Thursday, February 12, 2009

ಜೀವಲೋಕದ ಪ್ರೇಮಸಲ್ಲಾಪ

ಫೆಬ್ರವರಿ ೧೪ - ಪ್ರೇಮಿಗಳ ದಿನ.
ಪ್ರೇಮಿಗಳ ದಿನದ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲಿನ ಜೀವ ಸಂಕುಲದ ಪ್ರೇಮ ಜೀವನವನ್ನು ಕೊಂಚ ಗಮನಿಸೋಣವೇ?
ನಮಗಿರುವಂತೆ ಇತರ ಜೀವ ಸಂಕುಲಕ್ಕೆ ತಂದೆಗೊಂದು ದಿನ, ತಾಯಿಗೊಂದು ದಿನ, ಅಜ್ಜನಿಗೊಂದು ದಿನ, ಗುರುವಿಗೊಂದು ದಿನ, ಗೆಳೆತನಕ್ಕೊಂದು ದಿನ, ಭ್ರಾತೃತ್ವಕ್ಕೊಂದು ದಿನ... ಹೀಗೆ ಇಲ್ಲ. ಆದರೂ ಇಂದು ಪ್ರೇಮಿಗಳ ದಿನದ ಹೊಸಿಲ ಮೇಲೆ ನಿಂತು ನಮ್ಮ ಮೂಗಿನ ಮೇಲಿರುವ ಕ್ಯಾಮರಾ ಕಣ್ಣಿನ ನೇರಕ್ಕೆ ಇತರ ಜೀವಿಗಳ ಪ್ರಣಯ ಜೀವನದ ಒಂದು ಪುಟ್ಟ ಅವಲೋಕನವಷ್ಟೆ.
ಮಾನವರಂತೆ ಈ ಜೀವಿಗಳಿಗೆ ಪ್ರೀತಿ - ಪ್ರೇಮ - ಪ್ರಣಯ ಎಂಬ ಒಂದೊಂದು ಪದಕ್ಕೊಂದು ಅರ್ಥ, ವ್ಯಾಖ್ಯಾನ ಇಲ್ಲವಾದರೂ ಈ ಪದಗಳೆಲ್ಲ ಸೇರಿಕೊಂಡು ಅವುಗಳ ಪಾಲಿನ ಒಟ್ಟಾರೆ ಅರ್ಥ ಸಂತತಿಯ ಮುಂದುವರಿಕೆಯಷ್ಟೆ ಆಗಿದೆ. ಆದರೂ ಅಲ್ಲಿ ದಾಂಪತ್ಯಕ್ಕೆ ಮುನ್ನ ಅಸಂಖ್ಯ ಚಮತ್ಕಾರಗಳಿವೆ. ಗಂಡುಗುಬ್ಬಿಗೆ ಜೀವನವಿಡೀ ಒಂದೇ ಸಂಗಾತಿ. ಗೀಜಗ ಹೆಣ್ಣಿನ ನಿರಂತರ ವರಪರೀಕ್ಷೆ. ತನ್ನೊಂದಿಗೆ ಮಿಲನಗೊಂಡ ಸಂಗಾತಿಯನ್ನೇ ನುಂಗುವ ಹೆಣ್ಣು ಜೇಡ.... ಇವೆಲ್ಲವೂ ಸಂತಾನ ಸಾತತ್ಯದ ನಾಟಕಗಳು.
ಅಸಂಖ್ಯಾತ ಬಣ್ಣ, ಆಕಾರಗಳ ತೊಟ್ಟು ಬೆರಗು ಹುಟ್ಟಿಸುವ ವರ್ತನೆಗಳಿರುವ ಜೀವ ಕೋಟಿಗಳ ಸಾಮಾಜಿಕ ನಡವಳಿಕೆಗಳಲ್ಲಿ ಮುಖ್ಯವಾದದ್ದು ಬದುಕುವುದು ಮತ್ತು ಸಂತಾನಾಭಿವೃದ್ಧಿ. ತಮ್ಮ ಶಕ್ತಿಯ ಬಜೆಟ್ ಮಿತಿಯಾಗಿರುವುದರಿಂದ ಅದನ್ನು ಆದಷ್ಟೂ ಬೆಳವಣಿಗೆ ಮತ್ತು ಸಂತಾನ ಕ್ರಿಯೆಗೆ ಸದುಪಯೋಗ ಮಾಡಬೇಕು. ಇವುಗಳು ಆದಷ್ಟೂ ತಮ್ಮ ಆಹಾರ ಹೆಚ್ಚಾಗಿರುವಂತಹ ಕಾಲದಲ್ಲಿ ಮರಿಗಳು ಹೊರಬರುವಂತೆ ತಮ್ಮ ಸಂತಾನ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ.
ವಿಕಾಸವಾದದ ಪ್ರಕಾರ ಉತ್ತಮ ಅನುವಂಶಿಕ ಗುಣಗಳು, ತಲೆಮಾರಿನಿಂದ ತಲೆಮಾರಿಗೆ ಮುಂದುವರಿಯಲು ಹೆಣ್ಣಿಗೆ ತನಗುತ್ತಮನಾದ ಶಕ್ತ ಗಂಡನ್ನೇ ಆರಿಸುವ ಅವಶ್ಯಕತೆಯಿದ್ದರೆ, ಗಂಡಿಗೆ ಹೆಣ್ಣನ್ನು ಒಲಿಸಿಕೊಳ್ಳಲು ನಾನಾ ಕಸರತ್ತುಗಳನ್ನು ಶೌರ್ಯ ಪ್ರದರ್ಶನವನ್ನೆಲ್ಲಾ ಮಾಡಬೇಕಾದ ಅನಿವಾರ್ಯತೆ ಇದೆ.
ನಾವು ನೋಡುವ ಬಣ್ಣ ಬಣ್ಣದ ಚಿಟ್ಟೆಗಳು ಹಿಂದೆ ಮೂರು ಬಾರಿ ವೇಷಗಳನ್ನು ಕಳಚಿ ಬಂದಿರುತ್ತವೆ. ಇವು ತಮ್ಮ ಊಟ, ನಿದ್ರೆಗಳ ಚಿಂತೆಗಳನ್ನೆಲ್ಲ ಹಿಂದಿನ ಅವತಾರಗಳಲ್ಲೇ ಮುಗಿಸಿ ಬಂದಿರುವುದರಿಂದ ಈಗಿನ ಅವತಾರವನ್ನು ಕೇವಲ ಪ್ರೇಮ ಜೀವನಕ್ಕಾಗಿ, ಪ್ರಿಯತಮೆಯ ಶೋಧಕ್ಕಾಗಿ ಮೀಸಲಿರಿಸುತ್ತವೆ.
ಪ್ರತಿಯೊಂದು ವರ್ಗದ ಜೀವಿಗಳ ನಡುವೆಯೂ ಹಾಗೂ ಭೂಮಿಯ ಸಮಸ್ತ ವರ್ಗಗಳ ನಡುವೆಯೂ ಏಕಕಾಲದಲ್ಲಿ ಒಂದು ಸೂಕ್ಷ್ಮವಾದ ಪರಸ್ಪರ ಒಡನಾಟವು ನಡೆಯುತ್ತಿರುತ್ತದೆ. ಈ ಸಂಕೀರ್ಣ ಸಂಬಂಧವು ಒಂದು ಸಮತೋಲನವನ್ನು ಕಾಯ್ದುಕೊಂಡಿರುತ್ತದೆ. ಮಾನವ ತಾನು ಮಾತ್ರ ಇವುಗಳಿಂದ ಬೇರೆಯೇ ಎನ್ನುವಂತೆ ಊಹಿಸಿ ಈ ಸಮತೋಲನದ ಏರುಪೇರು ಮಾಡಲು ಹೊರಟಿದ್ದಾನೆ. ತಾನು ಕೂತ ಕೊಂಬೆಯ ಬುಡಕ್ಕೇ ಕೊಡಲಿಯೇಟು ಕೊಡುತ್ತಿದ್ದಾನೆ.

19 comments:

Ittigecement said...

ಮಲ್ಲಿಕಾರ್ಜುನ

ವಾವ್....!!

ನಾನು ಮೂಕನಾಗಿದ್ದೇನೆ...

ಎಲ್ಲಿಂದ ತಂದಿದ್ದೀರಿ.. ಇದೆಲ್ಲ..?

ನಿಮ್ಮ ಹುಡುಕಾಟ, ನಿಮ್ಮ ತಾಳ್ಮೆ..

ನಿಮ್ಮ ಶ್ರದ್ಧೆ..

ಇಲ್ಲಿ ಕಾಣ ಬಹುದು...

ಅದ್ಭುತ ಛಾಯಗ್ರಹಣ ಮಾತ್ರವಲ್ಲ..

ಲೇಖನ ಕೂಡ..

"ಪ್ರೇಮಿಗಳ ದಿನಾಚರಣೆಗೆ" ಓದಿದ ಲೇಖನಗಳಲ್ಲಿ ಇದು

ಅತ್ಯುತ್ತಮ.. ಹಾಗೂ.. ಸೂಕ್ತ..!

ಮತ್ತೊಮ್ಮೆ ನಿಮ್ಮ "ಪ್ರತಿಭೆಗೆ"

ಅಭಿನಂದನೆಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ಒಂದೊಂದು ಚಿತ್ರದ ಹಿಂದೆಯೂ ಒಂದೊಂದು ಕಥೆಯಿದೆ.
ಮಿಡತ ಜೋಡಿಯ ಚಿತ್ರ ತೆಗೆದದ್ದು ತೇಜಸ್ವಿಯವರ ಮನೆ ಬಳಿ, ಅವರ ತೋಟದಲ್ಲೇ.
ಧನ್ಯವಾದಗಳು.

PaLa said...

ಪ್ರೇಮಿಗಳ ದಿನಕ್ಕೆ ವಿಶಿಷ್ಟ ಶೈಲಿಯ ಚಿತ್ರ ಪ್ರದರ್ಶಿಸಿ, ಬೇರೆಯೇ ದೃಷ್ಟಿಯ ವ್ಯಾಖ್ಯಾನ ನೀಡಿದ ನಿಮ್ಮೀ ಪರಿ ಸೊಗಸಾಗಿದೆ
--
ಪಾಲ

Ashok Uchangi said...

ಚಿತ್ರ ಬರಹ ಎರಡೂ ಚೆನ್ನಾಗಿವೆ.
ಪ್ರೇಮವೆಂದರೆ ಪ್ರಣಯ ಎಂಬ ಅರ್ಥ ಬರುವಂತಿದೆಯಲ್ಲ!
ಗಿಳಿ,ಮೊಲ,ನವಿಲು,ಚಿಟ್ಟೆಗಳ ಆಲಿಂಗನ,ಚುಂಬನ,ನರ್ತನದ ಚಿತ್ರಗಳು ಪ್ರೇಮ ಸಲ್ಲಾಪಕ್ಕೆ ಸೂಕ್ತ ಚಿತ್ರಗಳು ಎಂದು ನನಗೆ ಅನಿಸುತ್ತೆ
ಅಶೋಕ ಉಚ್ಚಂಗಿ
http://mysoremallige01.blogspot.com/

Ittigecement said...

ಮಲ್ಲಿಕಾರ್ಜುನ್..
ತೇಜಸ್ವಿಯವರ ಮನೆಯಲ್ಲಿ ತೆಗೆದ ಫೋಟೊ ಅದಾ?

ಎಂಥಹ ಅದ್ರಷ್ಟವಂತರು ನೀವು?
ನನಗೆ ಒಮ್ಮೆ ಭೇಟಿ ಮಾಡುವ ಆಸೆ ಇತ್ತು.

ಸರ್ ಈ ಎಲ್ಲ ಫೋಟೊ ಹೇಗೆ ತೆಗೆದಿದ್ದೀರಿ ವಿವರಿಸಿ

ಸರ್..

plz....

ಮಲ್ಲಿಕಾರ್ಜುನ.ಡಿ.ಜಿ. said...

ಅಶೋಕ್,
ಪ್ರೇಮವೆಂದರೆ ಪ್ರಣಯವೆಂದು ನಾನು ಅರ್ಥೈಸಿಲ್ಲ. ಜೀವಲೋಕದ ಕೌತುಕಗಳ ಬಗ್ಗೆ ಒಂದು ಕುತೂಹಲಕಾರಿ ಇಣುಕುನೋಟವಷ್ಟೆ. ಸಂತಾನ ಮುಂದುವರಿಕೆಗಾಗಿ ಅವುಗಳು ನಡೆಸುವ ಹೋರಾಟವನ್ನು "ಪ್ರಣಯ" ಎಂದು ಹೆಸರಿಸುವುದು ನನಗೇನೊ ಸರಿ ಕಾಣದು.

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ತೇಜಸ್ವಿಯವರನ್ನು ಭೇಟಿ ಮಾಡಿದ್ದು ನಿಜಕ್ಕೂ ನನ್ನ ಅದೃಷ್ಟ.ನೋಡಿ-http://www.kamat.org/network/blogs/?BlogID=3066. ಎರಡು ಬಾರಿ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದ್ದೆ.ಎರಡನೆ ಬಾರಿ ನನ್ನ ಹೆಂಡತಿ ಮಗನೊಂದಿಗೆ ಹೋಗಿದ್ದೆ. ಅವರನ್ನು ಮಾತಾಡಿಕೊಂಡು ಅವರ ಮನೆಯಿಂದ ಹೊರಬಂದಾಗ ಸ್ವಲ್ಪ ದೂರದಲ್ಲಿ ಅವರ ತೋಟದಲ್ಲೇ ಈ ಮಿಡತೆ ಜೋಡಿ ಕಾಣಿಸಿತು.
ಮೊಲದ ಚಿತ್ರ ತೆಗೆದದ್ದು ಕಾವೇರಿ ನಿಸರ್ಗಧಾಮದಲ್ಲಿ.
ಗುಬ್ಬಿಯದ್ದು ಅಕಸ್ಮಾತ್ ಆಗಿ ಸಿಕ್ಕ ಚಿತ್ರ. ಹೈಡ್ ನೊಳಗೆ ಕೂತು ಮೈನಾ ಚಿತ್ರ ತೆಗೆಯಲು ಕಾದಿದ್ದಾಗ ಪಕ್ಕದ ಶೀಟ್ ಮೇಲೆ ಗುಬ್ಬಿಗಳ ಬಂದವು. ಆಗ ಸಿಕ್ಕ ಒಂದೇ ಫ್ರೇಮ್ ಇದು.

shivu.k said...

ಮಲ್ಲಿಕಾರ್ಜುನ್,

ಪ್ರೇಮಿಗಳ ದಿನಕ್ಕೊಂದು ಒಳ್ಳೆಯ ಉದಾಹರಣೆ...ಆಶೋಕ್ ಹೇಳಿದಂತೆ ನನಗೂ ಅನ್ನಿಸಿತು...ಆದರೆ ನೀವು ಕೊಟ್ಟಿರುವ ಮಾಹಿತಿಯನ್ನು ಓದಿದಾಗ ಸರಿಯೆನಿಸಿತು...ಕೀಟ ಪ್ರಾಣಿ, ಪಕ್ಷಿಗಳ, ಪ್ರಣಯದಾಟ....ಪ್ರಾಕೃತಿಕವಾದದ್ದು....ಅವುಗಳ ಗುರಿಯನ್ನು ದೇವರು ಸ್ಪಷ್ಟಪಡಿಸಿರುತ್ತಾನೆ.. ಮತ್ತು ಅವುಗಳು ತಮ್ಮ ಕ್ರಿಯೆಯಿಂದ ಮತ್ತಷ್ಟು ಸ್ವಾಭಾವಿಕ ಅಸಮತೋಲನವನ್ನು ಹೋಗಲಾಡಿಸುತ್ತವೆ....ಅದ್ರೆ ಮನುಷ್ಯ ಮಾತ್ರ ಮಾತಿನಲ್ಲಿ ನೀತಿ...ಕೃತಿಯಲ್ಲಿ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾನೆ...ಚೆನ್ನಾಗಿದೆ...

ಸುಧನ್ವಾ ದೇರಾಜೆ. said...

i dont know about affairs! but good effort malli !

ಮಲ್ಲಿಕಾರ್ಜುನ.ಡಿ.ಜಿ. said...

* ಶಿವು,ನನ್ನ ಉದ್ದೇಶ ಪ್ರೇಮಿಗಳ ದಿನದ ನೆಪದಲ್ಲಿ ಜೀವಜಗತ್ತಿನ ಹೋರಾಟದ ಬದುಕಿನಲ್ಲಿ ಒಂದು ಇಣುಕು ನೋಟ ಬೀರುವುದಾಗಿತ್ತು. ನೀವದನ್ನು ಗಮನಿಸಿದ್ದೀರಿ,ಥ್ಯಾಂಕ್ಸ್.
* ಸುಧನ್ವ ಅವರೆ ಧನ್ಯವಾದಗಳು.

Greeshma said...

ನಿಮ್ಮ patience ಮತ್ತು observation ಗೆ hats off!

ತೇಜಸ್ವಿನಿ ಹೆಗಡೆ said...

ಅದ್ಭುತ ಚಿತ್ರಗಳು. ಜೀವ ಲೋಕದಲ್ಲಿಯ ಈ ಅಪರೂಪದ ಚಿತ್ರಗಳನ್ನು ನಮಗೂ ಕಾಣಿಸಿದ್ದಕ್ಕೆ ಧನ್ಯವಾದಗಳು. ನೀವೇ ತೆಗೆದಿದ್ದಾ ಈ ಫೋಟೋಗಳನ್ನೆಲ್ಲಾ?! ತುಂಬಾ ಉತ್ತಮವಾಗಿವೆ.

ಮಲ್ಲಿಕಾರ್ಜುನ.ಡಿ.ಜಿ. said...

*ಗ್ರೀಷ್ಮ ಅವ್ರೆ, ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಖುಷಿಯಾಯ್ತು.ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು.
*ತೇಜಸ್ವಿನಿ ಹೆಗಡೆಯವರೆ, ನನ್ನ ಬ್ಲಾಗಿನಲ್ಲಿರುವ ಎಲ್ಲ ಚಿತ್ರಗಳನ್ನೂ ನಾನೇ ತೆಗೆದದ್ದು ಕಣ್ರೀ. ಆಗಾಗ ನನ್ನ ಬ್ಲಾಗಿಗೆ ಬಂದು ಉತ್ತೇಜಿಸುತ್ತಿರಿ.ಥ್ಯಾಂಕ್ಸ್.

Prabhuraj Moogi said...

ಸೂಪರ್!!! ಮಾತೇ ಬರುತ್ತಿಲ್ಲ ಒಂದೊಂದು ಚಿತ್ರವೂ ಇನ್ನೊಂದನ್ನು ಮೀರಿಸುವಂತಿದೆ, ಮೊದಲ ಚಿತ್ರದ ಬಗ್ಗೆ ಏನು ಬರೆದರೂ ಕಮ್ಮಿ... ಗುಬ್ಬಿ ನೊಡಿ ಎಷ್ಟೊ ದಿನಗಳಾಗಿತ್ತು, ಈ ಲೇಖನ ಹಾಗೂ ಚಿತ್ರಗಳ ಹಾಕಿದ್ದಕ್ಕೆ ತುಂಬಾ ಧನ್ಯವಾದಗಳು...

Unknown said...

ನಿಮ್ಮ ಫೋಟೋಗಳು, ಪರಿಕಲ್ಪನೆ ಎರಡೂ ಅದ್ಭುತವಾಗಿವೆ. ಅಭಿನಂದನೆಗಳು

ಚಿತ್ರಾ said...

ಸೂಪರ್ಬ್ ಫೋಟೊಗಳು !

ನಿಮ್ಮ ತಾಳ್ಮೆಗೆ -ಜಾಣ್ಮೆಗೆ ಅಭಿನಂದನೆಗಳು .ಜೊತೆಗೆ ನೀವು ಕೊಟ್ಟಿರುವ ಮಾಹಿತಿಗಳೂ ಸಹ ಕುತೂಹಲಕಾರಿಯಾಗಿವೆ.
ಧನ್ಯವಾದಗಳು.

ಚಿತ್ರಾ ಸಂತೋಷ್ said...

ಮಲ್ಲಿಯಣ್ಣ ಮೊದಲು ಸಕಾಲದಲ್ಲಿ ನಿಮ್ಮ ಬ್ಲಾಗ್ ನೋಡಲಾಗಲಿಲ್ಲ..ಕ್ಷಮೆಯಿರಲಿ. ನಾನು ರಜಾ ಹಾಕಿದ್ದೆ.
ನಿಮ್ಮ ಚಿತ್ರಗಳನ್ನು ನೋಡುತ್ತಿದ್ದಂತೆ 'ತೇಜಸ್ವಿ' ನೆನಪಾದರು. ಪ್ರೇಮಿಗಳ ದಿನದ ವಿಶೆಷವಾಗಿ ನಿಮ್ಮ ಪರಿಕಲ್ಪನೆ ತುಂಬಾ ಚೆನ್ನಾಗಿದೆ. ಫೋಟೋಗಳು ತುಂಬಾ ಚೆನ್ನಾಗಿವೆ..ಜೊತೆಗೆ ಇಂಥ ಒಳ್ಳೆ ಫೊಟೋಗಳನ್ನು ತೆಗೆಯಲು ನಿಮ್ಮಲ್ಲಿದ್ದ ಆಸಕ್ತಿ, ತಾಳ್ಮೆಗೆ ನನ್ನದೊಂದು ಸಲಾಂ.

-ಚಿತ್ರಾ

ಚಿತ್ರಾ ಸಂತೋಷ್ said...

ಮಲ್ಲಿಯಣ್ಣ ಮೊದಲು ಸಕಾಲದಲ್ಲಿ ನಿಮ್ಮ ಬ್ಲಾಗ್ ನೋಡಲಾಗಲಿಲ್ಲ..ಕ್ಷಮೆಯಿರಲಿ. ನಾನು ರಜಾ ಹಾಕಿದ್ದೆ.
ನಿಮ್ಮ ಚಿತ್ರಗಳನ್ನು ನೋಡುತ್ತಿದ್ದಂತೆ 'ತೇಜಸ್ವಿ' ನೆನಪಾದರು. ಪ್ರೇಮಿಗಳ ದಿನದ ವಿಶೆಷವಾಗಿ ನಿಮ್ಮ ಪರಿಕಲ್ಪನೆ ತುಂಬಾ ಚೆನ್ನಾಗಿದೆ. ಫೋಟೋಗಳು ತುಂಬಾ ಚೆನ್ನಾಗಿವೆ..ಜೊತೆಗೆ ಇಂಥ ಒಳ್ಳೆ ಫೊಟೋಗಳನ್ನು ತೆಗೆಯಲು ನಿಮ್ಮಲ್ಲಿದ್ದ ಆಸಕ್ತಿ, ತಾಳ್ಮೆಗೆ ನನ್ನದೊಂದು ಸಲಾಂ.

-ಚಿತ್ರಾ

Unknown said...

Dear Malli,

Hats off, your photography skill and the way you describe each picture is amazing. Being so far from hometown glad to see few pictures taken over there.

My hearty congratulations and wish your skill amazes many more people.

Mahesh.