ಗದಗಿನಲ್ಲಿ ಕನ್ನಡ ಸಾಹಿತ್ಯದ ಜಾತ್ರೆ ಮುಗಿಯುತ್ತಿರುವ ಹೊತ್ತಿನಲ್ಲೇ ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಶಾಲೆಯ ಶಿಕ್ಷಕರು ಮಕ್ಕಳಲ್ಲಿ ಬರೆಯಲು ಪ್ರೇರೇಪಿಸಿ "ಕಲರವ" ವನ್ನು ಉಂಟುಮಾಡುತ್ತಿದ್ದಾರೆ. ಇದರ ವಿಶೇಷವೆಂದರೆ ಒಂದರಿಂದ ಎಂಟನೇ ತರಗತಿವರೆಗಿನ ಮಕ್ಕಳು ಬರೆದಿರುವ ಕಥೆ, ಕವನ, ಚಿತ್ರ, ನಾಟಕ, ಪ್ರಬಂಧಗಳನ್ನು ಝೆರಾಕ್ಸ್ ಮಾಡಿಸಿ ಒಟ್ಟು ಮಾಡಿ ಪುಸ್ತಕ ರೂಪ ಕೊಟ್ಟಿದ್ದಾರೆ. ಶಿಕ್ಷಣವೆಂದರೆ ಪಠ್ಯಪುಸ್ತಕ, ಪರೀಕ್ಷೆಗಳಷ್ಟೇ ಅಲ್ಲ, ಮಕ್ಕಳ ಅಭಿವ್ಯಕ್ತಿಯನ್ನು ಪ್ರಸ್ತುತಪಡಿಸುವ ಮಾಧ್ಯಮವೂ ಹೌದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಈ ಶಾಲೆಯಲ್ಲಿ ಪ್ರತಿಯೊಂದು ಮಗುವಿನ ಬಳಿಯೂ "ಲೇಖನಗಳ ಪುಸ್ತಕ" ಎಂಬ ಸಣ್ಣ ನೋಟ್ಪುಸ್ತಕ ಇರಲೇಬೇಕು. ಇದರಲ್ಲಿ ಮಕ್ಕಳು ತಮಗೆ ತೋಚಿದಂತೆ ಕಥೆ, ಕವನ, ಅನಿಸಿಕೆ ಇತ್ಯಾದಿ ಬರೆಯುವ ಸ್ವಾತಂತ್ರವಿರುತ್ತದೆ. ಕೆಲವೊಮ್ಮ ಶಿಕ್ಷಕರು ಇಷ್ಟದ ವ್ಯಕ್ತಿ, ಸ್ಥಳ ಇತ್ಯಾದಿ ವಿಷಯಗಳನ್ನು ಕೊಟ್ಟು ಪ್ರೇರೇಪಿಸುವುದೂ ಉಂಟು. ಅತ್ಯಂತ ಸಂಭ್ರಮದಿಂದ ಮತ್ತು ಆಸಕ್ತಿಯಿಂದ ಮಕ್ಕಳು ಬರೆಯುತ್ತಾರೆ. ಮಕ್ಕಳ ಬರಹಗಳ ಮೂಲ ಆಶಯಕ್ಕೆ ಧಕ್ಕೆ ಬರದಂತೆ ಶಿಕ್ಷಕರು ಸಲಹೆ ಸೂಚನೆ ನೀಡುತ್ತಿರುತ್ತಾರೆ. ಮೊದಲು ಕುತೂಹಲದಿಂದ ಬರೆಯಲು ಪ್ರಾರಂಭಿಸುವ ಮಕ್ಕಳು ಕ್ರಮೇಣ ಆತ್ಮವಿಶ್ವಾಸ ಮೂಡಿದಂತೆ ತನ್ನ ಭಾವನೆಗಳಿಗೆ ಅಕ್ಷರ ರೂಪ ನೀಡುವಲ್ಲಿ ಸಫಲರಾಗಿ ಬರೆಯುವ ಸಂಭ್ರಮವನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ಹೀಗೆ ಬರೆದ ಲೇಖನಗಳಲ್ಲಿ ಶಿಕ್ಷಕರು ಆಯ್ದು ಸುಂದರ ಬರವಣಿಗೆಯಲ್ಲಿ ಅವರಿಂದಲೇ ಬರೆಸಿ ಝೆರಾಕ್ಸ್ ಮಾಡಿಸಿ ೪೦ ಪುಟಗಳ ಪುಸ್ತಕ ಮಾಡ್ದಿದಾರೆ. ಶಾಲೆಯಲ್ಲಿರುವ ಎಲ್ಲ ಮಕ್ಕಳಿಗೂ ಈ ಪುಸ್ತಕ ಹಂಚಿ ಶಾಲಾ ಪತ್ರಿಕೆಯನ್ನಾಗಿಸುವುದು ಇವರ ಉದೇಶ. ಪ್ರತಿ ತಿಂಗಳೂ ಇಲಿನ ಶಿಕ್ಷಕರು ತಮ್ಮ ವೇತನದ್ಲಲಿ ೧೦೦ ರೂ ತೆಗೆದಿಟ್ಟು ಶಿಕ್ಷಕರ ನಿಧಿಯಾಗಿ ಮಾಡಿಕೊಂಡು ಆ ನಿಧಿಯಿಂದ ೨೦೦ ಪುಸ್ತಕಗಳನ್ನು ಮಾಡಿಸ್ದಿದಾರೆ. ವರ್ಷಕ್ಕೆ ಕನಿಷ್ಠ ಮೂರು ಪುಸ್ತಕವನ್ನಾದರೂ ತರುವ ಆಸೆಯಿದೆ ಎನ್ನುತ್ತಾರೆ ಶಿಕ್ಷಕರು.
ಪುಸ್ತಕದ ಮುನ್ನುಡಿಯಲ್ಲಿ ಬರೆದಂತೆ ಮಕ್ಕಳ ಬರಹಗಳೆಂದರೆ ಅವರ ವ್ಯಕ್ತಿತ್ವಕ್ಕೆ ಸಿಗುವ ದಿವ್ಯ ಮನ್ನಣೆ ಎಂಬ ಮಾತು ಪುಸ್ತಕವನ್ನು ಓದುತ್ತಿದ್ದಂತೆ ಮನದಟ್ಟಾಗುತ್ತದೆ. ಈ ರೀತಿ ಬರೆಯಲು ಪ್ರಚೋದಿಸುವುದು ಮಕ್ಕಳ ಮಾನಸಿಕ ವಿಕಾಸ ಮತ್ತು ಭಾಷಿಕ ಬೆಳವಣಿಗೆಗೆ ಬಹಳ ಸಹಕಾರಿ ಎಂಬುದು ಇಲ್ಲಿನ ಶಿಕ್ಷಕರ ಅನಿಸಿಕೆ. ಮಕ್ಕಳ ಬರವಣಿಗೆಯನ್ನು ಸುಂದರಗೊಳಿಸುವ ಹಾಗೂ ಅಭಿವ್ಯಕ್ತಿ ಕೌಶಲ್ಯವನ್ನು ಬೆಳೆಸುವ ಮಾಧ್ಯಮವಾಗಿ ಈ ಶಾಲಾ ಪತ್ರಿಕೆ ಮುನ್ನಡಿ ಇಡುತ್ತಿದೆ.

"ಕಲರವ"ದಲ್ಲಿ ಎರಡನೇ ತರಗತಿಯಲ್ಲಿರುವ ಕೆ.ಎಸ್.ಕವನ ತನ್ನ ತಾಯಿಯ ಬಗ್ಗೆ ಬರೆದಿರುವುದು.
"ನನ್ನ ತಾಯಿಯ ಹೆಸರು ಅಂಬುಜ. ಅವರು ನನಗೆ ತುಂಬಾ ಇಷ್ಟ. ಏಕೆ ಅಂದರೆ ಅವರು ನನಗೆ ಊಟ ಇಕ್ಕುತ್ತಾರೆ..." ಹೀಗೆ ಸಾಗುತ್ತದೆ ಎರಡನೇ ತರಗತಿಯ್ಲಲಿರುವ ಕೆ.ಎಸ್.ಕವನ ತನ್ನ ತಾಯಿಯ ಬಗ್ಗೆ ಬರೆದಿರುವುದು. ಕೃತಕ ಪದಪುಂಜಗಳ್ಲಿಲದೇ ಮಕ್ಕಳು ತುಂಬಾ ಸರಳವಾಗಿ ಮುಗ್ಧತೆಯಿಂದ ಬರೆದಿರುವ ಬರಹಗಳು ಆಪ್ತತೆಯಿಂದ ಕೂಡಿದೆ. ಕಲರವ-೧ ರಲ್ಲಿ ೧೦ ಕಥೆಗಳು, ೬ ಪದ್ಯಗಳು, ೧೧ ಲಘು ಪ್ರಬಂಧಗಳು, ೮ ಚಿತ್ರಗಳು ಮತ್ತು ಒಂದು ನಾಟಕವಿದೆ. ಮಕ್ಕಳ ಭಾವನೆಗಳು, ಆಸೆಗಳು, ಅಗತ್ಯಗಳು, ಅನಿಸಿಕೆಗಳು ಅವರ ಬರಹಗಳ ಮೂಲಕ ನಮಗೆ ಸಿಗುತ್ತವೆ.
ಮಕ್ಕಳ ಬರಹಗಳ ಬಗ್ಗೆ ಈ ಶಾಲೆಯ ಶಿಕ್ಷಕರ ಆಸಕ್ತಿ ಇದೇ ಹೊಸದೇನಲ್ಲ. ಹಿಂದೆ "ನವಿಲುಗರಿ’ ಎಂಬ ಮಕ್ಕಳ ಮಾಸಿಕವೊಂದನ್ನು ಪ್ರಕಟಿಸುತ್ತ್ದಿದರು. ಅದರಲ್ಲಿ ಇಡೀ ಜ್ಲಿಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬರೆದ ಲೇಖನ ಪ್ರಕಟಿಸುತ್ತಿದ್ದರು. ಒಂದು ವರ್ಷ ನಡೆದು ಕಾರಣಾಂತರಗಳಿಂದ ನಿಂತುಹೋದ ನವಿಲುಗರಿ ಈಗಿನ ಕಲರವಕ್ಕೆ ಸ್ಫೂರ್ತಿ.
ಮುಖ್ಯ ಶಿಕ್ಷಕರಾದ ಹೆಚ್.ಮುನಿಯಪ್ಪ, ಸಹಶಿಕ್ಷಕರಾದ ಎಂ.ದೇವರಾಜ್, ಹೆಚ್.ಬಿ.ಮಂಜುನಾಥ, ಜೆ.ಶ್ರೀನಿವಾಸ, ಕೆ.ಶಿವಶಂಕರ, ಎಸ್.ಕಲಾಧರ್, ಕೆ.ಛಾಯಾದೇವಿ ಮತ್ತು ವಿದ್ಯಾಲಕ್ಷ್ಮಿ ಇವರುಗಳ ಸಾಂಘಿ ಕ ಪ್ರಯೋಗವಾಗಿದೆ ಕಲರವ-೧.
ಮಕ್ಕಳನ್ನು ಅರ್ಥಮಾಡಿಕೊಂಡು ಅವರ ಸೃಜನಶೀಲತೆಯನ್ನು ಅರಳಿಸುವಂತಹ ಶಿಕ್ಷಣ ಹೆಚ್ಚು ಅರ್ಥಪೂರ್ಣ. ಈ ನಿಟ್ಟಿನ್ಲಲಿ ಮಕ್ಕಳ ಭಾವನೆಗಳಿಗೆ ಅಕ್ಷರದ ರೂಪು ನೀಡುತ್ತಾ ಮುನ್ನಡೆಯಿಟ್ಟಿದೆ ಈ ಶಾಲೆ.