Thursday, June 18, 2009

ಪೆರಿಯಾರ್

ಕೇರಳದ ಥೇಕಡಿ ಪೆರಿಯಾರ್ ವನ್ಯಧಾಮಕ್ಕೆ ಹೆಬ್ಬಾಗಿಲು.ಈ ಪೆರಿಯಾರ್ ಅನ್ನು ಹುಲಿ ಸಂರಕ್ಷಣಾ ತಾಣವನ್ನಾಗಿ ೧೯೭೮ರಲ್ಲೇ ಘೋಷಿಸಲಾಗಿದೆ.
ಪ್ರವಾಸಿಗರಿಗೆ ಬೇರೆಲ್ಲೂ ಸಿಗದ ಅನುಕೂಲತೆಯೊಂದು ಇಲ್ಲಿದೆ. ಅದೇನೆಂದರೆ ಇಲ್ಲಿ ದೋಣಿಯಲ್ಲಿ ಕುಳಿತು ಪ್ರಾಣಿಪಕ್ಷಿಗಳನ್ನು ವೀಕ್ಷಿಸಬಹುದಾಗಿದೆ.
ಮಲ್ಲಪೆರಿಯಾರ್ ಅಣೆಕಟ್ಟಿನ ನಿರ್ಮಾಣದಿಂದಾಗಿ ಇಲ್ಲಿ ಪೆರಿಯಾರ್ ನದಿಯು ವಿಶಾಲವಾಗಿ ಹರಡಿಕೊಂಡಿರುವುದರಿಂದ ದೋಣಿಯಲ್ಲಿ ಕುಳಿತು ಪ್ರವಾಸಿಗರು ಪ್ರಾಣಿಪಕ್ಷಿಗಳನ್ನು ಹತ್ತಿರದಿಂದ ವೀಕ್ಷಿಸಬಹುದು.
ಬನ್ನಿ ಇನ್ನೇಕೆ ತಡ. ಪೆರಿಯಾರ್ ನದಿಯಲ್ಲಿ ಒಂದು ಸುತ್ತು ಹಾಕಿ ಬರೋಣ...
ಮಂಜುಮುಸುಕಿದ ಮುಂಜಾವಿನಲ್ಲಿ ದೋಣಿಯಾನ.

ಸ್ನೇಕ್ ಬರ್ಡ್ ಗಳ ಮುಖಾಮುಖಿ.

ಕಾರ್ಮೊರೆಂಟ್ ಗಳ ರೆಕ್ಕೆಯಾಟ.

ಫ್ಲೈಟ್ ಟೇಕಾಫ್ ಇದ್ದಂತೆ ಬೆಳ್ಳಕ್ಕಿಯ ಟೇಕಾಫ್.

ಒಂದು, ಎರಡು.... ಆಮೇಲಿನ್ನೇನು?

ಒಣಮರದ ಮೇಲೂ ಚಿಗುರುವ ಕನಸು.

ದೇವರ ಪೆನ್ನಿನ ಗೀಚುಗೆರೆ!

ನೀರಿನ ನಡುವಿರುವ ಒಣಮರಗಳು ಪಕ್ಷಿಗಳ ವಾಸಸ್ಥಾನವಾಗಿದೆ.

ಸ್ನೇಕ್ ಬರ್ಡ್ ಮತ್ತು ಪಾಂಡ್ ಹೆರಾನ್.

ತ್ರಿವಳಿ ಕಿಂಗ್ ಫಿಷರ್ ಗಳ ಹಾರಾಟ.

ಆಕ್ಟೋಪಸ್ ಅಲ್ಲ, ಒಣಮರದ ಪ್ರತಿಬಿಂಬ.

ಬ್ಲಾಕ್ ಅಂಡ್ ವೈಟ್!

ಓಡು...ಓಡು...

ಓರೆಕೊರೆ ಮರದ ಮೇಲೆ ಕೊಕ್ಕರೆ.

53 comments:

SSK said...

ಮಲ್ಲಿಕಾರ್ಜುನ ಅವರೇ,
ಕೇರಳ ಅಂದರೆ ನಿಸರ್ಗದ ತವರೂರು! ಅಲ್ಲಿನ ಸುಂದರ ಪ್ರಕೃತಿಯ ಜೊತೆಗೆ ಕೆಲವು ಹಕ್ಕಿಗಳನ್ನೂ (ಫೋಟೋದಲ್ಲಿ) ಸೆರೆಹಿಡಿದು ನಮ್ಮೊಂದಿಗೆ ಹಂಚಿಕೊಂಡಿದ್ದೀರ! ಇದಕ್ಕೆ ನಿಮಗಿದೋ ಈ ಧನ್ಯವಾದಗಳು!!

ರೂpaश्री said...

ಮಲ್ಲಿಕಾರ್ಜುನ ಅವರೇ,
ಸುಂದರವಾದ ದೋಣಿ ವಿಹಾರ ಮಾಡಿಸಿದಕ್ಕೆ ನಿಮಗೆ ವಂದನೆಗಳು! ಆರು ವರ್ಷಗಳ ಹಿಂದೆ ನಾವಲ್ಲಿ ಕಳೆದ ದಿನಗಳ ನೆನಪಾಯ್ತು:)
'ದೇವರ ಪೆನ್ನಿನ ಗೀಚುಗೆರೆ' ಫೋಟೋ ಬಹಳ ಇಷ್ಟ ಆಯ್ತು, ನಿಮ್ಮ ಅನುಮತಿಯಿಲ್ಲದೆ ನನ್ನಲ್ಲಿ ಉಳಿಸಿಕೊಂಡೆ..

Keshav Kulkarni said...

ಮಲ್ಲಿ,
ತುಂಬ ಚಂದದ ಚಿತ್ರಗಳು. ನಿಮ್ಮ ಕ್ಯಾಮರಾ ಕಣ್ಣಲ್ಲಿ ಅದ್ಭುತ ಕಲೆಯಿದೆ. ಇನ್ನೂ ಬರಲಿ.
- ಕೇಶವ

ಮಲ್ಲಿಕಾರ್ಜುನ.ಡಿ.ಜಿ. said...

SSK ಅವರೆ,
ಈ ಬಾರಿ ನಮಗೆ ಆನೆಗಳು ಕಾಣಲಿಲ್ಲ. ಕಾಡೆಮ್ಮೆ, ಕಾಡುಹಂದಿ ಕಾಣಿಸಿತಷ್ಟೆ. ಹಾಗಾಗಿ ಹಕ್ಕಿಗಳ ಚಿತ್ರಗಳನ್ನು ಮಾತ್ರ ಹಾಕಿರುವೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಅವರೆ,
"ದೇವರ ಪೆನ್ನಿನ ಗೀಚುಗೆರೆ" ಎಂದು ಬರೆದು ತೋರಿಸಿದಾಗ ನನ್ನಾಕೆ ದೇವರ ಬಳಿ ಪೆನ್ಸಿಲ್ ಇಲ್ವಾ ಎಂದು ರೇಗಿಸಿದ್ದರು. ಆ ಚಿತ್ರ ನಿಮಗಿಷ್ಟವಾಗಿದ್ದು ತಿಳಿದು ಖುಷಿಯಾಯ್ತು.

ಪ್ರಮೋದ ನಾಯಕ said...

ಚಿತ್ರಗಳು ಅದ್ಭುತವಾಗಿವೆ.. ವಿಶೇಷವಾಗಿ ರೆಂಬೆ ಕೊಂಬೆಗಳ ಮರ ಮತ್ತು ಅದರ ನೆರಳಿನ ಚಿತ್ರ..

ಸಿಮೆಂಟು ಮರಳಿನ ಮಧ್ಯೆ said...

ಹುಡುಕಾಟದವರೆ....

ಮನಮೋಹಕ..
ಮನೋಹರ..
ಸುಂದರ ದ್ರಷ್ಯ ಕಾವ್ಯ....
ಈ ಫೋಟೊಗಳನ್ನು ನೋಡುತ್ತಿದ್ದರೆ
ಕವಿ ಹ್ರದಯ ಕವನ ಬರೆಯಬಲ್ಲದು...

ಒಂದಕ್ಕಿಂತ ಒಂದು ಅದ್ಭುತ...!

ಇವುಗಳನ್ನು ನೋಡುವದೇ ಒಂದು ಸುಂದರ ಅನುಭೂತಿ....!

ವಾಹ್...!!

b.suresha said...

ಅದ್ಭುತವಾದ ಫೋಟೊಗಳಿವೆ, ಮಲ್ಲಿಕಾರ್‍ಜುನ್.
ಥ್ಯಾಂಕ್ಸ್

ಚಂದ್ರಕಾಂತ ಎಸ್ said...

ನಾವು ಹಿಂದೊಮ್ಮೆ ಈ ಸ್ಥಳಕ್ಕೆ ಭೇಟಿಕೊಟ್ಟು ದೋಣಿವಿಹಾರ ನಡೆಸಿದ್ದೆವು. ಆಗ ನಾವು ನೋಡಿದ್ದು ಆನೆಗಳನ್ನು ಮಾತ್ರ. ಈಗ ನಿಮ್ಮ ಚಿತ್ರಗಳನ್ನು ನೋಡುತ್ತಿದ್ದರೆ ನಾವೂ ಆ ವಿಹಾರದ ಒಂದು ಭಾಗವೇ ಆದಂತನಿಸುತ್ತದೆ. ಒಣಮರದ ಕನಸು.. ಮತ್ತು ಆಕ್ಟೋಪಸ್ ಅಲ್ಲ... ಚಿತ್ರಗಳು ತುಂಬಾ ಇಷ್ಟವಾದವು

santasajoy said...

ಅದ್ಭುತ ಫೋಟೋಗಳು,ಸುಂದರ ಅಡಿಬರಹ,ಎಲ್ಲವೂ ಮನಮೋಹಕ.

shivu said...

ಮಲ್ಲಿಕಾರ್ಜುನ್,

ಪೆರಿಯಾರ್ ನದಿಯ ಥೇಕಡಿ ಅಭಯಾರಣ್ಯ ನನ್ನ ಇಷ್ಟದ ಪ್ರವಾಸಿ ಥಾಣಗಳಲ್ಲಿ ಒಂದು. ಚಿತ್ರಗಳನ್ನು ನೋಡಿದಾಗ ನಾವೆಲ್ಲಾ ಕಳೆದ ಬಾರಿ ಒಟ್ಟಿಗೆ ಹೋಗಿದ್ದಾ ನೆನಪು ಮರುಕಳಿಸಿತು...

ನೀರಿನಲ್ಲಿ ಅರೆಮುಳುಗಿದ ಒಣಮರಗಳ ವಿನ್ಯಾಸಗಳು ನೋಡುಗನ ಮನಸ್ಸನ್ನು ಸೆಳೆಯುತ್ತವೆ....

ಅಲ್ಲಿನ ಸಾಕಷ್ಟು ಪಕ್ಷಿಗಳ ಚಿತ್ರಗಳನ್ನು ಸೆರೆಯಿಡಿದಿದ್ದೀರಿ...
ಮೂರು ಪೈಡ್ ಕಿಂಗ್‍ಫಿಶರುಗಳ ಹಾರಾಟದ ಫೋಟೋ ತುಂಬಾ ಇಷ್ಟವಾಯಿತು...ಅದನ್ನು ಇನ್ನಷ್ಟು ಕ್ಲೋಸಪ್‌ನಲ್ಲಿ ಸೆರೆಯಿಡಿದಿದ್ದರೇ ಒಂದು ಒಳ್ಳೇಯ ಸ್ಪರ್ಧಾತ್ಮಕ ಚಿತ್ರವೆನಿಸುತ್ತಿತ್ತೇನೋ....ಅದು ಈಗಲೂ ತಾಂತ್ರಿಕವಾಗಿ ಉತ್ತಮವಾಗಿದೆಯೋ ಅಂತ ಒಮ್ಮೇ ಪರೀಕ್ಷಿಸಿ ನೋಡಿ...
ಧನ್ಯವಾದಗಳು..

Ravi Hegde said...

ನಿಮ್ಮ ಬಗ್ಗೆ ಕೇಳಿದ್ದೆ ಮತ್ತು ಓದಿದ್ದೆ.
ಇವತ್ತು ನಿಮ್ಮ ಬ್ಲಾಗ್ ದರ್ಶನ ವಾಯಿತು.
ಫೋಟೋಗಳು ಚೆನ್ನಾಗಿವೆ.

ರವಿ.

sunaath said...

ಕೇರಳದ ಪಕ್ಷಿಗಳ ಹಾಗೂ ನಿಸರ್ಗದ ಸೌಂದರ್ಯವನ್ನು ಅದ್ಭುತವಾಗಿ ಸೆರೆ ಹಿಡಿದಿದ್ದೀರಿ. ಅಭಿನಂದನೆಗಳು.

jayalaxmi said...

ಮಲ್ಲಿಕಾರ್ಜುನ್, ತುಂಬಾ ದಿನಗಳ ನಂತರ ನಿಮ್ಮ ಬ್ಲಾಗ್‍ಗೆ ಭೇಟಿ ನೀಡುತ್ತಿರುವೆ,ತುಂಬಾ ಚೆಂದದ ಫೋಟೊಸ್..
ಮುಖವಾಡದ ಫೋಟೋಸ್ ಕೂಡಾ ಸೂಪರ್.

vee said...

ಉತ್ತಮವಾದ ಫೋಟೋಗ್ರಾಫಿ... ನಿಮ್ಮ ಬ್ಲಾಗ್ ಅದೆಂಗೆ ಇಷ್ಟು ದಿನ ಕಾಣದೇ ಹೋಯಿತೋ ತಿಳಿಯುತ್ತಿಲ್ಲ.
ತುಂಬಾ ಚೆನ್ನಾಗಿದೆ.

ಉಮೇಶ ಬಾಳಿಕಾಯಿ said...

ಮಲ್ಲಿ ಸರ್,

ಚಿತ್ರಗಳು ಒಂದಕ್ಕಿಂತ ಒಂದು ಅದ್ಭುತ... ಆದರೆ ಈ ಪೆರಿಯಾರ್ ಚಿತ್ರಗಳಲ್ಲಿ ಒಂದೂ ಪ್ರಾಣಿಯ ಚಿತ್ರ ಕಾಣದೆ ನಿರಾಶೆಯಾಯಿತು :(

- ಉಮೀ

ವಿನುತ said...

ಹೇಳಲು ಏನನ್ನೂ ಉಳಿಸಿಲ್ಲ ನೀವು. ಎಲ್ಲವನ್ನೂ ನಿಮ್ಮ ಚಿತ್ರಗಳು ಹೇಳುತ್ತಿವೆ. ಇ೦ಥದೊ೦ದು ಸು೦ದರ ಬ್ಲಾಗಿಗಾಗಿ ನಿಮಗೆ ಧನ್ಯವಾದಗಳು.

Bedre Manjunath said...

Wonderful.
These photos made me remember the intimate moments I spent at the Periyar riverbank. I went to see the school for elephants there and wrote an article on that also. It is really a fascinating experience.
Yours,
Bedre Manjunath

PARAANJAPE K.N. said...

ಬಹಳ ಚೆನ್ನಾಗಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ಕೇಶವ್ ಕುಲಕರ್ಣಿಯವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಮೋದ್ ನಾಯಕ್ ಅವರೆ,
ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ಜಾಸ್ತಿ ಹೊಗಳಿದ್ದೀರಿ. ಉಬ್ಬಿಹೋಗಿರುವೆ! ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸುರೇಶ್ ಸರ್,
ತುಂಬಾ ತುಂಬಾ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಕಾಂತ ಮೇಡಂ,
ಶಿವು ಮತ್ತು ನಾನು ಕಳೆದ ಬಾರಿ ಹೋದಾಗ ಆನೆಗಳನ್ನು ನೋಡಿ ಫೋಟೋ ತೆಗೆದಿದ್ದೆವು. ಈ ಬಾರಿ ಏನೋ ಕಾಣಲಿಲ್ಲ. ಹಾಗಾಗಿ ಬರಿ ಹಕ್ಕಿಗಳು ಮತ್ತು ಒಣಮರಗಳು!

ಮಲ್ಲಿಕಾರ್ಜುನ.ಡಿ.ಜಿ. said...

ಜಯಶ್ರೀ ಮೇಡಂ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನಾನು ನೀವು ಮತ್ತು ಮಂಜು ಕಳೆದ ಬಾರಿ ಥೇಕಡಿಗೆ ಹೋಗಿದ್ದದ್ದು. ಆಗ ಆನೆಗಳು ಕಂಡಿದ್ದವು. ಆದರೆ ಈ ಬಾರಿ ನೀರು ಕಡಿಮೆ ಇದ್ದದ್ದರಿಂದ ಕಾಣಲಿಲ್ಲ. ನಮ್ಮನ್ನು ಸದಾ ಆಕರ್ಷಿಸುವ ತಾಣಗಳಿವು.

ಮಲ್ಲಿಕಾರ್ಜುನ.ಡಿ.ಜಿ. said...

ರವಿ ಹೆಗಡೆಯವರೆ,
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು. ಹೀಗೇ ಬರುತ್ತಿರಿ.

ಮಲ್ಲಿಕಾರ್ಜುನ.ಡಿ.ಜಿ. said...

ಸುನಾತ್ ಸರ್,
ಧನ್ಯವಾದಗಳು. ಇನ್ನಷ್ಟು ಫೋಟೋಗಳಿವೆ. ಎಲ್ಲವನ್ನೂ ಬ್ಲಾಗಲ್ಲಿ ಹಾಕಲು ಸಾಧ್ಯವಾಗಲಿಲ್ಲ.

ಮಲ್ಲಿಕಾರ್ಜುನ.ಡಿ.ಜಿ. said...

ಜಯಲಕ್ಷ್ಮಿಯವರೆ,
ತುಂಬಾ ಥ್ಯಾಂಕ್ಸ್. ಆಗಾಗ ನನ್ನ ಬ್ಲಾಗಿಗೆ ಬರುತ್ತಿರಿ. ಪ್ರೋತ್ಸಾಹವಿರಲಿ.

ಮಲ್ಲಿಕಾರ್ಜುನ.ಡಿ.ಜಿ. said...

Vee ಅವರೆ,
ನನ್ನ ಬ್ಲಾಗಿಗೆ ಸ್ವಾಗತ. ಹೀಗೇ ಆಗಾಗ ಬಂದು ಪ್ರೋತ್ಸಾಹಿಸುತ್ತಿರಿ.

ಮಲ್ಲಿಕಾರ್ಜುನ.ಡಿ.ಜಿ. said...

ಉಮೇಶ್ ಬಾಳಿಕಾಯಿಯವರೆ,
ಧನ್ಯವಾದಗಳು. ಕಾಡೆಮ್ಮೆ, ಕಾಡುಹಂದಿಯ ಚಿತ್ರಗಳನ್ನು ತೆಗೆದಿರುವೆ. ಅವು ಈ ಚಿತ್ರಗಳ ಮಧ್ಯೆ ಬೇಡವೆನಿಸಿ ಹಾಕಲಿಲ್ಲವಷ್ಟೆ.

ಮಲ್ಲಿಕಾರ್ಜುನ.ಡಿ.ಜಿ. said...

ಧನ್ಯವಾದಗಳು ವಿನುತ ಅವರೆ.

ಮಲ್ಲಿಕಾರ್ಜುನ.ಡಿ.ಜಿ. said...

ಬೇದ್ರೆ ಮಂಜುನಾಥ್ ಸರ್,
ನಿಮ್ಮ ಅಭಿಮಾನಿ ನಾನು. ನೀವು ನನ್ನ ಬ್ಲಾಗನ್ನು ಮೆಚ್ಚಿದು ನನಗೆ ತುಂಬ ಸಂತೋಷವಾಯಿತು. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ಧನ್ಯವಾದಗಳು.

b.saleem said...

ಮಲ್ಲಿಕಾರ್ಜುನ ಸರ್
ಪೆರಿಯಾರ್ ನದಿಯ ಥೇಕಡಿ ಅಭಯಾರಣ್ಯದ ಬಗ್ಗೆ ಸಾಕಷ್ಟು
ಕೆಳಿದ್ದೆ ನಿವು ಅದನ್ನು ಅದ್ಭುತವಾಗಿ ತೊರಿಸಿದ್ದಿರಿ. ಅದ್ಭುತ ಫೋಟೋಗಳು,ಸುಂದರವಾದ ಬರಹ,ಎಲ್ಲವೂ ಚನ್ನಾಗಿದೆ.
ಅಂದ ಹಾಗೆ ನಿವು ಯಾವ ಕ್ಯಾಮರ, ಲೆನ್ಸ ಬಳಸುತ್ತಿರಿ

ಜ್ಞಾನಮೂರ್ತಿ said...

ನಿಮ್ಮ ಕ್ಯಾಮರ ಕಣ್ಣಲ್ಲಿ ಇನ್ನು ಯಾವ ಯಾವ ತರವಾದ ಫೋಟೋಗಳಿವೆ ಸರ್...
ಅದ್ಭುತ ಫೋಟೋಗಳು....
ಧನ್ಯವಾದಗಳು....

asha said...

ತುಂಬಾನೇ ಚೆನ್ನಾಗಿದೆ....
ಖುಷಿಯಾಗುತ್ತದೆ...
ಅಭಿನಂದನೆಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಸಲೀಂ ಅವರೆ,
ಧನ್ಯವಾದಗಳು. ನನ್ನ ಬಳಿ ಇರುವ ಕ್ಯಾಮೆರಾ Canon 30D ಮತ್ತು lens Canon 100-400mm.

ಕ್ಷಣ... ಚಿಂತನೆ... Think a while said...

ಸರ್‍, ಪೆರಿಯಾರ್‌ ವನ್ಯಧಾಮದ ದೃಶ್ಯಗಳನ್ನು ನೋಡುತ್ತಿದ್ದರೆ ಈ ಕ್ಷಣವೇ ಅಲ್ಲಿ ಹೋಗಿ ಬರೋಣ ಎನ್ನಿಸುವಂತಿದೆ. ಸುಂದರವಾದ ಚಿತ್ರಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು. ಇದರ ಜೊತೆಗೆ ಸ್ವಲ್ಪ ಸ್ಥಳ ಪರಿಚಯ -ಮಾರ್ಗ ಮಾಹಿತಿ ಇದ್ದಿದ್ದರೆ ಚಿತ್ರ-ಲೇಖನ ಪ್ರವಾಸಿಗರಿಗೆ ಮತ್ತಷ್ಟು ಅನುಕೂಲಕರವಾಗುತ್ತಿತ್ತು.

ವಿಶ್ವಾಸದೊಂದಿಗೆ,

Guru's world said...

ಮಲ್ಲಿಕಾರ್ಜುನ್
....ವಾಃ ...ನಿಮ್ಮ ಫೋಟೋ ಕಲೆಯ ಬಗ್ಗೆ ಬೇರೆ ಮಾತು ಇಲ್ಲ... ನಿಮ್ಮ ಎಲ್ಲ ಫೋಟೋಗಳನ್ನು ನೋಡಿ... ಏನು ಹೇಳಲು ಬರುತ್ತೀರಾ...ನಿಜವಾಗ್ಲೂ ತುಂಬ ಚೆನ್ನಾಗಿ ಇದೆ..... ನಿಮ್ಮ ಲೇಖನದಿಂದ ಇನ್ನೊಮ್ಮೆ ತೇಕಡಿ ಹಾಗು ಅಲ್ಲಿನ ದೋಣಿ ವಿಹಾರ ನೆನಪಾಯಿತು,,,,,
ಧನ್ಯವಾದಗಳು.....

ಶಿವಪ್ರಕಾಶ್ said...

kerala is being called as god's own country.
by seeing your photos, it seems true to me.

Superb and amazing photos.
Great timing...

ಮನಸು said...

foto;s ella tumba chennagide...
nenne ETV madhyanahada news nalli nimma interview torisidru congrats..
namge nodi kushi aytu..
all the best

Deepasmitha said...

ಮಲ್ಲಿಕಾರ್ಜುನ್, ಫೋಟೋಗಳು ಅದ್ಭುತ. Picture postcard ಅಂತಾರಲ್ಲ ಹಾಗಿವೆ ಹೆಚ್ಚಿನವು. ಮೊದಲೆಲ್ಲ greeting card ಚಿತ್ರಗಳು ಹೀಗೇ ಇರುತ್ತಿದವು.

ರಜನಿ. ಎಂ.ಜಿ said...

ನೀವು ಅದೃಷ್ಟವಂತರು. ಕಳೆದ ವರ್ಷ ನಾನು ಅಲ್ಲಿಗೆ ಹೋಗಿದ್ದೆ. ಎಲ್ಲೋ ಒಂದೆರಡು ಹಕ್ಕಿಗಳು ಕಾಣಸಿಕ್ಕಿತ್ತು ಅಷ್ಟೇ. ನಮ್ಮ ಮನೆಯ ಬಳಿಯೇ ಕಿಂಗ್‌ಫಿಷರ್‌‌ ಕಾಣುತ್ತದೆ ಬಿಡು ಎಂದುಕೊಂಡು ಕೇವಲ ದೋಣಿ ವಿಹಾರದ ಮಜ ಅನುಭವಿಸಿ ಬಂದಿದ್ದೆವು. ಆದರೆ ಕೇರಳ ಟೂರಿಸಂ ಹೇಗಿದೆ ಎಂದರೆ ಅದನ್ನು ನೋಡಲೆಂದು ದೋಣಿ ವಿಹಾರವಿಟ್ಟು, ಒಳ್ಳೆಯ ಪಬ್ಲಿಸಿಟಿ ಕೊಟ್ಟು ಅದನ್ನು ಮೆರಸಿದ್ದಾರೆ. ನಮ್ಮಲ್ಲಿ ಜೋಗದಂಥ ಜಾಗದಲ್ಲೇ ಏನೂ ಸೌಕರ್ಯವಿಲ್ಲ. ಟೂರಿಸಂ ಬೆಳೆಯುವುದು ಹೇಗೆ?

ಮಲ್ಲಿಕಾರ್ಜುನ.ಡಿ.ಜಿ. said...

ಜ್ಞಾನಮೂರ್ತಿಯವರೆ,
ತುಂಬಾ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಆಶಾ ಮೇಡಂ,
ನಿಮ್ಮ ಯಜಮಾನರ ಸಹವಾಸ.. ನೀವೂ ಬ್ಲಾಗಿಗೆ ಬಂದ್ರಾ!
ಖುಷಿಯಾಯ್ತು. ತುಂಬಾ ತುಂಬಾ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಕ್ಷಣ ಚಿಂತನೆ..ಚಂದ್ರಶೇಖರ್ ಸರ್,
ಧನ್ಯವಾದಗಳು. ಮಾಹಿತಿ ಹೆಚ್ಚಾಗಿ ಲೇಖನದ ಚಂದ ಕೆಡಬಹುದೆಂದು ಮತ್ತು ಇದು ಎಲ್ಲರಿಗೂ ತಿಳಿದಿರುವ ಪ್ರದೇಶವೆಂದು ಸ್ಥಳ ಪರಿಚಯ ಕೊಡಲಿಲ್ಲ. ಇನ್ನು ಮುಂದೆ ಕೊಡುವೆ. ನಿಮ್ಮ ಸಲಹೆ, ಸೂಚನೆಗೆ ಸ್ವಾಗತ.

ಮಲ್ಲಿಕಾರ್ಜುನ.ಡಿ.ಜಿ. said...

ಗುರು ಅವರೆ,
ಥ್ಯಾಂಕ್ಸ್. ನನ್ನ ಆಸೆ ಕೂಡ ಅದೇ. ನೀವೆಲ್ಲಾ ಮತ್ತೊಮ್ಮೆ ಪೆರಿಯಾರ್ ನಲ್ಲಿ ದೋಣಿ ವಿಹಾರ ಮಾಡಲಿ ಎಂಬುದು.

ಮಲ್ಲಿಕಾರ್ಜುನ.ಡಿ.ಜಿ. said...

ಶಿವಪ್ರಕಾಶ್ ಅವರೆ,
ಥ್ಯಾಂಕ್ಸ್. God's own Country ಅನ್ನುವುದರಲ್ಲಿ ವಿಶೇಷವಿಲ್ಲ. ತುಂಬಾ ಚೆನ್ನಾಗಿ ಇಟ್ಟುಕೊಂಡಿದ್ದಾರೆ ಮತ್ತು ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ ಕೇರಳ.

ಮಲ್ಲಿಕಾರ್ಜುನ.ಡಿ.ಜಿ. said...

ಮನಸು ಮೇಡಂ,
ಧನ್ಯವಾದಗಳು. ನಾನು ಈಟಿವಿ ನ್ಯೂಸ್ ನೋಡಲಿಲ್ಲ. ನನ್ನ ಮಗನ ಶಾಲೆಗೆ ಹೋಗಿದ್ದೆ. ನನ್ನತ್ತೆಯ ಮಗಳು ಚಿಕ್ಕಮಗಳೂರಿನಿಂದ ಫೋನ್ ಮಾಡಿ ಹೇಳಿದಾಗಲೇ ಗೊತ್ತಾಗಿದ್ದು.

ಮಲ್ಲಿಕಾರ್ಜುನ.ಡಿ.ಜಿ. said...

ದೀಪಸ್ಮಿತ ಅವರೆ,
ಫೋಸ್ಟ್ ಕಾರ್ಡ್ ರೀತಿ ಇದೆಯಾ? ಧನ್ಯವಾದಗಳು. ನಾನು ಹೊಸ ವರ್ಷಕ್ಕೆ ಸ್ನೇಹಿತರಿಗೆ ನನ್ನ ಫೋಟೋಗಳನ್ನು ಕಾರ್ಡ್ ಮೇಲೆ ಅಂಟಿಸಿ ಶುಭಾಶಯ ತಿಳಿಸುವುದು ರೂಢಿ.

ಮಲ್ಲಿಕಾರ್ಜುನ.ಡಿ.ಜಿ. said...

ರಜನಿ ಮೇಡಂ,
ಶಿವು ಮತ್ತು ನಾನು ಎರಡು ವರ್ಷದ ಹಿಂದೆ ಹೋದಾಗ ಆನೆಗಳ ಚಿತ್ರಗಳನ್ನೆಲ್ಲಾ ತೆಗೆದಿದ್ದೆವು. ನೀರು ಕೂಡ ತುಂಬಾ ಇತ್ತು. ಆ ಲೆಕ್ಕದಲ್ಲಿ ಈ ಬಾರಿ ಕಡಿಮೆ sighting. ಆದರೂ ನೀವು ಹೇಳಿದಂತೆ ಹುಲ್ಲನ್ನು ಹೂವಿನಂತೆ ತೋರಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಾರೆ. ನಾವು ಆ ವಿಷಯದಲ್ಲಿ ಅವರಿಂದ ಬಹಳ ಕಲಿಯುವುದಿದೆ.

ಜಿ.ಎಸ್.ಬಿ. ಅಗ್ನಿಹೋತ್ರಿ said...

very very nice...