Saturday, May 30, 2009

ಧೂಮಲೀಲೆ!

ಬಿಡಲಾರೆ ನಾ ಸಿಗರೇಟು
ಹುಡುಗಿ, ನಿನ್ನಂತೆಯೇ ಅದು ಥೇಟು
ಬಿಡಬಲ್ಲೆನೇ ನಾ ನಿನ್ನ?
ಚಿನ್ನ, ಹಾಗೆಯೇ ಸಿಗರೇಟನ್ನ?

ಎಂದು ನಮ್ಮೆಲ್ಲರ ಪ್ರೀತಿಯ ತುಂಟಕವಿ ಬಿ.ಆರ್. ಲಕ್ಷ್ಮಣರಾವ್ ಸಿಗರೇಟಿನ ಬಗ್ಗೆಯೇ ಕವನ ಬರೆದಿದ್ದಾರೆ.
ಅವರ ಮಾತನ್ನು ತಮಾಷೆಯಾಗಿಯೇ ಸ್ವೀಕರಿಸೋಣ. ಏಕೆಂದರೆ ಸಿಗರೇಟ್ ಸೇವನೆಯಿಂದ ಸೇವಿಸುವರಿಗಷ್ಟೇ ಅಲ್ಲ, ಹತ್ತಿರವಿರುವರಿಗೆಲ್ಲ ಹಾನಿಕಾರಕ. ಹೃದಯ ಮತ್ತು ಲಿವರ್ ಸಂಬಂಧಿಸಿದ ಕಾಯಿಲೆಗಳನ್ನು ಹಾಗೂ ಕ್ಯಾನ್ಸರ್ ದೇಹಕ್ಕೆ ಬಳುವಳಿಯಾಗಿ ನೀಡುತ್ತೆ ಈ ತಂಬಾಕು.
ಮೇ ೩೧ ವಿಶ್ವ ಧೂಮಪಾನ ನಿಷೇಧ ದಿನ.
ಈ ಸಂದರ್ಭದಲ್ಲಿ ಧೂಮಪಾನಿಗಳ ಫೋಟೋ ನೋಡುತ್ತಾ ಸೇದದವರು ಎಷ್ಟು ಭಾಗ್ಯಶಾಲಿಗಳು ಎಂದುಕೊಳ್ಳುತ್ತಾ ತಂಬಾಕು ಸೇವನೆ ಹಾನಿಕಾರಕ ಎಂಬ ಸಂದೇಶ ಸಾರೋಣ. ನನ್ನ ಈ ಬಾರಿಯ ಬ್ಲಾಗ್ ಬರಹದ ಮುಖ್ಯ ಉದ್ದೇಶ ಅದೇ.

ಹೀಗೆ ಎಳೆದರೆ ಕರುಳಾಳದವರೆಗೂ ಹಬ್ಬುತ್ತೆ ಹೊಗೆ!
ಅಬ್ಬಾ! ಸ್ಟೀಮ್ ಎಂಜಿನ್

ಛತ್ರಿಯಡಿ ಕಿಡಿ
ಬಿಡಿ, ಬೀಡಿ

ಕೈಸುಟ್ಟರೂ ಬಾಯಿ ಹೊಗೆ!

ಸಾಕು ಬಿಸಾಡ್ರೀ

ನಡೆದಾಡುವ ಹೊಗೆಮಾನವ

43 comments:

b.suresha said...

ಪ್ರಿಯ ಮಲ್ಲಣ್ಣ,
ಆ ಸಿಗರೇಟ್ ಸೇದುವ ಮುಖಗಳ ಚಿತ್ರದ ನಡುವೆ ನನ್ನ ಫೋಟೋನೇ ಇರ್‍ಲಿಲ್ವಲ್ಲಾ!
ಏನಾಶ್ಚರ್‍ಯಾ?
ಈ ನಾಡಿನ ಎಲ್ಲಾ ದೊಡ್ಡವರು ಅಂತ ಕರೆಸಿಕೊಂಡವರೂ ಮಹಾತ್ಮ ಗಾಂಧಿಯವರ ಮಾತಿನಂತೆ ನಡೆದುಕೊಂಡಿದ್ದಾರೆ.
ಗಾಂಧೀಜಿ, ’ಕೆಟ್ಟದ್ದನ್ನು ಸುಡಿ’ ಅಂದರು. ನಾವೆಲ್ಲರೂ ತಂಬಾಕು ಹಾನಿಕಾರಕವಾದ್ದರಿಂದ ಅದನ್ನು ಸುಡುತ್ತಾ ಇದ್ದೇವೆ, ಮಲ್ಲಣ್ಣ!
ನಿಮ್ಮವ
ಬಿ.ಸುರೇಶ

sunaath said...

ಧೂಮಲೀಲೆಯ ವಿವಿಧ ಭಂಗಿಗಳನ್ನು ಚೆನ್ನಾಗಿ ತೋರಿಸಿದ್ದೀರಿ.
ಧೂಮಪಾನಿಗಳ ಮೇಲಾಗುವ ಪರಿಣಾಮವು ಸ್ಪಷ್ಟವಾಗಿ ತೋರುತ್ತದೆ.
ಮೊದಮೊದಲು ನಾನೂ ಒಬ್ಬ ಧೂಮಪಾನಿಯಾಗಿದ್ದೆ. ನನ್ನ ಮಗಳು(-ಇನ್ನೂ ಚಿಕ್ಕವಳಿದ್ದಳು-)ಧೂಮಪಾನ ತ್ಯಜಿಸುವದಾಗಿ ನನ್ನಿಂದ ವಚನ ತೆಗೆದುಕೊಂಡದ್ದರಿಂದ, ನಾನು ಧೂಮಪಾನ ಬಿಟ್ಟುಬಿಟ್ಟೆ.
ಧೂಮಪಾನದ ಪರಿಣಾಮಗಳ ಬಗೆಗೆ, ಈ ದಿನ, ನೀವು ನಿಮ್ಮ blogನಲ್ಲಿ ಮಾಡುತ್ತಿರುವ campaign ಗಾಗಿ ನಿಮಗೆ ಧನ್ಯವಾದಗಳು.

ಬಿಸಿಲ ಹನಿ said...

ಅಬ್ಬ! ನಾನಂತೂ ನಿಮ್ಮ ಕ್ಯಾಮರಾ ಕಣ್ಣಿಗೆ ಬೀಳಲಿಲ್ಲ. ಏಕೆಂದರೆ ನಾನು ಧೂಮಪಾನಿಯಲ್ಲ.
ಧೂಮಪಾನರಹಿತ ದಿನದಂದು ನಿಮ್ಮ ಚಿತ್ರ ಲೇಖನ ಚನ್ನಾಗಿ ಮೂಡಿ ಬಂದಿದೆ.

minchulli said...

parvaagilla kanree... ishtu sigaratu suttavaru konegoo nimma kaige sikki biddarallaaaa.... neevu yaaranoo bido haage kaanisalla swamy...

nam manege neevu bandaaganthoo bhaaree careful aagirthene...

shama, nandibetta

ಮಲ್ಲಿಕಾರ್ಜುನ.ಡಿ.ಜಿ. said...

ಸುರೇಶ್ ಸರ್,
ನನ್ನ ಅಂಗಡಿಯಲ್ಲಿ ಕುಳಿತು ದಾರಿಯಲ್ಲಿ ತಮ್ಮ ಪಾಡಿಗೆ ತಾವು ಬೀಡಿ, ಸಿಗರೇಟನ್ನು ಸೇದುತ್ತಾ ಹೋಗುವವರ ಚಿತ್ರಗಳನ್ನು ಅವರಿಗೆ ತಿಳಿಯದಂತೆ ತೆಗೆದಿರುವೆ. ನಿಮ್ಮದೇನಿದ್ದರೂ ಮುಖದಲ್ಲಿ ಭಾವನೆ ವ್ಯಕ್ತಪಡಿಸುವ ಚಿತ್ರ ತೆಗೆಯುವೆ(ಒಂದು ಈಗಾಗಲೇ ತೆಗೆದಿರುವೆ). ಕೆಟ್ಟದ್ದನ್ನು ಸುಡಿ ಸರ್. ಆದರೂ ನಿಮ್ಮ ಅಭಿಮಾನಿಯಾದ ನನ್ನ ರಿಕ್ವೆಸ್ಟ್ ಏನೆಂದರೆ ಸ್ವಲ್ಪ ಕಮ್ಮಿ ಮಾಡಿ.

ಮಲ್ಲಿಕಾರ್ಜುನ.ಡಿ.ಜಿ. said...

ಸುನಾತ್ ಸರ್,
ನಿಮ್ಮ ಮಗಳ ಮಾತಿಗೆ ಒಪ್ಪಿ ಧೂಮಪಾನ ಬಿಟ್ಟಿದ್ದು ಸಂತಸದ ಸಂಗತಿ. ಮಕ್ಕಳಿಗೆ ನಾವು ಕಲಿಸುವುದಕ್ಕಿಂತ ಮಕ್ಕಳಿಂದ ನಾವು ಸಾಕಷ್ಟು ಕಲಿಯುವುದಿದೆ. ಅಲ್ವಾ ಸರ್? ಮುಗ್ಧತೆ, ಸ್ನೇಹಶೀಲತೆ, ಒಳ್ಳೆಯತನ ಇತ್ಯಾದಿ. ಧನ್ಯವಾದಗಳು .

ಮಲ್ಲಿಕಾರ್ಜುನ.ಡಿ.ಜಿ. said...

ಉದಯ್ ಸರ್,
ನಾನು ಅಂಗಡಿಯಲ್ಲಿ ಕುಳಿತು ಜನಸಾಮಾನ್ಯರ ಫೋಟೋ ತೆಗೆದಿರುವೆನಷ್ಟೆ. ಪ್ರಸಿದ್ಧರ ಫೋಟೋ ಈ ರೀತಿ ಹಾಕಿ ನೋವುಂಟುಮಾಡಬಾರದಲ್ವಾ? ನಿಮ್ಮದು ಚಂದದ Portrait ತೆಗೆಯೋಣ.

ಮಲ್ಲಿಕಾರ್ಜುನ.ಡಿ.ಜಿ. said...

ಶಮ ಅವರೆ,
ಇನ್ನು ಸಾಕಷ್ಟು ಬೀಡಿ, ಸಿಗರೇಟು ಸೇದುವವರ ಫೋಟೋಗಳಿವೆ. ಈ ಏಳು ಜನರ ಹೊಗೆಗೇ ತಲೆನೋವು ಬಂತು. ಇನ್ನು ಎಲ್ಲ ಹಾಕಿದರೆ ಹೊಟ್ಟೆ ತಿರುವಿಕೊಂಡು ಬರುತ್ತೆ ಅಷ್ಟೆ!!

SSK said...

ಮಲ್ಲಿಕಾರ್ಜುನ ಅವರೇ,
ವಿಶ್ವ ಧೂಮಪಾನ ದಿನದಂದು ನೀವು ನೀವು ಬರೆದಿರುವ, ಜನ ಜಾಗೃತಿ ಮೂಡಿಸುವ ಲೇಖನ ಚೆನ್ನಾಗಿವೆ. ಆದರೆ ಯಾರ್ ಯಾರು ಎಷ್ಟೇ ವಿಧದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಯಾವ ವಿಧದಲ್ಲೇ ಹಮ್ಮಿಕೊಂಡರೂ, ಅದರಂತೆ ಜನರು ಎಂದಿಗೂ ಬದಲಾಗುವುದಿಲ್ಲ, ಆದರೂ ಕೇವಲ ಬೆರಳೆಣಿಕೆಯಷ್ಟು ಮಾತ್ರ!!!
ಇದು ನನ್ನ ಅನಿಸಿಕೆ, ನೀವೇನಂತೀರಿ?

Guru's world said...

ಮಲ್ಲಿಕಾರ್ಜುನ್ ಸರ್...
ವಿಶ್ವ ತಂಬಾಕಿನ ದಿನ... ಒಳ್ಳೆ ಲೇಖನ ಹಾಗು ಫೋಟೋ ಕೊಟ್ಟಿದ್ದಿರಿ.... ಚೆನ್ನಾಗಿ ಇದೆ....
ಗುರು

ಜ್ಯೋತಿ said...

ಮಲ್ಲಿಕಾರ್ಜುನ್ ಅವರೇ,
ಈಗ office, hotel, public places ಇತ್ಯಾದಿ ಎಲ್ಲ ಕಡೆ ಧೂಮಪಾನ ನಿಷೇಧ ಮಾಡಿದರೂ ಇನ್ನೂ ಕಡಿಮೆಯಾಗಿಲ್ಲ.
Office ಒಳಗಿದ್ದ smoking zone ಮಾಯವಾಗಿ smoking in road ಆಗಿದೆ ಅಷ್ಟೇ.
ಲೇಖನ ಚೆನ್ನಾಗಿದೆ.

shivu said...

ಮಲ್ಲಿಕಾರ್ಜುನ್,

ಸಿಗರೇಟು ಬಗೆಗಿನ ಬಿ.ಆರ್.ಲಕ್ಷ್ಮಣರಾವ್ ಕವನ ಓದಿದ್ದೇನೆ...ಆಗ ಚೆನ್ನಿತ್ತು....ಆದ್ರೆ ಸಿಗರೇಟು ವಿಚಾರದಲ್ಲಿ ಈಗ ಹುಡುಗಿಯನ್ನು ಹೋಲಿಸಲೇಬಾರದಲ್ಲವೇ...

ಧೂಮಪಾನ ರಹಿತದಿನವಾದ ಇಂದು ಧೂಮಪಾನಿಗಳ ಫೋಟೋ ಹಾಕಿದ್ದೀರಿ...ಫೋಟೋಗಳು ಚೆನ್ನಾಗಿದೆ ಅಂತ ಹೊಗಳಿದರೆ ಅವರು ಮತ್ತಷ್ಟು ಸೇದಲು ಅವಕಾಶ ಮಾಡಿಕೊಟ್ಟಂತೆ. ಆದ್ರೂ ಅವರಿಗೆ ತಿಳಿಯದಂತೆ ಹೇಳಲಿಚ್ಚಿಸುತ್ತೇನೆ...

ಇಂಥವು ಮತ್ತಷ್ಟು ಬರಲಿ...

ಮಲ್ಲಿಕಾರ್ಜುನ.ಡಿ.ಜಿ. said...

SSK ಅವರೆ,
ಅಷ್ಟೊಂದು ನಿರಾಶೆ ಭಾವನೆ ಹೊಂದಿದರೆ ಹೇಗೆ? Atleast ಹೇಳುವುದರಿಂದ passive smoking ಆದರೂ ತಡೆಯಬಹುದೆಂಬ ಭಾವ ನನ್ನದು ಅಷ್ಟೆ. ಅವರವರ ಆರೋಗ್ಯದ ಕಾಳಜಿ ಅವರದು ಸೇದದವರು ತಮ್ಮ ಆರೋಗ್ಯದ (ಅವರು ಬಿಟ್ಟ ಹೊಗೆ ಕುಡಿದು) ಬಗ್ಗೆ ಕಾಳಜಿ ಎಂಬ ರೀತಿ ಯೋಚಿಸಿರುವೆ. ಸರಿಯಷ್ಟೇ?

ಮಲ್ಲಿಕಾರ್ಜುನ.ಡಿ.ಜಿ. said...

ಗುರು ಅವರೆ,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಜ್ಯೋತಿಯವರೆ,
smoking in road ಎಂಬ ನಿಮ್ಮ ಮಾತು ಸತ್ಯ. ನಾನು ರಸ್ತೆಯಲ್ಲಿ ಹೋಗುವವರ ಚಿತ್ರವೇ ಹಾಕಿರುವುದು!

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಬಿ.ಆರ್.ಎಲ್ ಅವರ ಕವನದ ಉಳಿದ ಸಾಲುಗಳು:

ಸಿಗರೇಟು ಖುಷಿ ಕೊಡುವ ಹೊಗೆ
ಹಾಗೇ ನಿನ್ನ ಮನೋಹರ ನಗೆ
ಅದು ಸುಡುವುದು, ನೀ ಸಹ
ಆಹಾ ಸುಟ್ಟರೂ ಎಂತ ಸುಖ!

ನಿನ್ನಿಂದ ಮನಸಿಗೆ ಆಧಿ
ಗೆಳತಿ, ಅದರಿಂದ ದೇಹಕ್ಕೆ ವ್ಯಾಧಿ
ನೀನೋ ಹೃದಯದ ಬಡಿತ
ತುಡಿತ, ಸಿಗರೇಟು ಮಿದುಳಿನ ಮಿಡಿತ

ಸಿಗರೇಟು ಹೊಗೆಯಾಗಿ ತುಳುಕಿ
ಬಳುಕಿ, ಗಾಳಿಯಲ್ಲಿ ಲೀನ
ನೀನೋ ಹೂವಂತೆ ಬಿರಿದು
ಮೆರೆದು, ಗಮ್ಮನೆ ವಸಂತಗಾನ

ಸಿಗರೇಟು ಇಂಗಾಲದಂತೆ
ನಿಂತು, ಎದೆಯಲ್ಲಿ ಹಬ್ಬುವ ಹುಣ್ಣು
ನೀನೋ ಕನಸಿನ ತೆರದಿ
ಕರಗಿ, ತೆಕ್ಕೆಗೆ ದಕ್ಕದ ಹೆಣ್ಣು
ಅದೇ ಎದೆಯಲ್ಲಿ ಹಬ್ಬುವ ಹುಣ್ಣು

ಬಿಡಲಾರೆ ನಾ ಸಿಗರೇಟು
ಹುಡುಗಿ, ಎಷ್ಟೇ ಆದರೂ ಅದರ ರೇಟು
ಬಿಡಬಲ್ಲೆನೆ ನಾ ನಿನ್ನ?
ಚಿನ್ನ, ಹಾಗೆಯೇ ಸಿಗರೇಟನ್ನ?

Prabhuraj Moogi said...

ಸಿಗರೇಟು ಪ್ಯಾಕ ಮೇಲೆ ಹಾನಿಕಾರಕ ಅಂತ ಬರೆದರೂ ಬಿಡಲ್ಲ, ಏನು ಮಾಡೊದು, ತಿಳಿದೂ ತಿಳಿದೂ ಮಾಡೋರಿಗೆ...

ಹರೀಶ ಮಾಂಬಾಡಿ said...

ಬುಸುಬುಸುಗುಡುವ ಸಿಗರೇಟು ಹೊಗೆ ನೋಡಲು ಚೆನ್ನ!

ರೂpaश्री said...

ಫೋಟೋಗಳು ಎಂದಿನಂತೆ ಚೆನ್ನಾಗಿವೆ!! ಆದ್ರೆ ಅವುಗಳ ಸಬ್ಜೆಕ್ಟೇ ಮನಸಿಗೆ ಕಸಿವಿಸಿ ಉಂಟು ಮಾಡುತ್ತಿದೆ:(
ಜ್ಯೋತಿಯವರು ಹೇಳಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೆಧಿಸಿದ್ರೂ ಅದನ್ನು ಲೇಖ್ಖಿಸದೇ ಬತ್ತಿ ಹಚ್ಚುವವರ ಸಂಖ್ಯೆ ಬೆಳೆಯುತ್ತಲೇಯಿದೆ.. ಅವರ ದುಷ್ಚಟಕ್ಕೆ ಪಾಪದ ಪ್ಯಾಸೀವ್ ಸ್ಮೋಕರ್ಸ್ ಕೂಡ ಬಲಿಯಾಗುತ್ತಾರೆ!!
ನಮ್ಮದು ತಂಬಾಕು ರಹಿತ ವಿಶ್ವ ಎಂದಾಗುವುದೋ... ಆಗುವುದೇ?

ಹಾಗೆಯೇ, ಬಿ.ಆರ್.ಎಲ್ ಅವರ ಕವನ ಪರಿಚಯಯಿಸಿದಕ್ಕೆ ಧನ್ಯವಾದಗಳು!!

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಭುರಾಜ್ ಅವರೆ,
ಆದಷ್ಟು ಅವರು ಸೇದುವಾಗ ದೂರವಿರಬೇಕಷ್ಟೇ! ಇನ್ನೇನೂ ನನಗೆ ತೋಚುತ್ತಿಲ್ಲ. ನೀವೇ ಹೇಳಬೇಕು. ನಿಮ್ಮ ಕಾಳಜಿಗೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಹರೀಶ್ ಅವರೆ,
ನನಗೂ ಅಷ್ಟೇ ದೂರದಿಂದಲೇ ಚೆನ್ನ. ಅದಕ್ಕಾಗೇ ದೂರದಿಂದ ಫೋಟೋ ಕ್ಲಿಕ್ಕಿಸಿರುವೆ! ಥ್ಯಾಂಕ್ಯೂ ಸರ್.

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಅವರೆ,
ನಿಮ್ಮ ಕಾಳಜಿಗೆ ಧನ್ಯವಾದಗಳು. ನನಗೂ ಈ ಚಿತ್ರಗಳನ್ನು ಹಾಕುವುದೋ ಬೇಡವೋ ಎಂಬ ಜಿಜ್ಞಾಸೆ ಕಾಡಿತ್ತು. ಸುಂದರವಾದದ್ದು ಎಲ್ಲರಿಗೂ ಇಷ್ಟವಾಗುತ್ತೆ. ಇದು ಹೇಗೆ? ಆದರೂ ಹಾಕಿದ್ದೇನೆ. ಮುಂದಿನ ಬಾರಿ ಖಂಡಿತ ಮನಸ್ಸಿಗೆ ಮುದನೀಡುವ ಚಿತ್ರಗಳನ್ನೇ ಕೊಡುವೆ.

ಸಿಮೆಂಟು ಮರಳಿನ ಮಧ್ಯೆ said...

ಹುಡುಕಾಟದ ಮಲ್ಲಿಕಾರ್ಜುನ್.....

ಧೂಮಪಾನ ಒಳ್ಳೆಯದಲ್ಲ ಅಂತ ಹೇಳುವದನ್ನೂ ...
ಕಲಾತ್ಮಕವಾಗಿ ಹೇಳಿದ್ದೀರಲ್ಲ....!!

ಇಲ್ಲಿ ಒಬ್ಬಬ್ಬರೂ ಸ್ಮೋಕ್ ಮಾಡುವ ರೀತಿ ಬೇರೆನೇ ಇದೆ...
ಪ್ರತಿಯೊಬ್ಬರೂ ಹಿಡಿದುಕೊಳ್ಳುವ, ಹೊಗೆ ಬಿಡುವ ಸ್ಟೈಲ್ ಬೇರೆ ಬೇರೆಯಾಗಿದೆ...

ನನ್ನ ಮಿತ್ರರೊಬ್ಬರು ಈ ಚಟ ಬಿಡುವದರ ಬಗೆಗೆ ತುಂಬಾ ಚೆನ್ನಾಗಿ ಹೇಳುತ್ತಾರೆ...
"ಸಿಗರೇಟು ಬಿಡುವದು ಬಹಳ ಸುಲಭ...

ನಾನು ಬಹಳ ಸಾರಿ ಬಿಟ್ಟು ಬಿಟ್ಟಿದ್ದೇನೆ..."

ತಂಬಾಕು ರಹಿತ ದಿನದ ನಿಮ್ಮ ಸಂದೇಶ ಇಷ್ಟವಾಗುತ್ತದೆ...

ನಿಮ್ಮ ಹುಡುಕಾಟಕ್ಕೆ ಅಭಿನಂದನೆಗಳು...

Dr. B.R. Satynarayana said...

ಮಲ್ಲಿಕಾರ್ಜುನ್ ನಿಮ್ಮ ಈ ಮೇಲ್ ಕೂಡಾ ನೋಡಿದೆ. ಮಯೂರ ಮನೇಲಿದೆ, ಸಂಜೆ ನೋಡುತ್ತೇನೆ. ಇನ್ನು ಈ ಪೋಸ್ಟ್, ನಿಮ್ಮ ಸಂಗ್ರಹದಲ್ಲಿ ಬಹುಶಃ ಎಲ್ಲಾ ವಿಷಯಗಳಿಗೆ ಸಂಬಂದಿಸಿದಂತೆ ಫೋಟೋಗಳಿರಬಹುದು. ಆದರೆ ಅವುಗಳನ್ನು ಬಳಸಿಕೊಳ್ಳುವು ರೀತಿ ಮಾತ್ರ ಅನುಕರಣೀಯ. ಮಾನವಕುಲಕ್ಕೆ ಅಂಟಿದ ಶಾಪ ತಂಬಾಕು ಸೇವನೆ ಮತ್ತು ಮಧ್ಯಪಾನ. ದುರದೃಷ್ಟವೆಂದರೆ ಈ ತಂಬಾಕಿಗೂ, ಅನ್ನದಾತರಾದ ರೈತರ ಬದುಕಿಗೂ ಒಂದು ತೆರನಾದ ಸಂಬಂಧವಿರುವುದು. ತಂಬಾಕು, ಗುಟ್ಕಾ ಬೇಡ ಎಂದಾಕ್ಷಣ ಅವುಗಳ ಬೆಳೆಗಾರರು ದಿಕ್ಕುಗಾಣದಾಗುತ್ತಾರೆ! ಇದೊಂದು ರೀತಿ ವಿಷವರ್ತುಲ. ಏನೇ ಇದ್ದರೂ ಇವುಗಳನ್ನು ದೂರ ಮಾಬೇಕಾಗಿರುವುದು ಮನುಕುಲದ ಅತ್ಯಂತ ತುರ್ತು ಅಗತ್ಯವಾಗಿದೆ ಎಂಬ ಅರಿವು ಎಲ್ಲರಲ್ಲೂ ಮೂಡಿದರೆ ಬೆಳಗಾರರ ಅಸಮತೋಲನವನ್ನು ಕಾಲವೇ ಸರಿಪಡಿಸುವುದು ಎಂಬ ನಂಬಿಕೆ ನನ್ನದು.

ಸುನಿಲ್ ಹೆಗ್ಡೆ said...

ಮಲ್ಲಿಕಾರ್ಜುನ್ ಸರ್...
ಧೂಮಪ್ರಿಯರ ಚಿತ್ರಗಳು ಚೆನ್ನಾಗಿವೆ. ಆದರೆ ಅದಕ್ಕಿಂತ ಹೆಚ್ಚಾಗಿ ನಿಮ್ಮ ಧೂಮಪಾನದ ಹಾನಿಗಳ ಬಗ್ಗೆ ಅರಿವು ಮೂಡಿಸುವ ನಿಮ್ಮ ಕಳಕಳಿ ಇನ್ನೂ ಚೆನ್ನಾಗಿದೆ... ;)

agni said...

ಇದಪ್ಪಾ ಧಂ.. ಅಂದ್ರೆ.
ಮಲ್ಲಿಕಾರ್ಜುನ್ ಅವರೇ ಫೋಟೋಸ್ ಮಸ್ತಾಗಿದೇರಿ... ನೋಡಿ ಆನಂದಿಸಿದೆ.

ವಿನುತ said...

ಉತ್ತಮ ಸ೦ದೇಶದೊ೦ದಿಗೆ ಉತ್ತಮ ಚಿತ್ರಗಳು. ಸಮಯೋಚಿತ ಬರಹಕ್ಕೆ ಅಭಿನ೦ದನೆಗಳು. ಕಡೇಪಕ್ಷ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಲ್ಲಿಸಿ ನಿಜವಾದ ಅರ್ಥದಲ್ಲಿ 'ಪರೋಪಕಾರ' ಮಾಡಿದರೆ ಒಳ್ಳೆಯದಾದೀತು. 'Passive Smoking' ಕೂಡ ಸ್ಮೋಕಿಂಗ್ ನಷ್ಟೇ ಹಾನಿಕಾರಕ.

ಕ್ಷಣ... ಚಿಂತನೆ... Thinking a While.. said...

ಮಲ್ಲಿಕಾರ್ಜುನ ಸರ್‍,

ವಿಶ್ವ ಧೂಮಪಾನ ನಿಷೇಧ ದಿನದ ವಿಶೇಷವಾಗಿ ಧೂಮಪಾನ ಮಾಡುತ್ತಿರುವವರ ವಿಶಿಷ್ಟಭಂಗಿಗಳನ್ನು `ಭಂಗಿ'ಗಳಿಂದ ದೂರವಿರುವವರಿಗೂ ತೋರಿಸಿದ್ದೀರಿ. ಧನ್ಯವಾದಗಳು. ಆದರೆ, ಬೀಡಿಯ ಧಂ ಎಳೆಯುತ್ತಿರುವ ಹಿರಿಯರಲ್ಲಿ ಒಬ್ಬರು ಸಿಗರೇಟನ್ನು ಸೇದು (??) ವಿಕೆಯಲ್ಲಿ ತೊಡಗಿದ್ದಾರೆ. ಅವರೆಲ್ಲರ ಮುಖಗಳಲ್ಲಿನ ತೇಜಸ್ಸು ಧೂಮದಲ್ಲಿ ಕರಗಿ ಹೋಗಿರುವ ಸ್ಪಷ್ಟ ಸೂಚನೆ ಕೊಟ್ಟಿದ್ದೀರಿ. ಹಾಗೆಯೇ, ಯುವಜನಾಂಗದ ಒಂದೆರಡು ಚಿತ್ರಗಳೂ ಇದ್ದಿದ್ದರೆ...???

ಒಟ್ಟಿನಲ್ಲಿ ಜನತೆಗೆ ಒಂದು ವಿಶೇಷ ಎಚ್ಚರಿಕೆ ನಿಮ್ಮ ಫೋಟೋಗಳಲ್ಲಿವೆ. ಧನ್ಯವಾದಗಳು ಮತ್ತೊಮ್ಮೆ,

ಸ್ನೇಹದೊಂದಿಗೆ,

ಶಿವಪ್ರಕಾಶ್ said...

ಏನ್ ಮಾಡಬೇಡಿ ಅಂದ್ರೆ ಅದನ್ನೇ ಜಾಸ್ತಿ ಮಾಡ್ತಾರೆ ನಮ್ ಜನ... :P
ಯಾಕಪ್ಪಾ ಹೀಗೆ ಮಾಡ್ತೀರಿ ಅಂತ ಕೇಳಿದ್ರೆ "ನೋಡಿ ಸ್ವಾಮಿ, ನಮಗೂ ಸೇದಬಾರದು ಅಂತ ಅನ್ಸುತ್ತೆ, ಆದ್ರೆ ಸೇದದೆ ಇರೋಕೆ ಆಗೋಲ್ಲ" ಅಂತಾರೆ.
ಚಿತ್ರಗಳು ಚನ್ನಾಗಿವೆ. ಚಿತ್ರಗಳನ್ನು ನೋಡಿದಾಗ ಹಿಂದಿಯ ಕಾಂಟೆ ಚಿತ್ರದ "kaalar ko thodasa upar chadake, cigerate ka dhuleko chalna banakee..." ಹಾಡು ನೆನಪಾಯ್ತು :) .

ಜಲನಯನ said...

ಮಲ್ಲಿಕಾರ್ಜುನ್
ಶಿವು ಮತ್ತೆ ನೀವು ಉತ್ತಮ ಛಾಯಾಚಿತ್ರಗ್ರಾಹಕರು ಅದಕ್ಕೆ ತಕ್ಕ ಶೀರ್ಷಿಕೆಗಳನ್ನೂ ಪೂರೈಸಿದ್ದೀರಿ..ನಿಜ ಧೂಮಪಾನದ ದಾಸರು ವಾಸ್ತವಕ್ಕೆ ಯಮನ ದಾಸರಾಗುತ್ತಿದ್ದಾರೆಂದು ಅರಿತಿರಲಿಕ್ಕಿಲ್ಲ

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ರಸ್ತೆಯಲ್ಲಿ ಧೂಮಪಾನ ಮಾಡುವವರನ್ನು ಅಂಗಡಿಯಲ್ಲಿ ಕೂತು ಗಮನಿಸುತ್ತಿದ್ದೆ. ಫೋಟೋಗಳನ್ನೂ ತೆಗೆದಿದ್ದೆ. ಈಗ ಸಂದರ್ಭ ಬಂದಿದ್ದರಿಂದ ಬಳಸಿರುವೆ. ನಿಮಗಿಷ್ಟವಾಗಿದ್ದಕ್ಕೆ ಖುಷಿಯಾಯ್ತು.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ನೀವು guess ಮಾಡಿದ್ದು ಸರಿ. ನಾನು ತೆಗೆದಿರುವ ಚಿತ್ರಗಳನ್ನು ನೋಡುತ್ತಾ ಹೊಳೆದ ಸಂಗತಿಗಳನ್ನು ಬೆರೆಸಿ ಬ್ಲಾಗಿಗೆ ಹಾಕುವೆ. ಈಗ ಬೀಡಿ-ಸಿಗರೇಟಿನ ಹೊಗೆ!

ಮಲ್ಲಿಕಾರ್ಜುನ.ಡಿ.ಜಿ. said...

ಸುನಿಲ್ ಅವರೆ,
ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿರುವೆ. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಅಗ್ನಿಯವರೆ,
ಧನ್ಯವಾದಗಳು. ಆದರೂ ನಿಮ್ಮಷ್ಟು ಚೆನ್ನಾಗಿ ವಿವರಣೆ ಬರೆಯಲು ಬರಲ್ಲ. ಪ್ರಯತ್ನಿಸುತ್ತಿರುವೆ.

ಮಲ್ಲಿಕಾರ್ಜುನ.ಡಿ.ಜಿ. said...

ವಿನುತ ಅವರೆ,
ನನ್ನ ಉದ್ದೇಶ ಸಮರ್ಥಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಕಳಕಳಿ ಎಲ್ಲರಿಗೂ ತಲುಪಲಿ ಮತ್ತು ಅರ್ಥವಾಗಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಕ್ಷಣ ಚಿಂತನೆ ಯವರೆ,
ವಿಶಿಷ್ಟ"ಭಂಗಿ"ಯ ಚಿತ್ರಗಳನ್ನು ಮತ್ತು ಉದ್ದೇಶವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಇದಕ್ಕಾಗಿ ತೆಗೆದ ಚಿತ್ರಗಳಲ್ಲ ಇವು, ಹಾಗಾಗಿ ಯುವಜನತೆಯದ್ದು ಇಲ್ಲ. ತೇಜಸ್ಸು ಕಳೆದುಹೋಗುವುದನ್ನು ಗುರುತಿಸಿರುವಿರಿ, ಈ ಸಂಗತಿ ಎಲ್ಲರೂ ಗಮನಿಸಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಶಿವಪ್ರಕಾಶ್ ಅವರೆ,
ಕಾಂಟೆ ಚಿತ್ರದ ಹಾಡು ನೆನಪಿಸಿದಿರಿ. ಹಾಗೇ ಪ್ರಕಾಶ್ ಹೆಗಡೆಯವರು ಸುರುಳಿಯಾಗಿ ಹೊಗೆ ಬಿಡುವುದರ ಚಿತ್ರ ತೆಗೀರಿ ಅಂದರು. ಅಷ್ಟೇ ಅಲ್ಲ ಅವರಿಗೆ ತಿಳಿದವರೊಬ್ಬರು ಹೊಗೆಯಲ್ಲಿ ತಮ್ಮ ಹಸ್ತಾಕ್ಷರ ಹಾಕುತ್ತಿದ್ದರಂತೆ. ಎಂದರೋ ಮಹಾನುಭಾವುಲು!!

ಮಲ್ಲಿಕಾರ್ಜುನ.ಡಿ.ಜಿ. said...

ಜಲನಯನ ಅವರೆ,
ತುಂಬಾ ಥ್ಯಾಂಕ್ಸ್. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

Naveen...ಹಳ್ಳಿ ಹುಡುಗ said...

ಅಣ್ಣ ಲೇಖನ ಮತ್ತು ಚಿತ್ರಗಳು ಚೆನ್ನಾಗಿದೆ

ಮಲ್ಲಿಕಾರ್ಜುನ.ಡಿ.ಜಿ. said...

ನವೀನ್,
ತುಂಬಾ ಥ್ಯಾಂಕ್ಸ್.

ಧರಿತ್ರಿ said...

ಒಳ್ಳೆಯ ಸಂದೇಶ..ಆದರೆ ಎಲ್ಲಾ ಓಕೆ..ಯಂಗ್ ಸ್ಟಾರ್ಸ್ ಪೋಟೋನೇ ಇಲ್ಲವಲ್ಲಾ ಮಲ್ಲಿಯಣ್ಣ?
-ಧರಿತ್ರಿ

ಮಲ್ಲಿಕಾರ್ಜುನ.ಡಿ.ಜಿ. said...

ಧರಿತ್ರಿಯವರೆ,
Young ಇದ್ದವರು ಎಂಗಾದ್ರಲ್ಲ ಅಂತ ನೋಡಬಹುದಲ್ವಾ?

Harihara Sreenivasa Rao said...

Dhooma paanada deehada olagina citra-vichitragalannu kleyagisa bhudu.Kannadad Kylaasam avru dhoomapanadalliye tamma hersarannu bareyouttiddarendu kelideene.Nimma chitrgalannu nodidare shane ide yendu toruttade.Shree suresh anthavaru heege prayathnisali.Antha aparoopada chaya chitra nimma chaya GRHANA dalli aralendu haaryisuve