Sunday, September 21, 2008

ಮುನ್ನಾರ್ ನ ಮೋಹಕ ಭೂದೃಶ್ಯಗಳು

ದೂರದ ಬೆಟ್ಟದ ಮೇಲೆ ಮನೆ. ಮನೆಯ ಹಿಂದೆ ಗೆರೆ ಎಳೆದಂತಿರುವ ನೀಲಗಿರಿ ಮರಗಳು. ಬೆಳಗಿನ ೬-೩೦. ಅರುಣನ ಹೊಂಗಿರಣ ಇವುಗಳ ಮೇಲೆ ಸಿಂಪಡಿಸಿದಂತಿದ್ದ ದೃಶ್ಯಕಾವ್ಯ. ಈ ನಿಸರ್ಗದ ಕಲಾಕೃತಿ ಸೆರೆಹಿಡಿಯಬೇಕೆಂದಿದ್ದರೆ ಕೇರಳದ ಮುನ್ನಾರ್ ಗೆ ಬನ್ನಿ. ಚುಮು ಚುಮು ನಸುಕಿನಲ್ಲಿ ಹಾಸಿಗೆ ಬಿಟ್ಟು ಮೇಲೇಳುವುದು ತುಸು ತಡವಾದರೆ ಸೂರ್ಯ ಮೇಲೆದ್ದು ಕೆಲಸ ಕೆಡಿಸಿಬಿಡುತ್ತಾನೆ. ಎಲ್ಲೆಲ್ಲೂ ಬೆಟ್ಟಂಬೆಳಗು. ಪ್ರಕೃತಿ ನೀಡುವ ಕೆಲವೇ ಕ್ಷಣಗಳಲ್ಲಿ ನಾವು ಹುಷಾರಾಗಿ ಬೇಗ ಬೇಗ ಕ್ಯಾಮೆರಾದಲ್ಲಿ ಸೆರೆ ಹಿಡಿದಿಡಬೇಕಷ್ಟೆ.
ಮುನ್ನಾರ್ ನಲ್ಲಿ ಮೋಡಗಳು ಟಾರ್ಚ್ ರೀತಿ ಕೆಲಸ ಮಾಡುತ್ತವೆ. ಒಮ್ಮೆ ಒಂದು ಬೆಟ್ಟದ ಮೇಲೆ ಇನ್ನೊಮ್ಮೆ ಇನ್ನೊಂದು ಬೆಟ್ಟದ ಮೇಲೆ ಟಾರ್ಚ್ ಲೈಟ್. ದೇವೀಕುಲಂ ಬೆಟ್ಟದ ಮೇಲಿನ ದೇವಸ್ಥಾನದ ಮೇಲೆ ಟಾರ್ಚ್ ಬೆಳಕು ಬೀಳಲೆಂದು ಕಾದಿದ್ದು ಸಾರ್ಥಕ ಕ್ಷಣ.
ಹಾಗೆಯೇ ಒಂದು ಚಿಕ್ಕ ಸಿಲ್ವರ್ ಮರದ ಮೇಲೆ ಬಿದ್ದಾಗ ಸಿಕ್ಕಿದ್ದು ಅದೃಷ್ಟದ ಕ್ಷಣ.
ಅಲ್ಲಿ ಲೋಕ್ಹಾರ್ಟ್ ಗ್ಯಾಪ್ ಮತ್ತು ರಾಕ್ ಕೇವ್ ಬಳಿ ನಿಂತಾಗ ದೂರದಲ್ಲೊಂದು ಸುಂದರ ಮನೆ ಕಾಣುತ್ತದೆ.
ವಾರೆವ್ಹಾ! ಟಾಟಾ ಟೀ ಎಸ್ಟೇಟ್ ನಲ್ಲೊಂದು ಒಣಗಿ ನಿಂತ ಒಂಟಿ ಮರವಿದೆ. ಇನ್ನೊಂದು ಕೋನ ಹುಡುಕುತ್ತ ಟೀ ಗಿಡದ ಮಧ್ಯೆ ನುಸುಳುವಷ್ಟರಲ್ಲಿ ಮೇಘರಾಜ ಆಗಸವನ್ನು ಮುಚ್ಚುವ ಹವಣಿಕೆಯಲ್ಲಿದ್ದ. ಸಿಕ್ಕಷ್ಟೇ ಭಾಗ್ಯ. ನೀಲಗಗನದಲ್ಲಿ ನನಗೆ ಸಿಕ್ಕ ಒಂಟಿ ಮರದ ಸಿಲೌಟ್ ಹೇಗಿದೆ ನೋಡಿ.
ಮುನ್ನಾರ್ ನ ಹವಾಮಾನ ಹೇಗೆಂದರೆ ಅಲ್ಲಿ ಮಳೆ ಬೀಳಲು ಋತು ಬೇಕಿಲ್ಲ. ಆದರೆ ಮಳೆಗಾಲ ಮುಗಿದ ಮೇಲೆ ಹೋಗುವುದೊಳ್ಳೆಯದು. ಆಗ ನೀಲಗಿರಿ ತಾಹ್ರ್(ಬೆಟ್ಟದ ಮೇಕೆ)ಗಳನ್ನೂ ಕ್ಯಾಮೆರಾದಲ್ಲಿ ಶೂಟ್ ಮಾಡಬಹುದು.


4 comments:

ಆಲಾಪಿನಿ said...

nice blog...

Ittigecement said...

ಸುಂದರ ಮನೋಹರ ದೃಶ್ಯಗಳು ಸಂಗಡ ಓದಿಸಿಕೊಂಡು ಹೋಗುವ ಸರಳ ಸುಲಲಿತ ಮೋಹಕ ಬರಹ. ಮುಂದುವರಿಸಿರಿ. Thanks.

shivu.k said...

ಸುಂದರ ಫೋಟೊಗಳ ಜೊತೆ ಸುಂದರ ಬರಹ. ಅಲ್ಲಿಗೋ ಹೋಗುವವರಿಗೆ ಕೆಲವು ಮಾಹಿತಿಯು ಇದೆ.

ಶಿವು.ಕೆ

Unknown said...

ಮಾತುಗಳು ನಿಂತೇ ಹೋಗುತಿದೆ....ಈ ಮುದ್ದಾದ ಹಿತವಾದ ದ್ರುಶ್ಯಗಳ ನೋಡಲು ೨ ಕಣ್ಣು ಸಾಲುತ್ತಿಲ್ಲ ....