದಾರೆ. ಕೋಟಿಲಿಂಗ, ಮಂಟಪ, ಸನ್ಯಾಸಿಯ ಹಾಸಿಗೆ, ಸಿಂಹದ್ವಾರ ಇತ್ಯಾದಿ. ಪಾತಾಳಗಂಗೆ ಎಂಬಲ್ಲಿ ನೀರು ಲಿಂಗಾಕೃತಿಯ ಕಲ್ಲಿನ ಮೇಲಿಂದ ಬೀಳುತ್ತದೆ. ಈ ಪಾತಾಳಗಂಗೆಗೆ ತುಂಬಾ ಕಿರಿದಾದ ಸ್ಥಳದ ಮೂಲಕ ಇಳಿದು ಹೋಗಬೇಕು. ಸ್ಥೂಲವಾಗಿರುವವರು ಹಿಡಿಸುವುದಿಲ್ಲ! ತಮಾಷೆಯೆಂದರೆ ಅಲ್ಲಿ ಸಿಟ್ಟಾಗಿದ್ದ ಸ್ಥೂಲವ್ಯಕ್ತಿಯೊಬ್ಬರು ಈ ಸ್ಥಳವನ್ನು ಅಗಲ ಮಾಡಬೇಕೆಂದು ಆಗ್ರಹಿಸುತ್ತಿದ್ದರು. ತನ್ನ ದೇಹ ಪ್ರಕೃತಿಯನ್ನು ಕಿರಿದಾಗಿಸದೇ ಪ್ರಕೃತಿಯನ್ನೇ ತನಗಾಗಿ ವಿಕೃತಿಗೊಳಿಸಬೇಕೆನ್ನುವ ಇವರ ವಾದಕ್ಕೆ ಏನೆನ್ನುವುದು?

ಈ ಚಿತ್ರವಿಚಿತ್ರವಾದ ಗುಹಾರಚನೆಗೆ ಚಿತ್ರಾವತಿ ನದಿಯೇ ಕಾರಣವೆನ್ನುತ್ತಾರೆ. ಆದರೆ ಎಷ್ಟು ವರ್ಷಗಳ ಹಿಂದೆ ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. ಬೌದ್ಧ ಸನ್ಯಾಸಿಗಳು ಇಲ್ಲಿ ಧ್ಯಾನ ಮಾಡಿದ್ದರಂತೆ. ಈಗಂತೂ ಆಂಧ್ರದ ಪ್ರವಾಸೋದ್ಯಮ ಇಲಾಖೆ ಚೆನ್ನಾಗಿ ಅಭಿವೃದ್ಧಿಪಡಿಸಿದೆ. ಶಬ್ದ ಮಾಡದೆ ಮೌನದಿಂದ ಗುಹೆಯಲ್ಲಿ ಸುತ್ತಾಡಿದರೆ ಅದರ ಅನುಭೂತಿಯೇ ಬೇರೆ.

ಪಾತಾಳಗಂಗೆ.

ಛಾವಣಿ ತುಂಬಾ ವಿವಿಧ ಆಕೃತಿಗಳು.

ದುರ್ಗಮ ದಾರಿ.

ನಾವಿರುವುದು ಭೂಮಿಯೊಳಗೆ, ನಮ್ಮ ಮೇಲೆ ವಿಸ್ತಾರವಾದ ಭೂಮಿ ಹರಡಿದೆ ಎಂಬ ಅರಿವೇ ರೋಮಾಂಚನಗೊಳಿಸುವಂತದ್ದು. ಅಕಸ್ಮಾತ್ ಕುಸಿದರೆ ಎಂಬ ಊಹೆ ಮಾತ್ರ ಭಾಯಾನಕ!
ದಾರಿ - ದೂರ : ಬೆಂಗಳೂರಿನಿಂದ ಬೇಲಂ ಗುಹೆಗಳಿಗೆ ೨೮೦ ಕಿ.ಮೀ. ದೂರ. ಅನಂತಪುರಕ್ಕೆ ಹೋಗಿ ಅಲ್ಲಿಂದ ತಾಡಪತ್ರಿ ಮುಖಾಂತರ ಹೋಗಬಹುದು.

54 comments:

Ittigecement said...

ಹುಡುಕಾಟದವರೆ....

ಅದ್ಭುತ...!

ಭೂಮಿಯಿಂದ ೮೦ ಅಡಿ ಕೆಳಗೆ ನಾವಿದ್ದೇವೆ ಎನ್ನುವ ಕಲ್ಪನೆ...
ದುರ್ಗಮ ದಾರಿ...

ಸೊಗಸಾದ ಶೈಲಿಯಲ್ಲಿ, ನಮ್ಮನ್ನು ಆ ಲೋಕಕ್ಕೆ ಕರೆದೊಯ್ದು ಬಿಡುತ್ತೀರಿ...

ಸಂಗಡ ಸುಂದರವಾದ ಫೋಟೋಗಳು...
ವಾಹ್...!

ನಮ್ಮನ್ನು ಸ್ವಲ್ಪ ಹೊತ್ತು ಬೇರೆ ಲೋಕಕ್ಕೆ ಕರೆದೊಯ್ದ ನಿಮಗೆ

ಅಭಿನಂದನೆಗಳು....

ಇನ್ನೊಂದು ಮಾತು....

ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿದೆ..
ಸ್ವಂತಿಕೆ ಇದೆ...
ನೀವು ಹೇಳುವ ರೀತಿ ಚೆನ್ನಾಗಿದೆ...
ಇಷ್ಟವಾಗಿಬಿಡುತ್ತದೆ....

ನಮ್ಮನೆ.. SWEET HOME..... said...

ಒಮ್ಮೆ ನೋಡಿ ಬರುವ ಆಸೆಯಾಗುತ್ತಿದೆ...

ನಿಮ್ಮ ಫೋಟೊಗ್ರಪಿ ತುಂಬ ಸುಂದರವಾಗಿದೆ...

It is great...!

Srinidhi said...

sooper! naanoo ond sala nodabeku!!

sunaath said...

ಮಲ್ಲಿಕಾರ್ಜುನ,
ಈ ಬೆರಗುಗೊಳಿಸುವ ಗುಹೆಯನ್ನು ನಮಗೆ (ಚಿತ್ರಗಳ ಮೂಲಕ) ತೋರಿಸಿದ್ದಕ್ಕಾಗಿ ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.

shivu.k said...

ಮಲ್ಲಿಕಾರ್ಜುನ್,

ನಿಮ್ಮ ಜೊತೆ ನಾನು ಇದ್ದೆನಲ್ಲ. ಬೆಲ್ಲಂ ಗುಹೆಗಳ ಒಳಗೆ ಹೋದ ತಕ್ಷಣ ಆಗುವ ಅನುಭವವನ್ನಂತೂ ವರ್ಣಿಸಲು ಆಗದು.

ನಮ್ಮ ಗೈಡ್ ಒಮ್ಮೆ ಅಲ್ಲೊಂದು ಇನ್ನೂ ಸಂಶೋಧನೆಯಾಗದ ದಾರಿ ತೋರಿಸಿದಾಗ ನನಗೆ ಒಂದಷ್ಟು ದೂರ ಹೋದರೇ ಏನಿರಬಹುದು ಅನ್ನಿಸುತ್ತು. ಸ್ವಲ್ಪ ದೂರ ಪ್ರಯತ್ನಿಸೋಣವೇ ಅಂದಿದ್ದಕ್ಕೆ ಬೇಡ ಸಾರ್...ಅಲ್ಲಿ ಗಾಳಿ ಬೆಳಕು ಇಲ್ಲ. ಒದ್ದೇ ಮಣ್ಣು, ಜಾರುವಿಕೆ, ಅರಿವಿಲ್ಲದ ತಿರುವುಗಳು, ಆಷ್ಟೇ ಅಲ್ಲದೇ ಹಾವುಗಳು, ಜೇಡಗಳು...ಅಲ್ಲಿಗಳು, ಆ ಕತ್ತಲ ಲೋಕ... ಅದೆಲ್ಲಾ ನಮಗಲ್ಲ ಬಿಡಿ ಸರ್, ಬೇರೆ ಯಾರಾದರೂ ವಿದೇಶಿಯರು ಬಂದು ಅದನ್ನು ಶೋಧಿಸುತ್ತಾರೆ" ಅಂದಾಗ ನನಗೆ ಮನೆ,ಕೆಲಸ, ಹೆಂಡತಿ ಎಲ್ಲವು ನೆನಪಿಗೆ ಬಂದು ಹೌದಲ್ವಾ ಅನ್ನಿಸಿತ್ತು.
ಚಿತ್ರಲೇಖನ ಸೊಗಸಾಗಿದೆ...

ನಂತರ ನೋಡಿದ ತಾಡಪತ್ರಿ ಊರಿನ ದೇವಾಲಯದ ವಿಶೇಷದ ಬಗ್ಗೆ ಬರಿಯಿರಿ...

ಕ್ಷಣ... ಚಿಂತನೆ... said...

ಸರ್‍, ಗುಹೆ ಮತ್ತು ಅಲ್ಲಿರುವ ಅದ್ಭುತ ಸೌಂದರ್ಯವನ್ನು ಫೋಟೋಗಳ ಮೂಲಕ ಹಾಗೂ ನಿಮಗಾದ ಅನುಭವಗಳನ್ನು ಸರಳವಾಗಿ ವಿವರಿಸಿದ್ದೀರಿ. ಫೋಟೋಗಳಂತೂ ಸೂಪರ್‌... ಇದು ನಿಜಕ್ಕೂ ನೆನಪಿಸಿಕೊಂಡರೇ ರೋಮಾಂಚನಗೊಳಿಸುತ್ತದೆ.

ಇಂತಹದೇ ಅನುಭವವನ್ನು ನನ್ನ ಸಹೋದ್ಯೋಗಿಗಳು ಮಂಗಳೂರು ಹತ್ತಿರದ ನೆಲ್ಲಿತೀರ್ಥಕ್ಕೆ ಹೋಗಿದ್ದಾಗ ಆಗಿದ್ದ ಅನುಭವವನ್ನು ನೆನಪಿಸಿತು (ಆಗ ಕಾರಣಾಂತರಗಳಿಂದ ನಾನು ಈ ಒಂದು ಪ್ರವಾಸ ತಪ್ಪಿಸಿಕೊಂಡೆ). ಇದು ನೇರದಾರಿಯಾದರೆ, ಈ ಬೇಲಂ ಭೂಗರ್ಭದೊಳಕ್ಕೆ ಇಳಿಯಬೇಕು.

ವಿಶ್ವಾಸದೊಂದಿಗೆ,

ಚಂದ್ರಶೇಖರ ಬಿ.ಎಚ್.

AntharangadaMaathugalu said...

ತುಂಬಾ ಚೆನ್ನಾಗಿದೆ ಸಾರ್...
ಚಿತ್ರಗಳೂ ಮತ್ತು ವಿವರಣೆ, ಎರಡೂ. ನೋಡಿ, ನನಗೂ ಒಮ್ಮೆ ನೋಡಬೇಕೆಂಬ ಆಸೆಯಂತೂ ಖಂಡಿತಾ ಆಯಿತು.

ಶ್ಯಾಮಲ

ರೂpaश्री said...

ಮಲ್ಲಿಕಾರ್ಜುನ್ ಅವ್ರೆ,
ಗುಹೆಗಳ ಲೋಕ ಅದ್ಭುತ!! ಅದರಲ್ಲೂ ನಿಮ್ಮ ಕ್ಯಾಮೆರಾ ಕಣ್ಣಿನಿಂದ ನೋಡೋದು, ಜೊತೆಗೆ ನಿಮ್ಮ ಸರಳ ಸುಂದರ ಬರವಣಿಗೆ ಒಂದು ಹೊಸ ಲೋಕವನ್ನೇ ನೋಡಿದಂತಾಯಿತು.
ನಾನಿಲ್ಲಿ ಬಂದಮೇಲೆ ಇಂಥ ಕೆಲವು ಗುಹೆಗಳನ್ನು ನೋಡಿದ್ದೇನೆ. ಟೆನೆಸ್ಸಿಯಲ್ಲಿರೋ ರೂಬಿ ಫಾಲ್ಸ್ ಭೂಮಿಯಿಂದ ೧೫೦ ಅಡಿ ಕೆಳಗಿದೆ.
ಈ ಗುಹೆಗಳಲ್ಲಿ ಮೂಡುವ ಸುಣ್ಣದ(calcium carbonate) ಆಕೃತಿಗಳನ್ನ stalactites, stalagmites ಅಂತ ಕರಿತಾರೆ. ಒಂದು ಆಕೃತಿ ಪೂರ್ಣವಾಗಿ ಆಗಲು ಹಲವು ಸಾವಿರ ವರ್ಷಗಳೇ ಬೇಕಂತೆ!!

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ನೀವು ಮಲೇಶಿಯಾದಲ್ಲಿ ಇಂತಹುದೇ ಗುಹೆಯೊಂದನ್ನು ನೋಡಿದ್ದಾಗಿ ಹೇಳಿದ್ದಿರಿ. ದಯವಿಟ್ಟು ಅದರ ಬಗ್ಗೆ ಬರೆಯಿರಿ.
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಆಶಾ ಮೇಡಂ,
ಖಂಡಿತ ಹೋಗಿ ಬನ್ನಿ. ನಿಮಗೆಲ್ಲಾ ಇಷ್ಟವಾಗುತ್ತೆ. ಬೇಸಿಗೆಯಲ್ಲಿ ಅಲ್ಲಿನ ಬಿಸಿ ನಮಗೆ ತಡೆಯಲು ಅಸಾಧ್ಯ. ಹಾಗಾಗಿ ಅಕ್ಟೋಬರ್ ರಜೆಯಲ್ಲಿ ಹೋಗಬಹುದು.
ಇಲ್ಲಿ ಫೋಟೋ ತೆಗೆಯುವಾಗ ಫ್ಲಾಷ್ ಬಳಸಿಲ್ಲ.
ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಶ್ರೀನಿಧಿಯವರೆ,
ಹೋಗಿ ಬನ್ನಿ. ಅಂತಹ ದೂರವೇನಿಲ್ಲ. You'll like it.

ಮಲ್ಲಿಕಾರ್ಜುನ.ಡಿ.ಜಿ. said...

ಸುನಾತ್ ಸರ್,
ಎಲ್ಲಾ ಫೋಟೋಗಳನ್ನಿಲ್ಲಿ ಹಾಕಲಾಗಿಲ್ಲ. ಆದರೂ ಮೆಚ್ಚಿದ್ದೀರಿ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಜೊತೆಯಲ್ಲಿ ಸವಿದ ಅಲ್ಲಿನ ಅನುಭವಗಳನ್ನು ಪೂರ್ತಿಯಾಗಿ ಬರೆಯಲಾಗಿಲ್ಲ. ನೀವು ಕೊಂಚ fillup ಮಾಡಿದ್ದೀರಿ. ತಾಡಪತ್ರಿ ದೇವಾಲಯದ ಬಗ್ಗೆ ನೀವೇ ಬರೆದರೆ ಹೇಗೆ?

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಶೇಖರ್ ಸರ್,
ನಿಜಕ್ಕೂ ಅದ್ಭುತವಾದಂತಹ ಸ್ಥಳ ಈ ಗುಹೆ. ನೀವು ನೆಲ್ಲಿತೀರ್ಥದಲ್ಲೂ ಅಂತಹ ಸ್ಥಳದ ಬಗ್ಗೆ ಹೇಳಿದ್ದೀರಿ. ಆಂದ್ರದ ಸರ್ಕಾರ ಮಾಡಿದಂತೆ ನಮ್ಮಲ್ಲೂ ಪ್ರವಾಸಿಗರಿಗೆ ಉತ್ತಮ ಸೌಕರ್ಯ ಕೊಟ್ಟರೆ ಅದೂ ಪ್ರಸಿದ್ಧಿ ಪಡೆಯಬಹುದಲ್ಲವೆ?

ಮಲ್ಲಿಕಾರ್ಜುನ.ಡಿ.ಜಿ. said...

ಶ್ಯಾಮಲ ಅವರೆ,
ಖಂಡಿತ ಹೋಗಿಬನ್ನಿ. ಕುಟುಂಬ ಸಮೇತ ಹೋಗಿ. ಸೊಗಸಾಗಿರುತ್ತೆ ಪ್ರವಾಸ.ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಮೇಡಂ,
೮೦ ಅಡಿಯಲ್ಲೇ ರೋಮಾಂಚನಗೊಂಡವನಿಗೆ ಇನ್ನೂ ಆಳದ ಗುಹೆಯ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು. ನಿಮ್ಮ ಬ್ಲಾಗಿನಲ್ಲಿ ನೋಡಿ ಹೊಸಹೊಳಲು ದೇವಾಲಯವನ್ನು ಚಿತ್ರಿಸುವ ಬಯಕೆಯಿದೆ.

Guruprasad said...

ಮಲ್ಲಿಕಾರ್ಜುನ್
ನಿಮ್ಮ ಚಿತ್ರ ಲೇಖನ ನಿಜಕ್ಕೂ ಅದ್ಬುತ ವಾಗಿ ಇದೆ.....gr8 .... ನಿಮ್ಮ ಫೋಟೋಗಳನ್ನು ನೋಡಿದ ಮೇಲೆ ಅಲ್ಲಿಗೆ ಖಂಡಿತ ಹೋಗುವ ಅಸೆ ಹೆಚ್ಚಾಗಿದೆ.....ನನಗು ಇಂಥದರಲ್ಲಿ ತುಂಬ ಆಸಕ್ತಿ.... ನೆಕ್ಷ್ತ ಟೈಮ್ ಅದಸ್ತು ಬೇಗನೆ ಇಲ್ಲಿಗೆ ಹೋಗಿ ಬರುವೆ....
ಇದೆ ರೀತಿಯಾ ಡಾಕ್ಯುಮೆಂಟರಿ ನೋಡ್ತಾ ಇದ್ದೆ recent ಆಗಿ....ಬರಿ caves , ಯಾರೋ scientist ಇಂಥಹ caves ನ ಒಳಗಡೆ ಸಿಗುವ ಮಣ್ಣಿಗೆ , ಖಾಯಿಲೆ ವಾಸಿ ಮಾಡುವ ಗುಣ ಇದೆ ಅಂತ ರಿಸರ್ಚ್ ಮಾಡ್ತಾ ಇದ್ದಾರೆ... ಮತ್ತೆ ಅದು ನಿಜ ಕೂಡ ಅಂತೆ... ಅಲ್ಲಿ ಇರುವ ಗಾಳಿ,, ಬಂಡೆಗಳ ಮಧ್ಯದಿಂದ ಫಿಲ್ಟರ್ ಆಗಿ ಬರುವ ಸ್ವಚ್ಛ ನೀರು... ಹಾಗೆ ನೆರಳು ಮಿಶ್ರಿತ ಬೆಳಕು.. ಹೀಗೆ ಇವುಗಳಲ್ಲಿ ಒಂದು ತರಹದ ಬ್ಯಾಕ್ಟೀರಿಯ ಮಣ್ಣಿನಲ್ಲಿ ಇರುತ್ತಂತೆ ಅದರಿಂದ ಮನುಷ್ಯನ ಆರೋಗ್ಯಕ್ಕೆ ತುಂಬ ಉಪಕಾರಿ ಅನ್ನೋದನ್ನ ರಿಸರ್ಚ್ ಮಾಡ್ತಾ ಇದ್ದಾರೆ... ಇ documentarena ಎಲ್ಲೊ ಡೌನ್ಲೋಡ್ ಮಾಡಿದೆ... ಅವರು adventerus ಆಗಿ ಹೋಗುವ cave ನಿಜವಾಗ್ಲೂ amezing,,,
* ಎಲ್ಲೊ ದೊಡ್ಡ ಬೆಟ್ಟ ಗುಡ್ಡಗಳ ನಡುವಿನ ಕಣಿವೆಯಲ್ಲಿ ಸಿಗುವ ಗುಹೆ,
* ಮರುಭೂಮಿಯಂಥ ಜಾಗದಲ್ಲಿ ಇರುವ ಗುಹೆ,,
* ದೊಡ್ಡ ಕಲ್ಲಿನ ಬೆಟ್ಟದ ಮದ್ಯದಲ್ಲಿ ಇರುವ ಗುಹೆ..
*pond (ಒಂದು ಚಿಕ್ಕ ನೀರು ನಿಂತಿರುವ ಕೊಳ ) ದ ಒಳಗಡೆ ಇರುವ ಗುಹೆ.....
* Ice burgs ಮದ್ಯದಲ್ಲಿ ಇರುವ ಗುಹೆ...
ಹೀಗೆ ೨ hours ಡಾಕ್ಯುಮೆಂಟರಿ ನೋಡ್ತಾ ನಾನು ನಿಜವಾಗ್ಲೂ ಎಲ್ಲೊ ಕಳೆದು ಹೋಗಿ ಬಿಟ್ ಇದ್ದೆ. ನಿಜವಾಗ್ಲೂ ಪ್ರಕೃತಿ ಎಷ್ಟು ವಿಸ್ಮಯ ಅಲ್ವ..? ನಿಮ್ಮ ಈ ಲೇಖನ ನೋಡಿ ನನಗು ಇದರ ಬಗ್ಗೆ ಇನ್ನಸ್ಟು ತಿಳಿದಿಕೊಂಡು ನನಗೆ ಗೊತ್ತಿರುವುದನ್ನು ಹೇಳಬೇಕು ಅಂತ ಅನ್ನಿಸಿದೆ... ಅದಸ್ತು ಬೇಗನೆ ಚಿತ್ರಗಳ ಸಮೇತ ನನ್ನ ಬ್ಲಾಗಿನಲ್ಲಿ ಶೇರ್ ಮಡ್ತ್ಕೊತೇನೆ....
ಧನ್ಯವಾದಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಗುರುಅವರೆ,
ಬೇಲಂ ಗುಹೆಗಳನ್ನು ನೋಡಿ ಮತ್ತಷ್ಟು ಗುಹೆಗಳ ಬಗ್ಗೆ ತಿಳಿಸಿರುವಿರಿ. ನಿಮ್ಮ ಬ್ಲಾಗಲ್ಲಿ ಈ ರೀತಿಯ ಅನೇಕ ಕೌತುಕಗಳನ್ನು ನಮಗೆಲ್ಲಾ ತೋರಿಸುತ್ತಿರುತ್ತೀರಿ. ನೀವು ನೋಡಿದ ಡಾಕ್ಯುಮೆಂಟರಿ CD ಸಿಗುತ್ತಾ? ಇಲ್ಲದಿದ್ದರೆ ನಿಮ್ಮ ಬ್ಲಾಗಿನ ಮುಖಾಂತರವೇ ತಿಳಿಸಿ. ಏನೆಲ್ಲಾ ಹೊಸ ಸಂಶೋಧನೆಗಳಲ್ವಾ?

ರಾಜೀವ said...

ಮಲ್ಲಿಕಾರ್ಜುನರವರೆ,

ಭಯಂಕರವಾಗಿದೆ ಈ ಸ್ಥಳ. ಸಮಯ ಸಿಕ್ಕಿದಾಗ ಹೋಗಿಬರುವೆ. ಬೆಂಗಳೂರಿನಿಂದ ದ್ವಿಚಕ್ರವಾಹನದಲ್ಲಿ ಒಂದೇ ದಿನದಲ್ಲಿ ಹೂಗಿಬರಬಹುದಲ್ಲವೇ? ರಸ್ತೆಗಳು ಹೇಗಿದೆ?

ಮಾಹಿತಿಗಾಗಿ ಧನ್ಯವಾದಗಳು.

Unknown said...

ಮಲ್ಲಿಕಾರ್ಜುನ್
ಮತ್ತೆ ಬ್ಲಾಗ್ ಚಟುವಟಿಕೆಗೆ ಹಿಂದಿರುಗಿದ್ದೇನೆ. ಓದುವುದು ತುಂಬಾ ಇರುವುದರಿಂದ ಹಾಗೂ ಅಕಾಡೆಮಿಕ್ ವರ್ಷದ ಾರಂಭವಾದ್ದರಿಂದ ಸ್ವಲ್ಪ ಬ್ಯುಸಿ. ಆದ್ದರಿಂದ ಕೇವಲ ಫೋಟೋಗಳನ್ನು ನೋಡುವುದಷ್ಟೇ ಮಾಡಿದ್ದೇನೆ ಮತ್ತೆ ಬರುತ್ತೇನೆ.

ಅಹರ್ನಿಶಿ said...

ಮಲ್ಲಿಕಾರ್ಜುನ್,

ಅಧ್ಬುತವಾಗಿದೆ ಲೇಖನ.ಉಪಯುಕ್ತ ಮಾಹಿತಿ.ನಿಮ್ಮ ಫೋಟೋಗ್ರಫಿ ನಿಮ್ಮ ಬ್ಲಾಗಿಗೆ ಕಲಶ.ನಿಮ್ಮ ಬರಹ ಮುಕುಟ.ನಿಮ್ಮ ಬ್ಲಾಗೇ ವಿಸ್ಮಯಗಳ ಗುಹೆ.ಮು೦ದುವರೆಸಿ.ಶುಭವಾಗಲಿ.

ವಿನುತ said...

ಸೃಷ್ಟಿಯ ವೈಚಿತ್ರ್ಯ, ಪ್ರಕೃತಿಯ ಸೌ೦ದರ್ಯ.. ನಿಮ್ಮ ಕ್ಯಾಮೆರಾ ಕಣ್ಣುಗಳಿ೦ದ ಹಾಗೂ ಬ್ಲಾಗ್ ಬರಹದಿ೦ದ ನಮಗೂ ಸಿಗುವ೦ತಾಯಿತು. ಧನ್ಯವಾದಗಳು.

ashoka vardhana gn said...

ಪ್ರಿಯ ಮಲ್ಲಿಕಾರ್ಜುನ್
ಒಳ್ಳೇ ಪರಿಚಯ, ಸುಂದರ ಚಿತ್ರಗಳಿಗೆ ಧನ್ಯವಾದಗಳು. ಸೈಕಲ್ಲಿನಲ್ಲಿ ವಿಶ್ವಯಾನ ಮಾಡಿದ ಗೋವಿಂದ ಭಟ್ (ಇವರ ಹಳ್ಳಿಯಿಂದ ಎಂಬ ಬ್ಲಾಗ್ ತುಂಬು ಜೀವಂತಿಕೆಯದ್ದು)ನನಗೆ ನಿಮ್ಮನ್ನು ಈ ಗುಹಾಲೇಖನದೊಂದಿಗೆ ಪರಿಚಯಿಸಿದ್ದಾರೆ. ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಬೈಕ್ ಏರಿ ಭಾರತ ಪ್ರವಾಸ ನಡೆಸಿದ್ದಾಗ ಕರ್ನೂಲಿಗೇನೋ ಹೋಗಿದ್ದೆ. ಆದರೆ ಈ ಗುಹೆಯ ಸುದ್ದಿ ಸಿಕ್ಕಿರಲಿಲ್ಲ. ಬದಲು ವಿಶಾಖಪಟ್ಟಣದ ಬಳಿಯ ಬುರ್ರಾ ಗುಹೆಗಳು ಇಂಥದ್ದೇ (ಇದಕ್ಕೂ ಅಗಾಧವಾಗಿವೆ ಅಲ್ಲಿನ ರಚನೆಗಳು) ಅನುಭವವನ್ನು ನಮಗೆ ಕೊಟ್ಟವು. ಎರಡು ವರ್ಷದ ಹಿಂದೆ ನಾವು ಅಂಡಮಾನಿಗೆ ಹೋಗಿದ್ದಾಗ ಅಲ್ಲಿನ ಗುಹೆಯನು ವಿವರಿಸುವ ನೆಪದಲ್ಲಿ ಬುರ್ರಾ ಗುಹೆಗಳ ಕಿರುಚಿತ್ರಣ ಕೊಟ್ಟದ್ದು ಗೋವಿಂದಭಟ್ಟರಿಗೆ ನೆನಪಾಯ್ತಂತೆ. ನಿಮಗೂ ನಿಮ್ಮ ಎಲ್ಲ ಓದುಗರಿಗೂ ನನ್ನ ಅಂಡಮಾನ್ ಕಥನದೊಂದಿಗೆ ಎಲ್ಲಕ್ಕೂ ಬ್ಲಾಗ್:www.athree.wordpress.com ಗೆ ಸ್ವಾಗತ.
ಇಂತು ವಿಶ್ವಾಸಿ
ಅಶೋಕವರ್ಧನ ಜಿ.ಎನ್

SSK said...

ಮಲ್ಲಿಕಾರ್ಜುನ ಅವರೇ,
ನಿಜಕ್ಕೂ ಅತ್ಯಧ್ಬುತವಾದಂತ ಸ್ಥಳದ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದೀರಿ! ಲೇಖನ ಓದುತ್ತಾ, ಫೋಟೋಗಳನ್ನು ನೋಡುತ್ತಿದ್ದರೇನೆ ಎಷ್ಟು ರೋಮಾಂಚಿತವಾಗುತ್ತಿದೆ!! ಇನ್ನು ನಿಜವಾಗಿಯೂ ಅಂತಹ ಪ್ರವಾಸ ಕೈಗೊಂಡರೆ ಇನ್ನೆಷ್ಟು ರೋಮಾಂಚನವಾಗುತ್ತದೆ ಎಂಬುದು ಊಹಿಸಲು ಅಸಾಧ್ಯ, ಅದನ್ನು ಅನುಭವಿಸಿದವರೇ ಪುಣ್ಯವಂತರು......!!!

ವಿಶಿಷ್ಟ ಅನುಭವಗಳನ್ನು ಸುಂದರ ಫೋಟೋಗಳೊಂದಿಗೆ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ, ತುಂಬು ಹೃದಯದ ಧನ್ಯವಾದಗಳು.

ಇಂತಹ ಎಷ್ಟೋ ವಿಶಿಷ್ಟ, ವಿಚಿತ್ರಗಳನ್ನು ತನ್ನ ಮಡಿಲಿನಲ್ಲಿ ಬಚ್ಚಿಟ್ಟುಕೊಂಡಿರುವ ಪ್ರಕೃತಿ ಮಾತೆಗೆ, ಭೂಮಿತಾಯಿಗೆ ಕೋಟಿ, ಕೋಟಿ ನಮನಗಳು!!!!!

ದೀಪಸ್ಮಿತಾ said...

ಮಲ್ಲಿಕಾರ್ಜುನ್ ಅವರೆ, ಫೋಟೋಗಳು ಅದ್ಭುತ. ನೆರಳು ಬೆಳಕಿನ ಆಟ ತುಂಬ ಚೆನ್ನಾಗಿ ಮೋಡಿದೆ. ಪ್ರಕೃತಿ ವೈಚಿತ್ರಗಳನ್ನು ನೋಡಿ ಆನಂದಿಸಿ, ಅದನ್ನು ಇತರರಿಗೆ ಪರಿಚಯಿಸುವುದೇ ಆ ಸೃಷ್ಟಿಗೆ ನಾವು ಕೊಡುವ ಗೌರವ.

ಜಲನಯನ said...

ಮಲ್ಲಿಕಾರ್ಜುನ್...ಬಹಳ ದಿನಗಳ ನಂತರ ನಿಮ್ಮ ಬ್ಲಾಗಿಗೆ ಭೇಟಿ ಕೊಡ್ತಿದೀನಿ..ಕ್ಷಮಿಸಿ...
ನೀವು ಛಾಯಾಗ್ರಹಣಕ್ಕೆಂದೇ ಪ್ರವಾಸ ಹೋಗ್ತೀರಾ ಹೇಗೆ..? ಒಳ್ಳೆಯ ಚಿತ್ರಗಳು...ಭೂಮಿಕೆಳಗೆ ಅಂದ್ರಿ..ಇವು ಯಾವುದಾದರೂ excavation ಮೂಲಕ ಹೊರಬಿದ್ದವಾ..??
ಮಾಹಿತಿ, ಅದಕ್ಕೆ ತಕ್ಕುದಾದ ಚಿತ್ರ ಮಾಲಿಕೆ...ಅಭಿನಂದನೆಗಳು.

ಮನಸು said...

adhbuta chitragalu jotege mahiti

ಮಲ್ಲಿಕಾರ್ಜುನ.ಡಿ.ಜಿ. said...

ರಾಜೀವ ಅವರೆ,
ಟೂ ವೀಲರಿನಲ್ಲೂ ಹೋಗಬಹುದು. ಅನಂತಪುರದವರಿಗೂ ರಸ್ತೆ ಚೆನ್ನಾಗಿದೆ. ಆನಂತರ ಪರವಾಗಿಲ್ಲ. Happy Journey.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ಪರವಾಗಿಲ್ಲ ನಿಧಾನವಾಗಿಯಾದರೂ ಬಿಡುವು ಮಾಡಿಕೊಂಡು ಬ್ಲಾಗನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಅಹರ್ನಿಶಿ ಶ್ರೀಧರ್ ಅವರೆ,
ತುಂಬಾ ಹೊಗಳಿದ್ದೀರಿ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ವಿನುತ ಅವರೆ,
ಚಿತ್ರ ಲೇಖನವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಅಶೋಕವರ್ಧನ್ ಸರ್,
ನಿಮ್ಮ ಪ್ರಕಾಶನದ ಹಲವಾರು ಪುಸ್ತಕಗಳು ನನ್ನಲ್ಲಿವೆ(ಜಿ.ಟಿ.ಎನ್ ರ ವೈಜ್ಞಾನಿಕ ಪುಸ್ತಕಗಳು). ನೀವು ನನ್ನ ಬ್ಲಾಗಿಗೆ ಬಂದದ್ದು ತುಂಬಾ ಸಂತೋಷವಾಯಿತು. ನಿಮ್ಮ ಸ್ನೇಹಿತರಾದ ಗೋವಿಂದಭಟ್ ಅವರ ಬ್ಲಾಗ್ ವಿಳಾಸ ಕೊಡಿ. ನೀವು ಬರೆದಂತೆ ಬುರ್ರಾ ಗುಹೆಗಳೂ ಇಂತಹದ್ದೇ ಅನುಭವ ಕೊಡುತ್ತದೆಯಂತೆ. ನಾನಿನ್ನೂ ಅದನ್ನು ನೋಡಿಲ್ಲ. ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

SSK ಅವರೆ,
ಚಿತ್ರ ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ದೀಪಸ್ಮಿತ ಅವರೆ,
"ಪ್ರಕೃತಿ ವೈಚಿತ್ರಗಳನ್ನು ನೋಡಿ ಆನಂದಿಸಿ, ಅದನ್ನು ಇತರರಿಗೆ ಪರಿಚಯಿಸುವುದೇ ಆ ಸೃಷ್ಟಿಗೆ ನಾವು ಕೊಡುವ ಗೌರವ" - ಎಂಥ ಮಾರ್ಮಿಕವಾದ ಸಾಲು ಬರೆದಿದ್ದೀರಿ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಜಲನಯನ ಅವರೆ,
ಪ್ರವಾಸ ಮತ್ತು ಛಾಯಾಗ್ರಹಣ ಒಂದಕ್ಕೊಂದು ಬೆಸೆದಿವೆ. ಅದನ್ನು ಬಿಟ್ಟು ಇದಿಲ್ಲ ಇದನ್ನು ಬಿಟ್ಟು ಅದಿಲ್ಲ. ಒಂಥರಾ "ಜೊತೆ ಜೊತೆಯಲೀ...".
ನಿಮ್ಮ ಮೆಚ್ಚಿಗೆಗೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಮನಸು ಅವರೆ,
ಧನ್ಯವಾದಗಳು.

Guruprasad said...

ಮಲ್ಲಿಕಾರ್ಜುನ್
ನಿಮ್ಮ ಅಡ್ರೆಸ್ ಅನ್ನು ನನ್ನ ಮೇಲ್ id ಗೆ ಕಳುಹಿಸಿ ಕೊಡಿ , ನಾನು "Journey Into Amazing Caves " CD ಮಾಡಿದ್ದೇನೆ,,,ನಿಮಗೆ ಕೊರಿಯರ್ ಮಾಡುತ್ತೇನೆ ...
my mail address :- Guru.prasadkr@gmail.com

guru

ಚಂದ್ರಕಾಂತ ಎಸ್ said...

ಮಲ್ಲಿಕಾರ್ಜುನ ಅವರೆ

ನಿಮ್ಮ ಲೇಖನ ಚಿತ್ರಗಳನ್ನು ನೋಡಿ ಅಮೆರಿಕದ ಮೇರಿಲ್ಯಾಂಡ್ ಬಳಿ ಇರುವ ಲ್ಯೂರೆ ಕೇವರ್ನ್ಸ್(ಗುಹೆಗಳು) ನೆನಪಿಗೆ ಬಂತು.ಎಂಟು ವರ್ಷಗಳ ಹಿಂದೆ ಆ ಸ್ಥಳವನ್ನು ನೋಡಿದಾಗ ನನಗಾದ ಅಚ್ಚರಿ ಎಣೆಯಿಲ್ಲದ್ದು. ಅಲ್ಲಿ ಫೋಟೋಗಳನ್ನೂ ತೆಗೆದಿದ್ದೇವೆ. ನೋಡಿದವರಿಗೆಲ್ಲಾ ಅದು ಅಚ್ಚರಿ. ಆದರೆ ನಮ್ಮ ದೇಶದಲ್ಲೂ ಅಂತಹ ಸ್ಥಳವಿದೆಯೆಂದು ತಿಳಿದಿರಲಿಲ್ಲ.

ಅಮೆರಿಕಾದವರು ಎಷ್ಟು ಬುದ್ಧಿವಂತರೆಂದರೆ ಅದನ್ನೊಂದು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಿದ್ದಾರೆ.ಒಳ್ಳೆಯ ಮೂಲಭೂತ ಸೌಕರ್ಯವೂ ಇದೆ.

ಉತ್ತಮ ಚುತ್ರಗಳಿಗೆ ಮತ್ತು ಅಪಾರ ಮಾಹಿತಿಗೆ ಧನ್ಯವಾದಗಳು

ಜಿ.ಎಸ್.ಬಿ. ಅಗ್ನಿಹೋತ್ರಿ said...

ಮಲ್ಲಿಕಾರ್ಜುನ್ ಫೋಟೋಗಳು ಮಸ್ತ್ ಆಗಿವೆ. ಇಂತ ಗುಹೆಗಳಲ್ಲಿ ವಿಹರಿಸುವ ನನ್ನ ಕನಸು ಇನ್ನೂ ಇಡೇರಿಲ್ಲ. ಖಂಡಿತ ಒಮ್ಮೆ ಇಲ್ಲಿಗೆ ಭೇಟಿ ನೀಡುವೆ. ದಯವಿಟ್ಟು ಒಂದು ರೂಟ್ ಮ್ಯಾಪ್ ನೀಡಿ.

ಪಾಚು-ಪ್ರಪಂಚ said...

ಮಲ್ಲಿಕಾರ್ಜುನ್ ಅವರೇ,

ನಿಜಕ್ಕೂ ಅದ್ಭುತ..! ಗುಹೆಯ ಚಿತ್ರ ತುಂಬಾ ಇಷ್ಟವಾಯಿತು..ಅಷ್ಟೇ ಸೊಗಸಾದ ವಿವರಣೆ..!
ನನಗೆ ಮುಂದಿನ ಪ್ರವಾಸಕ್ಕೆ ಯೋಗ್ಯ ಮಾಹಿತಿ ಒದಗಿಸಿದ್ದೀರಿ...!
ಚಂದದ ಫೋಟೋ ಮತ್ತು ಬರವಣಿಗೆಗೆ ಧನ್ಯವಾದಗಳು...

-ಪ್ರಶಾಂತ್ ಭಟ್

PaLa said...

ಸಕ್ಕತ್ ಚಿತ್ರ, ವಿವರಣೆ.. ಮಾಹಿತಿಗೆ ವಂದನೆಗಳು

ಕೃಪಾ said...

ಅದ್ಭುತವಾಗಿದೆ ಮಲ್ಲಿಯಣ್ಣ ......

ಪ್ರಮೋದ ನಾಯಕ said...

ವಾಹ್.. .. ನಾನೂ ಈ ಗುಹೆಯೊಳಗಿದ್ದಂತೆ ಭಾಸವಾಗುತ್ತಿದೆ. ಒಳ್ಳೆಯ ವಿವರಣೆ..ಅಷ್ಟೇ ಸೊಗಸಾದ ಚಿತ್ರಗಳು..

armanikanth said...

mallik,
nammannooo ondu sarti tour karkondu hogi punya kattiko maaraaya.nimma camera dalli namma chitra kooda daakhalaagali.
neevu 15 dina modale helidre naanu raje hondisikollaballe...
manikanth

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಕಾಂತ ಮೇಡಂ,
ನೀವು ಬರೆದಿರುವುದು ಸರಿ. ವಿದೇಶದಲ್ಲಿ ಪ್ರವಾಸಿಗರಿಗೆ ಸೌಕರ್ಯ ಚೆನ್ನಾಗಿ ಒದಗಿಸುತ್ತಾರೆ. ಬೇಲಂ ಗುಹೆಗಳಲ್ಲೂ ಪರವಾಗಿಲ್ಲ ಸಾಕಷ್ಟು ಮಾಡಿದ್ದಾರೆ(ಆಂದ್ರ ಸರ್ಕಾರ). ಆದರೂ ಇನ್ನಷ್ಟು ಅನುಕೂಲಗಳನ್ನು ಮಾಡುವುದಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ಅಗ್ನಿಯವರೆ,
ಖಂಡಿತ ಹೋಗಿಬನ್ನಿ. ನಾನು ಲೇಖನದ ಕಡೆಯಲ್ಲಿ ಬರೆದಂತೆ ದಾರಿಯಿದೆ. ಬೆಂಗಳೂರಿನಿಂದ ಅನಂತಪುರ Highway(ಯಲಹಂಕ-ಚಿಕ್ಕಬಳ್ಳಾಪುರದ ಮೇಲೆ ಹೋಗಬೇಕು)...

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಶಾಂತ್ ಭಟ್ ಅವರೆ,
ನಿಮಗೆ ಇಲ್ಲಿಗೆ ಪ್ರವಾಸ ಹೋಗಲು ಲೇಖನ ಕಾರಣವಾಗಿದ್ದರೆ ನಾನು ಧನ್ಯ. ನಿಮ್ಮಿಂದ(ಬ್ಲಾಗ್) ಸದಾ ಪ್ರವಾಸಕ್ಕೆ ಅಣಿಯಾಗುವವರು ನಾವು. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಪಾಲಚಂದ್ರ,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಕ್ರುಪಾ ಅವರೆ,
ತುಂಬಾ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಮೋದ್ ನಾಯಕ,
ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಮಣಿಕಾಂತ್ ಅವರೆ,
ಈ ಬಾರಿ ಪ್ರವಾಸಕ್ಕೆ ಪ್ಲಾನ್ ಮಾಡುವಾಗ ಖಂಡಿತ ತಿಳಿಸುವೆ. ಧನ್ಯವಾದಗಳು.

ಶ್ರೀನಿಧಿ.ಡಿ.ಎಸ್ said...

nice place. mooru varshada hinde illige hogidde. adare alliya krutaka vathavarana hidisalilla. el noDidroo lights,etc..

ರೂಪಾ ಶ್ರೀ said...

ಕಲ್ಪನೆಯಿಂದ ಹೊರಬರಲು ಇಷ್ಟವಾಗಲಿಲ್ಲ!!! ಚಿತ್ರಗಳು ಮತ್ತು ಪದಗಳು ಪೈಪೋಟಿಗೆ ಬಿದ್ದಂತೆ ಅನಿಸಿತು :)

jampanicsrao said...

Dear Mr. Mallikarjun,

thak u for your contribution towards the photography. simply superb. if u make it the things to reach more people better translate the data into ENGLISH also. it is only suggestion view it positively,

Sincerely
Dr.J.C.S.Rao
09440357414