Thursday, February 19, 2009

ಆಟೋಗ್ರಾಫ್ - ಫೋಟೋಗ್ರಾಫ್

"ನಾನೇ ಭಾಗ್ಯವಂತ... ನಾನೇ ಪುಣ್ಯವಂತ..."

ನನ್ನ ಸಂಗ್ರಹದಲ್ಲಿರುವ ಫೋಟೋಗಳನ್ನು ನೋಡುವಾಗ, ಎಷ್ಟೊಂದು ಪ್ರತಿಭೆ, ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳ ಚಿತ್ರಗಳನ್ನು ತೆಗೆದಿರುವೆ... ಅವರಿರುವ ಕಾಲದಲ್ಲೇ ನಾನಿರುವೆ... ಅದೃಷ್ಟವಂತನಲ್ಲವೇ? ಅನ್ನಿಸಿದೆ.
ಫೋಟೋಗ್ರಾಫ್ ಮತ್ತು ಆಟೋಗ್ರಾಫ್ ಎರಡೂ ನನ್ನ ಹವ್ಯಾಸಗಳು. ನಾನು ಕ್ಲಿಕ್ಕಿಸಿದ ಚಿತ್ರಗಳು ಮತ್ತು ಪಡೆದಿರುವ ಹಸ್ತಾಕ್ಷರಗಳನ್ನು ಸಮ್ಮಿಲನಗೊಳಿಸಿ ಎಲ್ಲರೊಂದಿಗೂ ಹಂಚಿಕೊಳ್ಳುವ ಪ್ರಯತ್ನವಿದು.
ಪಕ್ಷಿ ಮತ್ತು ಕೀಟ ಜಗತ್ತಿನೆಡೆಗೆ ಬೆರೆಗಿನಿಂದ ನಾನು ನೋಡಲಾರಂಭಿಸಿದುದು ತೇಜಸ್ವಿಯವರ ಪುಸ್ತಕ ಓದಿದ ನಂತರವೇ. ಶಾಲೆಯಲ್ಲಿ ವಿಜ್ಞಾನ ಪುಸ್ತಕಗಳಿಂದಾಗದ ಕೆಲಸವನ್ನು ಅವರ ಪುಸ್ತಕಗಳು ಮಾಡಿದವು. ಅವರಿಂದ ಅವರ ಕೃತಿಗಳಿಂದ ಸ್ಫೂರ್ತಿಗೊಂಡು ಸುತ್ತಲಿನ ಪರಿಸರದ ಸೂಕ್ಷ್ಮಗಳೆಡೆಗೆ ನೋಡಿದವರೆಲ್ಲರ ಒಂದೇ ಮಾತು - "ತೇಜಸ್ವಿಯವರು ಇನ್ನೂ ಇರಬೇಕಿತ್ತು".
ನಮ್ಮ ಹೆಮ್ಮೆಯ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ.

ನಮ್ಮ ನಾಡಿಗೆ "ನಿತ್ಯೋತ್ಸವ"ದ ಮೆರುಗು ನೀಡಿದ ಶ್ರೇಷ್ಠ ವ್ಯಕ್ತಿ ಮತ್ತು ಕವಿ - ನಮ್ಮೆಲ್ಲರ ಪ್ರೀತಿಯ ನಿಸಾರ್ ಸಾರ್.

"ಚೆನ್ನಾಗಿ ಬದುಕುವುದೇ ದೊಡ್ಡ ಸಾಧನೆ ಕಣಯ್ಯ" ಎನ್ನುತ್ತಾ ಸದಾ ನನ್ನೊಳಗೆ ಚೈತನ್ಯವನ್ನು ತುಂಬುವ ಗುರುಸ್ವರೂಪಿಗಳಾದ, ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ಪ್ರೊಫೆಸರ್ ಡಾ.ಶೇಷಶಾಸ್ತ್ರಿ.

ದೊಡ್ಡವರಿಗಷ್ಟೇ ಅಲ್ಲ ಮಕ್ಕಳಿಗೂ ಆಪ್ತರಾದ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ.

ನೇಮಿಚಂದ್ರ - ನನಗೆ ಇವರೊಂದು ಬೆರಗು. ಇವರ 'ಬದುಕು' ನನ್ನಂಥವರನ್ನೆಷ್ಟೋ 'ಬದಲಿಸಿದೆ'. ಹೆಚ್.ಎ.ಎಲ್. ನಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿರುವ ಇವರು ಬರೆಯಲು ಸಮಯ ಸಿಗುವುದೇ? ಎಂದನಿಸಿದ್ದಿದೆ. ಪ್ರವಾಸ, ಓದು, ಮಹಿಳಾ ಸಂಘಟನೆ, ಬರಹ... ಇಷ್ಟೊಂದು ಕೆಲಸದ ನಡುವೆ ನನ್ನಂತಹ ಅಭಿಮಾನಿಗಳಿಗೆ ಪತ್ರವನ್ನೂ ಬರೆಯುತ್ತಾರೆ. ಇವರು ಎಲ್ಲರಿಗೂ ಸ್ಫೂರ್ತಿಯನ್ನು ನೀಡುವಂತವರು.

"...ಜಯಂತ್ ಬಲು ದೊಡ್ಡ ಭಾವಜೀವಿ. ಶಂಖವನ್ನು ಕಿವಿಗೆ ಹಿಡಿದರೆ, ಅದರೊಳಗಿನ ಪುಟಾಣಿ ಹುಳುವಿನ ಹೃದಯಕ್ಕೆ ಕವಾಟಗಳೆಷ್ಟು ಎಂಬುದನ್ನು ಹೇಳಬಲ್ಲ ಸೂಕ್ಷ್ಮ ಕಲೆಗಾರ..." - ರವಿ ಬೆಳಗೆರೆ.
ಬೊಗಸೆಯಲ್ಲಿ ಮಳೆ... ಮುಂಗಾರು ಮಳೆ... ಆಗಸ ಭೂಮಿ ಒಂದು ಮಾಡುವ ಜಯಂತ್ ಕಾಯ್ಕಿಣಿಯವರ ಮಳೆ ಸದಾ ಸುರಿಯುತ್ತಿರಲಿ.

ಪ್ರಜಾವಾಣಿ ಆಫೀಸ್ ಗೆ ನನ್ನ ಸ್ನೇಹಿತನ ಜೊತೆ ಮೊದಲ ಬಾರಿ ಹೋಗಿದ್ದೆ. ನಾಗೇಶ್ ಹೆಗಡೆಯವರ ಬಳಿ ಅವರ ಪುಸ್ತಕ "ನನ್ನೊಳಗಿನ ಬ್ರಹ್ಮಾಂಡ" ಹಿಡಿದು ಆಟೋಗ್ರಾಫ್ ಕೇಳಿದೆ. "ಮುಂದಿನ ಬಾರಿ ಲೇಖನ ಬರೆದು ತರಬೇಕು. ಹಾಗೇ ಬರಬಾರದು" ಎಂದರು ಅವರು. ನಾನೂ ಬರೆಯಬಲ್ಲೆ ಎಂಬ ಕಾನ್ಫಿಡೆನ್ಸ್ ಮೂಡಿಸಿದವರೇ ಅವರು. ಇದು ನನ್ನೊಬ್ಬನ ಮಾತಲ್ಲ. ನಾಡಿನ ಮೂಲೆ ಮೂಲೆಗಳಲ್ಲಿ ನಾನಾ ವೃತ್ತಿಗಳಲ್ಲಿದ್ದವರಿಗೆ ಬರೆಯಲು ಸ್ಫೂರ್ತಿ ನೀಡಿದ್ದಾರೆ. ವೃತ್ತಿಯಿಂದ ನಿವೃತ್ತರಾದರೂ ನಮ್ಮಂತವರನ್ನು ತಿದ್ದುವ ಪರ್ಮನೆಂಟ್ ಎಡಿಟರ್ - ನಾಗೇಶ್ ಹೆಗಡೆ.

"ಮನ್ವಂತರ"... "ಮಾಯಾಮೃಗ"... "ಮತದಾನ"... "ಮುಕ್ತ ಮುಕ್ತ"... ಮಾತಿನಿಂದಲೇ ಮನೆಮಾತಾದವರು ಟಿ.ಎನ್.ಸೀತಾರಾಮ್.

ಸದಾ ಹಸನ್ಮುಖಿ... ನಮ್ಮೆಲ್ಲರ ಪ್ರೀತಿಯ "ಛಂದ"ದ ಕತೆಗಾರ ವಸುಧೇಂದ್ರ.

ನನ್ನೊಳಗೂ "ಕ್ಯೂಬಾ" ಎಂಬ ಹಾಡನ್ನು ಹಾಡಿಸಿದವರು ಜಿ.ಎನ್.ಮೋಹನ್.

ಜಾನಕಿಯಾಗಿ... ಜೋಗಿಯಾಗಿ... ಅಪರೂಪಕ್ಕೆ ಗಿರೀಶ್ ರಾವ್ ಆಗಿಯೂ ನಿಬ್ಬೆರಗಾಗುವಂತೆ ಬರೆವ ಇವರ ಬರಹ ವಿಕ್ಟೋರಿಯಾ ಫಾಲ್ಸ್ ನಂತೆ ಸದಾ ಧುಮ್ಮಿಕ್ಕುತ್ತಿರಲಿ...
"ಸಹಿ-ಚಿತ್ರ" ಸರಣಿ ಮುಂದುವರಿಯಲಿದೆ...

36 comments:

Ittigecement said...

ಮಲ್ಲಿಕಾರ್ಜುನ್...

ನಿಜವಾಗಿಯೂ ಹೊಟ್ಟೆಕಿಚ್ಚಾಗುತ್ತಿದೆ...

ನಿಮ್ಮ ಶ್ರದ್ಧೆಯ, ತಾಳ್ಮೆಯ ಪ್ರತಿಫಲ ಇದು..

ನನಗೆ ಕಾರಂತಜ್ಜ, ಭೈರಪ್ಪನವರೆಂದರೆ ಬಹಳ ಇಷ್ಟ..
ನನ್ನ ವಿಚಾರ ಧಾರೆಗೆ ಪ್ರಭಾವ ಬೀರಿದವರು ..
ಅವರ ಸಾಲಿನಲ್ಲಿ ತೇಜಸ್ವಿಯವರೂ ಸಹ ಬರುತ್ತಾರೆ..ಆ ಅದ್ಭುತ ಪ್ರತಿಭೆಯನ್ನು ಕಣ್ಣಾರೆ ಭೇಟಿ ಮಾಡಬೇಕೆಂಬ ಆಸೆ ನೆರವೇರಲೇ ಇಲ್ಲ...

ಜಿ.ಎಸ್.ಎಸ್ ರವರೂ ಸಹ ನನಗೆ ಇಷ್ಟ..

ಇನ್ನು ಎಚ್,ಎಸ್.ವಿಯವರ ಬಗೆಗೆ ಹೇಳುವ ಹಾಗೇಯೆ ಇಲ್ಲ...

ಜಯಂತ್ ಕಾಯ್ಕಿಣಿಯವರ ಹುಡುಕಾಟ, ತುಡಿತ ಬಹಳ ಇಷ್ಟವಾಗುತ್ತದೆ..
ಅವರ ಮಾತುಗಳು ಇನ್ನೂ ಕೇಳಬೆಕೆನಿಸುತ್ತದೆ...

ಬಕ್ಕೆಮನೆ ನಾಗೇಶ್ ಹೆಗಡೆಯವರ ಬಗೆಗೆ ಹೇಳ ಹೊರಟರೆ ನಿಮ್ಮ ಬ್ಲಾಗಿನ ಲೇಖನಕ್ಕಿಂತ ನನ್ನ ಪ್ರತಿಕ್ರಿಯೆಯೇ ದೊಡ್ಡದಾಗಿಬಿಡುತ್ತದೆ...

ಸೀತಾರಾಮರ ಸರಳತನ,
ವಸುಧೇಂದ್ರರ ಕತೆಗಳು.. ಅವರ ವ್ಯಕ್ತಿತ್ವ ಬಹಳ ಇಷ್ಟವಾಗುತ್ತದೆ..

ಹಾಗೆ ಜೋಗಿಯವರ, ಮೋಹನ್ ರವರ
ಅಭಿಮಾನಿ ನಾನು..

ಮಲ್ಲಿಕಾರ್ಜುನ್ ..

ನಿಮ್ಮ ಸಂಗ್ರಹಕ್ಕೊಂದು ನನ್ನ

ಸಲಾಮ್..

ಬಹಳ ಚೆನ್ನಾಗಿದೆ..
ಶಿವುರವರ "ಟೋಪಿ" ಸಂಗ್ರಹದ ಹಾಗೇ
ಇದನ್ನೂ ಮುಂದುವರೆಸಿ... ಇಷ್ಟಕ್ಕೆ ನಿಲ್ಲಿಸ ಬೇಡಿ...

ನಿಮ್ಮ ಕಲೆಗೆ.. ,
ದುಡಿಮೆಗೆ..
ಅಪರೂಪದ ಸಂಗ್ರಹಕ್ಕೆ..

ಅಭಿನಂದನೆಗಳು..

armanikanth said...

mallik, bahala olleya prayatna.
chennagide embudakkinta dodda pada ve illavalla maaraaya?
Manikanth.

Sushrutha Dodderi said...

ನಿಜಕ್ಕೂ ನೀವು ಲಕ್ಕಿ ಮಲ್ಲಿ..

Unknown said...

its a wonderful collection as well as effort...keep rockin...

waiting for many more

- Santhosh Ananthapura

ಪಾಚು-ಪ್ರಪಂಚ said...

Mallikarjun avare,

Nijakku nimma post nodi hemme annistu, Nimma baraha, sangraha, chitra, sahi yellavu tumba ishta haage tumba tumba hottekicchu...

Neevu tumba lucky...


Vandanegalu-
Prashanth Bhat

DIN said...

Very nice Mallikarjun

ಅಮರ said...

ಮಲ್ಲಿ ಸಾರ್....
ಸಕ್ಕತ್ ಕಲೆಕ್ಸನ್, ನಮ್ಮೊಂದಿಗೆ ಹಂಚಿಕೊಂಡಿದ್ದು ಖುಷಿ ತಂದಿದೆ ..... :)
-ಅಮರ

ತೇಜಸ್ವಿನಿ ಹೆಗಡೆ said...

ನಿಮ್ಮೊಳಗಿನ ಪ್ರತಿಭೆಗೆ ಈ ಮೇಳಿನ ಚಿತ್ರಗಳೇ ಸಾಕ್ಷಿ. ನೈಜವಾಗಿ ಮೂಡಿಬಂದ ಅಪರೂಪದ ಚಿತ್ರಗಳು ತುಂಬಾ ಇಷ್ಟವಾದವು. ಧನ್ಯವಾದಗಳು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ.

ತೇಜಸ್ವಿ, ಶಿವರುದ್ರಪ್ಪ, ವೆಂಕಟೇಶ ಮೂರ್ತಿ ಹಾಗೂ ನಿಸಾರ್ ಅಹಮದ್ ಅವರ ಕಾವ್ಯ/ಕೃತಿಗಳು ಹಾಗೂ ಸೀತಾರಮ್ ಅವರ ಧಾರಾವಾಹಿಗಳು ಎಂದರೆ ನನಗೂ ಬಲು ಇಷ್ಟ. ಇಂತಹವರ ಭಾವ ಚಿತ್ರಗಳನ್ನು ತೆಗೆಯಲನುಕೂಲವಾಗಿದ್ದು ನಿಜವಾಗಿಯೂ ನಿಮ್ಮ ಭಾಗ್ಯವೇ ಸರಿ :)

Anonymous said...

ನಿಮ್ಮ ಸಂಗ್ರಹಕ್ಕೆ ನನ್ನದೊಂದು ನಮಸ್ಕಾರ

shivu.k said...

ಮಲ್ಲಿಕಾರ್ಜುನ್,

ನಿಜಕ್ಕೂ ನೀವೊಬ್ಬರೇ ಅದೃಷ್ಟವಂತರು ಅಂತ ನಾನು ಹೇಳುವುದಿಲ್ಲ...ಏಕೆಂದರೆ ಇದೆಲ್ಲ ಆಟೋಗ್ರಾಪ್-ಫೋಟೊಗ್ರಾಪ್ ಕತೆ ನಡೆಯುವಾಗ ಹೆಚ್ಚು ಬಾರಿ ನಿಮ್ಮೊಂದಿಗಿದ್ದೇನೆ...ಆಗ ಅಲ್ಲಿನ ಮಲ್ಲಿಗೆಯಂತ ಮಾತು- ಅತ್ಮೀಯತೆಯಂಥ ಬೆರಗನ್ನು ನಾನು ಅನುಭವಿಸಿದ್ದೇನೆ...ಅದೆಲ್ಲಾ ಅವಕಾಶ ನಿಮ್ಮ ಜೊತೆದಿದ್ದುದರಿಂದ ನನಗೆ ಸಿಕ್ಕಿದೆ....ಇನ್ನೂ ಸಿಕ್ಕುತ್ತಿದ್ದೆ...

ವೈಯಕ್ತಿಕವಾಗಿ ಹೇಳುವುದಾದರೆ ನನಗೆ ತೇಜಸ್ವಿ -ವಸುದೇಂದ್ರ ತುಂಬಾನೆ ಇಷ್ಟ...ಬೇಟಿಯೂ ಆಗಿದೆ ಇನ್ನೂಳಿದವರ ಬಗ್ಗೆ ಪ್ರಕಾಶ ಹೆಗಡೆಯವರ ಅಭಿಪ್ರಾಯವೇ ನನ್ನದು ಕೂಡ..
ಕನ್ನಡ ಸಾರಸ್ವತ ಲೋಕದ ಮಹಾನ್ ವ್ಯಕ್ತಿಗಳ ಫೋಟೊ ಮತ್ತು ಸಹಿ ನಿಮ್ಮ ಬಳಿ ಇರುವುದು ನನಗೆ ತುಂಬಾ ಖುಷಿಯ ವಿಚಾರ....ಇದನ್ನು ಮುಂದುವರಿಸಿ...ನಿಲ್ಲಿಸದೆ...
ಜೊತೆಗೆ ಉಪಯುಕ್ತ ಚುಟುಕು ಮಾಹಿತಿ ಚೆನ್ನಾಗಿದೆ...

sunaath said...

ಮಲ್ಲಿಕಾರ್ಜುನ,
ಎಲ್ಲಾ ಚಿತ್ರಗಳೂ ಚೆನ್ನಾಗಿವೆ. ನನಗೆ ವಿಶೇಷವಾಗಿ ಹಿಡಿಸಿದ ಚಿತ್ರಗಳೆಂದರೆ, relaxing poseನಲ್ಲಿರುವ ಪೂಚಂತೇ ಹಾಗೂ ನಗುತ್ತಿರುವ ವಸುಧೇಂದ್ರ!

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ನನಗೆ ನಿಮ್ಮ ಮೇಲೂ ಹೊಟ್ಟೆ ಕಿಚ್ಚಿದೆ! ನೀವು ಕಾರಂತಜ್ಜನನ್ನು ಭೇಟಿ ಮಾಡಿದ್ದೀರಿ ಮತ್ತು ಕುವೆಂಪು ರನ್ನೂ ಸಹ. ಯಾವಾಗಲಾದರು ಅವರ ಬಗ್ಗೆ ನಿಮ್ಮ ಬ್ಲಾಗಲ್ಲಿ ಬರೆಯಿರಿ.

ಮಲ್ಲಿಕಾರ್ಜುನ.ಡಿ.ಜಿ. said...

* ಮಣಿಕಾಂತ್ ನೀವು ಬರೆಯುವ ಹಾಡಿನ ಹಿಂದಿನ ಕಥೆಯ ಮುಂದೆ ಇದು ಏನೇನೂ ಅಲ್ಲ. ಧನ್ಯವಾದಗಳು.
* ಸುಶ್ರುತ ದೊಡ್ಡೆರಿಯವರೆ ನೀವು ನಾವು ಎಲ್ಲರೂ ಅದೃಷ್ಟವಂತರು ಎಂಬರ್ಥದಲ್ಲಿ ನಾನು ಬರೆದಿರುವುದು.
* ಸಂತೋಷ್ ಥ್ಯಾಂಕ್ಸ್. ನೀವು ಎಲ್ಲಿನ ಅನಂತಪುರದವರು? ಆಂಧ್ರದ್ದೋ? ಅಥವಾ ಶಿವಮೊಗ್ಗ ಜಿಲ್ಲೆಯವರೋ?

ಮಲ್ಲಿಕಾರ್ಜುನ.ಡಿ.ಜಿ. said...

*ಪ್ರಶಾಂತ್ ಅವರೆ ಧನ್ಯವಾದಗಳು. ನಿಮ್ಮ ಬ್ಲಾಗ್ ಚೆನ್ನಾಗಿದೆ. ನನಗೂ ನಿಮ್ಮಂತೆ ಸುತ್ತಾಡುವ ಖಯಾಲಿ. ವಯನಾಡ್, ಕಾವೇರಿ ಫಿಷಿಂಗ್ ಕ್ಯಾಂಪ್,ಮಂಚಿನಬಲೆ ಡ್ಯಾಮ್ ಮತ್ತು ಎಲ್ಲ ಚಿತ್ರಗಳೂ ಇಷ್ಟವಾದವು.
*ದಿನೇಶ್, ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್. ನೀವು ದಿನೇಶ್ ಶೆಣೈ ತಾನೇ?

ಮಲ್ಲಿಕಾರ್ಜುನ.ಡಿ.ಜಿ. said...

ನೇಮಿಚಂದ್ರ ಮೇಡಂ ಅವರ ಪ್ರತಿಕ್ರಿಯೆ:
Oh it is nice. Thanks for your kind words about me. Your other photos 'muttina male', foggy mornings are wonderful. And yes I could see 'Basava' clearly in the photo, I must read Ganeshayya's story again.

Warm Regards,
Nemichandra

ಮಲ್ಲಿಕಾರ್ಜುನ.ಡಿ.ಜಿ. said...

ಶ್ರೀಕಂಠದಾನಿ ಮತ್ತು ಭರತ್ ಕುಮಾರ್ ರ ಪ್ರತಿಕ್ರಿಯೆ:
Dear Mallikarjuna,

It is very nice of you to have placed Dr Sheshashastri in the list. I liked it very much.
You are a fortunate man to have interacted with so many interesting literary personalities.

I look forward to many more PHOTAUTOgraphs!

with best wishes,
Srikanta Dani

ಪ್ರೀತಿಯ ಮಲ್ಲಿಕಾರ್ಜುನ,
ಧನ್ಯವಾದಗಳು. ಚಿತ್ರಗಳು ತುಂಬಾ ಚೆನ್ನಾಗಿವೆ ಎಂಬುದು ಬರೀ ಕ್ಲೀಷೆ. ಇವನ್ನು ನಿಜಕ್ಕೂ ಎಂಜಾಯ್ ಮಾಡಿದೆ. ಮತ್ತೇನು ವಿಶೇಷ.
ಪ್ರೀತಿಯಿಂದ,
ಭರತ್

ಮಲ್ಲಿಕಾರ್ಜುನ.ಡಿ.ಜಿ. said...

ವಸುಧೇಂದ್ರರ ಪ್ರತಿಕ್ರಿಯೆ:
ಮಲ್ಲಿ,


ತುಂಬಾ ಇಷ್ಟವಾದವು. ಎಷ್ಟೊಂದು ಸೊಗಸಾದ ಫೋಟೋಗಳು, ಜೊತೆಗೆ ಅವರ ಹಸ್ತಾಕ್ಷರ ಬೇರೆ! ಇನ್ನೂ ಒಂದು ಇಪ್ಪತ್ತು ಇಂತಹದೇ ಫೋಟೋ, ಆಟೋಗ್ರಾಫ್ ಮಾಡಿಕೊಂಡರೆ ‘ಛಂದ’ ದಿಂದ ಒಂದು ಸುಂದರ ಪುಸ್ತಕವನ್ನು ತರೋಣ (ನೀನು ಒಪ್ಪುವದಾದರೆ). ನನಗಂತೂ ಬಹಳಾ ಖುಷಿಯಾಗಿದೆ.


ವಸುಧೇಂದ್ರ

ಮಲ್ಲಿಕಾರ್ಜುನ.ಡಿ.ಜಿ. said...

* ಅಮರ ಅವರೆ,
ಹಂಪಿ ಎಕ್ಸ್ಪ್ರೆಸ್ ಬಿಡುಗಡೆಯಾದ ದಿನ ನಾನು ಕ್ಲಿಕ್ಕಿಸಿದ ನಿಮ್ಮ ಚಿತ್ರ ನಿಮಗೆ ಈಮೇಲ್ ಮಾಡಿರುವೆ.
*ಮಿಂಚುಳ್ಳಿಯ ಶಮಾ ಅವರೆ, ಥ್ಯಾಂಕ್ಸ್. ನಿಮ್ಮ ಬ್ಲಾಗಲ್ಲೂ ಅನೇಕ ಲೇಖಕರ, ಕವಿಗಳ ಫೋಟೋಗಳನ್ನು ನೋಡಿದೆ. ಚೆನ್ನಾಗಿದೆ. ಮಿಂಚುಳ್ಳಿಗೂ, ನಂದಿಬೆಟ್ಟಕ್ಕೂ, ಶಮ ಅವರಿಗೂ ಹೇಗೆ ನಂಟು? ನಂದಿಬೆಟ್ಟ ನಮ್ಮೂರಿಗೆ ತುಂಬಾ ಹತ್ತಿರವಿದೆ.
* ತೇಜಸ್ವಿನಿ ಹೆಗಡೆಯವರೆ,
ನಮ್ಮನ್ನು ಪ್ರಭಾವಿಸಿರುವ ಹಿರಿಯ ವ್ಯಕ್ತಿತ್ವಗಳ ನೈಜ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಅವರಿಗೆ ಗೊತ್ತಾಗದ ಹಾಗೆ ಸಹಜವಾದ ಚಿತ್ರಗಳನ್ನು ತೆಗೆಯಲು ನನಗೆ ಇಷ್ಟ.

ಮಲ್ಲಿಕಾರ್ಜುನ.ಡಿ.ಜಿ. said...

*ಶಿವು, ನಾನೊಬ್ಬನೇ ಅದೃಷ್ಟವಂತನಲ್ಲ. ನಾವೆಲ್ಲರೂ ಅದೃಷ್ಟವಂತರು. ನಿಮ್ಮ ಸಹಕಾರದಿಂದಲೇ ನಾನಿವೆಲ್ಲ ಮಾಡಲು ಸಾಧ್ಯವಾಗಿರುವುದು. ನೆನಪಿದೆಯಾ? ಡಾ.ಯು.ಆರ್.ಅನಂತಮೂರ್ತಿಯವರು ಕಾರಲ್ಲಿ ಕೂತು ಇನ್ನೇನು ಹೊರಡಬೇಕು, ಆಗ ಇಬ್ಬರೂ ಓಡಿ ಹೋಗಿ ಕಾರು ನಿಲ್ಲಿಸಿ ಅವರಿಂದ ನನ್ನ ಬಳಿ ಇದ್ದ "ಸಂಸ್ಕಾರ" ಪುಸ್ತಕದ ಮೇಲೆ ಹಸ್ತಾಕ್ಷರ ಪಡೆದೆವು.
*ಸುನಾತ್ ಸರ್,
ಧನ್ಯವಾದಗಳು. ನನಗೂ ಅವು ಬಹಳ ಖುಷಿ ಕೊಟ್ಟ ಚಿತ್ರಗಳು. "ತೇಜಸ್ವಿಯವರು ವಾಚ್ ಕಟ್ಟಿರುವ ಚಿತ್ರಗಳು ಎಲ್ಲೂ ಇಲ್ಲ. ಅದರ ಕಾಪಿ ಕಳಿಸಿಕೊಡಿ"ಎಂದು ಅವರ ಗೆಳೆಯರಾದ ಮೈಸೂರಿನ ಬಿ.ಎನ್.ಶ್ರೀರಾಮ್ ಅವರು ನನ್ನಿಂದ ಆ ಚಿತ್ರವನ್ನು ತರಿಸಿಕೊಂಡಿದ್ದರು.

Greeshma said...

ಭಾರಿ ಒಳ್ಳೆ collection!! ಚಂದವಾದ ಬರಹ ಕೂಡ. ಧನ್ಯವಾದಗಳು ನಮ್ಮ ಜೊತೆ ಹಂಚಿಕೊಂಡಿದಕ್ಕೆ.

Prabhuraj Moogi said...

ಬಹಳ ಅಪರೂಪದ ಸಂಗ್ರಹ... ಒಬ್ಬರೊಬ್ಬರ ಬಗ್ಗೆಯೂ ಚಿಕ್ಕ ಚಿಕ್ಕ ವಿವರಗಳನ್ನು ನೀಡಿದ್ದು ಚೆನ್ನಾಗಿತ್ತು.. ಹೀಗೆ ನಿಮ್ಮ ಸಂಗ್ರಹ ಬೆಳೆಯುತ್ತಿರಲಿ ಎಂದು ಶುಭಹಾರೈಕೆಗಳು

ಕನಸು said...

ಡಿಯರ್ ಸರ್ ,
ನಿಮ್ಮ ಬ್ಲಾಗು ನೋಡಿದೆ.ತುಂಭಾ ತುಂಭಾನೆ ಹಿಡಿಸಿತ್ತು.
ಧನ್ಯವಾದಗಳು ಸರ್
ನಾನು ಕವಿತೆ ಬರೆಯುತ್ತೆನೆ ಆದರೆ ನೀವು ನೂರು ಕವಿತೆಗಾಗುವಷ್ಟು ಒಂದು ಚಿತ್ರದಲ್ಲಿ ಕನಸುಗಳನ್ನು ಭಾವನೆಗಲನ್ನು ಹೇಳತ್ತಿರಾ! ವಂಡರ್ ವಂಡರ್
ಒಳ್ಳೆಯದಾಗಲಿ
ಆಗ್ಗಾಗೆ ನಿಮ್ಮ ಬ್ಲಾಗಿಗೆ ಬರುತ್ತೆನೆ
ಪ್ರೀತಿ ಇರಲಿ

Ashok Uchangi said...

ಪ್ರಿಯ ಮಲ್ಲಿಕಾರ್ಜುನ್.
ಸಾಹಿತ್ಯಾಭಿಮಾನಿಯಾಗಿ ನಾಡಿನ ಪ್ರಸಿದ್ದರ ಹಸ್ತಾಕ್ಷರ,ಚಿತ್ರಗಳನ್ನು ಸಂಗ್ರಹಿಸುವ ನಿಮ್ಮ ಹವ್ಯಾಸ ಮೆಚ್ಚಲೇಬೇಕು,ವಸುಧೇಂದ್ರರು ಹೇಳಿದಂತೆ ‘ಛಂದ’ದಿಂದ ಪುಸ್ತಕ ತಂದರೆ ಚೆಂದ...
ಅಶೋಕ ಉಚ್ಚಂಗಿ

PaLa said...

ಮಲ್ಲಿಕಾರ್ಜುನ್
ಉತ್ತಮ ಸಂಗ್ರಹ, ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ವಂದನೆಗಳು
--
ಪಾಲ

ಮನಸು said...

ಸರ್,
ನಿಮ್ಮ ಬ್ಲಾಗ್ ತುಂಬ ಚೆನ್ನಾಗಿದೆ, ನಾನು ಕೂಡ ನಿಸಾರ್, ಜಿ. ಎಸ್. ಹಾಗು ಸುಧಾಮೂರ್ತಿ ಅವರು ಕುವೈತ್ಗೆ ಬಂದಾಗ ಅವರ ಹಸ್ತಾಕ್ಷರ ಪಡೆದಿದ್ದೆ ಹಾಗು ಮುಕ್ತವಾಗಿ ಮಾತಾಡಿದ್ದೆ ಕೂಡ ನಿಮ್ಮ ಈ ಪ್ರತಿಗಳು ಕಂಡ ಕೂಡಲೇ ನನಗೆ ನೆನಪಾಯಿತು.. ಪ್ರತಿ ಚಿತ್ರಗಳು ಚೆನ್ನಾಗಿವೆ.. ಹೀಗೆ ಹಲವಾರು ಪರಿಚಯಗಳು ಮೂಡಲಿ...
ಧನ್ಯವಾದಗಳು..

ಚಿತ್ರಾ ಸಂತೋಷ್ said...

ಅದೃಷ್ಟವಂತ ಮಲ್ಲಿಯಣ್ಣನಿಗೆ ಅಭಿನಂದನೆಗಳು. ಪ್ರತಿಭೆ ಬತ್ತದಿರಲಿ..'ಹುಡುಕಾಟ' ಮುಂದುವರೆಯಲಿ.
-ಚಿತ್ರಾ

ಮಲ್ಲಿಕಾರ್ಜುನ.ಡಿ.ಜಿ. said...

*ಗ್ರೀಷ್ಮಾ ಅವರೆ,
ಧನ್ಯವಾದಗಳು.
* ಪ್ರಭುರಾಜ್, ಇನ್ನು ಇವೆ ನನ್ನ ಸಂಗ್ರಹದಲ್ಲಿ. ಮುಂದೆ ಹಾಕುವೆ.ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

*ಕನಸು ಅವರೆ, ಥ್ಯಾಂಕ್ಸ್. ಹೀಗೇ ಪ್ರೋತ್ಸಾಹಿಸುತ್ತಿರಿ.
*ಅಶೋಕ್ ಮತ್ತು ಪಾಲಚಂದ್ರ ಧನ್ಯವಾದಗಳು.
* ಮೃದು ಮನಸಿನವರೆ, ದುರದ ನಾಡಲ್ಲಿದ್ದರೂ ಕನ್ನಡದ ಕಂಪನ್ನು ಹರಡುವ ನೀವೇ ಗ್ರೇಟ್. ಸುಧಾಮೂರ್ತಿಯವರನ್ನು ನಾನು ಭೇಟಿಯಾಗಿಲ್ಲ. ನನ್ನ ಹೆಂಡತಿಗೆ ಅವರು lecturer ಆಗಿದ್ದರಂತೆ.
* ಚಿತ್ರಕ್ಕ ಥ್ಯಾಂಕ್ಸ್.

ವಿನುತ said...

ಮಲ್ಲಿಕಾರ್ಜುನರವರೇ,

ಈ ಸರಣಿಯನ್ನು ಮುಂದುವರೆಸುತ್ತೇನೆಂದು ಹೇಳಿರುವುದಕ್ಕೆ ಧನ್ಯವಾದಗಳು.
ಇವುಗಳನ್ನು, ಮತ್ತು ನಿಮ್ಮ ಇತರ ಬ್ಲಾಗ್ ಗಳನ್ನು ನೋಡಿ ಆಗುತ್ತಿರುವ ಸಂತೋಷ, ಅಭಿಮಾನ, ಕುತೂಹಲ, ಹೊಟ್ಟೆಕಿಚ್ಚು, ಧನ್ಯತೆ.... ಇತ್ಯಾದಿ ಭಾವಗಳ ಮಿಶ್ರಣವನ್ನು ಹೇಳಲು ನನ್ನಲ್ಲಿ ಪದಗಳ ಕೊರತೆಯಿದೆ.
ನಿಮ್ಮ ಈ ಸಂಗ್ರಹದ ಪುಸ್ತಕಕ್ಕೆ ಎದುರು ನೋಡುತ್ತೇನೆಂದು ಮಾತ್ರ ಹೇಳಬಲ್ಲೆ...

Unknown said...

ಮಲ್ಲಿಕಾರ್ಜುನ ಅವರೆ, ಅದ್ಭುತವಾದ ಸಂಗ್ರಹ. ನೋಡಿದಷ್ಟೂ ಮತ್ತೆ ಮತ್ತೆ ನೋಡಿಸಿಕೊಳ್ಳುವ ಸಂಗ್ರಹ ಸಂಚಿಕೆಯನ್ನು ನೀಡಿದ್ದೀರಿ. ಧನ್ಯವಾದಗಳು.

ನಾವಡ said...

ನಿಮ್ಮ ಶ್ರಮ ಸಾರ್ಥಕ, ಸಂಗ್ರಹ ಅನುಪಮ.
ನಾವಡ

ಚಂದ್ರಕಾಂತ ಎಸ್ said...

ಮಲ್ಲಿಕಾರ್ಜುನ ಅವರೆ

ನಿಮ್ಮಾಅಟೋಗ್ರಾಫ್ - ಫೋಟೋಗ್ರಫ್ ಸಂಗ್ರಹ ಬಹಳ ಚೆನ್ನಾಗಿದೆ.ವಸುಧೇಂದ್ರ ಅವರು ಹೇಳಿದಂತೆ ಇನ್ನು ಕೆಲವು ಫೋಟೋಗಳನ್ನು ಹಾಕಿ. ಪುಸ್ತಕ ಬಂದಾಗ ಎಲ್ಲರೂ ಅದನ್ನು ಹತ್ತಿರದಿಂದ ನೋಡಿ ಸವಿಯಬಹುದು.

ಈ ವಾರದ ಸುಧಾದಲ್ಲಿ ನಿಮ್ಮ " ನಂದಿಬೆಟ್ಟದ ಮೇಲ್ಮಂಜು" ಚಿತ್ರ ಬರಹ ಎರಡೂ ಚೆನ್ನಾಗಿ ಮೂಡಿ ಬಂದಿದೆ

ಚಿತ್ರಾ said...

ಮಲ್ಲಿಕಾರ್ಜುನ್ ,
ನೀವೆಷ್ಟು ಅದೃಷ್ಟವಂತರು ಸ್ವಾಮೀ!ಏನು ಹೇಳಬೇಕೆಂದೇ ತಿಳಿಯದಷ್ಟು ಬೆರಗಾಗಿದ್ದೇನೆ!

ಆಲಾಪಿನಿ said...

ತಾಳ್ಮೆಯೋ, ಪ್ರೀತಿಯೋ, ಧ್ಯಾನವೋ, ಕಾಯಕವೋ...

ನಿಮ್ಮೊಳಗಿನ ಈ ಎಲ್ಲ ನೋಡಿ ಹೆಮ್ಮೆ ಅನ್ನಿಸುತ್ತಿದೆ ಮಲ್ಲಿಕಾರ್ಜುನ್ ಅವರೆ, all the best...

ಅಹರ್ನಿಶಿ said...

ಡಿ.ಜಿ.ಏಮ್,

ಬಹಳ ದಿನಗಳ ನ೦ತರ ನಾ ನೋಡಿದ ಅಪರೂಪದ ಬ್ಲಾಗ್ ಪೋಸ್ಟ್. "ಆಟೋಗ್ರಾಫ್ - ಫೋಟೋಗ್ರಾಫ್".ವರ್ಣಿಸಲಸದಳ.
ನಿಮ್ಮ ಚೈತನ್ಯ ಇಮ್ಮಡಿಯಾಗಲಿ.ಬ್ಲಾಗ್ ಲೋಕದಲ್ಲಿ ಕ೦ಡುಕೊ೦ಡ ಅಪರೂಪದ ವ್ಯಕ್ತಿ ನೀವು.

Unknown said...

awesome photography...........tumba chennagide...............