Monday, May 25, 2009

ಸೌಂದರ್ಯದ ಖನಿಗಳು ಈ ವನಸುಮಗಳು

ರಸ್ತೆಯಂಚಿನಲ್ಲಿ, ಪೊದೆಗಳ ಸಂದಿಯಲ್ಲಿ, ಕಳೆಗಿಡಗಳ ಮಧ್ಯೆ ಪುಟ್ಟ ಪುಟ್ಟ ವನಪುಷ್ಪಗಳು ನಗುನಗುತ್ತಿರುತ್ತವೆ. ವರ್ಷ ಪೂರಾ ಇವು ಕಾಣಸಿಗುತ್ತಾದರೂ ಮಳೆಗಾಲದಲ್ಲಿ ಹೆಚ್ಚು. ಜೀವದ್ರವವಾದ ಮಳೆಯು ಭೂಮಿಯೊಳಕ್ಕೆ ಹೋದಾಗ ಉಸಿರಿನ ಮೂಲ ಹಸಿರು ಭುವಿಯಿಂದ ಹೊರಹೊಮ್ಮುತ್ತದೆ. ಈ ಹಸಿರ ಮಧ್ಯ ನಾನಾ ವಿಧದ ಹೂಗಳು ಅರಳಿ ನಿಂತು ಹಕ್ಕಿ, ಚಿಟ್ಟೆ ಮತ್ತು ದುಂಬಿಗಳನ್ನು ಆಕರ್ಷಿಸುತ್ತವೆ.

ಈ ಸುಂದರ ಸುಮಗಳಲ್ಲಿ ಕೆಲವನ್ನು ಪರಿಚಯ ಮಾಡಿಕೊಳ್ಳೋಣ.

ಅಮೆರಿಕಾದ ಉಷ್ಣವಲಯದ ಕಾಡುಗಳಿಂದ ವಲಸೆ ಬಂದಿರುವ ಜಮೈಕನ್ ಬ್ಲೂ ಸ್ಪೈಕ್ ಎಂದು ಕರೆಯಲ್ಪಡುವ ಈ ಹೂಗಿಡ ಮಳೆಗಾಲ ಶುರುವಾದೊಡನೆ ಗಿಡದಿಂದ ಮೇಲೆ ಚಾಚಿರುವ ಕಡ್ಡಿಯ ಮಧ್ಯಭಾಗದಲ್ಲಿ ಆಕರ್ಷಕ ಪುಟ್ಟ ಪುಟ್ಟ ನೀಲಿ ಹೂಗಳ ಗುಚ್ಛವೊಂದನ್ನು ಸಿಕ್ಕಿಸಿಕೊಂಡು ರಸ್ತೆ ಬದಿಯಲ್ಲಿ, ಬಯಲುಗಳಲ್ಲಿ ಎದ್ದು ಕಾಣುತ್ತದೆ.

ಮುಟ್ಟಿದರೆ ಮುನಿ(ಟಚ್ ಮಿ ನಾಟ್) ಕೂಡ ಅಮೆರಿಕಾದ ಉಷ್ಣವಲಯದ ಕಾಡಿನಿಂದ ಬಂದದ್ದೇ. ಇದರ ಕೆಂಪುಬಣ್ಣದ ರೋಮಗಳಂತಿರುವ ಹೂಗಳು ಅತ್ಯಂತ ಆಕರ್ಷಕ. ಹಿಂದಿಯಲ್ಲಿ ಇದನ್ನು "ಲಾಜವಂತಿ" ಅನ್ನುವರಂತೆ. ಲಜ್ಜೆಯಿಂದ ಮುದುಡುವ ಇದರ ಎಲೆಗಳ ಸ್ವಭಾವದಿಂದ ಈ ಹೆಸರು ಬಂದಿರಬೇಕು.


ವೆಸ್ಟ್ ಇಂಡೀಸ್ ಮೂಲದ ನೆತ್ತರ ಪುಷ್ಪ(ಬ್ಲಡ್ ಫ್ಲವರ್) ಕಾಡುಗಳಲ್ಲಿ ಝರಿ, ತೊರೆಗಳ ಪಕ್ಕದಲ್ಲಿ ಸಾಮಾನ್ಯವಾಗಿ ಕಾಣಿಸುತ್ತದೆ. ಟೈಗರ್ ಚಿಟ್ಟೆಯ ಕಂಬಳಿಹುಳುಗಳ ಆಹಾರ ಸಸ್ಯವಿದು. ಎಕ್ಕದ ಬೀಜಗಳನ್ನೇ ಹೋಲುವ ಇದರ ಬೀಜಗಳು ಗಾಳಿಗೆ ತೇಲುತ್ತಾ ಪ್ರಸಾರವಾಗುತ್ತದೆ.
"ದೆವ್ವದ ಉಗುರು"- ಎಂಥ ವಿಚಿತ್ರ ಹೆಸರಲ್ವಾ? ಮೆಕ್ಸಿಕೊ ದೇಶದಿಂದ ಬಂದಿರುವ ಈ ಪುಷ್ಪಕ್ಕೆ ಇಂಗ್ಲೀಷ್ ನಲ್ಲಿ ಹಾಗೇ ಹೆಸರಿದೆ (ಡೆವಿಲ್ಸ್ ಕ್ಲಾ). ಈ ಹೂ ಆಕರ್ಷಕವಾಗಿದ್ದರೂ ಮುಟ್ಟಿದರೆ ಅಂಟಂಟಾಗಿರುತ್ತದೆ.

ಮೆಕ್ಸಿಕನ್ ಫ್ಲಾಸ್ ಎಂದು ಕರೆಯುವ ಈ ಹೂ ಅದರ ಹೆಸರೇ ಹೇಳುವಂತೆ ಮೆಕ್ಸಿಕನ್ ಮೂಲದ್ದು. "ವುಲ್ಲನ್" ರೀತಿ ಕಾಣುವ ಪುಟ್ಟಪುಟ್ಟ ಹೂಗಳು ಬಹಳ ಸುಂದರವಾಗಿರುತ್ತವೆ. ನೀಲಿ, ಪಿಂಕ್ ಮತ್ತು ಬಿಳಿ ಬಣ್ಣಗಳಲ್ಲಿ ಇವು ಕಂಡುಬರುತ್ತವೆ. ಆಗಸ್ಟ್ ನಿಂದ ಡಿಸೆಂಬರಿನವರೆಗೆ ಮಾತ್ರ ಈ ಹೂಗಳ ವಿಕ್ಷಣೆ ಸಾಧ್ಯ.

ಎಲ್ಲೆಲ್ಲೂ ಕಂಡುಬರುವ ಲಾಂಟಾನ ಸಸ್ಯದ ಮೂಲ ಅಮೆರಿಕಾದ ಉಷ್ಣವಲಯ. ವರ್ಷಪೂರ್ತಿ ಗಾಢಸುಗಂಧ ಹೊರಸೂಸುತ್ತಾ ಅರಳುವ ಹೂಗಳು ಚಿಟ್ಟೆ ಮತ್ತು ಪತಂಗಗಳನ್ನು ತನ್ನೆಡೆಗೆ ಆಕರ್ಷಿಸುತ್ತವೆ.
* * * *
ಯಾರ ಮುಡಿಗೂ ಏರದೆ, ಯಾವ ದೇವರ ಪೂಜೆಗೂ ಬಳಸಲ್ಪಡದೇ ತನ್ನಷ್ಟಕ್ಕೆ ತಾನುಳಿದು ಅಳಿದುಹೋಗುವ ಈ ಸುಂದರ ಸುಮಗಳನ್ನು ಸ್ಪರ್ಷಿಸುವ ಅದೃಷ್ಟ ಪಾತರಗಿತ್ತಿಗಳಂತೆ ನಮ್ಮ ಕಣ್ಣಿಗೂ ಲಭಿಸಲಿ.

70 comments:

Ittigecement said...

ಹುಡುಕಾಟದ ಮಲ್ಲಿಕಾರ್ಜುನ್......

ಈ ಸಾರಿ ಏನೆಲ್ಲಾ ಹುಡುಕಿ ಬಿಟ್ಟಿದ್ದೀರಿ...!

ಇವುಗಳಲ್ಲಿ ಹೆಚ್ಚಿನವು ನಮಗೆ ಗೊತ್ತಿದ್ದರೂ..
ಇಷ್ಟೆಲ್ಲ ಮಾಹಿತಿ ಗೊತ್ತಿರಲಿಲ್ಲವಾಗಿತ್ತು...

ಮನಮೋಹಕ ಫೋಟೊಗಳು....!!

ಮುಟ್ಟಿದರೆ ಮುನಿಗೆ ನಮ್ಮ ಕಡೆ "ನಾಚಿಕೆ ಮುಳ್ಳು"ಅನ್ನುತ್ತಾರೆ..
ಇದು ಮೂಲವ್ಯಾಧಿಗೆ ದಿವ್ಯ ಔಷಧ..!
ಇದಕ್ಕೆ ಗಾಯವನ್ನು ಗುಣಪಡಿಸುವ ಗುಣವಿದೆಯಂತೆ...

ಕೊನೆಯ "ಲಾಂಟಾನಾ" ಸಸ್ಯಕ್ಕೆ "ಚದರಂಗಿ" ಎನ್ನುತ್ತೇವೆ...

ಸುಂದರ ಚಿತ್ರಗಳಿಗಾಗಿ..
ಚಿಕ್ಕ, ಚೊಕ್ಕವಾದ ಒಕ್ಕಣಿಕೆಗಳಿಗಾಗಿ...

ಅಭಿನಂದನೆಗಳು...

Anonymous said...

ಹೆಚ್ಚಿನ ಹೂಗಳನ್ನು ನೋಡಿದ್ದರೂ ಇಷ್ಟೊಂದು ಮಾಹಿತಿ ಗೊತ್ತಿರಲಿಲ್ಲ.
ಧನ್ಯವಾದಗಳು ಮಲ್ಲಿಕಾರ್ಜುನ್ ಅವರೇ.
ಫೋಟೋಗಳು ಎಂದಿನಂತೆ ಸುಂದರವಾಗಿವೆ.

ಚಂದ್ರಕಾಂತ ಎಸ್ said...

ಸೊಗಸಾದ ಚಿತ್ರಗಳು.

ನಿಜ, ಕೆಲವು ಹೂಗಳನ್ನು ಮೊದಲೇ ನೋಡಿದ್ದರೂ ಹೆಸರು, ವಿವರ ಗೊತ್ತಿರಲಿಲ್ಲ.

ಆ ಹೂಗಳನ್ನು ಯಾರೂ ಮುಡಿಯದಿರುವುದರಿಂದಲೇ, ದೇವರಿಗೆ ಮುಡಿಸದಿರುವುದರಿಂದಲೇ ತಮ್ಮಷ್ಟಕ್ಕೆ ತಾವು ಅರಳಿ ನೆಮ್ಮದಿಯ ಜೀವನ ಸಾಗಿಸುತ್ತವೆ.!!ಇಲ್ಲದಿದ್ದರೆ ಮನುಷ್ಯ ಅದನ್ನು ಸುಮ್ಮನೆ ಬಿಡುತ್ತಿದ್ದನೇ ?

shivu.k said...

ಮಲ್ಲಿಕಾರ್ಜುನ್,

ಕಾಡಿನ ಹೂವುಗಳ ಬಗ್ಗೆ ಸೊಗಸಾಗಿ ಬೆಳಕು ಚೆಲ್ಲಿದ್ದೀರಿ[ಕೆಲವು ಈಗ ನಾಡಿನಲ್ಲೂ ಸಿಗುತ್ತವೆ]ಫೋಟೋಗಳು ತಾಂತ್ರಿಕವಾಗಿ ಉನ್ನತ ಮಟ್ಟದಲ್ಲಿವೆ. ಹಾಗೆ ಅವುಗಳಿಗೆ ಒದಗಿಸಿರುವ ಮಾಹಿತಿಯು ಸಂಗ್ರಹ ಯೋಗ್ಯವಾಗಿದೆ..

ನಮ್ಮ ಬ್ಲಾಗಿನ ಅನೇಕ ಗೆಳೆಯರ ಮನೆಯಲ್ಲಿ ಗಿಡ ಬೆಳೆಸಲು ಸ್ಥಳಾವಕಾಶವಿದ್ದರೆ ಲಂಟಾನ ಗಿಡ ಬೆಳಸಲು ಈ ಮೂಲಕ ವಿನಂತಿಸುತ್ತೇನೆ..

ಈ ಗಿಡ ಮತ್ತು ಅದರ ಹೂವುಗಳು ಚಿಟ್ಟೆ ಮತ್ತು ದುಂಬಿಗಳಿಗೆ ಜಂಕ್ಷನ್ ಇದ್ದಂತೆ. ಯಾವುದೇ ಚಿಟ್ಟೆಯಾಗಲಿ ಲಂಟಾನ ಗಿಡ ನೋಡಿದರೆ ಸಾಕು ಬಂದು ಒಮ್ಮೆ ಕೂತು ವಿಶ್ರಾಂತಿ ಮಾಡಿ ಹೋಗುವುದು ಗ್ಯಾರಂಟಿ. ಇದರಿಂದ ಚಿಟ್ಟೆಗಳ ಸಂತತಿ ಹೆಚ್ಚುವುದು ಖಂಡಿತ.
ಧನ್ಯವಾದಗಳು.

Unknown said...

ಎಲ್ಲೆಲ್ಲೂ ಸಂಗೀತವೇ ಎನ್ನುವಂತೆ ಎಲ್ಲೆಲ್ಲೂ ಸೌಂದರ್ಯವೇ ಕಾಣುವ ಕಣ್ಣಿರಲು! ನಿಮ್ಮ ಹುಡುಕಾಟ ನಿರಂತರವಾಗಿರಲಿ.

PARAANJAPE K.N. said...

ಮಲ್ಲಿ
ನಾವು ನಿತ್ಯ ನಮ್ಮ ಸುತ್ತ ನೋಡುವ ವನಸುಮ ಗಳು ನಿಮ್ಮ ಕ್ಯಾಮರಾ ಕಣ್ಣಿನಲ್ಲಿ ಅದ್ಭುತವಾಗಿ ಮೂಡಿಬ೦ದಿವೆ. ಆ ಲ೦ಟಾನ ದ ಹೂವ೦ತೂ ಮನಮೋಹಕವಾಗಿ ಕಾಣುತ್ತಿದೆ. ಬರಿಯ ಕಣ್ಣಿನಿ೦ದ ಲ೦ಟಾನದ ಹೂ ಅಷ್ಟು ಆಕರ್ಷಕವಾಗಿ ನನಗೆ ಕಾಣಿಸುವುದಿಲ್ಲ. ಕಾರಣ ಅದಕ್ಕಿರುವ ಒ೦ಥರದ ವಾಸನೆಯೂ ಇರಬಹುದು. ಚೆನ್ನಾಗಿವೆ ಚಿತ್ರಗಳು, ಮತ್ತು ಮಾಹಿತಿ ಬರಹ.

ಮನಸು said...

ಇವೆಲ್ಲಾ ನಮ್ಮೊರಿನವೇ ಎಂದುಕೊಂಡಿದ್ದೆವು ನಿಮ್ಮ ಮಾಹಿತಿ ಎಲ್ಲವನ್ನು ತಿಳಿಸಿದೆ. ಚಿತ್ರಗಳು ಎಲ್ಲವೊ ಚೆನ್ನಾಗಿವೆ.
ಧನ್ಯವಾದಗಳು

guruve said...

ಬಲು ಚಂದದ ಹೂವುಗಳು.. :)

Naveen ಹಳ್ಳಿ ಹುಡುಗ said...

ಅಣ್ಣ.. ಫೋಟೋಗಳು ಮತ್ತು ಲೇಖನ ಎರಡು ಚೆನ್ನಾಗಿವೆ.

Srinidhi said...

nice photos!

sunaath said...

"ಹೂವು ಚೆಲುವೆಲ್ಲಾ ತಂದೆಂದಿತು" ಎನ್ನುವ ಹಾಡು ಸತ್ಯವನ್ನೇ ಹೇಳುತ್ತದೆ. ಆ ಚೆಲುವನ್ನು ನೀವು ಸೆರೆ ಹಿಡಿದು ನಮಗೆಲ್ಲ ತೋರಿಸಿದ್ದಕ್ಕಾಗಿ ಧನ್ಯವಾದಗಳು.

Sushrutha Dodderi said...

ಕಾನನದ ಸುಮವೊಂದು ಸೌರಭವ ತಾ ಸೂಸಿ ಸಫಲತೆಯ ಪಡೆವಂತೆ ಮಾಡೆನ್ನ ತಂದೆ.. (ಆರ್ ಎನ್ ಜಯಗೋಪಾಲ್).

ಚಂದ ಫೋಟೋಸ್ ಸರ್..

suresh kota said...

ಹೂ,ಬರಹ,ಫೋಟೋಗ್ರಫಿ ಎಲ್ಲ ಚೆಂದ ಉಂಟು ಮಾರಾಯ್ರೆ!

Laxman (ಲಕ್ಷ್ಮಣ ಬಿರಾದಾರ) said...

ಹೂಗಳ ಮಾಹಿತಿ ಕೊಟ್ಟದ್ದಕ್ಕಾಗಿ ತುಂಬಾ ಧನ್ಯವಾದಗಳು

ಅಹರ್ನಿಶಿ said...

ಮಲ್ಲಿಕಾರ್ಜುನ್,
ನಿಮ್ಮ ಬುತ್ತಿಯಲ್ಲಿ ಇನ್ನೂ ಏನೇನಿದೆಯೊ ನಾ ಕಾಣೆ!

ಹೂವೇ...ಹೂವೇ...ನಿನ್ನೀ ನಗುವಿಗೆ ಕಾರಣವೇನು.......

ಜೀವ ಹೂವಾಯಿತೂ ಬಾಳು ಜೇನಾಯಿತು...........

ಹೂವಿ೦ದ ಹೂವಿಗೆ ಹಾರುವ ದು೦ಬಿ...........

ಯಾವ ಹೂವು ಯಾರ ಮುಡಿಗೊ............

ಹೂವು ಚೆಲುವೆಲ್ಲಾ ತಂದೆಂದಿತು.............

ನಿಮ್ಮ ಬ್ಲಾಗ೦ತೂ "ಚೆ೦ದವಳ್ಲಿಯ ತೋಟ"ಕ್ಕಿ೦ತ ಸು೦ದರ.

PaLa said...

ಹಲವು ಸುಂದರ ಹೂಗಳ ಪರಿಚಯ ಚೆನ್ನಾಗಿದೆ, ಅಂದಹಾಗೆ ಮುಟ್ಟಿದ ಮುನಿಯನ್ನು ಕನ್ನಡದಲ್ಲಿ "ನಾಚಿಕೆ ಮುಳ್ಳು" ಅಂತಾನೂ ಕರೀತಾರೆ.

ವಿನುತ said...

ಚ೦ದದ ಚಿತ್ರಗಳು ಹಾಗು ವಿವರಗಳು. ಮೆಕ್ಸಿಕನ್ ಫ್ಲಾಸ್ ಹೂವಿನ ಮೊಗ್ಗನ್ನು ಒ೦ದು ಕಡ್ಡಿಗೆ ಸಿಕ್ಕಿಸಿ, ಮೇಲಿನಿ೦ದ ವೃತ್ತಾಕಾರದಲ್ಲಿ ಕೆಳಗೆಳೆದು, ಅದರ ಗಡ್ಡದ ಕೂದಲಿನ೦ತಹ ಎಲೆಗಳು ಕಡ್ಡಿಗೆ ಹತ್ತಿಕೊ೦ಡನ೦ತರ, ಅವನ್ನು ಕೆಳಗಿನಿ೦ದ ಮೇಲೆ ಒ೦ದೇ ಓಘದಲ್ಲಿ ಮೇಲೆಳೆದು ಹತ್ತಿಯ ಹೂವಿನ೦ತಾದಾಗ ಗಾಳಿಯಲ್ಲಿ ಹಾರಿಸಿ ಆಟವಾಡುತ್ತಿದ್ದೆವು. ಹಳೆಯದನ್ನು ನೆನಪಿಸಿದ್ದಕ್ಕೆ ಮತ್ತೊಮ್ಮೆ ಥ್ಯಾಂಕ್ಸ್.

Anonymous said...

ಚೆಂದದ ಚಿತ್ರಗಳು, ಜೊತೆಗೆ ಅವುಗಳ ಪರಿಚಯ;ಚೆನ್ನಾಗಿದೆ.

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಸರ್‍,

ಚಿತ್ರ-ಲೇಖನ ಚೆನ್ನಾಗಿದೆ. ದಿನವೂ ನಮ್ಮ ಕ್ಯಾಂಪಸ್ಸಿನಲ್ಲಿ ಈ ಹೂಗಿಡಗಳನ್ನು ನೋಡಿದ್ದರೂ ಅದರ ಕೆಲವು ಹೆಸರುಗಳು, ತವರು ಇವೆಲ್ಲ ನನಗೆ ತಿಳಿದಿರಲಿಲ್ಲ. ಸುಂದರ ಚಿತ್ರಗಳೊಡನೆ ವಿವರಣೆ ನೀಡಿದ್ದಕ್ಕಾಗಿ ಧನ್ಯವಾದಗಳು.

Umesh Balikai said...
This comment has been removed by the author.
Umesh Balikai said...

ಮಲ್ಲಿ ಸರ್,

Beauty is in the eyes of the beholder ಅಂತಾರೆ.

ಈ ಸಸ್ಯಗಳನ್ನು ನಮ್ಮ ಊರಿನ ಹೊಲದ ಬದುವುಗಳಲ್ಲಿ, ಹಳ್ಳ-ಕೊಳ್ಳಗಳಲ್ಲಿ, ರಸ್ತೆ ಅಂಚಿನಲ್ಲಿ ಸಾವಿರಾರು ಸಲ ನೋಡಿರಬಹುದು; ಆದರೆ ಯಾವತ್ತೂ ಆ ಹೂಗಳ ಅಂದವನ್ನು ಆನಂದಿಸಿರಲಿಲ್ಲ. ಬರೀ ಕಸ ಎಂದು ಕಡೆಗಣಿಸುತ್ತಿದ್ದೆ. ಈ 'ಕಸ' ದಂತಹ ಹೂಗಳ ಸುಂದರ ಮುಖ ಪರಿಚಯಿಸಿದ್ದಕ್ಕೆ ವಂದನೆಗಳು. ಆ ದೇವರ ಸೃಷ್ಟಿಯೆ ಅದ್ಭುತ. ಅವನ ಸೃಚ್ತಿ ಯಾವುದೂ ಕಾಸವಲ್ಲ. ಎಲ್ಲದರಲ್ಲೂ ಒಂದು ವಿಶಿಷ್ಟ , ಅನುಪಮ ಸೌಂದರ್ಯ ತುಂಬಿದ್ದಾನೆ. ನೋಡುವ ಕಣ್ಣಿರಬೇಕಷ್ಟೇ.

ಅಂದ ಹಾಗೆ, ಕೊನೆಯ "ಲಾಂಟಾನಾ" ಸಸ್ಯಕ್ಕೆ ನಮ್ಮ ಧಾರವಾಡದ ಕಡೆ "ಪಂಚರಂಗಿ" ಅಂತಾರೆ. ಅಲ್ಲಿ ಅದರ ಹೂಗಳಲ್ಲಿ ಐದು ವಿವಿಧ ವರ್ಣಗಳ ಪಕಳೆಗಳಿರುತ್ತವೆ.

ಮನಮೋಹಕ ಛಾಯಾಚಿತ್ರಗಳಿಗಾಗಿ, ಧನ್ಯವಾದಗಳು.

-ಉಮೀ

srujan said...

malli
lantana yentha adbhutha photo adu.
thakshana 25 varshagala hindina balyakke hodangaythu.
blood flower'chithra nodtha nodtha padya ondannu odida anubhava aythu..
hats off malli.

srujan

ಶಿವಪ್ರಕಾಶ್ said...

beautiful flowers with beautiful explanation.
thank you

ರೂpaश्री said...

ಕೆಲವು ಹೂವುಗಳನ್ನು ನೋಡಿ ಪರಿಚಯವಿತ್ತಾದರೂ ಇಷ್ಟೊಂದು ವಿಚಾರ ತಿಳಿದಿರಲಿಲ್ಲ.. ಫೋಟೋಗಳಂತೂ ಅಮೋಘವಾಗಿವೆ!!
ಧನ್ಯವಾದಗಳು

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ನಾಚಿಕೆ ಮುಳ್ಳು, ಚದರಂಗಿ ...ಈ ತರಹದ ಸ್ಥಳೀಯ ನಾಮಗಳ ಹೆಸರು ತಿಳಿಸಿದ್ದಕ್ಕೆ ಧನ್ಯವಾದಗಳು. ಇನ್ನೂ ಉಳಿದವುಗಳ ಹೆಸರು ತಿಳಿಸಿ. ನಿಮಗೆ ಇವುಗಳ ವೈದ್ಯಕೀಯ ಗುಣಗಳು ತಿಳಿದಿದೆ. ಅದರ ಬಗ್ಗೆಯೂ ಬರೆಯಿರಿ. ಇದರಿಂದ ಬ್ಲಾಗಿಗರೆಲ್ಲರಿಗೂ ಉಪಯುಕ್ತ ಮಾಹಿತಿ ತಿಳಿಯುತ್ತೆ.

ಮಲ್ಲಿಕಾರ್ಜುನ.ಡಿ.ಜಿ. said...

ಜ್ಯೋತಿಯವರೆ,
ಚಿಟ್ಟೆ ಮತ್ತು ಹಕ್ಕಿಗಳ ವೀಕ್ಷಣೆಯಂತೆಯೇ ಹೂಗಳನ್ನು ವೀಕ್ಷಿಸುವುದೂ ಒಳ್ಳೆಯ ಹವ್ಯಾಸವೇ. ಏನಂತೀರಿ? ಸುಮ್ಮನೆ ವೀಕ್ಷಿಸುವುದಿಲ್ಲವಲ್ಲ. ಅದರ ಬಗ್ಗೆ ಮಾಹಿತಿ ಹುಡುಕುತ್ತೇವೆ. ಹಾಗಾಗಿ ನಮಗೆ ಅದರ ಹೆಸರು ಇತ್ಯಾದಿ ನೆನಪಿರುತ್ತೆ.

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಕಾಂತ ಮೇಡಂ,
ನಿಜ. ನೀವು ಹೇಳಿದಂತೆ ಇವುಗಳನ್ನು ಮಾನವ ಕಡೆಗಣಿಸಿರುವುದರಿಂದ ತಮ್ಮ ಪಾಡಿಗೆ ತಾವು ಉಳಿದಿವೆ. ಇಲ್ಲದಿದ್ದರೆ, ಹರೋಹರ!

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನೀವು ಲಾಂಟಾನ ಬಗ್ಗೆ ಬರೆದಿರುವುದು ಅಕ್ಷರಶಃ ಸತ್ಯ. ಇವು ಚಿಟ್ಟೆಗಳ ಹೊಟ್ಟೆ ತುಂಬಿಸುವ ಹೂಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ಧನ್ಯವಾದಗಳು. ನೀವಂದಂತೆ ನಾವು ಒಳಗಣ್ಣನ್ನು ಸದಾ ತೆರೆದಿರಬೇಕು.

Guruprasad said...

ಮಲ್ಲಿಕಾರ್ಜುನ್
ಎಂದಿನಂತೆ ನಿಮ್ಮ ಲೇಖನ ಹಾಗು ಫೋಟೋ... ಅದ್ಬುತ.... ಒಳ್ಳೆಯ ಅಪೂರ್ವ ಮಾಹಿತಿಯನ್ನು ಕೊಟ್ಟಿದ್ದಿರಿ, ಇಲ್ಲಿರುವ ಹೂ ಗಳು ಗೊತ್ತಿದ್ದರೂ ಇಸ್ತೊಂದ್ ಮಾಹಿತಿ ಇರಲಿಲ್ಲ .... ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು......
ಗುರು

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ಹೂಗಳು ಭೂಮಿಯ ಮೇಲೆ ಅರಳಿದ್ದು 135 ಮಿಲಿಯನ್ ವರ್ಷಗಳ ಹಿಂದೆಯಂತೆ. ಎಲ್ಲಾ ಹವಾಮಾನ, ಸ್ಥಳಗಳಲ್ಲೂ ಇರುವ ಇವುಗಳನ್ನು ನೋಡುವುದೇ ಸೊಗಸು.

ಮಲ್ಲಿಕಾರ್ಜುನ.ಡಿ.ಜಿ. said...

ಮನಸು ಅವರೆ,
ಪ್ರಪಂಚವೇ ಒಂದು ಮನೆಯಿದ್ದಂತೆ. ಹಕ್ಕಿ, ಚಿಟ್ಟೆ, ಹೂಗಳಿಗೆ ಗಡಿಗಳಿಲ್ಲ. ಎಲ್ಲ ಮಾನವ ನಿರ್ಮಿತ. ಆದರೂ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೆಲ್ಲೂ ಸಲ್ಲುವ ಇವುಗಳು ಬೆರಗು ಉಂಟುಮಾಡುತ್ತವೆ ಅಲ್ಲವೇ?

ಮಲ್ಲಿಕಾರ್ಜುನ.ಡಿ.ಜಿ. said...

ಗುರುಪ್ರಸಾದ್,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ನವೀನ್,
ಥ್ಯಾಂಕ್ಸ್.
ಶ್ರೀನಿಧಿ,
ನಿಮಗೂ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸುನಾತ್ ಸರ್,
ಮಳೆ ಬರಲಿ. ಇನ್ನೂ ಮತ್ತಷ್ಟು ಇಂತಹ ಸೌಂಧರ್ಯದ ಖನಿಗಳನ್ನು ನಿಮಗಾಗಿ ಸೆರೆಹಿಡಿಯುವೆ.

ಮಲ್ಲಿಕಾರ್ಜುನ.ಡಿ.ಜಿ. said...

ಸುಶ್ರುತ ಅವರೆ,
ನಿಜಕ್ಕೂ ಚಂದದ ಮತ್ತು ಅರ್ಥಪೂರ್ಣ ಸಾಲುಗಳು. ಧನ್ಯವಾದಗಳು.

SSK said...

ಮಲ್ಲಿಕಾರ್ಜುನ ಅವರೇ,
ಲೇಖನ ಮತ್ತು ಚಿತ್ರಗಳು ಚೆನ್ನಾಗಿವೆ. ವಿವಿಧ ಬಗೆಯ ಹೂಗಳನ್ನು ಅವುಗಳ ಹೆಸರಿನೊಂದಿಗೆ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು!

ಮಲ್ಲಿಕಾರ್ಜುನ.ಡಿ.ಜಿ. said...

ಸುರೇಶ್ ಕೋಟ ಅವರೆ,
ಧನ್ಯವಾದಗಳು. ಹೀಗೇ ಪ್ರೋತ್ಸಾಹಿಸುತ್ತಿರಿ.

ಮಲ್ಲಿಕಾರ್ಜುನ.ಡಿ.ಜಿ. said...

ಲಕ್ಷ್ಮಣ್ ಸರ್,
ಮಳೆ ಬರಲಿ ಈ ಬಾರಿ ಇನ್ನಷ್ಟು ಸಂಗ್ರಹಿಸುವ ಉದ್ದೇಶವಿದೆ. ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಅಹರ್ನಿಶಿ ಶ್ರೀಧರ್ ಸರ್,
ತುಂಬಾ ಚೆನಾಗಿರುವ titles ಕೊಟ್ಟಿದ್ದೀರಿ. ಪ್ರತಿ ಹೂವಿನ ಫೋಟೋ ಕೆಳಗೆ caption ರೀತಿ ಬಳಸಿಕೊಳ್ಳಬಹುದಲ್ವಾ?
ಧನ್ಯವಾದಗಳು ಸರ್. ಇನ್ನಷ್ಟು ವನಸುಮಗಳನ್ನು ತರುವೆ.

ಮಲ್ಲಿಕಾರ್ಜುನ.ಡಿ.ಜಿ. said...

ಪಾಲಚಂದ್ರ ಅವರೆ,
ಆಡುಮಾತಿನಲ್ಲಿ ಈ ಹೂಗಳಿಗೆ, ಸಸ್ಯಗಳಿಗೆ ಇರುವ ಹೆಸರುಗಳನ್ನು ದಾಖಲಿಸಬೇಕಿದೆ. ನಿಮ್ಮ ಸಹಾಯ ಈ ಕೆಲಸಕ್ಕೆ ಅತ್ಯಗತ್ಯ. ತಿಳಿಸುತ್ತಿರಿ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ವಿನುತ ಅವರೆ,
ಈ ಹೂಗಳ ಚಿತ್ರಗಳಿಂದ ನಿಮ್ಮ ಬಾಲ್ಯದ ಆಟ ನೆನಪಾಗಿದ್ದು ತುಂಬಾ ಸಂತಸದ ಸಂಗತಿ. ಏಕೆಂದರೆ ಅವೆಲ್ಲಾ Golden Days. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಗ್ರೀಷ್ಮಾ ಅವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಶೇಖರ್ ಸರ್,
ನಿಮ್ಮ ಕ್ಯಾಂಪಸ್ಸಿನಲ್ಲಿ ತುಂಬಾ ಹೂಗಳಿವೆಯಾ? ಎಲ್ಲಿರುವುದು?
ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಉಮೇಶ ಅವರೆ,
ನೀವು ಹೇಳಿದಂತೆ ನೋಡುವ ಕಣ್ಣಿದ್ದರೆ ನಮ್ಮ ಸುತ್ತಲೇ ಇರುವ ಅಗಾಧ ಸೌಂಧರ್ಯ ಕಾಣುತ್ತದೆ. ಹಾಗೇ ನಿಮ್ಮ ಕಡೆ ಲಾಂಟಾನಕ್ಕೆ ಇರುವ ಸ್ಥಳೀಯ ನಾಮವನ್ನೂ ಹೇಳಿದ್ದೀರಿ. ಧನ್ಯವಾದಗಳು. ಈ ಎಲ್ಲಾ ಸಸ್ಯಗಳ ಸ್ಥಳೀಯ ಹೆಸರುಗಳನ್ನು ಸಂಗ್ರಹಿಸಬೇಕಿದೆ, ಜೊತೆಗೆ ಅವುಗಳ ವೈದ್ಯಕೀಯ ಉಪಯೋಗಗಳೊಂದಿಗೆ.

ಮಲ್ಲಿಕಾರ್ಜುನ.ಡಿ.ಜಿ. said...

ಸೃಜನ್ ಅವರೆ,
ಈ ಚಿತ್ರಗಳು ನಿಮ್ಮನ್ನು ಬಾಲ್ಯಕ್ಕೆ ಕರೆದೊಯ್ದದ್ದು ತಿಳಿದು ಸಂತಸವಾಯ್ತು. ಬಾಲ್ಯದ ಮಧುರ ಕ್ಷಣಗಳನ್ನು ಮೆಲುಕು ಹಾಕುವುದು ಎಷ್ಟು ಚೆನ್ನ ಅಲ್ಲವೆ?

ಮಲ್ಲಿಕಾರ್ಜುನ.ಡಿ.ಜಿ. said...

ಶಿವಪ್ರಕಾಶ್,
ತುಂಬಾ ತುಂಬಾ ಥ್ಯಾಂಕ್ಸ್.ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀಯವರೆ,
ಧನ್ಯವಾದಗಳು. ಮಳೆಗಾಗಿ ಕಾಯುತ್ತಿರುವೆ. ಮುಂಗಾರು ಆರಂಭದೊಡನೆ ಹೂಗಳ ಫೋಟೋ ತೆಗೆಯುವುದಿದೆ. ಇನ್ನಷ್ಟು ಮತ್ತಷ್ಟು ಬ್ಲಾಗಿಗೆ ಹೊತ್ತು ತರುವೆ.

ಮಲ್ಲಿಕಾರ್ಜುನ.ಡಿ.ಜಿ. said...

ಗುರು ಅವರೆ,
ಧನ್ಯವಾದಗಳು. ಚಿಟ್ಟೆಯ ಫೋಟೋ ತೆಗೆಯಲು ಬೆಳಗ್ಗೆಯೇ ಹೋಗುತ್ತಿದ್ದೆ. ಕೆಲವೊಮ್ಮೆ ಏನೂ ಸಿಗುತ್ತಿರಲಿಲ್ಲ. ಆಗ ಅಲ್ಲಿ ಯಾವುದೇ ಹೂ ಸಿಗಲಿ ಅದರ ಫೋಟೋ ತೆಗೆದು ಬರುತ್ತಿದ್ದೆ. ನಂತರ ಅದರ ಹೆಸರು ಇತ್ಯಾದಿ ವಿವರಗಳ ಹಿಂದೆ ಬಿದ್ದಾಗ ...ಇದೊಂದು ಹುಚ್ಚು ಅಂತೀರಾ?!!

ಮಲ್ಲಿಕಾರ್ಜುನ.ಡಿ.ಜಿ. said...

SSK ಅವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹದ ಮಾತುಗಳಿಂದ ಇನ್ನಷ್ಟು ಹೂಗಳನ್ನು ಹೊತ್ತು ತರುವೆ.

ಮಿಥುನ ಕೊಡೆತ್ತೂರು said...

ಹೂವುಗಳ ಫೊಟೋ ವಾಹ್

BHAVANA PRAPANCHA said...

Sir,
I just saw the photograph of a rare flower in Paraanjape's blog, and then came here to see more of your photos. It is really nice, very good collection, keep it up

Unknown said...

Mallikaarjun,

Paraanjape yavara blog ninda illige bande, nimma blog thumba chennaagide. photogalu manamohaka

Unknown said...

ಮಲ್ಲಿಕಾರ್ಜುನ್ ಸರ್
ನಿಮ್ಮ ಬ್ಲಾಗ್ ಆಕರ್ಷಕ. ಪರಾ೦ಜಪೆಯವರ ಬ್ಲಾಗ್ ನಲ್ಲಿದ್ದ ಚಿತ್ರ ನೋಡಿ ಇಲ್ಲಿಗೆ ಬ೦ದೆ.

Unknown said...

ಮಲ್ಲಿಕಾರ್ಜುನ್ ಸರ್
ಪರಾಂಜಪೆಯವರ ಬ್ಲಾಗ್ ಗೆ ಹೋಗಿದ್ದೆ, ಅಲ್ಲಿ೦ದ ನೇರ ನಿಮ್ಮ ಬ್ಲಾಗಿಗೆ ಬ೦ದೆ. Really I was stunned to see a host of photographs. It's very nice.

ಧರಿತ್ರಿ said...

ಕಣ್ಣು-ಮನಸ್ಸುಗಳನ್ನು ತಣಿಸಿಬಿಡುವ ಹೂವುಗಳು..ಮನದೊಳಗೆ ಖುಷಿ..ಇದೇ ಕಲೆ!
ಬುಟ್ಟಿಗೆ ತುಂಬಾ ಮಾಹಿತಿ...
ಧನ್ಯವಾದಗಳು..
ಮಲ್ಲಿಯಣ್ಣ

-ಧರಿತ್ರಿ

Keshav.Kulkarni said...

ಮಲ್ಲಿ,

ತುಂಬ ಚಂದದ ಫೋಟೋಗಳು ಮತ್ತು ಬರಹ. "ಲಾಜವಂತಿ" ಅನ್ನುವುದು "ಟಚ್ ಮಿ ನಾಟ್" ಅಥ್ವಾ "ಮುಟ್ಟಿದರೆ ಮುನಿ"ಗಿಂತ ಎಷ್ಟು ಚಂದದ ಹೆಸರಲ್ಲವೇ?

- ಕೇಶವ

ಮಲ್ಲಿಕಾರ್ಜುನ.ಡಿ.ಜಿ. said...

ಮಿಥುನ ಅವರೆ,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಭಾವನಾ ಮೇಡಂ,
ಹೌದು. ಪರಂಜಪೆಯವರ ಬ್ಲಾಗ್ ನಾನೂ ನೋಡಿದೆ. ಹೂವಿಗೆ ಹೊಸ ಅರ್ಥ, ರೂಪ ಕೊಟ್ಟಿದ್ದಾರೆ. ತುಂಬಾ ಖುಷಿಯಾಯ್ತು.

ಮಲ್ಲಿಕಾರ್ಜುನ.ಡಿ.ಜಿ. said...

ಬಾಲು ಅವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಸುದೇಶ್,
ತುಂಬಾ ಥ್ಯಾಂಕ್ಸ್. ಹೀಗೇ ಪ್ರೋತ್ಸಾಹವಿರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ನಯನ ಅವರೆ,
ನನ್ನ ಬ್ಲಾಗಿಗೆ ಸ್ವಾಗತ. ಹೀಗೇ ಬಂದು ಬೆನ್ನು ತಟ್ಟುತ್ತಿರಿ. ನಿಮ್ಮ ಅನಿಸಿಕೆ ತಿಳಿಸುತ್ತಿರಿ.

ಮಲ್ಲಿಕಾರ್ಜುನ.ಡಿ.ಜಿ. said...

ಧರಿತ್ರಿಯವರೆ,
ಧನ್ಯವಾದಗಳು. ಮಳೆ ಬರಲಿ(ನಿಮ್ಮ ಬ್ಲಾಗಿನಿಂದ ನಮ್ಮ ಊರಿಗೂ!) ಇನ್ನಷ್ಟು ಹೂಗಳ ಚಿತ್ರಗಳನ್ನು ತಂದು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಮಲ್ಲಿಕಾರ್ಜುನ.ಡಿ.ಜಿ. said...

ಕೇಶವ್ ಅವರೆ,
ಹೌದು ನನಗೂ ಲಾಜವಂತಿ ಹೆಸರು ಇಷ್ಟವಾಯ್ತು. ಪ್ರಕಾಶ್ ಹೆಗಡೆಯವರು ನಾಚಿಕೆ ಮುಳ್ಳು ಎಂಬ ಹೆಸರೂ ಇದೆಯೆಂದು ತಿಳಿಸಿದ್ದಾರೆ. ಈ ರೀತಿ local names ರೆಕಾರ್ಡ್ ಮಾಡಿಡಬೇಕು.

ಜಿ.ಎಸ್.ಬಿ. ಅಗ್ನಿಹೋತ್ರಿ said...

very fine....

b.suresha said...

ಅದ್ಭುತವಾದ ಫೋಟೊಗಳು!
ಈಚೆಗಷ್ಟೇ ಕಾಡು ಸುತತಿ ಬಂದ ನನ್ನ ಕಣ್ಣಿನ ಕ್ಯಾಮೆರಾದಲ್ಲಿ ಇನ್ನೂ ಅನೇಕ ಹೂವುಗಳಿವೆ. ಅವುಗಳ ಹೆಸರು ನನಗೆ ತಿಳಿಯದು. ಆದರೆ ಕಣ್ಣೆದುರು ಅವು ಕಾಮನಬಿಲ್ಲುಗಳನ್ನ ಬರೆದಿವೆ.
ನಿಮ್ಮ ಫೋಟೊಗಳೂ ಅದೇ ಕೆಲಸ ಮಾಡುತ್ತಿವೆ.
ಬಿ.ಸುರೇಶ

ಮಲ್ಲಿಕಾರ್ಜುನ.ಡಿ.ಜಿ. said...

ಅಗ್ನಿಯವರೆ,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸುರೇಶ್ ಸರ್,
ನಿಮ್ಮ ಪ್ರೋತ್ಸಾಹದ ಮಾತುಗಳಿಂದ ತುಂಬಾ ಖುಷಿಯಾಗಿದೆ. ನೀವು ಕಾಡು ಸುತ್ತಿ ಬಂದಿದ್ದೀರ. ನಿಮ್ಮ ಕ್ಯಾಮೆರಾದಲ್ಲಿ ಸಾಕಷ್ಟು ಹೂಗಳಿವೆ ಹಾಗಾದ್ರೆ. ಧನ್ಯವಾದಗಳು.

Archu said...

ಚಂದ ಬರೆದಿದ್ದೀರಿ..ಫೋಟೋಗಳೂ ಸೂಪರ್!ಅಂದ ಹಾಗೆ ನಮ್ಮ ಆಫೀಸಿನಲ್ಲಿ ಲಾಂಟನಾ ಗಿಡಗಳನ್ನು ನೆಟ್ಟಿದ್ದಾರೆ..

ಮಲ್ಲಿಕಾರ್ಜುನ.ಡಿ.ಜಿ. said...

ಅರ್ಚನ ಅವರೆ,
ಧನ್ಯವಾದಗಳು. ಹಾಗೇ ಗಮನಿಸುತ್ತಿರಿ ಲಾಂಟಾನಾಕ್ಕೆ ವಿವಿಧ ಚಿಟ್ಟೆಗಳು ಬರುತ್ತವೆ. ಅದು ನೋಡಲು ಇನ್ನೂ ಸೊಗಸು.