Tuesday, May 12, 2009

ಆಟೋಗ್ರಾಫ್ - ಫೋಟೋಗ್ರಾಫ್ ಭಾಗ ೩

ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ಸಂಪತ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಬಂದು ಸಾಹಸಸಿಂಹ ವಿಷ್ಣುವರ್ಧನ್ ಆದರು. ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿರುವ ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯವು ೨೦೦೫ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಿದೆ.
ಹಿರಿಯ ನಟ ಶಿವರಾಂ - ಇವರು ಅದ್ಭುತ ಕಲಾವಿದರಷ್ಟೇ ಅಲ್ಲ, ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿಯ ಸದಸ್ಯರು ಮತ್ತು ಉತ್ತಮ ಛಾಯಾಗ್ರಾಹಕರೂ ಕೂಡ.

ಡಾ.ಬಾಲಮುರಳೀಕೃಷ್ಣ - ಕರ್ನಾಟಕ ಸಂಗೀತ ದಿಗ್ಗಜರಲ್ಲಿ ಪ್ರಮುಖರು. ಹಾಡುಗಾರಿಕೆಯಂತೆ ಇವರು ಕೃತಿರಚನೆಯಲ್ಲೂ ಸಿದ್ಧಹಸ್ತರು.

ಸಿ.ಅಶ್ವತ್ - ಕವಿಗಳನ್ನು ನಮ್ಮ ಮನೆಮನಗಳಿಗೆ ತಲುಪಿಸುವ ಭಾವಜೀವಿ. ಇವರದ್ದು ಮ್ಯೂಜಿಕ್ ಅಲ್ಲ ಮ್ಯಾಜಿಕ್.

ರವಿಬೆಳಗೆರೆಯವರ ಮಾತಲ್ಲೇ ಹೇಳುವುದಾದರೆ ಪ್ರಕಾಶ್ ರೈ, ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟ(ಕನ್ನಡವನ್ನು ಬಿಟ್ಟು!)

ದೈತ್ಯ ಬರಹಗಾರರಾದ ರವಿಬೆಳಗೆರೆ.

ನಮ್ಮ ನಾಡಿನ ಹೆಮ್ಮೆಯ ಪತ್ರಿಕೆಯ ಹೆಮ್ಮೆಯ ಸಂಪಾದಕರಾದ ವಿಶ್ವೇಶ್ವರಭಟ್.

ಮಾತಿನ ಮಲ್ಲರಾದ ಪ್ರೊ.ಕೃಷ್ಣೇಗೌಡರು ಚಿಂತೆ ದೂರ ಮಾಡುತ್ತಾ ಚಿಂತನೆಗೂ ಹಚ್ಚುವರು.

ನಮ್ಮ ಜಿಲ್ಲೆಯವರು ಮತ್ತು ಕ್ಷಣಹೊತ್ತು ಅಣಿಮುತ್ತಿನಿಂದಾಗಿಯೇ ಪ್ರಸಿದ್ಧರಾದ ಷಡಾಕ್ಷರಿಯವರು.

31 comments:

Guru's world said...

ನಿಮ್ಮ ಎರಡನೇ ಆವೃತಿಯ ಆಟೋಗ್ರಾಫ್ ಗಳು ತುಂಬ ಚೆನ್ನಾಗಿವೆ... ನೋಡಿ ಸಂತೋಷ ಆಯಿತು ಮಲ್ಲಿಕಾರ್ಜುನ್...
ಥ್ಯಾಂಕ್ಸ್
ಗುರು

Naveen...ಹಳ್ಳಿ ಹುಡುಗ said...

ಅಣ್ಣ... ನಾನು ಸಹ ಇದೆ ರೀತಿಯ ಲೇಖನ ಬರೆಯಲು ಹೊರಟಿರುವೆ.. ಕ್ಷಮೆ ಇರಲಿ...


--

PARAANJAPE K.N. said...

ಮಲ್ಲಿ
ನಿಮ್ಮ ಅಭಿರುಚಿ, ವಿವಿಧ ರ೦ಗಗ ಗಣ್ಯರ ಹಸ್ತಾಕ್ಷರ-ಚಿತ್ರ ಸ೦ಗ್ರಹ ಮೆಚ್ಚಬೇಕಾದ ಕಾರ್ಯ

ಸಿಮೆಂಟು ಮರಳಿನ ಮಧ್ಯೆ said...

ಹುಡುಕಾಟದ ಮಲ್ಲಿಕಾರ್ಜುನ್....

ನಿಮ್ಮ ಈ ಥರಹದ ಐಡಿಯಾ, ಪರಿಶ್ರಮಕ್ಕೆ
ನನ್ನದೊಂದು ಸಲಾಮ್...

ನಿಮ್ಮ ಬ್ಲಾಗಿಗೆ ಬಂದರೆ ಖುಷಿಯಾಗುತ್ತದೆ..

ಸುಂದರ ಛಾಯಾ ಚಿತ್ರಗಳು, ಚಂದದ ಒಕ್ಕಣಿಕೆಗಳು..
ಮನಸ್ಸಿಗೆ ಖುಷಿ ನೀಡುತ್ತವೆ...

ಇದರಲ್ಲಿ ವಿಭಾಗಗಳನ್ನು ಮಾಡಿಕೊಂಡು...
ಬರೆಯಿರಿ...

ದಯವಿಟ್ಟು ಇವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ..
ಮಕ್ಕಳಿಗೆ, ಸಾಹಿತ್ಯ ಆಸಕ್ತರಿಗೆ
ತುಂಬಾ ಉಪಯುಕ್ತವಾಗುತ್ತದೆ...

ಅಭಿನಂದನೆಗಳು...
ನಿಮ್ಮ ಹುಡುಕಾಟಕ್ಕೆ...

ಮನಸು said...

ತುಂಬಾ ಚೆನ್ನಾಗಿದೆ ನಮಗೆಲ್ಲಾ ಖುಷಿಯಾಗಿದೆ.... ಹೀಗೆ ಮತ್ತಷ್ಟು ಬರಲಿ.
ವಂದನೆಗಳು

shivu said...

ಮಲ್ಲಿಕಾರ್ಜುನ್,

ಈ ಆವೃತ್ತಿಯಲ್ಲಿ ದೊಡ್ಡ ತಿಮಿಂಗಲಗಳಿಗೆ ಬಲೆಹಾಕಿದ್ದೀರಿ...ಪ್ರತಿಯೊಬ್ಬರೂ ಅವರವರ ಕ್ಷೇತ್ರದಲ್ಲಿ ಮೇರುಮಟ್ಟದಲ್ಲಿರುವವರೇ...ಇವರ ಬೇಟೆ ಎಷ್ಟು ಕಷ್ಟ ನನಗೂ ಗೊತ್ತು. ಅದನ್ನು ನೀವು ಸಾಧಿಸಿದ್ದೀರಿ...ಮುಂದುವರಿಯಲಿ ನಿಮ್ಮ ಅಭಿಯಾನ...ಅಭಿನಂದನೆಗಳು...

ಅಹರ್ನಿಶಿ said...

ಮಲ್ಲಿ ಯವರೆ,
ನಿಮ್ಮ ಮೂರನೇ ಕ೦ತಿನಲ್ಲಿ ವಿಷ್ಣು,ಶಿವರಾ೦,ಪ್ರಕಾಶ್ ರೈ,ರವಿ ಯ೦ತ ದಿಗ್ಗಜರನ್ನು ನೋಡಿ ಖುಷಿಯಾಯ್ತು.ದಯವಿಟ್ಟು ಎಲ್ಲವನ್ನೂ ಪುಸ್ತಕದಲ್ಲಿ ಪ್ರಕಟಿಸಿ..ಓದುಗರಿಗೆ ಹಬ್ಬದೂಟ ಉಣಿಸಿ.ನಿಮ್ಮ ಸ೦ಗ್ರಹ ಅತ್ಯುತ್ತಮ,ಆನ೦ದಮಯ.

Dinesh said...

Tumba Chennagide

ಮಲ್ಲಿಕಾರ್ಜುನ.ಡಿ.ಜಿ. said...

ಗುರು ಅವರೆ,
ಧನ್ಯವಾದಗಳು. ಇದು ಎರಡನೇ ಆವೃತ್ತಿಯಲ್ಲ ಮೂರನೆಯದು.

ಮಲ್ಲಿಕಾರ್ಜುನ.ಡಿ.ಜಿ. said...

ನವೀನ್,
ಬರೆಯಿರಿ. ಚೆನ್ನಾಗಿರುತ್ತೆ. ಬರೆದಾಗ ತಿಳಿಸಿ.

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ತುಂಬಾ ಥ್ಯಾಂಕ್ಸ್. ಇನ್ನು ಮುಂದೆ ನೀವು ಸೂಚಿಸಿದಂತೆ ವಿಭಾಗಗಳಾಗಿ ಹಾಕುವೆ.

ಮಲ್ಲಿಕಾರ್ಜುನ.ಡಿ.ಜಿ. said...

ಮನಸು ಅವರೆ,
ಧನ್ಯವಾದಗಳು. ಈ ಪಯಣದಲ್ಲಿ ಸಿಗುವ ಮತ್ತಷ್ಟು ಮುತ್ತು ರತ್ನಗಳನ್ನು ಆಯ್ದು ಸಾದರಪಡಿಸುವೆ.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನೀವಂದಂತೆ ಈ ಬಾರಿ ಇರುವವರು ದೊಡ್ಡ ವ್ಯಕ್ತಿತ್ವವುಳ್ಳವರೇ. ಅವರುಗಳನ್ನು ಭೇಟಿಯಾಗುವುದೇ ಅದೃಷ್ಟ ಅದರಲ್ಲೂ ಫೋಟೋ ಮತ್ತು ಹಸ್ತಾಕ್ಷರ ಸಿಕ್ಕಿದ್ದು ಮತ್ತಷ್ಟು ಅದೃಷ್ಟ. ಇದನ್ನು ಬ್ಲಾಗಲ್ಲಿ ಎಲ್ಲರೊಂದಿಗೂ ಹಂಚಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ.

ಶಿವಪ್ರಕಾಶ್ said...

autographs super....

ಮಲ್ಲಿಕಾರ್ಜುನ.ಡಿ.ಜಿ. said...

Thanks ShivPrakash

ಬಿಸಿಲ ಹನಿ said...

ಮಲ್ಲಿಕಾರ್ಜುನವರೆ,
ನಿಮ್ಮ ಅಟೋಗ್ರಾಪ್ ಸರಣಿ ಚನ್ನಾಗಿ ಬರುತ್ತಿದೆ. ನಿಮ್ಮ ಈ ಪ್ರಯತ್ನ ಅಭಿನಾಂದನಾರ್ಹ!

SSK said...

ಮಲ್ಲಿಕಾರ್ಜುನ ಅವರೇ,
ನಟ ವಿಷ್ಣುವರ್ಧನ್ ಅವರ ನಿಜ ನಾಮಧೇಯ ತಿಳಿದಿರಲಿಲ್ಲ, ನಿಮ್ಮ ಲೇಖನದಿಂದ ತಿಳಿದು ಬಂತು! ಷಡಕ್ಷರಿ ಅವರ ಕ್ಷಣ ಹೊತ್ತು ಆಣಿ ಮುತ್ತು - ಇವರ ಲೇಖನಗಳು ನನಗೆ ತುಂಬಾ ಇಷ್ಟವಾಗುತ್ತವೆ. ಮತ್ತು ಪ್ರತಿ ಭಾನುವಾರದಂದು ವಿಜಯ ಕರ್ನಾಟಕದಲ್ಲಿ ಬರುವ ರವಿ ಬೆಳಗೆರೆ ಅವರ 'ಸೂರ್ಯಶಿಕಾರಿ' ತಪ್ಪದೆ ಓದುತ್ತೇನೆ!! ಮಿಕ್ಕ ಎಲ್ಲಾ ವ್ಯಕ್ತಿಗಳ ಪ್ರತಿಭೆಯನ್ನು ಸಹ ಆರಾಧಿಸುತ್ತೇನೆ, ಆದರೆ ಒಂದೆರಡನ್ನು ಮಾತ್ರ ಇಲ್ಲಿ ಸಂಕ್ಷಿಪ್ತವಾಗಿ ಬರದಿದ್ದೇನೆ.
ಚಿತ್ರಗಳು ಮತ್ತು ಬರಹ ಚೆನ್ನಾಗಿದೆ, ಮುಂದುವರೆಸಿ.

ರೂpaश्री said...

ಮಲ್ಲಿಕಾರ್ಜುನ ಅವರೇ,
ನಿಮ್ಮೀ ಹವ್ಯಾಸ ಬಹಳ ಚೆನ್ನಾಗಿದೆ. ಎಲ್ಲಾ ಅತಿರಥ ಮಹಾರಥರುಗಳೇ ಇದ್ದಾರೆ.. ಕೆಲವರ ಮುಖ ಪರಿಚಯ ಇರ್ಲಿಲ್ಲ, ಫೋಟೋ ನೋಡಿ ತಿಳಿದುಕೊಂಡೆ..ಹಳೆಯ ಪೋಸ್ಟ್ ಬಗ್ಗೆ ಕಮೇಂಟ್ಸ್ ನೋಡಿ ತಿಳಿಯಿತು.. ಲೇಖನಗಳಿಗೆ labels ಹಾಕಿದ್ರಿ ಹುಡುಕೋಕೆ ಅನುಕೂಲ ಅನ್ಸುತ್ತೆ ಅಥವಾ ಸರಣಿ ಲೇಖನದಲ್ಲಿ ಹಿಂದಿನ ಲೇಖನಗಳಿಗೆ ಲಿಂಕ್ ಮಾಡಿ ನನ್ನಂತಹವರಿಗೆ(ಬ್ಲಾಗಿಗೆ ಹೊಸಬರು) ಹೆಲ್ಪ್ ಆಗುತ್ತೆ...
ಹೀಗೆ ಮುಂದುವರೆಯಲಿ ನಿಮ್ಮ ಈ ಹವ್ಯಾಸ!!

Dr. B.R. Satynarayana said...

ಈ ಸರಣಿಯೂ ಅತ್ಯುತ್ತಮವಾಗಿದೆ. ನಿಮ್ಮ ಜೋಳಿಗೆಯಲ್ಲಿ ಇನ್ನೂ ಏನೇನಿದೆಯೋ.......!

ವಿನುತ said...

ನಿಮ್ಮ ಈ ಪರಿಶ್ರಮ ಹಾಗು ಆಸಕ್ತಿಗೆ ಹ್ಯಾಟ್ಸ್ ಆಫ. ಹೇಳಲು ಮತ್ತೇನು ಉಳಿಸಿಲ್ಲ ನೀವು! ಧನ್ಯವಾದಗಳು.

ಧರಿತ್ರಿ said...

ಚೆನ್ನಾಗಿದೆ ನಿಮ್ ಆಟೋಗ್ರಾಫ್
-ಧರಿತ್ರಿ

koundinya said...

idu noorakke muttali endu aashisuttene. nimma parishramakke johar

ಮಲ್ಲಿಕಾರ್ಜುನ.ಡಿ.ಜಿ. said...

ಉದಯ್ ಅವರೆ,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

SSK ಅವರೆ,
ನಾನೂ The National College ವಿದ್ಯಾರ್ಥಿ. ಅದರಲ್ಲೂ ಹಾಸ್ಟೆಲಿನಲ್ಲಿದ್ದೆ. ಆಗ Dr.HN ಇದ್ದರು. ವಿಷ್ಣುವರ್ಧನ್ ಬಗ್ಗೆ ನಾವು ಕುತೂಹಲದಿಂದ ಮಾತನಾಡಿದಾಗಲೆಲ್ಲ ಅವರು "ನಮ್ಮ ಸಂಪತ್ ಕುಮಾರು...." ಅಂತಲೇ ಹೇಳೊರು. ಹಾಗಾಗಿ ನನಗೆ ಆ ಹೆಸರು ನೆನಪಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಅವರೆ,
ನೀವು ನನ್ನ ಹಳೆಯ ಪೋಸ್ಟಿಂಗೆಲ್ಲ ಓದಿದ್ದು ತಿಲಿದು ಸಂತಸವಾಯ್ತು. ಒಂದೇ ತರಹದ್ದು ಒಂದರ ಹಿಂದೊಂದು ಹಾಕಿ ಬೇಸರ ಮೂಡಿಸಬಾರದೆಂದು ಅಲ್ಲಲ್ಲಿ ಕೊಟ್ಟಿದ್ದೇನಷ್ಟೇ. ನೀವು ಹೇಳಿದಂತೆ ಇನ್ನುಮುಂದೆ ಲಿಂಕ್ ಕೊಡುತ್ತೇನೆ.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ನನಗೂ ಗೊತ್ತಿಲ್ಲ ನನ್ನ ಜೋಳಿಗೆಯಲ್ಲಿ ಏನಿದೆಯೋ? ಕೈ ಹಾಕುವೆ ಸಿಕ್ಕಿದ್ದು ಕೊಡುವೆ! ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ವಿನುತ ಅವರೆ,

ತುಂಬಾ ಥ್ಯಾಂಕ್ಸ್.

ಧರಿತ್ರಿ ಮೇಡಂ,

ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಅಜಿತ್,
ನಿಧಾನವಾದ್ರೂ ನೂರು ಮುಟ್ಟೋಣ. ಅಷ್ಟರಲ್ಲಿ ನೀನು ನಿನ್ನ ಸಂಗ್ರಹದ ಪ್ರದರ್ಶನ ಮಾಡಬೇಕು.

Deepasmitha said...

ಮಲ್ಲಿಕಾರ್ಜುನ್, ನಿಮ್ಮ ಹವ್ಯಾಸ ಹಾಗೂ ಸಂಗ್ರಹ ತುಂಬಾ ಚೆನ್ನಾಗಿದೆ. ಶಿವು ಹೇಳಿದ ಹಾಗೆ ಇವರನ್ನೆಲ್ಲ ಭೇಟಿಯಾಗಿ, ಅವರ ಸಹಿ ಪಡೆಯುವುದೇ ಕಷ್ಟದ ಕೆಲಸ. ಮುಂದುವರೆಯಲಿ. ಹಿರಿಯ ನಟ ಶಿವರಾಮ್ ಒಳ್ಳೆಯ ಓದುಗ ಮತ್ತು ಪುಸ್ತಕ ಸಂಗ್ರಾಹಕ ಎಂದು ಓದಿದ್ದೆ. ಆದರೆ ಛಾಯಾಗ್ರಾಹಕ ಅಂತ ಗೊತ್ತಿರಲಿಲ್ಲ.

Sakkat TASTY! said...

Dear friend

We are the regular viewers (and also readers) of your blog.. Hats off to you..

We are running a food catering company, named "Sakkat" in Bangalore. You can go through the website www.sakkatfood.com for complete details.. There, we have a special service called "Food for thought". We need very interesting, innovative, fresh, thought provoking, damn good writing for our customers.. We believe that your writing has that power. We gladly appreciate if you can contribute for this service by giving us your masterpiece writings.. Our Head-H.R.Section will get back to you if you need any clarifications about the mode of work we expect from you.

You can also feel free to reach us via e-mail (service@sakkatfood.com, sakkatchef@gmail.com) or via phone (94814 71560).

Expecting your positive response :)
Sakkat team