Monday, December 15, 2008

ಹೈದರಾಬಾದ್ ಹೈಲೈಟ್ಸ್

ಪ್ರತಿ ನಗರವೂ ತನ್ನದೇ ಆದ ಸೊಗಸು, ಸೊಗಡು, ಸ್ವಾದ, ಸೆಳೆತ, ಭಾಷೆ, ಇತಿಹಾಸ, ಶೈಲಿ ಮತ್ತು ಮಾದಕತೆ ಹೊಂದಿರುತ್ತದೆ. ಇದಕ್ಕೆ ೪೦೦ ವರ್ಷ ವಯಸ್ಸಾದ ಹೈದರಾಬಾದ್ ಕೂಡ ಹೊರತಾಗಿಲ್ಲ.
ಚಾರ್ ಮಿನಾರ್, ಗೋಲ್ಕೊಂಡ ಕೋಟೆ, ಸಾಲಾರ್ಜಂಗ್ ವಸ್ತುಸಂಗ್ರಹಾಲಯ, ಬಿರ್ಲಾ ಮಂದಿರ, ಹುಸೇನ್ ಸಾಗರ್ ಇತ್ಯಾದಿ ನೋಡುವುದರೊಂದಿಗೆ ಇತರೇ ವೈವಿದ್ಯಗಳನ್ನು ಸವಿದಾಗಲೇ ಪ್ರವಾಸ ಚಂದವಾಗುವುದು.
ಸಮುದ್ರದಿಂದ ದೂರವಿದ್ದರೂ ಹೈದರಾಬಾದ್ ಭಾರತದ ಮುತ್ತಿನ ನಗರವೆಂದೇ ಪ್ರಸಿದ್ಢ. ಮುತ್ತುಗಳ ಪ್ರಿಯರಾದ ನಿಜಾಮರು ಇರಾಕ್, ಅರೇಬಿಯಾ, ಪರ್ಶಿಯಾಗಳಿಂದ ಮುತ್ತುಗಳನ್ನು ತರಿಸುತ್ತಿದ್ದರು. ನಿಜಾಮರ ಸ್ನೇಹದಿಂದ ಸೇಠ್ ಕೇದಾರ್ ನಾಥ್ ಜಿ ಮೋತಿವಾಲ ೧೯೦೬ರಲ್ಲಿ ಮೊಟ್ಟಮೊದಲ ಮುತ್ತಿನ ಅಂಗಡಿಯನ್ನು ಹೈದರಾಬಾದ್ ನಲ್ಲಿ ತೆಗೆದರು. ಮುತ್ತಿನ ಗಮ್ಮತ್ತೇ ಅಂತಹುದು. ಎಂಥವರನ್ನೂ ಆಕರ್ಷಿಸುತ್ತದೆ.
ಲಾಡ್ ಬಝಾರ್‍ - ಹೈದರಾಬಾದಿನ ಬಳೆಗಳ ಮಾರುಕಟ್ಟೆ. ೪೫೦ಕ್ಕೂ ಹೆಚ್ಚು ಬಳೆಗಳ ಅಂಗಡಿಗಳಿವೆ. ಬಣ್ಣಬಣ್ಣದ ಗಾಜಿನ ಚೂರುಗಳನ್ನು ಮಿಳಿತಗೊಳಿಸಿ ತಯಾರಿಸಿರುವ ಹೈದರಾಬಾದಿ ಬಳೆಗಳು ಲಲನೆಯರ ಕೈಗಳನ್ನು ಶೋಭಿಸುವ ಆಭರಣ.
ಆಟೋ ಟ್ಯಾಕ್ಸಿಗಳಲ್ಲಿ ಓಡಾಡುವುದು ಪಕ್ಕಕ್ಕೆ ಸರಿಸಿ ಇಲ್ಲಿನ ಮೂರು ಚಕ್ರದ ಸೈಕಲ್ ರಿಕ್ಷಾದಲ್ಲಿ ಕೂತು ಓಡಾಡಿ ನೋಡಿ. ಶ್ರಮದ ಮೋಡಿ ನಮ್ಮನ್ನು ಹೈದರಾಬಾದಿಗರನ್ನಾಗಿಸುತ್ತದೆ.
ಆಹಾರ ಪ್ರಿಯರಿಗಾಗಿ ಹೈದರಾಬಾದಿ ಬಿರ್ಯಾನಿ, ಪುಲ್ಲಾರೆಡ್ಡಿಯ ಸಿಹಿತಿಂಡಿಗಳು, ಕರಾಚಿ ಬೇಕರಿಯ ಹಣ್ಣಿನ ಬಿಸ್ಕತ್ ಗಳು ಬಾಯಲ್ಲಿ ನೀರುರಿಸುತ್ತವೆ. ಹೊಟ್ಟೆ ತುಂಬಿದ ಮೇಲೆ ಹೈದರಾಬಾದಿ ಪಾನ್ ಮೆಲ್ಲಿ ಅಥವಾ ಹೈದರಾಬಾದಿ ಇರಾನಿ ಛಾಯ್ ಸೇವಿಸಿ. ಆಗ ಪ್ರವಾಸ ಪರಿಪೂರ್ಣ ಒಳಗೂ ಹೊರಗೂ!

9 comments:

shivu.k said...

ಮಲ್ಲಿಕಾರ್ಜುನ್,
ಹೈದರಾ ಬಾದ್ ಸಿಂಪಲ್ಲಾಗಿ ಒಂದು ಸುತ್ತು ಬಂದಂಗೆ ಆಯ್ತು.

Ashok Uchangi said...

ಪ್ರಿಯ ಮಲ್ಲಿಕಾರ್ಜುನ್,
ಹೈದರಾಬಾದಿನ ಹೈಲೈಟ್ಸ್ ಗಳನ್ನು ನವಿರಾಗಿ ತಿಳಿಸಿದ್ದೀರಿ.ಬಳೆ ತಯಾರಿಸುವ ಕಾರ್ಖಾನೆಗಳಿಗೆ ಭೇಟಿ ನೀಡಿದ್ದರೆ ಅದರ ಸೊಗಸನ್ನೂ ತಿಳಿಸಿ.
ಮೈಸೂರಿನ ಫೋಟೋ ಸ್ಫರ್ಧೆಯಲ್ಲಿ ಬಹುಮಾನ ಬಂದದ್ದಕ್ಕೆ ಅಭಿನಂದನೆಗಳು.
ಅಶೋಕ ಉಚ್ಚಂಗಿ.
http://mysoremallige01.blogspot.com/

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಿಯ ಶಿವು, ನೀವು ಜೊತೆಯಲ್ಲಿದ್ದಿದ್ದರೆ ಅದರ ಕಥೆಯೇ ಬೇರೆಯಿರುತ್ತಿತ್ತು.
ಅಶೋಕ್ ಅವರೆ, ಧನ್ಯವಾದಗಳು. ಬಳೆ ತಯಾರಿಸುವ ಕಾರ್ಖಾನೆಗೆ ನಾನು ಭೇಟಿಕೊಟ್ಟಿಲ್ಲ.

Ittigecement said...

ಮಲ್ಲಿಕಾರ್ಜುನ್.....

ಹೈದರಬಾದಿನಲ್ಲಿ "ಮುತ್ತು" SPECIAL.. ಅಂತೆ...

ಹೌದಾ..?

ಕುಟುಂಬದ ಸಂಗಡ ಹೋಗಿದ್ರಾ..?

ಒಬ್ಬನೆ ಹೋಗಿದ್ರಾ..?

ಮುತ್ತು ತಗೋಂಡ್ರಾ..??

ಇದೆಲ್ಲಾ ಬರಿದೆ ಇಲ್ಲವಲ್ಲ...ಸ್ಸಾ..!!

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಅವರೆ, ಕುಟುಂಬದೊಂದಿಗೆ ಹೋಗಿದ್ದೆವು. ನನ್ನ ಹೆಂಡತಿ ಹೈದರಾಬಾದಿನಲ್ಲಿ ಮುತ್ತು ಬೇಡವೆಂದರು!!

ಹರೀಶ ಮಾಂಬಾಡಿ said...

high`LIGHTED'!!!
Superb

ಚಿತ್ರಾ ಸಂತೋಷ್ said...

ಏನೋಪ್ಪಾ..ಈ ಪ್ರಕಾಶ್ ಸರ್..ಮಲ್ಲಿಯಣ್ಣ.ಭಾರೀ ಡೈಲಾಗುಗಳನ್ನು ಹೊಡೀತಿರಲ್ಲಾ..ಹಿಹಿ ಇರಲಿ ಬಿಡಿ. ಮಲ್ಲಿಯಣ್ಣ..ನಾನು ಹೈದರಾಬಾದ್ ಗೆ ಹೋಗಿಲ್ಲ..ನಿಮ್ಮ ಫೋಟೋ ನೋಡಿ ಹೋಗಬಂದಾಯ್ತು. ಥ್ಯಾಂಕ್ಯೂ..
-ತುಂಬುಪ್ರೀತಿ,
ಚಿತ್ರಾ

Ittigecement said...

ಮಲ್ಲಿಕಾರ್ಜುನ್.....

ಛೇ..ಛೆ.....ಅನ್ಯಾಯ ಸ್ಸಾರ್..
ಅನ್ಯಾಯ...!

ಬೆಂಗಳೂರಲ್ಲಿ ಪ್ರಯತ್ನಿಸಿ..!!

ಬಾನಾಡಿ said...

ಒಳ್ಳಯ ಬ್ಲಾಗ್ ಮಾರಾಯ.
ಬರೆಯುತ್ತಿರು.
ಆಗಾಗ ಬರಬೇಕಾದ ಜಾಗ
ಒಲವಿನಿಂದ
ಬಾನಾಡಿ