Monday, December 7, 2009

ಹೊಟ್ಟೆ-ಬಟ್ಟೆ

ಬುರ್ ಬುರ್ ಗಂಗಮ್ಮ


ಚಟಾರ್ ಎಂದು ಚಾಟಿಯಲ್ಲಿ ಹೊಡೆದುಕೊಳ್ಳುವ ಬಾಲಕ

ವೆಂಕಟೇಶ್ವರನ ಲೀಲೆ


ಇಲಿ ಪಾಷಾಣ


ದಾಸಯ್ಯ


ಶಿವನ ಹೆಸರಲ್ಲಿ...


ಬುರ್ ಬುರ್ ತಾಯವ್ವ


ಪುಂಗಿನಾದ

18 comments:

ಆನಂದ said...

ಫೋಟೋಗಳು ಚೆನ್ನಾಗಿವೆ.
ಕೈಕಾಲು ಗಟ್ಟಿಯಿದ್ದೂ ಭಿಕ್ಷೆ ಬೇಡೋರನ್ನ ನೋಡಿದರೆ ಅಸಾಧ್ಯ ಕೋಪ ಬರುತ್ತೆ.

Dileep Hegde said...

ತುಂಬಾ ಚೆನ್ನಾಗಿವೆ ಫೋಟೋಗಳು..

ಚುಕ್ಕಿಚಿತ್ತಾರ said...

ಜೀವನಕ್ಕೆ ಹತ್ತೆ೦ಟು ದಾರಿಗಳು.ಹಲವು ವೇಷಗಳು..!!
ಚೆ೦ದದ ಚಿತ್ರಗಳು...
ವ೦ದನೆಗಳು.

Unknown said...

ಗ್ರಾಮೀಣ ಕರ್ನಾಟಕ ಜಾನಪದ ವೈವಿಧ್ಯವನ್ನು ಮಾತಿಲ್ಲದೇ ತೆರೆದಿಟ್ಟಿದ್ದೀರಿ!!!!!!!!!

ವಿನುತ said...

ಉದರ ನಿಮಿತ್ತಮ್, ಬಹುಕೃತವೇಷಮ್! ಸೊಗಸಾದ ಫೋಟೋಗಳು.

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಸರ್‍,

ಫೋಟೋಗಳು ಚೆನ್ನಾಗಿವೆ. ಇದರಲ್ಲಿ ಅವರ ಜೀವನ ಶೈಲಿಯೇ ಅದಾಗಿರುವುದನ್ನು ಸೆರೆಹಿಡಿದಿದ್ದೀರಿ.

ಇತ್ತೀಚೆಗೆ ಇವರುಗಳು ಕಂಡುಬರುವುದು ಅಪರೂಪ. ಸುಮಾರು ೧೫-೨೦ ವರ್ಷಗಳ ಮೊದಲೆಲ್ಲ ಪ್ರತಿದಿನ/ವಾರಗಳು ಮನೆಮನೆಗೂ ಬರುವವರಿದ್ದರು.

ಧನ್ಯವಾದಗಳು.

PARAANJAPE K.N. said...

ನೀವು ಕೊಟ್ಟ ಶೀರ್ಷಿಕೆ ಮತ್ತು ಚಿತ್ರ ಒ೦ದಕ್ಕೊ೦ದು ಹಾಸು-ಹೊಕ್ಕು, ಜನಪದೀಯ ಸ೦ಸ್ಕ್ರತಿ ಬಿ೦ಬಿಸುವ ಫೋಟೋಗಳು ಚೆನ್ನಾಗಿವೆ.

ಸುಪ್ತವರ್ಣ said...

ಅದ್ಭುತ collection !

ಜಲನಯನ said...

ಮಲ್ಲಿ, ನನಗೆ ನಾನು ಮಿಡ್ಲ್ ಸ್ಕೂಲ್ ನಲ್ಲಿರೋವರ್ಗೂ ಈ ಬುರ್-ಬುರ್ ಗಂಗಮ್ಮ ಬಂದ್ರೆ ಹೋಗಿ ಬಚ್ಚಿಟ್ಕೋತಾಯಿದ್ದೆ..ಆಮೇಲೆ..ಶಂಖ ಊದ್ಕೋಂಡು ಮೈಯೆಲ್ಲಾ ಕುಂಕುಮ ಅರಿಶಿಣ ಉಜ್ಜಿಕೊಂಡು..ಬರೇ ಬೀದಿಯಲ್ಲೇ ಊಂಮ್ ಂಮ್ಮ್ಮ್ಮ್ಂಮ್ಮ್ಮ್ ಅಂತ ಶಬ್ದ ಮಾಡ್ತಿದ್ದ ದಾಸಯ್ಯ ಹಳ್ಳಿಗೆ ಬಂದ ಅಂದ್ರೆ ಚಿಕ್ಕ ಚಿಕ್ಕ ಮಕ್ಕಳೆಲ್ಲ ಹೆದರ್ಕೊಳ್ಳೋದನ್ನ ಮನೆಯಲ್ಲಿ ನಮ್ಮ ಹಿರಿಯಣ್ನಗಳು...ಕ್ಯಾಶ್ ಮಾಡ್ಕೋತಾ ಇದ್ದದ್ದು...ನಮ್ಮ ಕೈಲಿ ಕೆಲಸ ಮಾಡಿಸ್ಕೊಳ್ಳೋಕೆ...ಎಲ್ಲಾ ನೆನಪಿಸಿದಿರಿ...ನಿಮ್ಮ ಬರೇ ಚಿತ್ರಗಳ ಮೂಲಕ....

ಸಾಗರದಾಚೆಯ ಇಂಚರ said...

ಸರ್,
ತುಂಬಾ ಸುಂದರ ಫೋಟೋಗಳು
ಒಂದೊಂದು ಫೋಟೋಗಳ ಹಿಂದೆ ಅದೆಷ್ಟು ನೋವಿನ ಕಥೆಯಿದೆಯೋ? ಯಾರಿಗೆ ಗೊತ್ತು
ಕೆಲವರಿಗೆ ದುಡಿದು ತಿನ್ನಲು ಆಲಸ್ಯ
ಇನ್ನೂ ಕೆಲವರಿಗೆ ದುಡಿದರೂ ಹೋಗದ ಬಡತನ

L'Étranger said...

"ಎಲ್ಲಾರು ಮಾಡುವುದು
ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ...."

ಸುಂದರ ಚಿತ್ರಗಳು ಮಲ್ಲಿಕಾರ್ಜುನ್ ಅವರೆ! ಒಳ್ಳೆಯ ಸಂಗ್ರಹ.

ದೀಪಸ್ಮಿತಾ said...

"ಎಲ್ಲಾರೂ ಮಾಡೋದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ". "ಉದರ ನಿಮಿತ್ತಂ ಬಹುಕೃತ ವೇಷಂ". ಆದರೂ ಅನೇಕ ವೃತ್ತಿಗಳು ಆಧುನಿಕತೆಯ ಭರಾಟೆಯಲ್ಲಿ ಕಾಣೆಯಾಗುತ್ತಿವೆ

sunaath said...

ಮಲ್ಲಿಕಾರ್ಜುನ,
ಚಿತ್ರದ compositionಉ ಚಿತ್ರದ ಉದ್ದೇಶವನ್ನು ಸಮರ್ಥವಾಗಿ ಅಭಿವ್ಯಕ್ತಿಸಿರುವ ಫೋಟೋಗಳು ಇವು. ತುಂಬಾ ಚೆನ್ನಾಗಿವೆ. ನಿಮ್ಮ ಕಲಾನೈಪುಣ್ಯಕ್ಕೆ ಇವು ಸಾರ್ಥಕ ಸಂಕೇತಗಳು.

AntharangadaMaathugalu said...

ಮಲ್ಲಿಕಾರ್ಜುನ್ ಸಾರ್.......
ಚಿತ್ರಗಳು ಚೆನ್ನಾಗಿವೆ. ಇವೆಲ್ಲದರ ಜೊತೆ ಮುಳ್ಳಿನ ಮೆಟ್ಟುಗಳನ್ನು ಧರಿಸಿ, ದಿನವೆಲ್ಲಾ ನಿಂತಿರುತ್ತಿದ್ದ ದಾಸಯ್ಯ ಮತ್ತು ಕೆಲವರು ಮುಳ್ಳಿನ ಹಲಗೆಯ ಮೇಲೆ ಮಲಗಿಯೂ ಯಾಚಿಸುತ್ತಿದ್ದರು. ಅವೆಲ್ಲಾ ನೆನಪಾಯಿತು ನಿಮ್ಮ ಚಿತ್ರಗಳಿಂದ..

ಶ್ಯಾಮಲ

Ittigecement said...

ಹುಡುಕಾಟದವರೆ...

ನಮ್ಮ ದೇಶದ ನಂಬಿಕೆಯಲ್ಲಿ ಬೇಡುವದು ದಾಸ್ಯವಲ್ಲ...
ಅದು ನಮ್ಮ ಅಹಂ ತೆಗೆದು ಹಾಕುತ್ತದೆ...

ಗುರುಕುಲದಲ್ಲಿರುವಾಗ ಬೇಡಿ ಬಂದ ಅಕ್ಕಿಯಲ್ಲಿ ಗುರುಗಳಿಗೆ ಬೇಯಿಸಿ ತಾವೂ ತಿನ್ನುವ ಸಂಪ್ರದಾಯ ಇತ್ತಂತೆ..

ಬೌದ್ಧ ಬಿಕ್ಷುಗಳು, ಕೆಲವು ದೆವರ ಭಕ್ತರು ಬೇಡಿ ಬಂದ ಹಣದಲ್ಲೇ ಜೀವನ ಸಾಗಿಸುತ್ತಿದ್ದರು...

ನಮ್ಮ ದೇವತೆಗಳೂ ಬಿಕ್ಷೆ ಬೇಡಿದ ಕಥೆಗಳನ್ನು ಓದಿದ್ದೇವೆ...!

ನಿಮ್ಮ ಫೋಟೊಗಳನ್ನು ನೋಡಿದಾಗ ಇವೆಲ್ಲ ನೆನಪಾದವು...

ನಿಮ್ಮ ಹುಡುಕಾಟಕ್ಕೆ,
ಚಂದದ ಫೋಟೊಗಳಿಗೆ ಅಭಿನಂದನೆಗಳು...

Anonymous said...

ನಮಸ್ತೆ ಸಾರ್,
ಪೋಟೋ ಚನ್ನಾಗಿವೆ,
ಮಂಜುನಾಥ ಥಳ್ಳಿಹಾಳ
ಗದಗ ಜಿಲ್ಲೆ

shivu.k said...

ಮಲ್ಲಿಕಾರ್ಜುನ್,

ಹೊಟ್ಟೆ ಪಾಡಿಗೆ ಈ ಮನುಷ್ಯರು ಏನೆಲ್ಲಾ ಪಡಿಪಾಟಲು ಪಡುತ್ತಾರೆ ಅನ್ನುವುದನ್ನು ಚಿತ್ರಸಹಿತ ತೋರಿಸಿದ್ದೀರಿ..

ಸೀತಾರಾಮ. ಕೆ. / SITARAM.K said...

ಚೆ೦ದದ ಚಾಯಾಚಿತ್ರಗಳು ಮಲ್ಲಿಯವರೇ.
ಹಾವಾಡಿಗರು, ಸಾರುವ ಐನಾರಯ್ಯ(ಕೊಡೆ ಹಿಡಿದು ಖುರ್ಚಿ ಮೇಲೆ ನಿ೦ತು ಕಾಲಭವಿಷ್ಯ ಹೇಳೊ), ಹಠದ ಮಲ್ಲಯ್ಯ( ಮುಳ್ಳಿನ ಮೆಟ್ಟಲ್ಲಿ ನಿಲ್ಲುವ), ಕಡ್ಡಿ ವೀರಭಧ್ರ( ಬಯಿ,ಕಣ್ಣ್ರೆಪ್ಪೆ,ಕೆನ್ನೆ ಮೇಲೆ ತ೦ತಿ ಪೋಣಿಸುವ), ವೇಷಗಾರರು, ಮೋಡಿಕಾರರು, ವಿಚಿತ್ರ ಶಬ್ದ ಬರಿಸುವ ಕಾಡಸಿದ್ಧರು, ಕೊರ೦ವಜಿಗಳು, ಇನ್ನು ಅನೇಕ ವೃತ್ತಿಗಳು ಇತ್ತೀಚೆಗೆ ಕಾಣೇಯಾಗುತ್ತಿವೆ. ಇನ್ನು ತಮ್ಮ೦ತವರ ಚಾಯಾಚಿತ್ರದಲ್ಲೇ ನೋಡಬೇಕೇನೋ?