Wednesday, June 24, 2009

ಮುನ್ನಾರಿನ ಹಣ್ಣುಗಳು

ಕೇರಳದ ಮುನ್ನಾರ್ ನಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ನಾನಾ ಸ್ಥಳಗಳಿವೆ, ಸಂಗತಿಗಳಿವೆ. ತರತರಹದ ತಿನಿಸುಗಳು ಮಾರಾಟಕ್ಕಿವೆ.
ನನ್ನನ್ನು ಆಕರ್ಷಿಸಿದ್ದು ಅಲ್ಲಿನ ಹಣ್ಣುಗಳು. ಅಲ್ಲಿಗೆ ಹೋದವರ್ಯಾರೂ ಅವುಗಳ ರುಚಿ ಸವಿಯದೆ ಬರಲಿಕ್ಕಿಲ್ಲ.
ನಮ್ಮಲ್ಲಿ ಕ್ಯಾರೆಟ್ ಸಿಕ್ಕರೂ ಅಲ್ಲಿ ಆ ಪರಿಸರದಲ್ಲಿ ಅದರ ಬಣ್ಣ, ಹೊಳಪು ಕೊಂಚ ಹೆಚ್ಚು. ಇದು ಬೇರೆ ಹಣ್ಣುಗಳಿಗೂ ಅನ್ವಯಿಸುತ್ತೆ.
ನಿಮಗಾಗಿ ಆ ಹಣ್ಣು(ಚಿತ್ರ)ಗಳನ್ನು ಹೊತ್ತು ತಂದಿರುವೆ. ನೋಡಿ ಆನಂದಿಸಿ. ಅಲ್ಲಿಗೆ ಹೋದಾಗ ಅದರ ರುಚಿ ಸವಿಯುವಿರಂತೆ. ಅಂದ ಹಾಗೆ ಈ ಹಣ್ಣುಗಳ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ.

ಕ್ಯಾರೆಟ್

ಕ್ಯಾರೆಟ್

ಫ್ಯಾಷನ್ ಫ್ರೂಟ್

ಕೋಲು ಮಾವಿನಕಾಯಿ

ಊಟಿ ಆಪಲ್

ಪೀಚ್

ರೋಸ್ ಆಪಲ್

ಸ್ಟ್ರಾಬೆರ್ರಿ

ಬೋರೆಹಣ್ಣು(ಟ್ರ‍ೀ ಟೋಮೆಟೊ): ರಾಮಾಯಣದಲ್ಲಿ ರಾಮನಿಗೆ ಶಬರಿ ತಿನ್ನಿಸಿದ ಹಣ್ಣು.

51 comments:

Ittigecement said...

ಹುಡುಕಾಟದವರೆ....

ಕೇರಳಕ್ಕೆ ಹೋದವರು ಇನ್ನೇನು ತಂದಿದ್ದೀರಿ ಮಾರಾಯರೆ...?
ಹುಡುಕಾಟದ ಮನಕ್ಕೆ,
ಕಣ್ಣುಗಳಿಗೆ ಸದಾ ಹುಡುಕುವ ಹಂಬಲ....!

ಇಲ್ಲಿರುವ ಕೆಲವು ಹಣ್ಣುಗಳನ್ನು ನಾನು ತಿಂದೇ ಇಲ್ಲ...
ರೋಸ್ ಅಪಲ್ ಬಾಯಲ್ಲಿ ನೀರು ತರಿಸುವಂತಿದೆ...
"ಪೀಚ್" ಅಂದರೆ ಅತ್ತಿ ಹಣ್ಣು ಅಲ್ಲವೇ...?

ಇಂದಿನ ವಿಜಯ ಕರ್ನಾಟಕಲ್ಲಿ
ನಿಮ್ಮ ಸಂದರ್ಶನ ಓದಿದೆ...
ಕಟ್ಟೆಗುರುರಾಜರು ಸೊಗಸಾಗಿ ಇಂಟರ್ವ್ಯೂ ಮಾಡಿದ್ದಾರೆ...

ಬಾಯಲ್ಲಿ ನೀರುತರಿಸಿದ್ದಕ್ಕೆ..
ಸಂದರ್ಶನಕ್ಕಾಗಿ...
ಹ್ರದಯಪೂರ್ವಕ ಅಭಿನಂದನೆಗಳು...

http://santasajoy-vasudeva.blogspot.com said...

ಹಣ್ಣು ಸವಿದಷ್ಟೇ ಸುಂದರವಾಗಿದೆ ಫೋಟೋಗಳು.ಕೋಲು ಮಾವಿನಕಾಯಿ ಅಂದ್ರೆ ನೀವು ತೋತಾಪುರಿ ಮಾವಿನಕಾಯಿ ಬಗ್ಗೆನಾ ಹೇಳಿರೋದು?

Unknown said...

vijaya karnaaTakadalli nimma sa0darSana sogasaagi ba0dide.
haNNugaLu baayalli nIru tarisuva0te ide.

PARAANJAPE K.N. said...

ಹಣ್ಣುಗಳ ಚಿತ್ರವೇ ಇಷ್ಟು ಚೆನ್ನಾಗಿರುವಾಗ ಅವುಗಳ ಸವಿ ಅದೆಷ್ಟು ಚೆನ್ನಿರಬಹುದು ? ವಿ.ಕ. ದ ಪ೦ಚಪ್ರಶ್ನೆ ಅ೦ಕಣದಲ್ಲಿ ನಿಮ್ಮ ಸ೦ದರ್ಶನ ಓದಿದೆ. ಅಭಿನ೦ದನೆಗಳು

ನಮ್ಮನೆ.. SWEET HOME..... said...

ನಿಮ್ಮಾ ಫೋಟೊಗಳು ಬಹಳ ಸೊಗಸಾಗಿರುತ್ತದೆ....

ಹಣ್ಣುಗಳು ಬಾಯಲ್ಲಿ ನೀರು ತರಿಸುವಂತಿದೆ...

ನಿಮ್ಮ ಸಂದರ್ಶನ ಇಂದಿನ ಪೇಪರಲ್ಲಿ
ನೋಡಿ ಸಂತೋಷವಾಯಿತು...

ಕಂಗ್ರಾಟ್ಸ್.............!!!!!

ಶಿವಪ್ರಕಾಶ್ said...

ಫೋಟೋದಲ್ಲಿ ಹಣ್ಣುಗಳು ಸೂಪರ್

Ranjana Shreedhar said...

ಫೋಟೋಗಳು ತುಂಬಾ ಸೂಪರ್ ಆಗಿವೆ...ಬೋರ್ ಹಣ್ಣಿನ ಫೋಟೋ ನೋಡಿ ಬಾಯಲ್ಲಿ ನೀರುರಿತು...

Srinidhi said...

chitragalu tumba chennagive!

akshata said...

ಚಿತ್ರಗಳು ಬಹಳ ಸೊಗಸಾಗಿವೆ, ಹಣ್ಣುಗಳನ್ನು ನೋಡುತ್ತಿದ್ದಂತೆ ಅಲ್ಲಿಂದಲೇ ತೆಗೆದು ತಿನ್ನಬೇಕೆನಿಸಿತು, ರೋಸ್ ಆಪಲ್ ಮತ್ತು ಫ಼್ಯಾಶನ್ ಫ಼್ರುಟ್ ಬಗ್ಗೆ ಪ್ರಥಮವಾಗಿಯೇ ಕೇಳಿದೆ.

Jayalaxmi said...

ಅಂಜೂರಕ್ಕೆ ಪೀಚ್ ಅಂತಾರೆ ಅಂತ ಗೊತ್ತಿರಲಿಲ್ಲ. ರೋಸ್ ಆಪಲ್ ಅನ್ನೊ ಹಣ್ಣು ಇದೆಯಲ್ಲ ಅದನ್ನು (ಹಸಿರು ಬಣ್ಣ) ಮುಂಬೈಯಲ್ಲಿ ನೋಡಿದ್ದೇನೆ,ಈ ಹಣ್ಣು ಬಾಯಾರಿಕೆಯ ಸಮಯದಲ್ಲಿ ಚೇತೋಹಾರಿ. ಬೋರೆ ಹಣ್ಣು ಇಷ್ಟು ಕೆಂಪಗಿದ್ದುದನ್ನು ಈ ಮೊದಲು ನೋಡೇ ಇರಲಿಲ್ಲ. ಅಪರೂಪದ ಹಣ್ಣುಗಳನ್ನು ಪರಿಚಯಿಸಿದ್ದೀರಿ ಥ್ಯಾಂಕ್ಸ್ ಮಲ್ಲಿಕಾರ್ಜುನ್.

Guruprasad said...

ಮಲ್ಲಿಕಾರ್ಜುನ್ ಸರ್,....
ಮುನ್ನಾರಿನ ಕತೆಗಳು ಇನ್ನು ಎಷ್ಟು ಇದೆ ಸರ್... ಒಂದಕ್ಕಿಂತ ಒಂದು ಸೂಪರ್ ........ಹಣ್ಣುಗಳ ಚಿತ್ರ ವನ್ನು ನೋಡಿ ಅಂತು ಬಾಯಿಯಲ್ಲಿ ನೀರುರಿತು.... ಮುಂದಿನ ಸರಿ ನಾನು ಅಲ್ಲಿಗೆ ಹೋದಾಗ ಖಂಡಿತ ರುಚಿ ನೋಡಿ ಬರುತ್ತೇನೆ.
ಹಾಗೆ ಇವೊತ್ತಿನ VK ಪೇಪರ್ ನಲ್ಲಿ ನಿಮ್ಮ ಸಂದರ್ಶನ ನೋಡಿ ತುಂಬ ಕುಶಿ ಆಯಿತು.....

ಗುರು

ಜಿ.ಎಸ್.ಬಿ. ಅಗ್ನಿಹೋತ್ರಿ said...

ಬೊಂಬಾಟ್.... ಧನ್ಯವಾದಗಳು.

Annapoorna Daithota said...

‘ಫಲ’ವತ್ತಾಗಿದೆ, ಸುಂದರವಾಗಿದೆ :)

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ಕೇರಳದಿಂದ ಇನ್ನೂ ಅನೇಕ ಚಿತ್ರಗಳನ್ನು ತಂದಿರುವೆ. ಅವನ್ನು ಮುಂದೆ ಎರಡು ಮೂರು ಕಂತುಗಳಲ್ಲಿ ಹಾಕುವೆ.
ಪೀಚ್ ಅಂದರೆ ಹತ್ತಿ ಹಣ್ಣಲ್ಲ. ಅದೇ ಬೇರೆ.ಕನ್ನಡದಲ್ಲಿ ಏನನ್ನುವರೋ ತಿಳಿಯದು.
ವಿಜಯಕರ್ನಾಟಕದಲ್ಲಿ ಪ್ರಕಟವಾದ ಸಂದರ್ಶನ ನಮ್ಮ edition ನಲ್ಲಿ ಬಂದಿಲ್ಲ.ಹಾಗಾಗಿ Internetಅಲ್ಲಿ ನೋಡಿದೆ.
ಧನ್ಯವಾದಗಳು.

Anonymous said...

adbhuta photogalu malli avare..... bayalli nirurutide.....
-inchara

ವಿನುತ said...

ಸು೦ದರ ಫೋಟೋಗಳು. ಫ್ಯಾಷನ್ ಫ್ರೂಟ್ ಒ೦ದನ್ನು ಬಿಟ್ಟು ಮತ್ತೆಲ್ಲ ಹಣ್ಣುಗಳ ಸವಿ ಸವಿದಿದ್ದೇನೆ. ಬೋರೆ ಹಣ್ಣು ರಾಮಾಯಣದಲ್ಲಿ ಶಬರಿ ರಾಮನಿಗೆ ತಿನ್ನಿಸಿದ ಹಣ್ಣೆ೦ದು ತಿಳಿದಿರಲಿಲ್ಲ. ಮಾಹಿತಿಗಾಗಿ ಧನ್ಯವಾದಗಳು.

sunaath said...

ಮಲ್ಲಿಕಾರ್ಜುನ,
ಚಿತ್ರಗಳೇ ಇಷ್ಟು ಚೆನ್ನಾಗಿರುವಾಗ,ಹಣ್ಣುಗಳು ಇನ್ನೆಷ್ಟು ರುಚಿಯಾಗಿರಬೇಡ?
ಮುನ್ನಾರನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.ವಿ.ಕ.ದಲ್ಲಿ ನಿಮ್ಮ ಸಂದರ್ಶನ ಬಂದದ್ದು ಇಗ ತಿಳಿಯಿತು. ಓದುವೆ.

ಎಚ್. ಆನಂದರಾಮ ಶಾಸ್ತ್ರೀ said...

ತಿನ್ನಲು ಚೆನ್ನಾದ ಹಣ್ಣುಗಳು ನಿಮ್ಮ ಕೈಚಳಕದಿಂದಾಗಿ ನೋಡಲು ಇನ್ನೂ ಚೆನ್ನ, (ಚೆನ್ನ)ಮಲ್ಲಿಕಾರ್ಜುನಾ!

ಕ್ಷಣ... ಚಿಂತನೆ... said...

ಸರ್‍, ಹಣ್ಣುಗಳ ಚಿತ್ರಗಳು ನಿಜಕ್ಕೂ ನೀರೂಡಿಸುವಂತಿವೆ. ಇನ್ನು ಆ ಹಣ್ಣುಗಳನ್ನು ಸೇವಿಸುವಾಗ ಆಗುವ ಆನಂದ ಬಲ್ಲವರೇ ಬಲ್ಲರು. ಸರ್‍, ನಿನ್ನೆ ದಿನದ (೨೫.೬.೨೦೦೯) ವಿಜಯ ಕರ್ನಾಟಕದ `ಪಂಚ ಪ್ರಶ್ನೆಯಲ್ಲಿ' ಸಂದರ್ಶಿತವಾಗಿದ್ದೀರಿ ಮತ್ತು ನಾಗೇಶ್ ಹೆಗ್ಡೆಯವರ ಪುಸ್ತಕ ಸಮಾರಂಭದಲ್ಲಿಯ ಆಲ್ಬಂನಲ್ಲಿಯೂ ಇದ್ದೀರಿ. ಧನ್ಯವಾದಗಳು.

ಸಸ್ನೇಹದೊಂದಿಗೆ,

ಚಂದ್ರಶೇಖರ ಬಿ.ಎಚ್.

SSK said...

ಮಲ್ಲಿಕಾರ್ಜುನ ಅವರೇ,
ಅಪರೂಪದ ಮತ್ತು ವಿವಿಧ ರೀತಿಯ ಹಣ್ಣುಗಳನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು!

shivu.k said...

ಮಲ್ಲಿಕಾರ್ಜುನ್,

ಹಣ್ಣುಗಳ ಚಿತ್ರಗಳು ಚೆನ್ನಾಗಿವೆ...ನಾನು ಹೋಗಿದ್ದಾಗ ಅಲ್ಲಿ ಊಟಿ ಅಪೆಲ್, ಅಂಜುರ ಮತ್ತು ಸ್ಟ್ರಾಬೆರಿ ರುಚಿ ಸವಿದಿದ್ದೆ...ಹಾಗೆ ಅಲ್ಲಿನ ಕ್ಯಾರೆಟ್ ಬಗ್ಗೆ ಹೇಳಲೇಬೇಕು. ನಾವೆಲ್ಲಾ ವಿಮಲ್ ಅನ್ನುವ ಹುಡುಗನ ಆಟೋದಲ್ಲಿ ಅಲ್ಲೆಲ್ಲಾ ಸುತ್ತಾಡುವಾಗ ರಸ್ತೆಯಲ್ಲಿ ತಲೆಯ ಮೇಲೆ ಹೊತ್ತು ಹುಡುಗರು ಹೊತ್ತು ತರುತ್ತಿದ್ದ ಕ್ಯಾರೆಟ್ ಬಣ್ಣಗಳು ಅಲ್ಲಿನ ಹಿತಕರ ವಾತಾವರಣದಷ್ಟೇ ಬಣ್ಣ ಹೊಂದಿದ್ದನ್ನು ನೋಡಿದ್ದೆವಲ್ಲ...ಆಗ ನೀವು ಅದರ ಫೋಟೋವನ್ನು ತೆಗೆದುಕೊಂಡಿದ್ದೀರಿ...ಆಗತಾನೆ ಕಿತ್ತುತಂದ ಅದರ ರುಚಿಯಂತೂ ವರ್ಣಿಸಲಾಗದು....

ಸುನಿಲ್ ಹೆಗ್ಡೆ said...

ವಾಹ್... ಮನ್ನಾರ್-ನ ಹಣ್ಣುಗಳು ನಿಜಕ್ಕೂ ಬಾಯಲ್ಲಿ ನೀರೂರಿಸುತ್ತಿವೆ ಮಲ್ಲಿಕಾರ್ಜುನ್ ಸರ್... :)

ರೂpaश्री said...

ವಾಹ್ ಸೂಪರ್ ಚಿತ್ರಗಳು!! ಹಣ್ಣುಗಳು ನನ್ನ ಫೇವರೇಟ್..ಇಂಥಾ ಹಣ್ಣುಗಳಿದ್ದರೆ ಅಡಿಗೆ ಮಾಡೊದೇ ಬೇಕಿಲ್ಲ ಅಲ್ವ?
ರೋಸ್ ಆಪಲ್ ಇಷ್ಟು ಕೆಂಪಾಗಿರುವುದನ್ನ ನಾನು ನೋಡಿಲ್ಲ/ ತಿಂದಿಲ್ಲ:( ಬಹಳ ಜ್ಯೂಸಿ ಆಗಿರುತ್ತೆ!
ಹಾಗೆಯೇ ಬೋರೆ ಹಣ್ಣಿನ ಬಗ್ಗೆ ಗೊತ್ತಿರಲಿಲ್ಲ, ತಿಳಿಸಿಕೊಟ್ಟಿದಕ್ಕೆ ಥ್ಯಾಂಕ್ಸ್ ಮಲ್ಲಿಕಾರ್ಜುನ ಅವರೆ.

ಅತ್ತಿ ಹಣ್ಣು Cluster figs(Ficus glomerata)
ಅಂಜೂರ Figs (Ficus carica)
ಮರಸೇಬು Peach (Prunus persica)
ಬೆರ್ರಿಕಾಯಿ Pear (Pyrus communis)
(courtesy hemanth)

Communist Party of India (Marxist) said...

nanu nimma blog nodi santoshavayitu yekendari ee mattada photovannu ellenda taruttaro ee riti suttutiruva nimage bahalavada dhanyavadagalu.

Communist Party of India (Marxist) said...

nanu nimma blog nodi santoshavayitu yekendari ee mattada photovannu ellenda taruttaro ee riti suttutiruva nimage bahalavada dhanyavadagalu.

kanasu said...

mallikarjun avare!!
photography is too good...its a colorful blog!!
ishtondu sogasaada chittragalannu sere hididu nammottige hanchiddakke dhanyavaadagalu :)

ಮಲ್ಲಿಕಾರ್ಜುನ.ಡಿ.ಜಿ. said...

ಜಯಶ್ರೀ ಮೇಡಂ,
ನೀವು ಸರಿ.ಕೋಲು ಮಾವಿನಕಾಯಿ ಅಂದರೆ ತೋತಾಪುರಿ.
ಹಣ್ಣು ಚಿತ್ರದಲ್ಲಿರುವುದರಿಂದ ಸದಾ ತಾಜಾ!!

ಮಲ್ಲಿಕಾರ್ಜುನ.ಡಿ.ಜಿ. said...

ರೂಪಾ ಅವರೆ,
ಸಂದರ್ಶನ ಓದಿದ್ದಕ್ಕೆ, ಹಣ್ಣುಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ಹಣ್ಣುಗಳ ಸವಿ ಬಣ್ಣಿಸಲಾಗದು. ತುಂಬಾ ಚೆನ್ನಾಗಿದ್ದವು. ಸಂದರ್ಶನ ಓದಿದ್ದಕ್ಕೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಆಶಾ ಮೇಡಂ,
ಹಣ್ಣುಗಳನ್ನು ಸವಿದಿದ್ದಕ್ಕೆ ಮತ್ತು ಸಂದರ್ಶನ ಓದಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಶಿವಪ್ರಕಾಶ್,
ಫೋಟೋಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ರಂಜನಾ ಶ್ರೀಧರ್ ಅವರೆ,
ಫೋಟೋಗಳನ್ನು ನೋಡಿ ಬೋರೆ ಹಣ್ಣು ಸವಿದ ನೆನಪಾಗಿದ್ದಕ್ಕೆ ಖುಷಿಯಾಯ್ತು. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಶ್ರೀನಿಧಿ,
ತುಂಬಾ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಅಕ್ಷತಾ ಅವರೆ,
ಹಣ್ಣುಗಳ ಚಿತ್ರಗಳು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಜಯಲಕ್ಷ್ಮಿ ಅವರೆ,
ಅಂಜೂರವೇ ಬೇರೆ ಪೀಚ್ ಹಣ್ಣೇ ಬೇರೆ. ಅಂಜೂರದ ಚಿತ್ರ ಇಲ್ಲಿ ಹಾಕಿಲ್ಲ. ನಮ್ಮ ತೋಟದಲ್ಲಿ ಅಂಜೂರದ ಗಿಡವಿದೆ. ಗೊಂಚಲು ಗೊಂಚಲಾಗಿ ಹಣ್ಣುಗಳು ಬಿಡುತ್ತವೆ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಗುರು ಅವರೆ,
ಹಣ್ಣುಗಳನ್ನು ಮೆಚ್ಚಿದ್ದಕ್ಕೆ ಮತ್ತು ಸಂದರ್ಶನ ಓದಿದ್ದಕ್ಕೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಅಗ್ನಿಯವರೆ,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಅನ್ನಪೂರ್ಣ ಮೇಡಂ,
ತುಂಬಾ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಇಂಚರ ಅವರೆ,
ಫೋಟೋಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ವಿನುತ ಅವರೆ,
ನೀವು ಸವಿದಿರುವ ಹಣ್ಣುಗಳ ನೆನಪು ತರಿಸಿದ್ದಕ್ಕೆ ಖುಷಿಯಾಗಿದೆ. ಈ ಬಾರಿ ಫ್ಯಾಷನ್ ಫ್ರೂಟನ್ನೂ ರುಚಿ ನೋಡಿ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸುನಾತ್ ಸರ್,
ಹಣ್ಣುಗಳ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಆನಂದರಾಮ ಶಾಸ್ತ್ರಿ ಸರ್,
ನಿಮ್ಮದೇ ಶೈಲಿಯಲ್ಲಿ ಮೆಚ್ಚಿ ಕಾಮೆಂಟ್ ಬರೆದಿರುವಿರಿ. ತುಂಬ ತುಂಬ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಶೇಖರ್ ಸರ್,
ಹಣ್ಣುಗಳನ್ನು ಮೆಚ್ಚಿದ್ದಕ್ಕೆ, ವಿಜಯಕರ್ನಾಟಕದಲ್ಲಿ ಗಮನಿಸಿದ್ದಕ್ಕೆ ಅನಂತ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

SSKಅವರೆ,
ತುಂಬಾ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನಾವು ಮುನ್ನಾರಿನಲ್ಲಿ ಕಳೆದ ಅದ್ಭುತ ದಿನಗಳು ಮೊನ್ನೆ ಅಲ್ಲಿದ್ದಾಗಲೂ ನೆನಪಾಗುತ್ತಿತ್ತು. ನೀವು ಆ ಬಿಮಲ್ ಬಗ್ಗೆ ಬರೆಯಿರಿ.

ಮಲ್ಲಿಕಾರ್ಜುನ.ಡಿ.ಜಿ. said...

ಸುನಿಲ್ ಹೆಗ್ಡೆಯವರೆ,
ಧನ್ಯವಾದಗಳು. ಅವನ್ನು ನೋಡಿದಾಗ ನನ್ನ ಬಾಯಲ್ಲೂ ನೀರೂರಿತು.

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಮೇಡಂ,
ಎಷ್ಟೋಂದು ಮಾಹಿತಿ ಕೊಟ್ಟಿದ್ದೀರ. ಧನ್ಯವಾದಗಳು.
ಹಣ್ಣೂಗಳು ನಿಮ್ಮ ಫೇವರೇಟ್ ಎಂದು ತಿಳಿದಿರಲಿಲ್ಲ. ಖುಷಿಯಾಯ್ತು.

ಮಲ್ಲಿಕಾರ್ಜುನ.ಡಿ.ಜಿ. said...

ವಿನೋದ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಕನಸು ಅವರೆ,
ನಿಮ್ಮ ಮೆಚ್ಚಿಗೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

Shravya said...

ಹಾಯ್ ಸರ್‍ ನಿಮ್ಮ ಈ ಲೇಖನ, ಚಿತ್ರಗಳು ಸೂಪರ್‍. ನನಗೆ ಇದನ್ನು ನೋಡಿ ನಾನು ಮುನ್ನಾರಿಗೆ ಹೋಗಿದ್ದ ದಿನಗಳು ನೆನಪಾದವು. ನಾನು ೨೦೦೨ನಲ್ಲಿ ಮುನ್ನಾರಿಗೆ ಹೋಗಿದ್ದೆ ಆಗ ನಾನು ದ್ವಿತೀಯ ಪಿಯುನಲ್ಲಿ ಓದುತ್ತಿದ್ದೆ. ಅಲ್ಲಿ ಫೈರ್‍ ಕ್ಯಾಂಪ್, ಈ ಕ್ಯಾರೆಟ್ ಗಳ ರುಚಿ, ಅಲ್ಲಿ ಮೋಡಗಳ ಮಧ್ಯೆ ನಾವೆಲ್ಲ ತೇಲಿ ಹೋಗಿದ್ದು ಇವೆಲ್ಲಾ ನೆನಪುಗಳು ಮರುಕಳಿಸಿದವು. ಮುನ್ನಾರಿನಲ್ಲಿ leechಗಳು ತುಂಬ ಜಾಸ್ತಿ ತುಂಬ ಹುಷಾರಾಗಿ ಇರಬೇಕು ಯಾವಾಗಲು ಉಪ್ಪು ಜೋತೆಯಲ್ಲಿ ಇದ್ದರೆ ಓಳ್ಳೆಯದು. ನನಗೆ ಟೀ estateನಲ್ಲಿ leech ಕಚ್ಚಿ ನನ್ನಗೆ ತುಂಬ ರಕ್ತ ಹೋಗಿ ಸ್ವಲ್ಪ ತೊಂದರೆ ಉಂಟಾಯಿತು. ಆದರೆ ಮುನ್ನಾರಿನ ನಿಸರ್ಗ ಸೌಂದರ್ಯದ ಮಧ್ಯೆ ನನ್ನ ನೋವೆಲ್ಲಾ ಮಾಯವಾಗಿ ಹೋಯಿತು. ಈ ಚಿತ್ರ ಗಳನ್ನು ತೆಗೆದ ನಿಮಗೆ ವಿಶೇಷ ಧನ್ಯವಾದಗಳು.

ಕೇಶವ ಪ್ರಸಾದ್.ಬಿ.ಕಿದೂರು said...

ನಮಸ್ತೇ,

ನಿಮ್ಮ ಬ್ಲಾಗ್ ನೋಡಿದೆ. ತುಂಬ ಚೆನ್ನಾಗಿದೆ. ಆಲ್ ದಿ ಬೆಸ್ಟ್

ಕೇಶವ ಪ್ರಸಾದ್‌ ಬಿ ಕಿದೂರು
http://nudichaitra.blogspot.com