Monday, April 13, 2009

ವೈವಿಧ್ಯಮಯ ದೃಷ್ಟಿಬೊಂಬೆಗಳು

"ಸ್ವಲ್ಪ ಇರಿ. ಇದಕ್ಕೆ ಸರಿಯಾಗಿ ನಿಲ್ಲೋದನ್ನು ಹೇಳಿಕೊಡ್ತೀನಿ" ಅಂತ ನನ್ನ ಸ್ನೇಹಿತ ರೆಡ್ಡಿ ತಾಲೀಮು ನಡೆಸಿದ್ದಾನೆ. (ಅವರೆ ಬೆಳೆ)
ತಮ್ಮ ಬೆಳೆಗೆ ರೋಗ ಬರದಿರಲಿ, ಜನರ ಕೆಟ್ಟ ದೃಷ್ಟಿ ಬೀಳದಿರಲಿ ಮತ್ತು ಬೆಳೆ ಚೆನ್ನಾಗಿ ಆಗಲೆಂದು ಕೋಲಾರ ಜಿಲ್ಲೆಯಲ್ಲಿ ರೈತರು ಬೆಳೆ ಅರ್ಧ ಹಂತದಲ್ಲಿದ್ದಾಗ "ಸೀಡುದ್ಯಾವರ" ಅಂತ ಮಾಡುತ್ತಾರೆ. ಗ್ರಂಥಿಕೆ ಅಂಗಡಿಯಲ್ಲಿ ಸಿಗುವ "ಪಚ್ಚೆಅಚ್ಚು" ಎಂಬ ಪೂಜಾಸಾಮಗ್ರಿಯನ್ನು ತಂದು ಏಳು ಕಲ್ಲು ಜೋಡಿಸಿ, ಪೂಜಿಸಿ, ಕೋಳಿ ಬಲಿಕೊಡುತ್ತಾರೆ. ದೃಷ್ಟಿಬೊಂಬೆಯನ್ನು ತಯಾರಿಸಿ ರಕ್ತದ ತಿಲಕವಿಡುತ್ತಾರೆ. ಗಾಳಿ ತಮ್ಮ ಬೆಳೆ ಕಡೆ ಬೀಸುವೆಡೆ ಕೋಳಿ ಸುಡುತ್ತಾರೆ.

ನನ್ನ ಸ್ಕರ್ಟ್ ಹೇಗಿದೆ?(ಅವರೆ ಬೆಳೆ)

ನನ್ನನ್ನ ಕಂಬಕ್ಕೆ ಕಟ್ಟಾಕವ್ರೆ ಬಿಡಿಸ್ರೀ ಸ್ವಾಮಿ.(ಅವರೆ ಬೆಳೆ)
ರೈತ ಅನ್ನದಾತನಾದರೂ, ಅವನದ್ದು ಮಾತ್ರ ಅನಿಶ್ಚಿತ ಬದುಕು. ಬೀಜ, ಗೊಬ್ಬರ, ಮಳೆ, ರೋಗಗಳು, ಔಷಧಗಳು... ಎಲ್ಲ ಅಡೆತಡೆಗಳನ್ನೂ ದಾಟಿ ಒಳ್ಳೆ ಬೆಳೆ ಬಂದರೆ, ಅದಕ್ಕೆ ತಕ್ಕ ಬೆಲೆ ಮಾರುಕಟ್ಟೆಯಲ್ಲಿ ಸಿಗಬೇಕು. ತನ್ನ ಹಿಡಿತಕ್ಕೆ ಮೀರಿದ ಕಂಟಕಗಳನ್ನು ಎದುರಿಸುವ ರೈತ ಅನೇಕ ನಂಬುಗೆಯ ಆಚರಣೆಗಳನ್ನು ಆಚರಿಸುವುದುಂಟು. ಈ ದೃಷ್ಟಿಬೊಂಬೆಯೂ ಅದರಲ್ಲೊಂದು. ಶ್ರಮಜೀವಿಯ ಸೃಜನಶೀಲತೆ ಈ ಬೊಂಬೆಗಳಲ್ಲಿ ಕಾಣಸಿಗುತ್ತದೆ.
ನನ್ನ ಹೊಟ್ಟೆಗಿಂತ ತಲೆನೇ ದಪ್ಪಮಾಡಿಟ್ಟವ್ರೆ!(ಟೊಮೆಟೊ)

ರುಂಡ ಒಂದು ಕಡೆ ಮುಂಡ ಒಂದು ಕಡೆ...

ಅಟೆನ್ಷನ್ ಪೊಸಿಷನ್!!(ಬೀಟ್ ರೂಟ್)

ಹೆಂಗಿದೆ ನನ್ನ ಸ್ಟೆಪ್ಪು!(ಮೆಣಸಿನಕಾಯಿ)

ಯೊವ್, ಸೀರೆ ಸೆರಗು ಸರಿಮಾಡ್ಕೊತೀನಿ ಇರಯ್ಯ.(ಆಲೂಗಡ್ಡೆ)
"ಬೆಳೆ ಎಷ್ಟು ಚೆನ್ನಾಗಿ ಬಂದಿದೆ!" ಅಂದುಕೊಂಡು ಹೋಗುವವರ ದೃಷ್ಟಿ ತಾಕದಿರಲಿ ಮತ್ತು ಬೆಳೆಗಳಿಗೆ ರೋಗ ಬಾರದಿರಲಿ ಎಂಬ ಕಾರಣಕ್ಕಾಗಿ ನಿಲ್ಲಿಸುವ ಈ ಬೊಂಬೆಯನ್ನು ಬೆಳೆ ಬಂದಾದ ಮೇಲೆ ಸುಟ್ಟುಬಿಡುತ್ತಾರೆ. ಬೆಳೆಗೆ ತಗುಲಬಹುದಾದ ಕೆಡುಕನ್ನೆಲ್ಲಾ ತನ್ನೊಡಲಲ್ಲಿರಿಸಿಕೊಂಡ ಬೊಂಬೆ ಸುಟ್ಟು ಬೂದಿಯಾಗುತ್ತದೆ.
ನನ್ನ ತಲೆ ಮೇಲೆ ಹಕ್ಕಿ ಗಲೀಜು ಮಾಡ್ತಾ ಇದೆ, ಓಡ್ಸಪ್ಪೋ.(ಮೆಣಸಿನಕಾಯಿ)

ನನ್ನ ಕೆಳಗೆ ಇಳ್ಸಿ, ನಾನೂ ದ್ರಾಕ್ಷಿ ನೋಡಿ ಖುಸಿ ಪಡ್ತೀನಿ.(ದ್ರಾಕ್ಷಿ)

43 comments:

Srinidhi said...

sakkhat! :-)

PARAANJAPE K.N. said...

ಬೆದರುಬೊ೦ಬೆಗಳ ವಿರಾಟ್ ದರ್ಶನ ಮಾಡಿಸಿದ್ದೀರಿ. ಚೆನ್ನಾಗಿದೆ ನಿಮ್ಮ ಸ೦ಗ್ರಹ, ಬರಹ ಮತ್ತು ಐಡಿಯಾ

Unknown said...

ಮಲ್ಲಿಕಾರ್ಜುನ್
ನಿಮ್ಮ ಹೊಸ ಎಪಿಸೋಡ್ ಸಕತ್ತಾಗಿದೆ. ನಾವೂ ಚಿಕ್ಕವರಾಗಿದ್ದಾಗ ಜೋಳದ ಹೊಲಕ್ಕೆ, ಮೆಣಸಿನ ಗಿಡದ ಹೊಲಕ್ಕೆ ಈ ಬೆದರು ಬೊಂಬೆಗಳನ್ನು ಮಾಡಿ ನಿಲ್ಲಿಸುತ್ತಿದ್ದೆವು. ಈ ಪದ್ದತಿಗೆ ಕರ್ನಾಟಕದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿದೆ. ಪಂಪನ ಕಾವ್ಯಗಳಲ್ಲಿಯೇ ಈ ಬೆದರುಬೊಂಬೆಗಳ ಉಲ್ಲೇಖವಿದೆ. ಬೆರ್ಚ್ಚಪ್ಪ ಎಂಬ ಪ್ರಯೋಗವೂ ಇದೆ.

Anonymous said...

Sooper!

Ittigecement said...

ಹುಡುಕಾಟದ ಮಲ್ಲಿಕಾರ್ಜುನ್...

ನಿಮ್ಮ ಈ ಹುಡುಕಾಟ ಇಷ್ಟವಾಯಿತು...
ಎಲ್ಲಿಂದ ಹುಡುಕಿ ತೆಗೆದಿದ್ದೀರಿ ಮಾರಾಯ್ರೆ ಇವೆಲ್ಲ...?

ಅದಕ್ಕೆ ನಿಮ್ಮ ವಿವರಣೆ ಕೂಡ ಚೆನ್ನಾಗಿದೆ...

ನಿಮ್ಮ ಹುಡುಕಾಟಕ್ಕೆ ಅಭಿನಂದನೆಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಶ್ರೀನಿಧಿ,
Thanks! :-)

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ಧನ್ಯವಾದಗಳು.
ಇದರ ಫೋಟೋ ತೆಗೆಯುವಂತೆ ನನಗೆ ಹೇಳಿದ್ದು ಶ್ರೀನಿವಾಸಪುರದಲ್ಲಿರುವ ಸಾಹಿತಿ ಸ.ರಘುನಾಥ್ ಅವರು.
ಒಂದೊಂದೇ ಫೋಟೋ ತೆಗೆಯುತ್ತಿದ್ದಂತೆಯೇ ಅವುಗಳ ವೈವಿಧ್ಯತೆ ನೋಡಿ ಅಚ್ಚರಿಯಾಗುತ್ತಿತ್ತು.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆಯಾ? ಖುಷಿಯಾಗುತ್ತಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಇದ್ದರೆ ಕೊಡಿ .

ಮಲ್ಲಿಕಾರ್ಜುನ.ಡಿ.ಜಿ. said...

ಜ್ಯೋತಿಯವರೆ,
Thanks.

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ಧನ್ಯವಾದಗಳು. ಇವೆಲ್ಲಾ ಚಿತ್ರಗಳನ್ನು ನಮ್ಮೂರಿಂದ 10 ಕಿ.ಮೀ ಒಳಗೆ ತೆಗೆದದ್ದು. ಇದರ ಜೊತೆ ನಮ್ಮೂರ ಸುತ್ತಮುತ್ತ ಏನೆಲ್ಲಾ ಬೆಳೆಗಳು ಬೆಳೆಯುತ್ತಾರೆ ಎಂದು ತೋರಿಸುವ ಉದ್ದೇಶವೂ ಸೇರಿದೆ.

PARAANJAPE K.N. said...

ಮಲ್ಲಿ,
ಹೇಳಲು ಮರೆತಿದ್ದೆ. ಇದಕ್ಕೆ ನಮ್ಮೂರ ಭಾಷೆಯಲ್ಲಿ "ಬೆರ್ಚಪ್ಪ" ಅ೦ತಾರೆ.

shivu.k said...

ಮಲ್ಲಿಕಾರ್ಜುನ್,

ಬೆದರುಬೊಂಬೆಗಳ ಬಗ್ಗೆ ತುಂಬಾ ಚೆನ್ನಾದ ಮಾಹಿತಿ ಕಲೆಹಾಕಿದ್ದೀರಿ....ಅದಕ್ಕೆ ತಕ್ಕಂತೆ ವೈವಿಧ್ಯಮಯ ಬೆದುರುಗೊಂಬೆಗಳು....ಇದೆಲ್ಲಾಕ್ಕಿಂತ ಮೆಚ್ಚಿಗೆಯಾಗಿದ್ದೂ...ಅವುಗಳಿಗೆ ಕೊಟ್ಟ ಶೀರ್ಷಿಕೆಗಳು...
ಚಿತ್ರನೋಡಿ ಓದಿದಾಗ ಖಂಡಿತ ನಗು ಬರುತ್ತದೆ...
ಇನ್ನಷ್ಟು ವೆರೈಟಿ ಬರಲಿ...

ಶಿವು.ಕೆ ARPS.

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ನಮ್ಮ ಕಡೆ ಮಾಡೋ ಆಚರಣೆ ಬಗ್ಗೆ ಬರೆದಿರುವೆ. ನಿಮ್ಮಲ್ಲಿ ಹೇಗೆ? ಬರೆಯಿರಿ.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನಮ್ಮೂರನ್ನು ಒಂದು ಸುತ್ತು ಹಳ್ಳಿಗಳ ಮೂಲಕ ಹೋಗಿ ಬರುವಷ್ಟರಲ್ಲಿ 20ಕ್ಕೂ ಹೆಚ್ಚು ಬೆದರುಬೊಂಬೆಗಳ ಫೋಟೋ ತೆಗೆದಿದ್ದೆ. ಅದರಲ್ಲಿ ಆಯ್ದು ಇಲ್ಲಿ ಹಾಕಿರುವೆ.ಪ್ರತಿಯೊಬ್ಬರಲ್ಲೂ ಕಲೆಯಿರುತ್ತದೆ ಈ ರೀತಿಯೆಲ್ಲಾ ಅದು ಪ್ರಕಟವಾಗುತ್ತದೆ,ಅಲ್ವಾ? ಒಂದಕ್ಕಿಂತ ಒಂದು ಭಿನ್ನವಾಗಿ ಅಲಂಕರಿಸಿದ್ದಾರೆ.

ವಿನುತ said...

ಸು೦ದರ ಚಿತ್ರಗಳು. ನಮ್ಮಲ್ಲಿ, ಬೆರ್ಚಪ್ಪ, ಬೆದರು ಗೊ೦ಬೆ ಅ೦ತಾರೆ. ಹೊಲದಲ್ಲಿ ಕಾಲು ತಿನ್ನೋಕೆ ಹಕ್ಕಿ ಬ೦ದಾಗ ಹೆದರಲಿ ಅಂತ ಕೈಯಲ್ಲಿ ಕೋಲು ಕೊಟ್ಟು ನಿಲ್ಸಿರ್ತರೆ ಅಂತ ಕೇಳಿದ್ದೆ.

Jayalaxmi said...

Really FANTASTIC sir!

ಮಲ್ಲಿಕಾರ್ಜುನ.ಡಿ.ಜಿ. said...

ವಿನುತ ಅವರೆ,
ಹಕ್ಕಿಗಳು ಈ ಬೊಂಬೆಗಳಿಗೆ ಹೆದರೋಲ್ಲ. ಒಂದು ಚಿತ್ರದಲ್ಲಿ ಬೊಂಬೆಯ ತಲೆ ಮೇಲೆ ಭಾರದ್ವಾಜ ಹಕ್ಕಿ ಕುಳಿತಿದೆ ನೋಡಿ.
ನಮ್ಮ ಕಡೆ ಹಕ್ಕಿಗಳನ್ನು ಓಡಿಸಲು ಕೋಲುಗಳಿಗೆ ಕವರ್ ಗಳನ್ನು ಕಟ್ಟುವರು. ಗಾಳಿಗೆ ಅವು ಹಾರಾಡುವುದರಿಂದ ಹಕ್ಕಿಗಳು ಬರುವುದಿಲ್ಲ.

ಮಲ್ಲಿಕಾರ್ಜುನ.ಡಿ.ಜಿ. said...

ಜಯಲಕ್ಷ್ಮಿಯವರೆ,
ನನ್ನ ಬ್ಲಾಗಿಗೆ ನೀವು ಬಂದದ್ದು ಖುಷಿಯಾಯ್ತು.ಧನ್ಯವಾದಗಳು.

Naveen ಹಳ್ಳಿ ಹುಡುಗ said...

ನಿಮ್ಮ creativitiy ಗೆ ನನ್ನ ಜೋಹರ್

Archu said...

too good!!

Unknown said...

"ಬೆರ್ಚಪ್ಪ" ಲೇಖನ ಚೆನ್ನಾಗಿದೆ... ಊರಿನಲ್ಲಿ ಕೊಬ್ಬರಿ ಒಣಗಲು ಹಾಕಿದಾಗ ಅದಕ್ಕೆ ಭಾರಿ ಕಾಗೆಗಳ ಕಾಟ ... ಅದಕ್ಕೆ ನಾವು ಚಿಕ್ಕವರಿದ್ದಾಗ ತೆಂಗಿನ ಸಿಪ್ಪೆ ಸುಟ್ಟು , ಕರಟಿದ ಆ ಸಿಪ್ಪೆಯನ್ನು ಕೊಬ್ಬರಿ ಒಣಗಲು ಹಾಕಿದ ಹತ್ತಿರ ಕಟ್ಟುತ್ತಿದ್ದೆವು... ಆಗ ಕಾಗೆಗಳ ಕಾಟ ಸ್ವಲ್ಪ ಕಂಮಿಯಾಗಿರುತ್ತಿತ್ತು.. ಬಹುಶ ಕರಟಿದ ಆ ಸಿಪ್ಪೆಯನ್ನು ಸತ್ತ ಕಾಗೆ ಎಂದು ಭಾವಿಸಿ ಕಾಗೆಗಳು ಹತ್ತಿರ ಸುಳಿಯುತ್ತಿರಲಿಲ್ಲ..

ಪಾಚು-ಪ್ರಪಂಚ said...

ಮಲ್ಲಿಕಾರ್ಜುನ್ ಅವರೇ,

ಲೇಖನ, ಫೋಟೋ, ವಿವರಣೆ ಇಷ್ಟವಾಯಿತು. ೨ ನೇ ಫೋಟೋ ಮಜವಾಗಿದೆ...

ಅಭಿನಂದನೆಗಳು.. ಹೊಸ ವಿಷಯ ಹುಡುಕಾಟ ಹೀಗೆ ನಿರಂತರವಾಗಿರಲಿ...!!

-ಪ್ರಶಾಂತ್ ಭಟ್

ರಜನಿ. ಎಂ.ಜಿ said...

ಮಲ್ಲಿಕಾರ್ಜುನ್ ಅವರೇ, ನಿಮ್ಮ ಬ್ಲಾಗಿನಲ್ಲಿ ಸ್ನೇಹಿತರ ಬ್ಲಾಗ್ ಕೂಟದಲ್ಲಿ ನನ್ನ ಬ್ಲಾಗ್ ಸೇರಿಸಿಕೊಂಡಿದ್ದಕ್ಕೆ ಧನ್ಯವಾದಗಳು. ನನ್ನ ಹೆಸರು "ರಜನಿ. ಎಂ.ಜಿ.’ "ಜೆ" ಎಂದಾಗಿದೆ. ಗಮನಿಸಿ. ದಯವಿಟ್ಟು ಸರಿಪಡಿಸುವಿರಾ

ಮಲ್ಲಿಕಾರ್ಜುನ.ಡಿ.ಜಿ. said...

ನವೀನ್,
ಧನ್ಯವಾದಗಳು.

ಅರ್ಚನ ಅವರೆ,
ತುಂಬಾ Thanks.

ಮಲ್ಲಿಕಾರ್ಜುನ.ಡಿ.ಜಿ. said...

ರವಿಕಾಂತ ಗೋರೆ ಅವರೆ,
ನನ್ನ ಚಿತ್ರಗಳಿಂದ ನಿಮ್ಮ ಬಾಲ್ಯ ನೆನಪಾಗಿದ್ದು ತಿಳಿದು ಸಂತಸವಾಯ್ತು. ಹೀಗೇ ನನ್ನ ಬ್ಲಾಗಿಗೆ ಬರುತ್ತಿರಿ.

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಶಾಂತ್ ಭಟ್ ಅವರೆ,
ನಿಮ್ಮ ಪ್ರೋತ್ಸಾಹದಿಂದ ಇನ್ನಷ್ಟು ಹುಡುಕಾಟ ನಡೆಸುವೆ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ರಜನಿಯವರೆ,
ಕ್ಷಮಿಸಿ."ಜಿ" ಬದಲು "ಜೆ" ಎಂದು ಟೈಪಿಸಿದ್ದೆ. ತಪ್ಪನ್ನು ಸರಿಪಡಿಸಿರುವೆ. ನಿಮ್ಮ ಪ್ರೊತ್ಸಾಹ ನಿರಂತರವಾಗಿರಲಿ.

ಮನಸು said...

tumba chennagide nimma photo's haagu adakke takka vivarane..

Guruprasad said...

ಮಲ್ಲಿಕಾರ್ಜುನ್,
ತುಂಬ ಚೆನ್ನಾಗಿ ಇದೆ.. ಬೆದರು ಬೊಂಬೆಯ ಚಿತ್ರಗಳು ಮತ್ತೆ ಅದಕ್ಕೆ ಒಪ್ಪುವ ಲೇಖನ... ಹೀಗೆ ಮುಂದುವರಿಸಿರಿ... ನಮಗೂ ಹಳ್ಳಿ ಕಡೆಯ ಮರೆತುಹೋಗಿರುವ ಎಸ್ಟೋ ವಿಷಯಗಳು recall ಮಾಡ್ಕೊಬೋದು....

ಗುರು

ಮಲ್ಲಿಕಾರ್ಜುನ.ಡಿ.ಜಿ. said...

ಮನಸು ಅವರೆ,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಗುರುರವರೆ,
ನನ್ನ ಚಿತ್ರಲೇಖನಗಳಿಂದ ನಿಮಗೆ ಹಳೆಯ ಹಳ್ಳಿ ನೆನಪುಗಳು ಮರುಕಳಿಸಿದ್ದು ತಿಳಿದು ತುಂಬ ಖುಷಿಯಾಯ್ತು.

ರಜನಿ. ಎಂ.ಜಿ said...

thanks

ಧರಿತ್ರಿ said...

ಮಲ್ಲಿಯಣ್ಣ..
ನಿಮ್ಮ ಬೊಂಬಾಟ್ ದೃಷ್ಟಿ ಬೊಂಬೆಗಳನ್ನು ನೋಡಿ ಆನಂದಿಸಿ, ದಿನಗಳಾದರೂ ಅನಿಸಿಕೆಗಳನ್ನು ಚೆಲ್ಲೋಕೆ ಸಮಯದ ಕೊಂಚ ಅಭಾವವಿತ್ತು.
ದೃಷ್ಟಿಬೊಂಬೆಗಳ ಕಾನ್ಸಪ್ಟ್ ಚೆನ್ನಾಗಿದೆ. ನಮ್ಮೂರಲ್ಲೂ ಗದ್ದೆ, ತೋಟ, ತರಕಾರಿ ಹಿತ್ತಲಲಲ್ಲಿ ದೃಷ್ಟಿಬೊಂಬೆಗಳನ್ನು ಇಡುತ್ತಾರೆ. ಚೆನ್ನಾಗಿರ್ತಾವೆ..ಅದರಲ್ಲೂ ಮಡಕೆಯಲ್ಲಿ ವಿವಿಧ ಆಕೃತಿಯ ಬೊಂಬೆಗಳನ್ನು ಮಾಡುತ್ತಾರೆ. ಹೊಲ-ಗದ್ದೆಗಳಿಗೆ ಕಾಡುಹಂದಿ ಅಥವಾ ಪ್ರಾಣಿಗಳು ಬಂದು ಬೆಳೆಗಳನ್ನು ಹಾಳುಮಾಡದಂತೆ ಹಾಗೇ, ಹಚ್ಚಹಸುರಾಗಿ ಬೆಳೆದು ನಿಂತ ಪೈರು ನೋಡಿ ಯಾರಾದ್ರೂ ಏನಾದ್ರೂ ಅಂದ್ರೆ ದೃಷ್ಟಿ ಬೀಳದಿರಲಿ ಅಂತ ಬೊಂಬೆಗಳನ್ನು ಇಡುತ್ತಾರೆ.
-ಧರಿತ್ರಿ

ಮಲ್ಲಿಕಾರ್ಜುನ.ಡಿ.ಜಿ. said...

ಧ್ರರಿತ್ರಿ ಮೇಡಂ,
ನೀವು ಚೆಲ್ಲಿದ Comment ಅನ್ನು ನಾನು ಒಂಚೂರೂ ಚೆಲ್ಲದಂತೆ ಹಿಡಿದಿಟ್ಟುಕೊಂಡಿರುವೆ. ಧನ್ಯವಾದಗಳು. ನಿಮ್ಮಕಡೆಯೂ ಇದೇ ರೀತಿ ಆಚರಣೆಗಳನ್ನು ಮಾಡುತ್ತಾರೆಯೆ? ಅಂದರೆ ಕೋಳಿ ಬಲಿಕೊಟ್ಟು ಪೂಜಿಸುವುದು. ಬೆಳೆಬಂದಮೇಲೆ ದೃಷ್ಟಿಬೊಂಬೆಯನ್ನು ಸುಡುವುದು ಇತ್ಯಾದಿ.ಮಾಹಿತಿ ಕೊಟ್ಟರೆ ಎಲ್ಲರಿಗೂ ಅದರ ವಿಚಾರ ತಿಳಿಯುತ್ತದೆ.ಕೊಡುವಿರಲ್ವಾ?

Laxman (ಲಕ್ಷ್ಮಣ ಬಿರಾದಾರ) said...

ಪ್ರೀತಿಯ ಮಲ್ಲಿಕಾರ್ಜುನ ಸರ್,

ನಿಮ್ಮ ದೃಷ್ಟಿ ಬೊಂಬೆಗಳನ್ನು ನೋಡಿ ತುಂಬಾ ಸಂತೋಷವಾಯಿತು.
ನಮ್ಮ ಊರು ,ಜೋಳದ ಹೋಲಗಳ ನೆನಪಾಯಿತು.
ಹೀಗೆ ವೈವಿಧ್ಯತೆ ಇರಲಿ. ಹಲವಾರು ಹೋಸ ವಿಷಯಗಳು ಬಗ್ಗೆ ಬರಿತಾ ಇರಿ.

“ನಿರ್ಜೀವ ವಸ್ತುಗಳಿಗೆ ಮನುಷ್ಯನ ಬಟ್ಟೆ ಧರಿಸಿ ಇಷ್ಟೆಲ್ಲ ಒಳ್ಳೆಯ ಕೆಲಸ ಆಗುತ್ತೆ ಅಂದ್ರೆ
ಎಲ್ಲ ಸಜೀವ ಮನುಷ್ಯರಿಗೆ ಯಾಕೆ ಸಾಧ್ಯವಿಲ್ಲ ಅಂತ”

ಲಕ್ಷ್ಮಣ

PaLa said...

ನಂ ಕಡೆ ದೃಷ್ಟಿ ಬೊಂಬೆ ಎಲ್ಲಾ ಇಲ್ಲ.. ಆದರೆ ಹಕ್ಕಿಗಳ ಉಪಟಳ ಇರ್ಬಾರ್ದು ಅಂತ ಬೆದರು ಬೊಂಬೆ/ಬೆರ್ಚಪ್ಪ ಮಾಡ್ತಾರೆ. ಅದೂ ಹೆಚ್ಚು ಕಡಿಮೆ ನಿಮ್ಮ ಸಂಗ್ರಹದ ಚಿತ್ರಗಳಂತೆಯೇ ಇರುತ್ತೆ.

ಒಳ್ಳೇ ಸಂಗ್ರಹ

ಬಿಸಿಲ ಹನಿ said...

ಮಲ್ಲಿಕಾರ್ಜುನವರೆ,
ನಿಮ್ಮ ಚಿತ್ರ ಲೇಖನ ತುಂಬಾ ಚನ್ನಾಗಿ ಮೂಡಿಬಂದಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ಲಕ್ಷ್ಮಣ್ ಸರ್,
ನಿಮ್ಮ ನೆನಪು ಬಾಲ್ಯಕ್ಕೆ ಜಿಗಿದದ್ದು ತಿಳಿದು ಸಂತಸವಾಯ್ತು.
“ನಿರ್ಜೀವ ವಸ್ತುಗಳಿಗೆ ಮನುಷ್ಯನ ಬಟ್ಟೆ ಧರಿಸಿ ಇಷ್ಟೆಲ್ಲ ಒಳ್ಳೆಯ ಕೆಲಸ ಆಗುತ್ತೆ ಅಂದ್ರೆ
ಎಲ್ಲ ಸಜೀವ ಮನುಷ್ಯರಿಗೆ ಯಾಕೆ ಸಾಧ್ಯವಿಲ್ಲ ಅಂತ”
ಎಂಬ ನಿಮ್ಮ ಮಾತುಗಳು ತುಂಬಾ ಇಷ್ಟವಾಯಿತು.

ಮಲ್ಲಿಕಾರ್ಜುನ.ಡಿ.ಜಿ. said...

ಪಾಲಚಂದ್ರ ಅವರೆ,
ನಿಮ್ಮಲ್ಲಿ ಹಕ್ಕಿಗಳ ಉಪಟಳಕ್ಕೆ ಮಾತ್ರ ಬೆರ್ಚಪ್ಪನನ್ನು ಮಾಡುತ್ತಾರೆಂದು ನನಗೆ ತಿಳಿದಿರಲಿಲ್ಲ. ಮಾಹಿತಿಗೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಉದಯ ಇಟಗಿ ಯವರೆ,
ಧನ್ಯವಾದಗಳು.
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

ದೀಪಸ್ಮಿತಾ said...

ಅಬ್ಬಾ!! ಎಲ್ಲಿ ಸಿಕ್ಕಿದವು ಇಷ್ಟೊಂದು ಬೆದರು ಬೊಂಬೆಗಳು. ನೀವು ಬರೆದಂತೆ ನಿಮ್ಮ ಊರ ಸುತ್ತಮುತ್ತ ಬೆಳೆಯುವ ಬೆಳೆಗಳ ಬಗ್ಗೆ ಬರೆಯಿರಿ. ಧನ್ಯವಾದಗಳು

ಮನಸು said...

ಮಲ್ಲಿಕಾರ್ಜುನ್ ಸರ್,
ಈಗಷ್ಟೆ ಶಿವು ಸರ್ ಕೊಟ್ಟ ಲಿಂಕ್ ನಿಂದ ನಿಮ್ಮ ಸಾಧನೆಯ ತುಣುಕನ್ನು ನೋಡಿದೆವು ನಿಮ್ಮಂತವರು ನಮ್ಮ ಕನ್ನಡಿಗರಲ್ಲಿ ಒಬ್ಬರಾಗಿರೋದು ನಮ್ಮ ಪುಣ್ಯ... ನಿಮ್ಮ ಸಾಧನೆ ಬೆಳೆಯಲಿ... ನಮ್ಮ ಶುಭಾಶಯಗಳು ಮುಂಬರುವ ಎಲ್ಲಾ ಸಾಧನೆಗಳಿಗೆ...
ಕ್ಯಾಮಾರದ ಬಗ್ಗೆ ಸ್ವಲ್ಪ ತಿಳಿಸಿಕೊಡಿ ಮುಂದಾವುದಾದರು ಬರಹದಲ್ಲಿ..ನಮಗೆ ಕ್ಯಾಮಾರಗಳ ಅರಿವು ಅಷ್ಟಿಲ್ಲ....ಕ್ಯಾಮರ ತೆಗೆದ ಚಿತ್ರಗಳನ್ನು ಮಾತ್ರ ನೋಡಿ ಖುಷಿ ಪಡುತ್ತೇವೆಅಸ್ಟೆ.
ವಂದನೆಗಳು ನಿಮಗೆ ಶುಭವಾಗಲಿ.

ಮೌಲ್ಯ ಜೀವನ್ said...

hosa photo hakidaga mareyade thilisi. chandada photo nodi nanu khushi padtene.