Tuesday, August 4, 2009

ಕೇರಳದ ಲಾರಿಮಣಿಗಳು

ಕೇರಳಿಗರು ಹೆಚ್ಚಾಗಿ ಸಾದಾ ಬಿಳಿಬಣ್ಣದ ಪಂಚೆ, ಸೀರೆ ಉಟ್ಟರೂ ತಮ್ಮ ಲಾರಿಗಳಿಗೆ ಮಾತ್ರ ರಂಗ್‌ಬಿರಂಗಿ ಬಣ್ಣಗಳಿಂದ ಅಲಂಕರಿಸುತ್ತಾರೆ.
ಅವುಗಳ ಒನಪು, ವಯ್ಯಾರ, ಸೊಗಸು, ಠೀವಿ, ಆಕಾರ... ನೋಡಿ ಸವಿದರೇ ಚೆನ್ನ.
ಅವರು ಟಾಟಾ ಎಫ್‌ಇ ಚಾಸಿಗಳಿಗೆ ಆದಷ್ಟು ಮರವನ್ನೇ ಬಳಸಿ ಬಾಡಿಬಿಲ್ಡ್ ಮಾಡುತ್ತಾರೆ. ಘಟ್ಟ ಹತ್ತಿ ಇಳಿಯಬೇಕು, ಟಿಂಬರ್ ಸಾಗಿಸಬೇಕು ಹಾಗಾಗಿ ಪಿಕ್‌ಅಪ್ ಹೆಚ್ಚಿರುವ ಈ ಚಾಸಿಯನ್ನೇ ಬಳಸುತ್ತಾರೆ.
ನಿಮಗಾಗಿ ಒಂದಷ್ಟು ಸುಂದರ ಲಾರಿಮಣಿಗಳನ್ನು ಚಿತ್ರೀಕರಿಸಿ ತಂದಿರುವೆ. ನೋಡಿ ಆನಂದಿಸಿ.

ತೈ ತೈ ಬಂಗಾರಿ... ತೈ ತೈ ಸಿಂಗಾರಿ... ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ... ಲಾರಿ!

ಲಾರಿ ಮುನಿದರೆ ಮಾರಿ!

ಮೊಗವು ಚೆನ್ನ, ನಗುವು ಚೆನ್ನ ... ನಿನ್ನ ರೂಪ ಬಲು ಚೆನ್ನ.

ರಂಗು ರಂಗಿನ ರಂಗೀಲ ಮತ್ತು ಬಿಳಿ ಹೆಂಡ್ತಿ.

ಲಾರಿ ಸ್ಟ್ಯಾಂಡ್

ಲಾರಿಯ ಬ್ಯೂಟಿ ಪಾರ್ಲರ್!

ಸೀತಾ ಔರ್ ಗೀತಾ!


ಮೂತಿ ಮೇಲೆ ಮುರುಗನ್!

22 comments:

Unknown said...

ಮಲ್ಲಿಕಾರ್ಜುನ್
ಒಬ್ಬ ಕಲಾವಿದ ದಿನದ ಿಪ್ಪತ್ತನಾಲ್ಕು ಗಂಟೆಗಳ ಕಾಲವೂ ಎಚ್ಚರವಾಗಿರಬೇಕು; ನಿದ್ದೆಯಲ್ಲೂ ಆತ ೆಚ್ಚರವಾಗಿಯೇ ಇರುತ್ತಾನೆ, ಇರಬೇಕು ಕೂಡಾ! ಹಾಗೆ ನಿಮ್ಮೊಳಗಿನ ಕಲಾವಿದ ಯಾವಾಗಲೂ ಎಚ್ಚರವಿರುವುದರಿಂದಲೇ ಇಷ್ಟೊಂದು ಬಗೆಯ ಫೋಟೋಗಳನ್ನು ನಾವು ನೋಡಲು ಸಾಧ್ಯವಾಗಿದೆ. ಅಭಿನಂದನೆಗಳು. ನಿಮ್ಮಿಂದ ನಮ್ಮ ಊಹೆಗೂ ನಿಲುಕದ ಫೋಟೋಗಳು ಸೃಷ್ಟಿಯಾಗಲಿ ಎಂದು ಹಾರೈಸುತ್ತೇನೆ.

Shweta said...

ಸೂಪರ್, ಸರ್ ..ಕೇರಳದ ಲಾರಿಗಳ ಕತೆ ಹೀಗಾದರೆ ತಮಿಳುನಾಡಿನ ಬಸ್ಸುಗಳು ಕತೆ ಬೇರೆ.ನೋಡಬೇಕಿದ್ದರೆ ಹೊಸೂರ್ ರೋಡ್ ಒಳ್ಳೆಯ ಜಾಗ.,ಬಣ್ಣ ಬಣ್ಣದ ಬಸ್ಸುಗಳು...ರೋಲ್ಸ್ ರೋಯ್ಸ್ ಎಂದೆಲ್ಲ ಬರೆದಿರುತ್ತವೆ ,ನಿಜವಾದ ರೋಲ್ಸ್ ರೋಯ್ಸ್ ಕೂಡ ಕನ್ಫ್ಯೂಸ್ ಆಗಬೇಕು.
ಒಳ್ಳೆಯ ಸಂಗ್ರಹ.........
ಧನ್ಯವಾದಗಳು.................

ಪಾಚು-ಪ್ರಪಂಚ said...

ಮಲ್ಲಿಕಾರ್ಜುನ್ ಸರ್,

ಚಿಕ್ಕವನಿದ್ದಾಗ ಈ ತರದ ಒಂದೆರಡು ಲಾರಿಗಳನ್ನು ನೋಡಿದ್ದೆ. ಆಗ ಈ ಅಲಂಕಾರವು ವಿಚಿತ್ರ ಅನ್ನಿಸುತಿತ್ತು. ಕೇರಳದಲ್ಲಿ ಹೇರಳವಾಗಿ ಮರ ಸಿಗುವುದಿಂದರೆನೋ ಮೂತಿಯನ್ನು ಮರದ ಕೆತ್ತನೆಯಿಂದ ತುಂಬಿಸಿದ್ದಾರೆ..!

ಸುಂದರ ಚಿತ್ರಗಳು, ಅಡಿಬರಹ ತುಂಬಾ ಇಷ್ಟವಾಯಿತು..
ಧನ್ಯವಾದಗಳು

Ittigecement said...

ಹುಡುಕಾಟದವರೆ.....

ಹುಡುಕುವ ಕಲೆ ಇದ್ದರೆ...
ಏನೆಲ್ಲಾ ನೋಡ ಬಹುದಲ್ಲವೆ...?

ಲಾರಿಗಳು ತುಂಬಾ ಸೊಗಸಾಗಿದೆ...

ಮತ್ತೆ ಕೇರಳ ಹೋಗುತ್ತಿದ್ದೀರಲ್ಲ...
ಇನ್ನಷ್ಟು ಸರಕು ತನ್ನಿ...

ಚಿತ್ರ, ವಿಚಿತ್ರ ಲಾರಿಗಳನ್ನು ತೋರಿಸಿದ್ದಕ್ಕಾಗಿ...,
ಹೊಸ ಕಾರಿಗಾಗಿ...

ಅಭಿನಂದನೆಗಳು....

Guruprasad said...

ಮಲ್ಲಿಕಾರ್ಜುನ್,
ಲಾರಿಗಳ ಅವತಾರಗಳನ್ನು ನೋಡಿದ್ದೇ... ಆದರೆ ಕೇರಳದಲ್ಲಿ ಇದು ಜಾಸ್ತಿ ಅಂತ ಗೊತ್ತಿರಲಿಲ್ಲ.....ಚೆನ್ನಾಗಿ ಇದೆ,,,,ಅಲ್ಲ ನೀವ್ ಏನ್ ಸಿಕ್ರು ಬಿದೊಲ್ವೋ ಅಥವಾ ನಿಮ್ಮ ಕ್ಯಾಮೆರಾ ಬಿದೊಲ್ವೋ... ಬರಿ ಕೇರಳ ಟ್ರಿಪ್ ನಿಂದನೆ ಎಸ್ಟೋ ವಿಷಯಗಳನ್ನು ಹೇಳಿದಿರಿ ಸರ್.....ವೆರಿ ನೈಸ್ .... ಮುಂದುವರಿಸಿ...
ಅಂದಹಾಗೆ,,, ನಿಮ್ಮ ಹೊಸ RITZ ಕಾರ್ ತೆಗೆದುಕೊಂದಿದಕ್ಕೆ ಅಭಿನಂದನೆಗಳು....

shivu.k said...

ಮಲ್ಲಿಕಾರ್ಜುನ್,

ಲಾರಿ ಫೋಟೊಗಳು ನಗು ತರಿಸುತ್ತವೆ. ಈ ಚಿತ್ರಗಳಿಂದಲೇ ಅಲ್ಲಿನ ಜನರ ಅಭಿರುಚಿ ತಿಳಿಯುತ್ತದೆ. ಮತ್ತೆ ನೀವು ಲಾರಿಗೆ ಕೊಟ್ಟಿರುವ ಶ್ರೀರ್ಷಿಕೆಗಳು ಲಾರಿಗೆ ಜೀವ[ಡೀಸಲ್, ಆಯಿಲ್, ಗಾಳಿ]ತಂದಿವೆ. ರಂಗು ರಂಗೀಲ ಮತ್ತು ಬಿಳಿಹೆಂಡ್ತಿ ಕಲರ್ ಪುಲ್. ಹಾಗೆ ಲಾರಿಯ ಬ್ಯೂಟಿಪಾರ್ಲರ್ ನೋಡಿ ಹೇಮ ಮತ್ತು ನಾನು ಸಕ್ಕತ್ ನಕ್ಕೆವು...

Rajesh Manjunath - ರಾಜೇಶ್ ಮಂಜುನಾಥ್ said...

ಮಲ್ಲಿಕಾರ್ಜುನ್ ಸರ್,
ಪ್ರತಿ ಫೋಟೋ ಮತ್ತು ಅದಕ್ಕೆ ನೀಡಿರುವ ಸಾಹಿತ್ಯಿಕ ಶೀರ್ಷಿಕೆ ಎರಡು ಸಕತ್ತಾಗಿದೆ. ಇನ್ನಷ್ಟು ಒಲಿದು ಬರಲಿ ನಿಮ್ಮ ಹುಡುಕಾಟದ ಬತ್ತಳಿಕೆಗೆ.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ನಿಮ್ಮ ಹಾರೈಕೆಗೆ ಧನ್ಯವಾದಗಳು. ನೀವು ಹೇಳಿರುವಂತೆ ಸದಾ ಎಚ್ಚರ ಮನಸ್ಥಿತಿಯಿಂದ ಹೊಸದನ್ನು ನೋಡುವ ಪ್ರಯತ್ನ ಮಾಡುವೆ.

Slogan Murugan said...

ಸೂಪರ್.

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ್ ಸರ್,
ಕೇರಳದ ಲಾರಿಗಳ ಫೋಟೋಗಳು ಮನರಂಜಿಸುತ್ತವೆ. ಲಾರಿ ಸ್ಟ್ಯಾಂಡ್‌ ಸೊಗಸು. ಅವುಗಳ ಮುಂಭಾಗದಲ್ಲಿರುವ ಚಿತ್ರಗಳು, ಬರಹಗಳು (ಮಲೆಯಾಳಂ ತಿಳಿಯದು) ಸುಂದರವಾಗಿವೆ. ಒಂದೊಂದು ಲಾರಿಯೂ ಒಂದೊಂದು ವೇಷಧಾರಿಯಾಗಿ ಯಕ್ಷಗಾನ ಪಾತ್ರಧಾರಿಗಳನ್ನು ನೆನಪಿಸುವಂತಿವೆ. ಇಂತಹ ಫೋಟೋಗಳನ್ನು ನಮಗೆಲ್ಲಾ ಕಾಣಿಸುವ ನಿಮಗೆ ಧನ್ಯವಾದಗಳು. ಲಾರಿಯ ಮೇಲಿನ ಬರಹಗಳೂ ಸಹ (ಸಾಮಾನ್ಯವಾಗಿ ಹಾರ್ನ್ ಪ್ಲೀಸ್‌, ನಡುವೆ ಇರಲಿ ಅಂತರ... ಹೀಗಲ್ಲಾ) ಕೆಲವೊಂದು ವಿಶೇಷ ವಿಶಿಷ್ಟ ಸಂದೇಶಗಳನ್ನು ಹೊತ್ತಿರುತ್ತವೆ. ಅವುಗಳನ್ನೂ ಸೆರೆಹಿಡಿಯಿರಿ.

ಧನ್ಯವಾದಗಳು.

ಚಂದ್ರಶೇಖರ ಬಿ.ಎಚ್.

ಚಿತ್ರಾ said...

ಮಲ್ಲಿಕಾರ್ಜುನ್,
ಬಹು ಸುಂದರವಾಗಿವೆ ಲಾರಿಗಳ ಫೋಟೋಗಳು !!! ಸಾಲಂಕೃತ ವಧುವಿನಂತೆ ಕೆಲವು, ultra modern ಬೆಡಗಿಯರಂತೆ ಕೆಲವು!!
ಪಂಜಾಬ್ ಹಾಗೂ ಹರಿಯಾನಾಗಳ ಲಾರಿ ಮಾಲೀಕರು ಕೂಡ ಹೀಗೆಯೇ ಅಲಂಕರಿಸುತ್ತಾರೆ ! ಇನ್ನು ಇಲ್ಲಿ ಮಹಾರಾಷ್ಟ್ರದಲ್ಲಿ ಲಾರಿ, ಟ್ರಕ್ ಇತ್ಯಾದಿಗಳನ್ನು ಒಮ್ಮೆ ಸರಿಯಾಗಿ ನೋಡಿದರೆ , ಅವರ ಮನೆಯಲ್ಲಿನ ಮಕ್ಕಳ ಹೆಸರೆಲ್ಲ ತಿಳಿಯುತ್ತದೆ !
ಸುತ್ತ ಮುತ್ತ ಕಾಣುವ ಎಲ್ಲವನ್ನೂ ಕ್ಯಾಮೆರಾ ಕೋನದಿಂದಲೇ ನೋಡುವ ಗುಣ ನಿಮ್ಮ ಮತ್ತು ಶಿವೂ ಅವರ ರಕ್ತದಲ್ಲೇ ಇದೆಯಾ ಎಂದು ನನ್ನ ಅನುಮಾನ !

PARAANJAPE K.N. said...

ನಿಮ್ಮ "ಲಾರಿಮಣಿ" ಅನ್ನುವ ನುಡಿಗಟ್ಟು ಆಕರ್ಷಕ ಮತ್ತು ವಿನೂತನವಾಗಿದೆ. ನಾನು ಕೂಡ ಇ೦ತಹ ಅನೇಕ ವಿಷಯಗಳನ್ನು ದಿನನಿತ್ಯ ನೋಡುತ್ತೇನೆ, ಆದರೆ ನಿಮ್ಮ೦ತೆ ಯೋಚಿಸಿಯೇ ಇಲ್ಲ. ನಿಮ್ಮೊಳಗೆ ಇರುವ ಅಪರೂಪದ ಪ್ರತಿಭೆಗೆ ಒ೦ದು ಸಲಾಂ.

Anonymous said...

ಮಲ್ಲಿಕಾರ್ಜುನ್ ಅವರೇ, ನಿಮ್ಮ ಶೀರ್ಷಿಕೆ ನೋಡಿದಾಗ 'ಇದು ಏನಪ್ಪಾ' ಅಂದ್ಕೊಂಡೆ! ಇದೇನಿರಬಹುದು ಅನ್ನೋ ಕುತೂಹಲ ನಿಮ್ಮ ಪೋಸ್ಟ್ ನೋಡಿದಾಗ ಆಶ್ಚರ್ಯದಲ್ಲಿ ಮಾರ್ಪಾಡಾಯ್ತು.
Hats off to u and ur creativity!!!
ಹೀಗೆ ನಿಮ್ಮ ಅಭಿಯಾನ ನಡೀತಾ ಇರಲಿ ಅನ್ನೋ ಹಾರೈಕೆಯೊಡನೆ!

sunaath said...

ಹೌದಲ್ರೀ, ಎಷ್ಟು ಸುಂದರವಾಗಿದೆ ಈ ಲಾರಿಮಣಿಗಳ ಚಿತ್ತಾರ!

ಶರಶ್ಚಂದ್ರ ಕಲ್ಮನೆ said...

ಮಲ್ಲಿಕಾರ್ಜುನ್ ಸರ್,
ಲಾರಿಯ ಫೋಟೋಗಳು ಹಾಗು ಅಡಿಬರಹಗಳು ಎರಡೂ ಚನ್ನಾಗಿವೆ.. ನಿಮ್ಮ ಕ್ಯಾಮೆರಾ ಕಣ್ಣಲ್ಲಿ ಇನ್ನಷ್ಟು ಫೋಟೋಗಳು ಮೂಡಿ ಬರಲಿ :)

ವನಿತಾ / Vanitha said...

ಲಾರಿ ಮಣಿ ಗಳು ಸಕತ್ತಗಿವೆ...ಚಿತ್ರ ಬಿಡಿಸಿದ ಕಲಾವಿದನಿಗೂ, ಕಲಾವಿದನ್ನು ಗುರುತಿಸಿರುವ ನಿಮಗೂ ಹ್ಯಾಟ್ಸ್ ಆಪ್ ...

Umesh Balikai said...

ಮಲ್ಲಿ ಸರ್,

ಆಹಾ! ಥರಾವರಿ ಲಾರಿ ಮಣಿಗಳು; ನಾರಿ ಮಣಿಗಳಿಗಿಂತ ಹೆಚ್ಚು ಆಕರ್ಷಕವಾಗಿವೆ (ಯಾರೂ ಕೋಪಿಸ್ಕೋಬೇಡ್ರಮ್ಮಾ... :-) ) ... ರಂಗು ರಂಗಿನ, ಚಿತ್ತಾ ಕರ್ಷಕ ಲಾರಿ ಚಿತ್ರಗಳು, ಅದಕ್ಕೊಪ್ಪುವ ಅಡಿಬರಹಗಳು, ಸಿಂಪ್ಲೀ ಸೂಪರ್ಬ್... ಹೌದು, ಈ ಲಾರಿ ಮಣಿಗಳು ನೋಡೋಕೆ ಎಷ್ಟು ಸುಂದರವಾಗಿದಾವೋ ಮುನಿದರೆ ಅಷ್ಟೇ ಭಯಾನಕ ಮಾರಿಗಳು.

- ಉಮೇಶ್

ಜಿ.ಎಸ್.ಬಿ. ಅಗ್ನಿಹೋತ್ರಿ said...

jocky lories & beautiful collection

ಮಂಜುನಾಥ ತಳ್ಳಿಹಾಳ said...

ನಮಸ್ಕಾರ ಮಲ್ಲಿಕಾರ್ಜುನ ಸಾರ್,
"ಕೇರಳದ ಲಾರಿಮಣಿಗಳು" ತುಂಬಾ ಚನ್ನಾದಿದೆ,ಪೋಟೋಗಳು ಅದ್ಬುತವಾಗಿವೆ, ಮನೋಹರವಾಗಿವೆ,ನಿಮ್ಮಿಂದ ಇನ್ನಷ್ಟು ಪೋಟೋಗಳು ಸೃಷ್ಟಿಯಾಗಲಿ, ಧನ್ಯವಾದಗಳು

**ಮಂಜುನಾಥ ತಳ್ಳಿಹಾಳ

ಸವಿಗನಸು said...

ಲಾರಿಮಣಿಗಳ ತಳುಕು, ವೈಯಾರ ಸುಂದರವಾಗಿವೆ.....ಅದಕ್ಕೆ ತಕ್ಕ ಅಡಿಬರಹಗಳು
ಇನ್ನಷ್ಟು ಬರಲಿ....

ವಿನುತ said...

ಕೇರಳದ ಈ ಸೌ೦ದರ್ಯದ ಬಗ್ಗೆ ಅರಿವಿರಲಿಲ್ಲ. ನಿಮ್ಮಲ್ಲಿರುವ ಕಲಾವಿದ ಮತ್ತೊಮ್ಮೆ ನಮ್ಮನ್ನು ಮುದಗೊಳಿಸಿದ್ದಾನೆ, ಧನ್ಯವಾದಗಳು.

ಮನಸು said...

tumba chennagide foto's