tag:blogger.com,1999:blog-4629289835286156796.post1609373030403445872..comments2023-09-08T04:55:29.979-07:00Comments on ಮಲ್ಲಿಕಾರ್ಜುನ.ಡಿ.ಜಿ.: ಗೂಡು ನೋಡ ಬಾರೆ ರಾಜಕುಮಾರಿ...ಮಲ್ಲಿಕಾರ್ಜುನ.ಡಿ.ಜಿ.http://www.blogger.com/profile/15746384320819819940noreply@blogger.comBlogger1125tag:blogger.com,1999:blog-4629289835286156796.post-91256773504255874402013-05-30T04:10:02.727-07:002013-05-30T04:10:02.727-07:00ನಾನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಲೆಬೆಟ್ಟು ಎಂಬ ಪು...ನಾನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಲೆಬೆಟ್ಟು ಎಂಬ ಪುಟ್ಟ ಹಳ್ಳಿಯ ಪುಟ್ಟ ವ್ಯಕ್ತಿ. ನಮ್ಮ ಊರು ಸುತ್ತಲೂ ಕಾಡು ಪ್ರದೇಶವನ್ನು ಹೊಂದಿದ್ದು ಅನೇಕ ಪ್ರಾಣಿಗಳು, ಪಕ್ಷಿಗಳು, ಹುಳು ಹುಪ್ಪಟೆಗಳಿಗೇನು ಕೊರತೆಯಿಲ್ಲ. ಹಕ್ಕಿಗಳ ವಿಷಯವಾಗಿ ನಾನು ಹಿಂದಿನಿಂದಲೂ ಬಹಳಷ್ಟು ಆಸಕ್ತಿಯನ್ನು ಹೊಂದಿದ್ದೇನೆ. ಅವುಗಳ ಗೂಡು ಹುಡುಕುವುದು, ಅವುಗಳ ಜೀವನ ಶೈಲಿ ಬಗ್ಗೆ ತಿಳಿದುಕೊಳ್ಳುವುದು ಇತ್ಯಾದಿ ಇತ್ಯಾದಿ...ಆದರೆ ಅವುಗಳ ಬಗ್ಗೆ ಅಧ್ಯಯನ ನಡೆಸಬೇಕೆಂದು ಅನ್ನಿಸಿರಲಿಲ್ಲ, ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನವೂ ಸಿಕ್ಕಿಲ್ಲ. ಅದಲ್ಲದೇ ನನಗೆ ಫೋಟೋಗ್ರಫಿ ಬಗ್ಗೆಯೂ ಅತೀವ ಆಸಕ್ತಿ ಇದೆ ಆದರೆ ಆಗ ಕೆಮರಾ ಇದ್ದಿರಲಿಲ್ಲ....ಹಾಗಾಗಿ ಆ ಹವ್ಯಾಸವೇ ನಿಂತುಬಿಟ್ಟಿತ್ತು. ಆದರೆ ಇತ್ತೀಚೆಗೆ ನನಗೆ ಉದ್ಯೋಗ ದೊರೆತ ಮೇಲೆ ಅಕಸ್ಮಾತ್ಆಗಿ ನಿಮ್ಮ ಬ್ಲಾಗ್ ಪ್ರವೇಶಿಸಿದೆ ನಿಮ್ಮ ಅತ್ಯುತ್ತಮ ಫೋಟೋಗ್ರಫಿ ಹಾಗೂ ಆ ಕುರಿತ ಚೊಕ್ಕ ವಿವರಣೆಗಳನ್ನು ನೋಡಿ ನಿಂತು ಹೋಗಿದ್ದ ನನ್ನ ಹವ್ಯಾಸಕ್ಕೆ ಮರುಜೀವ ನೀಡಬೇಕೆಂದು ನಿರ್ಧರಿಸಿದೆ. ಅಂತೆಯೇ ನನ್ನ ಹವ್ಯಾಸವನ್ನು ಮುಂದುವರೆಸಿದ್ದೇನೆ. ಇದಕ್ಕೆಲ್ಲಾ ನೀವೇ ಸ್ಪೂರ್ತಿ, ನಿಮ್ಮ ಫೋಟೋಗ್ರಫಿ ಮತ್ತು ಅದಕ್ಕೆ ನೀಡಿದ ವಿವರಣೆಗಳೇ ಸ್ಪೂರ್ತಿ...ನಾನು ನಿಮಗೆ ಸದಾ ಕೃತಜ್ಞ. ನಿಮ್ಮನ್ನೊಮ್ಮೆ ಭೇಟಿಯಾಗುವ ಅವಕಾಶ ಸಿಗಬಹುದೇ?<br /><br /> <br /> ಇಂತಿ, ಕೆ.ನಾ.ಗೋರೆಮಾತಿನಮಂಚhttps://www.blogger.com/profile/12792649244012883184noreply@blogger.com