ಅಂದಕಾಲದಲ್ಲಿ ಬ್ರಹ್ಮದೇವನಿಗೆ ಹಣೆಬರಹ ಬರೆದೂ ಬರೆದೂ ಹಣೆ ಅಂದರೆ ತಲೆ ನೋವು ಶುರುವಾಯಿತಂತೆ. ಆಗ ಸರಸ್ವತಿದೇವಿ ತಲೆ ಕೆಡಿಸಿಕೊಂಡು ಕ್ಷೀರಸಾಗರದಿಂದ ಹಾಲನ್ನೂ, ಶಿವನ ತಲೆಯಲ್ಲಿರುವ ಗಂಗೆಯಿಂದ ನೀರನ್ನೂ, ಮನ್ಮಥನ (ಕಬ್ಬಿನ)ಬಿಲ್ಲಿನಿಂದ ಸಕ್ಕರೆಯನ್ನೂ, ನೀಲಗಿರಿ ಪರ್ವತದಿಂದ ಟೀಸೊಪ್ಪನ್ನೂ ತಂದು ಬೆರೆಸಿ ಅಗ್ನಿಸಾಕ್ಷಿಯಾಗಿ ಕಾಯಿಸಿ, ಸೋಸಿದಳಂತೆ. ಆಗ ಉದಿಸಿದ ಚಂದದ ಟೀ ಕುಡಿದ ಬ್ರಹ್ಮ ಆವತ್ತಿನಿಂದ ಇವತ್ತಿನವರೆಗೂ ರೆಸ್ಟಿಲ್ಲದೆ ಸೃಷ್ಟಿಕೆಲಸ ಸಾಗಿಸುತ್ತಿದ್ದಾನೆ. ಅಷ್ಟು ಮಹತ್ತರವಾದ "ಟೀ"ಯ ಇನ್ನೊಂದು ಹೆಸರೇ ಚಾಯ್ ಅಥವಾ ಚಹ.
ಟೀ ತೋಟದ ಮೇಲೆ ಕಾಮನಬಿಲ್ಲು.
ಇತ್ತೀಚೆಗೆ ಮುನ್ನಾರ್ ಗೆ ಹೋದಾಗ ಟೀ ಗಿಡಗಳ ಮಧ್ಯೆ ಓಡಾಡಿ, ಟೀ ಫ್ಯಾಕ್ಟರಿಗೆ ಭೇಟಿ ಕೊಟ್ಟು ಅದರ ಸೌಂಧರ್ಯವನ್ನು ಸವಿದೆ, ಕುಡಿದೆ ಮತ್ತು ಆಸ್ವಾದಿಸಿದೆ. ಎಲ್ಲೆಲ್ಲೂ ಹಸಿರು, ರಂಗೋಲಿ ಹಾಕಿದಂತೆ ಮಧ್ಯೆ ಮಧ್ಯೆ ಗೆರೆಗಳು... ಈ ಟೀ ಗಿಡಗಳಿಂದ ಸಿಂಗರಿಸಿಕೊಂಡ ಬೆಟ್ಟಗಳನ್ನು ನೋಡಲು ಚೆಂದವೋ ಚೆಂದ.
ಈ ಟೀ ಸಸ್ಯದ ಆಯಸ್ಸು ಮಾನವನಂತೆಯೇ ನೂರು ವರ್ಷ. ಬಿಟ್ಟರೆ ಇದು ಮರವಾಗಬಲ್ಲುದು. ಆದರೆ ಬೆಳೆಯಲು ಬಿಡದೆ ಕತ್ತರಿಸುವುದರಿಂದ ಮಟ್ಟಸವಾಗಿರುತ್ತೆ.
ಚೀನೀಯರಿಗೆ ಮತ್ತು ಜಪಾನೀಯರಿಗೆ "ಟೀ" ಒಂದು ಸಂಪ್ರದಾಯ ಮತ್ತು ಸಂಸ್ಕೃತಿಯ ಒಂದು ಭಾಗ. ಚೀನಾದ ಅರಸ ಶೆನ್ ನುಂಗ್ ಕ್ರಿ.ಪೂ.೨೭೩೭ ರಲ್ಲಿ ಈ ಟೀ ಸಸ್ಯವನ್ನು ಮೊದಲು ಗುರುತಿಸಿದವನಂತೆ. ಆತ ನೀರು ಕುದಿಸುತ್ತಿದ್ದಾಗ ಅಕಸ್ಮಾತ್ತಾಗಿ ಟೀ ಮರದಿಂದ ಕೆಲ ಎಲೆಗಳು ಬಿದ್ದವಂತೆ. ನೀರು ಬಣ್ಣ ತಿರುಗಿತು, ಸುವಾಸನೆ ಬಂತು, ಕುದಿಯುವ ನೀರಿಂದ ಲೋಕಕ್ಕೆ ಹೊಸ ಪಾನೀಯ ಉದಿಸಿತು.
ಬ್ರಿಟೀಷರು ಭಾರತದಲ್ಲಿ ಮೊಟ್ಟಮೊದಲು ವೈಜ್ಞಾನಿಕವಾಗಿ ಮತ್ತು ಪ್ಲಾಂಟೇಷನ್ ರೂಪ ಕೊಟ್ಟು "ಟೀ" ಬೆಳೆದವರು. ೧೭೭೮ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿ ಟೀ ಬೆಳೆಸಲು ಶುರುಮಾಡಿತು. ೧೮೩೯ರಲ್ಲಿ ಲಂಡನ್ನಿಗೆ ಭಾರತದಿಂದ ಟೀ ರಫ್ತಾಗಿ ಅತ್ಯುತ್ತಮ ಬೆಲೆಗೆ ಮಾರಾಟವಾಯಿತು. ಆ ನಂತರ ಉತ್ತರಭಾರತದಲ್ಲಿ ಹೆಚ್ಚೆಚ್ಚು ಟೀ ಬೆಳೆಯಲು ಶುರುಮಾಡಿದರು.
44 comments:
ಟೀಯ ಇತಿಹಾಸದ ಬಗ್ಗೆ ಚನ್ನಾಗಿ ತಿಳಿಸಿಕೊಟ್ಟಿದ್ದೀರಿ. ಥ್ಯಾಂಕ್ಸ್!
(ಎಷ್ಟು ಕಾಡು ಟೀ ಕಪ್ಪಲ್ಲಿ ಕರಗಿಹೋಯಿತೋ?)
wah ! kya expression hei ?
ತುಂಬಾ ಚಂದವಾದ ಅಷ್ಟೇ ಗಾಢವಾದ ಭಾವ !
ಚಹಾ ಘಮ ಘಮದ ಪರಿಚಯ ಮಾಡಿಕೊಟ್ಟದ್ದಕ್ಕೆ thanks ಮಲ್ಲಿ ಅವ್ರೇ !
ಉದಯ್ ಸರ್,
ಧನ್ಯವಾದಗಳು. ಇತಿಹಾಸದ ಜೊತೆ ಪೌರಾಣಿಕವೂ ಇದೆ! ಅದರ ಬಗ್ಗೆ ನೀವೇನೂ ಹೇಳ್ಲಿಲ್ವಲ್ಲಾ?!
ಹೇಮಾಶ್ರೀ ಅವರೆ,
ಅಲ್ಲಿ ನಯನಮನೋಹರ ಟೀ ಪ್ಲಾಂಟೇಷನ್ ಗಳು, ಪಕ್ಕದಲ್ಲೇ ಪ್ರಪಂಚದಲ್ಲಿ ಎಲ್ಲೂ ಇರದ ಪ್ರಾಣಿ - ಜಿಂಕೆ ಜಾತಿಯ ನೀಲಗಿರಿಥಾರ್ ಇರುವ ಎರವಿಕುಲಂ ಬೆಟ್ಟಗಳು, ೧೨ವರ್ಷಕ್ಕೊಮ್ಮೆ ಅರಳುವ ನೀಲಕುರುಂಜಿ ಹೂಗಳು... ಇವೆಲ್ಲಾ ನೋಡಿದಾಗ ನಮ್ಮ ಪಶ್ಚಿಮ ಘಟ್ಟದ ಕಾಡುಗಳನ್ನೇ, ಬೆಟ್ಟಗಳನ್ನೇ ಟೀ ಬೆಳೆಯಲು ಬಳಸಿಕೊಂಡಿರುವುದು ಎಂಬುದು ಗೋಚರಿಸುತ್ತದೆ. ಅದಕ್ಕಾಗಿಯೇ ನಾನು "ಎಷ್ಟು ಕಾಡು ಟೀ ಕಪ್ಪಲ್ಲಿ ಕರಗಿಹೋಯಿತೋ" ಎಂದು ಬರೆದಿರುವುದು. ಮೆಚ್ಚಿದ್ದಕ್ಕೆ ಧನ್ಯವಾದಗಳು.
ಹುಡುಕಾಟದ ಮಲ್ಲಿಕಾರ್ಜುನ್...
ಟೀ ಕುರಿತಾದ ಪುರಾಣ ಕಥೆ ಬಹಳ ಸೊಗಸಾಗಿದೆ...
ಕೆಳಗಡೆ ಓದುತ್ತಿದ್ದ ಹಾಗೆ...
ಸುಂದರ ಫೋಟೊಗಳ ಸಂಗಡ..
ಟೀ ಬಗೆಗೆ ಸಮಗ್ರ ಚಿತ್ರಣ.., ಮಾಹಿತಿ...!!
ಒಂಟಿ ಮರದ ಫೋಟೊವಂತೂ ಮನಮೋಹಕ...!!
ನಿಮ್ಮ ಬರವಣಿಗೆ ಚೆನ್ನಾಗಿದೆ...
ನಿಮ್ಮ ಓದು ...
ನಿಮ್ಮ ಬರವಣಿಗೆಲ್ಲಿ ಕಾಣ ಬಹುದು...
ನೀವ್ಯಾಕೆ ಲೇಖನ ಬರೆಯುವದಿಲ್ಲ....??
ನೀವು ಬರೆಯ ಬಲ್ಲಿರಿ....
ಓದಲು ನಾವಿದ್ದೇವೆ... ದಯವಿಟ್ಟು ಪ್ರಯತ್ನ ಮಾಡಿ ನೋಡಿ...
ಸುಂದರ, ಮೋಹಕ ಫೋಟೋಗಳ ಸಂಗಡ...
ಅಂದದ ಒಕ್ಕಣಿಕೆ.....!
ಅಭಿನಂದನೆಗಳು....
ಪ್ರಕಾಶ್ ಸರ್,
ಚಿತ್ರಗಳ ಮೂಲಕ ಚಿತ್ರಣವನ್ನು ಕೊಡಬಯಸುವವನು ನಾನು. ಚಿತ್ರವಿಲ್ಲದ ಚಿತ್ರಣ ನನ್ನ ಕೈಲಿ ಸಾಧ್ಯವಾ? ನೋಡೋಣ ಪ್ರಯತ್ನಿಸುವೆ.
ಒಂಟಿ ಮರದ ಚಿತ್ರ ನನಗೂ ಇಷ್ಟವಾದದ್ದು. ಬೆಳೆಗ್ಗೆ ೬.೩೦ಕ್ಕೆ ನಾವು ಉಳಿದಿದ್ದ ಹೋಟೆಲಿನ ಮೇಲೆ ಹೋಗಿ, ಸೂರ್ಯನ ಬೆಳಕು ಆ ಮರದ ಮೇಲೆ ಬಿದ್ದಾಗ ಬೇರೆಡೆಯಿನ್ನೂ ಪಸರಿಸದಿದ್ದಾಗ ತೆಗೆದೆ.
ಧನ್ಯವಾದಗಳು.
ಮಲ್ಲಿಕಾರ್ಜುನ್....
ಚಿತ್ರವಿಲ್ಲದೆ ಚಿತ್ರಣ ಕಟ್ಟ ಬಲ್ಲಿರಿ....
ಓದಲು ನಾವಿದ್ದೇವೆ....
ಒಪ್ಪಿಕೊಂಡದ್ದು ಖುಷಿಯಾಯಿತು....
ಥ್ಯಾಂಕ್ಸ್...! ಥ್ಯಾಂಕ್ಸ್...! ಥ್ಯಾಂಕ್ಸ್...!
ಬಿಸಿಲು ಮಳೆಯನ್ನದೆ ಆಸ್ವಾದಿಸಲು ಇಷ್ಟ ಆಗುವಂತಹ ಪಾನೀಯ ಟೀ.ಅದನ್ನು ಖುಷಿಯಿಂದ ಹೀರುತ್ತಾ,ಟೀಯ ಕಥನ ಹಾಗು ಚಿತ್ರಗಳನ್ನು ಆಸ್ವಾದಿಸಿದೆ .ಧನ್ಯವಾದಗಳು:)
chennagive photos... haage lekhanavoo. namage sikka angle gale nimagoo sikkanthive... :)
ಮಲ್ಲಿಕಾರ್ಜುನ್,
ಬ್ರಹ್ಮನಿಗೆ ಸ್ಫೂರ್ತಿ ನೀಡಿದ ಟೀ...ಕತೆ ಸೊಗಸಾಗಿದೆ.
ಟೀ ಬಗ್ಗೆ ನೀವು ಕಲೆಹಾಕಿರುವ ಮಾಹಿತಿಗಳು ಅದಕ್ಕೆ ತಕ್ಕಂತೆ ಬರವಣಿಗೆ ಇಷ್ಟವಾಗುತ್ತದೆ.
ನಾನು ಮುನ್ನಾರಿಗೆ ನಾಲ್ಕು ಬಾರಿ ಹೋಗಿಬಂದಿದ್ದರೂ ನಿಮ್ಮ ಈಗಿನ ಫೋಟೋಗಳನ್ನು ನೋಡಿದಾಗ ಮತ್ತೆ ಹೋಗುವ ಆಸೆಯಾಗುತ್ತದೆ.
"ಒಂಟಿ ಮರದ ಮೇಲೆ ಬಿಸಿಲು ಕೋಲು"
ಚಿತ್ರವಂತೂ ತುಂಬಾ ಚೆನ್ನಾಗಿದ್ದು ತಾಂತ್ರಿಕವಾಗಿ ಉತ್ತಮವಾಗಿದ್ದರೇ ಸ್ಪರ್ಧೆಗಳಿಗೆ ಅರ್ಹತೆ ಪಡೆಯಬಹುದು...
ಚಿತ್ರ-ಲೇಖನ ಓದಿ ಮುಗಿಸಿದಾಗ ಬಿಸಿ ಬಿಸಿ ಚಾಯ್ ಚಪ್ಪರಿಸಿದಂತೆ ಆಯಿತು...
ಧನ್ಯವಾದಗಳು.
ನಿಮ್ಮ ಈ ಲೇಖನದಲ್ಲಿ ಸುಂದರ ಚಿತ್ರಗಳು ಹಾಗೂ ಉತ್ತಮ ಮಾಹಿತಿ ಅಲ್ಲದೆ, ಸಾಹಿತ್ಯದ ಸೌರಭವೂ ಇದೆ. ಈ ಎರಡು ವಾಕ್ಯಗಳನ್ನು ನೋಡಿರಿ:
೧).ಎಷ್ಟು ಕಾಡು ಟೀ ಕಪ್ಪಿನಲ್ಲಿ ಕರಗಿ ಹೋಯಿತೊ?
೨).ಎಲ್ಲಕ್ಕಿಂತ ಹೆಚ್ಚು ರುಚಿಯಾಗಿರುವದು ನಲ್ಲೆಯ ಕೆಂದು-ಟಿ!
ನನಗೆ ಒಳ್ಳೆ ಕೇಟಿ ಕುಡಿದಷ್ಟೇ ಖುಶಿಯಾಗಿದೆ.
ಮಲ್ಲಿಯಣ್ಣ..ನಮಸ್ಕಾರ..ನಮಸ್ಕಾರ...ನಮಸ್ಕಾರ! ನಿಮ್ಮ ಮೂರೂ ಬರಹಗಳನ್ನು ಇವತ್ತೇ ಓದಿದ್ದು..ಬೈಕೋಬೇಡಿ. ಮುಖವಾಡ ತುಂಬಾನೇ ಇಷ್ಟವಾಯಿತು. ಟೀ ಇತಿಹಾಸ ಒಳ್ಳೆ ಬರಹ...ಶಿವಣ್ಣ ನೋಡಿದ್ರೆ ಟೀ ಮಾರುವವರ ಕುರಿತು ಬರೆದಿದ್ದಾರೆ..ನೀವು ಟೀ ಇತಿಹಾಸ ತೆರೆದಿಟ್ರಿ..ನಾನೂ ಮಡಿಕೇರಿಯಲ್ಲಿ ಟೀ ೆಸ್ಟೇಟ್ ನೋಡಿ ಖುಷಿಪಟ್ಟ ದಿನಗಳು ನೆನಪಾದುವು. ವಂದನೆಗಳು.
-ಧರಿತ್ರಿ
ಹಾಯ್ ಮಲ್ಲಿ,
ನಿಮ್ಮ ಚೆಲುವಿನ ಚಿತ್ತಾರದ ಪೋಟೋ ಜೋತೆ..ಮುದ್ದಾದ ಕವಿತೆ ನೋಡಿ ಮೂಕ ವಿಸ್ಮಿತ..!!
ಟೀಯಲ್ಲೂ ಉಂಟು ವೆರೈಟಿ
ಕೇಟಿ, ಲೆಮನ್ ಟಿ, ಮಸಾಲಾಟಿ
ಎಲ್ಲಕ್ಕಿಂತ ರುಚಿ
ನಲ್ಲೆಯ ಕೆಂದು-ಟಿ!
ಟೀಯಲ್ಲೂ ಉಂಟು ವೆರೈಟಿ
ಕೇಟಿ, ಲೆಮನ್ ಟಿ, ಮಸಾಲಾಟಿ
ಎಲ್ಲಕ್ಕಿಂತ ರುಚಿ
ನಲ್ಲೆಯ ಕೆಂದು-ಟಿ!
ನಿಮ್ಮ ಸಮಯ ಪ್ರಜ್ನೆಗೆ ಹ್ಯಾಟ್ಸ್ ಆಫ್.
ದು೦ಡಿರಾಜರ ಕವಿತೆ
ನಿಮ್ಮ ಈ ಬರಹದೊ೦ದಿಗೆ
ಜೋಡಿಸಿಕೊ೦ಡಾಗ
ಇನ್ನೂ ಜೊರಾಗಿ ಘಮಘಮಿಸಿದೆ.
ಮಲ್ಲಿಕಾರ್ಜುನ್
ಸುಂದರವಾದ ಚಿತ್ರಗಳೊಂದಿಗೆ ಸೊಗಸಾದ ಬರಹ. ಅತಿ ಮೋಹಕವಾಗಿ ಟೀ ಉದಯಿಸಿದ ಕಥೆ ಬರೆದಿರುವಿರಿ. ಬಹುಶಃ ಪ್ರತಿಯೊಂದು ತಿನಿಸಿಗೂ ಇಂತಹ ಹಿನ್ನೆಲೆ ಇರುತ್ತದೇನೋ? ಆಲೂ ಚಿಪ್ಸ್ ತಯಾರಾದ ಬಗ್ಗೆಯೂ ಇಂತಹ ಕಥೆ ಹೇಳುತ್ತಾರೆ. ಅಡುಗೆ ಮಾಡುವಾಗ ಬಾಣಸಿಗನ ಕೈಯಲ್ಲಿದ್ದ ಆಲೂ ಆಕಸ್ಮಿಕವಾಗಿ ಎಣ್ಣೆಯಲ್ಲಿ ಬಿದ್ದಿತಂತೆ!!
ಒಂದೊಂದು ಚಿತ್ರಕ್ಕೂ ಅರ್ಥಪೂರ್ಣ ವಿವರಣೆ ಕೊಟ್ಟಿರುವಿರಿ
ಕಡೆಯ ಕವನ ತನ್ನ ರಸಿಕತೆಯಿಂದ ಇಡೀ ಬರಹ-ಚಿತ್ರದ ಸೌಂದರ್ಯವನ್ನು ಹೆಚ್ಚಿಸಿದೆ.
ಬ್ರಹ್ಮನನ್ನು refresh ಮಾಡಿದ ಕಥೆಯಿಂದ ಶುರುವಾಗಿ, ಸುಂದರ ಫೋಟೊಗಳೊಂದಿಗೆ ಟೀ ಯ ಇತಿಹಾಸ ಹೇಳುತ್ತಾ ಕೊನೆಯಲ್ಲಿ ದುಂಡಿರಾಜರು ಹೇಳಿದ ನಲ್ಲೆಯ ಕೆಂದು-ಟಿ ಯಲ್ಲಿ ಮುಗಿಯುವ ನಿಮ್ಮೀ ಲೇಖನ ಆದಿಯಿಂದ ಅಂತ್ಯದವರೆಗೆ ಬಹಳ ಸೊಗಸಾಗಿದೆ!!!
ನಾನು ಟೀ/ಕಾಫಿ ಕುಡಿಯೊಲ್ಲವಾದ್ರೂ ನಿಮ್ಮ ಲೇಖನ ಮೂಲಕ ಅದರ ಸವಿಯುಂಡೆ!
ಒಂಟಿ ಮರದ ಆ ಫೋಟೋ ಬಹಳ ಇಷ್ಟವಾಯಿತು:)
ಮೊದಲ ಫೋಟೋ ಕೂಡ ಬಹಳ ಕಲರ್ ಫುಲ್ಲಾಗಿದೆ, ಏನ್ ತಿಂಡಿಗಳು ಅವು?
G.V.ಜಯಶ್ರೀಯವರೆ,
ತುಂಬಾ ಥ್ಯಾಂಕ್ಸ್. ಚಾಯ್.. ಇಷ್ಟಪಟ್ಟಿದ್ದೀರಿ. ಹೀಗೇ ಪ್ರೋತ್ಸಾಹಿಸುತ್ತಿರಿ.
ಆಲಾಪಿನಿಯವರೆ,
ಚಿತ್ರ ಮತ್ತು ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಶಿವು,
ಮುನ್ನಾರಿಗೆ ಮಂಜು,ನೀವು ಮತ್ತು ನಾನು ಮೂರು ಬಾರಿ ಹೋಗಿದ್ದೀವಿ. ಈ ಬಾರಿ ಕುಟುಂಬದೊಂದಿಗೆ ಹೋಗಿದ್ದದ್ದು. ಈ ಸ್ಥಳ ಫೋಟೋಗ್ರಾಫರನಿಗೆ ಪ್ರೇಕ್ಷಣೀಯ ಸ್ಥಳ ಅಲ್ಲವೇ?
ಈ ಬಾರಿ ಹೋದಾಗ ನಮ್ಮ ಹಳೇ ನೆನಪುಗಳು ಬರುತ್ತಿತ್ತು. "ಬಿಮಲ್" ಬಗ್ಗೆ ಬರೀರಿ.
ಸುನಾತ್ ಸರ್,
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಮೆಚ್ಚುಗೆಯ ಮಾತುಗಳು ಸ್ಫೂರ್ತಿ ತಂದಿವೆ. "ನಲ್ಲೆಯ ಕೆಂದು-ಟಿ" ಸಾಲುಗಳು ಡುಂಡಿರಾಜ್ ಅವರದ್ದು. ಅದನ್ನು ಲೇಖನದಲ್ಲಿ ಬರೆದಿರುವೆ.
ಧರಿತ್ರಿ ಅವರೆ,
ನನ್ನ ಬರಹ ಓದಿದ್ದಕ್ಕೆ ಖುಷಿಯಾಯ್ತು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.
ಕನಸು ಅವರೆ,
ಧನ್ಯವಾದಗಳು. ಕವನ ಡುಂಡಿರಾಜ್ ಅವರದ್ದು. ಇಷ್ಟವಾಗಿದ್ದು ತಿಳಿದು ಖುಷಿಯಾಯ್ತು.
ಅಹರ್ನಿಶಿ ಅವರೆ,
ಧನ್ಯವಾದಗಳು. ನನಗೆ ಟೀ ಅಂದಾಗಲೆಲ್ಲ ನೆನಪಾಗುವುದು ಡುಂಡೀರಾಜರ ಕವನ ಹಾಗಾಗಿ ಲೇಖನದಲ್ಲೂ ಬರೆದಿರುವೆ.
ಚಂದ್ರಕಾಂತ ಮೇಡಂ,
ಧನ್ಯವಾದಗಳು. ನೀವಂದಂತೆ ಪ್ರತಿಯೊಂದು ತಿನಿಸಿಗೂ ಒಂದು ಐತಿಹ್ಯ ಇರಬಹುದಲ್ವಾ? ಹುಡುಕಿದರೆ ಹೊಸ ಸಂಗತಿಗಳು ರುಚಿಕಟ್ಟಾಗಿ ಸಿಗಬಹುದು.
ರೂಪಶ್ರೀಯವರೆ,
ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಒಂಟಿ ಮರದ ಚಿತ್ರ ನಾವು ಉಳಿದುಕೊಂಡಿದ್ದ ಹೋಟೆಲಿನ ಮೇಲೆ ಹತ್ತಿ ಬೆಳೆಗ್ಗೆ ೬-೩೦ ರಲ್ಲಿ ತೆಗೆದದ್ದು.
ಆ ತಿಂಡಿಗಳ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬ್ಲಾಕ್ ಟೀ ಫೋಟೋ ತೆಗೆಯಲು ಪುಟ್ಟ ಹೋಟೆಲೊಂದಕ್ಕೆ ಹೋಗಿ ಅನುಮತಿ ಕೇಳಿದೆ. ಆತ ಇರಿ ಎಂದು ಸಂಜ್ಞೆ ಮಾಡಿ ಟೀ ಕಪ್ಪಿನ ಜೊತೆ ಈ ತಿಂಡಿಯನ್ನು ಇಟ್ಟ. ಫೋಟೋ ತೆಗೆದೆ, ಹಣ ಕೊಡಲು ಹೋದರೆ , ಬೇಡವೆಂದ.
ah...kathe chennagide
ಸರ್, ನಿಮ್ಮ ಬ್ಲಾಗಿನಲ್ಲಿ ಟೀ ಇತಿಹಾಸ, ವ್ಯವಸಾಯ ಇವುಗಳೆಲ್ಲದರ ಬಗ್ಗೆ ಫೋಟೋ ಲೇಖನ. ನಿಮ್ಮ ಸ್ನೇಹಿತ ಶಿವು ಅವರಿಂದ ಟೀ ಮಾರುವವರ ಬಗೆಗಿನ ಚಿತ್ರ ಲೇಖನ. ಇಬ್ಬರೂ ಒಂದೇ ವಸ್ತುವಿನ ಬೇರೆ ಬೇರೆ ವಿಷಯದ ಹುಡುಕಾಟದಲ್ಲಿ ತೊಡಗಿದ್ದೀರಿ.
ಧನ್ಯವಾದಗಳು.
ಚಾಯ್ ಚನ್ನಾಗಿದೆ
ಮಲ್ಲಿಕಾರ್ಜುನ್ ಸರ್,,,
ಫೋಟೋಗಳನ್ನು ನೋಡಿದ ಮೇಲೆ ಮತ್ತೊಮ್ಮೆ ಮುನ್ನಾರ್ ಗೆ ಹೋಗಬೇಕೆನಿಸಿದೆ....ಹಾಗೆ ಟೀ ಕತೆ ಕೂಡ ತುಂಬ ಚೆನ್ನಾಗಿ ಇದೆ.....
ಒಳ್ಳೆ ಫೋಟೋಗಳು,,,, ಹಸಿರನ್ನು ಎಷ್ಟು ನೋಡಿದರು ನೋಡಬೇಕೆನಿಸುತ್ತಿದೆ...ಯಾಕೆ ಅಂತ ಗೊತ್ತಿಲ್ಲ ?
ಗುರು
ಚಲೋ ಐತೆ ಚಾಯ್...
ಮಲ್ಲಿಕಾರ್ಜುನ್,
ನೀವು ಶಿವು ಬರೀಬೇಕಾದ್ರೂ ಒಟ್ಟಿಗೆ ಮಾತಾಡಿಕೊಂಡು ಒಂದೇ ವಿಷಯದ ಬಗ್ಗೆ ಬರೀತೀರ ಏನ್ ಕತೆ? ತಲೆ ಬರಹ ಒಂದೇ ವಿಷಯದ ಕುರಿತಾದರೂ ಬರಹ ಮಾತ್ರ ಎರಡೂ ಭಿನ್ನ!
ಒಳ್ಳೆಯ ಚಿತ್ರಗಳೊಂದಿಗೆ ಚಹಾದ ವಿಚಾರ ಸೊಗಸಾಗಿ ತಿಳಿಸಿ, ದುಂಡೀರಾಜರ ಕವನದೊಂದಿಗೆ ರಸಿಕತೆಯ ಮುಕ್ತಾಯ ಕೊಟ್ಟಿದ್ದೀರ.
ಅಂದಹಾಗೆ ಚಿತ್ರದಲ್ಲಿ ಅಲ್ಲಲ್ಲಿ ಕಂಡುಬರುವ ಮರ "ಸಿಲ್ವರ್ ಓಕ್" ಎಂದು ಶಾಲೆಯಲ್ಲಿ ಓದಿದ ನೆನಪು. ಫ್ಯಾಕ್ಟರಿಯೊಳಗೆ ಚಿತ್ರ ತೆಗೆದಿಲ್ಲವೇ?
ಮಲ್ಲಿ ಅಣ್ಣ... ಶಿವಣ್ಣನವರು ಟೀ ಮಾರುವವರ ಬಗ್ಗೆ ಬರೆದರೆ ಕಾಕತಾಳಿಯಾವೆಂಬಂತೆ ನೀವು ಟೀ ತೋಟಗಳ ಅದ್ಬುತ ಚಿತ್ರಗಳನ್ನ ಸೆರೆ ಹಿಡಿದು ನಮ್ಮ ಮುಂದೆ ಹಿಟ್ಟಿದಿರಿ...
ಮೊದಲ ಕೆಲವು ಸಾಲುಗಳಂತೂ ತೆಲುಗು ಸಿನೆಮಯೊಂದರ ಹಾಡಿನಂತೆ ಗೋಚರಿಸಿತು... ಲೇಖನ ಮತ್ತು ಫೋಟೋಗಳು ಚೆನ್ನಾಗಿವೆ...
ಚೆನ್ನಾಗಿದೆ ಟೀ ಬರಹ... ಒಂಟಿ ಮರದ ಬಿಸಿಲ ಕೋಲು ಚಿತ್ರ ತುಂಬಾ ಚೆನ್ನಾಗಿದೆ... ಎಷ್ಟು ಕಾಡು ಟೀ ಕಪ್ ನಲ್ಲಿ ಕರಗಿ ಹೋಯಿತೋ ಅನ್ನೋ ನಿಮ್ಮ ಮಾತು ... ಹುಹ್ ಅದರ ಬಗ್ಗೆ ಏನು ಹೇಳಲಿ??
ದಿನೇಶ್ ಅವರೆ,
ಕಥೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಚಂದ್ರಶೇಖರ್ ಸರ್,
ತುಂಬಾ ಥ್ಯಾಂಕ್ಸ್. ಇಬ್ಬರ ಲೇಖನವೂ ಒಂದೇ ವಿಷಯ ಆದರೆ ಎರಡು ದೃಷ್ಟಿಕೋನ.
ಶಿವಪ್ರಕಾಶ್,
ಧನ್ಯವಾದಗಳು.
ಗುರು ಅವರೆ,
ನಾನು ಇದು ನಾಲ್ಕನೆಯ ಬಾರಿ ಮುನ್ನಾರಿಗೆ ಹೋಗಿದ್ದದ್ದು. ಮತ್ತೂ ಹೋಗಬೇಕೆನಿಸುತ್ತೆ. ಅಂತಹ ಅದ್ಭುತವಾದ ಸ್ಥಳ.
ಹಸಿರ ಆಕರ್ಷಣೆಯೇ ಅಂತಹುದು.
ಅಗ್ನಿಯವರೆ,
ತುಂಬಾ ಥ್ಯಾಂಕ್ಸ್.
ಪಾಲಚಂದ್ರ,
ನಾವು ಮಾತಾಡಿಕೊಂಡು ಲೇಖನ ಬರೆದಿಲ್ಲ. ಇದು coincidence.
ನೀವು guess ಮಾಡಿರುವುದು ಸರಿ. ಟೀ ಗಿಡದ ಮಧ್ಯೆ SilverOak ಮರಗಳನ್ನು ಬೇಳೆಸುವರು. ನೆರಳು ಮತ್ತು ಮಣ್ಣಿನ ಸವೆತ ತಡೆಗಟ್ಟಲು.
ಟೀ ಫ್ಯಾಕ್ಟರಿ ಒಳಗೆ ಚಿತ್ರ ತೆಗೆಯಲಿಲ್ಲ(ಅನುಮತಿ ಇಲ್ಲ).
ನವೀನ್,
ತುಂಬಾ ಥ್ಯಾಂಕ್ಸ್.
ರವಿಕಾಂತ್ ಗೋರೆಯವರೆ,
ನನಗೂ ಆ ಚಿತ್ರ ತುಂಬಾ ಇಷ್ಟವಾಯ್ತು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.
tea ಪುರಾಣ ಕಥನ, ಮಾಹಿತಿ ಜತೆಗೆ ಕಣ್ಮನ ಸೆಳೆಯುವ ಚಿತ್ರಗಳು....
ನಾನು ಟೀ ಕುಡಿಯುತ್ತ ಓದುತ್ತಿದ್ದೇನೆ
ಅದಕ್ಕೆ ನನ್ನ ಹೆಸರು
ಮಾಲ’ಟಿ’
:-)
malathi S
ಇತಿಹಾಸ, ಚಿತ್ರಗಳು, ವಿಧಗಳು, ಎಲ್ಲವುಗಳ ವಿವರಣೆ - ನಿಮ್ಮದೊ೦ದು ಪರಿಪೂರ್ಣ ಬರವೆನ್ನಬಹುದು. ಅಮೆರಿಕದಲ್ಲಿ ಸುಮಾರು ೧೫ ಬಗೆಯ ಚಹಾದ ವಿಧಗಳನ್ನು ಕ೦ಡಿದ್ದೆ. ಲೆಮನ್ ಟೀ ತು೦ಬಾ ಇಷ್ಟವಾಗಿತ್ತು.
ಟೀಯ ಇತಿಹಾಸದ ಜೊತೆಗೆ ಕೇಟಿ, ಲೆಮನ್ ಟೀ, ಮಸಾಲ ಟೀ , ಗ್ರೀನ್ ಟೀ, ಓಲಾಂಗ್ ಟೀ ಮತ್ತು ಬ್ಲಾಕ್ ಟೀ ಅಷ್ಟೆ ಅಲ್ಲದೇ ನಲ್ಲೆಯ ಕೆಂದುಟಿ ಯಲ್ಲಿ ಟೀ ಯನ್ನು ಸೊಗಸಾಗಿ ಮತ್ತು ವೆರೈಟಿಯಾಗಿ ಮನ್ನಾರ್ ಬೆಳೆದ ಟೀ ಸೊಪ್ಪಿನ ಹಿಂದೆ ಇರುವ ಬ್ರಿಟಿಷ್ ಕಂಪನಿಯಾದ ಈಸ್ಟ್ ಇಂಡಿಯಾ ಕಂಪನಿ ಯನ್ನು ನೆನಪಿಸದ್ದಕ್ಕೆ ಧನ್ಯವಾದಗಳು.
tea purana chennagide....
ರಾಮು
Post a Comment