Tuesday, March 10, 2009

ಚಿತ್ತಾಕರ್ಷಕ ಚಿಟ್ಟೆ

"ಕಾರೆಹಣ್ಣುಗಳ ಫೋಟೋ ತೆಗೀತೀರಾ? ಹಾಗೇ ಒಂದಷ್ಟು ಮನೆಗೆ ತರೋಣ ಬನ್ನಿ" ಎಂದು ಸ್ನೇಹಿತ ನಾಗಭೂಷಣ್ ಅವರ ಹಳ್ಳಿ ಪಕ್ಕದಲ್ಲಿದ್ದ ಪೊದೆಗಳ ಮಧ್ಯೆ ನನ್ನನ್ನು ಕರೆದೊಯ್ದರು. ಕಾರೆ ಹಣ್ಣಿನ ಫೋಟೋ ತೆಗೆದು ಕವರಿನೊಳಕ್ಕೆ ಹಳದಿ ಹಣ್ಣುಗಳನ್ನು ತುಂಬುತ್ತಿದ್ದಾಗ, ಆ ಮುಳ್ಳಿನ ಗಿಡಕ್ಕೆ ಹಬ್ಬಿದ ಬಳ್ಳಿಯ ಮೇಲೆ ಹುಳುವೊಂದು ಕಾಣಿಸಿತು.
ಚಾಕೊಲೇಟ್ ಬಣ್ಣದಲ್ಲಿದ್ದ ಅದರ ಮೈಮೇಲೆ ಕೇಸರಿ ಬಣ್ಣದ ಆಂಟೆನಾಗಳು. "ಇದು ಯಾವುದೋ ಚಿಟ್ಟೆಯಾಗುತ್ತೆ. ಮನೆಗೆ ತೆಗೆದುಕೊಂಡು ಹೋಗ್ತೀನಿ" ಎಂದು ಹೇಳಿ ಹುಶಾರಾಗಿ ಬಳ್ಳಿ ಸಮೇತೆ ಕತ್ತರಿಸಿಕೊಂಡೆ. ಆ ಬಳ್ಳಿಯನ್ನು ನೋಡಿದ ನಾಗಭೂಷಣ್, "ಇದು ಈಶ್ವರೀಬಳ್ಳಿ ಕಣ್ರಿ. ಇದೊಂದು ಔಷಧೀಯ ಸಸ್ಯ. ಆದರೆ ಏತಕ್ಕೆ ಬಳಸುತ್ತಾರೆ ಅಂತ ಮಾತ್ರ ಗೊತ್ತಿಲ್ಲ" ಅಂದರು. ಅದನ್ನು ತಂದು ಡಬ್ಬದಲ್ಲಿಟ್ಟೆ. ಒಂದು ದಿನಕ್ಕೇ ಆ ಬಳ್ಳಿ, ಎಲೆ ಬಾಡಿದಂತಾಯಿತು. ಅದಕ್ಕಾಗಿ ಮಾರನೇ ದಿನವೂ ಹುಳಕ್ಕೆ ಮೇವು ತರಲು ಹೋದೆ.
ಆಗ ಇನ್ನೊಂದು ಹುಳ ಸಿಕ್ಕಿತು. ಪ್ರತಿ ದಿನವೂ ಎಲೆ ತರುವುದು ಮುಖ್ಯ ಕೆಲಸವಾಯಿತು.

ಒಂದು ದಿನ ನೋಡಿದರೆ, ಈ ಹುಳಗಳಲ್ಲಿ ಒಂದು ಕೋಶಾವಸ್ಥೆಗೆ ಹೋಗಿದೆ, ಇನ್ನೊಂದು ಕೋಶಾವಸ್ಥೆಗೆ ಹೋಗುವ ತಯಾರಿಯಲ್ಲಿದೆ. ಅದರ ಫೋಟೋ ತೆಗೆದೆ.
ನಂತರ ಒಂದು ವಾರಕ್ಕೆ ಅದರ ಹೆರಿಗೆ. ಕೋಶದಿಂದ ಹೊರಬಂದ ಮೇಲಷ್ಟೇ ನನಗೆ ತಿಳಿದದ್ದು ಅದು ಕ್ರಿಮ್ಸನ್ ರೋಸ್ ಚಿಟ್ಟೆಯೆಂದು.
ನಿರಂತರವಾಗಿ ಪ್ರಕೃತಿಯ ಸೆರಗಲ್ಲಿ ನಡೆಯುವ ಈ ರೂಪಾಂತರ ಕ್ರಿಯೆಯನ್ನು ನೋಡಿ ಅನುಭವಿಸುವುದು ರೋಚಕ. ಇದನ್ನು ಚಿತ್ರಗಳನ್ನಾಗಿಸುವುದು ಸವಾಲಿನ ಕೆಲಸ. ಅನೇಕ ಆಯುರ್ವೇದದ ಔಷಧಗಳ ಮೂಲವಸ್ತುವಾದ ಈ ಈಶ್ವರೀಬಳ್ಳಿಯನ್ನು ತಿಂದೇ ಜೀವಿಸುವುದರಿಂದ ಈ ಚಿಟ್ಟೆಗೆ ಇಷ್ಟೊಂದು ಬಣ್ಣಗಳಿವೆಯೋ ತಿಳಿಯದು. ಇಲ್ಲಿ ತಿಳಿದಿರುವುದು ಅಲ್ಪ. ತಿಳಿಯಬೇಕಿರುವುದು ಅಪಾರ.

41 comments:

Keshav.Kulkarni said...

ಫೋಟೋಗಳು ಅಧ್ಬುತ, ಅವುಗಳ ಜೊತೆ ಟೆಕ್ನಿಕಲ್ (ಷಟರ್ ಸ್ಪೀಡ್, ಲೆನ್ಸ್ ಇತ್ಯಾದಿ) ಗಳನ್ನೂ ಬರದರೆ, ನಮಗೆ ತುಂಬ ಉಪಯುಕ್ತ ಮಾಹಿತಿ ಸಿಕ್ಕಂತಾಗುತ್ತದೆ.

Ittigecement said...

ಮಲ್ಲಿಕಾರ್ಜುನ್....

ನಿಮ್ಮ ಈ ಚಿತ್ರ ಲೇಖನ ನೋಡಿ ಮೂಕನಾಗಿಬಿಟ್ಟೆ....!
ಅದ್ಭುತ.. ಫೋಟೊಗಳು..!

ಆ ಸುಂದರ ಫೋಟೊಗಳೇ ಸಾವಿರಾರು..
ಮಾತಾಡುತ್ತವೆ...!
ಪೂರಕವಾಗಿ ನಿಮ್ಮ ಚಂದದ ನಿರೂಪಣೆ...!

ನಿಮ್ಮ ಹೆಸರು ಬದಲಾಯಿಸುತ್ತಾ ಇರುವೆ..

"ಹುಡುಕಾಟದ ಮಲ್ಲಿಕಾರ್ಜುನ್.."..!

ಬೇಸರವಿಲ್ಲ ತಾನೆ...?

ನಿಮ್ಮ ಹುಡುಕಾಟಕ್ಕೆ ..
ನನ್ನದೊಂದು ಸಲಾಮ್...

ಮಲ್ಲಿಕಾರ್ಜುನ.ಡಿ.ಜಿ. said...

ಕೇಶವ್ ಅವರೆ,
ಚಿಟ್ಟೆ Macro subject. ಇದನ್ನು macro lens ಬಳಸಿ ಫೋಟೋ ತೆಗೆಯುತ್ತೇನೆ. ನನ್ನ ಬಳಿ sigma 105mm macro lens ಇದೆ. Aperture mode ನಲ್ಲಿ , F11 ಅಥವಾ F13 ಇಟ್ಟುಕೊಂಡು ತೆಗೆದಿದ್ದೇನೆ.

Unknown said...

ಫೋಟೋಗಳಂತೂ ಅದ್ಭುತವಾಗಿವೆ. ನಿರ್ಜೀವ ಕ್ಯಾಮೆರಾ ಏನೋ ನಿಮ್ಮ ಮಾತು ಕೇಳುತ್ತೆ ಅಂದ್ರೆ, ಜೀವವಿರುವ ಕೀಟಗಳೂ ನಿಮ್ಮ ಮಾತು ಕೇಳುತ್ತವೆ! ಆ ಕೋಶವನ್ನು ಮನೆಗೆ ತರಬೇಕು ಎನ್ನಿಸಿತಲ್ಲ ನಿಮಗೆ, ನಿಮ್ಮ ಕುತೂಹಲಕ್ಕೆ, ಸಾಹಸಕ್ಕೆ ನೂರೊಂದು ನಮಸ್ಕಾರಗಳು.

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ್‌ ಅವರೆ, ನೀವು ತೆಗೆದಿರುವ ಛಾಯಾಚಿತ್ರಗಳು ನಿಜಕ್ಕೂ ಕುತೂಹಲದೊಂದಿಗೆ ಮನಸೂರೆಗೊಳ್ಳುತ್ತವೆ. ಚಿಟ್ಟೆಗಳ ಜೀವನಚರಿತ್ರೆಯನ್ನು ಶಾಲೆಯಲ್ಲಿ ಕೇವಲ ರೇಖಾಚಿತ್ರದ ಮೂಲಕ ಓದಿದ್ದ ನೆನಪು. ಆದರೆ ಇಲ್ಲಿ ನೈಜವಾಗಿವೆ. ಧನ್ಯವಾದಗಳು.

guruve said...

ಮಲ್ಲಿಕಾರ್ಜುನ ರವರೆ,
ಅತ್ಯದ್ಭುತ ಫೋಟೋಗಳು. ನಿಮ್ಮ ಈ ಪ್ರಯೋಗಕ್ಕೆ/ಸಾಹಸಕ್ಕೆ ಮೆಚ್ಚಿದೆ. ಕಥೆ ಓದುತ್ತಾ ಇದ್ದಾಗ, ತೇಜಸ್ವಿ ಯವರ ’ಸುಷ್ಮಿತಾ ಮತ್ತು ಹಕ್ಕಿ ಮರಿ’ ನೆನಪಿಗೆ ಬರ್ತಾ ಇತ್ತು.

ರುಚಿಕರವಾದ ಕಾರೆ ಹಣ್ಣನ್ನು ಕೂಡ ನೆನಪಿಸಿದ್ರಿ. ತಿಂದು ವರ್ಷಗಳೇ ಆಯಿತು!

ವಿನುತ said...

ಅದೆಷ್ಟು ಹೊಸತನ ಇದೆ ನಿಮ್ಮ ಬ್ಲಾಗಿನಲ್ಲಿ!!! ಮೂಕವಿಸ್ಮಿತಳಾಗದಿರಲು ಸಾಧ್ಯವೇ ಇರಲಿಲ್ಲ. ಕಾರೆಹಣ್ಣಿನ ನೆನಪಿನೊಂದಿಗೆ, ಚಿಟ್ಟೆಯ ಸೌಂದರ್ಯದೊಂದಿಗೆ, ವಿವರಣೆಯ ಮಾಹಿತಿಯೊಂದಿಗೆ, ಪ್ರಕೃತಿಯ ಸೊಬಗಿನೊಂದಿಗೆ, ನಿಮ್ಮ ಕ್ಯಾಮೆರ ಹಾಗೂ ಕಲೆಯ ಕುಶಲತೆಯೊಂದಿಗೆ ಹೊಸದೊಂದು ಲೋಕಕ್ಕೆ ಕರೆದೊಯ್ದಿದ್ದೀರಿ. ಹೃತ್ಪೂರ್ವಕ ಅಭಿನಂದನೆಗಳು.

ಹರೀಶ ಮಾಂಬಾಡಿ said...

BEST..!

Srinidhi said...

ಅದ್ಭುತ ಚಿತ್ರಗಳು! ಆ ಹುಳುವನ್ನು ಮನೆಗೆ ತಂದು ಸಾಕಿ ಸಲಹಿದ ನಿಮ್ಮ ಕುತೂಹಲ ಕೂಡ ಸೂಪರ್ :)

PaLa said...

"ಕ್ರಿಮ್ಸನ್ ರೋಸ್" -ಸೂಪರ್ ಚಿಟ್ಟೆ, ಲಾರ್ವಾ, ಪ್ಯೂಪ, ಚೆಟ್ಟೆಗಳನ್ನೊಳಗೊಂಡ ಒಳ್ಳೆಯ ಚಿತ್ರ ಸಂಗ್ರಹ.

ತೇಜಸ್ವಿನಿ ಹೆಗಡೆ said...

ಮಲ್ಲಿಕಾರ್ಜುನ ಅವರೆ,

ಅದ್ಭುತ ಫೋಟೋಗಳು. ಚಿಟ್ಟೆಯ ರಂಗಂತೂ ಮನಸೂರೆಗೊಂಡಿತು. ತುಂಬಾ ಧನ್ಯವಾದಗಳು.
ಇಂತಹ ಉತ್ತಮ ಫೋಟೋಗಳನ್ನು ಮಾಹಿತಿಗಳನ್ನು ಕೊಡುತ್ತಿರಿ.

ಇನ್ನು ಈಶ್ವರಿ ಬಳ್ಳಿಯ ಕುರಿತು ಕಿರು ಮಾಹಿತಿ ಇಲ್ಲಿದೆ. ಹೆಚ್ಚಿನ ಮಾಹಿತಿಗಳು ಬೇಕಿದ್ದರೆ ತಿಳಿಸಿ.

ಈಶ್ವರಿ ಬಳ್ಳಿ(Aristolochia Indica)

ಸಂಸ್ಕೃತದಲ್ಲಿ ಇದನ್ನು ನಕುಲಿ, ರುದ್ರಜಿಟಾ ಎನ್ನುತ್ತಾರೆ.

ಇದರ ಉಪಯೋಗಗಳು ಹಲವಾರು. ಇದನ್ನು ಹಳೆಯ ಜ್ವರ, ಕೆಮ್ಮು, ಮಲಬದ್ಧತೆ, ಮೂಲವ್ಯಾಧಿ, ವಿಷಮ ಜವರ, ಸನ್ನಿಜ್ವರ, ದೃಷ್ಟಿ ದೋಷ ಪರಿಹಾರ ಮುಂತಾದ ಅನಾರೋಗ್ಯಗಳಲ್ಲಿ ಬಳಸುತ್ತಾರೆ. ಬಹಳ ಪರಿಣಮಕಾರಿಯೂ ಹೌದು.

ಇನ್ನೊಂದು ಪ್ರಮುಖ ಉಪಯೋಗವೇನೆಂದರೆ, ಹಾವಿನ ವಿಷಕ್ಕೆ ಇದನ್ನು ಬಳಸುತ್ತಾರೆ. ಸರ್ಪ ಕಚ್ಚಿದಲ್ಲಿ, ಹಸೀ ಎಲೆಗಳನ್ನು ಚೆನ್ನಾಗಿ ಜಜ್ಜಿ ಕಷಾಯಮಾಡಿ ಕುಡೀಸಿದರೆ ವಿಷ ಇಳಿಯುವುದು.

shivu.k said...

ಮಲ್ಲಿಕಾರ್ಜುನ್....

ಕ್ರಿಮ್ಸನ್ ರೋಸ್ ಚಿಟ್ಟೆಯ ಸಂಪೂರ್ಣ ಜೀವನವನ್ನು ಚಿತ್ರಗಳ ಸಮೇತ ಚೆನ್ನಾಗಿ ವಿವರಿಸಿದ್ದೀರಿ....ತೆಗೆಯುವಾಗಿನ ಅನುಭವಗಳು ನಮಗೆ ತುಂಬಾ ಖುಷಿಕೊಡುತ್ತವೆ ಅಲ್ಲವೇ....
ಚಿತ್ರಗಳು ತಾಂತ್ರಿಕವಾಗಿ ತುಂಬಾ ಚೆನ್ನಾಗಿವೆ...
ಮತ್ತೆ ನಿಮ್ಮ ಈ ಲೇಖನವನ್ನು ನೋಡಿದ ನಾನು ಇಂಥದೇ ಪ್ರಯೋಗ ಮಾಡಿದ ಚಿಟ್ಟೆಗಳ ಬಗ್ಗೆ ಚಿತ್ರ ಸಮೇತ ಬರೆಯಬೇಕೆಂಬ ಆಸೆಯಾಗುತ್ತಿದೆ...ಸಾಧ್ಯವಾದರೆ ಬೇಗ ಬರೆಯುತ್ತೇನೆ....ಸ್ಫೂರ್ತಿ ನೀಡಿದ್ದಕ್ಕೆ ಥ್ಯಾಂಕ್ಸ್...

sunaath said...

ನಾನು ಚಿಕ್ಕಂದಿನಲ್ಲಿ ಈ ಹಣ್ಣುಗಳನ್ನು ತಿಂದಿದ್ದು, ಈಗ ನೋಡಲೂ ಸಹ ಸಿಕ್ಕಿರಲಿಲ್ಲ. ನಿಮ್ಮ ಕೃಪೆಯಿಂದ ಕಣ್ಣಿಗೆ ಬಿದ್ದಂತಾಯ್ತು. ಇನ್ನು ಚಿಟ್ಟೆಯ ಅವಸ್ಥಾಂತರಗಳ ನಿಖರ ಹಾಗೂ ಸುಂದರ ಫೊಟೋ ಕೊಟ್ಟಿರುವಿರಿ. ನಿಮಗೆ ಅನೇಕ ಧನ್ಯವಾದಗಳು.

PARAANJAPE K.N. said...

ಮಲ್ಲಿಯವರೇ
ನಿಮ್ಮ ಛಾಯಾಗ್ರಹಣ ಶಕ್ತಿಗೆ, ಶ್ರದ್ಧೆಗೆ ನೂರು ನಮಸ್ಕಾರ. ಇದು ಎಲ್ಲರಿಗೆ ನಿಲುಕುವ೦ಥಾದ್ದಲ್ಲ. ಬಹಳ ಚೆನ್ನಾಗಿವೆ ಚಿತ್ರಗಳು ಮತ್ತು ಅದಕ್ಕೆ ತಕ್ಕ ಲೇಖನ.

ಮಲ್ಲಿಕಾರ್ಜುನ.ಡಿ.ಜಿ. said...

ಕ್ಷಣ..ಚಿಂತನೆ..ಚಂದ್ರಶೇಖರ್ ಅವರೆ,
ನಾನೂ ಶಾಲೆಯಲ್ಲಿ ಓದುವಾಗ metamorphosis ಬಗ್ಗೆ ತಲೆಗೆ ಹೋಗಿರಲಿಲ್ಲ. ಫೋಟೋಗ್ರಫಿಯಿಂದಾಗಿ ಇದನ್ನು ಆನಂದಿಸುತ್ತಿರುವೆ.
ನಿಮ್ಮ ಬ್ಲಾಗೂ ಚೆನ್ನಾಗಿದೆ. ಆದರೆ comments ಬರೆಯಲು ಗೊತ್ತಾಗಲಿಲ್ಲ.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ಎಷ್ಟಾದರೂ ನಾವು ರೇಷ್ಮೆ ಊರಿನವರಲ್ಲವೇ! ಹಾಗಾಗಿ ಹುಳು ಮೇಯಿಸೋದು, ಗೂಡು ಕಟ್ಟಿಸುವುದು, ಚಿಟ್ಟೆ ಮಾಡುವುದು ಕರಗತವಾಗಿರುತ್ತೆ!! ಆದರೂ ಸಿಕ್ಕಸಿಕ್ಕ ಹುಳುಗಳನ್ನು ಮನೆಗೆ ತಂದು ಪಜೀತಿ ಮಾಡಿಕೊಂಡದ್ದೂ ಇದೆ. ಅದರ ಬಗ್ಗೆ ಮುಂದೆಂದಾದರೂ ಬರೆಯುವೆ.

ಮಲ್ಲಿಕಾರ್ಜುನ.ಡಿ.ಜಿ. said...

ಗುರುಪ್ರಸಾದ್ ಅವರೆ,
ತೇಜಸ್ವಿಯವರು ನನಗೂ ಸ್ಫೂರ್ತಿ.
ಕಾರೆಹಣ್ಣು ಈಗ ಸಿಗುವುದು ಕಡಿಮೆ. ನಾವು ಶಾಲೆ ಓದುವಾಗ ಕಾರೆಹಣ್ಣು,ಮಜ್ಜಿಗೆಹಣ್ಣು,ಬಿಕ್ಕೆಹಣ್ಣು,ಬೇಲದಹಣ್ಣು...ಇನ್ನೂ ನಾನಾ ವಿಧದ ಹಣ್ಣುಗಳನ್ನು ತಿನ್ನುತ್ತಿದ್ದೆವು. ಈಗ ಕಡಿಮೆಯಾಗಿವೆ..ಮುಂದೆ?

Anonymous said...

ಫೋಟೋಗಳು ತುಂಬಾ ಚೆನ್ನಾಗಿವೆ. :-)

ಚಂದ್ರಕಾಂತ ಎಸ್ said...

ನಿಮ್ಮ ಫೋಟೋಗಳನ್ನು ನೋಡಿ ಮೂಕವಿಸ್ಮಿತಳಾದೆ. ಹಿಂದೊಮ್ಮೆ ನೀವು ಸುಧಾದಲ್ಲಿ ಹಾಕಿದ್ದ ಚಿಟ್ಟೆಗಳ ಚಿತ್ರ ನೆನಪಿಗೆ ಬಂತು.
ಬಿ.ಎ. ವಿದ್ಯಾರ್ಥಿಗಳಿಗೆ ಏರೋಪ್ಲೇನ್ ಚಿಟ್ಟೆ ಮಾಡಿದ್ದಾಗ ಆ ಚಿತ್ರಗಳನ್ನು ತೋರಿಸಿದ್ದೆ. ಈಗ ಈ ಚಿತ್ರಗಳೂ ಸಿಕ್ಕವು.

ನಿಮ್ಮಂತಹ ಸಂಯಮ ಪೂರ್ಣ , ಕುತೂಹಲಿ ಫೋಟೋಗ್ರಾಫರ್ ಗಳಿಂದ ನಮ್ಮ ಜ್ಞಾನ ಹೆಚ್ಚುತ್ತಿದೆ. ಈಶ್ವರಿ ಬಳ್ಳಿಯ ವಿವರಗಳನ್ನು ಕೊಟ್ಟ ತೇಜಸ್ವಿನಿಯವರಿಗೂ ಈ ಮೂಲಕ ಧನ್ಯವಾದಗಳು.

ಕಾರ್ತಿಕ್ ಪರಾಡ್ಕರ್ said...

ಸೂಪರ್..ಚಿಟ್ಟೆಯಾಗುವ ಪ್ರಕ್ರಿಯೆಯನ್ನು ತುಂಬಾ ಚೆನ್ನಾಗಿ, ತಾಳ್ಮೆಯಿಂದ ಸೆರೆ ಹಿಡಿದಿದ್ದೀರಾ....ಒಳ್ಳೆಯ ಚಿತ್ರ ಗುಚ್ಚ ಕೊಟ್ಟದ್ದಕ್ಕೆ ಧನ್ಯವಾದ

mukhaputa said...

parisaradalli catterpillerninda chitte aaguvudu adbutavaada kriye ,yestu vichitra haagu vishishtavaada sangati alva!adannu nimma camera kaanininda namage torisidakke dhanyvaadagalu. idannella kanda neeve dahnya yelladikinta eesari nimma bhravanige binnavenisitu

ಮನಸ್ವಿ said...

ಸುಂದರ ಛಾಯಾಗ್ರಹಣ ಹಾಗೂ ನಿರೂಪಣೆ ಇಷ್ಟವಾಯಿತು.. ನಿಮ್ಮ ಬ್ಲಾಗಿನಲ್ಲಿರುವ ಚಿತ್ರ ಲೇಖನಗಳು ಚನ್ನಾಗಿವೆ...

ಮಲ್ಲಿಕಾರ್ಜುನ.ಡಿ.ಜಿ. said...

ವಿನುತ ಮೇಡಂ,
ಧನ್ಯವಾದಗಳು. ನಿಮಗೂ ಕಾರೆಹಣ್ಣಿನ ಸವಿ(ಬಾಲ್ಯ) ನೆನಪಾಯಿತಾ? ಹಾಗಿದ್ದರೆ ನಾನು ಬರೆದದ್ದು ಸಾರ್ಥಕ.

ಮಲ್ಲಿಕಾರ್ಜುನ.ಡಿ.ಜಿ. said...

ಹರೀಶ್ ಮಾಂಬಾಡಿಯವರೆ,
Thanks..!

ಟಿ.ಜಿ.ಶ್ರೀನಿಧಿ ಯವರೆ,
ಈ ರೀತಿ ಹುಳುಗಳನ್ನು ಮನೆಗೆ ತಂದು ಕೆಲವೊಮ್ಮೆ ಪೇಚಿಗೂ ಸಿಲುಕಿದ್ದೇನೆ! ಅದರ ಬಗ್ಗೆ ಮುಂದೆಂದಾದರೂ ಬರೆಯುವೆ.

ಮಲ್ಲಿಕಾರ್ಜುನ.ಡಿ.ಜಿ. said...

ಪಾಲಚಂದ್ರ,
ಥ್ಯಾಂಕ್ಸ್.

ತೇಜಸ್ವಿಸಿ ಹೆಗಡೆಯವರೆ,
ಈಶ್ವರೀ ಬಳ್ಳಿ ಬಗ್ಗೆ ಮಾಹಿತಿಗೆ ತುಂಬಾ ಥ್ಯಾಂಕ್ಸ್.
ಇಷ್ಟೊಂದು ಔಷಧ ಗುಣಗಳನ್ನು ಹೊಂದಿರುವ ಈಶ್ವರೀಬಳ್ಳಿಯನ್ನೇ ತಿನ್ನುವ ಈ ಚಿಟ್ಟೆಗಳ ಮಹತ್ವ ಜೀವಲೋಕದಲ್ಲಿ ಇನ್ನೇನಿದೆಯೋ?!

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಚಿತ್ರಗಳನ್ನು ತೆಗೆಯುವಾಗ ತುಂಬಾ ಖುಷಿಕೊಡುತ್ತದೆ.
ನಿಮ್ಮ ಅನುಭವಗಳನ್ನೂ ಬೇಗ ಬರೆಯಿರಿ.

ಸುನಾತ್ ಸರ್,
ಕಾರೆಹಣ್ಣು ಅಂದ ತಕ್ಷಣ ನಮ್ಮ ಬಾಲ್ಯವೇ ನೆನಪಾಗುವುದು. ಅಲ್ಲವೇ? ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ಜ್ಯೋತಿ ಮೇಡಂ,
ತುಂಬಾ ಥ್ಯಾಂಕ್ಸ್.

ಚಂದ್ರಕಾಂತಾ ಮೇಡಮ್,
ನನ್ನ ಬಳಿ ಇನ್ನೂ ಹಲವಾರು ಚಿಟ್ಟೆ,ಕೀಟಗಳ ಫೋಟೋ ಇವೆ. ನಿಮ್ಮ ಪಾಠಕ್ಕೆ ಸಹಾಯವಾಗುವುದಾದರೆ ಕೊಡುತ್ತೇನೆ.

ಮಲ್ಲಿಕಾರ್ಜುನ.ಡಿ.ಜಿ. said...

ಕಾರ್ತಿಕ್, ಅಜಿತ್ ಮತ್ತು ಮನಸ್ವಿ ಯವರಿಗೆ ಧನ್ಯವಾದಗಳು

ಪಾಚು-ಪ್ರಪಂಚ said...

ಮಲ್ಲಿಕಾರ್ಜುನ್ ಅವರೇ,

ಚಂದದ ಖುಷಿಕೊಡುವ ಚಿತ್ರಗಳು, ಅಷ್ಟೇ ಅಂದದ ಬರವಣಿಗೆ.
ನಿಮ್ಮ ತಾಳ್ಮೆ, ಹೊಸತನಕ್ಕೆ ಅಭಿನಂದನೆಗಳು.

-ಪ್ರಶಾಂತ್ ಭಟ್

Shankar Prasad ಶಂಕರ ಪ್ರಸಾದ said...

ಸೂಪರ್ರ್..ಮುಂಚೆ ನಾವುಗಳು ಪ್ರೈಮರಿ ಸ್ಕೂಲಿನಲ್ಲಿ ಓದುವಾಗ, ಈ ಥರ ಲಾರ್ವ ಹಾಗು PUPA ಗಳನ್ನೂ ತಂದು ಮನೆಯಲ್ಲಿ ಇಟ್ಕೊತಾ ಇದ್ವಿ. ಪುನಃ ಆ ನೆನಪುಗಳನ್ನು ಮರುಕಲಿಸಿದ್ದಕ್ಕೆ ಥ್ಯಾಂಕ್ಸ್.
ಅಂದಹಾಗೆ ಯಾವ ಕ್ಯಾಮರ ಉಪಯೋಗಿಸ್ತೀರ ನೀವು ? Canon EOS ಅನ್ಕೋತೀನಿ. ನಂದೂ ಕೂಡ ಅದೇನೇ.
ಕಟ್ಟೆ ಶಂಕ್ರ

Anonymous said...

ನಮಸ್ತೇ ಮಲ್ಲಿಕಾರ್ಜುನ ಸರ್
ಛಾಯಚಿತ್ರ ಬರಹ ಎರಡು ಅಧ್ಬುತ ಇಂತಹ ವಿಷಯಗಳನ್ನ ಸೆರೆ ಹಿಡಿಯಬೇಕು ಅಂದ್ರೆ ವೀಪರೀತ ತಾಳ್ಮೆ ಅಗತ್ಯ ತಮಗೆ ತುಂಬಾ ತಾಳ್ಮೆ ಇದೆ ಎಂದು ಇದರಿಂದನೇ ಗೋತ್ತಾಗುತ್ತೆ

ಮಲ್ಲಿಕಾರ್ಜುನ.ಡಿ.ಜಿ. said...

ಶಂಕರ್ ಅವರೆ,
ನನ್ನ ಬಳಿ ಇರುವುದು canon 30D ಕ್ಯಾಮೆರ.

ಪ್ರಶಾಂತ್ ಭಟ್ ಅವರೆ,
ಧನ್ಯವಾದಗಳು.

ರೋಹಿಣಿಯವರೆ,
ಒಳ್ಳೆಯ ಛಾಯಾಚಿತ್ರ ತೆಗೆಯಲು ತಾಳ್ಮೆ ಬೇಕೇ ಬೇಕು.

Shree said...

ಫೋಟೋಬ್ಲಾಗಿಂಗ್ ಮಾಡುವುದಿದ್ದರೆ http://aminus3.com ಉಪಯೋಗಿಸಿ ಸರ್. ಅಥವಾ, http://mainsandcrosses.blogspot.comನಲ್ಲಿರುವ ಹಾಗೆ ನಿಮ್ಮ ಬ್ಲಾಗರ್ ಟೆಂಪ್ಲೇಟ್ ಕಸ್ಟಮೈಸ್ ಮಾಡಿ, ಫೋಟೋದ ಉದ್ದಗಲವನ್ನು ಹೆಚ್ಚಿಸಿ. ಆಗ ಫೋಟೋ ದೊಡ್ಡದಾಗಿ ನೋಡಲು ಚೆನ್ನಾಗಿರುತ್ತದೆ.

ಕೃಪಾ said...

ನಮಸ್ತೆ..... ಮಲ್ಲಿಯಣ್ಣ........

೪ ದಿನದಿಂದ..... ಬ್ಲಾಗ್ ಲೋಕ...... ನನ್ನ ಪಾಲಿಗೆ..... ಮುಚ್ಚಿ ಹೋಗಿತ್ತು.......

ಇವತ್ತು ಬಂದು ನೋಡಿದ್ರೆ....... ಅದ್ಭುತ ಲೋಕ.......

ನಿಜಕ್ಕು ನೀವೊಬ್ಬ..... ಅದ್ಭುತ...... ಮತ್ತು........ ನಿಸರ್ಗ.. ಪ್ರೇಮಿ...... ಕಲಾಕಾರ......!!!

ಪ್ರಕೃತಿನ ನಾವು ಪ್ರೀತಿಸಿದಾಗ ಅದೆಷ್ಟೊಂದನ್ನು ನಿಮ್ಮ ಮುಂದೆ ಬಿಚ್ಚಿಡುತ್ತೆ........ ಅಲ್ವಾ.....?

ಅದನ್ನು ತುಂಬಾ ಸುಂದರವಾಗಿ ನಮಗೆ ತೋರಿಸಿದ್ದೀರ......

ಆಲಾಪಿನಿ said...

sir, its amazzzzzzzing!

guruve said...

indina "vijaya karnaaTaka"dalli, ee nimma chitra lEkhanavannu matte odi aanandiside!

ಮಲ್ಲಿಕಾರ್ಜುನ.ಡಿ.ಜಿ. said...

ಶ್ರೀ ಯವರೆ ನಿಮ್ಮ ಸಲಹೆಯನ್ನು ಪರಿಶೀಲಿಸುವೆ.ಥ್ಯಾಂಕ್ಸ್.

ಕೃಪಾ ಮೇಡಂ, ಧನ್ಯವಾದಗಳು . ನಮ್ಮ ಬಯಲುಸೀಮೆಯಲ್ಲೇ ಈ ತರಹದ ಚಿಟ್ಟೆಗಳಿರಬೇಕಾದರೆ ನಿಮ್ಮ ಕೊಡಗಿನಲ್ಲಿ ಇನ್ನೆಷ್ಟು ವಿವಿಧ ಹಕ್ಕಿ ಚಿಟ್ಟೆಗಳಿರುತ್ತವೆ. ನೀವು ಅದೃಷ್ಟವಂತರು.

ಮಲ್ಲಿಕಾರ್ಜುನ.ಡಿ.ಜಿ. said...

ಗುರುಪ್ರಸಾದ್ ಅವರೆ,
ತುಂಬಾ ಥ್ಯಾಂಕ್ಸ್. ನಾನು ಬೆಂಗಳೂರು ವಿಜಯವನ್ನು ಇಂಟರ್ನೆಟ್ ನಲ್ಲಿ ನೋಡಿದೆ. ನಮ್ಮ ಊರಿಗೆ ಅದು ಬರಲ್ವಲ್ಲ.
ನನ್ನ ಸ್ನೇಹಿತರೊಬ್ಬರಿಗೆ ಆ ಪೇಪರ್ ತೆಗೆದಿಡಲು ಹೇಳಿರುವೆ.

ಮಲ್ಲಿಕಾರ್ಜುನ.ಡಿ.ಜಿ. said...

ಶ್ರೀದೇವಿ ಅವರೆ,
Thankssssss

Veena DhanuGowda said...

Hello,

Its Awesome......... No words :)

Unknown said...

ITS VERY AMAZING Sir