Wednesday, February 24, 2010

ಕಲರವ

ಶಿಡ್ಲಘಟ್ಟ ತ್ಲಾಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಬರಹಗಳ ಪುಸ್ತಕ "ಕಲರವ".
ಗದಗಿನಲ್ಲಿ ಕನ್ನಡ ಸಾಹಿತ್ಯದ ಜಾತ್ರೆ ಮುಗಿಯುತ್ತಿರುವ ಹೊತ್ತಿನಲ್ಲೇ ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಶಾಲೆಯ ಶಿಕ್ಷಕರು ಮಕ್ಕಳಲ್ಲಿ ಬರೆಯಲು ಪ್ರೇರೇಪಿಸಿ "ಕಲರವ" ವನ್ನು ಉಂಟುಮಾಡುತ್ತಿದ್ದಾರೆ. ಇದರ ವಿಶೇಷವೆಂದರೆ ಒಂದರಿಂದ ಎಂಟನೇ ತರಗತಿವರೆಗಿನ ಮಕ್ಕಳು ಬರೆದಿರುವ ಕಥೆ, ಕವನ, ಚಿತ್ರ, ನಾಟಕ, ಪ್ರಬಂಧಗಳನ್ನು ಝೆರಾಕ್ಸ್ ಮಾಡಿಸಿ ಒಟ್ಟು ಮಾಡಿ ಪುಸ್ತಕ ರೂಪ ಕೊಟ್ಟಿದ್ದಾರೆ. ಶಿಕ್ಷಣವೆಂದರೆ ಪಠ್ಯಪುಸ್ತಕ, ಪರೀಕ್ಷೆಗಳಷ್ಟೇ ಅಲ್ಲ, ಮಕ್ಕಳ ಅಭಿವ್ಯಕ್ತಿಯನ್ನು ಪ್ರಸ್ತುತಪಡಿಸುವ ಮಾಧ್ಯಮವೂ ಹೌದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಈ ಶಾಲೆಯಲ್ಲಿ ಪ್ರತಿಯೊಂದು ಮಗುವಿನ ಬಳಿಯೂ "ಲೇಖನಗಳ ಪುಸ್ತಕ" ಎಂಬ ಸಣ್ಣ ನೋಟ್‌ಪುಸ್ತಕ ಇರಲೇಬೇಕು. ಇದರಲ್ಲಿ ಮಕ್ಕಳು ತಮಗೆ ತೋಚಿದಂತೆ ಕಥೆ, ಕವನ, ಅನಿಸಿಕೆ ಇತ್ಯಾದಿ ಬರೆಯುವ ಸ್ವಾತಂತ್ರವಿರುತ್ತದೆ. ಕೆಲವೊಮ್ಮ ಶಿಕ್ಷಕರು ಇಷ್ಟದ ವ್ಯಕ್ತಿ, ಸ್ಥಳ ಇತ್ಯಾದಿ ವಿಷಯಗಳನ್ನು ಕೊಟ್ಟು ಪ್ರೇರೇಪಿಸುವುದೂ ಉಂಟು. ಅತ್ಯಂತ ಸಂಭ್ರಮದಿಂದ ಮತ್ತು ಆಸಕ್ತಿಯಿಂದ ಮಕ್ಕಳು ಬರೆಯುತ್ತಾರೆ. ಮಕ್ಕಳ ಬರಹಗಳ ಮೂಲ ಆಶಯಕ್ಕೆ ಧಕ್ಕೆ ಬರದಂತೆ ಶಿಕ್ಷಕರು ಸಲಹೆ ಸೂಚನೆ ನೀಡುತ್ತಿರುತ್ತಾರೆ. ಮೊದಲು ಕುತೂಹಲದಿಂದ ಬರೆಯಲು ಪ್ರಾರಂಭಿಸುವ ಮಕ್ಕಳು ಕ್ರಮೇಣ ಆತ್ಮವಿಶ್ವಾಸ ಮೂಡಿದಂತೆ ತನ್ನ ಭಾವನೆಗಳಿಗೆ ಅಕ್ಷರ ರೂಪ ನೀಡುವಲ್ಲಿ ಸಫಲರಾಗಿ ಬರೆಯುವ ಸಂಭ್ರಮವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಶಾಲೆಯ ಮಕ್ಕಳು ತಮ್ಮ "ಲೇಖನಗಳ ಪುಸ್ತಕ"ದಲ್ಲಿ ಬರೆಯುವುದರಲ್ಲಿ ಮಗ್ನರಾಗಿರುವುದು.
ಹೀಗೆ ಬರೆದ ಲೇಖನಗಳಲ್ಲಿ ಶಿಕ್ಷಕರು ಆಯ್ದು ಸುಂದರ ಬರವಣಿಗೆಯಲ್ಲಿ ಅವರಿಂದಲೇ ಬರೆಸಿ ಝೆರಾಕ್ಸ್ ಮಾಡಿಸಿ ೪೦ ಪುಟಗಳ ಪುಸ್ತಕ ಮಾಡ್ದಿದಾರೆ. ಶಾಲೆಯಲ್ಲಿರುವ ಎಲ್ಲ ಮಕ್ಕಳಿಗೂ ಈ ಪುಸ್ತಕ ಹಂಚಿ ಶಾಲಾ ಪತ್ರಿಕೆಯನ್ನಾಗಿಸುವುದು ಇವರ ಉದೇಶ. ಪ್ರತಿ ತಿಂಗಳೂ ಇಲಿನ ಶಿಕ್ಷಕರು ತಮ್ಮ ವೇತನದ್ಲಲಿ ೧೦೦ ರೂ ತೆಗೆದಿಟ್ಟು ಶಿಕ್ಷಕರ ನಿಧಿಯಾಗಿ ಮಾಡಿಕೊಂಡು ಆ ನಿಧಿಯಿಂದ ೨೦೦ ಪುಸ್ತಕಗಳನ್ನು ಮಾಡಿಸ್ದಿದಾರೆ. ವರ್ಷಕ್ಕೆ ಕನಿಷ್ಠ ಮೂರು ಪುಸ್ತಕವನ್ನಾದರೂ ತರುವ ಆಸೆಯಿದೆ ಎನ್ನುತ್ತಾರೆ ಶಿಕ್ಷಕರು.
ಪುಸ್ತಕದ ಮುನ್ನುಡಿಯಲ್ಲಿ ಬರೆದಂತೆ ಮಕ್ಕಳ ಬರಹಗಳೆಂದರೆ ಅವರ ವ್ಯಕ್ತಿತ್ವಕ್ಕೆ ಸಿಗುವ ದಿವ್ಯ ಮನ್ನಣೆ ಎಂಬ ಮಾತು ಪುಸ್ತಕವನ್ನು ಓದುತ್ತಿದ್ದಂತೆ ಮನದಟ್ಟಾಗುತ್ತದೆ. ಈ ರೀತಿ ಬರೆಯಲು ಪ್ರಚೋದಿಸುವುದು ಮಕ್ಕಳ ಮಾನಸಿಕ ವಿಕಾಸ ಮತ್ತು ಭಾಷಿಕ ಬೆಳವಣಿಗೆಗೆ ಬಹಳ ಸಹಕಾರಿ ಎಂಬುದು ಇಲ್ಲಿನ ಶಿಕ್ಷಕರ ಅನಿಸಿಕೆ. ಮಕ್ಕಳ ಬರವಣಿಗೆಯನ್ನು ಸುಂದರಗೊಳಿಸುವ ಹಾಗೂ ಅಭಿವ್ಯಕ್ತಿ ಕೌಶಲ್ಯವನ್ನು ಬೆಳೆಸುವ ಮಾಧ್ಯಮವಾಗಿ ಈ ಶಾಲಾ ಪತ್ರಿಕೆ ಮುನ್ನಡಿ ಇಡುತ್ತಿದೆ.


"ಕಲರವ"ದಲ್ಲಿ ಎರಡನೇ ತರಗತಿಯಲ್ಲಿರುವ ಕೆ.ಎಸ್.ಕವನ ತನ್ನ ತಾಯಿಯ ಬಗ್ಗೆ ಬರೆದಿರುವುದು.
"ನನ್ನ ತಾಯಿಯ ಹೆಸರು ಅಂಬುಜ. ಅವರು ನನಗೆ ತುಂಬಾ ಇಷ್ಟ. ಏಕೆ ಅಂದರೆ ಅವರು ನನಗೆ ಊಟ ಇಕ್ಕುತ್ತಾರೆ..." ಹೀಗೆ ಸಾಗುತ್ತದೆ ಎರಡನೇ ತರಗತಿಯ್ಲಲಿರುವ ಕೆ.ಎಸ್.ಕವನ ತನ್ನ ತಾಯಿಯ ಬಗ್ಗೆ ಬರೆದಿರುವುದು. ಕೃತಕ ಪದಪುಂಜಗಳ್ಲಿಲದೇ ಮಕ್ಕಳು ತುಂಬಾ ಸರಳವಾಗಿ ಮುಗ್ಧತೆಯಿಂದ ಬರೆದಿರುವ ಬರಹಗಳು ಆಪ್ತತೆಯಿಂದ ಕೂಡಿದೆ. ಕಲರವ-೧ ರಲ್ಲಿ ೧೦ ಕಥೆಗಳು, ೬ ಪದ್ಯಗಳು, ೧೧ ಲಘು ಪ್ರಬಂಧಗಳು, ೮ ಚಿತ್ರಗಳು ಮತ್ತು ಒಂದು ನಾಟಕವಿದೆ. ಮಕ್ಕಳ ಭಾವನೆಗಳು, ಆಸೆಗಳು, ಅಗತ್ಯಗಳು, ಅನಿಸಿಕೆಗಳು ಅವರ ಬರಹಗಳ ಮೂಲಕ ನಮಗೆ ಸಿಗುತ್ತವೆ.
ಮಕ್ಕಳ ಬರಹಗಳ ಬಗ್ಗೆ ಈ ಶಾಲೆಯ ಶಿಕ್ಷಕರ ಆಸಕ್ತಿ ಇದೇ ಹೊಸದೇನಲ್ಲ. ಹಿಂದೆ "ನವಿಲುಗರಿ’ ಎಂಬ ಮಕ್ಕಳ ಮಾಸಿಕವೊಂದನ್ನು ಪ್ರಕಟಿಸುತ್ತ್ದಿದರು. ಅದರಲ್ಲಿ ಇಡೀ ಜ್ಲಿಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬರೆದ ಲೇಖನ ಪ್ರಕಟಿಸುತ್ತಿದ್ದರು. ಒಂದು ವರ್ಷ ನಡೆದು ಕಾರಣಾಂತರಗಳಿಂದ ನಿಂತುಹೋದ ನವಿಲುಗರಿ ಈಗಿನ ಕಲರವಕ್ಕೆ ಸ್ಫೂರ್ತಿ.
ಮುಖ್ಯ ಶಿಕ್ಷಕರಾದ ಹೆಚ್.ಮುನಿಯಪ್ಪ, ಸಹಶಿಕ್ಷಕರಾದ ಎಂ.ದೇವರಾಜ್, ಹೆಚ್.ಬಿ.ಮಂಜುನಾಥ, ಜೆ.ಶ್ರೀನಿವಾಸ, ಕೆ.ಶಿವಶಂಕರ, ಎಸ್.ಕಲಾಧರ್, ಕೆ.ಛಾಯಾದೇವಿ ಮತ್ತು ವಿದ್ಯಾಲಕ್ಷ್ಮಿ ಇವರುಗಳ ಸಾಂಘಿ ಕ ಪ್ರಯೋಗವಾಗಿದೆ ಕಲರವ-೧.
ಮಕ್ಕಳನ್ನು ಅರ್ಥಮಾಡಿಕೊಂಡು ಅವರ ಸೃಜನಶೀಲತೆಯನ್ನು ಅರಳಿಸುವಂತಹ ಶಿಕ್ಷಣ ಹೆಚ್ಚು ಅರ್ಥಪೂರ್ಣ. ಈ ನಿಟ್ಟಿನ್ಲಲಿ ಮಕ್ಕಳ ಭಾವನೆಗಳಿಗೆ ಅಕ್ಷರದ ರೂಪು ನೀಡುತ್ತಾ ಮುನ್ನಡೆಯಿಟ್ಟಿದೆ ಈ ಶಾಲೆ.

ಮಕ್ಕಳ ಪುಸ್ತಕ ಕಲರವ-೧ ಅನ್ನು ಸಾಹಿತಿ ಮತ್ತು ಶಿಕ್ಷಕ ಸ.ರಘುನಾಥ್,ಆದಿಮ ಸಂಸ್ಥೆಯ ಕೋಟಗಾನಹಳ್ಳಿ ರಾಮಯ್ಯ ಮತ್ತು ಅಧ್ಯಾಪಕ ಚಿ.ಶ್ರೀನಿವಾಸಯ್ಯ ಬಿಡುಗಡೆ ಮಾಡಿದರು.

ಎರಡನೇ ತರಗತಿಯ ಕೆ.ಎಸ್.ಕವನ ಕಲರವ ಪುಸ್ತಕದಲ್ಲಿ ತಾನು ಬರೆದಿರುವ ಕವನವನ್ನು ಓದುತ್ತಿರುವುದು.

19 comments:

ಸವಿಗನಸು said...

ಮಲ್ಲಿ ಸರ್,
ಗ್ರಾಮೀಣ ಸೊಗಡಿನ ಶಾಲಾ ಮಕ್ಕಳ ಚಿತ್ರಣ ಬಹಳ ಚೆನ್ನಾಗಿದೆ

ಸುಧೇಶ್ ಶೆಟ್ಟಿ said...

Naanu inthaha shaaleyalli kalithiddare yeshtu chennagi iruthittu yendhu anisithu.... english madhyamadha haavaliyalli kochchihoguttiruva shaalegaLa naduve inthaha ondhu prayathnakke kai haakiruva kannamangala shaale thumba khushi kottitu.

makkala abhivyakthiyu thumba chennagi moodi bandhidhe pusthakadalli...

Putta said...

ನಮಸ್ಕಾರ.

ಈ ಕೆಳಗಿನ ಮಾಹಿತಿಗಳನ್ನು ನೀಡಿ. (ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.!)
೧. ಈ ಪುಸ್ತಕದ ಪ್ರತಿಯನ್ನು ಹೇಗೆ ಪಡೆಯುವುದು.
೨. ಈ ಪುಸ್ತಕದ ಪ್ರಕಟಣೆಗಾಗಿ ನಾನು ಹೇಗೆ ಸಹಾಯ ಮಾಡಬಹುದು?

ನಿಮ್ಮವ,
ಸತೀಶ್

PARAANJAPE K.N. said...

ಒಳ್ಳೆಯ ಪ್ರಯತ್ನ, ಗ್ರಾಮೀಣ ಭಾಗದ ಶಾಲೆ ಇ೦ತಹ ಯತ್ನದಲ್ಲಿ ಯಶಸ್ವಿಯಾಗಿರುವುದು ಮೆಚ್ಚಬೇಕಾದ ಅ೦ಶ. ಇದನ್ನು ಪ್ರಕಟಿಸಿದ ನೀವು ಕೂಡ ಅಭಿನ೦ದನಾರ್ಹರು.

ಮಲ್ಲಿಕಾರ್ಜುನ.ಡಿ.ಜಿ. said...

ಸ್ನೇಹಿತರೆ,
ಈ ಪುಸ್ತಕದ ಬಗ್ಗೆ ಹೆಚ್ಚಿನ ವಿವರಗಳಿಗೆ ಶಿಕ್ಷಕ ಕಲಾಧರ್ (9900695142) ಅವರನ್ನು ಸಂಪರ್ಕಿಸಬಹುದು.

ಕ್ಷಣ... ಚಿಂತನೆ... bhchandru said...

ಮಲ್ಲಿಕಾರ್ಜುನ ಸರ್‍, ಇದೊಂದು ಒಳ್ಳೆಯ ಪ್ರಯತ್ನವಾಗಿದೆ. ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಇಂತಹ ಬೆಳವಣಿಗೆಗೆ ಕಾರಣವಾದವರಿಗೆ ಧನ್ಯವಾದಗಳು.
ಸ್ನೇಹದಿಂದ,

Deepasmitha said...

ಖಂಡಿತ ಒಳ್ಳೆ ಪ್ರಯತ್ನ. ಎಲ್ಲಾ ಶಾಲೆಗಳಲ್ಲಿ ಹೀಗೆ ಮಾಡಬೇಕು. ಮಕ್ಕಳ ಸುಪ್ತ ಪ್ರತಿಭೆ ಹೊರಬರುತ್ತದೆ

ಸಾಗರದಾಚೆಯ ಇಂಚರ said...

ಸರ್
ಮಕ್ಕಳ ಸ್ರಜನಶೀಲತೆಯನ್ನು ಹೊರಗೆ ತರುವ ಇಂಥಹ ಕಾರ್ಯಕ್ರಮಗಳು
ಶ್ಲಾಘನೀಯ

ಸುಮ said...

ಶಾಲೆಗಳಲ್ಲಿ ನಡೆಯುವ ಇಂತಹ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುತ್ತವೆ. ಇಂತಹ ಪ್ರಯತ್ನ ಮಾಡುತ್ತಿರುವ ಶಿಕ್ಷಕರು ಅಭಿನಂದನಾರ್ಹರು.

ವಿ.ಆರ್.ಭಟ್ said...

ಗ್ರಾಮೀಣ ಶಾಲೆಯ ಮಕ್ಕಳ ರುಚಿ-ಅಭಿರುಚಿ, ಅವುಗಳ ಮುಗ್ಧ-ಸ್ನಿಗ್ದ ಮುದ್ದು ಮುಖಗಳು, ಅವರು ಆಡುವ ಆಟಗಳು, ಅವರ ಹೊಂದಾಣಿಕೆ ಪಟ್ಟಣದ,ಶಹರದ ಶಾಲೆಗಳಲ್ಲಿ ಕಾಣಸಿಗುವುದಿಲ್ಲ, ಎಂದಿದ್ದರೂ ರೈತರ ಮಕ್ಕಳಾದ ಅವರಿಗೆ ಭೂಮಿತಾಯಿ ಆಡಲು ಸಾಕಷ್ಟು ಜಾಗನೀಡುತ್ತಾಳೆ, ಆತುಕೊಳ್ಳಲು-ಅವಿತುಕೊಳ್ಳಲು ಹಸಿರು ಗಿಡ-ಮರಗಳು ಸಿಗುತ್ತವೆ, ಶುದ್ಧ ಗಾಳಿ, ಶುಧ್ಧ ಕುಡಿಯುವ ನೀರು ಸಿಗುತ್ತದೆ, ಒಳ್ಳೆಯ ಶಿಕ್ಷಕರು ಸಿಗುತ್ತಾರೆ, ಇಷ್ಟಕ್ಕೆ ತೃಪ್ತಿಪಟ್ಟು ಮಿಕ್ಕಿದ್ದನ್ನೆಲ್ಲ ಅವರು ಮರೆತು, ಬರೇ ಜ್ಞಾನಾರ್ಜನೆಯಿಂದ ಸಾಧನೆಮಾಡಲು ಸಾಧ್ಯ, ನನ್ನ ಬಾಲ್ಯದ ನೆನಪು ಬಂತು, ನಿಮಗೆಧನ್ಯವಾದ

sunaath said...

Great! Simply Great!!
ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು.

Guru's world said...

ಮಲ್ಲಿಕಾರ್ಜುನ್ ,
ಒಳ್ಳೆಯ ಬರಹ ಒಂದನ್ನು ಕೊಟ್ಟಿದ್ದಿರಿ.. ಗ್ರಾಮೀಣ ಮಕ್ಕಳ , ಅವರ ಆಸಕ್ತಿ ವಿಷಯಗಳ ಬಗ್ಗೆ ಬರೆದ ಪುಸ್ತಕ ಮತ್ತು ಅದಕ್ಕೆ ಉತ್ತೇಜನ ನೀಡುತ್ತಿರುವ ಶಾಲ ಶಿಕ್ಷಕರು ಗಳಿಗೆ ನನ್ನ ಅಭಿನಂದನೆ ಗಳು.. ಇದೆ ರೀತಿ ಎಲ್ಲ ಶಾಲೆ ಗಳಲ್ಲೂ ಆಗಬೇಕು... ತುಂಬ ಸಂತೋಷ ಆಯಿತು ಈ ಉತ್ಸಾಹ ವನ್ನು ನೋಡಿ,, ಇದು ಹೀಗೆ ಮುಂದುವರಿಯಲಿ....ಎಂದು ಹಾರೈಸುತ್ತೇನೆ...

ಶರಶ್ಚಂದ್ರ ಕಲ್ಮನೆ said...

ಮಲ್ಲಿ ಅಣ್ಣ,
ಕಲರವದ ಬಗ್ಗೆ ಕೇಳಿ ಸಂತೋಷವಾಯಿತು. ಮಕ್ಕಳ ಕಲ್ಪನೆಗೆ ಪದಗಳ ಸ್ವಾತಂತ್ರ ಕೊಡುತ್ತಿರುವ ಶಿಕ್ಷಕರಿಗೆ ಧನ್ಯವಾದಗಳು...

Ranjita said...

ಮಕ್ಕಳ ಸ್ರಜನಶೀಲತೆಯನ್ನ ಹೊರ ತರುವ ಯೋಜನೆ ನೋಡು ಖುಶಿಆಯ್ತು .. ಎಲ್ಲ ಕಡೆಗಳಲ್ಲೂ ಹೀಗೆ ಈ ಕಾರ್ಯಕ್ರಮ ಕೈಗೊಂಡರೆ ಚೆನ್ನಾಗಿರತ್ತೆ :)

ಸೀತಾರಾಮ. ಕೆ. said...

ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕನ್ನಮ೦ಗಲ ಶಾಲೇಯ ಗುರುಗಳ ತನು-ಮನ-ಧನ ಪ್ರಯತ್ನ ಷ್ಳಾಘನೀಯ.ಮಾಹಿತಿಗೆ ಧನ್ಯವಾದಗಳು. ಅಥಣಿ ಗ್ರಾಮದ ಕೋಹಳ್ಳಿಯಲ್ಲೊ೦ದು ಮಿತ್ರ ಬಳಗ ಊರಲ್ಲಿನ ಮಕ್ಕಳಲ್ಲಿ ಇ೦ತಹ ಜಾಗೃತಿ ನೀಡಿ ಕೈಬರಹದ ಪತ್ರಿಕೆಗಳನ್ನು ಅವಿರ್ರತವಾಗಿ ಕಳೆದ ೨೦ ವರ್ಷಗಳಿ೦ದ ಹೊರತರುತ್ತಿದೆ. "ಪುಸ್ತಕದ ಮನೆ" ಎ೦ಬ ಹೆಸರಲ್ಲಿ ಗ್ರಾಮೀಣ ಮಕ್ಕಳ-ಯುವಕರ ಪ್ರತಿಭೆ ಹೊರತರುವ, ಗ್ರ೦ಥಾಲಯ ಸೌಲಭ್ಯ ಒದಗಿಸುವ ಹಾಗೂ ವಿವೇಕಾನ೦ದರ ಜಯ೦ತಿಯ ದಿನದ೦ದು ವಿನೂತನ ಕಾರ್ಯಕ್ರಮ ಮಾಡುವದರಿ೦ದ ಆಚರಿಸುತ್ತದೆ. ಒ೦ದು ಕಡೇ ನಮ್ಮ ಸಾಹಿತ್ಯ ವರ್ಗ ಹಲವು ಮಜಲಿನಲ್ಲಿ ಸಿಕ್ಕು ಸೀಮಿತಿವಾಗುತ್ತಿರುವಾಗ ಇ೦ತಹ ಪ್ರಯತ್ನಗಳು ಸಾಹಿತ್ಯದಲ್ಲಿ ವೈವಿಧ್ಯತೆ ಮತ್ತು ವಿಸ್ತಾರವನ್ನ ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನಗಳನ್ನು ಪ್ರಚಾರವಿಲ್ಲದೇ ಮಾಡುತ್ತವೆ.
ತಮ್ಮ ಚಿತ್ರ-ಮಾಹಿತಿಗೆ ಧನ್ಯವಾದಗಳು.

shivu.k said...

ಮಲ್ಲಿಕಾರ್ಜುನ್,

ಇದು ನಿಜಕ್ಕೂ ಅದ್ಬುತ ಕಾನ್ಸೆಪ್ಟ್. ಕನ್ನಮಂಗಲ ಶಾಲೆ, ಅಲ್ಲ್ಲಿನ ಶಿಕ್ಷಕರು ಮತ್ತು ಮಕ್ಕಳಿಗೆ ಅಭಿನಂದನೆಗಳು. ಶಿಕ್ಷಕರು ತಮ್ಮ ಸಂಬಳದಿಂದಲೇ ನೂರು ರೂ ತೆಗೆದು ಇಂಥ ಒಳ್ಳೆಯ ಯೋಜನೆಗಳನ್ನು ಜಾರಿಗೆ ತರುತ್ತಿರುವುದು ನಿಜಕ್ಕೂ ಅಭಿನಂದನಾರ್ಹ. ಇದರಿಂದ ಮಕ್ಕಳ ಕೂತೂಹಲ, ಬರಹದ ಹವ್ಯಾಸ, ಅಲೋಚನ ಶಕ್ತಿ ಹೆಚ್ಚುತ್ತದೆ. ಮಕ್ಕಳ ಮನಸ್ಸಿನಲ್ಲಿ ನಿಶ್ಯಬ್ದವಾಗಿ "ಕಲರವ" ಮೂಡಿಸುತ್ತಿರುವ ಇಂಥ ಪ್ರಯತ್ನವನ್ನು ಯಾರಾದರೂ ಸರಿಯಾಗಿ ಸರ್ಕಾರದ ಗಮನಕ್ಕೆ ತರಬಾರದೆ!

PRAVEEN ಮನದಾಳದಿಂದ said...

ಗ್ರಾಮೀಣ ಪ್ರದೇಶದ ಮಕ್ಕಳ ವಿಧ್ಯಾಭ್ಯಾಸದ ಬಗ್ಗೆ ಗಮನ ಹರಿಸಿ, ಒಳ್ಳೆಯ ಪ್ರಯತ್ನ ಮಾಡಿದ್ದೀರಿ, ದನ್ಯವಾದಗಳು. ಎಲ್ಲಾ ಶಾಲೆಗಲ್ಲೂ ಇಂತಹ ಪ್ರಯತ್ನ ಮಾಡಿದಲ್ಲಿ ಭಾರತ ಸಂಪೂರ್ಣ ಸಾಕ್ಷರತಾ ದೇಶವಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ.

AntharangadaMaathugalu said...

ಮಲ್ಲಿಕಾರ್ಜುನ್ ಸಾರ್...
ಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ ತಮ್ಮ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಲು ಪ್ರಚೋದಿಸುವ ಈ ತರಹದ ಚಟುವಟಿಕೆಗಳು ಅತ್ಯಂತ ಪ್ರಭಾವಯುಕ್ತ. ಅದರಲ್ಲೂ ಗ್ರಾಮೀಣ ಶಾಲೆಯೊಂದರಲ್ಲಿ ಇದು ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಮತ್ತು ಅದನ್ನು ಅಂತರ್ಜಾಲದಲ್ಲಿ ಪ್ರಕಟಿಸಿ, ಪ್ರಚಾರ ಪಡಿಸಿದ ನಿಮಗೂ ಧನ್ಯವಾದಗಳು...

ವಿನುತ said...

ಗ್ರಾಮೀಣ ಶಾಲೆಯೊಂದರಲ್ಲಿ ಈ ತರಹದ ಪ್ರಯತ್ನ ನಿಜಕ್ಕೂ ಅಭಿನಂದನೀಯ ಹಾಗೂ ಅನುಕರಣೀಯ. ಪರಿಚಯಿಸಿದ್ದಕ್ಕೆ ಹಾಗೂ ಸಂಪರ್ಕಿಸಬೇಕಾದ ಮಾಹಿತಿ ಒದಗಿಸಿದ್ದಕ್ಕೆ ಧನ್ಯವಾದಗಳು.