ನಾಗೇಂದ್ರ ಮುತ್ಮುರ್ಡು, ನನ್ನ ಆಪ್ತ ಸ್ನೇಹಿತರಲ್ಲೊಬ್ಬರು. ಅವರನ್ನು ಬೆಹ್ರೆನ್ ನ ಮನಾಮದಲ್ಲಿನ ಸಾರ್ಥ ಫೌಂಡೇಶನ್ ಅವರು ತಾ: ೧೨=೬=೨೦೦೯ ರಂದು ಸನ್ಮಾನಿಸಲಿದ್ದಾರೆ. ಈ ಸಂತಸದ ಸಂಗತಿಯನ್ನು ಬ್ಲಾಗ್ ಗೆಳೆಯರೊಂದಿಗೆ ಹಂಚಿಕೊಳ್ಳುವುದು ನನ್ನ ಉದ್ದೇಶ. ನಾಗೇಂದ್ರ ಅಪ್ಪಟ ಗ್ರಾಮೀಣ ಪ್ರತಿಭೆ. ಸಿರಸಿ ತಾಲ್ಲೂಕಿನ ಮುತ್ಮುರ್ಡು ಎಂಬ ಹಳ್ಳಿಯ ಅಡಿಕೆ ಕೃಷಿಕರು. ಅವರ ಹಳ್ಳಿಗೆ ಬಸ್ಸಿಲ್ಲ, ಟಾರ್ ರಸ್ತೆಯಿಲ್ಲ ಮತ್ತು ಮೊಬೈಲ್ ಸಿಗ್ನಲ್ಲೂ ಇಲ್ಲ. ಅಲ್ಲಿದ್ದೇ ಅವರು ಛಾಯಾಗ್ರಹಣದಲ್ಲಿ ದೇಶ ವಿದೇಶಗಳ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಉತ್ತಮ ಚಿತ್ರಲೇಖನಗಳನ್ನು ಪತ್ರಿಕೆಗಳಲ್ಲಿ ಬರೆಯುವರು. ಆದಿಕೈಲಾಸಕ್ಕೆ ಚಾರಣ ಹಾಗೂ ಕೈಲಾಸ ಮಾನಸ ಸರೋವರಕ್ಕೆ ಹೋಗಿಬಂದಿರುವರು. ಇವರ ಸಾಧನೆಯನ್ನು ಗಮನಿಸಿ ಬೆಹ್ರೆನಿನ ಕನ್ನಡಿಗರು ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರಿಂದ ಸನ್ಮಾನಿಸುತ್ತಿದ್ದಾರೆ. ಈ ಹೆಮ್ಮೆಯ ಮತ್ತು ಸಂತಸದ ಸಂಗತಿಯನ್ನು ನಾಗೇಂದ್ರರ ಚಿತ್ರಗಳೊಂದಿಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ನಾಗೇಂದ್ರರಿಗೆ ಅಭಿನಂದನೆಗಳು.
This is merely a show put on by puppets!
10 hours ago
15 comments:
ಮಲ್ಲಿಕಾರ್ಜುನ್....
ಎಂಥಹ ಅದ್ಭುತ .., ಸುಂದರ..
ಮನಮೋಹಕ ಫೋಟೊಗಳು....!!
ನಾಗೇಂದ್ರರ ಪ್ರತಿಭೆಗೆ ಇವು ಸಾಕ್ಷಿ....
ನನಗೂ ಅವರ ಸಂಗಡ ಗೆಳೆತನ ಇದೆಯೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ...
ಅವರಿಗೆ ಶುಭ ಹಾರೈಕೆಗಳು...
ಅವರ ಪ್ರತಿಭೆಗೆ ಇನ್ನಷ್ಟು ಪುರಸ್ಕಾರಗಳು ಬರಲಿ....
ಅವರಿಗೆ ಅಭಿನಂದನೆ ಹೇಳಲು ಅವಕಾಶ ಮಾಡಿಕೊಟ್ಟ
ನಿಮಗೂ ಧನ್ಯವಾದಗಳು...
ಪ್ರಕಾಶ್ ಸರ್,
ನಾಗೇಂದ್ರ ಫೋನ್ ಮಾಡಿ ಹೇಳಿದಾಗ ನಿಜಕ್ಕೂ ತುಂಬಾ ಸಂತಸವಾಯ್ತು. ಚಿಕ್ಕ ಊರಿನ ಪ್ರತಿಭೆಗಳನ್ನು ಗುರುತಿಸಲೂ ಒಂದು ವಿಶಾಲ ಹೃದಯವಿರಬೇಕು. ಚಿಕ್ಕ ಹಳ್ಳಿಯಲ್ಲಿದ್ದುಕೊಂಡು ಸಾಧನೆ ಮಾಡುವುದು ತುಂಬಾ ಕಷ್ಟ ಸಹ. ನಮ್ಮೆಲ್ಲರ ಸವಿಹಾರೈಕೆಗಳು ನಾಗೇಂದ್ರರಿಗೆ.
ನಾಗೇಂದ್ರ ಅವರಿಗೆ ಅಭಿನಂದನೆಗಳು!! ಎಲೆ ಮರೆಯ ಕಾಯಿಯಂತಿದ್ದ ನಾಗೇಂದ್ರ ಅವರನ್ನು ಪರಿಚಯಿಸಿ, ಅವರ ಫೋಟೋಗಳನ್ನು ತೋರಿಸಿದಕ್ಕಾಗಿ ನಿಮಗೆ ಧನ್ಯವಾದಗಳು....
ಹಾಗೆಯೇ ತಡವಾಗಿಯೇ ಆದರೂ ನಿಮಗೂ ಪ್ರತಿಷ್ಟಿತ ARPS ಮನ್ನಣೆ ದೊರೆಕಿದಕ್ಕೆ ಹೃತ್ಪೂರ್ವಕ ಅಭಿನಂದನೆಗಳು:))ಈಗಷ್ಟೆ ಶಿವು ಅವರ ಬ್ಲಾಗ್ ಓದಿದಾಗ ವಿಚಾರ ತಿಳಿಯಿತು!
ರೂಪಶ್ರೀ ಅವರೆ,
ಧನ್ಯವಾದಗಳು. ನಾಗೇಂದ್ರರದ್ದೇ ಒಂದು ಬ್ಲಾಗ್ ಬರಲಿ, ಅದರಲ್ಲಿ ಅವರು ಚಿತ್ರಲೇಖನಗಳು ಬರೆಯಲಿ ಎಂದು ನಮ್ಮ ಆಸೆ. ಆದರೆ ಅವರಿರುವಲ್ಲಿ ಇಂಟರ್ನೆಟ್ ಇಲ್ಲ. ಆದರೂ ಮುಂದೆ ಬರುವುದೆಂಬ ದೂರದಾಸೆ. ಹಾಗಾಗಿ ನಾನು ಮತ್ತು ಶಿವು ನಾಗೇಂದ್ರರ ಎರಡೆರಡು ಚಿತ್ರಗಳನ್ನು ಮಾತ್ರ ಹಾಕಿದ್ದೇವೆ.
ನಾಗೇ೦ದ್ರರಿಗೆ ಹಾರ್ದಿಕ ಅಭಿನ೦ದನೆಗಳು
ಅಭಿನಂದನೆಗಳು ನಾಗೇಂದ್ರರವರಿಗೆ. ಚಿತ್ರಪಟಗಳು ತುಂಬಾ ಚೆನ್ನಾಗಿವೆ.
ಮಲ್ಲಿಕಾರ್ಜುನ ಸರ್, ಶ್ರೀ ನಾಗೇಂದ್ರ ಮುತುರ್ಡು ಅವರ ಪರಿಚಯಕ್ಕೆ ಧನ್ಯವಾದಗಳು. ಚಿತ್ತಾಕರ್ಷಕ ಛಾಯಾಚಿತ್ರಗಳು ಅದ್ಭುತವಾಗಿವೆ. ನಮ್ಮನ್ನೇ ಮಾನಸಸರೋವರ, ಆದಿಕೈಲಾಸಕ್ಕೆ ಕರೆದೊಯ್ಯುವಂತಿವೆ. ಅವರಿಗೆ ಅಭಿನಂದನೆಗಳು. ನಿಮ್ಮೆಲ್ಲರ ಸಂತಸದಲ್ಲಿ ನಾವೂ ಭಾಗಿಗಳಾಗಿದ್ದೇವೆ.
ಸಸ್ನೇಹಗಳೊಂದಿಗೆ,
ಚಂದ್ರಶೇಖರ ಬಿ.ಎಚ್.
ಮಲ್ಲಿಕಾರ್ಜುನ್,
ನಾಗೇ೦ದ್ರ ರನ್ನು ಪರಿಚಯಿಸಿದ್ದಕ್ಕೆ ತು೦ಬಾ ಥ್ಯಾ೦ಕ್ಸ್.ಅವರನ್ನು ಸನ್ಮಾನಿಸುತ್ತಿರುವ ಅನಿವಾಸಿ ಕನ್ನಡಿಗರ ಸಾರ್ಥ ಫೌ೦ಡೇಶನ್ ಗೆ ಡಬ್ಬಲ್ ಥ್ಯಾ೦ಕ್ಸ್.
ಹಳ್ಳಿಯಲ್ಲಿಯೇ ಸಾಕಷ್ಟು ಪ್ರತಿಭೆಗಳು ಹುಟ್ಟಿಕೊಳ್ಳುವದು. ನಾಗೆಂದ್ರ ಅಂಥವರನ್ನು ಗುರುತಿಸಿ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಅವರಿಗೆ ಅಭಿನಂದನೆಗಳು.
ಈ ಫೋಟೋಗಳು ನೋಡೋಕೆ painting ತರಹಾ ಕಾಣಿಸ್ತಿವೆ. ಎಷ್ಟು ಸುಂದರವಾದ composition ಇದು!
ನಾಗೇಂದ್ರರಿಗೆ ಅಭಿನಂದನೆಗಳು.
ನಾಗೇಂದ್ರರಿಗೆ ಅಭಿನಂದನೆಗಳು...
ಇನ್ನು ಹೆಚ್ಚು ಹೆಚ್ಚು ಸಾಧನೆ ಮಾಡಲೆಂದು ಹಾರೈಸುತ್ತೇನೆ...
ಮಲ್ಲಿಕಾರ್ಜುನ, ತುಂಬ ಖುಷಿಯ ವಿಚಾರ. ಅವರ ಫೋಟೊಗ್ರಫಿಯ ಬಗ್ಗೆಯಂತೂ ಹೇಳಿದಷ್ಟೂ - ಹೊಗಳಿದಷ್ಟೂ ಕಡಿಮೆಯೇ.
ನಾಗೇಂದ್ರ ಮುತ್ಮುರ್ಡು ನನ್ನ ಸಂಬಂಧಿ ಹೇಳಿಕೊಳ್ಳಲು ನನಗೆ ಖುಷಿ..! ಇನ್ನೊಮ್ಮೆ ಅವರನ್ನು ಭೇಟಿಯಾದಾಗ ಒಂದಷ್ಟು ಫೋಟೋಗಳನ್ನು ‘ಕದ್ದು ತರುವ’ ಇರಾದೆ ಇದೆ... :-)
ಉತ್ತಮ ವ್ಯಕ್ತಿ ಪರಿಚಯಕ್ಕೆ ಧನ್ಯವಾದಗಳು ಹಾಗೂ ನಾಗೇ೦ದ್ರರಿಗೂ ಆವರ ಸಾಧನೆ, ಪರಿಶ್ರಮಕ್ಕೆ ಅಭಿನ೦ದನೆಗಳು.
ಮು೦ದಿನ ಅವರ ಎಲ್ಲ ಕಾರ್ಯಗಳಿಗೂ ಶುಭಹಾರೈಕೆಗಳು.
ಅಪ್ಪಟ ಗ್ರಾಮೀಣ ಪ್ರತಿಭೆಯನ್ನು ನೀವು ಮತ್ತು ಶಿವು ಗುರುತಿಸಿದ್ದೀರಿ. ನಾಗೇಂದ್ರ ಮತ್ತು ನಿಮಗೂ ಅಭಿನಂದನೆಗಳು. ಫೋಟೋಗಳಂತು ತುಂಭಾ ಚೆನ್ನಾಗಿವೆ.
ನಾಗೇಂದ್ರ ಅವರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಅವರಿಗೆ ನಮ್ಮ ಶುಭ ಹಾರೈಕೆಗಳು
Post a Comment