Thursday, June 4, 2009

ಮುಖವಾಡ

ಮುಖವಾಡಗಳೆಂದರೆ ಮುಖವನ್ನು ಮರೆಸುವ ಸಾಧನಗಳೆಂದು ಕರೆಯಬಹುದು. ಮೊದಲಿನ ಶಿಲಾಯುಗದ ಚಿತ್ರಗಳಲ್ಲಿ ಮುಖವಾಡಗಳನ್ನು ಬಳಸಿದ ಚಿತ್ರಗಳಿವೆಯಂತೆ. ಭಾರತ, ಗ್ರೀಕ್, ಫ್ರಾನ್ಸ್, ಚೈನಾ, ಇಂಡೋನೇಷ್ಯಾ, ಜಪಾನ್ ಮೊದಲಾದ ದೇಶಗಳಲ್ಲಿ ಪ್ರಾಚೀನ ಕಾಲದಿಂದಲೂ ಮುಖವಾಡಗಳನ್ನು ಬಳಸುತ್ತಿದ್ದರು. ಪ್ರಾಚೀನ ಗ್ರೀಕ್ ರಂಗಭೂಮಿಯಲ್ಲಿ ಮುಖವಾಡಗಳು ವಿಶೇಷವಾಗಿ ಬಳಕೆಯಲ್ಲಿದ್ದವು. ಜಪಾನಿನ "ನೋ" ನಾಟಕಗಳಲ್ಲೂ ಮುಖವಾಡಗಳನ್ನು ಬಳಸುತ್ತಿದ್ದರು. ಅಲ್ಲದೆ ಇತ್ತೀಚಿನ ಸಾಂಕೇತಿಕ ನಾಟಕಗಳಲ್ಲಿ ಈ ಮುಖವಾಡಗಳ ಬಳಕೆಯನ್ನು ಕಾಣಬಹುದು.
ಮುಖವಾಡದ ಬಣ್ಣಗಾರಿಕೆಯ ಸೊಬಗನ್ನು ಗಮನಿಸಿದರೆ ಜನಪದ ಚಿತ್ರಕಲೆಯ ಶ್ರೇಷ್ಠತೆಯನ್ನು ಗುರುತಿಸಬಹುದು. ನಮ್ಮಲ್ಲಿ ಜಾತ್ರೆ, ಗ್ರಾಮ ದೇವತೆಗಳ ಉತ್ಸವ, ಭೂತಾರಾಧನೆ, ದೇವರ ಕುಣಿತ, ಸೋಮನ ಕುಣಿತ, ಹುಲಿವೇಷ ಕುಣಿತ, ಸಿಂಹನೃತ್ಯ, ಗಾರುಡಿಕುಣಿತಗಳಲ್ಲಿ ವಿವಿಧ ರೀತಿಯ ಮುಖವಾಡಗಳನ್ನು ಧರಿಸುವುದನ್ನು ಕಾಣಬಹುದು.
ಕೇರಳದ ಕೃಷ್ಣಾಟ್ಟಂ ಕಲಾಪ್ರದರ್ಶನದಲ್ಲಿ ಬಳಸುವ "ಘಂಟಕರಣ" ಮುಖವಾಡ.
ಕರ್ನಾಟಕದ ರಾಕ್ಷಸ ಮುಖವಾಡ.

ಮಹಾರಾಷ್ಟ್ರದ "ಭೈರವ" ಮುಖವಾಡ.

ಹಿಮಾಲಯದ ಬೌದ್ಧರ "ರಾಕ್ಷಸ" ಮುಖವಾಡ.

ದಕ್ಷಿಣ ಕವಾರದ "ಭೂತನಾಥ"ನ ಮುಖವಾಡ.

ಹಿಮಾಲಯದ ಬೌದ್ಧರ ಅಲಂಕಾರಿಕ ಮುಖವಾಡ.

ತಮಿಳುನಾಡಿನ ಭಾಗವತ ಮೇಳದ "ಗಣೇಶ" ಮುಖವಾಡ.

ಪಶ್ಚಿಮ ಬಂಗಾಲದ ಛಾವು ಕಲಾ ಪ್ರದರ್ಶನದ "ಹರ್-ಹರ್" ಮುಖವಾಡ.

ಲಡಾಕ್ ನ "ಗುರುಖಾಸಿಮ್" ಮುಖವಾಡ.

ಒರಿಸ್ಸಾದ ಸಾಹಿಜಾತ್ರಾದಲ್ಲಿ ಬಳಸುವ "ಗರುಡ" ಮುಖವಾಡ.

ಒರಿಸ್ಸಾದ :ನರಸಿಂಹ" ಮುಖವಾಡ.

ಕೇರಳದ ಕೃಷ್ಣಾಟ್ಟಂ ಕಲಾಪ್ರದರ್ಶನದಲ್ಲಿ ಬಳಸುವ ಮುಖವಾಡ.

"ಸೂರ್ಯ" - ಮೈಸೂರಿನ ಅಲಂಕಾರಿಕ ಮುಖವಾಡ.

47 comments:

ರೂpaश्री said...

ವಾಹ್ ಸಕ್ಕತ್ ಕಲೆಕ್ಷನ್!!! ಹಿಮಾಲಯದಿಂದ ಕೇರಳದವರೆಗೆ ಎಲ್ಲಾ ಪ್ರದೇಶದ ಮುಖವಾಡಗಳನ್ನು ಸೆರೆ ಹಿಡಿದು ಪರಿಚಯಿಸಿದ್ದೀರ.

Rajesh Manjunath - ರಾಜೇಶ್ ಮಂಜುನಾಥ್ said...

ಮಲ್ಲಿಕಾರ್ಜುನ್ ಸರ್,
ಅದ್ಭುತ ಸಂಗ್ರಹ... ಬೊಂಬಾಟ್ ಸರ್. ವಿಭಿನ್ನವಾಗಿದೆ ಈ ಸಂಗ್ರಹ.

Ittigecement said...

ಹುಡುಕಾಟದ ಮಲ್ಲಿಕಾರ್ಜುನ್.....

ಎಲ್ಲಿಂದ ತರ್ತೀರೀ ಸರ್ ಇವೆಲ್ಲ....?
ಈ ಥರಹ ಇನ್ನೆಷ್ಟು ಸಂಗ್ರಹ ಇರಬಹುದು ನಿಮ್ಮಲ್ಲಿ...?
ಪ್ರತಿಯೊಂದೂ ಹೊಸತು....ಹೊಸತನ...!!
ವಿಭಿನ್ನ....ಹುಡುಕಾಟ....!!

ನಮಗೆ ಸಹಜವಾಗಿ ಇರಲಾಗದೆ...
ತೋರಿಕೆಗೆ ಇನ್ನೊಂದು ಸ್ವಭಾವ ತೋರಿಸುವದಕ್ಕೆ "ಮುಖವಾಡ" ಅನ್ನುತ್ತೇವೆ...
ನಮ್ಮ ಸಹಜ ಸ್ವಭಾವ ಬಿಟ್ಟು... ಬೇರೇ ಥರಹ ಇರುವದು...

ಆಧುನಿಕ ಬದುಕು "ಮುಖವಾಡದ" ಬದುಕು ಅಲ್ಲವಾ...?

ಒಳ್ಳೆಯತನಕ್ಕೆ..,ಒಳ್ಳೆಯ ಸ್ವಭಾವ ವ್ಯಕ್ತ ಪಡಿಸಲು...
ಬಹುಷಃ "ಮುಖವಾಡದ" ಅಗತ್ಯ ಕಡಿಮೆ ...
ಅಲ್ಲವಾ...?

ನಿಮ್ಮ ಹುಡುಕಾಟಕ್ಕೆ...
ಅಭಿನಂದನೆಗಳು...

Shivanand said...

ತುಂಬಾ ಚೆನ್ನಾಗಿವೆ.

Naveen ಹಳ್ಳಿ ಹುಡುಗ said...

ಅಣ್ಣ collection ಸೂಪರ್...

shivu.k said...

ಮಲ್ಲಿಕಾರ್ಜುನ್,

ಭಾರತದ ವಿವಿಧ ಪ್ರಾಂತ್ಯಗಳ ಚಿತ್ರ-ವಿಚಿತ್ರ ಮುಖವಾಡ ಚಿತ್ರಗಳು, ಪರಿಚಯದ ಜೊತೆಗೆ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ...ಹೊಸ ವಿಚಾರವೆನಿಸುತ್ತೆ. ಇದರ ಸರಣಿಯನ್ನು ಮಾಡಲು ನೀವ್ಯಾಕೆ ಪ್ರಯತ್ನಿಸಬಾರದು...

keep it up.

Unknown said...

ಮಲ್ಲಿಕಾರ್ಜುನ್ ಈಗ ಬರೀ ಫೋಟೋಗಳನ್ನಷ್ಟೇ ನೋಡಿದೆ. ತುಂಬಾ ಚೆನ್ನಾಗಿವೆ. ಅರ್ಜೆಂಟ್ ಕೆಲಸದ ಮೇಲೆ ಹೊರಗೆ ಹೋಗಬೇಕಾಗಿದೆ. ನಿಧಾನವಾಗಿ ಇನ್ನೊಮ್ಮೆ ನೋಡುತ್ತೇನೆ.

kanasu said...

hi! nice collection :)

ಬಾಲು said...

ಚೆನ್ನಾಗಿದೆ. ಒಳ್ಳೆಯ collection. ಕೆಲವೊಂದು ಫೋಟೋ ಗಳಲ್ಲಿ ಅದನ್ನು ಎಲ್ಲಿ ಬಳಸುತ್ತಾರೆ ಅಂತ ಇಲ್ಲ, ನಾಟಕ ಅಥವಾ ನೃತ್ಯ ಪ್ರಾಕಾರ ಯಾವುದು ಅಂತ ತಿಳಿಸಿದರೆ ಇನ್ನು ಚೆನ್ನಾಗಿರುತ್ತದೆ ಅಂತ ನನ್ನ ಅಭಿಪ್ರಾಯ.

ಆಮೇಲೆ ಒರಿಸ್ಸಾ ದ ಕೆಲವು ಮುಖವಾಡಗಳನ್ನು ನೋಡಿದ್ದೀನಿ ಅವು ತುಂಬ ಸುಂದರ ವಾಗಿ ಇರುತ್ತದೆ. ಹಳೆಯ ನೆನಪು ಗಳನ್ನೂ ಮತ್ತೆ ತರಿಸಿದ್ದಕ್ಕೆ ತುಂಬ ಥ್ಯಾಂಕ್ಸ್.

Unknown said...

amazing collection sir.

PaLa said...

ಎಲ್ಲಿ ಸಿಕ್ತ್ರೀ ಇಷ್ಟೊಂದು ಮುಖವಾಡಗಳು? ಸೂಪರ್ರಾಗಿವೆ ಕಲೆಕ್ಷನ್ ಮತ್ತು ಮಾಹಿತಿ.

ಪ್ರಮೋದ ನಾಯಕ said...

ಒಳ್ಳೆಯ ಫೋಟೋಗಳು..ಈ ಎಲ್ಲ ಮುಖವಾಡಗಳನ್ನು ನೋಡುತ್ತಿದ್ದರೆ ನಮ್ಮೂರ ಬಂಡೀಹಬ್ಬದಲ್ಲಿ ಆಡಿಸುವ ಮುಖವಾಡಗಳು ನೆನೆಪಿಗೆ ಬರುತ್ತಿವೆ...

ಕ್ಷಣ... ಚಿಂತನೆ... said...

ಸರ್‍, ಒಂದೊಂದು ಮುಖವಾಡವೂ ಒಂದೊಂದು ಶೈಲಿಯಲ್ಲಿವೆ. ಅವುಗಳ ಮಾಹಿತಿಗೂ ಧನ್ಯವಾದಗಳು. ಎಲ್ಲ ಮುಖವಾಡಗಳೂ ಒಂದು ಬಗೆಯ ಸಂತಸವನ್ನು ಕೊಡುತ್ತಿವೆ.

ಸಸ್ನೇಹಗಳೊಂದಿಗೆ,

ಚಂದ್ರಶೇಖರ ಬಿ.ಎಚ್.

ಶಿವಪ್ರಕಾಶ್ said...

ಮುಖವಾಡಗಳು ತುಂಬಾ ಚನ್ನಾಗಿದವೇ...

sunaath said...

Wonderful collection of wonderful ಮುಖವಾಡಗಳು. ನೋಡ್ತಾ ಹೋದಂತೆ ಖುಶಿ ಜಾಸ್ತಿಯಾಗ್ತಾ ಇತ್ತು. ನಿಮಗೆ ಧನ್ಯವಾದಗಳು.

PARAANJAPE K.N. said...

ಮಲ್ಲಿ,
ನಿಮ್ಮ ಹುಡುಕಾಟದ ಪ್ರಕ್ರಿಯೆ ಹೊಸ ಹೊಸದನ್ನು ಅನ್ವೇಶಿಸುವಲ್ಲಿ ಯಶಸ್ವಿಯಾಗುತ್ತಿದೆ. ಬಹಳ ಚೆನ್ನಾದ ಸ೦ಗ್ರಹ. ನಾನು ನೋಡಿದ, ನೋಡಿರದ ಮುಖವಾಡಗಳನ್ನು
ತೋರಿಸಿದ್ದೀರಿ. ಚೆನ್ನಾಗಿದೆ.

SSK said...

ಮಲ್ಲಿಕಾರ್ಜುನ ಅವರೇ,
ಬಹಳ ಅಧ್ಬುತವಾದ ಮುಖವಾಡಗಳ ಸಂಗ್ರಹ!!! ಪ್ರತಿಯೊಂದು ಮುಖವಾಡವೂ ವಿಶಿಷ್ಟವಾಗಿದೆ!!
ಇವುಗಳಿಗೆ ಪೂರಕವಾದ ವಿವರಣೆ ಲೇಖನಕ್ಕೆ ರಂಗು ತಂದಿದೆ!

Unknown said...

super !!!!!

Anonymous said...

hats off to u mallik. beautiful collection...

Umesh Balikai said...

ಮಲ್ಲಿ ಸರ್,

ಅದ್ಭುತ ಸಂಗ್ರಹ. ಈ ಹುಡುಕಾಟದ ಗೀಳು ನಿಮಗೆ, ಶಿವು ಸರ್ ಗೆ ಎಲ್ಲಿಂದ ಹತ್ಕೊಂಡಿದೆ?.. ಅವರೂ ಸಹ ಬರೀತಲೇ ಭೂಪಟಗಳು, ಟೋಪಿಗಳು ಹೀಗೆ ವಿವಿಧ ವಿಸ್ಮಯಗಳ ಹಿಂದೆ ಬಿದ್ದಿರ್ತಾರೆ. ಹೀಗೇ ಇನ್ನೂ ಏನೇನು ಅಡಗಿವೆಯೋ ನಿಮ್ಮಿಬ್ಬರ ಸಂಗ್ರಹದ ಬತ್ತಳಿಕೆಯಲ್ಲಿ.

ಮುಖವಾಡಗಳ ಅದ್ಭುತ ಲೋಕ ಪರಿಚಯಿಸಿದ್ದಕ್ಕೆ ವಂದನೆಗಳು.

-ಉಮೇಶ್

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಅವರೆ,
ಧನ್ಯವಾದಗಳು. ಸಾಧ್ಯವಾದಷ್ಟು ಸಂಗ್ರಹಿಸಲು ಪ್ರಯತ್ನಿಸಿರುವೆ. ಮಾಹಿತಿ ಸಿಕ್ಕಿದ್ದು ಕಡಿಮೆ. ಸಿಕ್ಕಷ್ಟು ಕೊಟ್ಟಿರುವೆ.

ಮಲ್ಲಿಕಾರ್ಜುನ.ಡಿ.ಜಿ. said...

ರಾಜೇಶ್ ಮಂಜುನಾಥ್,
ತುಂಬಾ ಥ್ಯಾಂಕ್ಸ್. ಸದಾ ವಿಭಿನ್ನವಾಗಿ ಚಿತ್ರ ಲೇಖನಗಳನ್ನು ಕೊಡಲು ಪ್ರಯತ್ನಿಸುತ್ತಿರುವೆ. ಹೀಗೇ ಇರಲಿ ನಿಮ್ಮ ಪ್ರೋತ್ಸಾಹ.

ಮಲ್ಲಿಕಾರ್ಜುನ.ಡಿ.ಜಿ. said...

SRUJAN has sent you a message on Kannada Bloggers.

ಅಚ್ಚರಿಗೊಳಿಸಿದ ಮುಖವಾಡಗಳು..
ತಕ್ಷಣ ನೆನಪಿಗೆ ಬಂದದ್ದು ಬ್ರೆಕ್ಟ್ ನ ಈ ಪದ್ಯ..
ಎಲ್ಲವೂ ಚೆನ್ನಾಗಿವೆ.


The Mask Of Evil


On my wall hangs a Japanese carving,
The mask of an evil demon, decorated with gold lacquer.
Sympathetically I observe
The swollen veins of the forehead, indicating
What a strain it is to be evil.

ನನ್ನ ಮನೆಯ ಗೋಡೆಯ ಮೇಲೆ ಒಂದು ಜಪಾನೀ ಕೆತ್ತನೆ

ದುಷ್ಟನೊಬ್ಬನ ಮುಖವಾದ ..

ಹಣೆಯ ಮೇಲೆ ಉಬ್ಬಿದ ನರ

ದುಷ್ಟನಾಗಲು ಕೂಡ ಎಷ್ಟೊಂದು ಕಷ್ಟಪಡ ಬೇಕು..

(ಸರ್ವಮಂಗಳ ಅವರು 'ಅಮ್ಮನ ಗುಡ್ಡ 'ಸಂಕಲದಲ್ಲಿ ಅನುವಾದ maadiddu)

ಜಲನಯನ said...

ಮಲ್ಲಿಕಾರ್ಜುನ್
ನಿಮ್ಮ ಕಲೆಕ್ಶನ್ ವಿಭಿನ್ನವಾಗಿದೆ, ಮತ್ತು ಅದರ ವಿವರ ಸಹಾ.
ಮುಖ್ವಾಡ ಮೇಲೆ ಧರಿಸೋದು...ಇದರ ಹಿಂದಿನ ಮನುಷ್ಯನ ವಾಸ್ತವತೆ ಬೇಕಿಲ್ಲದ್ದು...ಯಕಂದ್ರೆ ಅದನ್ನ ಮಾಡಿದ್ದು ಪಾತ್ರ ಪೋಷಣೆಗೆ. ಆದರೆ ಈಗಿನ ಮುಖವಾಡಗಳು ವ್ಯಕ್ತಿಯದ್ದಾಗಿದ್ದು ಕ್ಷಣ-ಕ್ಷಣ ಬದಲಾಗುವುದು ನೋಡುತ್ತಲಿದ್ದೇವೆ

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ಮುಖವಾಡದ ಇನ್ನೊಂದು ಮುಖದ ಬಗ್ಗೆ ಚೆನ್ನಾಗಿ ಬರೆದಿರುವಿರಿ. ಥ್ಯಾಂಕ್ಸ್.
ಒಳ್ಳೆಯತನಕ್ಕೆ...ಒಳ್ಳೆಯ ಸ್ವಭಾವ ವ್ಯಕ್ತ ಪಡಿಸಲು...
ಬಹುಷಃ "ಮುಖವಾಡದ" ಅಗತ್ಯ ಕಡಿಮೆ ...
ತುಂಬಾ ಚೆಂದದ comment.

ಮಲ್ಲಿಕಾರ್ಜುನ.ಡಿ.ಜಿ. said...

ಶಿವಾನಂದ ಅವರೆ,
ಧನ್ಯವಾದಗಳು. ನಿಮ್ಮ ಫೋಟೋ ಬ್ಲಾಗ್ ನೋಡಿದೆ. ತುಂಬಾ ಚೆನ್ನಾಗಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ನವೀನ್,
ತುಂಬಾ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಮೊದಲು ಸರಣಿ ಕೊಡೋಣವೆಂದುಕೊಂಡೆ ನಂತರ ಏಕೋ ಒಂದೇ ಕಂತಲ್ಲಿ ಕೊಟ್ಟೆ. ಇಷ್ಟವಾಗಿದೆಯಲ್ಲ. ಸಮಾಧಾನವಾಯಿತು.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ನೀವು ಇನ್ನೊಮ್ಮೆ ನಿಧಾನವಾಗಿ ನೋಡಿ. ನನಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ. ನಿಮಗೆ ತಿಳಿದಿರುವ ಉಳಿದ ಮಾಹಿತಿ ಕೊಡಿ. ಎಲ್ಲರಿಗೂ ಅನುಕೂಲವಾಗುತ್ತೆ.

ಮಲ್ಲಿಕಾರ್ಜುನ.ಡಿ.ಜಿ. said...

ಕನಸು ಅವರೆ,
ತುಂಬಾ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಬಾಲು ಅವರೆ,
ನನಗೆ ಸಿಕ್ಕಷ್ಟು ಮಾಹಿತಿ ಕೊಟ್ಟಿರುವೆ. ಉಳಿದದ್ದು ಗೊತ್ತಿರುವವರು ಬರೆದರೆ ನನಗೂ ಸೇರಿದಂತೆ ಎಲ್ಲರಿಗೂ ತಿಳಿಯುವುದು. ಧನ್ಯವಾದಗಳು. ಹೀಗೇ ಪ್ರೋತ್ಸಾಹವಿರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಶೃತಿಯವರೆ,
ತುಂಬಾ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಪಾಲಚಂದ್ರ,
ಧನ್ಯವಾದಗಳು. ಇನ್ನೂ ಸಂಗ್ರಹಿಸುವ ಇರಾದೆ ಇದೆ ನೋಡುವಾ!

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಮೋದ್,
ಧನ್ಯವಾದಗಳು. ನಿಮ್ಮ ಬ್ಲಾಗ್ ಕೂಡ ತುಂಬಾ ಚೆನ್ನಾಗಿದೆ. ಕರ್ನಾಟಕ ಸಂಘದ ಬಗ್ಗೆ ಲೇಖನ ನನಗೆ ಇಷ್ಟವಾಯ್ತು.

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಶೇಖರ್ ಸರ್,
ಧನ್ಯವಾದಗಳು. ಹೀಗೇ ಪ್ರೋತ್ಸಾಹಿಸುತ್ತಿರಿ.

ಮಲ್ಲಿಕಾರ್ಜುನ.ಡಿ.ಜಿ. said...

ಶಿವಪ್ರಕಾಶ್,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸುನಾತ್ ಸರ್,
ತುಂಬಾ ತುಂಬಾ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ನಿಮಗೆ ಇಷ್ಟವಾಗಿದ್ದು ನನಗೆ ಮತ್ತೂ ಹುಮ್ಮಸ್ಸು ಬಂದಿದೆ. ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

SSK ಅವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ರೂಪಾ ಅವರೆ,
ಥ್ಯಾಂಕ್ಯೂ ವೆರಿ ಮಚ್.

ಮಲ್ಲಿಕಾರ್ಜುನ.ಡಿ.ಜಿ. said...

ಶಮ ಅವರೆ,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ರಜನಿ ಅವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಉಮೇಶ್ ಅವರೆ,
ಶಿವು ಮತ್ತು ನಾನು ಗೆಳೆಯರು. ಇಬ್ಬರೂ ಹೊಳೆದ ಐಡಿಯಾಗಳನ್ನು ಮಾತಾಡಿಕೊಳ್ಳುತ್ತೇವೆ ಮತ್ತು ಅದರ ಬಗ್ಗೆ work ಮಾಡುತ್ತೇವೆ. ಇದು ನಿಮಗೆ ಇಷ್ಟವಾಗಿರುವುದರಿಂದ ಹುಮ್ಮಸ್ಸು ಬಂದಿದೆ. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಜಲನಯನ ಸರ್,
ಧನ್ಯವಾದಗಳು. ನೀವು ಹೇಳಿದಂತೆ ಕ್ಷಣ ಕ್ಷಣ ಬದಲಾಗುವ ಗೋಸುಂಬೆಯಂತೆ ಬದುಕುವವರೂ ಸಮಾಜದಲ್ಲಿ ನಾವು ಕಾಣುತ್ತೇವೆ.

Prabhuraj Moogi said...

super collection sir... ಇಂಗ್ಲೀಶ್ ಫಿಲಂ mask ನೆನಪಿಗೆ ಬಂತು...

ಮೌಲ್ಯ ಜೀವನ್ said...

excellent superb. no words to tell to express sir.your colections makes us to wait for you new updates

Guruprasad said...

ಮಲ್ಲಿಕಾರ್ಜುನ್ ಸರ್,,,
ಸೂಪರ್ collection.... ತುಂಬ ಚೆನ್ನಾಗಿ ಇದೆ ಮಾಹಿತಿ.... ಇಸ್ತೊಂದ್ ಗೊತ್ತಿರಲಿಲ್ಲ......
Good creativity....