ನಗು ಆನಂದದ ಕುರುಹು. ನಗು ವಿಶ್ವವ್ಯಾಪಕ.ನಗುವಿನಲ್ಲಿ ಎಷ್ಟೊಂದು ಬಗೆಗಳು - ಮಗುವಿನ ಮುಗ್ಧನಗು, ವೃದ್ಧರ ಬೊಚ್ಚುನಗು,ಮುಗುಳ್ನಗು, ಗಹಗಹಿಸಿ ನಗು, ಮಂದಹಾಸದ ನಗು, ಅಟ್ಟಹಾಸದ ನಗು,ನಾಚಿಕೆಯ ನಗು, ಅಪಹಾಸ್ಯದ ನಗು,ಅತ್ಯಾನಂದದ ನಗು, ಸಿನಿಕ ನಗು,ದಿಟ್ಟನಗು, ಅಹಂಕಾರದ ಕೇಕೆಯನಗು,ಕೌತುಕದ ನಗು, ಲೇವಡಿನಗು, ಹುಸಿನಗು, ಮುಸಿನಗು, ಮೆಲುನಗು, ನಸುನಗು, ಎಳೆನಗು, ಬಿಸುನಗು, ಹುಚ್ಚುನಗು, ಕೊಂಕುನಗು,ಎದೆಯನ್ನು ಹಗುರಾಗಿಸಿ ಕಣ್ಣನ್ನು ತೇವಗೊಳಿಸುವ ನಗು,ಉರುಳಾಡಿ ನಕ್ಕ ನಗು....
ಈ ಬೆಲೆಕಟ್ಟಲಾಗದ ಮಿಲಿಯನ್ ಡಾಲರ್ ಸ್ಮೈಲ್ ಬಗ್ಗೆ ಬರೆಯುವುದಕ್ಕಿಂತ ಚಿತ್ರಗಳನ್ನು ನೋಡಿ ನಕ್ಕು ಹಗುರಾಗೋಣ. ಏನಂತೀರ?
ಮಗುವೆ ನಿನ್ನ ಹೂನಗೆ ಒಡವೆ ನನ್ನ ಬಾಳಿಗೆ
The bowels gushing cold
15 hours ago
41 comments:
ಮಲ್ಲಿಕಾರ್ಜುನ ಅವರೆ...
ಮಗುವಿನ ಮೊಗದ ಆ ನಗುವಂತೂ ತುಂಬ ಇಷ್ಟವಾಯ್ತು.ಚೆಂದದ ನಗುಮೊಗಗಳ ಸೆರೆಹಿಡಿದ ನಿಮಗೆ ಧನ್ಯವಾದ.
ಮಲ್ಲಿಕಾರ್ಜುನ್, 'ಮೌನ'ದ ಬಗ್ಗೆ ಒಂದು ಒಳ್ಳೆಯ ಅರ್ಥಪೂರ್ಣವಾದ ಕಥೆ ಅಥವಾ ಕವಿತೆ ಅಥವಾ ಲೇಖನ ಬರೆಯಬೇಕೆಂದರೆ, ಅದು 'ಮೌನ'ವಾಗಿರುವುದೇ ಆಗಿರುತ್ತದೆ! ಹಾಗೇ 'ಸ್ಮೈಲ್ ಬಗ್ಗೆ ಬರೆಯುವುದಕ್ಕಿಂತ ಚಿತ್ರಗಳನ್ನು ನೋಡಿ ನಕ್ಕು ಹಗುರಾಗೋಣ' ಎಂಬ ನಿಮ್ಮ ಮಾತು ನೂರಕ್ಕೆ ನೂರು ಸರಿ. ನೋಡುತ್ತಲೇ ಇರಬೇಕಾದಂತಹ ಚಿತ್ರಗಳು.
ನಗುವಿನ ವಿವಿಧ ಆಯಾಮಗಳ ಫೋಟೋ ಗಳ ಮೂಲಕ ಚೆ೦ದದ ಅಡಿಬರಹಗಳನ್ನಿತ್ತು, ನಗುವಿನ ವಿವಿಧ ಸಾಧ್ಯತೆಗಳನ್ನು ನಗುವಿಗೂ ರೇಶನ್ ಇರುವ ಈ ಕಾಲದಲ್ಲಿ ತೋರಿದ್ದೀರಿ. Good
ಸರ್
ಒಂದಕ್ಕಿಂತ ಒಂದು ಎಲ್ಲ ಚಿತ್ರಗಳು ಚೆನ್ನಾಗಿವೆ... ಆ ಮಗುವಿನ ನಗು ಬಹಳ ಚೆನ್ನಾಗಿದೆ..ನಗು ನಮ್ಮ ಜೀವನದ ಮೌಲ್ಯವನ್ನು ಹೆಚ್ಚಿಸುತ್ತದೆ....ನಗು ನಗುತಾ ನಲಿ ಏನೇ ಆಗಲಿ.....ಎಂಬುದು ನಿಜ..
ಧನ್ಯವಾದಗಳು
ಮಲ್ಲಿಕಾರ್ಜುನ ಸರ್,
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ನಗುವಿನ ಚಿತ್ರಕೊಡುತ್ತದೆಯಂತೆ. ಅಂತ ಎಲೋ ಓದಿದ ನೆನಪು....
ಎಂದಿನಂತೆ ಚಿತ್ರಗಳು ಸೂಪರ್
ಮಲ್ಲಿಕಾರ್ಜುನ್,
ಸೂಪರ್...ಒಂದಕ್ಕಿಂತ ಒಂದು ತುಂಬಾ ಚೆನ್ನಾಗಿವೆ....
ಅಂಥ ನಗುವಿನ ಕ್ಷಣವನ್ನು ಕ್ಲಿಕ್ಕಿಸುವಾಗ ನಿಮ್ಮ ಮನಸೊಮ್ಮೆ ನಕ್ಕಿರಬೇಕಲ್ಲವೇ....
ನೀವು ಹೇಳಿದ ಎಲ್ಲಾ ನಗು ಪ್ರಕಾರದ ಫೋಟೋಗಳನ್ನು ಸೆರೆಯಿಡಿದು ನಮ್ಮೊಂದಿಗೆ ಹಂಚಿಕೊಳ್ಳಿ....
ಧನ್ಯವಾದಗಳು...
ಅಣ್ಣ ಫೋಟೋಗಳು ಎಂದಿನಂತೆ ಚೆನ್ನಾಗಿವೆ.. ಕಾಮೆಂಟ್ ಗಳು ಸಹ ಫೋಟೋಗಳಿಗೆ ಒಂದಿಕೆಯಾಗಿವೆ... ತೆಗೆಯುತ್ತಿರೀ. ಬರೆಯುತ್ತಿರಿ.. ಸದಾ ನಗುತ್ತಿರಿ..
:-) ನಾನೂ ನಗ್ತಾ ಇದೀನಿ ನೋಡಿ!
ಶಾಂತಲಾ ಮೇಡಂ,
ಶಿವು ಮತ್ತು ನಾನು ಚಿಕ್ಕಮಗಳೂರಿನ ಪತ್ರಕರ್ತರಿಗೆ ಫೋಟೋಗ್ರಫಿಕ್ workshop ಅನ್ನು ಕೆಮ್ಮಣ್ಣುಗುಂಡಿಯಲ್ಲಿ ನಡೆಸಿಕೊಟ್ಟಿದ್ದೆವು. ಅಲ್ಲಿ ಈ ಮೊದಲ ಚಿತ್ರದಲ್ಲಿರುವ ಮಗುವನ್ನು ಅದರ ತಾತ ಎತ್ತುಕೊಂಡು ಆಡಿಸುತ್ತಿದ್ದರು. ಅವರ ಅನುಮತಿ ಪಡೆದು ಈ ಫೋಟೋ ಕ್ಲಿಕ್ಕಿಸಿದೆ. ಈ ಆಹ್ಲಾದಕರ ಅನುಭವ ನೀಡುವ ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಮನಸ್ಸಿಗೆ ಮುದನೀಡುತ್ತದೆ.
ಸತ್ಯನಾರಾಯಣ್ ಸರ್,
ನಿಮ್ಮ ಮಾತುಗಳು ಅಕ್ಷರಶಃ ಸತ್ಯ. ನೀವಂದಂತೆ ನಗುವ ಚಿತ್ರಗಳನ್ನು ನೋಡುತ್ತಾ ನಮ್ಮ ಮನಸ್ಸು ಜೀವನದ ನಗುವ ಕ್ಷಣಗಳನ್ನು ನೆನಪಿಸಿದರೆ ನನ್ನ ಪ್ರಯತ್ನ ಸಾರ್ಥಕ.
ಪರಂಜಪೆ ಸರ್,
ಧನ್ಯವಾದಗಳು.
ಆಸೆ ಮತ್ತು ಅವಶ್ಯಕತೆ ಕಡಿಮೆ ಮಾಡಿಕೊಂಡವರಲ್ಲಿ ನಗು ಧಾರಾಳವಾಗಿರುತ್ತದೆ. ಮೊದಲ ಮತ್ತು ನಾಲ್ಕನೆಯ ಮಕ್ಕಳ ಚಿತ್ರ ಬಿಟ್ಟು ಮಿಕ್ಕೆಲ್ಲಾ ಚಿತ್ರಗಳನ್ನು ನಾನು ನನ್ನ ಅಂಗಡಿಯಲ್ಲಿ ಕುಳಿತೇ ತೆಗೆದಿರುವಂತಹುದು. ನಾಲ್ಕನೆಯ ಚಿತ್ರದ ಅಜ್ಜಿಯ ಬೊಚ್ಚುನಗು ನನಗೆ ಪ್ರತಿದಿನದ ಬೋನಸ್! ಹೇಗೆಂದರೆ, ಈ ಅಜ್ಜಿ ಎಲ್ಲಾ ಅಂಗಡಿಗಳಿಗೂ ಹೋಗುತ್ತಾಳೆ. ಭಿಕ್ಷೆ ಬೇಡುವುದಿಲ್ಲ. ಎಲ್ಲರಿಗೂ ತನ್ನ ಜೋಳಿಗೆಯಿಂದ ಎಕ್ಕದ ಹೂ ಕೊಡುತ್ತಾಳೆ. ನಮ್ಮ ಕಡೆ ಬಿಳಿ ಎಕ್ಕದ ಹೂ ಪವಿತ್ರ. ಯಾರೂ ಈಕೆಯನ್ನು ಬರಿಗೈಲಿ ಕಳಿಸುವುದಿಲ್ಲ. ಒಂದು ರೂ ಆದರೂ ಕೊಡುತ್ತಾರೆ."ಈ ಹೂ ಕಿತ್ತು ಗಿಡ ಬೋಳಿಸಬೇಡ. ನಾನು ಹಾಗೇ ಹಣ ಕೊಡುತ್ತೇನೆ" ಎಂದರೆ ಹೀಗೆ ನಗುತ್ತಾಳೆ. ನಾನೀಗ ಆಕೆಗೇ ಒಗ್ಗಿಕೊಂಡಿದ್ದೇನೆ. ಹಾಗಾಗಿ ಹೂ ಕೊಟ್ಟು, ಸ್ಮೈಲ್ ಕೂಡ ಕೊಟ್ಟು ಹೋಗುತ್ತಾಳೆ.
ಮನಸು ಅವರೆ,
ನೀವಂದಂತೆ ನಗು ನಮ್ಮ ಜೀವನದ ಮೌಲ್ಯವನ್ನು ಹೆಚ್ಚಿಸುತ್ತದೆ.
ನಾನೊಮ್ಮೆ ಅಂಗಡಿಯಲ್ಲಿದ್ದಾಗ ಮುಂದೆ ರಸ್ತೆಯಲ್ಲಿ ಒಬ್ಬಳೇ (ಮೂರನೇ ಚಿತ್ರ) ಟವಲ್ಲನ್ನು ತಲೆಗೆ ಸುತ್ತಿಕೊಳ್ಳುತ್ತಾ ಹಾಡಿಕೊಳ್ಲುತ್ತಾ ಹೋಗುತ್ತಿದ್ದಳು. ಆಗಲೇ ನನಗೆ ಅಣ್ಣಾವ್ರ ನಗು ನಗುತಾ ನಲೀ ನಲೀ ಹಾಡು ನೆನಪಾಯ್ತು.
ಜ್ಞಾನಮೂರ್ತಿಯವರೆ,
ನನಗೂ ಅಕ್ಷರಗಳಲ್ಲಿ ಕೊಡಲಾಗದೇ ಚಿತ್ರಗಳ ಮೊರೆಹೋಗಬೇಕಾಯ್ತು! ಒಂದು ಚಿತ್ರ ಸಾವಿರ ಭಾವವನ್ನು ಹೊಮ್ಮಿಸುತ್ತದೆ ಅಲ್ಲವೇ?
ಶಿವು,
ನಗುವಿನ ಪ್ರಕಾರಗಳನ್ನಿಡಿದು ಫೋಟೋ ತೆಗೆಯುವುದಕ್ಕಿಂತ ಚಿತ್ರಗಳನ್ನು ತೆಗೆದು ಅವಕ್ಕೆ ಹೆಸರಿಸುವುದು ಸೂಕ್ತವೆಂದು ನನ್ನ ಭಾವನೆ. ಉದಾಹರಣೆಗೆ "ನಾಚಿಕೆಯ ನಗು". ಎರಡನೇ ಚಿತ್ರದಲ್ಲಿರುವವಳು ನನ್ನ ಸ್ನೇಹಿತ ವೆಂಕಟರಮಣನ ಮಗಳು ಸೋನು. ನನ್ನ ಅಂಗಡಿಗೆ ಬಂದ ಅವಳನ್ನು "ಸೋನು, ನಿನ್ನ ಫೋಟೋ ತೆಗೀತೀನಿ" ಅಂದೆ. ಅವಳು ನಾಚಿಕೊಂಡಳು. ಅಷ್ಟು ಸಾಕಲ್ಲವೇ ಕ್ಲಿಕ್ಕಿಸಲು!
ನವೀನ್,
ಧನ್ಯವಾದಗಳು. ನಿಮ್ಮ ನಗುವ ಚಿತ್ರವೂ ನನ್ನ ಬಳಿ ಇದೆ. ನಿಮ್ಮ ಇಮೇಲ್ ಐಡಿ ಕೊಡಿ ಕಳಿಸುವೆ.(ಮಣಿಕಾಂತ್ ಪುಸ್ತಕ ಬಿಡುಗಡೆ ದಿನ ತೆಗೆದದ್ದು).
ಶ್ರೀನಿಧಿ,
ಸದಾ ಹೀಗೇ ನಗುತ್ತಿರಿ.
ಮಲ್ಲಿಕರ್ಜುನ್,
ಚಂದ ಚಂದದ ಮುಗ್ಧ ನಗುಗಳ ಜೊತೆಗೆ "ಒಮ್ಮೆ ನಕ್ಕು ನನ್ನ ನಗಿಸು, ಬಿಮ್ಮೆನ್ನುತಿದೆ ಎನ್ನ ಮನಸು" ಎಂಬ ಸಾಲು ಸಣ್ಣದೊಂದು ಕಿರುನಗೆ ನನ್ನಲ್ಲಿ ತರಿಸಿತು. ಎಲ್ಲೆಲ್ಲೂ ಕೃತಕ ನಗುಗಳ ಕಂಡು ಬೇಸರದಲ್ಲಿರುವಾಗ ನಿಮ್ಮ ಛಾಯಚಿತ್ರಗಳಲ್ಲದರೂ ಮುಗ್ಧ ನಗುವಿನ ಕಂಡು ಮನಸು ಅರಳಿತು. ಥಾಂಕ್ಸ್....!
ಧನ್ಯವಾದಗಳೊಂದಿಗೆ...
-ಗಿರಿ
super smiles...
A smile is a curve that sets everything straight
Very good photos, smile on my face too.
Keshav
ಮಲ್ಲಿಕಾರ್ಜುನವರೆ,
Simply superb! No words to describe! How can one describe a smile? Just smile only? It should be experienced by seeing it in the photos taken by the people like you only. Thanks for the nice photos.
ಮಲ್ಲಿಕಾರ್ಜುನ್
ಚೆಂದದ ಚಿತ್ರ ಲೇಖನ...ಪುಟ್ಟ ಮಗುವಿನ ನಗು ನೋಡುವಾಗ, ನನ್ನ ಮನಸು ಗೊತ್ತಿಲ್ಲದೆ ನಕ್ಕಿ ಬಿಡ್ತು ..... ಇದು ಎಂಥ ನಗು ?
ಹೌದಲ್ವ....ಈ ಪ್ರಪಂಚದಲ್ಲಿ ಎಸ್ಟೋ ಭಾಷೆಗಳಿವೆ, ಆದರೆ ಎಲ್ಲೊ ಹುಟ್ಟಿದ ಚಿಕ್ಕ ಮಗು ಕೂಡ ಅರ್ಥ ಮಾಡ್ಕೊಳೋ ಭಾಷೆ ಅಂದ್ರೆ... ನಗು..... :-) ನಾವು ಏನು ಮಾತಾಡದೆ ಒಂದು ಚಿಕ್ಕ ಸಂತೋಷದ ನಗು ಮುಖ ತೋರಿಸಿದರೆ ಭಾಷೆ ಗೊತ್ತಿಲ್ಲದ ಮಗು, ಮನುಷ್ಯ, ತಾತ ಕೂಡ ಅರ್ಥ ಮಾಡ್ಕೊತಾರೆ....... ಅಲ್ವ......
ನಗು ನಮ್ಮ ಹೃದಯವನ್ನು ಎಬ್ಬಿಸುತ್ತೆ.....
ನಗು ನಮ್ಮ ಅಯಸ್ಶು ಹೆಚ್ಚಿಸುತ್ತೆ......
ಒಂದು ಸಣ್ಣ ನಗು ನಮ್ಮ ಮೊಗದ ಅಂದವನ್ನು ಹೆಚ್ಚಿಸುತ್ತೆ......
ಒಂದು ನಗು ನಮ್ಮ ಜೊತೆಗಿರುವವರನ್ನು ಹ್ಯಾಪಿ ಆಗಿ ಇಡುತ್ತೆ .....
ಸೊ ಅದಕ್ಕೆ ಯಾವಾಗಲು ನಗು ನಗುತ ಇರಿ........
(ಗೊತ್ತಿಲ್ಲದೆ ಇರೋ ಎಸ್ಟೋ ನಗುವಿನ ಅರ್ಥ ವನ್ನು ತಿಳಿಸಿದಕ್ಕೆ ಧನ್ಯವಾದಗಳು..........)
ಮಲ್ಲಿಕಾರ್ಜುನ,
ನಗುವಿನ ಸಾಗರವನ್ನೇ ನಮ್ಮೆದುರಿಗೆ ತೆರೆದಿಟ್ಟಿದ್ದೀರಿ. ಪ್ರತಿಯೊಂದು ನಗುವಿನ ಚಿತ್ರ ಹಾಗೂ ಅದರಡಿಯ ಟಿಪ್ಪಣಿ ನನ್ನಲ್ಲಿ ಉಲ್ಲಾಸವನ್ನು ತುಂಬಿತು.
ನಿಮಗೆ ಧನ್ಯವಾದಗಳು.
ವಾಹ್ ಸೂಪರ್ ನಗು ಮೊಗದ ಫೋಟೋಗಳು ಸಾರ್!!
Anna
Here is my e-mail id
teamsamarpanam@yahoo.com
pritiya mallikarjun
nimmanaguvina photogalu tumba chennagive.
Monne "Amma helaida entu sullugalu" bedugade karyakramadalli tammanu betiyagiddu tymba khushiyatu.
Blognalliruva mitrarannu Betiyaguva uddeshadinda bandidde.
Dhanyavadaglu
Laxman
ಗಿರಿ ಅವರೆ,
"ಒಮ್ಮೆ ನಕ್ಕು ನನ್ನ ನಗಿಸು, ಬಿಮ್ಮೆನ್ನುತಿದೆ ಎನ್ನ ಮನಸು" ಎಂಬ ಕೆ.ಎಸ್.ನ ಅವರ ಸಾಲು (ಚಿತ್ರ6) ಬರೆದದ್ದು ನನ್ನ ಎದುರು ಪೇಂಟ್ ಅಂಗಡಿ ಇಟ್ಟಿರುವ ನವಾಜ್ ನ ಫೋಟೋಗೆ. ಈ ನವಾಜ್ ಮಹಾನ್ ಕ್ರಿಕೆಟ್ ಪ್ರೇಮಿ. ಈಗಂತೂ ಸದಾ ಐ.ಪಿ.ಎಲ್ ಗುಂಗಿನಲ್ಲೇ ಇರುತ್ತಾನೆ. ಇಂತಹ ಸಮಯದಲ್ಲಿ ಯಾವ ಸಿಕ್ಸರ್, ಫೋರ್ ಗಳನ್ನು ನೆನೆದು ನಗುತ್ತಿರುವನೋ ಯಾರಿಗೆ ಗೊತ್ತು? ನಾನು ಫೋಟೋ ತೆಗೆದಿರೋದು ಅವನಿಗೂ ಗೊತ್ತಿಲ್ಲ!
ಶಿವಪ್ರಕಾಶ್,
ಧನ್ಯವಾದಗಳು. ನೀವಂದಂತೆ ಸೊಟ್ಟಗಿರುವುದನ್ನು ನೆಟ್ಟಗಾಗಿಸುವುದೇ ನಗು!
ಕೇಶವ ಕುಲಕರ್ಣಿಯವರೆ,
ಧನ್ಯವಾದಗಳು. ನಿಮ್ಮ ಜೀವನದಲ್ಲಿ ನಗು ಸದಾ ಇರಲಿ ಎಂಬ ನನ್ನ ಸವಿ ಹಾರೈಕೆಗಳು.
ಉದಯ್ ಇಟಗಿಯವರೆ,
ನೀವಂದಂತೆ ಪದಗಳಲ್ಲಿ ಬಣ್ಣಿಸಲಾಗದ್ದಕ್ಕೆ ನಾನು ಚಿತ್ರಗಳ ಮೊರೆ ಹೋಗುವ ವಿಚಿತ್ರ ಮನುಷ್ಯ!! ಧನ್ಯವಾದಗಳು.
ಗುರು ಅವರೆ,
ಧನ್ಯವಾದಗಳು.
ನಾವು ಮಾಡುವ ಕೆಲಸ, ಭಾವ ನಮ್ಮ ಮೊಗದಲ್ಲಿ ಕಾಣುತ್ತೆ ಮತ್ತು ಅದು ನಮ್ಮ ಸುತ್ತಲಿನವರ ಮೇಲೂ ಪ್ರಭಾವ ಬೀರುತ್ತೆ. ಹಾಗಾಗಿ ನಗುವಿನಿಂದಿದ್ದರೆ ನಮ್ಮ ಜೊತೆಗಿರುವವರೂ ನಗುತ್ತಿರುತ್ತಾರಲ್ವೆ?
ಸುನಾತ್ ಸರ್,
ಧನ್ಯವಾದಗಳು. ನನ್ನ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದು ನನಗೆ ಖುಷಿ ಕೊಟ್ಟಿದೆ.
ರೂಪಶ್ರೀ ಅವರೆ,
ನೀವು ನನ್ನ ಬ್ಲಾಗಿಗೆ ಬಂದದ್ದು ಖುಷಿಕೊಟ್ಟಿತು. ಧನ್ಯವಾದಗಳು. ಹೀಗೇ ಪ್ರೋತ್ಸಾಹಿಸುತ್ತಿರಿ.
ಲಕ್ಷ್ಮಣ್ ಸರ್,
ಮಣಿಕಾಂತ್ ಅವರ ಪುಸ್ತಕ ಬಿಡುಗಡೆ ದಿನ ನಿಮ್ಮನ್ನು ಭೇಟಿ ಮಾಡಿದ್ದು ತುಂಬಾ ಸಂತೋಷವಾಯ್ತು. ಆ ದಿನ ಹಲವು ಬ್ಲಾಗ್ ಗೆಳೆಯರನ್ನು ಭೇಟಿ ಮಾಡಿದೆ. ಪುಸ್ತಕದ ನೆಪದಲ್ಲಿ ಹೊಸ ಹೊಸ ಗೆಳೆಯರು ಸಿಕ್ಕಿದ್ದು ನನ್ನ ಅದೃಷ್ಟ.
ಮಲ್ಲಿಯಣ್ಣ...ವಾಹ್! ಪುಟ್ಟ ಮಕ್ಕಳು, ಮುಗ್ಧ ನಗು..ಮನದೊಳಗೆ ಖುಷಿಯ ಮಿನುಗು. ಪ್ರತಿಯೊಬ್ಬರದೂ 'ನಗುವಿನ ಬದುಕು' ಆಗಬೇಕಲ್ವಾ? ಅದರಲ್ಲೂ ಮಕ್ಕಳು ನಕ್ರೇ ಕೇಳೋದೇ ಬೇಡ..ಈ ಫೋಟೋಗಳನ್ನು ನೋಡಿ ತುಂಬಾ ಖುಷಿಪಟ್ಟೆ ಮಲ್ಲಿಯಣ್ಣ. ಧನ್ಯವಾದಗಳು.
-ಧರಿತ್ರಿ
ಹಾಯ್, ವಿವಿಧ ನಗುವಿನ ಮಕ್ಕಳ ಫೋಟೋಗಳು, ಹಾಗೇ ಬೇರೆ ಬೇರೆ ರೀತಿಯ ಬೆದರು ಬೊಂಬೆಗಳ ಫೋಟೋಗಳ
ಸಂಗ್ರಹ ತುಂಬ ಚೆನ್ನಾಗಿದೆ; ನಿಮ್ಮ ಬಹುಮುಖ ಆಸಕ್ತಿ ಮೆಚ್ಚಬೇಕಾದ್ದು; ತುಂಬ ಚೆನ್ನಾಗಿದೆ.
ಹಾಗೆಯೇ ನನ್ನ ಬ್ಲಾಗಿಗೆ ಭೇಟಿಕೊಟ್ಟು ಏನಾದರೂ ಹೊಸದಾಗಿ ಬರೆದಿದ್ದು ಇದೆಯಾ ಚೆಕ್ ಮಾಡಿ, ಮತ್ತೆ ಬರೆಯಿರಿ ಎಂದು ಕಳಕಳಿ ವ್ಯಕ್ತಪಡಿಸಿದ್ದಕ್ಕೆ ತುಂಬ ಥ್ಯಾಂಕ್ಸ್. ಬರೀಬೇಕು, ಆದ್ರೆ ಕೆಲವೊಮ್ಮೆ ಮನಸ್ಸಿನ ಅನಿಸಿಕೆಗಳಿಗೆ ಅಕ್ಷರರೂಪ ಕೊಡಲಿಕ್ಕೆ ಆಗುವುದೇ ಇಲ್ಲ; ಬರೀತೀನಿ.
ಮಲ್ಲಿಯಣ್ಣ......
ನಿಮ್ಮ ಮತ್ತು ನಿಮ ಚಿತ್ರ ಗಳ ಬಗ್ಗೆ ಅಭಿಪ್ರಯಿಸಿದರೆ......
ಅವುಗಳ ಮೌಲ್ಯಕ್ಕೆಲ್ಲಿ ಕುಂದಾದಿತೋ... ಅನಿಸುತದೆ......
ತಪ್ಪದೆ ನೋಡಿ... ಓದಿದರು..... ಅಭಿಪ್ರಯಿಸುವ.....ಧೈರ್ಯ ಇರ್ತಾ ಇರಲಿಲ್ಲ......
ಆ ನಗು....... ಮತ್ತು ತಾಯಿಮಗು ಫೋಟೋ ಸೂಪರ್.........
ನನ್ನ ಮಗನಿಗೆ ಊಟ ಮಾಡಿಸುವ ಬಗೆ ನೆನಪಾಯ್ತು.......
ಕೃಪಾ....
ಧರಿತ್ರಿ,
ನಿಮಗೆಲ್ಲಾ ನಗುವ ಚಿತ್ರಗಳು ಇಷ್ಟವಾಗಿದ್ದರಿಂದ ನಾನು ಈ ಚಿತ್ರಗಳನ್ನು ಇನ್ನಷ್ಟು ತೆಗೆಯುವ ಉತ್ಸಾಹ ಮೂಡಿದೆ.
ಗ್ರೀಷ್ಮಾ ಅವರೆ,
ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಆದಷ್ಟು ವೈವಿಧ್ಯತೆಗಳನ್ನು ಕೊಡಲು ಪ್ರಯತ್ನಿಸುತ್ತಿರುವೆ.
ಕೃಪಾ ಅವರೆ,
ನಿಮ್ಮ ಅಭಿಪ್ರಾಯ ಮುಖ್ಯ ಹಾಗೂ ಪ್ರೋತ್ಸಾಹ ಟಾನಿಕ್. ನಿಮಗೆ ಏನನಿಸುವುದೋ ಅದನ್ನು ತಿಳಿಸಿ. ಧನ್ಯವಾದಗಳು.
ವಾವ್! ಮನಮೋಹಕ ನಗು! ಈ ಚಿತ್ರಗಳನ್ನ ನೋಡುವುದೇ ಒಂದು ಆನ೦ದ. ಧನ್ಯವಾದಗಳು ಮಲ್ಲಿಕಾರ್ಜುನ್ ಈ ನಿಮ್ಮ ಸು೦ದರ ಪರಿಶ್ರಮಕ್ಕೆ.
ಚಂದ ಬರೆದಿದ್ದೀರಿ... ಫೋಟೋ ಸೂಪರಾಗಿವೆ.��
Post a Comment