ಅಮಾನಿಕೆರೆ ಅಥವಾ ಅಮ್ಮನಕೆರೆ ಮತ್ತು ಗೌಡನಕೆರೆ ಶಿಡ್ಲಘಟ್ಟ ಪಟ್ಟಣದ ಎರಡು ಕಣ್ಣುಗಳಿದ್ದಂತಿವೆ. ಬೇಸಿಗೆಯಲ್ಲಿ ಅವು ಬತ್ತುವವರೆಗೂ ಊರಿನ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದು. ಹದಿನಾರನೇ ಶತಮಾನದಲ್ಲಿ ಕೆಂಪೇಗೌಡನ ಪತ್ನಿ ಹಲಸೂರಮ್ಮ ಈ ಊರನ್ನು ಕಟ್ಟಿದಾಗ ನೈರುತ್ಯ ದಿಕ್ಕಿನಲ್ಲಿ ಅಮ್ಮನಕೆರೆಯನ್ನು ಆಕೆಯ ಮಗ ಶಿವನೇಗೌಡನು ಆಗ್ನೇಯ ದಿಕ್ಕಿನಲ್ಲಿ ಗೌಡನ ಕೆರೆಯನ್ನು ಕಟ್ಟಿಸಿದ್ದರು. ಅವರ ದೂರದರ್ಶಿತ್ವದಿಂದಾಗಿ ಈಗಲೂ ಜನರು ನೆಮ್ಮದಿಯನ್ನು ಕಾಣುವಂತಾಗಿದೆ.
ಮಳೆಗಾಲ ಮುಗಿದು ಬೇಸಿಗೆ ಬರುವವರೆಗೂ ಈ ಕೆರೆಗಳಿಗೆ ಅನೇಕ ಹಕ್ಕಿಗಳು ವಲಸೆ ಬರುತ್ತವೆ. ನಮ್ಮಲ್ಲಿ ಮೊಟ್ಟೆಯಿಟ್ಟು ಮರಿಮಾಡದ ಹಕ್ಕಿಗಳನ್ನು ಈ ಪ್ರದೇಶಕ್ಕೆ ವಲಸೆ ಹಕ್ಕಿ ಎಂದೇ ಪರಿಗಣಿಸಬೇಕಾಗುತ್ತದೆ. ಈ ಬಾರಿ ಸೈಬೀರಿಯಾ ಅಲಾಸ್ಕಾ ಕಡೆಯಿಂದೆಲ್ಲ ಹಕ್ಕಿಗಳು ಬಂದದ್ದು ವಿಶೇಷವಾಗಿತ್ತು.
ಪೇಯಿಂಟೆಡ್ ಸ್ಟೋರ್ಕ್, ಗ್ರೇ ಪ್ಲೋವರ್, ಗ್ರೇ ಪೆಲಿಕನ್, ರಿವರ್ ಟರ್ನ್, ಕೂಟ್, ಬ್ಲಾಕ್ ವಿಂಗ್ಡ್ ಸ್ಟಿಲ್ಟ್, ಕಾರ್ಮೋರೆಂಟ್ ಮತ್ತು ವಿವಿಧ ಬಾತುಗಳು ಕಾಣಸಿಗುತ್ತವೆ. ಬೆಳಿಗ್ಗೆ ಮತ್ತು ಸಂಜೆ ಇವುಗಳ ಸಂದಣಿ ಹೆಚ್ಚು. ಕೆಂಬಣ್ಣದ ಸೂರ್ಯನ ಹೊಂಬಣ್ಣದ ಬೆಳಕಿನಲ್ಲಿ ಇವುಗಳ ವೀಕ್ಷಣೆ ಎಂತಹ ಕಠಿಣ ಹೃದಯದವರನ್ನೂ ಕವಿಯನ್ನಾಗಿಸುತ್ತದೆ.
ರೈಲ್ವೆ ಕಾಮಗಾರಿಗಾಗಿ ಕೆರೆಯಿಂದ ಮಣ್ಣನ್ನು ತೆಗೆದದ್ದು ಮತ್ತು ಕಳೆದ ಮಳೆಗಾಲದಲ್ಲಿ ಸ್ವಲ್ಪ ಹೆಚ್ಚಾಗಿಯೇ ಬಿದ್ದ ಮಳೆಯಿಂದಾಗಿ ಕೆರೆಯಲ್ಲಿ ಇನ್ನೂ ಸಾಕಷ್ಟು ನೀರಿದೆ. ಹಾಗಾಗಿ ಕಳೆದ ಕೆಲವು ವರ್ಷಗಳಿಂದ ಕಾಣಿಸದಿದ್ದ ಅಪರೂಪದ ವಲಸಿಗ ಹಕ್ಕಿಗಳನ್ನು ಈ ಬಾರಿ ಎರಡೂ ಕೆರೆಗಳಲ್ಲಿ ಕಾಣುವಂತಾಗಿದೆ.
ಬೇಸಿಗೆ ಬಂದು ಕೆರೆ ಬತ್ತುವಷ್ಟರಲ್ಲಿ ಈ ಹಕ್ಕಿಗಳು ಚೆನ್ನಾಗಿ ಆಹಾರ ಸೇವನೆ ಮಾಡಿ ಶಕ್ತಿ ವರ್ಧಿಸಿಕೊಂಡು ತಮ್ಮ ತಮ್ಮ ಸ್ವಸ್ಥಾನ ಸೇರಲು ಹೊರಡುತ್ತವೆ. ಕೆಲವು ಸಾವಿರಾರು ಕಿಮೀ ದೂರ ಕ್ರಮಿಸಿದರೆ ಇನ್ನು ಕೆಲವು ನೂರಾರು ಕಿಮೀ ಕ್ರಮಿಸುತ್ತವೆ. ಅಲ್ಲಿ ಮೊಟ್ಟೆಯಿಟ್ಟು ಮರಿ ಮಾಡುತ್ತವೆ. ಪುನಃ ಮುಂದಿನ ವರ್ಷ ನಮ್ಮತ್ತ ಹೊರಡುತ್ತವೆ. ಅವು ಹೊರಟುಬಿಡುವ ಮುನ್ನವೇ ಒಮ್ಮೆ ನೋಡಿ ಬನ್ನಿ...
ರೆಕ್ಕೆ ಬಡಿಯುತ್ತಿರುವ ಗ್ರೇ ಪೆಲಿಕನ್ ಹಕ್ಕಿ
This is merely a show put on by puppets!
8 hours ago
15 comments:
wow ಉತ್ತಮ ಫೋಟೋಗಳು ಹಾಗೆ ಅದಕ್ಕೆ ತಕ್ಕುದಾದ ಒಳ್ಳೆಯ ಮಾಹಿತಿ,,, ತುಂಬ ಚೆನ್ನಾಗಿ ಇದೆ....
ಗುರು
ಸುಂದರ ಫೋಟೋಗಳು. ಹಕ್ಕಿಗಳು, ಮೀನುಗಳು ಕೆರೆಗಳ ಆರೋಗ್ಯಸೂಚಕ
ಹುಡುಕಾಟದ ಮಲ್ಲಿಕಾರ್ಜುನ್ ...
ಎಷ್ಟು ಸುಂದರ ಹಕ್ಕಿಗಳು !!
ಎಲ್ಲರ ಊರಲ್ಲೂ ಇವು ಇರುತ್ತವೆ...
ನೋಡುವ ಕಣ್ಣುಗಳಿರ ಬೇಕು ಅಷ್ಟೆ...!
ನಿಮ್ಮ ಹುಡುಕಾಟಕ್ಕೆ ಹೃದಯ ಪೂರ್ವಕ ಅಭಿನಂದನೆಗಳು.....
(ಆಶೀಷ್‍ಗೆ ನಿಮ್ಮ ಊರನ್ನು ನೋಡ ಬೇಕಂತೆ ...)
ತುಂಬಾ ಚೆನ್ನಾಗಿದೆ ಹಕ್ಕಿಗಳ ನೋಟ ಸರ್
ನಿಜಾ ಇಟ್ಟಿಗೆ ಸಿಮೆಂಟು ಪ್ರಕಾಶಣ್ಣ ಹೇಳಿದ ಹಾಗೆ
ನಿಮ್ಮ ಹುಡುಕಾಟಕ್ಕೆ ಹೃದಯ ಪೂರ್ವಕ ಅಭಿನಂದನೆಗಳು...
ಮಾಹಿತಿ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್ ಸರ್
ಎಂದಿನಂತೆ ಚೆಂದದ ಫೋಟೋಗಳು :)
ಒಂದಕ್ಕಿಂತ ಒಂದು ಚೆಂದದ ಚಿತ್ರಗಳು. ಇವೆಲ್ಲವನ್ನು ನೋಡಿ ಮನಸ್ಸಿಗೆ ಉಲ್ಲಾಸವಾಯಿತು. ಧನ್ಯವಾದಗಳು.
ಸರ್
ಎಂಥಹ ಮನಮೋಹಕ ಫೋಟೋಗಳು
ತುಂಬಾ ನೋಡಲು ಮನಸ್ಸು ಆಗುತ್ತಿದೆ
very good post, keep writings.
Very informative
Thanks
Joseph
http://www.ezdrivingtest.com (Free driving written test questions for all 50 states - ***FREE***)
ಅತ್ಯಾಕರ್ಷಕ ನಯನ ಮನೋಹರ ಛಾಯಾಚಿತ್ರಗಳು ಮಲ್ಲಿಯವರೇ. ವಿವಿಧ ಬಗೆಗಳ ವಲಸೆ ಹಕ್ಕಿಗಳ ಪರಿಚಯ, ಬೆ೦ಗಳೂರಿನ ಕೆರೆಗಳ ಬಗ್ಗೆ ಮಾಹಿತಿ, ಚಿತ್ರಗಳು -ಓದುಗರಿಗೆ ಉಪಯುಕ್ತ ಮಾಹಿತಿ ಹಾಗೂ ಸ೦ತಸ. ಧನ್ಯವಾದಗಳು. ಪಾ೦ಒಡ ಹೆರಾನ ಪ್ರತಿಬಿ೦ಬ ಚಿತ್ರ ತು೦ಬಾ ಇಷ್ಟವಾಯಿತು.
ಮಲ್ಲಿಕಾರ್ಜುನ್ ಫೋಟೋಲೇಖನ ಅದ್ಭುತವಾಗಿದೆ. ಅಮಾನಿಕೆರೆ ಅಥವಾ ಅಮ್ಮನಕೆರೆ ಎಂದು ಪ್ರಾರಂಬದಲ್ಲಿ ಹೇಳಿದ್ದೀರಿ. ಅದು ಅಮಾನಿಕೆರೆ ಎಂಬುದೇ ಸರಿ. ಅಮಾನಿ ಕೆರೆ ಎಂದರೆ ಸರ್ಕಾರದ ನೇರ ನಿರ್ವಹಣೆಗೆ ಒಳಪಟ್ಟ ಕೆರೆ ಎಂದರ್ಥ. ರಾಜರು ಪಾಳೇಗಾರರು ಆಗಿಹೋದ ಮೇಲೂ ಆ ಹೆಸರು ಹಾಗೇ ಉಳಿದುಕೊಂಡು ಬಂದಿದೆ.
sir i have started blogging and posted some of my photos. i request to visit my blog and comment on it
http://maatu-muttu.blogspot.com/
..waiting for comments..
ಮಲ್ಲಿ, ಈ ಸರ್ತಿ ಬಂದಾಗ ನಿಮ್ಮನ್ನ ಖಂಡಿತಾ ಭೇಟಿಯಾಗಬೇಕು...ಹಲವಾರು ವಿಧದಲ್ಲಿ ನಮ್ಮಿರಿಗೆ ಸಂಬಂಧವಿದೆ...ಹೇಳ್ತೇನೆ ಹೇಗೆ ಅಂತ ಸಿಕ್ಕಾಗ....
ನಿಮ್ಮ ಕೆರೆಗಳ ವಿವರ ಮಾಹಿತಿ ಕೊಟ್ರೆ...ನಿಮ್ಮ ಚಿತ್ರಗಳು ಕಣ್ಣಿಗೆ ತಂಪು....ನಿಮ್ಮ ಮುಂದಿನ ಎಲ್ಲ ಅಭಿಯಾನಗಳೂ ಹೆಚ್ಚು ಯಶಸ್ವೀ ಆಗಲಿ ಎಂದೇ ನಮ್ಮ ಹಾರೈಕೆ.
ಒಂದಕ್ಕಿಂತ ಒಂದು ಫೋಟೋ ಚೆನ್ನಾಗಿದೆ.ಅದರಲ್ಲೂ ಪಾಂಡ
ಹೆರಾನ್ ನ ಪ್ರತಿಬಿಂಬದ ಫೋಟೋ ಅದ್ಭುತವಾಗಿದೆ.
-ಗಣೇಶ್ ಕಾಳೀಸರ
ಮಲ್ಲಿಕಾರ್ಜುನ್ ರವರ ಬ್ಳಾಗ್ನಿಂದ ಪಕ್ಷಿಗಳು ಹಾರಿಹೋಗಿಬಿಟ್ಟಿವೆ ಎಂದು ವ್ಯಥೆ ಪಡುತ್ತಿದ್ದ ಸಂದರ್ಭದಲ್ಲಿ ಮತ್ತೆ ವಲಸೆ ಬಂದಿವೆ.,. :) ಬಹಳ ಸಂತೋಷ.. ಹೆಚ್ಚು ಹೆಚ್ಚು ಬರ್ತಾ ಇರ್ಲಿ.. :)
ಮಲ್ಲಿಕಾರ್ಜುನ್ ಸರ್,
ತುಂಬಾ ಚೆನ್ನಾಗಿದೆ ಚಿತ್ರ ಲೇಖನ..... ಸುಂದರ ಚಿತ್ರಗಳಿಗೆ ಧನ್ಯವಾದ.... ನನಗೋ ಹೋಗಬೇಕೆನಿಸಿದೆ...... ಅಡ್ರೆಸ್ಸ್ ತಿಳಿಸಿ ಪ್ಲೀಸ್.....
Post a Comment