
ನಂದಿಬೆಟ್ಟದ ಮೇಲೇನಿದೆ?ನೆಹರೂ ಭವನವಿದೆ, ಟಿಪ್ಪು ಅರಮನೆಯಿದೆ, ಯೋಗನಂದೀಶ್ವರ ದೇವಾಲಯವಿದೆ, ಪಾರ್ಕಿದೆ, ಹಸಿರಿದೆ, ಉಸಿರಿಗೆ ಒಳ್ಳೆಯ ಗಾಳಿಯಿದೆ, ಕಣ್ತುಂಬಿಬರುವ ಒಳ್ಳೆಯ ದೃಶ್ಯಾವಳಿಯಿದೆ, ಟಿಪ್ಪುಡ್ರಾಪೂ ಇದೆ! ಅಷ್ಟೇನಾ? ಮಳೆಗಾಲ ಮುಗಿದ ಮೇಲೆ ಒಮ್ಮೆ ಹೋಗಿ ನೋಡಿ. ಅದ್ಭುತ ಮಂಜು ನಿಮ್ಮನ್ನು ಸ್ವಾಗತಿಸಿ ನಿಮ್ಮನ್ನಾವರಿಸಿಕೊಳ್ಳದಿದ್ದರೆ ಕೇಳಿ.

ಈ ಮಂಜಿನಲ್ಲಿ ಗೆಳೆಯರೊಂದಿಗೊ, ಸಂಗಾತಿಯೊಂದಿಗೊ, ಮಕ್ಕಳೊಂದಿಗೊ ಅಥವಾ ಏಕಾಂತವಾಗೊ ಒಂದು ಸುತ್ತು ನಡೆದು ಬನ್ನಿ. ಆಗ ಸಿಗುವ ಆನಂದ, ಮನೋಲ್ಲಾಸ, ಉತ್ಸಾಹ ಪದಗಳಲ್ಲಿ ಬಣ್ಣಿಸಲಾಗದು.ಬಲ್ಲವನೇ ಬಲ್ಲ ಬೆಲ್ಲದ ಸವಿಯ. ಅಲ್ಲಲ್ಲ ಮಂಜಿನ ಸವಿಯ!
2 comments:
ಮಲ್ಲಿಕಾರ್ಜುನರವರೆ..
ನಾನು ನಂದಿ ಬೆಟ್ಟ ನೋಡಿಲ್ಲ. ನಿಮ್ಮ ಲೇಖನ ಹಾಗೂ ಫೋಟೊ ನೋಡಿದ ಮೇಲೆ ಹೋಗಿ ಬರೋಣ ಅನಿಸುತ್ತಿದೆ... ಧನ್ಯವಾದಗಳು...
mundina nanna yaavude pravaasavaagali adu nimma jotheye endu naanu nirdharisibittidhene
Post a Comment