Monday, January 26, 2009

ದ್ವಾರಪಾಲಕನ ಹೊಟ್ಟೆಯಲ್ಲಿ ಬಸವ!

ಛಂದ ಪುಸ್ತಕ ಪ್ರಕಟಿಸಿರುವ ಡಾ.ಕ್.ಎನ್.ಗಣೇಶಯ್ಯ ಅವರ ಕಥಾಸಂಕಲನ "ಶಾಲಭಂಜಿಕೆ" ಯಲ್ಲಿ ಒಂದು ಕತೆಯಿದೆ. ಅದು "ಎದೆಯಾಳದಿಂದೆದ್ದ ಗೋವು".
ಸೋಮನಾಥಪುರದ ಚನ್ನಕೇಶವ ದೇವಾಲಯದಲ್ಲಿನ ಉತ್ತರಕ್ಕಿರುವ ಗರ್ಭಗುಡಿಯ ಒಳಗಿನ ಕೃಷ್ಣನ ಮೂರ್ತಿಯ ಹೊಟ್ಟೆಯಲ್ಲಿ ಬಸವನ ಮುಖ ಎದ್ದು ಕಾಣುತ್ತದೆ. ವಿಕಾಸವಾದದ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಈ ಶಿಲ್ಪವನ್ನು ಉದಾಹರಿಸುತ್ತಿದ್ದ ಲೇಖಕರಿಗೆ ಅದನ್ನು ಕೆತ್ತಿದ ಶಿಲ್ಪಿಯ ಮೂಲ ತಿಳಿದುಬರುತ್ತದೆ. ಗೊಲ್ಲರವನಾದ ಶಿಲ್ಪಿ ತನ್ನ ಮೂಲವಂಶದ ಕಸುಬಿನ ಗುರುತಾದ ಗೋವನ್ನು ಕೃಷ್ಣನ ಎದೆಯಲ್ಲಿ ಅಡಗಿಸಿಟ್ಟಿರುವನು. 'ಆ ಶಿಲ್ಪ ನೋಡಿ ದೇವಾಲಯದ ಯಾವುದೇ ಗಂಡಸಿನ ಮೂರ್ತಿ ಮುಂದೆ ನಿಂತರೂ ಅವುಗಳ ಹೊಟ್ಟೆ ಮತ್ತು ಎದೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬಸವನ ಮುಖ ಕಾಣಲು ಪ್ರಾರಂಭವಾಗುತ್ತದೆ' ಎಂದು ಹೇಳಿ ಲೇಖಕರು ನಮಗೆ ಯೋಚಿಸಲು ಹಚ್ಚುತ್ತಾರೆ.
ಗಣೇಶಯ್ಯನವರ ಕಥೆ ಓದಿ ನನ್ನ ಸಂಗ್ರಹದಲ್ಲಿದ್ದ ಹಳೆಯ ಚಿತ್ರವೊಂದನ್ನು ತೆಗೆದೆ. ಅದು ತಲಕಾಡಿನ ದೇವಾಲಯದ ದ್ವಾರಪಾಲಕನ ಚಿತ್ರ. ಅದರಲ್ಲೂ ಬಸವ ಹೊಟ್ಟೆಯಲ್ಲಿ ಪಡಿಮೂಡಿದ್ದಾನೆ. ಅದರ ಬಗ್ಗೆ ಯಾರಿಗಾದರೂ ತಿಳಿದರೆ, ತಿಳಿದಿದ್ದರೆ ದಯವಿಟ್ಟು ತಿಳಿಸಿ.

10 comments:

Ittigecement said...

ಮಲ್ಲಿಕಾರ್ಜುನ್..

ಲೇಖನ ಹಾಗೂ ಫೋಟೊ ಕುತೂಹಲಕಾರವಾಗಿದೆ...

ಇನ್ನೂ ಬರೆಯಿರಿ..

ನಿಮ್ಮ ಹುಡುಕಾಟ ಚೆನ್ನಾಗಿರುತ್ತದೆ...

ಧನ್ಯವಾದಗಳು..

PaLa said...

ಮಲ್ಲಿಕಾರ್ಜುನ್,

ನೀವು ಹೇಳಿದ ಮೇಲೆ ಗೊತ್ತಾಗಿದ್ದು ಈ ವಿಷ್ಯ.. ಕುತೂಹಲಕಾರಿಯಾಗಿದೆ, ಬರಹಕ್ಕೆ ಮತ್ತು ಚಿತ್ರಕ್ಕೆ ಧನ್ಯವಾದ

--
ಪಾಲ

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್ ಮತ್ತು ಪಾಲಚಂದ್ರ,
ಧನ್ಯವಾದಗಳು.

ಶಾಂತಲಾ ಭಂಡಿ (ಸನ್ನಿಧಿ) said...

ಮಲ್ಲಿಕಾರ್ಜುನ ಅವರೆ...
‘ಶಾಲಭಂಜಿಕೆ’ಯ ಬಗ್ಗೆ ಹೇಳುತ್ತ ಆ ಪುಸ್ತಕದ ಬಗೆಗೆ ಕುತೂಹಲ ಕೆರಳಿಸಿದ್ದೀರಿ. ಇಲ್ಲೆಲ್ಲಿಯಾದರೂ ಸಿಕ್ಕಲ್ಲಿ ಖಂಡಿತ ಓದುತ್ತೇನೆ.
ಅಂತೆಯೇ ಚೆಂದದ ಐತಿಹಾಸಿಕ ಚಿತ್ರವೊಂದನ್ನು ಕೊಟ್ಟಿದ್ದೀರಿ. ಧನ್ಯವಾದಗಳು.

sunaath said...

ಸ್ವಾರಸ್ಯಕರ ಮಾಹಿತಿ ಹಾಗೂ ಚಿತ್ರ ಕೊಟ್ಟಿದ್ದೀರಿ. ಧನ್ಯವಾದಗಳು.

shivu.k said...

ಮಲ್ಲಿಕಾರ್ಜುನ್,

ನಿಮ್ಮ ಲೇಖನ ಮತ್ತು ಫೋಟೊದಿಂದಾಗಿ ನಾನು ಕೆ. ಗಣೇಶಯ್ಯ ನವರ ಪುಸ್ತಕ ಓದುವ ಕುತೂಹಲ ಹೆಚ್ಚಾಗಿದೆ....

ಚಿತ್ರಾ ಸಂತೋಷ್ said...

ಮಲ್ಲಿಯಣ್ಣ...ಒಳ್ಳೆ ಮಾಹಿತಿ.
ಏನು ಅಣ್ಣಾವ್ರ ಡಿಫರೆಂಟಾಗಿ ಬರೆಯಾಕೆ ಹೊರಟಂಗಿದೆ..ಗುಡ್ ಗುಡ್!.
-ಚಿತ್ರಾ

ಮಲ್ಲಿಕಾರ್ಜುನ.ಡಿ.ಜಿ. said...

ಡಾ.ಗಣೇಶಯ್ಯನವರ ಪ್ರತಿಕ್ರಿಯೆ:
Yes I have seen this. This is actually in the Vaidhyanatheswara temple at talakadu and the details if this temple appears in my story Marala teregalolage. Also to the right of this same statue, in the corner there is a rat whose tail looks like a lizard and the body like a dog (i guess or as rabbit). Though I donot know why this bull face is in the dwarapaalaka, I guess some of these were the exhibition of skills of the sculptures.
Regards
ganeshaiah

ಅಪ್ಪಾರಾವ said...

ಆತ್ಮೀಯ ಎಮ್.ಡಿ.ಜಿ,
ಬೆರಗಾದೆ. ನಿಬ್ಬೆರಗಾದೆ. ಫೋಟೊ ಸಂಗ್ರಹ ಅದ್ಭುತ.
ಅಪ್ಪಾರಾವ್ ಸೌದಿ. ಬೀದರ್

Indudhara said...

ಹಲೋ ಸರ್.. ನಾನು ಸಹ ಗಣೇಶಯ್ಯನವರ ಓದುಗ. ಈ ಕಥೆ ಓದಿದ್ದೇನೆ. ಬಹಳ ಚೆನ್ನಾಗಿದೆ .. ಅವರ ಇತರೆ ಕಾದಂಬರಿ ಹಾಗೂ ಕಥಾ ಸಂಕಲನಗಳು ಇನ್ನೂ ಚೆನ್ನಾಗಿದ್ದಾವೆ. ಅವುಗಳ ಬಗ್ಗೆಯೂ ಬರೆಯಿರಿ