Thursday, September 24, 2009

ಹಲವುರೂಪ ಒಂದೇಗುಣ

ವ್ಯಾಯಾಮ ಮಾಡಿ ಆರೋಗ್ಯವಂತರಾಗಿ. ಆದರೆ ಬೆರ್ಚಪ್ಪನಷ್ಟು ಬೇಡ!

ಸೊಂಡಿಲ ಮೂಲಕ ಮಾತುಕತೆ!

ನಗು.. ನೀನಗು.. ಕಿರುನಗೆನಗು..

ತಲೆಬಾರ..(ಹೆಡ್ ವೇಯ್ಟ್!)

ಬ್ಯಾಲೆನ್ಸ್... ಬ್ಯಾಲೆನ್ಸ್...

ಸವಿನಿದ್ರೆ!

ಕೈಕೆಲಸ

ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ..

30 comments:

ಸುಮ said...

superb!!!!

ಸೀತಾರಾಮ. ಕೆ. / SITARAM.K said...

ಮಲ್ಲಿಕಾರ್ಜುನ ಸರ್, ಬಹಳ ಅದ್ಭುತ ಛಾಯಾಚಿತ್ರ ಜೋಡಣೆ. ಒಳ್ಳೇ ಜೋಡಿ ಚಿತ್ರಗಳು.

Unknown said...

ಮಲ್ಲಿಕಾರ್ಜುನ್ ಮನುಷ್ಯ ಕ್ರಿಯೇಟೀವ್ ಆಗಿದ್ದರೆ ಏನೇನೆಲ್ಲಾ ಸಾಧ್ಯ ಎನ್ನುವುದನ್ನು ಈ ಬ್ಲಾಗ್ ಲೋಕ ತೋರಿಸಿಕೊಡುತ್ತಿದೆ. ಕೇವಲ ಪತ್ರಿಕೆಗಳನ್ನು ನೆಚ್ಚಿಕೊಂಡಿದ್ದರೆ, ಈ ಪ್ರಮಾಣದ ಕ್ರಿಯೇಟೀವಿಟಿ ಹೊರಹೊಮ್ಮುತ್ತಿತ್ತೇ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.
ಕೇವಲ ಫೋಟೋಗಳನ್ನು ಕ್ಲಿಕ್ಕಿಸಿ, ಪತ್ರಿಕೆಗಳಲ್ಲಿ ಬಂದಾಗ ನೋಡುವುದು, ಕೆಲವೊಂದನ್ನು ಬ್ಲಾಗಿಗೆ ಹಾಕಿ ಸಂತೋಷಪಡುವುದು ಇವೆಲ್ಲವನ್ನೂ ಮೀರಿದ್ದು ಈ ಸೃಜನಶೀಲತೆ. ನಾವು ಮಾಡಿದ, ಸೃಷ್ಟಿಸಿದ ಕಲಾಕೃತಿಗಳನ್ನು ಮತ್ತೆ ಮತ್ತೆ ನೋಡುತ್ತಾ ಆಸ್ವಾದಿಸುತ್ತಾ ಈ ರೀತಿಯ ಸೃಜನಶೀಲತೆಯನ್ನು ಸಾಧಿಸಬಹುದು. ನಿಮಗೆ ಈ ಕಲೆ ಸಿದ್ದಿಸಿದೆ. ಮೊನ್ನೆ ಶಿವು ಅವರ ಪ್ರೆಸೆಂಟೇಷನ್ನಿಗೆ ಹೋಗಿದ್ದಾಗ, ಕ್ರಿಯೇಟೀವ್ ಫೋಟೋಗ್ರಫಿ ಎಂಬ ಪರಿಭಾಷೆ ಕೇಳಿದ್ದೆ. ಅವರ ಕೆಲವು ಫೋಟೋಗಳನ್ನು ನೋಡಿದ್ದೆ. ಈಗ ಅದರ ಮುಂದುವರೆದ ಭಾಗ ಇದು ಎನ್ನಬಹುದು. ಇದು ನಿರಂತರವಾಗಿರಲಿ.

ಚಂದಿನ | Chandrashekar said...

ಅದ್ಭುತ....

PARAANJAPE K.N. said...

ಮಲ್ಲಿಕ್, ಅದ್ಭುತವಾಗಿವೆ, ನಿಮ್ಮ ಸೃಜನಶೀಲತೆ ಗೊ೦ದು ಸಲಾಮು

Laxman (ಲಕ್ಷ್ಮಣ ಬಿರಾದಾರ) said...

Tumba chennagide concept. Muduvarisi. mundin chitragalannu noduva kutuhal.
LAxman

ಎಚ್. ಆನಂದರಾಮ ಶಾಸ್ತ್ರೀ said...

"ಹಲವು ಐಡಿಯಾ, ಒಬ್ಬನೇ ಛಾಯಾಚಿತ್ರಗ್ರಾಹಕ (ಏಕಮೇವಾದ್ವಿತೀಯ)!"
ಭೇಷ್ ಡಿ.ಜಿ.!

ಜಲನಯನ said...

ಮಲ್ಲಿ ನಿಮ್ಮ ಹೋಲಿಕೆಗಳು ಚನ್ನಾಗಿ ಚಿತ್ರಿತಗೊಂಡಿವೆ...ಅದರಲ್ಲೂ ತಲೆಭಾರ ಮತ್ತು ಸೈಕಲ್ ರಿಕ್ಷಾದಲ್ಲಿ ಪವಡಿಸಿ ರೆಸ್ಟೈಸುತ್ತಿರುವ ರಿಕ್ಷ್ವಾಹಕ...ಮತ್ತು ಬ್ಂಡೆಗಳ ಮೇಲ್ಬಂಡೆ ..ವಾವ್..!!

ತೇಜಸ್ವಿನಿ ಹೆಗಡೆ said...

ಎಲ್ಲಾ ರೂಪಗಳೂ ಅವುಗಳೊಳಗಿನ ಗುಣಗಳೂ ಇಷ್ಟವಾದವು.. ಎಲ್ಲದುಕ್ಕಿಂತ ಬ್ಯಾಲೆನ್ಸ್.. ಹಾಗೂ ಸೊಂಡಿಲ ಮೂಲಕ ಮಾತಿನ ಚಿತ್ರಗಳು ತುಂಬಾ ಇಷ್ಟವಾದವು.

SSK said...

ಮಲ್ಲಿಕಾರ್ಜುನ ಅವರೇ,
ಹೋಲಿಕೆಗಳು ಒಂದಕ್ಕಿಂತಾ ಒಂದು ಚೆನ್ನಾಗಿವೆ.
ಫೋಟೋಗಳು ಅಧ್ಭುತವಾಗಿವೆ, ಧನ್ಯವಾದಗಳು !
ನಿಮ್ಮ ಮತ್ತು ಶಿವೂ ಅವರ ಫೋಟೋ ಗಳಾಗಲಿ, ಲೇಖನಗಳಾಗಲೀ ಅದರ ಬಗ್ಗೆ ಎರಡು ಮಾತಿಲ್ಲ!!

shivu.k said...

ಮಲ್ಲಿಕಾರ್ಜುನ್,

ಡಾ.ಸತ್ಯನಾರಾಯಣರವರ ಮಾತನ್ನು ನಾನು ಪ್ರತಿಪಾದಿಸುತ್ತೇನೆ. ಪತ್ರಿಕೆಗಳನ್ನು ನಂಬಿದ್ದರೆ ಇಂಥ ಕ್ರಿಯೇಟಿವಿಟಿ ಸಿಗುತ್ತಿತ್ತಾ ಅಂತ.

ಎರಡು ಬೇರೆ ಬೇರೆ ಚಿತ್ರಗಳನ್ನು ಈ ರೀತಿ ಹೊಂದಿಸಿ ಅದಕ್ಕೊಂದು ಅರ್ಥ ಕಲ್ಪಿಸುವುದು, ನೋಡಿದಾಗ ತುಟಿಯ ಮೇಲೋಂದು ಕಿರುನಗೆ ಮೂಡಿಸುವುದು ಇಂಥ ಸೃಜನಶೀಲತೆಯಿಂದಲೇ ಸಾಧ್ಯ....ಹೋಲಿಕೆಗಳು ತುಂಬಾ ಚೆನ್ನಾಗಿವೆ..ಇಂಥವು ಇನ್ನಷ್ಟು ಪ್ರಯತ್ನಿಸಿ...

ಸವಿಗನಸು said...

ಅದ್ಭುತವಾಗಿವೆ...,

ಶಿವಪ್ರಕಾಶ್ said...

olle matching matching idave....

sunaath said...

ಮಲ್ಲಿಕಾರ್ಜುನ,
ಇದು ಭಾರಿ imagination!

guruve said...

ಫೋಟೋಗಳು.. ಮತ್ತು ಕಲ್ಪನೆ ಬಹಳ ಚೆನ್ನಾಗಿದೆ.. ಹಿಂದೆ ಇವುಗಳಲ್ಲಿ ಕೆಲವನ್ನು ವಿಜಯ ಕರ್ನಾಟಕದಲ್ಲಿ ಪ್ರಕಟಿಸಿದ್ದೀರಲ್ಲವೆ..? ಆಗಲೇ ನೋಡಿ ಸಂತಸಪಟ್ಟಿದ್ದೆ.

ಶಾಂತಲಾ ಭಂಡಿ (ಸನ್ನಿಧಿ) said...

ಮಲ್ಲಿಕಾರ್ಜುನ್ ಅವರೆ...
ಹೆಚ್ಚಿಗೆ ಹೇಳೋಕೆ ತೋಚ್ತಿಲ್ಲ. Excellent.

Rashmi said...

Excellent photogrphy with great imagination :),tumbaa chenaagide!

Rashmi

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಸರ್‍,

ಎಲ್ಲ ಫೋಟೋಗಳು ಅದ್ಭುತವಾಗಿವೆ. ಜನ, ಜಾನುವಾರು, ಪ್ರಕೃತಿಯೊಳಗಿನ ಒಂದೊಂದು ನೋಟವೂ ಒಂದಕ್ಕೊಂದು ಸಂಬಂಧ ಹೆಣೆದಿರುತ್ತವೆ. ಇವುಗಳನ್ನು ನೋಡುವುದೇ ಮನಸ್ಸಿಗೆ ಮುದ ನೀಡುವ ವಿಷಯ. ಇವೆಲ್ಲ ಭುವಿಯ ಮೇಲಿನದಾದರೆ, ಆಗಸ, ಮೋಡ ಇವೆಲ್ಲ ಮತ್ತೊಂದು ವಿಧದಲ್ಲಿ ಆಕೃತಿಗಳನ್ನು ನೀಡುತ್ತಾ ಮನರಂಜಿಸುತ್ತವೆ.

ನಿಮ್ಮ ಈ ಕ್ರಿಯೇಟಿವಿಟಿಗೆ ಅಭಿನಂದನೆಗಳು.

ಸ್ನೇಹದಿಂದ,

ಚಂದ್ರಶೇಖರ ಬಿ.ಎಚ್.

ಚಕೋರ said...

ಅದ್ಭುತ ಕ್ರಿಯೇಟಿವಿಟಿ.

ನಿಜಕ್ಕೂ ನೀವು ಮೂವರು ಬರಹಗಾರರಿಂದ (ನೀವು, ಶಿವು, ಪ್ರಕಾಶ್ ಹೆಗ್ಡೆ) ಬ್ಲಾಗುಲೋಕ ಬೆಳಗುತ್ತಿದೆ.

ಸುಧೇಶ್ ಶೆಟ್ಟಿ said...

ನೈಸ್ ಕ್ರಿಯೇಟಿವಿಟಿ ಮಲ್ಲಿಕಾರ್ಜುನ್ ಸರ್.... ತು೦ಬಾ ಇಷ್ಟವಾಯಿತು...

Me, Myself & I said...

ಸಾರ್,
ಅದ್ಭುತ... ಸಕಥಾದ ಜೋಡಣೆ

Prabhuraj Moogi said...

ಒಳ್ಳೇ ಹೋಲಿಕೆ ಫೋಟೋಗಳು ಸರ್... ಅದರಲ್ಲೂ ಆ ತಲೆಭಾರ ಕಲ್ಲು ಬಂಡೆ ಫೋಟೊ ಬಹಳ ಇಷ್ಟ ಆಯ್ತು...
ಸತ್ಯನಾರಾಯಣ್ ಶಿವು ಸರ್ ಹೇಳಿದಂತೆ ಕ್ರಿಯೇಟಿವಿಟಿ ಮನಸಿಗನಿಸಿದ್ದು ಮಾಡಲು ಸಾಧ್ಯವಾಗಿದ್ದು ಬ್ಲಾಗನಲ್ಲೇ... ಹೊಸ ಕಿಯೇಟಿವ ಐಡಿಯಾಗಳು ಬರಲಿ...

AntharangadaMaathugalu said...

ಮಲ್ಲಿ ಸಾರ್...
ಚಿತ್ರಗಳೂ ಮಾಹಿತಿಯೂ ಎರಡೂ ತುಂಬಾ ಚೆನ್ನಾಗಿವೆ. ಕತ್ತಾಳೆ ಇಷ್ಟೊಂದು ಉಪಯುಕ್ತವೆಂದು ಗೊತ್ತಿರಲಿಲ್ಲ....

ಶ್ಯಾಮಲ

Laxman (ಲಕ್ಷ್ಮಣ ಬಿರಾದಾರ) said...

ನಾನೋಂದು ಮೊಟ್ಟ ಮೊದಲ ಬಾರಿಗೆ ಒಂದು ಕಥೆ ಬರೆದಿದ್ದೆನೆ. ನೋಡಿ ನಿಮ್ಮ ಆಭಿಪ್ರಾಯ ತಿಳಿಸಿ
www.nanisaha.blogspot.com

Dileep Hegde said...

ಆಹಾ.. ಅದ್ಭುತವಾಗಿದೆ ಜೋಡಣೆ...

Ittigecement said...

ಹುಡುಕಾಟದ ಮಲ್ಲಿಕಾರ್ಜುನ್...

ಎಲ್ಲೆಲ್ಲಿ ಏನೇನು ಹುಡುಕುತ್ತೀರಿ.. ಮಾರಾಯರೆ...
ಎಲ್ಲವೂ ಸೂಪರ್..!

ಈ ಎಲ್ಲ ಫೋಟೊಗಳನ್ನು ಯಾವ್ಯಾವುದೋ ಸಂದರ್ಭದಲ್ಲಿ ತೆಗೆದಿರುತ್ತೀರಿ...
ಅವನ್ನೆಲ್ಲ ಈ ಕಲ್ಪನೆಯಲ್ಲಿ ಜೋಡಿಸಿ ಇಡುವದು ನಿಮ್ಮಂಥಹವರಿಗೆ ಮಾತ್ರ ಸಾಧ್ಯ...!

ಸುಂದರ ಫೋಟೊಗಳು..
ಅವುಗಳ ಒಕ್ಕಣಿಕೆ

ಎಲ್ಲವೂ ಸೊಗಸಾಗಿದೆ...
ಹೊಟ್ಟೆಕಿಚ್ಚು ಬರುವಷ್ಟು.

ಅಭಿನಂದನೆಗಳು...

ಚಿತ್ರಾ said...

ಮಲಿಕಾರ್ಜುನ್ ,
ಸೂಪರ್ರಾಗಿದೆ ! ಹೋಲಿಕೆಗಳು ಅದ್ಭುತ ! ಅಷ್ಟು ಚೆನ್ನಾಗಿ ಹೇಗೆ ಹೊಂದಿಸಿದಿರಿ ಸ್ವಾಮೀ? ಪ್ರಕಾಶ್ ಅವರಂತೆಯೇ ನನಗೂ ಹೊಟ್ಟೆ ಕಿಚ್ಚಾಗುತ್ತಿದೆ !!!

Shweta said...

ಮಲ್ಲಿಕಾರ್ಜುನ ಸರ್‍,
ತುಂಬಾ ಒಳ್ಳೆಯ ಚಿತ್ರಗಳು...creative ಆಗಿದೆ..ಇನ್ನು ಹೇಳೋಕೆ ನನ್ನ ಹತ್ತಿರ ಶಬ್ದಗಳಿಲ್ಲ....
ಧನ್ಯವಾದಗಳು .....

ರೂpaश्री said...

Fantabulous!!

PaLa said...

ಸೂಪರ್, ತುಂಬಾ ಚೆನ್ನಾಗಿ ಹೋಲಿಕೆಯನ್ನು ತೋರಿಸಿದ್ದೀರಿ. ಒಳ್ಳೇ ಕ್ರಿಯೇಟಿವಿಟಿ