Friday, April 15, 2011

ಹುಣಿಸೆ ನೆಕ್ಲೆಟ್


ಶಿಡ್ಲಘಟ್ಟದ ಶಾಲೆಯೊಂದರಲ್ಲಿ ಸಾಹಿತಿ ಸ.ರಘುನಾಥ್ ಮಕ್ಕಳಿಗೆ ಹುಣಿಸೆ ನೆಕ್ಲೆಟ್ ತಿನಿಸನ್ನು ತಯಾರಿಸುವುದನ್ನು ವಿವರಿಸಿ ವಿತರಿಸಿದರು.

‘ಹುಣಿಸೆ ನೆಕ್ಲೆಟ್’. ಇದೆಂಥಹ ವಿಚಿತ್ರ ವಸ್ತು ಎಂದು ಅಚ್ಚರಿಗೊಳ್ಳುತ್ತಿದ್ದ ಮಕ್ಕಳಿಗೆಲ್ಲ ‘ಮೊದಲು ಇದನ್ನು ತಿನ್ನಿ. ನಂತರ ಇದರ ಬಗ್ಗೆ ತಿಳಿಸುತ್ತೇನೆ’ ಎಂದು ಸಾಹಿತಿ ಸ.ರಘುನಾಥ್ ಕಪ್ಪು ಬಣ್ಣದ ಚಾಕೋಲೇಟ್‌ನಂತಹ ಸಣ್ಣ ಉಂಡೆಗಳನ್ನು ನೀಡಿದರು. ತಿಂದ ಮಕ್ಕಳೆಲ್ಲರ ಮುಖವರಳಿತ್ತು. ಬಾಯಿಚಪ್ಪರಿಸುತ್ತಾ ಇನ್ನೊಂದು ಬೇಕೆಂದು ದಂಬಾಲು ಬಿದ್ದರು.
ಶಾಲೆಯ ಮಕ್ಕಳಿಗೆ ಜಾಹೀರಾತು ನೀಡಿ ಆಕರ್ಷಿಸುವ ರಾಸಾಯನಿಕ ಬೆರೆತ ತಿಂಡಿ ತಿನಿಸುಗಳ ಬದಲು ಶಾಲೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ತಿಂಡಿ ತಿನಿಸುಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡುತ್ತಾ ಸಾಹಿತಿ ಸ.ರಘುನಾಥ್ ಮಕ್ಕಳಿಗೆ ತಿಂಡಿಗಳ ರುಚಿ ತೋರಿಸಿದರು.


ಹುಣಿಸೆ ನೆಕ್ಲೆಟ್

‘ಹಳೆಯ ಹುಣಿಸೆ ಹಣ್ಣು, ಉಪ್ಪು ಅಥವಾ ಸೈಂಧವ ಲವಣ, ಕಾಳು ಮೆಣಸಿನ ಪುಡಿ, ಶುಂಟಿ ಪುಡಿ, ಹಳೆ ಬೆಲ್ಲ ಮಿಶ್ರಣ ಮಾಡಿ ಚೆನ್ನಾಗಿ ಕುಟ್ಟಿ ಸಣ್ಣ ಸಣ್ಣ ಉಂಡೆ ಮಾಡಿಕೊಂಡರೆ ಹುಣಿಸೆ ನೆಕ್ಲೆಟ್ ತಯಾರಾಗುತ್ತದೆ. ಹುಣಿಸೆಹಣ್ಣಿನಿಂದ ಮಾಡಿರುವುದರಿಂದ ಮತ್ತು ಮಕ್ಕಳು ಕಡ್ಡಿಗೆ ಚುಚ್ಚಿಕೊಂಡು ಇದನ್ನು ನೆಕ್ಕುವುದರಿಂದ ಇದಕ್ಕೆ ‘ಹುಣಿಸೆ ನೆಕ್ಲೆಟ್’ ಎಂದು ಹೆಸರಿಟ್ಟಿದ್ದೇನೆ. ಇದು ಜೀರ್ಣಕಾರಿ. ಹೆಚ್ಚು ಜೊಲ್ಲು ಉತ್ಪಾದನೆ ಮಾಡುವುದರಿಂದ ತಿಂದದ್ದು ಜೀರ್ಣವಾಗುತ್ತದೆ. ದವಡೆಗೆ ವ್ಯಾಯಾಮ ಕೂಡ. ವಾಂತಿ ಮತ್ತು ತಲೆಸುತ್ತು ಕಡಿಮೆ ಮಾಡುವ ಪಿತ್ತಾಹರ ಗುಣವನ್ನೂ ಹೊಂದಿದೆ. ರಾಸಾಯನಿಕ ಬೆರೆತ ಚಾಕ್ಲೇಟಿಗಿಂತ ಹುಣಿಸೆ ನೆಕ್ಲೆಟ್ ಅತ್ಯುತ್ತಮ’ ಎಂದು ಸ.ರಘುನಾಥ್ ಅವರು ತಿಳಿಸಿದರು.

5 comments:

ನಾಗರಾಜ್ .ಕೆ (NRK) said...

Me also enjoyed it, When i was doing primary school. very very tasty.

ಗಿರೀಶ್.ಎಸ್ said...

ನಾವು ಚಿಕ್ಕವರಿದ್ದಗೆ ಇದನ್ನ ಮಾಡಿ ತಿಂತಿದ್ವಿಆದ್ರೆ ಇಷ್ಟೊಂದು indegredients ಹಾಕುತ್ತಿರಲಿಲ್ಲ...ಮತ್ತು ನೀವು ಹೇಳಿದ ಹಾಗೆ ಇದು ರಾಸಾಯನಿಕ ಮುಕ್ತ ಮತ್ತು ಹುಳಿ ಅಂಶ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು

Dr.D.T.Krishna Murthy. said...

ಹುಣಿಸೆ ಹಣ್ಣಿನ ನೆಕ್ಲೆಟನ್ನು ಸಣ್ಣವರಿದ್ದಾಗ ತಿಂದಿದ್ದೆವು.ನಿಮ್ಮ ಚಿತ್ರ ಮತ್ತು ಬರಹ ನೋಡಿ ಮತ್ತೆ ತಿನ್ನ ಬೇಕು ಅನಿಸುತ್ತದೆ.

ಸಾಗರದಾಚೆಯ ಇಂಚರ said...

baalyada nenapytu sir

naavu tinta idvi

Roopa said...

ನಾನು ತಿಂದ ಮೊದಲ ’ಲಾಲಿ ಪಪ್’ ಇದೇ :) ನಿಮ್ಮ ಚಿತ್ರಗಳನ್ನು ನೋಡಿ ಮತ್ತೆ ತಿನ್ನ ಬೇಕೆನಿಸಿದೆ!!