ನಮ್ಮ ಬಾವುಟ... ಕನ್ನಡದ ಬಾವುಟ...
ಅರಿಶಿನ ಕುಂಕುಮ ಬಣ್ಣದ ನಾಡ ಬಾವುಟ ಕನ್ನಡ ತಾಯಿಯ ಸುಮಂಗಲಿತನವನ್ನು ಪ್ರತಿನಿಧಿಸುತ್ತದೆ.
ಚಿನ್ನದ ಬೀಡು, ರೇಷ್ಮೆಯ ನಾಡನ್ನು ಸಂಪತ್ತಿನ ಪ್ರತಿನಿಧಿಯಾಗಿ ಹಳದಿ ಬಣ್ಣ ಸೂಚಿಸಿದರೆ... ಫಲವತ್ತಾದ ಕೆಂಪು ಮಣ್ಣು, ವೀರತ್ವ, ಔಧಾರ್ಯ ಮತ್ತು ಖನಿಜ ಸಂಪತ್ತನ್ನು ಕೆಂಪು ಬಣ್ಣ ಪ್ರತಿನಿಧಿಸುತ್ತದೆ.
ಎಲ್ಲಾ ರಾಜ್ಯಗಳಿಗೂ ತಮ್ಮದೇ ಆದ ಧ್ವಜವಿಲ್ಲ. ಆದರೆ ನಮಗೆಲ್ಲಿಂದ ಬಂತು? ೧೯೬೫ರಲ್ಲಿ ಮ.ರಾಮಮೂರ್ತಿಯವರು "ಕನ್ನಡ ಪಕ್ಷ"ವನ್ನು ಸ್ಥಾಪಿಸಿದ್ದರು. ಅವರ ಪಕ್ಷ ಮರೆಯಾದರೂ ಅವರ ಪಕ್ಷದ ಧ್ವಜ ನಮ್ಮೆಲ್ಲರ ನಾಡಿನ ಧ್ವಜವಾಯಿತು.
ಕರುನಾಡಿನ ಸೌಭಾಗ್ಯದ ಸಂಕೇತವಾದ ಈ ಧ್ವಜದ ಬಣ್ಣ ನಮ್ಮ ನಾಡಲ್ಲಿ ಎಲ್ಲೆಲ್ಲೂ ಇದೆ. ಹಕ್ಕಿಯಲ್ಲಿ, ಚಿಟ್ಟೆಯಲ್ಲಿ, ಹಣ್ಣಲ್ಲಿ, ಮಗುವಿನ ಕಣ್ಣಲ್ಲಿ, ಹೂವಲ್ಲಿ...ಎಲ್ಲೆಲ್ಲಿ ನೋಡಿದರೂ ನಾಡಬಾವುಟ.
ನಮ್ಮ ನಿಸರ್ಗದಲ್ಲಿನ ಈ ಬಣ್ಣಗಳನ್ನು ನೋಡುತ್ತಾ ನಾಡಿನ ಹಿರಿಮೆಯ ಬಗ್ಗೆ ಹೆಮ್ಮೆ ಪಡೋಣ ಮತ್ತು ಅದರ ಗರಿಮೆಯನ್ನು ಎಲ್ಲೆಡೆಯೂ ಸಾರೋಣ.
ಅವಳಿ ಜವಳಿ.
ಐದು ಬೆರಳು ಒಗ್ಗೂಡಿದರೆ ಮುಷ್ಠಿ.
ಐದು ದಳದಲ್ಲೂ ಕನ್ನಡ ಬಣ್ಣದ ಸೃಷ್ಠಿ.
ಒಗ್ಗರಣೆ ಪತ್ರೊಡೆ
1 day ago
21 comments:
ಮಲ್ಲಿಕಾರ್ಜುನ್ ಸರ್, ಅದ್ಭುತ ಚಿತ್ರಗಳು. ಕನ್ನಡ ಬಾವುಟವನ್ನು ಎಲ್ಲೆಲ್ಲಿ ಹುಡುಕಿದ್ದೀರಿ ನೀವು...ಪ್ರಕೃತಿ ಕೂಡ ರಾಜ್ಯೋತ್ಸವವನ್ನು ಆಚರಿಸುತ್ತಿದೆಯೋ ಎಂಬಂತೆ. ಒಬ್ಬ ಕಲಾವಿದ ಮಾತ್ರ ಇಂಥಾ ಕಲ್ಪನೆ ಮಾಡಬಲ್ಲ. ತುಂಬ ಸುಂದರ ಫೋಟೋಗಳು.
ನಾನು ನನ್ನ ಬ್ಲಾಗಿನಲ್ಲಿ ಭಾರತದ ತ್ರಿವರ್ಣ ಕಾಣುವ ಬೇರೆ ಬೇರೆ ದೃಶ್ಯಗಳ ಫೋಟೋಗಳನ್ನು ಹಾಕಿದ್ದೆ, ತಾಂತ್ರಿಕ ಕಾರಣದಿಂದ ಆ ಬ್ಲಾಗ್ ಅನ್ನು ತೆಗೆಯಬೇಕಾಯಿತು. ಮುಂದೆ ಮತ್ತೆ ಹಾಕುತ್ತೇನೆ.
ಹುಡುಕಾಟದವರೆ....
ಎಲ್ಲೆಲ್ಲಿಂದ ಹುಡುಕಿದ್ದೀರಿ ಕನ್ನಡ ಬಾವುಟಗಳನ್ನು...!
ನಿಮ್ಮ ತಾಳ್ಮೆ, ಶ್ರಮಕ್ಕೆ ನನ್ನದೊಂದು ಸಲಾಮ್...!
ಎಷ್ಟು ಚಂದದ ಹೂಗಳು..
ಹಕ್ಕಿ, ಚಿಟ್ಟೆಗಳು....
ಕನ್ನಡವೆಂದರೆ ಸಹಜ.. ಪ್ರಕೃತಿಯಲ್ಲವೇ...?
ಕನ್ನಡ ರಾಜ್ಯೋತ್ಸವದ ಶುಭಾಶಯಗಳು...
ಕನ್ನಡ ರಾಜ್ಯೋತ್ಸವಕ್ಕೆ ಎಂಥಾ ಅಭಿಮಾನದ, ಪ್ರೀತಿಯ ಸಂದೇಶ ಕೊಟ್ಟಿದ್ದೀರಿ, ಮಲ್ಲಿಕಾರ್ಜುನ! ನಿಮ್ಮ ಚಿತ್ರಗಳನ್ನು ನೋಡಿ ಹೃದಯ ತುಂಬಿ ಬಂದಿತು.
ಈ ಸಂದರ್ಭದಲ್ಲಿ ಮ.ರಾಮಮೂರ್ತಿಯವರನ್ನು ನೆನಪಿಸಿಕೊಂಡಿದ್ದು ಔಚಿತ್ಯಪೂರ್ಣವಾಗಿದೆ.
ರಾಜ್ಯೋದಯದ ಶುಭಾಶಯಗಳು.
ಸುಂದರವಾದ ಚಿತ್ರ ಲೇಖನ :)]
ಬಾರಿಸು ಕನ್ನಡ ಡಿಂಡಿಮವ...
ಕನ್ನಡ ರಾಜ್ಯೋತ್ಸವದ ಶುಭಾಶಯಗಳು...
ಅದ್ಭುತ ಛಾಯಾಗ್ರಹಣ!! ವರ್ಣಿಸಲಸದಳ. ಪ್ರಕೃತಿಯೇ ಎದ್ದು ಬಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಂತಿದೆ. ತುಂಬಾ ಸುಂದರ ಚಿತ್ರಗಳು. ಕಣ್ಮನ ತಂಪಾದವು. ಇವುಗಳನ್ನು ಕಾಣಿಸಿದ ನಿಮಗೆ ಧನ್ಯವಾದಗಳು.
ನಿಮಗೂ ಹಾಗೂ ಎಲ್ಲಾ ಬ್ಲಾಗಿಶ್ಚರುಗಳಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಅದ್ಭುತ ಹಾಗು ವಿಭಿನ್ನ ಶೈಲಿಯಲ್ಲಿ ಶುಭಾಶಯವನ್ನು ತಿಳಿಸಿದ್ದೀರಿ ಹಾಗು ನಿಮ್ಮ ಹುಡುಕಾಟಕ್ಕೆ ನಾವು ಶರಣು.
ಮನಸೂರೆಗೊಂಡ ಚಿತ್ರಗಳು ಮುದನೀಡಿವೆ.
ಧನ್ಯವಾದಗಳು
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಮಲ್ಲಿಕಾರ್ಜುನ್,
ಇದು ನಿಜಕ್ಕೂ ಅದ್ಬುತ ಪ್ರಯೋಗ. ಇಂಥ ಮನಸ್ಸಿನಲ್ಲಿ ಇವತ್ತಿನ ಕನ್ನಡ ರಾಜ್ಯೋತ್ಸವಕ್ಕೆ ನೀವು ಎಂದೋ ಇಂಥ ವಿಚಾರವನ್ನು ಮನನ ಮಾಡಿಕೊಂಡು ಅದರ ಹಿಂದೆ ಬಿದ್ದು ಕ್ಲಿಕ್ಕಿಸಿದ ಫೋಟೊಗಳ ಹಿಂದಿನ ಶ್ರಮ ಗೊತ್ತಾಗುತ್ತದೆ.
ಇಂಥ ಕಾನ್ಸೆಪ್ಟುಗಳೇ ಅಲ್ಲವೇ ನಮ್ಮನ್ನು ಸದಾ ಲವಲವಿಕೆಯಿಂದಿರುವಂತೆ ಮಾಡುವುದು?
ಉತ್ತಮ ಫೋಟೊಗಳ ಜೊತೆಗೆ ಉತ್ತಮ ಹೋಲಿಕೆಗಳು ಖುಷಿಕೊಡುತ್ತವೆ..
ಧನ್ಯವಾದಗಳು.
ಮಲ್ಲಿಯಣ್ಣ..
ಎಲ್ಲೆಲ್ಲಿ ಹುಡುಕಿ ತೆಗೆದಿದ್ದಿರ ನಮ್ಮ ಕನ್ನಡದ ಬಾವುಟ ವನ್ನ....ನಿಜಕ್ಕೂ ನಿಮ್ಮ ತಾಳ್ಮೆಗೆ , ನಿಮ್ಮ ಹುಡುಕಾಟಕ್ಕೆ ನಮ್ಮದೊಂದು ದೊಡ್ಡ ನಮನ,, ಹಾಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು...
ನಿಮ್ಮ ಕೆಲವು ಚಿತ್ರಗಳನ್ನ, ಇವೊತ್ತಿನ VK ನಲ್ಲಿ ನೋಡಿ ಖುಷಿ ಆಯಿತು.....
ಗುರು
ರಾಜ್ಯೋತ್ಸವದ ಶುಭಶಯಗಳು..... ಸು೦ದರ ಕಲ್ಪನೆ :)
ನಿಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ತಾಯಿ ಭುವನೇಶ್ವರಿಯನ್ನು ನೆನಪಿಸಿಕೊಂಡಿದ್ದೀರಿ ಹಾಗೂ ನಮಗೂ ತೋರ್ಪಡಿಸಿದ್ದೀರಿ. ಧನ್ಯವಾದಗಳು. ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
different ಆಗಿದೆ, ಚೆನ್ನಾಗಿದೆ :)
ಕನ್ನಡ ರಾಜ್ಯೋತ್ಸವದ ಶುಭಾಶಗಳು.
ಮಲ್ಲಿ ಯವರೇ....ಎಂದಿನಂತೆಮನಮೋಹಕ ಚಿತ್ರಗಳ ಜೊತೆಗೆ ಸರಿಹೊಂದುವ ಶೀರ್ಷಿಕೆಗಳು! ಕನ್ನಡಮ್ಮನ ಬಣ್ಣಗಳೆಂದರೆ ಮೈ ನವಿರೇಳಿಸುವಂತಿದೆ!
malliyanna... Super...
ಕನ್ನಡದ ಬಾವುಟದ ವರ್ಣಗಳನ್ನ ತಮ್ಮ ಕೆಮೇರಾ ಕಣ್ಣಲ್ಲಿ - ಎಲ್ಲಾ ಪ್ರದೇಶಗಳಲ್ಲಿ, ಪರಿಸರದಲ್ಲಿ, ಸೃಷ್ಠಿಯ ವೈಚಿತ್ರದಲ್ಲಿ, ಹೆಕ್ಕಿ, ಸು೦ದರ ಚಾಯ ಚಿತ್ರಗಳನ್ನು ತೆಗೆದು ರಸವತ್ತದ ವಿವರಣೆಗಳೊ೦ದಿಗೆ ಅಲ೦ಕರಿಸಿ ಕನ್ನಡ ರಾಜ್ಯೋತ್ಸವ ಸ೦ದರ್ಭದಲ್ಲಿ ನಮಗೆಲ್ಲಾ ಉಣಬಡಿಸಿದ್ದಕ್ಕೆ ಧನ್ಯವಾದಗಳು.
ಸಕತ್ ಫೋಟೋಸು.. ಸಕತ್ ಸಮಯದಲ್ಲಿ ಹಾಕಿದ್ದೀರಾ.. ವಾವ್!
ಮಲ್ಲಿಕಾರ್ಜುನ್ ಅವರೆ,
ಅತ್ಯದ್ಭುತ ಫೋಟೋಗಳ ಸಂಗ್ರಹ ಹಾಗು ರಾಜ್ಯೋತ್ಸವಕ್ಕೆ ಸೂಕ್ತ ಪೋಸ್ಟ್.
ಮಲ್ಲಿಕಾರ್ಜುನ ಸರ್, ರಾಜ್ಯೋತ್ಸವ ಶುಭಾಶಯಗಳು. ನಾನು ಊರಿನಲ್ಲಿರಲಿಲ್ಲ. ಇಂದು ಮೊನ್ನೆಯ ವಿಜಯ ಕರ್ನಾಟಕ ನೋಡಿದೆ. ವಾಹ್, ಸುಂದರವಾಗಿ, ನಿಸರ್ಗದ ಮೂಲಕ ರಾಜ್ಯೋತ್ಸವ ಶುಬಾಶಯಗಳು ನಿಮ್ಮಿಂದ ಇತ್ತು.
ಇಲ್ಲಿನ ಎಲ್ಲ ಫೋಟೋಗಳೂ ಕಣ್ಮನ ಸೆಳೆಯುತ್ತವೆ ಹಾಗೂ ಅದ್ಭುತವಾದ ಛಾಯಾಗ್ರಹಣ.
simply superb. Amazing pictures. This post is a treat to all Kannadigas. Jai Karnataka Mathe. A heartfull thanks to you sir.
ಮಲ್ಲಿಕಾರ್ಜುನ್ ಅವರೇ,
ನಿಜವಾಗಲೂ ಅರಿಶಿನ -ಕುಂಕುಮಗಳ ಹೋಳಿ ಆಟ ಅಬ್ಬ! ಎಷ್ಟು ಚೆನ್ನ ಎನ್ನುವಷ್ಟು ಹಿತವಾಗಿದೆ... ಕಣ್ಣಿಗೆ ಸಡಗರ ತುಂಬುವ ಚಿತ್ರಗಳು.....
thumba chennaagidhe mallik....rajyothsavakke olleya koduge.
ಸೂಪರ್ ಮಲ್ಲಿಯವರೇ!
ಎಲ್ಲವೂ ಚೆಂದದ ಚಿತ್ರಗಳು. ನನ್ ಫೆವ್ "ಚಿಮ್ಮುತಿದೆ ಕನ್ನಡಮಕ್ಕಳಲ್ಲಿ ನಾಡನುಡಿಯ ಪ್ರೇಮ".
Post a Comment