Saturday, January 22, 2011

ಅರೆಕ್ಷಣದ ಅದೃಷ್ಟ

ಆತ್ಮೀಯ ಬ್ಲಾಗ್ ಸ್ನೇಹಿತರಿಗೆ ನನ್ನ ನಮಸ್ಕಾರಗಳು.
ನವಕರ್ನಾಟಕ ಪ್ರಕಾಶನ ಸಂಸ್ಥೆಯವರು ಪ್ರಕಟಿಸುತ್ತಿರುವ ನನ್ನ ಪುಸ್ತಕ "ಅರೆಕ್ಷಣದ ಅದೃಷ್ಟ" ಭಾನುವಾರ ದಿನಾಂಕ ೨೩-೦೧-೨೦೧೧ ರಂದು ಬೆಳಿಗ್ಗೆ ೧೦ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ.ಪತ್ರಕರ್ತರು ಹಾಗೂ ಪರಿಸರವಾದಿಗಳೂ ಆದ ನಾಗೇಶ್ ಹೆಗಡೆ ಅವರು ಈ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್.ಜಿ.ಸಿದ್ದರಾಮಯ್ಯ, ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾದ ಆರ್.ಎಸ್.ರಾಜಾರಾಮ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಯಮಾಡಿ ಬನ್ನಿ. ಶುಭ ಹಾರೈಸಿ.



ಉದ್ದನೆಯ ಹುಳು ನಿಧಾನವಾಗಿ ಪಾತರಗಿತ್ತಿಯ ರೂಪ ಆಗುವುದಾದರೂ ಹೇಗೆ? ಗೂಡಿನಲ್ಲಿ ಬೆಚ್ಚಗಿರುವ ಪುಟಾಣಿ ಹಕ್ಕಿಗಳಿಗೆ ಕಾಳುಗಳನ್ನು ತಂದುಕೊಡಲು ಹಕ್ಕಿಗಳು ಪಡುವ ಪ್ರಯಾಸವೇನು? ಕೀಟಗಳು ಕಡ್ಡಿಯ ಮೇಲೆ ಸರ್ಕಸ್ ಮಾಡುತ್ತ ಮುಂದೆ ಸಾಗುತ್ತಿದ್ದರೆ, ಅದರ ಮೇಲೆ ನಿಗಾ ಇಡುವ ಹಕ್ಕಿ ಮುಂದಿನ ತಂತ್ರವೇನು?....ಇನ್ನೂ ಮುಂತಾದ ಪ್ರಶ್ನೆಗಳಿಗೆ ಚಿತ್ರಗಳೊಂದಿಗೆ ಉತ್ತರಿಸಲು ಪ್ರಯತ್ನಿಸಿದ್ದೇನೆ. ದಯವಿಟ್ಟು ಓದಿ. ಮಕ್ಕಳಿಗೂ ಕೊಡಿ. ನಿಮ್ಮ ಅನಿಸಿಕೆಯನ್ನು ತಿಳಿಸಿ.




ನಿಮ್ಮೆಲ್ಲರ ಹಾರೈಕೆಗಳನ್ನು ಆಶಿಸುವ,
ಇಂತಿ,
ಮಲ್ಲಿಕಾರ್ಜುನ.ಡಿ.ಜಿ.ಶಿಡ್ಲಘಟ್ಟ

8 comments:

ನಾಗರಾಜ್ .ಕೆ (NRK) said...

Present sir . . . my best wishes for "Arekshanada Adrushta"

ದೀಪಸ್ಮಿತಾ said...

ಅಭಿನಂದನೆಗಳು ಸರ್

Gubbachchi Sathish said...

ಶುಭಕಾಮನೆಗಳು ಸರ್.
ಬರಲು ಆಗುತ್ತಿಲ್ಲ. ನಾನು ಇಲ್ಲಿಯೇ ಪುಸ್ತಕ ಕೊಳ್ಳುತ್ತೇನೆ ಅಥವಾ ಅಜಿತ್‍ಗೆ ಹೇಳಿ ಕಾದಿರಿಸುತ್ತೇನೆ.

ಬಿಸಿಲ ಹನಿ said...

Congrats and wish you all the success!

sunaath said...

ಮಲ್ಲಿಕಾರ್ಜುನರೆ,
ತುಂಬ ಸಂತೋಷವಾಗುತ್ತಿದೆ. ನಿಮ್ಮ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಯಶಸ್ಸನ್ನು ಹಾರೈಸುತ್ತೇನೆ. ನಿಮ್ಮಿಂದ ಇಂತಹ ಇನ್ನಿಷ್ಟು ಕೃತಿಗಳು ಹೊರಬರಲಿ.

ದಿನಕರ ಮೊಗೇರ said...

abhinandane sir..
nanage pustaka beku....

haNa kaLisabekaada address tiLisi...

nanna mail id..dinakar.moger@gmail.com

AntharangadaMaathugalu said...

ಅಭಿನಂದನೆಗಳು ಮಲ್ಲಿಕಾರ್ಜುನ್ ಅವರಿಗೆ..

ಶ್ಯಾಮಲ

ಸಾಗರದಾಚೆಯ ಇಂಚರ said...

Congrats sir
nanagoo ondu copy beku