Tuesday, January 13, 2009

ಮುತ್ತಿನ ಮಣಿಗಳು

ಮುತ್ತು ಅಷ್ಟು ಸುಲಭದ ತುತ್ತಲ್ಲ! ಇದರ ಸೃಷ್ಟಿಯಾಗುವುದೇ ಬಲು ವಿಶಿಷ್ಟವಾಗಿ. ನೀರಿನಲ್ಲಿರುವ ಕಪ್ಪೆಚಿಪ್ಪಿನೊಳಗೆ ಕೆಲವೊಮ್ಮೆ ಯಾವುದಾದರೂ ಪರೋಪಜೀವಿ ಅಥವಾ ಇನ್ನೇನಾದರೂ ಮರಳಿನಂಥ ಹೊರ ಪದಾರ್ಥ ಸೇರಿಕೊಂಡುಬಿಡುತ್ತದೆ. ಅದರ ಮೇಲೆ ಆ ಚಿಪ್ಪಿನ ಜೀವಿ ಸ್ರವಿಸುವ ಸುಣ್ಣವೇ ಕಾಲಕ್ರಮದಲ್ಲಿ ಮುತ್ತಾಗುತ್ತದೆ.
ಚಳಿಗಾಲದಲ್ಲಿ ಮುತ್ತಿನ ಹಾರ ಸೃಷ್ಟಿಯಾಗುವುದು ಇನ್ನೊಂದು ವೈಶಿಷ್ಟ್ಯ. ಆದರೆ ಇದು ನೀರ ಹನಿಯ ಮುತ್ತು. ಜೇಡರ ಬಲೆ ಇಬ್ಬನಿಯಲ್ಲಿ ಮಿಂದು ಮುತ್ತಿನ ಪದಕವಾಗುತ್ತದೆ.
ಒಣಹವೆಯ ರಾತ್ರಿಗಳಲ್ಲಿ ಮಣ್ಣು, ಬಂಡೆಗಳು ತಂಪುಗೊಳ್ಳಲಾರಂಭಿಸಿದಾಗ ನೆಲದ ಅತಿ ಸಮೀಪದ ಗಾಳಿಯೂ ತಂಪಾಗುತ್ತದೆ. ಅದರಲ್ಲಿನ ನೀರಾವಿ ತಣ್ಣನೆಯ ನೆಲ ಬಂಡೆಗಳ ಸಂಪರ್ಕ ಹೊಂದಿ ಸಾಂದ್ರೀಕರಿಸಿ ಸಸ್ಯಗಳ, ಜೇಡರಬಲೆಯ ಮೇಲೆ ಸೂಕ್ಷ್ಮ ಹನಿಗಳಂತೆ ಕೂರುತ್ತದೆ. ನೀರಾವಿ ಹೀಗೆ ಹನಿಗಳಾಗುವ ಉಷ್ಣತೆಗೆ ತುಷಾರಬಿಂದು(ಡಿವ್ ಪಾಯಿಂಟ್) ಎಂದು ಹೆಸರು.
ಮುತ್ತಿನ ಸೇತುವೆ...

9 comments:

Ashok Uchangi said...

ಮುತ್ತಿನ ಮಣಿಗಳೂ ಸಕತ್ತು
ನಿಮ್ಮ ನುಡಿಯೂ ಮುತ್ತು!
ಅಶೋಕ ಉಚ್ಚಂಗಿ
http://mysoremallige01.blogspot.com/

ಏ ಜೆ ಜಾವೀದ್ said...

ವಾವ್!!!!
ಪ್ರಕೃತಿಯ ರಮಣೀಯ ಸೃಷ್ಟಿಯನ್ನು ಅಷ್ಟೇ ರಮಣೀಯವಾಗಿ ಸೆರೆ ಹಿಡಿದಿದ್ದೀರಿ. ನುಡಿ ಮುತ್ತುಗಳು ಚೆನ್ನಾಗಿವೆ. ಇದು ಸಂಕ್ರಾಂತಿ ಸ್ಪೆಶಲ್ ಅನ್ನಬಹುದೇನೊ?
ಸಂಕ್ರಾಂತಿ ಹಬ್ಬದ ಶುಭಾಶಯಗಳು.

Rajesh Manjunath - ರಾಜೇಶ್ ಮಂಜುನಾಥ್ said...

ಮಲ್ಲಿಕಾರ್ಜುನ್ ಸರ್,
ನಿಮ್ಮ ಈ ಫೋಟೋಗಳು ಒಂದು ಕ್ಷಣ ಮೈಜುಮ್ಮೆನ್ನುವಂತೆ ಮಾಡುತ್ತವೆ. ನಿಜಕ್ಕೂ ಮನಮೋಹಕ ಚಿತ್ರಗಳು.
-ರಾಜೇಶ್ ಮಂಜುನಾಥ್

ಭಾರ್ಗವಿ said...

ಜೇಡರ ಬಲೆ ಮೇಲೆ ತುಷಾರಬಿಂದು ಹಾಗೂ ನೀವು ನೀಡಿರುವ ವಿವರಣೆ ಎರಡು ಅದ್ಭುತ. ಜೇಡದ ಸಮೇತ ತೆಗೆದ ಮತ್ತು ಅದರ ಕೆಳಗಿನ ಫೋಟೋ ತುಂಬಾ ಇಷ್ಟವಾದವು.
ಸಂಕ್ರಾಂತಿಯ ಶುಭಾಷಯಗಳು.

shivu.k said...

ಮಲ್ಲಿಕಾರ್ಜುನ್,

ಇವು ನಿಜಕ್ಕೂ ಉತ್ತಮ ಮುತ್ತು ಮಣಿಗಳೇ.....ಶೋರೂಂನಲ್ಲಿರುವ ಮುತ್ತುಮಣಿಗಳಿಗಿಂತ ಇಂತ ಸುಂದರ ಪ್ರಕೃತಿದತ್ತವಾದ ಇವುಗಳೇ ನಮಗೆ ಮತ್ತು ನಮ್ಮ ಕ್ಯಾಮೆರಾ ಕಣ್ಣಿಗೆ ಅಪ್ಯಾಯಮಾನ.....
ಇವುಗಳ ಸೃಷ್ಠಿಯ ಬಗ್ಗೆ ಉಪಯುಕ್ತ ಮಾಹಿತಿಕೊಟ್ಟಿದ್ದೀರಿ... ಹೀಗೆ ಮುಂದುವರಿಸಿ......

ಚಿತ್ರಾ ಸಂತೋಷ್ said...

ಮುತ್ತಿನ ಮಣಿಗಳನ್ನೇ ನಾಚಿಸುವ ಸುಂದರ ಚಿತ್ರಗಳು...ಮನತಣಿಸುತ್ತವೆ. ಯಾಕೋ ನಿಮ್ ಫೋಟೋಗಳನ್ನು ನೋಡಿದರೆ ಹೇಳೋದನ್ನೆಲ್ಲ ಮರೆತು..ಬರೇ ನೋಡೋದ್ರಲ್ಲೇ ಕಾಲ ಕಳೆದುಹೋಗುತ್ತಣ್ಣ.
-ಚಿತ್ರಾ

PaLa said...

ಮಲ್ಲಿಕಾರ್ಜುನ್,
ಉಪಯುಕ್ತ ಮಾಹಿತಿ, ಸುಂದರ ಚಿತ್ರಗಳೊಂದಿಗೆ ಹಂಚಿಕೊಂಡಿದ್ದಕ್ಕೆ ವಂದನೆಗಳು
--
ಪಾಲ

Vinay Prasad said...

Hello Sir,

Your Blog and your views are fine. I am new to Blog. I will be happy to be in touch with you.

Thanks and Regards,
Vinay
brisk.vinay@gmail.com

Unknown said...

ಅಧ್ಭತವಾದ ಚಿತ್ರಗಳು...........