Monday, September 8, 2008

ತೇಜಸ್ವಿಯವರ ಜನ್ಮದಿನ

ಇಂದು ಪೂರ್ಣಚಂದ್ರ ತೇಜಸ್ವಿ ಅವರ ಜನ್ಮ ದಿನ. ಗೆಳೆಯ ಅಜಿತ್.ಎಸ್.ಕೌಂಡಿನ್ಯ ಅವರ ಬಗ್ಗೆ ಕವನ ಬರೆದಿದ್ದಾನೆ. ೨೦೦೨ ರ ಏಪ್ರಿಲ್ ತಿಂಗಳಲ್ಲಿ ತೇಜಸ್ವಿಯವರ ಮನೆಗೆ ಹೋಗಿದ್ದಾಗ ಅವರ ಫೋಟೋ ತೆಗೆದಿದ್ದೆ. ನನ್ನ ಚಿತ್ರ, ಅಜಿತನ ಕವನ - ಇದು ತೇಜಸ್ವಿಯವರಿಗೆ ನಮ್ಮ ನುಡಿ-ಚಿತ್ರ ನಮನ.


ತೇಜಸ್ಸಿನ ತೇಜಸ್ವಿ

ಹಿಡಿದದ್ದು ಕೈಯಲ್ಲೊಂದು ಕೋವಿ
ಕುತ್ತಿಗೆಗೆ ನೇತುಬಿದ್ದದ್ದು ಕ್ಯಾಮೆರ
ಬಿಳಿ ಕುರುಚಲು ಈ ಗಡ್ಡಧಾರಿ
ಹಿಡಿದ ದಾರಿ ಶಿಕಾರಿ

ಅಲೆದಾಡುತ ಕಾಡೆಲ್ಲಾ
ಮುಂದೆ ಮುಂದೆ ಕಿವಿ
ಹಿಂದೆ ಗುರು ತೇಜಸ್ವಿ

ಮನೆ ಹಿಂದೆಯೇ ಇದ್ದ ಕೆರೆ
ಇವರಿಗೆ ಪಕ್ಷಿವೀಕ್ಷಣೆಯ ತಾಣ
ಭಾದ್ರಾ ನದಿ ದಂಡೆಯಲಿ
ಮೀನಿಗೆ ಗಾಳದ ಬಾಣ

'ನಿರುತ್ತರ'ದ ನಾಯಕ
ಕರ್ವಾಲೊ, ಪರಿಸರದ ಕಥೆ, ಮಾಯಾಲೋಕ,
ರಚಿಸಿದ್ದಾರೆ ಅದೆಷ್ಟೋ
ಕಥೆ, ಕಾದಂಬರಿ ನಾಟಕ

ಮೂಕಾಗಿದೆ ನೀವಿಲ್ಲದ ಮೂಡಿಗೆರೆ
ಎಷ್ಟು ಚಂದ ನೀವು ಮರಳಿ ಬಂದರೆ!

2 comments:

ನಾಗೇಶ ಹೆಗಡೆ said...

ಚೆನ್ನಾಗಿದೆ ಅಜ್ಜಿ ಸಾಲ ಕೊಟ್ಟ ಕತೆ. ಆದರೆ ಕಲ್ಲನ್ನು ಬಿಗಿಯಾಗಿ ಹಿಡಿದು ಅದು ನೆಲಮಟ್ಟದಲ್ಲಿಯೇ ಕೂರುತ್ತದೆಯೇ ಎಂಬುದರ ಬಗ್ಗೆ ವಿವರ ಕೊಟ್ಟಿದ್ದರೆ ಚೆನ್ನಾಗಿತ್ತು. ಅವು ಅದೇ ತಾನೆ ಗೊದಮೊಟ್ಟೆಯಿಂದ ಹೊರಬಂದು ಹೊಸ ರೆಕ್ಕೆಯನ್ನು ಒಣಗಿಸುತ್ತ ನನ್ನ ತೋಟದಲ್ಲಿರುವ ಪುಟ್ಟ ಟ್ಯಾಂಕ್ ಕಟ್ಟೆಗೆ ಆತುಕೊಂಡು ಕೂತಿರುವುದನ್ನು ನಾನು ನಡುರಾತ್ರಿಯಲ್ಲಿ ನೋಡಿದ್ದೇನೆ. ಆಗ ಅವನ್ನು ಸುಲಭವಾಗಿ ಹಿಡಿದು ಪಾರದರ್ಶಕ ಜಾಡಿಯಲ್ಲಿ ಹಾಕಿ ಮರುದಿನ ಎಲ್ಲೆಂದರಲ್ಲಿ ಇಟ್ಟು ಚಿತ್ತ ತೆಗೆಯಬಹುದು. ಗಂಡು ಹೆಣ್ಣು ತಮ್ಮ ಉದ್ದ ಬಾಲವನ್ನು ಕಮಾನಿನಂತೆ ಬೆಸೆದು ಮಿಲನದ ಬೆಸುಗೆಯಲ್ಲಿ ಮೈಮರೆತಿರುವ ಚಿತ್ರವನ್ನು ಡಿಜಿ ಹಾಕಿರುತ್ತಾರೆ ಎಂದು ಸ್ಕ್ರೋಲ್ ಮಾಡುತ್ತ ಹೋದರೆ ನಿರಾಸೆ ಕಾದಿತ್ತು. ಮುಂದೆಂದಾದರೂ ಅಂತ ಚಿತ್ರ ಸಿಕ್ಕರೆ ಬ್ಲಾಗಿಲಲ್ಲಿ ತಳ್ಳಿಬಿಡಿ. ವಿವರಣೆ ಚೆನ್ನಾಗಿದೆ. ನಮ್ಮ ಮಲೆನಾಡಿನ ಶಿರಸಿ ಕಡೆ ಇವಕ್ಕೆ 'ಪೀಟಿ' ಎನ್ನುತ್ತಾರೆ.
ತೆಳ್ಳನ್ನ ಉದ್ದನ್ನ ದೇಹದ ಇವು ಛಂಗೆಂದು ಜಿಗಿದು ವೇಗವಾಗಿ ಸಾಗುವುದನ್ನು ನೋಡಿದರೆ ಪೀಟಿ ಉಷಾ ನೆನಪೇ ಬರುತ್ತದೆ.
-ನಾಗೇಶ ಹೆಗಡೆ

Eshanye K P said...

ಇದು ತುಂಬಾ ಹಳೆಯ ಫೂಟೊ ! ಆ ದಿನಗಳನ್ನು ನೆನಪಿಗೆ ತರುತ್ತದೆ :( ಅಣ್ಣ ಎಂದೂ ವಾಚ್ ಕಟ್ಟಿದೊರಲ್ಲ, ಆದರೆ ಹಕ್ಕಿ ಫೊಟೊಗಳನ್ನು ನಾರ್ಮಲ್ SLR ಕ್ಯಾಮರಾದಲ್ಲಿ ತೆಗೆದು ಡಾರ್ಕ್ ರೂಂನಲ್ಲಿ ಡೆವೆಲೊಪ್ ಮಾಡ್ತಾ ಇದ್ದ ದಿನಗಳವು, ಅದಕ್ಕೆ ವಾಚ್ ಕಟ್ಟಿಕೊಳ್ತಾ ಇದ್ದರು.....