Thursday, December 11, 2008

ಗೋಮಟೇಶ

ಭಗವದಾಟೋಪವದು
ಮೆಯ್ಯಾಂತು ನಿಂತಂತೆ,
ಪ್ರೇಮ, ದಯೆ, ಸತ್ಯ, ಸೌಂದರ್ಯ
ಭವ್ಯಸಾಕಾರಗೊಂಡಂತೆ,
ಗಗನದೌದಾರ್ಯಮಂ
ಕಡಲ ಗಾಂಭೀರ್ಯಮಂ

ಹಿಡಿದು ಕಡೆದಿಟ್ಟಂತೆ,
ಶೋಭಿಸುವ ಬೆಳ್ಗೊಳದ ಗೋಮಟೇಶ,
ನೀನೆನಗೊಂದು ಮಹಾಕಾವ್ಯಂ,
ದಿವ್ಯಹರಕೆಯೊಲಿರುವ ನಿರ್ವಾಣಯೋಗೀಶ
ನೀ ನಿತ್ಯ ಭೂವ್ಯೋಮಪೂಜ್ಯಂ
-ಜಿ.ಎಸ್.ಎಸ್.

ಹಿಮಾಲಯದಂತಹ ದೊಡ್ಡ ವ್ಯಕ್ತಿತ್ವದ ಮುಂದೆ ನಾವು ಕುಬ್ಜರಾಗಿ ಸಮರ್ಪಿಸಿಕೊಳ್ಳುವುದು ಆತ್ಮಸಾಕ್ಷಾತ್ಕಾರದ ಮೊದಲ ಹೆಜ್ಜೆ.
ಹಾಸನಜಿಲ್ಲೆಯ ಶ್ರವಣಬೆಳಗೊಳದಲ್ಲಿನ ವಿಂದ್ಯಗಿರಿಯ ಮೇಲೆ ಹಸನ್ಮುಖಿಯಾಗಿ ನಿಂತಿರುವ ಗೋಮಟೇಶ್ವರ ವಿಗ್ರಹದ ಮುಂದೆ ನಿಂತಾಗ ನಾವು ಕುಬ್ಜರಾಗುತ್ತೇವೆ. ಅಹಂಕಾರ ಅಡಗುತ್ತದೆ. ವಿಶಾಲವಾದ ಜಗತ್ತಿನಲ್ಲಿ ನಾವೆಷ್ಟು ಚಿಕ್ಕವರೆಂಬ ಭಾವ ಬಂದು ಮನಸ್ಸು ವಿಶಾಲವಾಗುತ್ತದೆ.
ಗಂಗರ ದೊರೆ ರಾಜಮಲ್ಲನ ಮಂತ್ರಿಯಾಗಿದ್ದ ಚಾವುಂಡರಾಯ ಕ್ರಿ.ಶ. ೯೮೩ ರಲ್ಲಿ ನಿರ್ಮಿಸಿದ ಈ ೫೭ ಅಡಿಗಳ ವಿಗ್ರಹವು ನಮ್ಮ ರಾಷ್ಟ್ರದ ಹೆಮ್ಮೆಯ ಪ್ರತೀಕವಾಗಿದೆ.

1 comment:

Ittigecement said...

ಮಲ್ಲಿಕಾರ್ಜುನರವರೆ....
ಬಹುಬಲಿ ನಮಗೆ ವೈರಾಗ್ಯ ಮೂರ್ತಿಯಾಗಿ, ಭವ ಬಂಧನಗಳಿಂದ ಮುಕ್ತವಾಗಿ
ಆದರ್ಶ ಪ್ರಾಯನಾಗುತ್ತಾನೆ...
ನನ್ನ ಬ್ಲೋಗಿನಲ್ಲಿ ಬರೆದಾಗ ಎಲ್ಲಿ ಅಪಚಾರವಾಯಿತೊ ಎಂದು, ಅಪರಾಧಿ ಮನೋಭಾವನೆಯಿಂದ
ಬಳಲಿದ್ದೇನೆ...
ನಾನು ದೇವರಲ್ಲಿ ಹಾಗೂ ಯಾರಿಗಾದರೂ ನೋವಾದಲ್ಲಿ ಈ ಮೂಲಕ ಕ್ಷಮೆ ಕೇಳುವೆ...
ಈ ಅವಕಾಶ ಕಲ್ಪಿಸಿ ಕೊಟ್ಟ ನಿಮಗೆ ಧನ್ಯವಾದಗಳು...