Monday, January 19, 2009

ಕೆಮ್ಮಣ್ಣುಗುಂಡಿಯ ಉಸಿರು - ಹಸಿರು ಶೋಲಾ

ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ ನಮ್ಮ ಪ್ರಮುಖ ಗಿರಿಧಾಮಗಳಲ್ಲೊಂದು. ರಮ್ಯನೋಟಗಳ ದರ್ಶನ ಮಾಡಿಸುವ ಗಿರಿಶಿಖರಗಳು, ನಿತ್ಯಹರಿದ್ವರ್ಣ ಶೋಲಾ ಅರಣ್ಯಗಳು ಮತ್ತು ಜಲಪಾತಗಳು ಇಲ್ಲಿನ ಪ್ರಮುಖ ಆಕರ್ಷಣೆ.
ಶೋಲಾಕಾಡುಗಳು ಹುಲ್ಲುಗಾವಲಿನಿಂದ ಸುತ್ತುವರಿದ ದ್ವೀಪಗಳು. ತಮ್ಮದೇ ಆದ ಜೀವವೈವಿಧ್ಯದಿಂದ ತುಂಬಿರುವ ಶೋಲಾ ಕಾಡುಗಳು ಪಶ್ಚಿಮ ಘಟ್ಟಗಳ ವಿಶಿಷ್ಟ ಜೀವಾಶ್ರಯ.
ಕೆಮ್ಮಣ್ಣುಗುಂಡಿಯಲ್ಲಿರುವ "ಶಂಕರ ಶೋಲಾ" ಅತ್ಯುತ್ತಮ ಶೋಲಾ ಕಾಡೆಂಬ ಕೀರ್ತಿಗೆ ಪಾತ್ರವಾಗಿದೆ. ಸದಾ ಹಸಿರಿರುವ ಈ ಕಾಡಿನಲ್ಲಿ ಗಗನಚುಂಬಿ ವೃಕ್ಷಗಳು ಅಷ್ಟಾಗಿರುವುದಿಲ್ಲ. ಚಿಕ್ಕಚಿಕ್ಕ ಮರಗಳು ಕೊಂಬೆಗಳನ್ನು ಚಾಚಿ ಕೊಡೆಯಂತೆ ಹರಡಿದ ಮೇಲ್ಚಾವಣಿ ಈ ಕಾಡಿನ ಮುಖ್ಯ ಲಕ್ಷಣ.
ಮಾನವನ ದುರಾಸೆಯ ಫಲವಾಗಿ ಇತರೆ ಕಾಡುಗಳಂತೆ ಹಿಂದೊಮ್ಮೆ ದಟ್ಟವಾಗಿ ಹರಡಿದ್ದ ಶೋಲಾ ಕಾಡುಗಳೂ ಕ್ಷೀಣಿಸತೊಡಗಿವೆ. ಗಣಿಗಾರಿಕೆಯಿಂದ ಸಮೃದ್ಢ ಶೋಲಾ ಅರಣ್ಯಕ್ಕೆ ಈಗಾಗಲೇ ಸಾಕಷ್ಟು ಪೆಟ್ಟುಬಿದ್ದಿದೆ. ಅಗ್ನಿಯ ಕೆನ್ನಾಲಿಗೆಗೆ ಪ್ರತಿವರ್ಷ ಶೋಲಾ ಅರಣ್ಯ ಬಲಿಯಾಗುತ್ತಿದೆ.
ಶೋಲಾ ಅರಣ್ಯದ ನಾಶದಿಂದ ಹವಾಮಾನದ ಮೇಲೆ ಗಂಭೀರ ಪರಿಣಾಮ ಬೀರುವುದರ ಜೊತೆಗೆ ನೀರಿನ ಆಸರೆಗೆ ತೀವ್ರ ಪೆಟ್ಟುಬೀಳುತ್ತದೆ.
ವೈವಿಧ್ಯಮಯ ಜೀವರಾಶಿಗೆ ನೆಲೆಯಾದ ನಿಸರ್ಗದ ವಿಶಿಷ್ಟ ಕೊಡುಗೆಗಳಲ್ಲಿ ಒಂದಾದ ಶೋಲಾ ಅರಣ್ಯದ ರಕ್ಷಣೆ ಮಾಡಬೇಕಾದುದು ಅತ್ಯಗತ್ಯ.
ಹಸಿರನ್ನು ಉಳಿಸುವತ್ತ ನಮ್ಮೆಲ್ಲರ ಹೆಜ್ಜೆ ಸಾಗಲಿ...

7 comments:

shivu.k said...

ಮಲ್ಲಿಕಾರ್ಜುನ್ ಫೋಟೋಗಳು ಚೆನ್ನಾಗಿವೆ....

Rajesh Manjunath - ರಾಜೇಶ್ ಮಂಜುನಾಥ್ said...

ಮಲ್ಲಿಕಾರ್ಜುನ ಸರ್,
ನಿಮ್ಮ ಫೋಟೋಗಳು ಅದ್ಭುತ, ಅವುಗಳ ಬಗ್ಗೆ ಮಾತನಾಡಲು ಸ್ವಲ್ಪವಾದರೂ ಅದರ ಗಂಧ ಗೊತ್ತಿರಬೇಕು, ನಾನು ಪ್ರತಿಕ್ರಿಯಿಸಲು ಪ್ರಯತ್ನಿಸಿದರೆ ತಪ್ಪಾಗಿ ಬಿಡುತ್ತದೆ. ನಿಮಗೆ ಚಿತ್ರವೊಂದಕ್ಕೆ ಮೊನ್ನೆ ಪ್ರಶಸ್ತಿ ಸಿಕ್ಕಿತ್ತು ಎಂದು ತಿಳಿಯಿತು(ಶಿವೂ ಸರ್ ಹೇಳಿದರು), ತುಂಬಾ ಸಂತೋಷವಾಯಿತು. ಅಭಿನಂದನೆಗಳು ನಿಮಗೆ.
-ರಾಜೇಶ್ ಮಂಜುನಾಥ್

Ittigecement said...

ಮಲ್ಲಿಕಾರ್ಜುನ್...

ನಾನು ನಿಮ್ಮ ಅಭಿಮಾನಿ...

ಅದ್ಭುತವಾದ ಛಾಯಗ್ರಾಹಕರು ನೀವು...!

ಒಂದೊಂದು ಫೋಟೊಗಳೂ...

ಒಂದೋಂದು.. ಕವನ..ಹೇಳುತ್ತವೆ...!

ನಿಮ್ಮ ವಿವರಣೆಯ ಭಾಷೆಯೂ ಚಂದ...!

ಅಭಿನಂದನೆಗಳು...

sunaath said...

ಒಳ್ಳೆಯ photography.

mukhaputa said...

mutthinaa haarada jotege mutthinanta aksharagalannu ponisiddeeri

GANADHAL said...

ಮಲ್ಲಿಕಾರ್ಜುನ್

'ಮಡಿಕೇರಿಯ ಮಡಿಲಿನಲ್ಲಿ ಅರಳಿದ ಚಿತ್ರಕಾವ್ಯ' ಸೊಗಸಾಗಿದೆ.
ಶ್ರೀಕಂಠ

Unknown said...

ಮಲ್ಲಿಕಾರ್ಜುನ್ ಅವರೆ ತುಂಬಾನೆ ಚೆನ್ನಾಗಿದೆ....ಫೋಟೋಗಳು......