Tuesday, March 24, 2009

ಆಟೋಗ್ರಾಫ್-ಫೋಟೋಗ್ರಾಫ್ ಭಾಗ ಎರಡು

ಗೋಕರ್ಣದಲ್ಲಿ 'ಸ್ಟಡಿ ಸರ್ಕಲ್' ಸಂಸ್ಥೆಯನ್ನು ಹುಟ್ಟುಹಾಕಿ, ಒಂದು ಲಕ್ಷಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳನ್ನು ಸಂಗ್ರಹಿಸಿ, ಗ್ರಂಥಭಂಡಾರವನ್ನು ಸ್ಥಾಪಿಸಿರುವವರು ಜಿ.ಎಂ.ವೇದೇಶ್ವರ್. ಅವರು ಜೀವನ ಕುರಿತಾದ ಮೂಲಭೂತ ಪ್ರಶ್ನೆಗಳಿಗೆ ನಾಡಿನಾದ್ಯಂತ ಹಿರಿಯರಿಂದ, ವಿದ್ವಜ್ಜನರಿಂದ ಉತ್ತರ ತರಿಸಿಕೊಂಡು, ಆ ಮೂಲ ಪ್ರತಿಗಳನ್ನು ೪೦-೫೦ ವರ್ಷಗಳಿಂದ ಜೋಪಾನ ಮಾಡಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ.ಸರ್.ಸಿ.ವಿ.ರಾಮನ್, ಡಾ.ಎಸ್.ರಾಧಾಕೃಷ್ಣನ್, ದ.ರಾ.ಬೇಂದ್ರೆ, ಶಿವರಾಮ ಕಾರಂತರು, ಡಿ.ವಿ.ಜಿ..... ಸುಮಾರು ೬೦ ಜನರ ಹಸ್ತಾಕ್ಷರದ ಪತ್ರಗಳು, ಫೋಟೋಗಳು ನೋಡಲು ಮುದನೀಡುತ್ತವೆ. ಅಷ್ಟೂ ಜನರ ಮಧ್ಯೆ ಕುಳಿತಂತೆ ಭಾಸವಾಗುತ್ತದೆ.
* * * * *
ಸುಮಾರು ೧೯೯೪-೧೯೯೫ ರಲ್ಲಿ "ಸುಧಾ" ವಾರಪತ್ರಿಕೆಯಲ್ಲಿ "ಸಮಕ್ಷಮ" ಎಂಬ ಲೇಖನಮಾಲೆ ಪ್ರಕಟವಾಗುತ್ತಿತ್ತು. ಅದು ಕನ್ನಡದ ಸುಪ್ರಸಿದ್ಧ ಸಾಹಿತಿಗಳನ್ನು ಪರಿಚಯಿಸುವ ಲೇಖನಮಾಲೆ. ಲೇಖಕರ ಚಿತ್ರ, ಹಸ್ತಾಕ್ಷರ ಮತ್ತು ಮಾಹಿತಿ ಎರಡು ಪುಟಗಳಲ್ಲಿ ಪ್ರಕಟವಾಗುತ್ತಿತ್ತು. ಅದನ್ನೆಲ್ಲಾ ಈಗ ನೋಡುವಾಗ ಏನೋ ಖುಷಿ, ಸಂಭ್ರಮ, ಸಂತೋಷ...
* * * *
ಕೆ.ಜಿ.ಸೋಮಶೇಖರ್ ನಮ್ಮ ನಾಡಿನ ಅಪೂರ್ವ ಛಾಯಾಚಿತ್ರಗಾರರು. ತಮ್ಮ ಕ್ಯಾಮೆರಾ ಕಣ್ಣಿನಿಂದ ವಿಶ್ವವಿಖ್ಯಾತ ಸಾಹಿತಿ, ಕಲಾವಿದ, ನಟ, ನಿರ್ದೇಶಕರ ಕ್ರಿಯಾಶೀಲ ಭಾವಭಂಗಿಗಳನ್ನು ದಾಖಲಿಸಿದ್ದಾರೆ. "ತರಂಗ"ದಲ್ಲಿ ೧೯೯೬ ರಲ್ಲಿ "ಚಿತ್ರ-ಚಿತ್ರಣ" ಎಂಬ ಲೇಖನಮಾಲೆ ಪ್ರಕಟವಾಗುತ್ತಿತ್ತು. ಇದರಲ್ಲಿ ಕೆ.ಜಿ.ಸೋಮಶೇಖರ್ ಸಂಗ್ರಹದ ಪ್ರತಿಭಾವಂತರ ಚಿತ್ರದ ಜೊತೆ ಅವರ ಹೃದಯಸ್ಪರ್ಶಿ ನೆನಪಿಗೆ ಬರಹದ ರೂಪ ಕೊಟ್ಟವರು ನಾ.ಡಿಸೋಜ.
* * * *
"ಆಟೋಗ್ರಾಫ್-ಫೋಟೋಗ್ರಾಫ್" ಗೆ ಪ್ರೇರಣೆ ನೀಡಿದ ನನ್ನಲ್ಲಿನ ಸಂಗ್ರಹದ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಈ ಬಾರಿಯ "ಸಹಿ-ಚಿತ್ರ"ಗಳನ್ನು ಪ್ರಸ್ತುತಪಡಿಸುತ್ತಿರುವೆ.

ಭಾರತದ ಅತಿದೊಡ್ಡ ಸಾಹಿತ್ಯ ಪುರಸ್ಕಾರ "ಜ್ಞಾನಪೀಠ ಪ್ರಶಸ್ತಿ" ಪಡೆದ ಏಳು ಮಂದಿ ಕನ್ನಡಿಗರಲ್ಲಿ ಒಬ್ಬರಾದ ಡಾ.ಯು.ಆರ್.ಅನಂತಮೂರ್ತಿಯವರು ನಮ್ಮ ದೇಶದ ಹಿರಿಯ ಲೇಖಕರಲ್ಲೊಬ್ಬರು. ಇವರ "ಸಂಸ್ಕಾರ"ದಿಂದಲೂ ನಮಗೆಲ್ಲ ಇಷ್ಟವಾಗುತ್ತಾರೆ.

ನಡೆದಾಡುವ "ಜೀವಂತ ಕಥಾಕೋಶ" ಎಂದು ಎಲ್ಲರಿಂದಲೂ ಕರೆಯಿಸಿಕೊಳ್ಳುವ ದೈತ್ಯ ಪ್ರತಿಭೆ - ನಮ್ಮೆಲ್ಲರ ಪ್ರೀತಿಯ ಕುಂ ವೀರಭದ್ರಪ್ಪನವರು.

'ತರಂಗ'ದ ಸಂಪಾದಕರಾಗಿದ್ದ ಸಂತೋಷಕುಮಾರ್ ಗುಲ್ವಾಡಿಯವರು ನನಗೆ ಓದುವ ಗೀಳನ್ನು ಹೆಚ್ಚಿಸಿದವರು. ತಮ್ಮ 'ಅಂತರಂಗ'ದ ಮಾತುಗಳನ್ನು 'ಬಹಿರಂಗ'ವಾಗಿ ಬರೆದು ನಮ್ಮ ಜ್ಞಾನ ವೃದ್ಧಿಸಿದವರು.

ನಾಡಿನ ಅಚ್ಚು ಮೆಚ್ಚಿನ ತುಂಟಕವಿ ಬಿ.ಆರ್.ಲಕ್ಷ್ಮಣರಾವ್. ನಮ್ಮ ಶಿಡ್ಲಘಟ್ಟ ತಾಲೂಕಿನ ಚೀಮಂಗಲದಲ್ಲಿ ಹುಟ್ಟಿದ ಇವರು ನಮ್ಮ ಪಕ್ಕದೂರು ಚಿಂತಾಮಣಿಯಲ್ಲಿದ್ದಾರೆ.
"ಬಿಳಿಗಿರಿಯಷ್ಟು ಪೋಲಿಯೂ ಅಲ್ಲದ ಶಿವರುದ್ರಪ್ಪನವರಂತೆ 'ಸಾದ್ವಿ'ಯೂ ಅಲ್ಲದ 'ನಡು'ಗನ್ನಡದ ಕವಿ ಬಿ.ಆರ್.ಎಲ್" -
ಜೋಗಿ
"ಬುಗುರಿ"ಯಂತೆ ಮೊಗಳ್ಳಿ ಗಣೇಶ್ ಅವರ ಕಥೆಗಳು ನಮ್ಮನ್ನು ಆಡಿಸುತ್ತ, ಕಾಡಿಸುತ್ತವೆ.
ಕಬ್ಬಿಣದ ಕಡಲೆಯಾದ ವಿಜ್ಞಾನವನ್ನು ಸರಳವಾಗಿ ಕಸ್ತೂರಿ ಕನ್ನಡದಲ್ಲಿ ಸಾದರಪಡಿಸುವ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ ಅವರು.

ನಾನು ಡಾ.ಕೃಷ್ಣಾನಂದ ಕಾಮತರನ್ನು ನೋಡಲಾಗಲಿಲ್ಲ. ಆದರೆ ಅವರನ್ನು ಮಾತೃಸ್ವರೂಪರಾದ ಡಾ.ಜ್ಯೋತ್ಸ್ನಾಕಾಮತರಲ್ಲಿ ಕಂಡೆ. ಬೆಂಗಳೂರಿನ ಆಕಾಶವಾಣಿಯ ನಿರ್ದೇಶಕರಾಗಿ ನಿವೃತ್ತರಾಗಿರುವ ಇವರು ಈಗಲೂ ಅಧ್ಯಯನ ಮಾಡುತ್ತಲೇ ತಮ್ಮ ಪತಿ ಡಾ.ಕೃಷ್ಣಾನಂದ ಕಾಮತರ ನೆನಪಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ.

ನಮ್ಮೆಲ್ಲರ ಮೆಚ್ಚಿನ ಕವಯತ್ರಿ ಪ್ರತಿಭಾ ನಂದಕುಮಾರ್.

ನಮ್ಮ ಕೋಲಾರ ಜಿಲ್ಲೆಯವರಾದ ಕೃಷಿ ವಿಜ್ಞಾನಿ ಡಾ.ಕೆ.ಎನ್.ಗಣೇಶಯ್ಯ ಕಥೆ ಹೇಳುವುದರಲ್ಲಿ ಸಿದ್ಧಹಸ್ತರು. ಚರಿತ್ರೆಯ ಬಗ್ಗೆ ಆಸಕ್ತಿ ಹುಟ್ಟಿಸುವುದಲ್ಲದೆ ಐತಿಹಾಸಿಕ ಸ್ಥಳಗಳನ್ನು ಹೊಸ ರೀತಿಯಲ್ಲಿ ನೋಡಲು ಪ್ರೇರೇಪಿಸುತ್ತವೆ ಇವರ ಕೃತಿಗಳು.

ಕುವೆಂಪು ನಂತರದ ಮಲೆನಾಡಿನ ಲೇಖಕರಲ್ಲಿ ಪ್ರಮುಖರು ಬಿಳುಮನೆ ರಾಮದಾಸ್. ಇವರ ಕಾದಂಬರಿಯಲ್ಲಿ ಬರುವ ಪಾತ್ರ ಮತ್ತು ಚಿತ್ರಣ ಮಲೆನಾಡಿನ ಜೀವನದ ಇನ್ನೊಂದು ಮಗ್ಗುಲನ್ನು ಸ್ಪರ್ಶಿಸುತ್ತದೆ.

ನಿವೃತ್ತ ನ್ಯಾಯಾಧೀಶರು, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರೂ ಆದ ಕೋ.ಚನ್ನಬಸಪ್ಪನವರು ಪ್ರಬುದ್ಧ ಸಾಹಿತ್ಯ ಶಕ್ತಿಯೂ ಹೌದು.

ಬರುಗೂರು ರಾಮಚಂದ್ರಪ್ಪ ಬಹುರೂಪಿ. ಬಂಡಾಯಗಾರರು, ಕನ್ನಡ ಹೋರಾಟಗಾರರು, ಸಾಹಿತಿ, ಸಿನಿಮಾ ನಿರ್ದೇಶಕ, ರಾಜಕೀಯ...

ನೀರಿನ ಮಹತ್ವ ಮತ್ತು ಸದುಪಯೋಗ ತಿಳಿಸುತ್ತಾ ಜಲಸಾಕ್ಷರತೆ ಮೂಡಿಸುತ್ತಿರುವವರು ಶ್ರೀಪಡ್ರೆ.

31 comments:

sunaath said...

ಮತ್ತೊಮ್ಮೆ ಸುಂದರವಾದ ಫೋಟೋಗಳನ್ನು ಹಾಗೂ ಕನ್ನಡದ ಈ ಮಹನೀಯರ ರುಜುಗಳನ್ನು ಕೊಟ್ಟಿದ್ದೀರಿ. ಫೋಟೋಗಳೆಲ್ಲ
ಸೊಗಸಾಗಿವೆ.
ಧನ್ಯವಾದಗಳು.

guruve said...

ನನಗೆ ಗೊತ್ತಿಲ್ಲದ ಬಹಳಷ್ಟು ಸಾಹಿತ್ಯ ಲೋಕದ ದಿಗ್ಗಜರ (ಮುಖ) ಪರಿಚಯವಾಯಿತು ಈ ಚಿತ್ರ ಲೇಖನದಿಂದ.
ಫೋಟೋಗಳು ಸುಂದರವಾಗಿ ಮೂಡಿ ಬಂದಿವೆ, ಜೀವಂತಿಕೆಯಿದೆ ನಿಮ್ಮ ಫೋಟೋಗಳಲ್ಲಿ.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಮಲ್ಲಿಕಾರ್ಜುನ, ಪ್ರಶಸ್ತಿಗಾಗಿ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಬ್ಲಾಗ್ನಲ್ಲಿ ಅದ್ಭುತ ಫೋಟೋಗಳಿವೆ!

ಎಚ್. ಆನಂದರಾಮ ಶಾಸ್ತ್ರೀ said...

ಛಾಯಾಚಿತ್ರಗ್ರಾಹಕ ಮತ್ತು ಕವಿಹೃದಯದ ಲೇಖಕ ಎರಡೂ ನೀವಾಗಿರುವುದರಿಂದ ನಿಮ್ಮಿಂದ ಈ ರೀತಿಯ ಅಮೂಲ್ಯ ಕೊಡುಗೆಗಳು ಸಾಧ್ಯವಾಗುತ್ತಿವೆ. Keep it up.

Ittigecement said...

ಹುಡುಕಾಟದ ಮಲ್ಲಿಕಾರ್ಜುನ್....

ನಿಮ್ಮ ಓದು ನಿಮ್ಮ ಬರವಣಿಗೆಯಲ್ಲಿ ಕಾಣುತ್ತಿದೆ..

ನಿಮ್ಮ ಶ್ರದ್ಧೆ..,ಪರಿಶ್ರಮ..

ಛಾಯಾ ಗ್ರಹಣದಲ್ಲೂ..,
ವಿಷಯ ಸಂಗ್ರಹಣೆಯಲ್ಲೂ
ನೋಡಬಹುದು...

ನೀವು ಗುಲ್ವಾಡಿಯವರ ಹಸ್ತಾಕ್ಷರ ಪಡೆಉ, ಫೋಟೊ ಕ್ಲಿಕ್ಕಿಸಿದ..
ಸಂಭ್ರಮ.. ನನಗೆ ಹೇಳುತ್ತಿರುವಾಗ.. ಖುಷಿಯಾಗುತ್ತಿತ್ತು...!

ನಿಮ್ಮ ಹುಡುಕಾಟ ಹೀಗೆಯೇ ಸಾಗುತ್ತಿರಲಿ...

ಚಂದದ ಒಕ್ಕಣೆ..
ಸುಂದರ ಚಿತ್ರಣ...

ಅಭಿನಂದನೆಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಸುನಾತ್ ಸರ್,
ಧನ್ಯವಾದಗಳು. ಅಷ್ಟೊಂದು ಸುಂದರ ವ್ಯಕ್ತಿತ್ವಗಲು ನನ್ನ ಬ್ಲಾಗ್ ಅಲಂಕರಿಸಿರುವುದು ನನ್ನ ಪುಣ್ಯ.

ಮಲ್ಲಿಕಾರ್ಜುನ.ಡಿ.ಜಿ. said...

ಗುರುಪ್ರಸಾದ್ ಅವರೆ,
ನಿಮ್ಮ ಕಾಮೆಂಟ್ ನನಗೆ ಟಾನಿಕ್ ಇದ್ದಂತೆ. ಧನ್ಯವಾದಗಳು.
ನಾನು ನಿಮ್ಮಷ್ಟು ಬೇಗ ಉತ್ತರಿಸಲಾಗುವುದಿಲ್ಲ. ಇಂಟರ್ ನೆಟ್ ತೊಂದರೆ! ಏನೂ ಅನ್ಕೋಬೇಡಿ.

ಮಲ್ಲಿಕಾರ್ಜುನ.ಡಿ.ಜಿ. said...

ಪೂರ್ಣಿಮಾ ಭಟ್ ಸಣ್ಣಕೇರಿಯವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ. ಆಗಾಗ ನನ್ನ ಬ್ಲಾಗಿಗೆ ಬಂದು ಸಲಹೆ ಸೂಚನೆ ಕೊಡುತ್ತಿರಿ.

ಮಲ್ಲಿಕಾರ್ಜುನ.ಡಿ.ಜಿ. said...

ಆನಂದ ರಾಮ ಶಾಸ್ತ್ರಿಯವರಿಗೆ ನನ್ನ ನಮಸ್ಕಾರಗಳು. ಸರ್, ನಿಮ್ಮ ಲೇಖನಗಳು, ಕವನಗಳನ್ನು, ವಾಚಕರವಾಣಿಗೆ ಬರೆಯುವ ಪತ್ರಗಳನ್ನು ಓದುತ್ತಿರುತ್ತೇನೆ. ನೀವೊಂದು Knowledge Bank. ವಿಶ್ವೇಶ್ವರಭಟ್ ಅವರು ಕೂಡ ನಿಮ್ಮ ಬಗ್ಗೆ ಬರೆದಿದ್ದ ನೆನಪು ಇದೆ.
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ಭೈರಪ್ಪನವರನ್ನು, ಮಾಸ್ಟರ್ ಹಿರಣ್ಣಯ್ಯನವರನ್ನು ನೀವು ಭೇಟಿ ಮಾಡಿಸುವೆನೆಂದು ಹೇಳಿದ್ದೀರಿ. ಮರೆಯಬೇಡಿ. ಈ ಬೇಸಿಗೆ ರಜೆಯಲ್ಲಿ ಆಗುತ್ತಾ?

shivu.k said...

ಮಲ್ಲಿಕಾರ್ಜುನ್,

ಈ ಬಾರಿಯದು ಇನ್ನೂ ಸೂಪರಾಗಿದೆ....ಅದಕ್ಕೆ ತಕ್ಕಂತ ಮಾಹಿತಿ, ವಿವರಣೆ....ತುಂಬಾ ಉಪಯುಕ್ತವಾಗಿದೆ...ಇನ್ನಷ್ಟು ಬೇಗ ಹಾಕಿಬಿಡಿ...
ವಸುದೇಂದ್ರರವರ ಬಳಿ ಹೋಗೋಣ....

PARAANJAPE K.N. said...

ನಾಡಿನ ಶ್ರೇಷ್ಟರ ಛಾಯಾಚಿತ್ರ-ಹಸ್ತಾಕ್ಷರ ಮಾಲಿಕೆಯಲ್ಲಿ, ನಿಮ್ಮ ಮುನ್ನುಡಿ, ಅಡಿಬರಹಗಳು ಚೆನ್ನಾಗಿ ಮೂಡಿ ಬ೦ದಿವೆ.ಉತ್ತಮ ಹವ್ಯಾಸ. ಇಷ್ಟವಾಯಿತು. keep it up

ವಿನುತ said...

ಮತ್ತೊಮ್ಮೆ ಸಾಹಿತಿಗಳ ಚಿತ್ರಲೋಕ ಸೃಷ್ಟಿಸಿದ್ದಿರಿ. ಅಭಿನಂದನೆಗಳು. ಪುಸ್ತಕಕ್ಕಾಗಿ ಕಾಯುತ್ತಿದ್ದೇವೆ೦ದು ಮತ್ತೊಮ್ಮೆ ಈ ಮೂಲಕ ನೆನಪಿಸುತ್ತಿದ್ದೇವೆ :)

Srinidhi said...

sooper!

Unknown said...

ಮಲ್ಲಿಕಾರ್ಜುನ ಇಷ್ಟು ಬೇಗ ಈ ಎರಡನೇ ಭಾಗವನ್ನು ನೋಡಿ ಖುಷಿಯಾಯಿತು. ನಿಮ್ಮ ವೇಗ ಮತ್ತು ಕ್ರಿಯಾಶೀಲತೆ ಇಂದಿನವರಿಗೆ ಮಾದರಿಯೆಂದೇ ನಾನು ಭಾವಿಸುತ್ತೇನೆ. ಅಬಿನಂಧನೆಗಳು.

ವಿ.ರಾ.ಹೆ. said...

very nice.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಇನ್ನೂ ಬಹಳ ವ್ಯಕ್ತಿತ್ವಗಳ ಸಹಿ-ಚಿತ್ರ ಸಂಗ್ರಹಿಸಬೇಕು. ನಿಮ್ಮ ಸಹಕಾರ ಅತ್ಯಗತ್ಯ.

ಮಲ್ಲಿಕಾರ್ಜುನ.ಡಿ.ಜಿ. said...

ಪರಾಂಜಪೆ ಸರ್,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ವಿನುತ ಅವರೆ,
ಧನ್ಯವಾದಗಳು. ಪುಸ್ತಕಕ್ಕಾಗಿ ಇನ್ನೂ ತುಂಬಾ ಕೃಷಿ ಮಾಡಬೇಕು.

ಮಲ್ಲಿಕಾರ್ಜುನ.ಡಿ.ಜಿ. said...

Thanka Srinidhi.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ತುಂಬಾ ಥ್ಯಾಂಕ್ಸ್. ನೀವು ಬೆನ್ನುತಟ್ಟುತ್ತಿದ್ದರೆ ನಾನು ಇನ್ನಷ್ಟು ಕ್ರಿಯಾಶೀಲನಾಗಿರುತ್ತೇನೆ.

ಚಂದ್ರಕಾಂತ ಎಸ್ said...

ಅಂತೂ ಅನೇಕ ದಿನಗಳಿಂದ ಕಾಯುತ್ತಿದ್ದ ಎರಡನೆಯ ಕಂತು ಈ ದಿನ ನನ್ನ ಕಣ್ಣಿಗೆ ಬಿದ್ದು ಬಹಳ ಖುಷಿಯಾಯಿತು.ಕೆ.ಎನ್.ಗಣೇಶಯ್ಯನವರ ಎಲ್ಲಾ ಕೃತಿಗಳನ್ನೂ ಓದಿದ್ದ ನನಗೆ ಅವರ ಫೋಟೋ ನೋಡಲು ಸಿಕ್ಕಿರಲಿಲ್ಲ. ಬಿಅರೆಲ್ ಬಗ್ಗೆ ಒಳ್ಳೆ ಅಡಿಟಿಪ್ಪಣಿ ಬರೆದಿರುವಿರಿ!.
ಆನಂದರಾಮಶಾಸ್ತ್ರಿಯವರ ಕವನಗಳನ್ನೂ ಬರಹಗಳನ್ನೂ ಓದುತ್ತಿದ್ದು, ಈ ದಿನ ನಿಮ್ಮ ಬ್ಲಾಗ್ ನಲ್ಲಿ ಅವರ ಕಾಮೆಂಟ್ ನೋಡಿ ಖುಷಿಯಾಯಿತು.
ನಿಮ್ಮ ಈ ಸುಂದರ ಆಟೋಗ್ರಾಫ್-ಫೋಟೋಗ್ರಾಫ್ ಎರಡನೆಯ ಭಾಗಕ್ಕೆ ಮತ್ತೊಮ್ಮೆ ಧನ್ಯವಾದಗಳು.

ಅಹರ್ನಿಶಿ said...

ಮಲ್ಲಿಕರ್ಜುನ್,

ಅತಿ ಸು೦ದರ ಭಾವ ಹಾಗೂ ಭಾವನೆ.ಬಹುವಾಗಿ ಮೆಚ್ಚಿಕೊ೦ಡ ನಿಮ್ಮ ಶ್ರದ್ಧೆಗೆ ಹ್ಯಾಟ್ಸ್ ಆಫ್.ಬೇಗ ಹ್ಯಾಟ್ರಿಕ್ ಮಾಡಿಬಿಡಿ ಐ.ಪಿ.ಎಲ್ ಗಿ೦ತ ಮು೦ಚೆ.ನನ್ನ ಮೆಚ್ಚಿನ ನಮ್ಮೂರಿನ ಬರಗೂರರೂ ಇದ್ದಾರೆ ನಿಮ್ಮ ಸ೦ಗ್ರಹದಲ್ಲಿ.ನಿಮ್ಮ ಸಾಧನೆ ಗೆ ನನ್ನ ಚಿಕ್ಕ ಕ೦ಗ್ರಾಟ್ಸ್.

ತೇಜಸ್ವಿನಿ ಹೆಗಡೆ said...

ಉತ್ತಮ ಮಾಹಿತಿಗಳನ್ನೊಳಗೊಂಡ ಅಪರೂಪದ ಫೋಟೋಗಳು. ಧನ್ಯವಾದಗಳು. ಹಿಂದೆ ನಾನು ಒಮ್ಮೆ ಶ್ರೀಪಡ್ರೆ ಅವರ ಪುಸ್ತಕವನ್ನು ಡಿ.ಟಿ.ಪಿ ಮಾಡಿದ್ದೆ. (ನಮ್ಮ ಪ್ರಕಾಶನದಲ್ಲಿ). ಈಗ ಆ ನೆನಪುಗಲು ಹಸಿರಾದವು.

ಧರಿತ್ರಿ said...

ಆಟೋಗ್ರಾಫ್-ಫೋಟೋಗ್ರಾಫ್ ಇದರ ಬಗ್ಗೆ ಬರೆಯಲೇನೂ ಉಳಿದಿಲ್ಲ.

ಮಲ್ಲಿಯಣ್ಣ..ಒಳ್ಳೆಯ ಹವ್ಯಾಸ, ಪ್ರತಿಭೆ ನಿಮ್ಮಲ್ಲಿದೆ...

ಅದ ನೋಡಿ ಖುಷಿಪಡಲು ನಾವೆಲ್ಲ ಇದ್ದೇವೆ...

ವೃತ್ತಿಯ ನಡುವೆ ಇಂಥ ಪ್ರವೃತ್ತಿಗಳು ಸದಾ ನಿಮ್ಮಲ್ಲಿರಲಿ...

ಯಶಸ್ಸು ನಿಮ್ಮದಾಗಲೀ...

ಯುಗಾದಿ ಹಬ್ಬದ ಶುಭಾಶಯಗಳು...

-ಧರಿತ್ರಿ

ಗುರುಪ್ರಸಾದ್ ಕಾಗಿನೆಲೆ said...

Malli,

Excellent.

Guru Kaginele

Kamat's Potpourri said...

ಪ್ರಿಯ ಮಲ್ಲಿ,
ನಿಮ್ಮ ಸಂಕಲನಕ್ಕೂ , 'ಕಾಮತ' ಸಂಗ್ರಹಕ್ಕೂ ಒಮ್ಮೆ ಸ್ಪರ್ಧೆ ಇಡೋಣ!

ಇವನ್ನು ನೋಡಿದಾಗೆಲ್ಲ ನನಗೆ ನನ್ನ ತಂದೆಯವರ ನೆನಪಾಗುತ್ತದೆ. ಅವರೂ ಇದೇ ಉತ್ಸಾಹದಿಂದ ಹಸ್ತಕ್ಷರಗಳ, ಮುಖಚಿತ್ರಗಳನ್ನು ಒತ್ತುಗೂದಿಸುತ್ತಿದ್ದರು.

ನನ್ನ ಬಳಿಯೂ ಮಹಾ ಮೇಧಾವಿಗಳ ಹಸ್ತಾಕ್ಷರಗಳಿವೆ. ಆದರೆ ನಿಮಗಿರುವ ಆಸಕ್ತಿ, ಶ್ರುಧ್ಧೆಗಳನ್ನು ದೇವರು ನನಗೆ ಕೊಡಲಿಲ್ಲ! ಮುಂದಿನ ಸಲ ನಮ್ಮ ಭೇಟಿಯಾದಾಗ ಅವನ್ನು ನಿಮಗೆ ನೀಡುತ್ತೇನೆ.

-ವಿಕಾಸ ಕಾಮತ

ಮಲ್ಲಿಕಾರ್ಜುನ.ಡಿ.ಜಿ. said...

ನಾಗೇಶ್ ಹೆಗಡೆಯವರ ಪ್ರತಿಕ್ರಿಯೆ:
ಪ್ರಿಯ ಮಲ್ಲಿ,
ನಿಮಗೂ ಯುಗಾದಿ ಹೊಸ ಉತ್ಸಾಹ ತರಲೆಂದು ಹಾರೈಸುತ್ತೇನೆ. ನಿಮ್ಮ ಸಹಿ ಚಿತ್ರಗಳ
ಸಂಗ್ರಹವನ್ನು ಮತ್ತೊಮ್ಮೆ ನೋಡಿದೆ. ಈಶ್ವರೀ ಬಳ್ಳಿಯ ಕಂಬಳಿ ಹುಳುವಿನ ಚಿತ್ರಕಥೆ ಚೆನ್ನಾಗಿದೆ. ಆಯುರ್ವೇದ ತಜ್ಞ ಡಾ.
ಸತ್ಯನಾರಾಯಣ ಭಟ್ ಅವರನ್ನು ಕೇಳಿ ಆ ಬಳ್ಳಿಯ ಔಷಧೀಯ ಗುಣಗಳನ್ನು ವಿವಿರಿಸಿದರೆ
ಚೆನ್ನಾಗಿರುತ್ತದೆ. ವಿಶಾಸ ಬೇಕಿದ್ದರೆ ಸಂಪರ್ಕಿಸಿ.
ಕರ್ನಾಟಕ ಸುವರ್ಣ ಸಂಪುಟವೊಂದು ಸಿದ್ಧವಾಗುತ್ತಿದೆ, ಡಾ. ಕಂಬಾರರ ಅಧ್ಯಕ್ಷತೆಯಲ್ಲಿ.
ನಿಮ್ಮನ್ನು ಸಂಪರ್ಕಿಸಿ ತುರ್ತಾಗಿ ಬ್ಲೂಜೇ ಬಗ್ಗೆ ಚಿತ್ರ ಲೇಖನವನ್ನು
ತರಿಸಿಕೊಳ್ಳುವಂತೆ ಸಮಿತಿಗೆ ಬರೆದಿದ್ದೇನೆ.
ಶುಭವಾಗಲಿ.
-ನಾ.

Guruprasad said...

ಹಲೋ ಮಲ್ಲಿಕಾರ್ಜುನ್,
ತುಂಬ ಚೆನ್ನಾಗಿದೆ ಎಲ್ಲ ಫೋಟೋಗಳು ಅದಕ್ಕೆ ತಕ್ಕಂತೆ ಇರುವ ಅಚ್ಚುಕಟ್ಟಾದ ಬರಹ...ತುಂಬ ಇಷ್ಟ ಆಯಿತು ಎಲ್ಲಾ ಕನ್ನಡದ ಸಾಹಿತ್ಯ ಮಹನೀಯರನ್ನು ನೋಡಿ ..
ಹೀಗೆ information ಕೊಡುತ್ತಿರಿ...

Guru

ಪಾಚು-ಪ್ರಪಂಚ said...

ಹಾಯ್ ಮಲ್ಲಿಕಾರ್ಜುನ್,

ನಿಮಗೆ ಅಂತರಾಷ್ಟ್ರೀಯ ಪುರಸ್ಕಾರ ಸಂದ ಬಗ್ಗೆ "ಕೆಂಡಸಂಪಿಗೆ" ನಲ್ಲಿ ಓದಿದೆ. ನಿಮ್ಮ ಈ ಸಾಧನೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಸಾಧನೆ ಹೀಗೆ ಮುಂದುವರಿಯುತ್ತಿರಲಿ...!
ಹೊಸ ವರ್ಷದ ಶುಭಾಶಯಗಳು...!!

ಪ್ರಶಾಂತ್ ಭಟ್

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಕಾಂತಾ ಮೇಡಂ,
ನಾನೂ ನಿಮ್ಮಂತೆ ಗಣೇಶಯ್ಯ ಅವರ ಅಭಿಮಾನಿ. ಅವರ ಮೊದಲ ಪುಸ್ತಕ "ಕನಕ ಮುಸುಕು" ಓದಿ GKVK ಗೆ ಹೋಗಿ ಅವರ ಬಳಿ ಹಸ್ತಾಕ್ಷರ ಪಡೆದಿದ್ದೆ.
ಬಿ.ಆರ್.ಎಲ್. ಬಗ್ಗೆ ಹೇಳಿರುವ ಮಾತು ಜೋಗಿಯವರದ್ದು!
ಧನ್ಯವಾದಗಳು.