ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಡೆಕ್ಕನ್ ಹೆರಾಲ್ಡ್ ಕಟ್ಟಡದ ಪಕ್ಕದ ಇಂಡಿಯನ್ ಕಾಫಿ ಹೌಸ್ ಎಲ್ಲರಿಗೂ ಚಿರಪರಿಚಿತ. ಚಿಕೋರಿ ರಹಿತ ಅಪ್ಪಟ ಕಾಫಿ, ಅದನ್ನು ತಂದುಕೊಡುವವರ ವೇಷಭೂಷಣ ನಮ್ಮನ್ನು ಆಕರ್ಷಿಸಿವೆ. ಕಳೆದ ಏಪ್ರಿಲ್‌ನಲ್ಲಿ ಈ ಇಂಡಿಯನ್ ಕಾಫಿ ಹೌಸ್ ಮುಚ್ಚುತ್ತಿದ್ದಾರೆ ಎಂದು ತಿಳಿದು ನೋವಾಯಿತು. ಇದು ಇತಿಹಾಸಕ್ಕೆ ಸರಿದುಹೋಯಿತೇ ಎಂಬ ಬೇಸರಕಾಡಿತು.
ಮೇ ತಿಂಗಳಲ್ಲಿ ಕೇರಳಕ್ಕೆ ಹೋಗಿದ್ದಾಗ ಅಲೆಪ್ಪಿಯ ರಸ್ತೆಯಲ್ಲಿ ನಡೆದುಹೋಗುವಾಗ ಇಂಡಿಯನ್ ಕಾಫಿ ಹೌಸ್ ಎಂಬ ಫಲಕ ಕಂಡು ಪುಳಕಿತನಾದೆ. ಹಳೆಯ ಕಾಲದ ಕಟ್ಟಡದ ಒಳಗೆ ಎರಡು ಮೂರು ಕೋಣೆಗಳು. ಅದರಲ್ಲಿ ಮರದ ಟೇಬಲು ಚೇರುಗಳು. ನನಗೆ ನಮ್ಮಲ್ಲಿ ಕಳೆದುಹೋದದ್ದು ಪರದೇಶದಲ್ಲೆಲ್ಲೋ ಸಿಕ್ಕಿದಂತಹ ಭಾವ.
ಬೆಂಗಳೂರಲ್ಲಿ ಹೇಳುತ್ತಿದ್ದ ರೀತಿ ಇಲ್ಲೂ ಕಟ್ಲೆಟ್ ಮತ್ತು ಕಾಫಿ ಕೇಳಿದೆ. ಅದೇ ರೀತಿಯ ವೇಷಭೂಷಣ. ಅಲ್ಲಿ ಸೊಂಟ ಮತ್ತು ಪೇಟದ ಮೇಲೆ ಕೆಂಪು ಪಟ್ಟಿ ಇದ್ದರೆ ಇಲ್ಲಿ ಹಸಿರು ಬಣ್ಣ.
"ಎಷ್ಟು ವರ್ಷವಾಯಿತು ಇದನ್ನು ತೆರೆದು" ಎಂದು ಅವರನ್ನು ವಿಚಾರಿಸಿದೆ. ೧೯೬೨ರಲ್ಲಿ ಅಂದರು. ಹಾಗೇ ಇದರ ಇತಿಹಾಸದ ಬಗ್ಗೆ ಕೇಳಿದೆ. ತಿಳಿದ ವಿಷಯ ಕುತೂಹಲಕರವಾಗಿತ್ತು.
ಇಂಡಿಯನ್ ಕಾಫಿಹೌಸ್‌ನ ವೈಷಿಷ್ಟ್ಯವೆಂದರೆ ಇಲ್ಲಿ ನೌಕರರೇ ಮಾಲೀಕರು!
ಬ್ರಿಟಿಷರು ಆಳುವಾಗ ೧೯೪೦ರಲ್ಲಿ ಕಾಫಿಬೋರ್ಡ್‌ನವರು ಮೊಟ್ಟಮೊದಲು ಇಂಡಿಯನ್ ಕಾಫಿಹೌಸ್ ಹೋಟೆಲುಗಳನ್ನು ಹಲವಾರು ಕಡೆ ಪ್ರಾರಂಭಿಸಿದರು. ಆದರೆ ೧೯೫೦ರಲ್ಲಿ ಕಾಫಿ ಬೋರ್ಡ್ ಹಲವು ಕಡೆ ಈ ಕಾಫಿ ಹೌಸ್‌ಗಳನ್ನು ಮುಚ್ಚುವುದು ಮತ್ತು ನೌಕರರನ್ನು ಕೆಲಸದಿಂದ ವಜಾಗೊಳಿಸುವ ತೀರ್ಮಾನ ತೆಗೆದುಕೊಂಡಿತು. ಆಗ ಕೇರಳದ ಕಮ್ಯೂನಿಸ್ಟ್ ನಾಯಕ ಎ.ಕೆ.ಗೋಪಾಲನ್ ನಂಬಿಯಾರ್‌ರ ನೇತೃತ್ವದಲ್ಲಿ ದೇಶದ ಇಂಡಿಯನ್ ಕಾಫಿಹೌಸ್‌ನ ನೌಕರರೆಲ್ಲ ಸಂಘಟಿತರಾದರು. ಇಂಡಿಯನ್ ಕಾಫಿ ಬೋರ್ಡ್ ನೌಕರರ ಸಹಕಾರಿ ಸಂಘ ಸ್ಥಾಪಿಸಿದರು. ತಮ್ಮಲ್ಲಿದ್ದ ಪೈಸೆ ಪೈಸೆ ಹಣ ಸಂಗ್ರಹಿಸಿ ಮೊಟ್ಟಮೊದಲು ೧೯೫೭ರಲ್ಲಿ ಬೆಂಗಳೂರಿನಲ್ಲಿ ಸಹಕಾರಿ ಸಂಘ ಸ್ಥಾಪಿಸಿ ನಂತರ ಇಂಡಿಯನ್ ಕಾಫಿಹೌಸ್ ಪ್ರಾರಂಭಿಸಿದರು. ಆನಂತರ ದಿಲ್ಲಿ, ತ್ರಿಷೂರ್ ಹೀಗೆ ನಾನಾ ಕಡೆ ಇಂಡಿಯನ್ ಕಾಫಿಹೌಸ್‌ಗಳು ತಲೆಯೆತ್ತಿದವು.
ಈಗ ಕೇರಳದಲ್ಲಿ ತ್ರಿಷೂರ್‌ನಿಂದ ತಿರುವನಂತಪುರದವರೆಗೂ ೫೧ ಇಂಡಿಯನ್ ಕಾಫಿಹೌಸ್‌ಗಳಿವೆ.
ಎಲ್ಲೆಡೆಯೂ ಅದೇ ಗುಣಮಟ್ಟದ ಚಿಕೋರಿರಹಿತ ರುಚಿಕರ ಕಾಫಿ, ತಿಂಡಿ ಮತ್ತು ನಗುಮೊಗದ ಗಂಜಿಹಾಕಿ ಇಸ್ತ್ರಿಮಾಡಿದ ಬಿಳಿ ಸಮವಸ್ತ್ರ ಹಾಗೂ ಪೇಟ ಧರಿಸಿದ ನೌಕರರು(ಮಾಲೀಕರು) ಜೊತೆಯಲ್ಲಿ ಉತ್ತಮ ಸೇವೆ.
ಕೇರಳದಿಂದ ವಾಪಸ್ ಬಂದಮೇಲೆ ಒಂದು ಸಂತಸದ ಸುದ್ದಿ ತಿಳಿಯಿತು. ಚರ್ಚ್‌ಸ್ಟ್ರೀಟ್‌ನಲ್ಲಿರುವ ಬ್ರಿಗೆಡ್ ಗಾರ್ಡನ್ ಟವರ್ಸ್‌ನಲ್ಲಿ ಇಂಡಿಯನ್ ಕಾಫಿ ಹೌಸ್ ಮತ್ತೆ ಪ್ರಾರಂಭಿಸಿದ್ದಾರಂತೆ.
ಇನ್ನೇಕೆ ತಡ ಒಂದು ಕಪ್ ಹಬೆಯಾಡುವ ಬಿಸಿಬಿಸಿ ಕಾಫಿ ಸೇವಿಸೋಣ ಬನ್ನಿ.
ಇಂಡಿಯನ್ ಕಾಫಿಹೌಸ್‌ನ ವೈಷಿಷ್ಟ್ಯವೆಂದರೆ ಇಲ್ಲಿ ನೌಕರರೇ ಮಾಲೀಕರು!
ಬ್ರಿಟಿಷರು ಆಳುವಾಗ ೧೯೪೦ರಲ್ಲಿ ಕಾಫಿಬೋರ್ಡ್‌ನವರು ಮೊಟ್ಟಮೊದಲು ಇಂಡಿಯನ್ ಕಾಫಿಹೌಸ್ ಹೋಟೆಲುಗಳನ್ನು ಹಲವಾರು ಕಡೆ ಪ್ರಾರಂಭಿಸಿದರು. ಆದರೆ ೧೯೫೦ರಲ್ಲಿ ಕಾಫಿ ಬೋರ್ಡ್ ಹಲವು ಕಡೆ ಈ ಕಾಫಿ ಹೌಸ್‌ಗಳನ್ನು ಮುಚ್ಚುವುದು ಮತ್ತು ನೌಕರರನ್ನು ಕೆಲಸದಿಂದ ವಜಾಗೊಳಿಸುವ ತೀರ್ಮಾನ ತೆಗೆದುಕೊಂಡಿತು. ಆಗ ಕೇರಳದ ಕಮ್ಯೂನಿಸ್ಟ್ ನಾಯಕ ಎ.ಕೆ.ಗೋಪಾಲನ್ ನಂಬಿಯಾರ್‌ರ ನೇತೃತ್ವದಲ್ಲಿ ದೇಶದ ಇಂಡಿಯನ್ ಕಾಫಿಹೌಸ್‌ನ ನೌಕರರೆಲ್ಲ ಸಂಘಟಿತರಾದರು. ಇಂಡಿಯನ್ ಕಾಫಿ ಬೋರ್ಡ್ ನೌಕರರ ಸಹಕಾರಿ ಸಂಘ ಸ್ಥಾಪಿಸಿದರು. ತಮ್ಮಲ್ಲಿದ್ದ ಪೈಸೆ ಪೈಸೆ ಹಣ ಸಂಗ್ರಹಿಸಿ ಮೊಟ್ಟಮೊದಲು ೧೯೫೭ರಲ್ಲಿ ಬೆಂಗಳೂರಿನಲ್ಲಿ ಸಹಕಾರಿ ಸಂಘ ಸ್ಥಾಪಿಸಿ ನಂತರ ಇಂಡಿಯನ್ ಕಾಫಿಹೌಸ್ ಪ್ರಾರಂಭಿಸಿದರು. ಆನಂತರ ದಿಲ್ಲಿ, ತ್ರಿಷೂರ್ ಹೀಗೆ ನಾನಾ ಕಡೆ ಇಂಡಿಯನ್ ಕಾಫಿಹೌಸ್‌ಗಳು ತಲೆಯೆತ್ತಿದವು.
ಈಗ ಕೇರಳದಲ್ಲಿ ತ್ರಿಷೂರ್‌ನಿಂದ ತಿರುವನಂತಪುರದವರೆಗೂ ೫೧ ಇಂಡಿಯನ್ ಕಾಫಿಹೌಸ್‌ಗಳಿವೆ.
ಎಲ್ಲೆಡೆಯೂ ಅದೇ ಗುಣಮಟ್ಟದ ಚಿಕೋರಿರಹಿತ ರುಚಿಕರ ಕಾಫಿ, ತಿಂಡಿ ಮತ್ತು ನಗುಮೊಗದ ಗಂಜಿಹಾಕಿ ಇಸ್ತ್ರಿಮಾಡಿದ ಬಿಳಿ ಸಮವಸ್ತ್ರ ಹಾಗೂ ಪೇಟ ಧರಿಸಿದ ನೌಕರರು(ಮಾಲೀಕರು) ಜೊತೆಯಲ್ಲಿ ಉತ್ತಮ ಸೇವೆ.
ಕೇರಳದಿಂದ ವಾಪಸ್ ಬಂದಮೇಲೆ ಒಂದು ಸಂತಸದ ಸುದ್ದಿ ತಿಳಿಯಿತು. ಚರ್ಚ್‌ಸ್ಟ್ರೀಟ್‌ನಲ್ಲಿರುವ ಬ್ರಿಗೆಡ್ ಗಾರ್ಡನ್ ಟವರ್ಸ್‌ನಲ್ಲಿ ಇಂಡಿಯನ್ ಕಾಫಿ ಹೌಸ್ ಮತ್ತೆ ಪ್ರಾರಂಭಿಸಿದ್ದಾರಂತೆ.
ಇನ್ನೇಕೆ ತಡ ಒಂದು ಕಪ್ ಹಬೆಯಾಡುವ ಬಿಸಿಬಿಸಿ ಕಾಫಿ ಸೇವಿಸೋಣ ಬನ್ನಿ.
ಈ ಚಿತ್ರಲೇಖನ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಕಳೆದ ತಿಂಗಳು ಶಿವು ಮತ್ತು ನಾನು ಸ್ನೇಕ್ ಬೋಟ್ ಸ್ಪರ್ಧೆ ನೋಡಲು ಕೇರಳದ ಅಲೆಪ್ಪಿಗೆ ಹೋದಾಗ ಇಂಡಿಯನ್ ಕಾಫಿಹೌಸ್‌ಗೆ ಹೋಗಿದ್ದೆವು. ಸುಧಾ ವಾರಪತ್ರಿಕೆಯನ್ನು ಅಲ್ಲಿನವರ ಚಿತ್ರ ಅದರಲ್ಲಿ ಪ್ರಕಟವಾಗಿರುವುದನ್ನು ತೋರಿಸಿದೆವು. ಅವರ ಖುಷಿ ಹೇಳತೀರದು. ನಮಗೋ ರಾಜಮರ್ಯಾದೆ! ಭಾಷೆ ಬರದಿದ್ದರೂ ಚಿತ್ರವನ್ನು ನೋಡಿ ಆನಂದಪಟ್ಟರು. ಅವರ ಮ್ಯಾನೇಜರ್‌ನಿಂದ ಹಿಡಿದು ಎಲ್ಲರೂ ಕೈಬದಲಿಸಿಕೊಂಡು ನೋಡಿದರು. ಕಡೆಗೆ ಕೇಳಲೋ ಬೇಡವೋ ಎನ್ನುವಂತೆ "ನಮಗೀ ಪುಸ್ತಕ ಕೊಡುತ್ತೀರಾ" ಎಂದು ಕೇಳಿದರು. ಕೊಟ್ಟು ಬಂದೆ.
18 comments:
ಮಲ್ಲಿಕಾರ್ಜುನ್ ಎಂ.ಜಿ.ರಸ್ತೆಯ ಇಂಡಿಯನ್ ಕಾಫಿ ಹೌಸ್ ಮುಚ್ಚಿ ಹೋಗಿರುವುದು ನಿಜ. ನಮ್ಮ ಅಂಕಲ್ ಒಬ್ಬರ ಸದಭಿರುಚಿಯಿಂದಾಗಿ ನಾವು ಬೆಂಗಳೂರಿನಲ್ಲಿ ಇಂತಹ ಕಡೆಗೆಲ್ಲಾ ಭೇಟಿಕೊಡುವದುಂಟು. ಇಂಡಿಯನ್ ಕಾಫಿ ಹೌಸ್ ಮುಚ್ಚಿ ಹೋದಾಗ ನಾವೂ ಅದರ ಿತಿಹಾಸದ ಬಗ್ಗೆ ಮಾತನಾಡಿದ್ದೆವು.
ನಿಮಗೆ ಗೊತ್ತಾ? ಅದೇ ಇಂ.ಕಾ.ಹೌ.ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಈಗ ಅದೇ ವೇಷ ತೊಟ್ಟು, ಅದೇ ರುಚಿಯ ಕಾಫಿಯನ್ನು ಸೈಕಲ್ಲಿನಲ್ಲಿ ಪ್ಲಾಸ್ಕಿನಲ್ಲಿ ತಂದು ಮಾರುತ್ತಾನಂತೆ. ಅದನನ್ನು ನಮ್ಮ ಅಂಕಲ್ ಪತ್ತೆ ಹಚ್ಚಿದ್ದಾರೆ. ಆ ಕಡೆ ಹೋದಾಗ ಅವನಲ್ಲಿಯೇ ಕಾಫಿ ಕುಡಿಯಬೇಕೆಂದುಕೊಂಡಿದ್ದೇವೆ, ನೋಡೋಣ!
ನಿಮ್ಮ ಲೇಖನ - ಫೋಟೋ ಚೆನ್ನಾಗಿದೆ. ನನ್ನಲ್ಲಿನ ಒಂದು ಸುಂದರ ನೆನಪನ್ನು ಭಿತ್ತಿಯಲ್ಲಿ ಮೂಡಿಸಿ, ಈ ಬೆಳಿಗ್ಗೆಯೇ ಒಳ್ಳೆಯ ಕಾಫಿ ಅನುಭವವನ್ನು ಕೊಟ್ಟಿತು. ಧನ್ಯವಾದಗಳು. ಅಂದ ಹಾಗೆ, ರಾಜೇಶ್ವರಿ ತೇಜಸ್ವಿಯವರು ಫೋನ್ ಮಾಡಿದ್ದರು. ಅವಧಿಯಲ್ಲಿ ಬಳಸಿಕೊಂಡಿರುವ ನಿಮ್ಮ ಚಿತ್ರದ ಬಗ್ಗೆ ಮತ್ತು ನಿಮ್ಮ ಬಗ್ಗೆ ಮಾತನಾಡಿದರು. ನಿಮ್ಮನ್ನು ಕೇಳಿದೆ ಎಂದು ಹೇಳಲು ತಿಳಿಸಿದರು.
ಮಲ್ಲಿಕಾರ್ಜುನ್,
ಅಲೆಪ್ಪಿಯಲ್ಲಿನ ಇಂಡಿಯನ್ ಕಾಫಿ ಹೌಸ್ ಆನುಭವ ತುಂಬಾ ಚೆನ್ನಾಗಿತ್ತು. ಅವರಿಗೆ ಸುಧಾ ವಾರಪತ್ರಿಕೆಯಲ್ಲಿ ಚಿತ್ರಸಹಿತ ಅವರ ಬಗ್ಗೆ ಬಂದಿರುವ ಖುಷಿಯನ್ನು ನೋಡಿದೆ ಅವರ ಭಾಷೆ ಬರದಿದ್ದರೂ ಅವರು ಅದನ್ನು ಎಲ್ಲರಿಗೂ ತೋರಿಸಿ ಆನಂದಿಸಿದ ರೀತಿಯನ್ನು ಮರೆಯಲಾದಿತೆ...ಮತ್ತೆ ಅದೇಕೋ ನಮಗೆ ಊಟ ತಿಂಡಿ, ಕಾಫಿಗೆಲ್ಲಾ ಅದೇ ಕಾಫಿ ಹೌಸಿಗೆ ಹೋಗುತ್ತಿದ್ದೆವು. ಕಾರಣ ಗೊತ್ತಿಲ್ಲ...
ಇಂಡಿಯನ್ ಕಾಫಿ ಹೌಸ್ ಬಗ್ಗೆ ಸೊಗಸಾದ ಮತ್ತು ಮಾಹಿತಿಯುಕ್ತ ವಿವರಣೆ ಕೊಟ್ಟಿದ್ದೀರಿ. ಇಷ್ಟನ್ನೇ ಸುಧಾ ವಾರಪತ್ರಿಕೆಯಲ್ಲಿ ಫೂರ್ತಿಯಾಗಿ ಹಾಕಿದ್ದರೆ ಎಲ್ಲರಿಗೂ ಇದು ತಿಳಿದಂತಾಗುತ್ತಿತ್ತು.
ಅಲ್ಲಿನ ಕಟ್ಲೆಟ್ ಮರೆಯಲು ಸಾಧ್ಯವೆ...
ಮಲ್ಲಿಕಾರ್ಜುನ್ ಸರ್,
ಇಂಡಿಯನ್ ಕಾಫಿ ಹೌಸ್ ಬಗ್ಗೆ ಸೊಗಸಾದ ಮಾಹಿತಿ ಕೊಟ್ಟಿದ್ದೀರಿ....ಎಷ್ಟೆಲ್ಲಾ ಇತಿಹಾಸ ಇದೆ ಅಲ್ವಾ...ಲೇಖನ ನೋಡಿ ಕಾಫಿ ಕುಡಿಬೇಕು ಅನಿಸುತ ಇದೆ...
ಒಳ್ಳೆ ಮಾಹಿತಿಗಾಗಿ ಧನ್ಯವಾದಗಳು....
ಹುಡುಕಾಟದ ಮಲ್ಲಿಯವರೆ...
ಎಲ್ಲಿ ಏನೇನು ಹುಡುಕುತ್ತೀರಿ ಮಾರಾಯರೆ..
ನಿಮ್ಮ ಹುಡುಕಾಟಕ್ಕೆ ನನ್ನದೊಂದು ಸಲಾಮ್..!
ಇಂಡಿಯನ್ ಕಾಫಿ ಹೌಸ್‍ನ ಕಾಫೀ ಮತ್ತು ಕಟ್‍ಲೆಟ್ ನಾನೂ ಕೂಡ ಸವಿದಿದ್ದೇನೆ..
ಇದರ ಇತಿಹಾಸ ಕೆದಕಿ ನಮಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..
ಇದನ್ನು ಮುಚ್ಚಿತ್ತಿರುವದು ಕೇಳಿ ಬೇಸರವಾಗುತ್ತಿದೆ..
ಈಗಿನ ಕಾಫೀಡೇ ಥರಹ ಥಳುಕು ಬಳುಕು ಅವರಿಗೆ ಗೊತ್ತಿಲ್ಲವಲ್ಲ..!
ಇಂಡಿಯನ್ ಕಾಫೀ ಹೌಸ್‍ನ ಕಾಫೀ ..
ಹಾಗೂ ನಿಮ್ಮ ಲೇಖನಗಳು..
ಒಂದೇ ಟೇಸ್ಟ್... ರುಚಿಯಾಗಿ ಚಪ್ಪರಿಸುವಂತಿರುತ್ತಿದೆ..
ಮುಂದುವರೆಸಿರಿ...
ಇಂಡಿಯನ್ ಕಾಫಿ ಹೌಸ್ ಬಗೆಗಿನ ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಗಳು...
maahiti haagu lekhana eradu chennagide adakke poorakavaagi photogaLu mattasttu merugu needide.
ಚೆಂದದ ಫೋಟೋ, ಉತ್ತಮ ಮಾಹಿತಿ ಮಲ್ಲಿಯಣ್ಣ
-ಧರಿತ್ರಿ
ಮಲ್ಲಿಕಾರ್ಜುನ ಅವರೇ,
ನನಗೆ ಕಾಫಿ ಕುಡಿದು ಅಭ್ಯಾಸ ಇಲ್ಲ. ಆದರೆ ಅದರ ಸವಿಯನ್ನು ನಿಮ್ಮ ಲೇಖನದ ಮೂಲಕ ನಮ್ಮೊಂದಿಗೆ ಹಂಚಿಕೊಂಡಿದ್ದೀರ!
ಕಾಫಿ ಹೌಸ್ ನ ಇತಿಹಾಸದೊಂದಿಗೆ ಅಲ್ಲಿನವರ ಸಂತೋಷಕ್ಕೆ ಕಾರಣರಾಗಿ, ಅಲ್ಲಿನ ನಿಮ್ಮ ಅನುಭವಗಳನ್ನೂ ನಮಗೆ ತಿಳಿಸಿದ್ದೀರಾ. ಚಂದದ ಲೇಖನಕ್ಕೆ ಧನ್ಯವಾದಗಳು!
Indian Coffee Houseಗೆ ಇಷ್ಟೆಲ್ಲ ಇತಿಹಾಸ ಇದೆ ಅಂತ ಗೊತ್ತಿರಲಿಲ್ಲ. ಇದನ್ನೆಲ್ಲ ತಿಳಿಸಿದ್ದಕ್ಕಾಗಿ ಧನ್ಯವಾದಗಳು.
ಕೇರಳದ ಹಳೆ ಮನೆಯ ಮಾದರಿಯ Coffee House ಚಿತ್ರ ನೋಡಿ ಖುಶಿಯಾಯಿತು.
ಮಲ್ಲಿ, ನಿಮ್ಮ ಲೇಖನ ನೋಡಿ ನನಗೆ ನನ್ನ ಎರಡು ತಿಂಗಳ ನನ್ನ ಅಕ್ಯಾಡಮಿ ಟ್ರೈನಿಂಗ್ ದಿನಗಳನ್ನು ಕೊಚ್ಚಿಯಲ್ಲಿ ಕಳೆದದ್ದು ನೆನಪಾಯಿತು. ಅದು ೧೯೮೭ರ ಜುಲೈ-ಆಗಸ್ಟ್ ಸಮಯ. ಜೋಸ್ ಜಂಕ್ಷನ್ ನಮಗೆ ಬಹುಪ್ರಿಯ ಸಂಜೆಸಮಯ ಕಳೆಯುವ ಸ್ಥಳ. ಅಲ್ಲಿಯೇ ಹತ್ತಿರದ Indian Coffee House ನಲ್ಲಿ ಎರಡು ಕಾಫಿ ದಿನನಿತ್ಯ ಖಂಡಿತ...ನಿಜ ಅವರ ಆ ಪೋಷಾಕು, ಆ ಪರಂಪರೆ ಮತ್ತು ಆ ಛಾಪು...ಕಾಣೆಯಗಿತ್ತಿರುವಾಗ ನಿಮ್ಮ ಈ ಲೇಖನ ಹಳೆಯದನ್ನು ಮೆಲಕುಹಾಕುವ ಸಂದರ್ಭವೊದಗಿಸಿದರೆ ಎಲ್ಲಾ ಮುಗಿದಿಲ್ಲ ಎನ್ನುವುದನ್ನೂ ಎತ್ತಿ ತೋರುತ್ತೆ. ಅಭಿನಂದನೆಗಳು.....ಮತ್ತೆ....ಶಿವು-ಮಲ್ಲಿ ಜೋಡಿಗೆ ಶುಭಕೋರೋಣ. ಇಂತಹ ಜುಗಲ್ಬಂದಿ ಪ್ರಯತ್ನಗಳು ಮುನ್ನಡೆಯಲಿ
ಸತ್ಯನಾರಾಯಣ್ ಸರ್,
ಇಂ.ಕಾ.ಹೌ.ನ ಡ್ರೆಸ್ ಹಾಕಿಕೊಂಡು ಸೈಕಲ್ಲಿನಲ್ಲಿ ಫ್ಲಾಸ್ಕ್ ಇಟ್ಟುಕೊಂಡು ಕಾಫಿ ಮಾರುವುದು ತುಂಬ ಇಂಟರೆಸ್ಟಿಂಗಾಗಿದೆ. ಸಾಧ್ಯವಾದರೆ ಆ ವ್ಯಕ್ತಿಯ ಫೋಟೋ ತೆಗೆದು ಅವನನ್ನು ಮಾತನಾಡಿಸಿ. ಇನ್ನೇನಾದರೂ ಹೊಸ ಸಂಗತಿಗಳು ಸಿಗಬಹುದು.
ರಾಜೇಶ್ವರಿ ಮೇಡಂ ನನ್ನನ್ನು ನೆನಪಿಟ್ಟುಕೊಂಡಿರುವುದು ಖುಷಿಕೊಟ್ಟಿತು ಸರ್.
ತುಂಬ ತುಂಬ ಧನ್ಯವಾದಗಳು.
ಮಲ್ಲಿಕಾರ್ಜುನ್ ಇನ್ನೊಂದು ವಿಚಾರ ಗೊತ್ತೆ. ಅದು ನನಗೆ ನೆನ್ನೆ ಸಂಜೆ ನನಗೆ 'ಹಳ್ಳಿಮನೆ'ಗೆ ಹೋಗಿದ್ದಾಗ ತಿಳಿಯಿತು. ಮೊದಲಿದ್ದ ಇಂ.ಕಾ.ಹೌ.ನ ಹಿಂಭಾಗ ಈಗ ಮತ್ತೆ ಹೊಸದಾಗಿ ಇಂ.ಕಾ.ಹೌ. ಪ್ರಾರಂಭವಾಗಿದೆಯಂತೆ!
ಮಲ್ಲಿಕಾರ್ಜುನ್ ಅವರೇ,
ಕಾಫಿ ಹೌಸ್ ನ ಕಥೆ ಇಂಟರೆಸ್ಟಾಗಿದೆ. ಉತ್ತಮ ಫೋಟೋ ಮತ್ತು ಮಾಹಿತಿ. ನಾನು ಕಾಫಿ ಹೌಸ್ ನ್ನು ತುಂಬಾ ಮಿಸ್ ಮಾಡಿಕೊಳ್ತಾ ಇದೀನಿ..
ಸೈಕಲ್ಲಿನವ ಸಿಕ್ಕರೆ ನನಗೂ ತಿಳಿಸಿ, ಕಾಫಿ ರುಚಿ ಸವಿಯೋಣ..
ಮಲ್ಲಿಕಾರ್ಜುನ ಸರ್, ಲೇಖನ ಮತ್ತು ಮಾಹಿತಿಗೆ ಧನ್ಯವಾದಗಳು.
ಇಂಡಿಯನ್ ಕಾಫಿ ಅವೆನ್ಯೂ ರಸ್ತೆಯಲ್ಲಿಯೂ ಇದ್ದಿತೆ. ಏಕೆಂದರೆ, ಇಲ್ಲಿಯೂ ಸಹ ಸಪ್ಲೈಯರ್‌ಗಳು ನೀವು ತಿಳಿಸಿದಂತೆ ಇರುತ್ತಿದ್ದರು (ಇದು ನಾನು ೧೯೯೯-೨೦೦೦ ದಲ್ಲಿ ಸೆಂಟ್ರಲ್ ಕಾಲೇಜಿಗೆ ಪರೀಕ್ಷೆ ಬರೆಯಲು ಹೋದಾಗಿನ ನೆನಪುಗಳು). ಕಾಫೀ ಕಪ್ ಅಡಿಗೆಯ ಮನೆಯಲ್ಲಿ ನಾವೇ ತೆಗೆದುಕೊಂಡು ಡಿಕಾಕ್ಷನ್ + ಹಾಲು ಬೆರೆಸಿಕೊಳ್ಳುತ್ತಿದ್ದದ್ದು ನೆನಪಾಯಿತು.
ನಿಮ್ಮ ಚಿತ್ರ ಲೇಖನ ನನಗೆ ಅಲ್ಲಿನ ಕಾಫೀ ಘಮವನ್ನು, ರುಚಿಯನ್ನು ಸವಿದಂತಾಯಿತು. ಧನ್ಯವಾದಗಳು.
ಮಲ್ಲಿಕಾರ್ಜುನ್ ಅವರೆ,
ನಾನು ಕಾಫಿ ಕುಡಿಯೋದಿಲ್ಲ. ನನಗೆ ಇಂಡಿಯನ್ ಕಾಫಿ ಹೌಸ್ ಮತ್ತದರ ಇತಿಹಾಸದ ಪರಿಚಯ ಮಾಡಿಸಿದ್ದು ಡೆಲ್ಲಿಯಲ್ಲಿರುವ ನನ್ನ ಅಂಕಲ್. ನಾನು ಭೇಟಿ ಮಾಡಿದ ಮೊದಲ ಇಂಡಿಯನ್ ಕಾಫಿ ಹೌಸ್ ಡೆಲ್ಲಿಯಲ್ಲೇ. ಕೆರಳದಲ್ಲಿ ಅತಿ ಹೆಚ್ಚಿನ (೫೦ಕ್ಕೂ ಹೆಚ್ಚಿನ) ಸಂಖ್ಯೆಯ ಇಂಡಿಯನ್ ಕಾಫಿ ಹೌಸ್ ಗಳಿವೆ ಅಂತೆ.
ನಿಮ್ಮ ಲೇಖನ - ಫೋಟೋ ಚೆನ್ನಾಗಿದೆ. ಸುಧಾದಲ್ಲಿ ನಿಮ್ಮ ಲೇಖನ ಪ್ರಕಟವಾಗಿದೆ ಅಂತ ತಿಳಿದು ಸಂತಸವಾಯ್ತು, ಅಭಿನಂದನೆಗಳು!!
ನಿಮ್ಮ ಚಿತ್ರಲೇಖನ ಓದಿ ಬೆ೦ಗಳೂರಿನ ಎ೦.ಜಿ.ರಸ್ತೆಯ ಇ0.ಕಾ.ಹೌ. ನಲ್ಲಿ ಕೆನೆಭರಿತ ಕಾಪಿ ಸವಿದಷ್ಟೇ ಖುಷಿಯಾಯಿತು. ಅದು ತೆರವಾಗುವ ಸುದ್ದಿ ತಿಳಿದಿದ್ದ ನಾನು ಸಹ ಇತ್ತಿಚೆಗೊಮ್ಮೆ ಸ೦ಸಾರ ಸಮೇತ ಅಲ್ಲಿಗೆ ಹೋಗಿ ಕಾಫಿ ಕುಡಿದು ಬ೦ದಿದ್ದೆ. ಉತ್ತಮ ಲೇಖನ. ಅಲ್ಲೆಪ್ಪಿಯ ಕಾಫಿ ಹೌಸ್ ಹಿ೦ದಿನ ಕಥೆ ರೋಚಕವಾಗಿದೆ.
ಮಲ್ಲಿಕಾರ್ಜುನ್ ಸರ್,
ಸುಧಾದಲ್ಲಿ ನಿಮ್ಮ ಬರಹ ಓದಿದ್ದೆ. ಕಾಫಿ ಹೌಸ್ ನ ಬಗ್ಗೆ ಇಲ್ಲಿ
ಹೆಚ್ಚಿಗೆ ಮಾಹಿತಿ ಕೊಟ್ಟಿದ್ದೀರಿ,ಧನ್ಯವಾದಗಳು.
E tharaha ondu coffee house ide antha goththe irlilla... Utthama maahithi mallikarjun avre.... Coffee day bharaateyalli idu onthaa bhinnavaagi kaanisutthadeyalla...
Post a Comment