ಚುಮುಚುಮು ಚಳಿಯ ಮುಂಜಾವಿನಲ್ಲಿ ವಾಕಿಂಗು ಹೊರಟಾಗ ದಟ್ಟ ಮಂಜು ಕವಿದಿತ್ತು. ವಾಹನಗಳು ದೀಪ ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿ. ಶಾಲು, ಸ್ವೆಟರ್, ಟೊಪ್ಪಿಗಳಿಂದ ಬಂಧಿತರಾಗದಿದ್ದರೆ ಚಳಿ ತರುವ ನಡುಕ ನಿಲ್ಲುವುದಿಲ್ಲ!
ದೂರದಲ್ಲಿ ಹೋಗುತ್ತಿರುವ ಎತ್ತಿನಗಾಡಿ ಮಂಜನ್ನು ಸಾಗಿಸುತ್ತಿರುವಂತೆ ಭಾಸವಾಗುತ್ತದೆ.ಬಿಳಲುಗಳನ್ನು ಚಾಚಿನಿಂತ ಆಲದಮರ ಮಂಜಿನ ಮರದಂತೆ ಕಾಣುವುದು ಒಂದು ದೃಶ್ಯಕಾವ್ಯ.
ಈ ಮಂಜನ್ನು ಭೂಮಟ್ಟದ ಮೋಡವೆನ್ನಬಹುದು. ಈ ಚಳಿಗಾಲದ ರಾತ್ರಿಗಳಲ್ಲಿ ಭೂಮಿಯ ಉಷ್ಣತೆಯನ್ನು ರಕ್ಷಿಸುವ ಮೋಡದ ಮುಸುಕು ಇರುವುದಿಲ್ಲ. ಆಗ ಭೂಮಿಯಿಂದ ಹೊರಬಿದ್ದ ಶಾಖ ವಾತಾವರಣದಲ್ಲಿ ಸೇರಿಹೋಗುತ್ತದೆ. ಭೂಮಿ ಬೇಗ ಬೇಗ ತಂಪುಗೊಂಡು ತನಗೆ ಹತ್ತಿರದ ಗಾಳಿಯನ್ನೂ ತಂಪುಮಾಡುತ್ತದೆ. ಮಂಜುಂಟಾಗುವುದು ಹೀಗೆ.
ಮಂಜಿನ ಮುಂಜಾವನ್ನು ಅನುಭವಿಸುತ್ತ ನಡೆಯುವುದೆಂದರೆ ಚಳಿಗೆ ಸೆಡ್ಡು ಹೊಡೆದಂತೆ ಅನ್ನಿಸುತ್ತದೆ. ಚಳಿಗೆ ಮುದುಡದೆ ಮಂಜಿನೊಂದಿಗೆ ಮೌನವಾಗಿ ಮಾತನಾಡುತ್ತ ಅದನ್ನು ಅನುಭವಿಸದಿದ್ದರೆ ಚೈತ್ರ ಮುನಿದೀತೇನೊ?
10 comments:
ಆ ಆಲದಮರದ ಚಿತ್ರ ಸೂಪರ್ರು!
ಮಲ್ಲಿಯಣ್ಣ ಫೋಟೊಗಳನ್ನು ನೋಡುತ್ತಿದ್ದಂತೆ ಶ್ಬೆಟರ್ ಹೊದ್ದುಕೊಂಡೆ ನಾನು. ನಮ್ ಲಾಲ್ ಬಾಗ್ ನಲ್ಲೂ ಬೆಳ್ಳಂಬೆಳಿಗ್ಗೆ ಈ ರೀತಿಯ ದೃಶ್ಯಗಳು ಕಾಣಸಿಗುತ್ತವೆ. ಸಾಧ್ಯವಾದ್ರೆ ಬಂದು ತೆಗೆಯಿರಿ
-ಚಿತ್ರಾ
ಕಮಾನು ಕಟ್ಟಿದ ಆಲದ ಮರದ ಚಿತ್ರ ಅತಿರಮ್ಯವಾಗಿದೆ.ಒಳ್ಳೆಯ ನುಡಿಚಿತ್ರ.
ಧನ್ಯವಾದಗಳು.
ಅಶೋಕ ಉಚ್ಚಂಗಿ
http://mysoremallige01.blogspot.com/
ಆಲದ ಮರದ ಚಿತ್ರ ತುಂಬ ಚೆನ್ನಾಗಿದೆ. ಅದರಂತೆ, ಮತ್ತೊಂದು ಮರದ ಕೆಳಗಡೆಯಿಂದ, ಲುಂಗಿ ಹಾಗೂ ಕೆಂಪು ಅಂಗಿ ಧರಿಸಿದ ವ್ಯಕ್ತಿ ಹೋಗುತ್ತಿರುವದು, black & white ನಡುವೆ ಬರುವ red colorದಿಂದಾಗಿ
ಆಕರ್ಷಕವಾಗಿದೆ.
ಮಲ್ಲಿಕಾರ್ಜುನ್...
ನಿಮ್ಮ ಛಾಯಾಚಿತ್ರಗಳು...
ಸುಂದರ ಕಾವ್ಯದ ಹಾಗೆ....
ದ್ರಶ್ಯ .. ಕಾವ್ಯದ..
ನಿಮ್ಮ ನಿರೂಪಣೆ....
ಅದಕ್ಕೆ ಮತ್ತಷ್ಟು ಮೆರಗು ಕೊಡುತ್ತವೆ...
ಮುಂಜಾವಿನ ಇಬ್ಬನಿಯಲ್ಲಿ...
ವಾಕಿಂಗ್ ಮಾಡಿಸಿದ್ದೀರಿ...
ಧನ್ಯವಾದಗಳು...
ಸುಶ್ರುತ ಅವರೆ ಧನ್ಯವಾದಗಳು.
* * *
ಚಿತ್ರಾ ಅವರಿಗೂ ಥ್ಯಾಂಕ್ಸ್. ಲಾಲ್ ಬಾಗ್ ಚಿತ್ರ ತೆಗೆಯಲು ನಾನು ಹಿಂದಿನ ದಿನವೇ ನಾನು ಶಿವು ಮನೇಲಿ ಉಳಿಯಬೇಕಾಗುತ್ತೆ.ಏಕೆಂದರೆ ನಮ್ಮೂರು ಬೆಂಗಳೂರಿನಿಂದ ೬೫ ಕಿ.ಮೀ. ದೂರ.
* * *
ಅಶೋಕ್ ಅವರೆ, ಥ್ಯಾಂಕ್ಸ್.
* * *
ಸುನಾತ್ ಸರ್, ಇವೆಲ್ಲಾ ನಮ್ಮನೆಗೆ ತುಂಬಾ ಹತ್ತಿರದ ದೃಶ್ಯಾವಳಿಗಳು.ಕೆಲವೇ ಹೆಜ್ಜೆಗಳ ದೂರವಷ್ಟೆ. ಅದೃಷ್ಟವಂತರಲ್ಲವೇ?
ಮಲ್ಲಿಕಾರ್ಜುನ್,
ಮಂಜಿನ ಮುಂಜಾವಿನ ಫೋಟೊಗಳು ತುಂಬಾ ಚೆನ್ನಾಗಿವೆ...ನಿಮ್ಮೂರಿನಲ್ಲಿ ಇನ್ನು ಇಂಥ ವಿಶೇಷಗಳು ಸಿಗಬಹುದು ಪ್ರಯತ್ನಿಸಿ....
ಮಲ್ಲಿಕಾರ್ಜುನ್,
ಮಂಜಿನ ಫೋಟೋಗಳು ಚೆನ್ನಾಗಿ ಬಂದಿವೆ, ಧನ್ಯವಾದ
--
ಪಾಲ
ಒಂದಕ್ಕಿಂತ ಒಂದು ರಮಣೀಯವಾದ ಚಿತ್ರಗಳು.....hats off sir..................
ಮಂಜು ಮುಸುಕಿದ ಹಾದಿ...ವಾವ್, ನಿಜಕ್ಕೂ ಸುಂದರ ಚಿತ್ರಗಳು, ಮಲ್ಲಿಕಾರ್ಜುನ್ ಅವರೆ. ನೋಡುತ್ತಿದ್ದರೆ ಚಳಿ ಶುರುವಾಗುತ್ತದೆ ;-)
Post a Comment