"ಟೆನ್ ಪ್ಯಾಕೆಟ್ಸ್ ಗ್ಲೂಕೋಸ್" ಎಂದು ಗಡುಸು ಧ್ವನಿ ಕೇಳಿತು. "ಯಾರಪ್ಪ ಇದು... ಪೆಹೆಲಾ ಬೋಣಿ ಪಂಚಕಲ್ಯಾಣಿ..." ಅಂದುಕೊಳ್ಳುತ್ತಾ ನೋಡಿದೆ.
ಎತ್ತರದ ವ್ಯಕ್ತಿ. ಜೀನ್ಸ್ ಟೀಶರ್ಟ್. ಊರಿಗೆ ಹೊಸಬನ್ಂತಿದ್ದಾನೆ. ರಸ್ತೆಯಲ್ಲಿ ಕಾರನ್ನೂ ನಿಲ್ಲಿಸಿದ್ದಾನೆ. ಅದು ರೇಸ್ ಕಾರು!
ಗ್ಲೂಕೋಸ್ ಕವರಿನಲ್ಲಿ ಜೋಡಿಸುತ್ತಿದ್ದೆ. ಆಗವನು, "ಅರ್ಜೆಂಟ್, ಅರ್ಜೆಂಟ್.." ಅಂದ.
"ಕಾರ್ rally...?" ಎಂದು ಪ್ರಶ್ನಿಸಿದೆ.
"ಎಸ್ ಎಸ್ ಕೆ-೧೦೦೦ rally" ಅಂದ.
* * * *
ಶನಿವಾರ. ಕೆ-೧೦೦೦ rallyಯ ಮೂರನೆ ದಿನ ಹಾಗೂ ಕಡೆಯ ದಿನ. ಎರಡು ದಿನದಿಂದಲೂ ಸಂಜೆ ವೇಳೆ ಮಳೆ ಬಿದ್ದಿತ್ತು. ಮೋಡ ಮುಸುಕಿತ್ತು. ಫೋಟೋ ತೆಗೆಯಲಾಗದಿದ್ರೂ ನೋಡಿಯಾದ್ರೂ ಬರೋಣವೆಂದು ಅಜಿತ್ ಜೊತೆ ಹೊರಟೆ.
ಅವರ ಕ್ಯಾಂಪ್ ಇದ್ದದ್ದು ದ್ಯಾವಪ್ಪನ ಗುಡಿ ಬಳಿ. ಆಗಲೇ ಶುರುವಾಗಿದ್ದರಿಂದ ಅಲ್ಲೆಲ್ಲಾ ಖಾಲಿ ಇತ್ತು. ಎಂಡ್ ಪಾಯಿಂಟ್‌ಗೆ ಹೋಗೋಣವೆಂದುಕೊಂಡು ಅಬ್ಲೂಡು ಬಳಿ ಹೋದರೆ ಪೋಲೀಸರು ಬಿಡಲಿಲ್ಲ. ನನ್ನ ಕ್ಯಾಮೆರಾ ನೋಡಿ ಎಸ್.ಐ., "ಇಲ್ಲಿ ಬೇಡ್ರೀ. ನಿಮ್ಮೊಬ್ಬರನ್ನು ಬಿಟ್ರೆ ಬೇರೆಯವರನ್ನೂ ಬಿಡಬೇಕಾಗುತ್ತೆ. ಶೆಟ್ಟಳ್ಳಿ ಹತ್ರ ಹೋಗಿ. ಅಲ್ಲಿ ಚೆನ್ನಾಗಿ ತೆಗೀಬಹುದು" ಅಂದರು.
ಅಲ್ಲಿಂದ ಹೊರಟು ಮಲ್ಲಳ್ಳಿ ಮುಖಾಂತರ ಶೆಟ್ಟಳ್ಳಿಗೆ ಬಂದೆವು. ಅಲ್ಲಿ ಬೈಕ್ ಬಿಟ್ಟು ಅಡ್ಡ ದಾರಿ ಹಿಡಿದೆವು. ತೋಟಗಳ ಮುಖಾಂತರ ಹಾದು ರ‍್ಯಾಲಿಯ ರಸ್ತೆಗೆ ಬಂದೆವು. ಅಲ್ಲಿ ಆಗಲೇ ಸಾಕಷ್ಟು ಜನ ಜಮಾಯಿಸಿದ್ದರು.
* * * *
ಐಎನ್‌ಆರ್‌ಸಿ(ಇಂಡಿಯನ್ ನ್ಯಾಷನಲ್ rally ಚಾಂಪಿಯನ್‌ಷಿಪ್)ಯ ಎರಡನೇ ಲೆಗ್ ಆಗಿರುವ ಈ rallyಯನ್ನು ನಡೆಸಿದ ಸಂಘಟಕರು ಕರ್ನಾಟಕ ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್, ಐಎಂಜಿ ಹಾಗೂ ಪ್ರೋ ಸ್ಪೋರ್ಟ್ಸ್ ಪ್ರಮೋಷನ್.
ಚಿಕ್ಕಬಳ್ಳಾಪುರ ಜಿಲ್ಲೆಯ ನಮ್ಮೂರು ಶಿಡ್ಲಘಟ್ಟದಲ್ಲಿ ಮಲ್ಬರಿ, ಸಿಲ್ಕ್ ಮತ್ತು ಕ್ಲೇ ಎಂದು ಮೂರು ಸ್ಟೇಜ್‌ಗಳನ್ನು ನಿರ್ಮಿಸಲಾಗಿತ್ತು.
ಸುಮಾರು ೬೦ ಮಂದಿ rallyಯನ್ನು ಆರಂಭಿಸಿದರಾದರೂ, ಬಹುತೇಕ ಚಾಲಕರು ಇಲ್ಲಿ ಸವಾಲು ಎದುರಿಸಲು ವಿಫಲರಾದರು.
ಮಳೆ ಬಿದ್ದಿದ್ದರಿಂದ ಕಾರು ಓಡಿಸುವುದು ಅಷ್ಟು ಸುಲಭವಿರಲಿಲ್ಲ. ಚಕ್ರಗಳು ಸ್ಕಿಡ್ ಆಗುತ್ತಿತ್ತು.
ಆದರೂ ದೇಶದ ಹೆಸರಾಂತ ರೇಸಿಂಗ್ ತಂಡವಾದ ಟೀಮ್ ಎಂಆರ್‌ಎಫ್ ೩೫ನೇ ಕರ್ನಾಟಕ-೧೦೦೦ rallyಯಲ್ಲಿ ಮೆರೆಯಿತು.
ಎಂಆರ್‌ಎಫ್ ತಂಡದ ಅರ್ಜುನ್ ಬಾಲು ಹಾಗೂ ಸುಜಿತ್‌ಕುಮಾರ್ ಮೊದಲ ಸ್ಥಾನ ಪಡೆದರೆ, ಎಂಆರ್‌ಎಫ್‌ನವರೇ ಆದ ಗೌರವ್‌ಗಿಲ್ ಮತ್ತು ಮೂಸಾಶರೀಫ್ ಎರಡನೇ ಸ್ಥಾನ ಪಡೆದರು.
ಮಲಗಿ ಫೋಟೋ ತೆಗೆಯುವ ಪರಿ!
ಪ್ರಥಮ ಸ್ಥಾನ ಪಡೆದ ಅರ್ಜುನ್‌ಬಾಲು ಮತ್ತು ಸುಜಿತ್‌ಕುಮಾರ್ ಕಾರು.
ಎಷ್ಟು ಎತ್ತರ?
ದ್ವಿತೀಯ ಸ್ಥಾನ ಪಡೆದ ಗೌರವ್‌ಗಿಲ್ ಮತ್ತು ಮೂಸಾಶರೀಫ್ ಕಾರು.
25 comments:
ಮಲ್ಲಿಕಾರ್ಜುನ್,
ಕಾರು ಸ್ಪರ್ಧೆಯ ಫೋಟೋಗಳು ಊಟದಲ್ಲಿ ಮುಖ್ಯವಾಗಿ ಅನ್ನವೆನಿಸಿದರೆ....ಜೊತೆಗೆ ತರಾವರಿ ಮತ್ತು ರುಚಿ ರುಚಿಯಾದ ವ್ಯಂಜನಗಳಾಗಿ ಇತರ ಫೋಟೊಗಳು ಗಮನ ಸೆಳೆಯುತ್ತವೆ. ಮಕ್ಕಳು, ಹಳ್ಳಿಜನರು, ಯುವಕರ ಫೋಟೋಗಳು ಚೆನ್ನಾಗಿವೆ....
ಜೊತೆಗೆ ಕಾರ್ ರೇಸಿನ ಮಾಹಿತಿಯೂ ಇಷ್ಟವಾಯಿತು...
ಮಲ್ಲಿಕಾರ್ಜುನ್ ಅವರೆ,
ಒಳ್ಳೆ ಚಿತ್ರಗಳು ಮತ್ತು ಅದರ ಶೀರ್ಷಿಕೆಗಳು. ಇತ್ತೀಚಿಗೆ ಕಾರ್ ರೇಸಿಂಗ್ ಭಾರತದಲ್ಲಿ ಬಹಳ ಜನಪ್ರಿಯವಾಗುತ್ತಿದೆ. ಮೊನ್ನೆ ಎಫ್.ಐ.ಎ. ಮುಖ್ಯಸ್ಥ ಬರ್ನಿ ಎಕ್ಲಿಸ್ಟನ್ ಹೇಳಿಕೆ ಪ್ರಕಾರ ಭಾರತದಲ್ಲಿ ಎಫ್೧ ರೇಸ್ ೨೦೧೦ ನಲ್ಲಿ ಆಗುತ್ತದೆ. ಹೀಗೇ ಚಿತ್ರಗಳನ್ನು ತೆಗೆಯುತ್ತಿರಿ.
ಶಿವು,
ನಿಮ್ಮ ಉಪಮೆ ಬಹಳ ಇಷ್ಟವಾಯಿತು. ಹಾಗೇ ಲೇಖನದಲ್ಲಿ ಏನೇನಿರಬೇಕು ಮತ್ತು ಹೇಗಿದ್ದರೆ ಚೆನ್ನ ಎಂಬುದನ್ನು ಸೂಚ್ಯವಾಗಿ ಹೇಳಿದ್ದೀರಿ. ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಮಲ್ಲಿಕಾರ್ಜುನ್ ಸರ್,
ಒಳ್ಳೆ ಕಾರ್ ಚಿತ್ರಗಳು ಮತ್ತು ಅದರ ಶೀರ್ಷಿಕೆಗಳು ಸೂಪರ್......
ಹೀಗೆ ಬರುತ್ತಾ ಇರಲಿ....
ರೇಸ್ ಕಾರುಗಳ ಅಪರೂಪದ ಚಿತ್ರಗಳ ಜೊತೆಗೆ ನಿಮ್ಮ ಸಮಯಸ್ಪೂಯರ್ತಿಯ ಬರಹ ಮನಸೆಳೆಯುತ್ತದೆ. ಛಾಯಾ ಚಿತ್ರಗಳು ಚೆನ್ನಾಗಿವೆ. ನಿಮ್ಮ ಹುಡುಕಾಟದ ಪ್ರವೃತ್ತಿಗೆ ಜೈ ಹೋ
ರಾಜೀವ್ ಅವರೆ,
ಹೊಸ ಮಾಹಿತಿ ಕೊಟ್ಟಿದ್ದೀರಿ.ಧನ್ಯವಾದಗಳು. ನಿಮ್ಮ ಪ್ರೊತ್ಸಾಹ ಹೀಗೇ ಇರಲಿ.
ಸೂಪರ್ ಕಣ್ರೀ !
ಧನ್ಯವಾದಗಳು .. ರೇಸ್ ಗೆ ನಮ್ಮನ್ನೂ ಕರೆದೊಯ್ದಿದ್ದಕ್ಕೆ
ಪ್ರೇಕ್ಷಕರ ಫೋಟೋಗಳೂ, ನಿಮ್ಮ ಅಡಿಬರಹಗಳೂ ಸಹ ಅಷ್ಟೇ ಚೆನ್ನಾಗಿವೆ !
ಮಲ್ಲಿಕಾರ್ಜುನ,
ನಾನು ಎಲ್ಲಿಯೂ (ಟೀವಿಯಲ್ಲಿ ಸಹ) ಕಾರ್ ರೇಸ್ ನೋಡಿರಲಿಲ್ಲ. ನಿಮ್ಮ ಸ್ಥಿರಚಿತ್ರಗಳನ್ನು ನೋಡಿಯೇ ರೋಮಾಂಚನವಾಯಿತು. ಕಾರುಗಳ ಚಿತ್ರಗಳ ಜೊತೆಗೇ ಮಾನವೀಯ ಗುಣಗಳಿರುವ ಚಿತ್ರಗಳನ್ನು ನೀಡಿದ್ದೀರಿ.ಎಲ್ಲ ಚಿತ್ರಗಳಿಗೆ ರಂಜನೀಯ,ವಿನೋದಪೂರ್ಣ ಅಡಿಬರಹ ಕೊಟ್ಟಿದ್ದೀರಿ. ತುಂಬಾ ಸೊಗಸಾದ post.
ಪ್ರತಿ ಸಲವೂ ಹೊಸದಾದ ವಿಷಯಗಳನ್ನು (ಉದಾ:ಪಕ್ಷಿಗಳಿಗೆ ಉಂಗುರ ತೊಡಿಸುವದು) ನೀಡುತ್ತಿರುವ ನಿಮಗೆ ಧನ್ಯವಾದಗಳು.
ಮಲ್ಲಿಕಾರ್ಜುನ್ ಅವರೆ,
ನಾನು ಕಾರ್ ರೇಸ್ ನೋಡಿಲ್ಲ. ರೇಸಿನಲ್ಲಿ ಬರೀ ಸ್ಪೋರ್ಟ್ಸ್ ಕಾರ್ ಓಡಿಸುತ್ತಾರೆ ಅಂತ ತಿಳಿದಿದ್ದೆ!
ನಿಮ್ಮೀ ಲೇಖನದ ಮೂಲಕ ನನಗೆ ರೇಸ್ ತೋರ್ಸಿದಕ್ಕೆ ಥ್ಯಾಂಕ್ಸ್:)
ಕಾರ್ ರೇಸಿನ ಫೋಟೋಗಳು ಜೊತೆಗೆ ಅವನ್ನು ನೋಡುತ್ತಾ ಬೆರಗಾದ ಪ್ರೇಕ್ಷಕರ ಹಳ್ಳಿಜನರ, ಮಕ್ಕಳ ಫೋಟೋಗಳು ಚೆನ್ನಾಗಿವೆ. ನಿಮ್ಮ ಅಡಿಬರಹಗಳೂ ಸೊಗಸಾಗಿವೆ !
ಸೂಪರ್ ಫೋಟೋಗಳು, ಕಾರುಗಳೂ ನಿಮ್ಮ ಕ್ಯಾಮರಾಕ್ಕೆ ಫೋಸ್ ಕೊಟ್ಟ ಹಾಗಿದೆ :-)
ಹುಡುಕಾಟದ ಮಲ್ಲಿಕಾರ್ಜುನ್...
ನೋಡುವವರು ಅಪಾರ್ಥ ಮಾಡಿಕೊಳ್ಳುವ ಹಾಗೆ ಕುಳಿತುಕೊಂಡಿದ್ದಾರೆ...
ಇಷ್ಟು ರೋಮಾಂಚಕಾರಿ ಫೋಟೊಗಳನ್ನು ನೀವು ಹೇಗೆ... ಯಾವ ಕೋನದಲ್ಲಿ ತೆಗೆದಿರ ಬಹುದು...
ಅದೂ ಮಳೆಗಾಲದ ಕೊಚ್ಚೆ ಅರಲಿನಲ್ಲಿ...!
ನನಗೆ ನಿಮ್ಮ ಶ್ರದ್ಧೆ.. ಶ್ರಮ ಕಾಣುತ್ತಿದೆ....
ಜಂಪ್ ಆಗುವ... ಬೀಳುವ ಕಾರುಗಳ ಫೋಟೊಗಳು..
ನಿಮ್ಮ ಟೈಮಿಂಗ್ಸ್... ಸೂಪರ್...!
ಅಲ್ಲೂ ನಿಮ್ಮ ಕಲಾತ್ಮಕತೆ ಕಾಣುತ್ತಿದೆ...
ಇವೆಲ್ಲಕ್ಕಿಂತ.. ನಿಮ್ಮ ಬರವಣಿಗೆ ..!
ನೀವು ಕೆಲವೊಮ್ಮೆ ಫೋಟೊ ಇಲ್ಲದೆಯೆ.. ಲೇಖನ ಹಾಕಿ...
ನಿಮ್ಮ ಬರವಣಿಗೆ ಫೋಟೊ ಥರಹ ಇರುತ್ತದೆ...
ಸೊಗಸಾದ ಫೋಟೊ,ಲೇಖನ ಉಣ ಬಡಿಸಿದ್ದಕ್ಕೆ ಧನ್ಯವಾದಗಳು....
ಇಣತಹುದೊಂದು ಸ್ಪರ್ಧೆಯನ್ನು ಹತ್ತಿರದಿಂದ ಕಾಣುವ ಆಸೆ ಇಮದಿಗೂ ಮರೀಚಿಕೆಯೇ ಆಗಿದೆ. ಆದರೆ ನಿಮ್ಮ ಫೋಟೋಗಳು ಅದನ್ನು ತಕ್ಕಮಟ್ಟಿಗೆ ತೀರಿಸಿವೆ ಎಂದೇ ಹೇಳಬೇಕು. ಓಂದೇ ಎರಡೇ.... ಹಲವಾರು ಬಗೆಯ ಕಾರುಗಳು ಅವುಗಳ ನೆಗೆತ, ಓಟ ಮೊದಲಾದವುಗಳನ್ನು ನಿಮ್ಮ ಫೋಟೋಗಳಲ್ಲಿಯೇ ಕಾಣಬಹುದು.
ತಲಪುವ ಗುರಿಗಿಂತ ನಡೆಯುವ ಹಾದಿಯೂ ಮುಖ್ಯ ೆಂಬ ಮಾತು ಯಾರು ಹೇಳಿದ್ದೆಂದು ನಿಮಗೂ ಗೊತ್ತಿದೆ. ಹಾಗೆ ಕೇವಲ ಕಾರ್ ರೇಸಿಗೆ ಮಾತ್ರ ಸೀಮಿತವಾಗದೆ ಇ ಇಡೀ ಪರಿಸಿರದ ಸಂಬ್ರಮ ಗದ್ದಲ ಗೌಜು ಎಲ್ಲವನ್ನೂ ನಿಮ್ಮ ಫೋಟೋಗಳು ಹೇಳುತ್ತಿವೆ. ಹ್ಯಾಟ್ಸ್ ಆಫ್ ಮಲ್ಲಿಕಾರ್ಜುನ್
ಮಲ್ಲಿಕಾರ್ಜುನ ಸರ್, ಫೋಟೋಗಳೂ ಸೂಪರ್, ಲೇಖನವೂ ಸಹ. ಜೊತೆಗೆ ಅಲ್ಲಿ ಹಳ್ಳಿಗರ ನೋಟ, ಅವರ ನೋಟಕ್ಕೆ ನಿಮ್ಮ ಕ್ಯಾಮೆರಾ ಕಣ್ಣಿನ ನೋಟ + ಫೋಟೋಗಳಿಗೆ ತಕ್ಕಂತ ಶೀರ್ಷಿಕೆ ಎಲ್ಲವೂ ಚೆನ್ನಾಗಿವೆ. ಎಲ್ಲವೂ ಲೈವ್ ಆಕ್ಯನ್.... ಧನ್ಯವಾದಗಳು.
ಸ್ನೇಹದಿಂದ,
ಚಂದ್ರಶೇಖರ ಬಿ.ಎಚ್.
ಸವಿಗನಸು ಸರ್,
ಮೆಚ್ಚಿದ್ದಕ್ಕೆ ಧನ್ಯವಾದಗಳು.ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.
ಪರಂಜಪೆ ಸರ್,
ತುಂಬ ತುಂಬ ಥ್ಯಾಂಕ್ಸ್. ನಿಮ್ಮ ಮೆಚ್ಚುಗೆಯ ಮಾತುಗಳಿಂದ ನಾನು ಕಾರಿನಂತೆಯೇ ಹಾರಿದ್ದೇನೆ!
ಚಿತ್ರಾ ಅವರೆ,
ಇನ್ನು ಸಾಕಷ್ಟು ಚಿತ್ರಗಳನ್ನು ಆ ದಿನ ತೆಗೆದೆ. ಆದರೆ ಎಲ್ಲವನ್ನೂ ಹಾಕಲು ಸಾಧ್ಯವಿಲ್ಲದೆ ಕೆಲವನ್ನು ಮಾತ್ರ ಹಾಕಿದೆ. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.
ಸುನಾತ್ ಸರ್,
ಸರ್ ನಾನೂ ಸಹ ಕಾರ್ ರೇಸನ್ನು ಎಲ್ಲಿಯೂ ನೋಡಿರಲಿಲ್ಲ. ನಮ್ಮೂರ ಬಳಿಯೇ ಆಗಿದ್ದರಿಂದಾಗಿ ನೋಡುವ ಅವಕಾಶ ಒದಗಿತು.ನಿಮಗೆ ಇಷ್ಟವಾಗಿದ್ದು ತುಂಬಾ ಖುಷಿಕೊಟ್ಟಿತು.
ರೂಪಶ್ರೀಯವರೆ,
ನನಗೂ ಈ ರೇಸ್ ನೋಡುವವರೆಗೂ ಕಾರ್ ರೇಸಿನ ಬಗ್ಗೆ ಏನೂ ತಿಳಿದಿರಲಿಲ್ಲ. ಮೆಚ್ಚಿದ್ದಕ್ಕೆ ಧನ್ಯವಾದಗಳು.
ಜ್ಯೋತಿಯವರೆ,
ಕಾರುಗಳ ವೇಗಕ್ಕೆ ಹೊಂದಿಕೊಂಡಿದ್ದಕ್ಕೆ ಅವು ಪೋಸು ಕೊಟ್ಟವು! ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.
ಪ್ರಕಾಶ್ ಸರ್,
ಅಜಿತ್ ಮತ್ತು ನಾನು ಒಂದು ತೋಟದಲ್ಲಿ ನಿಂತಿದ್ದೆವು. ಉತ್ತಿದ್ದ ಆ ತೋಟದಲ್ಲಿ ಮಳೆಯಿಂದಾಗಿ ನಮಗೆ ಸರಿಯಾಗಿ ನಿಲ್ಲಲೂ ಆಗದಂತಹ ಸ್ಥಿತಿ. ನಿಂತು ನಿಂತು ಆ ಕೆಸರಲ್ಲಿ, ತೋಟಗಳಲ್ಲಿ ನಡೆದು ಫೋಟೋ ತೆಗೆದು ವಾಪಸಾದಾಗ ಆ ಕಾರುಗಳಂತೆಯೇ ಲಡಾಸಾಗಿದ್ದೆವು!
ಸತ್ಯನಾರಾಯಣ್ ಸರ್,
ನಿಮಗೆ ಇಷ್ಟವಾಗಿದ್ದಕ್ಕೆ ಖುಷಿಯಾಯಿತು. ನಮ್ಮೂರಿನ ಪರಿಸರ ಈ ಮುಖಾಂತರ ತೋರಿಸಲು ನನಗೂ ಇಷ್ಟ.
ಅಲ್ಲಿಂದ ವಾಪಸಾಗಿ ನಮ್ಮ ಕೆಸರುಮಯವಾಗಿದ್ದ ಶೂ ಪ್ಯಾಂಟುಗಳನ್ನು ಕ್ಲೀನ್ ಮಾಡಿದ್ದು ದೊಡ್ಡ ಕೆಲಸವಾಯ್ತು!
ಚಂದ್ರಶೇಖರ್ ಸರ್,
ತುಂಬಾ ಥ್ಯಾಂಕ್ಸ್ . ನಿಮ್ಮ ಪ್ರೋತ್ಸಾಹ ಹೀಗೇ ಇರಲಿ. ನಾನೂ ಕಾರಿನಂತೆಯೇ ನೆಗೆಯುವೆ!
ಮಲ್ಲಿ, ಶಿಡ್ಲಘಟ್ಟದ ಅಟ್ಟದ ಮೇಲೆ ಬರೀ ರೇಶ್ಮೆ ಗೋಣಿ ಇರುತ್ತೆ ಅನ್ನೋರಿಗೆ ನಿಮ್ಮ ಕಾರಿನ ಭರಾಟೆ ಹೊತ್ತ ಲೇಖನ ಮತ್ತು ಚಿತ್ರಗಳು ಶಿಡ್ಲಘಟ್ಟದ ಹೊಸ ಚಿತ್ರವನ್ನೇ ತಂದಿರಿಸಿದೆ. ನಿಮ್ಮ ಬ್ಲಾಗ್ ಗೆ ನಾನು ನನ್ನ ರೆಸ್ಪಾನ್ಸ್ ಹಾಕ್ತಾನೇ ಇದ್ದೀನಿ..ನನ್ನ ಗೂಡಿನ ಕಡೆ ನೀವು ಬಂದೇ ಇಲ್ಲ ಅನ್ನೋ ನನ್ನ ಮುನಿಸು ಇದ್ದೇ ಇದೆ. Good work any way.
Mallikaarjun avare....
inthadondu car race nadeyuththe anno kalpane irale illa... eshtu chennagide photogalu... abhinandanegalu olleya lekhanakke...
ಮಲ್ಲಿಕಾರ್ಜುನ್ ಅವರೇ,
ಫೋಟೋಗಳು ಅದ್ಭುತವಾಗಿ ಮೂಡಿ ಬಂದಿದೆ. ಅಡಿಬರಹ, ಕಾರಿನ ರೇಸಿನ ಮಧ್ಯೆ ಜನರ ಹಾವ-ಭಾವ, ಕುತೂಹಲ, ಸೊಗಸಾಗಿ ಸೆರೆ ಹಿಡಿದಿದ್ದೀರಿ. ನಿಮ್ಮ ಶ್ರಮ ಸಾರ್ಥಕ.
ಧನ್ಯವಾದಗಳು.
Post a Comment