Saturday, December 20, 2008

ಚಿತ್ರ ಸರ(ಪ)ಣಿ!

ನಮ್ಮ ಫೋಟೋಗ್ರಫಿ ಇಂದು ಹೊಳೆ ದಂಡೆಯಲ್ಲಿ ಅಂದ ತಕ್ಷಣ ಮಕ್ಕಳೆಲ್ಲ ಚುರುಕಾಗಿಬಿಟ್ಟರು. ನೀರೆಂದರೆ ಯಾರಿಗೆ ಇಷ್ಟವಿಲ್ಲ, ಹೇಳಿ? ವಿಕಾಸ, ಸುಹಾಸ, ಸ್ವಾತಿ, ಅಶ್ವಿನಿ, ಭರತ... ಮಕ್ಕಳ ಮರಿಸೈನ್ಯದೊಂದಿಗೆ ಹೊರಟಾಗ ಮದ್ಯಾಹ್ನ ೩ ಗಂಟೆಯ ಚುರುಮುರಿ ಬಿಸಿಲು. ಹೊಳೆದಂಡೆ ಹತ್ತಿರವಾದಂತೆ ಹಣೆಯಲ್ಲಿ ಮುತ್ತಿನಂತೆ ಬೆವರು ಮೊಳೆತಿತ್ತು. ಆದರೆ ಮಕ್ಕಳಿಗೆ ಅದೆಲ್ಲಿ ಅಡಗಿರುತ್ತೋ ಆ ಚೈತನ್ಯ ಮತ್ತು ಉತ್ಸಾಹ. ನೀರು ಕಂಡೊಡನೆ 'ಓ...' ಎಂದು ಕೂಗುತ್ತಾ ಓಡತೊಡಗಿದರು. ಅರೆರೆ! ಅವರು ಓಡುವುದನ್ನೇ ಫೋಟೋ ತೆಗೆದರೆ ಹೇಗೆ ಎಂಬ ಐಡಿಯಾ ಹೊಳೆಯಿತು.
ಅಶ್ವಿನಿ, ಸುಹಾಸ, ಭರತ - ಮೂವರೂ 'ರೆಡಿ ಒನ್, ಟು, ತ್ರೀ...' ಅನ್ನುತ್ತಿದ್ದಂತೆ ರಭಸದಿಂದ ನುಗ್ಗಿಬಂದರು. ನಾನು ಕ್ಯಾಮೆರಾ ಕಂಟಿನ್ಯುಯಸ್ ಸ್ಪೀಡ್ ಗೆ ಹಾಕಿ ಬಟನ್ ಒತ್ತಿ ಹಿಡಿದೆ. ಅಂದುಕೊಳ್ಳುವುದೇ ಒಂದು ಆಗುವುದೇ ಒಂದು ಎನ್ನುವಂತೆ ಒಂದು ಆಕಸ್ಮಿಕ ಘಟಿಸಿತು. ಓಡುವಾಗ ಹೆಜ್ಜೆ ಜಾರಿ ಭರತ ಬಿದ್ದುಬಿಟ್ಟ. ಚಕಚಕನೆ ಕ್ಲಿಕ್ಕಿಸಿದ್ದರಿಂದ ಎಲ್ಲ ದಾಖಲಾಗಿಬಿಟ್ಟಿತು. ಪುನಃ ಮೂರ್ನಾಕು ಬಾರಿ ಅವರನ್ನು ಓಡಿಸಿದರೂ ಆ ಕ್ಷಣದಷ್ಟು ರೋಚಕವಾಗಿ ಮೂಡಿಬರಲಿಲ್ಲ.
ಇದು ಚಿತ್ರ ಸರಣಿಯೂ ಹೌದು, ಸರಪಣಿಯೂ ಹೌದು. ಪ್ರತಿಚಿತ್ರಗಳೂ ಪ್ರತ್ಯೇಕತೆಯನ್ನು ಉಳಿಸಿಕೊಂಡು ಒಂದಕ್ಕೊಂದು ಬಂಧವಿರಿಸಿಕೊಂಡಿವೆ.



10 comments:

shivu.k said...

ಮಲ್ಲಿಕಾರ್ಜುನ್,
ಈ ಚಿತ್ರ ಸರಪಣಿ ಕ್ಲಿಕ್ಕಿಸುವಾಗ ಪಕ್ಕದಲ್ಲಿ ನಾನು ನಾಗೇಂದ್ರ ನಿಮಗೆ ಸರಪಣಿಯಾಗಿದ್ದೆವು ಅನ್ನೋದೆ ಖುಷಿಯ ವಿಚಾರ !

Ittigecement said...

ಮಲ್ಲಿಕಾರ್ಜುನ್....

ನಿಮ್ಮ ಮತ್ತು ಶಿವು ಅವರ್ ಕೈ ಚಳಕ ..ಅದ್ಭುತ..!

ವಾ...ವ್..!

ನಾನು ಮೂಕ ವಿಸ್ಮತನಾಗಿದ್ದೇನೆ...!

ಅಭಿನಂದನೆಗಳು.....

ಅಭಿಮಾನ ಪೂರ್ವಕವಾಗಿ..!

Ashok Uchangi said...

ನೀವುಗಳು ತೆಗೆದ ಈ ಚಿತ್ರಗಳು ಬಹುಮಾನವನ್ನೂ ಗಿಟ್ಟಿಸಿವೆ.ಈ ಸಮಯದಲ್ಲಿ ನಿಮ್ಮ ಈ ಆಕ್ಟರ್ ಗಳನ್ನು ನೆನಪಿಸಿಕೊಂಡಿರುವುದು ಅತ್ಯಂತ ಸಮಂಜಸ.
ಅಶೋಕ ಉಚ್ಚಂಗಿ
http://mysoremallige01.blogspot.com/

ಚಿತ್ರಾ ಸಂತೋಷ್ said...

ಮಲ್ಲಿಯಣ್ಣ..ನೀವು ಮತ್ತು ಶಿವಣ್ಣ ಇಬ್ರ ಫೋಟೋಗಳನ್ನು ಎಷ್ಟು ನೋಡಿದರೂ ಮತ್ತಷ್ಟು ನೋಡೋಣ ಅನಿಸೋದು. ತುಂಬಾ ಚೆನ್ನಾಗಿರ್ತವೆ. ಮಕ್ಕಳ ಮತ್ತು ಹಕ್ಕಿಗಳ ಫೋಟೋಗಳಿದ್ದರೆ ನಂಗೂ ಕಳಸಿ...ನೋಡಿ ಖುಷಿಪಡಕ್ಕೆ
-ತುಂಬುಪ್ರೀತಿ,
ಚಿತ್ರಾ

chetana said...

ಆಹಾ!

ಅಂತರ್ವಾಣಿ said...

ಮಲ್ಲಿಕಾರ್ಜುನ್ ಅವರೆ,
ತುಂಬಾ ಸೊಗಸಾಗಿ ಬಂದಿವೆ ಈ ಸರಪಣಿ :)

sunaath said...

ಹುಡುಗುರು ನೀರಿನಲ್ಲಿ ಓಡಿ ಬರುತ್ತಿರುವ ಚಿತ್ರಗಳು ಅದ್ಭುತವಾಗಿವೆ.

ದೀಪಸ್ಮಿತಾ said...

ಸಕ್ಕತ್ತಾಗಿವೆ ಚಿತ್ರಗಳು

Unknown said...

ಸರ್ ನಿಜಕ್ಕೂ ಫೋಟೋಗಳು ಬಹಳ ಸೊಗಸಾಗಿವೆ. ವರ್ಣನಾತೀತ ಚಿತ್ರಗಳು.. ನಿಮ್ಮ ಸುನಿಲ್

kaligananath gudadur said...

Simply Amazing Photos.
-Kaligananath Gudadur