Sunday, May 3, 2009

ಮೀಸೆ ಮೇಲೆ ಕೈ, ಎಲ್ಲಾದಕ್ಕೂ ಸೈ ಸೈ!

ನಾನಾಗ ಚಿಕ್ಕಬಳ್ಳಾಪುರದಲ್ಲಿ ಹೈಸ್ಕೂಲ್ ಓದುತ್ತಿದ್ದೆ. ದೂರದರ್ಶನದಲ್ಲಿ ಮಕ್ಕಳ ಕಾರ್ಯಕ್ರಮದಲ್ಲಿ ನಾಟಕವೊಂದರಲ್ಲಿ ಪಾತ್ರವಹಿಸಿದ್ದೆ. ನನ್ನದು ನಾಗರೀಕನ ಪಾತ್ರ. ಮೇಕಪ್ ಮಾಡುವವರು ನನಗೆ ಬಿಳಿ ಗಡ್ಡ ಮೀಸೆ ಇಡುವೆನೆಂದಿದ್ದರು. ಎಲ್ಲರದ್ದೂ ಆದರೂ ನನಗೆ ಮಾತ್ರ ಇನ್ನೂ ಗಡ್ಡ ಮೀಸೆ ಬಂದಿರಲಿಲ್ಲ. ಮರೆತಿರಬಹುದೆಂದು ಅವರಿಗೆ ಎರಡು ಮೂರು ಬಾರಿ ಕೇಳಿಬಿಟ್ಟೆ. ಆಗ ಆ ಮೇಕಪ್ ಮಾಡುವವರು ಹೇಳಿದ ಮಾತು ಇನ್ನೂ ನನಗೆ ನೆನಪಿದೆ. "ಯಾಕೆ ಆತುರಪಡ್ತೀಯ. ಗಡ್ಡ ಮೀಸೆ ಇನ್ನೂ ಬಂದಿಲ್ವಲ್ಲ ಅಂತ ಈಗ ಅನ್ಸುತ್ತೆ. ಬಂದಮೇಲೆ ದಿನಾ ಅದನ್ನು ಬೋಳಿಸುವ ಕಷ್ಟದಿಂದ ಯಾಕಪ್ಪ ಬರ್ತವೆ ಅನ್ಸುತ್ತೆ" ಅಂದಿದ್ದರು.
ಇಷ್ಟು ಪೀಠಿಕೆಯೊಂದಿಗೆ ಕೆಲವು ಮೀಸೆ ಚಿತ್ರಗಳನ್ನು ನೋಡೋಣವೇ?
ಹುರಿ ಮೀಸೆ ಅಂಚಲಿ ಚುಚ್ಚುವ ಮಿಂಚಿದೆ...
ಅಬ್ಬಬ್ಬಾ! ಯಾವುದು ಮೀಸೆಯೋ ಯಾವುದು ಗಡ್ಡವೋ...

ಹಣೆಮೇಲಿನ ಪಟ್ಟೆಯಂತೆಯೇ ಶುಭ್ರ ಮೀಸೆ

ಮೀಸೆ... ಚೆಂದ, ತುಂಬಿದ ಆಸೆ ಬಲು ಚೆಂದ

ಇದು ಎಂಥಾ ಗಡ್ಡವಯ್ಯ..!

ಮೊದಮೊದಲಾಗಿ... ಚಿಗುರಿದ ಮೀಸೆ...

ಮೀಸೆ ಮೇಲೆ ಕೈ, ಎಲ್ಲಾದಕ್ಕೂ ಸೈ ಸೈ!

ಶಿಸ್ತುಬದ್ಧ ಮೀಸೆ!

ನದಿಯು ಸಾಗರದಲ್ಲಿ ಲೀನವಾದಂತೆ, ಮೀಸೆಯು ಗಡ್ಡದಲ್ಲಿ ಲೀನವಾಗಿದೆ!

ವೀರಗಾಸೆಯವರ ರೌದ್ರ ಮೀಸೆ

51 comments:

Prabhuraj Moogi said...

ನಮ್ಮಂಥಾ ಮೀಸೆ ಬಿಡದಿರೊರೊ ಕರುಬುವ ಹಾಗಿದೆ ನಿಮ್ಮ ಮೀಸೆಗಳ ಕಲೆಕ್ಷನ್, ಫೋಟೊಗಳು ಹಾಗೂ ಅದಕ್ಕೆ ಪೂರಕ ಪೀಠಿಕೆ ಚೆನ್ನಾಗಿತ್ತು...

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಭು ಅವರೆ,
ಮೀಸೆ ಇದ್ದವರಿಗೆ ನಾನಾ ತೊಂದರೆಗಳಿರುತ್ತವೆ! ಸೌಂಧರ್ಯಯ ವಿಷಯಕ್ಕೆ ಬಂದರೆ,ಮೀಸೆ ಇದ್ದರೆ ಕೆಲವರು ಚೆನ್ನಾಗಿ ಕಾಣಿಸುವರು, ಇನ್ನು ಕೆಲವರು ಮೀಸೆ ಇಲ್ಲದಿದ್ದರೆ ಚೆನ್ನಾಗಿ ಕಾಣಿಸುವರು. ಏನಂತೀರಿ?

Keshav Kulkarni said...

ಮೀಸೆ ಇಲ್ಲದ ನಮ್ಮ ಗತಿ ಏನು ಮಲ್ಲಿ?
ಕೇಶವ

ಮಲ್ಲಿಕಾರ್ಜುನ.ಡಿ.ಜಿ. said...

ಕೇಶವ್ ಅವರೆ,
ಇನ್ನೂ ಒಳ್ಳೆದಲ್ವೇ, ಮೀಸೆ ಇರೆದೇ? ಇಲ್ಲದ್ದರಿಂದ ನೀವು ಕೆಲ ಕಷ್ಟಗಳಿಂದ ತಪ್ಪಿಸಿಕೊಂಡಿದ್ದೀರೆಂದು ನನ್ನ ಭಾವನೆ.

sritri said...

ಬ್ಲಾಗಲ್ಲಿ "ಮೀಸೆ" ಚಿತ್ರಗಳಿವೆ. ನೋಡಿ ಬನ್ನಿ. ನಿಮ್ಮ ಅನಿಸಿಕೆ ತಿಳಿಸಿ.

- ಇದನ್ನು, "ಬ್ಲಾಗಲ್ಲಿ ನನ್ನ "ಮೀಸೆ" ಚಿತ್ರಗಳಿವೆ. ನೋಡಿ ಬನ್ನಿ." ಅಂತ ತಪ್ಪಾಗಿ ಓದಿಕೊಂಡೆ,(ನಾನು , ಹೀಗೆ ತಪ್ಪಾಗಿ ಓದಿಕೊಳ್ಳೋದ್ರ ಹಿಂದೆ ತುಂಬಾ ಕತೆಗಳಿವೆ) ತುಂಬಾ ನಗು ಬಂತು. :)

ಚಿತ್ರಗಳು ಚೆನ್ನಾಗಿವೆ. ನಿಮ್ಮ ಕ್ಯಾಮೆರಾ ಕಣ್ಣು ಹೀಗೆ ಚುರುಕಾಗಿರಲಿ.

ಎಚ್. ಆನಂದರಾಮ ಶಾಸ್ತ್ರೀ said...

ಮೀಸೆ-ಮೀಮಾಂಸೆ
ಮಲ್ಲಿ ನೀಡಿದ
ಮಸಾಲೆದೋಸೆ!

Godavari said...

ಬಹಳ ಚೆನ್ನಾಗಿದೆ ನೀವು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದ ಮೀಸೆ ಫೋಟೋಗಳು..
ಕೆಲವು ಕಡೆ ಮೀಸೆ ಸ್ಫರ್ದೆಗಳೇ ಇಡುತ್ತಾರಂತೆ.ಈ ಫೋಟೋ collection ಅಲ್ಲಿರುವ ಕೆಲವರು ಆ ಸ್ಫರ್ದೆಗಳಲ್ಲಿ ಭಾಗವಹಿಸಿದರೆ ಬಹುಮಾನ ಗ್ಯಾರೆಂಟಿ ಅಲ್ಲವೇ?!!

mruganayanee said...

nice collection :-)

'ಜಿರ್ಲೆಗೂ ಮೀಸೆ ಇರುತ್ತೆ ಅಂತ ಮೀಸೆ ಇರದ ಹುಡುಗನೊಬ್ಬ ಸಿಟ್ಟಿನಿಂದ ಹೇಳಿದ್ದು ನೆನಪಾಯ್ತು. ಜಿರಳೆ ಫೋಟೋ ತೆಗ್ದುಕೊಡ್ತಿರ??

Dr. B.R. Satynarayana said...

"ಯಾಕೆ ಆತುರಪಡ್ತೀಯ. ಗಡ್ಡ ಮೀಸೆ ಇನ್ನೂ ಬಂದಿಲ್ವಲ್ಲ ಅಂತ ಈಗ ಅನ್ಸುತ್ತೆ. ಬಂದಮೇಲೆ ದಿನಾ ಅದನ್ನು ಬೋಳಿಸುವ ಕಷ್ಟದಿಂದ ಯಾಕಪ್ಪ ಬರ್ತವೆ ಅನ್ಸುತ್ತೆ" ಅನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ. ಇಂತಹುದೇ ಸಮಸ್ಯೆ ಎದುರಿಸುತ್ತಿರುವ ನಾನೀಗ ಒಂದು ತಿಂಗಳಿನಿಂದ ಗಡ್ಡದಾರಿ! ನಿಮ್ಮ ಹೆಚ್ಚಿನ ಮೀಸೆ ಪೋಟೋಗಳು 'ಮುಪ್ಪಿನಲಿ ಚೆಂದ ನೆರೆಗಡ್ಡ' ಎನ್ನುವ ಜನಪದರ ಮಾತಿಗೆ ಹಿಡಿದ ಕನ್ನಡಿಯಂತಿವೆ.

shivu said...

ಮಲ್ಲಿಕಾರ್ಜುನ್,

ತರಾವರಿ ಮೀಸೆಗಳು ಅವುಗಳ ಮಾಲೀಕರು ಚೆನ್ನಾಗಿದ್ದಾರೆ...ಮೀಸೆಗಳಿಗೆ ಅನೇಕ ಹೆಸರುಗಳಿವೆ..ಗಿರಿಜಾಮೀಸೆ, ಚಿಗುರು ಮೀಸೆ, ಪೈಲ್ವಾನ್ ಮೀಸೆ..ಇತ್ಯಾದಿ...
ಈ ಹೆಸರುಗಳ ಹಿಂದೆ ಬಿದ್ದರೆ ಇನ್ನಷ್ಟು ಸಿಕ್ಕಬಹುದು ನೋಡಿ ಪ್ರಯತ್ನಿಸಿ...

ಧನ್ಯವಾದಗಳು..

Naveen_an_INDIAN said...

ಅಣ್ಣ ಫೋಟೋಗಳು ತುಂಬಾ ಚೆನ್ನಾಗಿವೆ.. ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡುಅಪ್ಪೋ ಡಿಮ್ಯಾಂಡು.. ಹಾಡು ನೆನಪು ಆಯಿತು....

PARAANJAPE K.N. said...

ತರತರದ ಮೀಸೆಗಳು, ಆ ಮಿಸೆಗಳನ್ನೋ ಹೊತ್ತ ಜನರು, ಅದಕ್ಕೊಪ್ಪುವ ಅಡಿಟಿಪ್ಪಣಿಗಳು, ಚೆನ್ನಾಗಿದೆ ಮೀಸೆಪುರಾಣ, ನಾನು ಒಮ್ಮೆ ನನ್ನ ಮೀಸೆ ಮೇಲೆ ಕೈಯಾಡಿಸಿಕೊ೦ಡೆ.

guruve said...

ಬಗೆ ಬಗೆಯ ಮೀಸೆಗಳು, ನೋಡಲು ಆನಂದ ಕೊಟ್ಟವು! ಪ್ರೆಂಚ್ ಮೀಸೆ-ದಾಡಿ ಇಲ್ಲ, ಬೇಕೆಂದರೆ ನಾನು ಪೋಸ್ ಕೊಡ್ತಾ ಇದ್ದೆ. :)

ಮನಸು said...

ಬಹಳ ಚೆನ್ನಾಗಿವೆ ಒಬ್ಬರಿಗಿಂತ ಒಬ್ಬರು ಹ ಹ ಹ .... ಒಳ್ಳೆಯ ಫೋಟೋಗಳು ಮುಂದೆ ಯಾವುದರ ಮೇಲೆ ಆವಿಷ್ಕಾರ....ಹ ಹ ಹ

agniprapancha said...

ಮೀಸೆ ಹೊತ್ತ ಗಂಡಸಿಗೇ ಡಿಮಾಂಡಪ್ಪೋ ಡಿಮಾಂಡ್ :)

Vinutha said...

ಚೆನ್ನಾಗಿದೆ ಮೀಸೆ ಪುರಾಣ. ನಮಗೆ ಮೀಸೆನ ಬರಿ ಕಾಡಿಗೇಲೆ ಬರೀತಾ ಇದ್ರೂ ನಾಟಕಗಳಲ್ಲಿ :) ಅದ್ಯಾಕೋ ಈಗಿನ ಹುಡುಗರಿಗೆ ಮೀಸೆನೆ ಇರಲ್ಲ :(

sunaath said...

ನಾನೂ ಮೀಸೆ ಬೆಳೆಸಿದ್ದ ಕಾಲ ಒಂದಿತ್ತು. ಈಗ ನನ್ನ ಮೀಸೆ ಬರಿ ಒಂದು ನೆನಪು! ನಿಮ್ಮ ಸುಂದರ collection ನೋಡಿ ಹಳೇದೆಲ್ಲಾ ನೆನಪಾಯಿತು!

ಶಿವಪ್ರಕಾಶ್ said...

ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..........
ನಾನು ಕೂಡ ವಿಚಿತ್ರ ಅವತಾರಗಳಲ್ಲಿ ಮೀಸೆಗಳನ್ನು ಬಿಡ್ತಾ ಇರ್ತೀನಿ... :)

ಸಕತ್ ಆಗಿ ಇದಾವೆ ಮೀಸೆಗಳು...

ಧರಿತ್ರಿ said...

ಅಣ್ಣ..ಇನ್ನು ಕೆಲವು ನಮೂನೆಯ ಮೀಞೆ ನೋಡುವ ಕಾತುರದಲ್ಲಿದ್ದೇನೆ ನಾನು. ವೀರಪ್ಪನ್ ಮೀಸೆ, ಪಂಧೇರ್ ಮೀಸೆ ಎಲ್ಲವನ್ನೂ ಸಂಗ್ರಹಿಸಿ..ಇನ್ನೊಂದು ರೌಂಡು ಮೀಸೆ ನೋಡೋ ಆಸೆ ನಮಗೆ. ನಾನೂ ಹೈಸ್ಕೂಲಿನಲ್ಲಿ ನಾಟಕದಲ್ಲಿ ಅಭಿನಯಿಸುವಾಗ ಮೀಸೆ ಇಡುತ್ತಾ ಇದ್ದೆ. ಹಳ್ಳಿ ಹೈದನ ಮೀಸೆ, ಹಿರಣ್ಯಕಶಿಪು ಮೀಸೆ, ಸತ್ಯಾವನ್ ಪಾತ್ರ ಮಾಡುವಾಗ ಅವನಿಗೊಂದು ಥರ ಮೀಸೆ ಎಲ್ಲಾ ಇಡ್ತಾ ಇದ್ರು.ಚೆನ್ನಾಗೈತೆ ಮೀಸೆ..ಬರಹ.

-ಧರಿತ್ರಿ

minchulli said...

ಮಲ್ಲಿಕ್, ನಿಮ್ಮ ಬ್ಲಾಗು ಬರವಣಿಗೆ ಎರಡೂ ನಂಗೆ ಹೊಟ್ಟೆಕಿಚ್ಚು ತರುತ್ತಾಳೆ ಇರುತ್ತವೆ.. ಎಲ್ಲ ಒಟ್ಟು ಮಾಡಿಟ್ಟರೆ ನಮ್ ಮನೇಲಿ ಅಡಿಗೆಗೆ ಅದೇ ಸಾಕು.. ಅಂದ ಹಾಗೆ ಗುಬ್ಬಚ್ಚಿಗೆ ಥ್ಯಾಂಕ್ಸ್ . ಮತ್ತೆ ಇನ್ನೊದು ವಿಷ್ಯ ಗೊತ್ತಾ.. ನನ್ನನ್ನೂ ನನ್ ಹುಡುಗ ಹಾಗೇ ಕರಿಯೋದು.... ನಿಮ್ಮ ಮಗ ಹಾಗೇ ಕರೆಯೋದು ಅಂದಾಗ ಅಚ್ಚರಿ ಆಯ್ತು..

chethan c r said...

ಮಲ್ಲಿಕಾರ್ಜುನ್ ಅವರೇ ,
ನಿಮ್ಮ ಬ್ಲಾಗು ಸುಂದರವಾಗಿದೆ.ನಿಮ್ಮ ಕ್ಯಾಮೆರಾ ಕಣ್ಣಿಗೆ ಕಾಣುವ ಚಿತ್ರಗಳು ಅಪರೂಪ ಮತ್ತು ಅದ್ಭುತ.ಮೀಸೆ ಮಾವಂದಿರು ಸುಂದರವಾಗ್ ಕಾಣ್ತಾರೆ :)

ರೂpaश्री said...

ಚಿತ್ರಗಳು ಚೆನ್ನಾಗಿವೆ:) ತರತರದ ಮೀಸೆಗಳನ್ನು ನಿಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ನಮ್ಮೊಂದಿಗೆ ಹಂಚಿಕೊಂಡಿದಕ್ಕೆ ವಂದನೆಗಳು!!
ಇಲ್ಲಿ ನೋಡಿ ಇನ್ನಷ್ಟು ಮೀಸೆ ಪುರಾಣ http://kallaremahesh.wordpress.com/2009/03/05/%E0%B2%AE%E0%B3%80%E0%B2%B8%E0%B3%86-%E0%B2%AA%E0%B3%81%E0%B2%B0%E0%B2%BE%E0%B2%A3/

http://sampada.net/article/16738

Guru's world said...

ಮಲ್ಲಿಕಾರ್ಜುನ್...
ಎಲ್ಲ ಆಗಲೇ ಹೇಳಿ ಬಿಟ್ ಇದ್ದಾರಲ್ಲ ... ಇನ್ನು ನಾನು ಏನು ಹೇಳುವುದು ? just , simply the great.
ತುಂಬ ಇಷ್ಟ ಆಯಿತು,, ಇನ್ನಸ್ಟು ಬರಲಿ,, ಮೀಸೆ ಪುರಾಣ ......
ಗುರು

ಕೃಪಾ said...

ನಮಸ್ತೆ... ಮಲ್ಲಿಯಣ್ಣಾ.......

"ಯಾಕೆ ಆತುರಪಡ್ತೀಯ. ಗಡ್ಡ ಮೀಸೆ ಇನ್ನೂ ಬಂದಿಲ್ವಲ್ಲ ಅಂತ ಈಗ ಅನ್ಸುತ್ತೆ. ಬಂದಮೇಲೆ ದಿನಾ ಅದನ್ನು ಬೋಳಿಸುವ ಕಷ್ಟದಿಂದ ಯಾಕಪ್ಪ ಬರ್ತವೆ ಅನ್ಸುತ್ತೆ" ಈ ಮಾತು ನಮ್ಮವರನ್ನು ನೋಡಿದ್ರೆ ಸತ್ಯ ಅಂತನಿಸುತ್ತೆ..... ಪಾಪ ದಿನ ಬೆಳಗಾದರೆ ಅವರ ಪರದಾಟ......!!!
ಎಷ್ಟೇ ಕಷ್ಟ ಆದರು....ಆದ್ರೆ...... ಮೀಸೆ ಇರಬೇಕಪ್ಪ... ಗಂಡಸರ ಮುಖದಲ್ಲಿ ....... ಅದೇ ಲಕ್ಷಣ....

ಬಿಸಿಲ ಹನಿ said...

ಪ್ರೀತಿಯ ಮಲ್ಲಿಕಾರ್ಜುನವರೆ,
ಮೊದಲು ನಗುವಿನ ಚಿತ್ರಗಳು!ಈಗ ಮೀಸೆ ಚಿತ್ರಗಳು!ಎಲ್ಲಿಂದ ಹುಡುಕಿ ತೆಗೆಯುವಿರಿ ಇಂಥ ಚಿತ್ರಗಳನ್ನು? Hatsoff to your creativity.ಅದ್ಭುತ ಚಿತ್ರಗಳು. ಧರಿತ್ರಿಯವರು ಹೇಳಿದಂತೆ ವೀರಪ್ಪನ್ ಮೀಸೆಯೊಂದು ಮಿಸ್ಸಾಗಿದೆ.

ಹರೀಶ ಮಾಂಬಾಡಿ said...

meesa iddoone jaana

VENU VINOD said...

mallikarjun,
meese collections chennagide, variiety kooda ide :)
-VENU

ಮಲ್ಲಿಕಾರ್ಜುನ.ಡಿ.ಜಿ. said...

Sritri ಅವರೆ,
ಎಂಥಾ ಜೋಕ್ ಮಾಡಿದ್ದೀರಿ! ನನ್ನ ಮೀಸೆ ತೋರಿಸಲ್ಲ ಕಣ್ರೀ ನಾನು ಕರೆದದ್ದು - ತರತರಹದ ಮೀಸೆಯ ಸೊಗಸನ್ನು ಸವಿಯಲು. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಶಾಸ್ತ್ರಿ ಸರ್,
ಮೀಸೆ ಬಗ್ಗೆ ಚುಟುಕನ್ನು ಬರೆದಿದ್ದೀರಿ. ಅದಕ್ಕಾಗಿ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಗೋದಾವರಿಯವರೆ,
ಮೀಸೆ ಸ್ಪರ್ಧೆಯ ಬಗ್ಗೆ ನಾನೂ ಕೇಳಿದ್ದೆ. ಈ ಎಲ್ಲ ಚಿತ್ರಗಳನ್ನೂ ನಾನು ನನ್ನ ಅಂಗಡಿಯಲ್ಲಿ ಕುಳಿತು ತೆಗೆದಿರುವಂತಹುದು. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಮೃಗನಯನಿಯವರೆ,
ತುಂಬಾ Thanks. ಜಿರಳೆಯೆಂಬ ತರಳೆಯ ಮೀಸೆ ಯಾಕೆ? ಅದು ತುಂಬಾ ರಗಳೆ ಕಣ್ರೀ!

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ಅಕಸ್ಮಾತ್ ಒಂದು ದಿನ ಮೈಗಳ್ಳತನದಿಂದ ಗಡ್ಡ ಬೋಳಿಸಲಿಲ್ಲ ಅಂದರೆ ಎದುರು ಸಿಕ್ಕವರು, "ಯಾಕೆ ಹುಷಾರಿಲ್ವಾ?" ಅಂತಾರೆ! ಅಷ್ಟು ತೊಂದರೆ ಕೊಡುತ್ತೆ ನೋಡಿ ಈ ಗಡ್ಡ ಮೀಸೆ!

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನೀವು ಹೇಳಿದಂತೆ ಮೀಸೆಗಳ ಸಂಗ್ರಹ ಮಾಡುತ್ತೇನೆ.

ಮಲ್ಲಿಕಾರ್ಜುನ.ಡಿ.ಜಿ. said...

ನವೀನ್,
ಥ್ಯಾಂಕ್ಸ್. ನಿನ್ನ ವಯಸ್ಸಿನಲ್ಲಿ ಡಿಮ್ಯಾಂಡ್ ನನ್ನ ವಯಸ್ಸಿಗೆ ಬ್ಯಾಂಡ್ ಮಾರಾಯ!

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ನನ್ನ ಚಿತ್ರಬರಹದಿಂದಾಗಿ ನೀವು ಮೀಸೆ ಮೇಲೆ ಕೈಯಾಡಿಸಿದ್ದು ತಿಳಿದು ಖುಷಿಯಾಯ್ತು. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಹೌದಲ್ಲ ಗುರುಪ್ರಸಾದ್ ಅವರೆ,
ಫ್ರೆಂಚ್ ಗಡ್ಡಮೀಸೆ ಮಿಸ್ ಆಗಿದೆ. ನೆನಪಿಸಿದ್ದೀರ ಥ್ಯಾಂಕ್ಸ್. ನಿಮ್ಮ ಫೋಟೋ ಖಂಡಿತ ತೆಗೆಯುವೆ ನಿಮ್ಮ ಅನುಮತಿಯೊಂದಿಗೆ.

ಮಲ್ಲಿಕಾರ್ಜುನ.ಡಿ.ಜಿ. said...

ಮನಸು ಅವರೆ,
ಧನ್ಯವಾದಗಳು. ಹುಚ್ಚು ಆಲೋಚನೆಗಳು ಎಲ್ಲೆಲ್ಲಿಗೆ ಕರೆದೊಯ್ಯುತ್ತದೆಯೋ ಗೊತ್ತಿಲ್ಲ. ನೀವೂ ಐಡಿಯಾ ಕೊಡಿ.

ಮಲ್ಲಿಕಾರ್ಜುನ.ಡಿ.ಜಿ. said...

ಅಗ್ನಿಯವರೆ,
ಧನ್ಯವಾದಗಳು. ಡಿಮ್ಯಾಂಡಿಂಗ್ ಮೀಸೆಗಳು ಅಂದ್ರೆ ಹೇಗೆ ಸರ್?

ಮಲ್ಲಿಕಾರ್ಜುನ.ಡಿ.ಜಿ. said...

ವಿನುತ ಅವರೆ,
ಎಲ್ಲ ಹುಡುಗರಿಗೂ ಮೀಸೆ ಇರಲ್ಲ ಅಂತಲ್ಲ. ಇದೊಂಥರಾ ಬರುವವರೆಗೂ ಬರಲ್ಲ ಅನ್ನೋದು ಬಂದಮೇಲೆ ಯಾಕಪ್ಪಾ ಬರುತ್ತೋ ಅನ್ನೋದು!
ಕೆಲವರಿಗೆ ಮೀಸೆ ಚೆನ್ನ ಕೆಲವರಿಗೆ ಇರದಿದ್ದರೆ ಚೆನ್ನ. ಏನಂತೀರ?

ಮಲ್ಲಿಕಾರ್ಜುನ.ಡಿ.ಜಿ. said...

ಸುನಾತ್ ಸರ್,
ನನ್ನ ಮೀಸಾಯಣದಿಂದ ನೀವು ಹಳೆಯ ಮಧುರ ನೆನಪುಗಳೆಡೆಗೆ ಜಾರಿದ್ದು ಸಂತಸ ತಂದಿತು. ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಶಿವಪ್ರಕಾಶ್,
ನಿಮ್ಮ ತರತರಹದ ಮೀಸೆ ಗಡ್ಡಗಳ ಫೋಟೋ ತೆಗೆಸಿಡಿ. ಹಲವು ವರ್ಷಗಳ ನಂತರ ನೋಡುವಾಗ ಹಳೆಯ ದಿನಗಳು ನೆನಪಾಗಿ ಸಂತಸ ಕೊಡುತ್ತೆ.

ಮಲ್ಲಿಕಾರ್ಜುನ.ಡಿ.ಜಿ. said...

ಧರಿತ್ರಿಯವರೆ,
ಧನ್ಯವಾದಗಳು. ನೀವು ಹೇಳಿದಂತೆ ವಿವಿಧ ಮೀಸೆ ಚಿತ್ರಗಳ ಸಂಗ್ರಹ ಮಾಡುವೆ.

ಮಲ್ಲಿಕಾರ್ಜುನ.ಡಿ.ಜಿ. said...

ಶಮ ಅವರೆ,
ಧನ್ಯವಾದಗಲು. ಎರಡು ಗುಬ್ಬಚ್ಚಿಗಳು ಬ್ಲಾಗಿನ ಮುಖಾಂತರ ಪರಿಚಯವಾದದ್ದು coincidence. ಅಂದಹಾಗೆ ಏಕೆ ಗುಬ್ಬಚ್ಚಿ ಚಿತ್ರಗಳು?

ಮಲ್ಲಿಕಾರ್ಜುನ.ಡಿ.ಜಿ. said...

ಚೇತನ್,
ತುಂಬಾ ಥ್ಯಾಂಕ್ಸ್. ಎಲ್ಲಾ ಮೀಸೆ ಮಾವಂದಿರೂ ನಮ್ಮೂರಲ್ಲಿ ಅಡ್ಡಾಡುವವರೇ. ಹೀಗೇ ಪ್ರೋತ್ಸಾಹವಿರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಅವರೆ,
ನೀವು ಕೊಟ್ಟ ಮಾಹಿತಿಗಾಗಿ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಗುರು ಅವರೆ,
ಧನ್ಯವಾದಗಳು. ನೀವಂದಂತೆ ಇನ್ನಷ್ಟು ಮೀಸೆ ಸಂಗ್ರಹಿಸುವೆ.

ಮಲ್ಲಿಕಾರ್ಜುನ.ಡಿ.ಜಿ. said...

ಕೃಪ ಅವರೆ,
ನೀವು ಗಂಡಸರ ಕಷ್ಟ ಅರ್ಥಮಾಡಿಕೊಂಡಿದ್ದಕ್ಕೆ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಉದಯ್ ಸರ್,
ಹೌದು ಮಿಸ್ ಆದ ಮೀಸೆಗಳನ್ನು ಸಂಗ್ರಹಿಸಬೇಕಿದೆ! ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಹರಿಶ್ ಅವರೆ,
ಜಾಣರ ಮೀಸೆ ಪ್ರಪಂಚ! ಹೇಗಿದೆ?
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ವೇಣು ವಿನೋದ್,
Thank u very much. ಇನ್ನಷ್ಟು ಸಂಗ್ರಹಿಸಬೇಕಿದೆ.

nishi said...

thumba chennagideri meese....nodidre navu haage belsona anisthide