Sunday, November 9, 2008

ಪಾತರಗಿತ್ತಿಯ ಜನನ

ನಿಧಾನವಾಗಿ ಮೊಗ್ಗು ಅರಳಿ ಹೂವಾಗುವಂತೆ, ತನ್ನ ಕೋಶದಿಂದ ಹೊರಬಂದು ಬಣ್ಣ ಬಣ್ಣದ ರೆಕ್ಕೆ ಅರಳಿಸಿ ನಿಲ್ಲುವ ಚಿಟ್ಟೆಯನ್ನು ಕಾಣುವುದೇ ಸೊಗಸು. ಇದು ಛಾಯಾಗ್ರಹಣ ಮಾಡಲೂ ಸವಾಲಿನ ಕೆಲಸ.
ನಿಂಬೇಗಿಡದ ಎಲೆ ತಿಂದು ದೊಡ್ಡದಾದ ಕಂಬಳಿಹುಳು ಕೋಶದೊಳಕ್ಕೆ ಸೇರಿಕೊಂಡು ನಂತರ ಲೈಮ್ ಬಟರ್ ಫ್ಲೈ ಎಂಬ ಸುಂದರ ಚಿಟ್ಟೆಯಾಗಿ ಹೊರಹೊಮ್ಮುತ್ತದೆ.
ಈ ಚಿಟ್ಟೆಯ ಕಪ್ಪು ಬಣ್ಣದ ರೆಕ್ಕೆ ಮೇಲೆ ಹಳದಿ, ಕೆಂಪು ಮತ್ತು ನೀಲಿಯ ಮಚ್ಚೆಗಳಿವೆ. ಇದರ ಹೊಟ್ಟೆ ಮತ್ತು ಮೈ ಹಳದಿ ಬಣ್ಣವಿದ್ದು ಕಪ್ಪು ಬಣ್ಣದ ಉದ್ದುದ್ದ ಗೆರೆಗಳಿವೆ. ರೆಕ್ಕೆ ಅಗಲಿಸಿದರೆ ೮ ರಿಂದ ೧೦ ಸೆ.ಮೀ.
ಒಂದು ಚಿಟ್ಟೆಯ ಜನನದಿಂದ ನಮ್ಮ ಕಣ್ಮನ ಪುಳಕಗೊಳ್ಳುವುದಷ್ಟೇ ಅಲ್ಲ, ನೂರಾರು ಹೂಗಳ ಪರಾಗಸ್ಪರ್ಶಕ್ಕೆ ಕಾರಣವೂ ಹೌದು. ಹ್ಯಾಪಿ ಬರ್ತ್ ಡೇ ಅಂತ ಹೇಳೋಣವೇ?

4 comments:

Ittigecement said...

ಎಂತಹ ಅದ್ಭುತ ಸರ್..!!
ನಿಸರ್ಗದ ವೈಚಿತ್ರವನ್ನು ಚಂದವಾಗಿ ಸೆರೆ ಹೀಡಿದಿದ್ದೀರಿ..ಬ್ಯಾಕ್ ಗ್ರೌಂಡ್ ಕತ್ತಲೆ ಇಟ್ಟು... ಗ್ರೇಟ್..ಸರ್..
ಒಂದು ಪುಟ್ಟ ಸಲಹೆ ಸರ್... ಈ ನಡುವೆ ನಿಮ್ಮ ಬರವಣಿಗೆ ಕಡಿಮೆ ಆಗಿದೆ.. ಫೋಟೊಗಳ ಸಂಗಡ ಅದೂ ಬರುತ್ತಿರಲಿ..
ಧನ್ಯವಾದಗಳು...

ಚಂದ್ರಕಾಂತ ಎಸ್ said...

ನಮಸ್ಕಾರ. ನಿಮ್ಮ ಬ್ಲಾಗ್ ಗೆ ನನ್ನ ಮೊದಲ ಭೇಟಿ.

ಬಿ.ಎ. ಮಕ್ಕಳಿಗೆ ಚಿಟ್ಟೆಯ ಬಗ್ಗೆ ಃಏಳುವಾಗ ನಿಮ್ಮ ಫೋಟೋಗಳನ್ನು ಉಪಯೋಗಿಸಿಕೊಳ್ಳುವೆ. ಅದ್ಭುತ ಚಿತ್ರಗಳು.

ನಿಮ್ಮ ಚಿತ್ರಗಳನ್ನು ಸುಧಾದಲ್ಲಿ ಎಂದಾದರೂ ಪ್ರಕಟಿಸಿರುವಿರಾ ?

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಕಾಂತ ಅವರೆ, ಚಿತ್ರಗಳು ಮಕ್ಕಳಿಗೆ ಉಪಯುಕ್ತವಾದರೆ ಖಂಡಿತ ಬಳಸಿಕೊಳ್ಳಿ. ಸುಧಾದಲ್ಲಿ ನನ್ನ ಚಿತ್ರಲೇಖನಗಳು ಪ್ರಕಟವಾಗಿವೆ.

ಚಂದ್ರಕಾಂತ ಎಸ್ said...

ನನ್ನ ಊಹೆ ಸರಿಯಾಯಿತು. ಹಿಂದಿನ ವರ್ಷ ಪಾಠಮಾಡಬೇಕಾದರೆ ಸುಧಾದಲ್ಲಿನ ನಿಮ್ಮ ಚಿತ್ರಗಳನ್ನು ಉಪಯೋಗಿಸಿಕೊಂಡಿದ್ದೆ.
ಈಗ ಈ ಚಿತ್ರಗಳನ್ನು ಬಳಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮ ಎಲ್ಲಾ ಚಿತ್ರಗಳೂ ಅದ್ಭುತವಾಗಿ ಮೂಡಿಬಂದಿವೆ.